ಸುರಾನಾ ಜ್ಯುವೆಲ್ಲರಿ ಶಾಪ್ ಮೇಲೆ ಐಟಿ ದಾಳಿ: ಅಟ್ಟಿ ಅಟ್ಟಿಯಾಗಿ ಇಟ್ಟಿದ 116 ಕೋಟಿಯ ನಗದು ವಶಕ್ಕೆ

By Anusha Kb  |  First Published May 26, 2024, 4:03 PM IST

ಮಹಾರಾಷ್ಟ್ರದ ನಾಸಿಕ್‌ನ ಸುರಾನಾ ಜ್ಯುವೆಲ್ಲರಿ ಶಾಪ್ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದು,  ಕೋಟ್ಯಾಂತರ ಮೊತ್ತದ ನೋಟುಗಳ ಕಂತೆಯನ್ನು ವಶಕ್ಕೆ ಪಡೆದಿದ್ದಾರೆ.


ನಾಸಿಕ್‌: ಮಹಾರಾಷ್ಟ್ರದ ನಾಸಿಕ್‌ನ ಸುರಾನಾ ಜ್ಯುವೆಲ್ಲರಿ ಶಾಪ್ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದು,  ಕೋಟ್ಯಾಂತರ ಮೊತ್ತದ ನೋಟುಗಳ ಕಂತೆಯನ್ನು ವಶಕ್ಕೆ ಪಡೆದಿದ್ದಾರೆ. ನೋಟುಗಳನ್ನು ಅಟ್ಟಿ ಅಟ್ಟಿಯಾಗಿ ಇರಿಸಿರುವ ಫೋಟೋ ವೀಡಿಯೋಗಳು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

ಸುರಾನಾ ಜ್ಯುವೆಲ್ಲರಿ ಮಾಲೀಕರು ನಡೆಸಿದ ಅಘೋಷಿತ ಹಣ ವರ್ಗಾವಣೆ ಹಾಗೂ ವ್ಯವಹಾರಗಳ ಹಿನ್ನೆಲೆಯಲ್ಲಿ ಈ ದಾಳಿ ನಡೆದಿದೆ ಎಂದು ವರದಿ ಆಗಿದೆ. ಆದಾಯ ತೆರಿಗೆ ಇಲಾಖೆ ನಡೆಸಿದ ದಾಳಿ ವೇಳೆ ಸುಮಾರು 26 ಕೋಟಿ ನಗದು ಮತ್ತು 90 ಕೋಟಿ ಮೌಲ್ಯದ ಲೆಕ್ಕಕ್ಕೆ ಸಿಗದ ಸಂಪತ್ತಿನ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಹೀಗಾಗಿ ಒಟ್ಟು 116 ಕೋಟಿ ನಗದನ್ನು ಆದಾಯ ತೆರಿಗೆ ಇಲಾಖೆ ವಶಕ್ಕೆ ಪಡೆದಂತಾಗಿದೆ. 

Latest Videos

undefined

ಟಿಎಸ್‌ಎಸ್ ಅಕ್ರಮ: ಶಿರಸಿಯ 6 ಉದ್ಯಮಿಗಳ ನಿವಾಸದ ಮೇಲೆ ಐಟಿ ದಾಳಿ

ಇತ್ತ ಅಧಿಕಾರಿಗಳು ನೋಟುಗಳನ್ನು ಚೀಲಕ್ಕೆ ತುಂಬಿಸುತ್ತಿರುವ ಹಾಗೂ ಅಟ್ಟಿಯಾಗಿ ಇಟ್ಟಿರುವ ಕಂತೆ ಕಂತೆ ನೋಟುಗಳ ಫೋಟೋ ವೀಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ನೆಟ್ಟಿಗರು ತರ ತರಹದ ಕಾಮೆಂಟ್ ಮಾಡುತ್ತಿದ್ದಾರೆ. ಬಹುಶಃ ಇವರು ಇಲೆಕ್ಷನ್ ಬಾಂಡ್‌ಗೆ ದುಡ್ಡು ನೀಡಿಲ್ಲ ಎಂದು ಕಾಣಿಸುತ್ತಿದೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಮತ್ತೆ ಕೆಲವರು ಸಣ್ಣದೊಂದು ಜ್ಯುವೆಲ್ಲರಿ ಶಾಪ್‌ನಲ್ಲಿ ಇಷ್ಟೊಂದು ಹಣ ಹೇಗೆ ಎಂದು ಕೇಳುತ್ತಿದ್ದಾರೆ.

ಬಿಜೆಪಿ ಮುಖಂಡನ ಮನೆ ಮೇಲೆ ಆದಾಯ ತೆರಿಗೆ ದಾಳಿ: 4 ಕೋಟಿ, ಚಿನ್ನ ಪತ್ತೆ?

ಘಟನೆಗೆ ಸಂಬಂಧಿಸಿದಂತೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಇನ್ನಷ್ಟೇ ಮಾಹಿತಿ ನೀಡಬೇಕಿದ್ದು, ಅವರ ಹೇಳಿಕೆ ನಂತರವಷ್ಟೇ ಹೆಚ್ಚಿನ ಮಾಹಿತಿ ಸಿಗಲಿದೆ. 

Income Tax Department launched a raid on Surana Jewellers in Nashik, in response to alleged undisclosed transactions by the proprietor. About Rs 26 crore in cash and documents of unaccounted wealth worth Rs 90 crore have been seized in raids carried out by the Income Tax… pic.twitter.com/XJ0wyuI8HQ

— ANI (@ANI)

 

click me!