Published : Oct 31, 2025, 07:14 AM ISTUpdated : Oct 31, 2025, 11:08 PM IST

ಶಿವಸೇನೆ ಯುಬಿಟಿ ನಾಯಕ ಸಂಜಯ್‌ ರಾವತ್‌ಗೆ ಗಂಭೀರ ಆರೋಗ್ಯ ಸಮಸ್ಯೆ, ಚೇತರಿಕೆಗೆ ಹಾರೈಸಿದ ಪ್ರಧಾನಿ!

ಸಾರಾಂಶ

ಪಾಟ್ನಾ(ಅ.31) ಬಿಹಾರ ಚುನಾವಣೆ ಕಾವು ರಂಗೇರಿದೆ. ಬಿರುಸಿನ ಪ್ರಚಾರ, ವಾಕ್ಸಮರ, ವಾಗ್ದಾಳಿಗಳು ನಡೆಯುತ್ತಿದೆ. ಈ ಬಾರಿ ಬಿಹಾರ ವಿಧಾನಸಭೆ ಚುನಾವಣೆ ಫಲಿತಾಂಶ ಮತ್ತಷ್ಟು ಕಠಿಣವಾಗಿದೆ. ಕಾರಣ ಪ್ರಶಾಂತ್ ಕಿಶೋರ್ ಜನ ಸುರಾಜ್ ಪಕ್ಷ ಎಲ್ಲಾ ಸ್ಥಾನಗಳಲ್ಲೂ ಸ್ಪರ್ಧಿಸುತ್ತಿದೆ. ಮತದಾನ ದಿನಾಂಕ ಸಮೀಪಿಸುತ್ತದ್ದಂತೆ ಆಘಾತಕಾರಿ ಬೆಳವಣಿಗೆ ನಡೆದಿದೆ. ಪ್ರಶಾಂತ್ ಕಿಶೋರ್ ಅರ ಜನ ಸುರಾಜ್ ಪಕ್ಷದ ಬೆಂಬಲಿಗ ದುಲಾರ್‌ಚಂದ್ ಯಾದವ್‌ನನ್ನು ಗುಂಡಿಕ್ಕೆ ಹತ್ಯೆ ಮಾಡಲಾಗಿದೆ. ಬಿಹಾರದ ಮೊಕಮಾ ತಾಲ್‌ನಲ್ಲಿ ಘಟನೆ ನಡೆದಿದೆ. ದೇಶದ ಪ್ರಮುಖ ಸುದ್ದಿಯ ಕ್ಷಣ ಕ್ಷಣದ ನ್ಯೂಸ್ ಅಪ್‌ಡೇಟ್ ಇಲ್ಲಿದೆ.

Sanjay Raut Health

11:08 PM (IST) Oct 31

ಶಿವಸೇನೆ ಯುಬಿಟಿ ನಾಯಕ ಸಂಜಯ್‌ ರಾವತ್‌ಗೆ ಗಂಭೀರ ಆರೋಗ್ಯ ಸಮಸ್ಯೆ, ಚೇತರಿಕೆಗೆ ಹಾರೈಸಿದ ಪ್ರಧಾನಿ!

Sanjay Raut Takes Break from Politics Due to Serious Health Issue PM Modi Wishes Speedy Recovery ಉದ್ಧವ್ ಠಾಕ್ರೆ ಅವರ ಶಿವಸೇನೆ (ಯುಬಿಟಿ) ಬಣದ ಪ್ರಮುಖ ಮುಖವಾಗಿರುವ ಸಂಜಯ್ ರಾವತ್, ಮುಂಬರುವ ದಿನಗಳಲ್ಲಿ ರಾಜಕೀಯ ಚಟುವಟಿಕೆಗಳಿಂದ ತಾತ್ಕಾಲಿಕವಾಗಿ ದೂರ ಉಳಿಯಲಿದ್ದಾರೆ. 

 

Read Full Story

09:55 PM (IST) Oct 31

ಪ್ರೊ ಕಬಡ್ಡಿ ಲೀಗ್‌ 2ನೇ ಬಾರಿಗೆ ಚಾಂಪಿಯನ್‌ ಪಟ್ಟವೇರಿದ ದಬಾಂಗ್‌ ಡೆಲ್ಲಿ

Dabang Delhi Beats Puneri Paltan (31-28) to Win Second Pro Kabaddi League Title ಪ್ರೋ ಕಬಡ್ಡಿ ಲೀಗ್ 12ನೇ ಆವೃತ್ತಿಯ ರೋಚಕ ಫೈನಲ್‌ನಲ್ಲಿ ದಬಾಂಗ್ ಡೆಲ್ಲಿ ಕೆ.ಸಿ ತಂಡವು ಪುಣೇರಿ ಪಲ್ಟನ್ ತಂಡವನ್ನು 31-28 ಅಂಕಗಳಿಂದ ಮಣಿಸಿ ಚಾಂಪಿಯನ್ ಪಟ್ಟಕ್ಕೇರಿತು.

 

Read Full Story

08:40 PM (IST) Oct 31

Investment Plan - ಮದುವೆಯಾದ ವ್ಯಕ್ತಿಗಳಿಗೆ ಇದಕ್ಕಿಂತ ಬೆಸ್ಟ್‌ ಹೂಡಿಕೆ ಪ್ಲ್ಯಾನ್‌ ಇನ್ನೊಂದಿಲ್ಲ, 1.33 ಕೋಟಿ ಮೊತ್ತವೂ ಟ್ಯಾಕ್ಸ್‌ ಫ್ರೀ!

Investment Plan For Married Couple: ಪಿಪಿಎಫ್ ಯೋಜನೆಯು ದಂಪತಿಗಳಿಗೆ ಸುರಕ್ಷಿತ ಹೂಡಿಕೆಯ ಮಾರ್ಗವಾಗಿದೆ. ಗಂಡ ಮತ್ತು ಹೆಂಡತಿ ಪ್ರತ್ಯೇಕ ಖಾತೆಗಳಲ್ಲಿ ವಾರ್ಷಿಕವಾಗಿ ತಲಾ ₹1.50 ಲಕ್ಷ ಹೂಡಿಕೆ ಮಾಡುವ ಮೂಲಕ, 20 ವರ್ಷಗಳಲ್ಲಿ ಯಾವುದೇ ತೆರಿಗೆ ಇಲ್ಲದೆ ₹1.33 ಕೋಟಿಗೂ ಹೆಚ್ಚು ಹಣವನ್ನು ಗಳಿಸಬಹುದು.

Read Full Story

08:08 PM (IST) Oct 31

ಕಾಶಿ ವಿಶ್ವನಾಥ ದೇವಸ್ಥಾನದ ಪೂಜಾರಿಗಳಿಗೆ 90 ಸಾವಿರ ಸಂಬಳ, ಸರ್ಕಾರಿ ಉದ್ಯೋಗಿಯ ಸ್ಥಾನಮಾನ!

Kashi Vishwanath Priests to Get ₹90000 Salary ವಾರಣಾಸಿಯ ಕಾಶಿ ವಿಶ್ವನಾಥ ದೇವಾಲಯದ ಅರ್ಚಕರು ಮತ್ತು ಸಿಬ್ಬಂದಿಗೆ ಶ್ರೀ ಕಾಶಿ ವಿಶ್ವನಾಥ ದೇವಾಲಯ ಟ್ರಸ್ಟ್ ಹೊಸ ಸೇವಾ ನಿಯಮಗಳನ್ನು ಜಾರಿಗೆ ತಂದಿದೆ. 

Read Full Story

07:14 PM (IST) Oct 31

ಗುರುವಾಯೂರು ದೇಗುಲದಲ್ಲಿ ವೃಶ್ಚಿಕ ಏಕಾದಶಿಯಂದೇ ಉದಯಸ್ತಮಾನ ಪೂಜೆ ಮಾಡಿ - ಸುಪ್ರೀಂಕೋರ್ಟ್ ಸೂಚನೆ

Udayasthamana Pooja controversy: ಗುರುವಾಯೂರು ದೇವಸ್ಥಾನದ ಉದಯಾಸ್ತಮಾನ ಪೂಜೆಯ ಸಮಯ ಬದಲಾವಣೆ ವಿವಾದಕ್ಕೆ ಸುಪ್ರೀಂ ಕೋರ್ಟ್ ತೆರೆ ಎಳೆದಿದೆ. ಭಕ್ತರ ಅನುಕೂಲಕ್ಕಾಗಿ ಆಚರಣೆಗಳನ್ನು ಬದಲಾಯಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದ ನ್ಯಾಯಾಲಯ, ವೃಶ್ಚಿಕ ಏಕಾದಶಿಯಂದೇ ಪೂಜೆ ನಡೆಸುವಂತೆ ಆದೇಶಿಸಿದೆ.

Read Full Story

06:17 PM (IST) Oct 31

ದೇಶವೇ ಬಹುಪರಾಕ್‌ ಹಾಕುವ ಸಮಯದಲ್ಲೇ ಮತ್ತೆ ಮುನ್ನೆಲೆಗೆ ಬಂದ ಜೆಮಿಮಾ ಕುಟುಂಬದ ಮೇಲಿನ ಮತಾಂತರ ಆರೋಪ

Jemimah Rodrigues Family Conversion Row Resurfaces ಕಳೆದ ವರ್ಷ ಜೆಮಿಮಾ  ತಂದೆಯ ಧಾರ್ಮಿಕ ಚಟುವಟಿಕೆಗಳ ಆರೋಪದ ಮೇಲೆ ಖಾರ್ ಜಿಮ್ಖಾನಾ ಕ್ಲಬ್ ಅವರ ಗೌರವ ಸದಸ್ಯತ್ವವನ್ನು ರದ್ದುಗೊಳಿಸಿದ್ದ ಘಟನೆ ಮತ್ತೆ ಚರ್ಚೆಗೆ ಬಂದಿದೆ.

Read Full Story

05:21 PM (IST) Oct 31

ಸೋಶಿಯಲ್‌ ಮೀಡಿಯಾದಲ್ಲಿ ಧೂಳೆಬ್ಬಿಸಿದ ಕತ್ರಿನಾ ಕೈಫ್‌ ಪ್ರೈವೇಟ್‌ ಫೋಟೋ, ಕ್ಷಣಮಾತ್ರದಲ್ಲೇ ಡಿಲೀಟ್‌!

Katrina Kaif Private Photos Leaked Pregnant Actress's Privacy Violated ನಟಿ ಕತ್ರಿನಾ ಕೈಫ್ ಗರ್ಭಿಣಿಯಾಗಿದ್ದಾಗ ಅವರ ಅಪಾರ್ಟ್‌ಮೆಂಟ್‌ನ ಬಾಲ್ಕನಿಯಲ್ಲಿದ್ದ ಖಾಸಗಿ ಫೋಟೋಗಳು ಸೋರಿಕೆಯಾಗಿವೆ. ಅನುಮತಿಯಿಲ್ಲದೆ ತೆಗೆದ ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Read Full Story

04:42 PM (IST) Oct 31

ಮುಂಬೈ ಪೊಲೀಸ್‌ ಎನ್‌ಕೌಂಟರ್‌ಗೆ ಬಲಿಯಾದ ರೋಹಿತ್ ಆರ್ಯ ಸ್ಟಾರ್ ನಟಿಯನ್ನೂ ಆಡಿಷನ್‌ಗೆ ಕರೆದಿದ್ದ!

Rohit Arya Called Marathi Actress Richita Jadhav for Audition ಆರ್‌ಎ ಸ್ಟುಡಿಯೋದಲ್ಲಿ 17 ಮಕ್ಕಳನ್ನು ಒತ್ತೆಯಾಳಾಗಿರಿಸಿದ್ದ ರೋಹಿತ್ ಆರ್ಯನನ್ನು ಎನ್‌ಕೌಂಟರ್ ಮಾಡಲಾಗಿದೆ. ಈ ಪ್ರಕರಣದಲ್ಲಿ, ಆತ ನಟಿ ರಿಚಿತಾ ಜಾಧವ್ ಅವರನ್ನೂ ಇದೇ ಸಂಚಿನಲ್ಲಿ ಸಿಲುಕಿಸಲು ಯತ್ನಿಸಿದ್ದ ಎಂಬ ಮಾಹಿತಿ ಬಂದಿದೆ.

Read Full Story

03:43 PM (IST) Oct 31

ದೇಶದಿಂದ RSS ನಿಷೇಧಿಸಬೇಕು, ಪ್ರಿಯಾಂಕ್‌ಗಿಂತ ಒಂದು ಹೆಜ್ಜೆ ಮುಂದೆ ಹೋದ ಮಲ್ಲಿಕಾರ್ಜುನ ಖರ್ಗೆ

ದೇಶದಿಂದ RSS ನಿಷೇಧಿಸಬೇಕು, ಪ್ರಿಯಾಂಕ್‌ಗಿಂತ ಒಂದು ಹೆಜ್ಜೆ ಮುಂದಹೋದ ಮಲ್ಲಿಕಾರ್ಜುನ ಖರ್ಗೆ, ದೇಶದಲ್ಲಿನ ಕಾನೂನು ಸುವ್ಯವಸ್ಥೆ ಹದೆಗೆಡಲು ಆರ್‌ಎಸ್ಎಸ್ ಕಾರಣವಾಗಿದೆ. ನನ್ನ ಪ್ರಕಾರ ಆರ್‌ಎಸ್ಎಸ್ ನಿಷೇಧಿಸಬೇಕು ಎಂದಿದ್ದಾರೆ.

Read Full Story

03:25 PM (IST) Oct 31

ಅಲ್ಲಾಹ್ ಹೆಸರಲ್ಲಿ ತೆಲಂಗಾಣ ಸಚಿವನಾಗಿ ಪ್ರಮಾಣವಚನ ಸ್ವೀಕರಿಸಿದ ಕ್ರಿಕೆಟರ್ ಅಜರುದ್ದೀನ್

Azharuddin minister: ಮಾಜಿ ಕ್ರಿಕೆಟಿಗ ಮೊಹಮ್ಮದ್ ಅಜರುದ್ದೀನ್ ಅವರು ತೆಲಂಗಾಣದ ರೇವಂತ್ ರೆಡ್ಡಿ ಸಂಪುಟಕ್ಕೆ 16ನೇ ಸಚಿವರಾಗಿ ಸೇರ್ಪಡೆಯಾಗಿದ್ದಾರೆ. ಇನ್ನೂ ಶಾಸಕರಾಗಿ ಆಯ್ಕೆಯಾಗದಿದ್ದರೂ ಅವರನ್ನು ಸಚಿವ ಸಂಪುಟಕ್ಕೆ ಸೇರಿಸಲಾಗಿದ್ದು, ಜ್ಯುಬಿಲ್‌ಹಿಲ್ಸ್ ಉಪಚುನಾವಣೆಯಲ್ಲಿ ಅವರು ಕಣಕ್ಕಿಳಿಯಲಿದ್ದಾರೆ.

Read Full Story

02:50 PM (IST) Oct 31

ಅಹಮ್ಮದಾಬಾದ್ ದುರಂತ ಬಳಿಕ 10,000 ಕೋಟಿ ನಷ್ಟ, ಟಾಟಾ ನೆರವು ಕೇಳಿದ ಏರ್ ಇಂಡಿಯಾ

ಅಹಮ್ಮದಾಬಾದ್ ದುರಂತ ಬಳಿಕ 10,000 ಕೋಟಿ ನಷ್ಟ, ಟಾಟಾ ನೆರವು ಕೇಳಿದ ಏರ್ ಇಂಡಿಯಾ, ಆಗಸದಲ್ಲಿ ಏರ್ ಇಂಡಿಯಾ ಹಾರಾಟ ಮುಂದುವರಿಸಲು ಆರ್ಥಿಕ ನೆರವು ಅನಿವಾರ್ಯ ಎಂದಿದೆ. ಏನಾಗುತ್ತೆ ಏರ್ ಇಂಡಿಯಾ ಭವಿಷ್ಯ?

Read Full Story

02:30 PM (IST) Oct 31

ಶಾಲೆಗೆ ಹೋಗಲೊಪ್ಪದ ಹುಡುಗ - ಬಾಲ್ಯದ ನೆನಪು ಮಾಡಿಸಿದ ಬಾಲಕನ ವೀಡಿಯೋ

childhood school memories: ಶಾಲೆಗೆ ಹೋಗಲು ಹಠ ಹಿಡಿದ ಬಾಲಕನೊಬ್ಬನನ್ನು, ಆತ ಹಿಡಿದುಕೊಂಡಿದ್ದ ಮಂಚದ ಸಮೇತ ಪೋಷಕರು ಶಾಲೆಗೆ ಹೊತ್ತು ತಂದಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅನೇಕರು ತಮ್ಮ ಬಾಲ್ಯದ ದಿನಗಳನ್ನು, ತಾವು ಹೇಳುತ್ತಿದ್ದ ನೆಪಗಳನ್ನು ನೆನಪಿಸಿಕೊಂಡಿದ್ದಾರೆ.

Read Full Story

01:52 PM (IST) Oct 31

ಭಾರತ-ಆಸೀಸ್ 2ನೇ ಟಿ20 - ಟಾಸ್ ಗೆದ್ದ ಆಸ್ಟ್ರೇಲಿಯಾ ಮಹತ್ವದ ತೀರ್ಮಾನ, ಒಂದು ಬದಲಾವಣೆ!

ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಎರಡನೇ ಟಿ20 ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. ಮೆಲ್ಬರ್ನ್‌ನಲ್ಲಿ ನಡೆಯುತ್ತಿರುವ ಈ ಪಂದ್ಯಕ್ಕೆ ಆಸ್ಟ್ರೇಲಿಯಾ ತಂಡದಲ್ಲಿ ಮ್ಯಾಥ್ಯೂ ಶಾರ್ಟ್ ರೂಪದಲ್ಲಿ ಒಂದು ಬದಲಾವಣೆ ಮಾಡಲಾಗಿದ್ದು, ಭಾರತ ತಂಡದಲ್ಲಿ ಯಾವುದೇ ಬದಲಾವಣೆ ಇಲ್ಲ.

Read Full Story

01:34 PM (IST) Oct 31

ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ಬಗ್ಗುಬಡಿದ ಹಲವು ಅಪರೂಪದ ದಾಖಲೆ ಬರೆದ ಟೀಂ ಇಂಡಿಯಾ!

ನವಿ ಮುಂಬೈ: ಐಸಿಸಿ ಮಹಿಳಾ ಏಕದಿನ ವಿಶ್ವಕಪ್ ಎರಡನೇ ಸೆಮಿಫೈನಲ್‌ನಲ್ಲಿ ಏಳು ಬಾರಿಯ ಚಾಂಪಿಯನ್ ಆಸ್ಟ್ರೇಲಿಯಾ ತಂಡವನ್ನು ಅನಾಯಾಸವಾಗಿ ಬಗ್ಗುಬಡಿಯುವಲ್ಲಿ ಭಾರತ ಯಶಸ್ವಿಯಾಗಿದೆ. ಇದರ ಜತೆಗೆ ಅಪರೂಪದ ದಾಖಲೆಗಳನ್ನು ಮುರಿಯುವಲ್ಲಿ ಹರ್ಮನ್‌ಪ್ರೀತ್ ಕೌರ್ ಪಡೆ ಯಶಸ್ವಿಯಾಗಿದೆ.

Read Full Story

01:00 PM (IST) Oct 31

ಫೆಡ್ ರೇಟ್ ಕಡಿತದಿಂದ ಬಂಪರ್, ಚಿನ್ನದ ಬೆಲೆಯಲ್ಲಿ 1000 ರೂಪಾಯಿ ಇಳಿಕೆ

ಫೆಡ್ ರೇಟ್ ಕಡಿತದಿಂದ ಬಂಪರ್, ಚಿನ್ನದ ಬೆಲೆಯಲ್ಲಿ 1000 ರೂಪಾಯಿ ಇಳಿಕೆ, ಇಂದು ಭಾರತದಲ್ಲಿ ಚಿನ್ನ ಹಾಗೂ ಬೆಳ್ಳಿ ಎರಡೂ ಬೆಲೆ ಇಳಿಕೆಯಾಗಿದೆ. ಅಮೆರಿಕ ಚೀನಾ ನಡುವಿನ ಟೆನ್ಶನ್ ಕಡಿಮೆಯಾದಲ್ಲಿ ಮತ್ತಷ್ಟು ಬೆಲೆ ಇಳಿಕೆಯಾಗುವ ಸಾಧ್ಯತೆ ಇದೆ.

Read Full Story

12:58 PM (IST) Oct 31

ಸಾಕಿದವನಿಗೆ ತಾನು ಬೇಟೆಯಾಡಿದ ಮಾಂಸದಲ್ಲಿ ಪಾಲು ನೀಡಿದ ಸಿಂಹ - ವನ್ಯಲೋಕದ ವೀಡಿಯೋ ವೈರಲ್

Lioness Sirga: ಸಿಂಹಿಣಿಯೊಂದು ತಾನು ಬೇಟೆಯಾಡಿದ ಪ್ರಾಣಿಯ ಮಾಂಸವನ್ನು ತನ್ನ ಸಾಕಿದ ಯುವಕನೊಂದಿಗೆ ಹಂಚಿಕೊಳ್ಳುವ ಅಪರೂಪದ ವಿಡಿಯೋ ವೈರಲ್ ಆಗಿದೆ. ತಾಯಿ ತೊರೆದಿದ್ದ ಈ ಸಿಂಹದ ಮರಿಯನ್ನು ವ್ಯಾಲೆಂಟಿನ್ ಗ್ರೂನರ್ ಎಂಬುವವರು ಸಾಕಿದ್ದಾರೆ.

Read Full Story

12:15 PM (IST) Oct 31

ಬಂಗಾರ ಪ್ರಿಯರಿಗೆ ಶಾಕ್​! ಮದ್ವೆಗಳಲ್ಲಿ ಇನ್ಮುಂದೆ 3ಕ್ಕಿಂತ ಹೆಚ್ಚು ಚಿನ್ನಾಭರಣ ಧರಿಸುವಂತಿಲ್ಲ! ಏನಿದು ಆದೇಶ?

 ಮದುವೆ ಸಮಾರಂಭಗಳಲ್ಲಿ ಶೋಕಿಗಾಗಿ ಹೆಚ್ಚು ಚಿನ್ನಾಭರಣ ಧರಿಸುವುದನ್ನು ನಿಷೇಧಿಸಲಾಗಿದೆ.  ಮಹಿಳೆಯರು ಮೂರು ಆಭರಣಗಳನ್ನು ಮಾತ್ರ ಧರಿಸಬಹುದು ಮತ್ತು ನಿಯಮ ಮೀರಿದರೆ 50,000 ರೂ. ದಂಡ ವಿಧಿಸಲಾಗುತ್ತದೆ. ಎಲ್ಲಿ ಹೊರಟಿದೆ ಈ ಆದೇಶ?

Read Full Story

11:47 AM (IST) Oct 31

ಮಹಿಳಾ ವಿಶ್ವಕಪ್ - ಆಸೀಸ್ ಎದುರಿನ ಗೆಲುವು ಸಾಧಾರಣವಾದದ್ದು ಅಲ್ಲ! ಸಿಹಿಯಾದ ಸೇಡು ತೀರಿಸಿಕೊಂಡ ಭಾರತ

ನವಿ ಮುಂಬೈನಲ್ಲಿ ನಡೆದ ಮಹಿಳಾ ವಿಶ್ವಕಪ್ ಸೆಮಿಫೈನಲ್‌ನಲ್ಲಿ ಭಾರತೀಯ ಕ್ರಿಕೆಟ್ ತಂಡ, ಆಸ್ಟ್ರೇಲಿಯಾ ವಿರುದ್ಧ ಐತಿಹಾಸಿಕ ಜಯ ಸಾಧಿಸಿದೆ. 339 ರನ್‌ಗಳ ಬೃಹತ್ ಗುರಿಯನ್ನು ಯಶಸ್ವಿಯಾಗಿ ಬೆನ್ನಟ್ಟಿದ ಭಾರತ, ಜೆಮಿಮಾ ರೋಡ್ರಿಗ್ಸ್‌ ಅವರ ಶತಕದ ನೆರವಿನಿಂದ ಫೈನಲ್‌ಗೆ ಪ್ರವೇಶಿಸಿದೆ.

Read Full Story

11:44 AM (IST) Oct 31

ಮನೆ ಕ್ಲೀನ್ ಮಾಡುವಾಗ ಸಿಕ್ತು ಅಜ್ಜನ 2.5 ಕೋಟಿ ರೂ ಷೇರು, ಮೊಮ್ಮಗನ ಕನಸಿಗೆ ಕೊಳ್ಳಿ ಇಟ್ಟ ಕುಟುಂಬ

ಮನೆ ಕ್ಲೀನ್ ಮಾಡುವಾಗ ಸಿಕ್ತು ಅಜ್ಜನ 2.5 ಕೋಟಿ ರೂ ಷೇರು, ಮೊಮ್ಮಗನ ಕನಸಿಗೆ ಕೊಳ್ಳಿ ಇಟ್ಟ ಕುಟುಂಬ, ತೀವ್ರ ಆರ್ಥಿಕ ಸಂಕಷ್ಟದಲ್ಲಿದ್ದ ಮೊಮ್ಮಗ ಹಾಗೂ ಕುಟುಂಬ ಇನ್ನೇನು ಸಮಸ್ಯೆ ದೂರವಾಯಿತು ಅನ್ನೋವಷ್ಟರಲ್ಲೇ ಇಡೀ ಕುಟುಂಬ ಕನಸಿಗೆ ಕೊಳ್ಳಿ ಇಟ್ಟಿದೆ.

Read Full Story

11:23 AM (IST) Oct 31

ನನ್ನ ಗರ್ಭಿಣಿ ಮಾಡುವ ಗಂಡು ಬೇಕು - ಜಾಹೀರಾತು ನಂಬಿ ವೀರ್ಯದಾನದ ಆಸೆಯಲ್ಲಿದ್ದವನಿಗೆ ಆಘಾತ - 11 ಲಕ್ಷ ಕೋತಾ

Pregnant Job Scam: ನನಗೆ ತಾಯ್ತನದ ಸುಖ ನೀಡುವ ನನ್ನ ಗರ್ಭಿಣಿ ಮಾಡುವ ಪುರುಷ ಬೇಕು ಎಂದು ಸೋಶಿಯಲ್ ಮೀಡಿಯಾದಲ್ಲಿನ ನಕಲಿ  ಜಾಹೀರಾತನ್ನು ನಂಬಿ ಮೋಸದ ಜಾಲಕ್ಕೆ ಬಲಿಯಾದ ವ್ಯಕ್ತಿಯೊಬ್ಬರು ಬರೋಬ್ಬರಿ 11 ಲಕ್ಷ ರೂಪಾಯಿ ಕಳೆದುಕೊಂಡಿದ್ದಾರೆ. 

Read Full Story

11:05 AM (IST) Oct 31

1 ಕೋಟಿ ಸರ್ಕಾರಿ ಉದ್ಯೋಗ, 1 ಕೋಟಿ ಲಕ್‌ಪತಿ ದೀದಿ, ಬಿಹಾರ ಚುನಾವಣೆಗೆ ಎನ್‌ಡಿಎ ಪ್ರಣಾಳಿಕೆ

1 ಕೋಟಿ ಸರ್ಕಾರಿ ಉದ್ಯೋಗ, 1 ಕೋಟಿ ಲಕ್‌ಪತಿ ದೀದಿ, ಬಿಹಾರ ಚುನಾವಣೆಗೆ ಎನ್‌ಡಿಎ ಪ್ರಣಾಳಿಕೆ ಬಿಡುಗಡೆ ಮಾಡಲಾಗಿದೆ. ಭರ್ಜರಿ ಭರವಸೆ ನೀಡಿರುವ ಬಿಜೆಪಿ ನೇತೃತ್ವದ ಎನ್‌ಡಿಎ ಪ್ರಣಾಳಿಕೆಯಲ್ಲಿ ಏನಿದೆ?

Read Full Story

10:24 AM (IST) Oct 31

ದಕ್ಷಿಣ ಆಫ್ರಿಕಾ 'ಎ' ಎದುರು ರಿಷಭ್ ಪಂತ್ ಪಡೆ ಮೊದಲ ದಿನವೇ ಮೇಲುಗೈ!

ರಿಷಭ್ ಪಂತ್ ನಾಯಕನಾಗಿ ಸ್ಪರ್ಧಾತ್ಮಕ ಕ್ರಿಕೆಟ್‌ಗೆ ಮರಳಿದ 4 ದಿನಗಳ ಪಂದ್ಯದಲ್ಲಿ, ಭಾರತ 'ಎ' ತಂಡವು ಮೊದಲ ದಿನವೇ ಮೇಲುಗೈ ಸಾಧಿಸಿದೆ. ಸ್ಪಿನ್ನರ್‌ಗಳಾದ ತನುಶ್ ಕೋಟ್ಯಾನ್ ಹಾಗೂ ಮಾನವ ಸುಥಾರ್ ಅವರ ಪರಿಣಾಮಕಾರಿ ದಾಳಿಗೆ ಸಿಲುಕಿದ ದಕ್ಷಿಣ ಆಫ್ರಿಕಾ 'ಎ' ತಂಡ.

Read Full Story

09:29 AM (IST) Oct 31

ಮೆಲ್ಬರ್ನ್‌ನಲ್ಲಿಂದು ಭಾರತ - ಆಸೀಸ್ 2ನೇ ಟಿ20 ಫೈಟ್

ಏಕದಿನ ಸರಣಿ ಸೋಲಿನ ಬಳಿಕ ಭಾರತ ತಂಡವು ಆಸ್ಟ್ರೇಲಿಯಾ ವಿರುದ್ಧದ 2ನೇ ಟಿ20 ಪಂದ್ಯಕ್ಕೆ ಸಜ್ಜಾಗಿದೆ. ಮೆಲ್ಬರ್ನ್‌ನಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ, ಮೊದಲ ಪಂದ್ಯದಲ್ಲಿ ಲಯ ಕಂಡುಕೊಂಡ ನಾಯಕ ಸೂರ್ಯಕುಮಾರ್ ಯಾದವ್ ಮೇಲೆ ನಿರೀಕ್ಷೆ ಹೆಚ್ಚಿದ್ದು, ತಂಡವು ಸರಣಿ ಗೆಲ್ಲುವ ಗುರಿ ಹೊಂದಿದೆ.

Read Full Story

07:14 AM (IST) Oct 31

ಅಭ್ಯರ್ಥಿ ಪರ ಪ್ರಚಾರ ನಡೆಸುತ್ತಿದ್ದಾಗ ಹತ್ಯೆ

ಜನ ಸುರಾಜ್ ಪಕ್ಷದ ಅಭ್ಯರ್ಥಿ ಪಿಯುಷಿ ಪ್ರಿಯದರ್ಶಿ ಪರ ಪ್ರಚಾರ ನಡೆಸುತ್ತಿದ್ದ ವೇಳೆ ಜಟಾಪಟಿ ನಡೆದಿದೆ. ಎರಡು ಪಕ್ಷಗಳ ಬೆಂಬಲಿಗರ ನಡುವೆ ಮಾರಾಮಾರಿಯಾಗಿದೆ. ಈ ವೇಳೆ ಗುಂಡಿನ ದಾಳಿಯಲ್ಲಿ ದುರಾಲ್‌ಚಂದ್ ಹತ್ಯೆಯಾಗಿರುವುದಾಗಿ ಪೊಲೀಸರು ಹೇಳಿದ್ದಾರೆ.


More Trending News