LIVE NOW
Published : Sep 07, 2026, 07:33 AM ISTUpdated : Sep 07, 2026, 11:16 PM IST

India News Live: ಊಟ ತಡವಾಯ್ತು ಅಂದ ಡೆಲಿವರಿ ಬಾಯ್.. ಟ್ರ್ಯಾಕ್ ಮಾಡಿದ್ರೆ ಬೇರೆಯೇ ಕಥೆ, ಜೊಮ್ಯಾಟೋ ಗ್ರಾಹಕನಿಗೆ ಶಾಕ್

ಸಾರಾಂಶ

ನವದೆಹಲಿ: ಕೇಂದ್ರ ಸರ್ಕಾರದ ಪ್ರಮುಖ ಯೋಜನೆಗಳ ಅನುಷ್ಠಾನ, ಸಚಿವರು ಹಾಗೂ ಸಚಿವಾಲಯಗಳ ಕಾರ್ಯಕ್ಷಮತೆಯನ್ನು ಮೌಲ್ಯಮಾಪನ ಮಾಡಲು ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಮಹತ್ವದ ಪರಿಶೀಲನಾ ಸಭೆ ನಡೆಸಲಿದ್ದಾರೆ.

ಕಾರ್ಯಕ್ಷಮತೆ ಪರಿಶೀಲನೆ:

ಶಿಕ್ಷಣ, ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ, ಆರೋಗ್ಯ, ನಗರಾಭಿವೃದ್ಧಿ ಹಾಗೂ ಕೃಷಿ ಸಚಿವಾಲಯ ಸೇರಿದಂತೆ ಹಲವು ಪ್ರಮುಖ ಇಲಾಖೆಗಳ ಕಾರ್ಯಕ್ಷಮತೆ ಈ ಪರಿಶೀಲನಾ ಸಭೆಯಲ್ಲಿ ಮುಖ್ಯವಾಗಿ ಪ್ರಸ್ತಾಪವಾಗುವ ಸಾಧ್ಯತೆಯಿದೆ. ಸರ್ಕಾರದ ಯೋಜನೆಗಳ ಲಾಭವು ಯಾವುದೇ ಸೋರಿಕೆಯಿಲ್ಲದೆ, ಗರಿಷ್ಠ ದಕ್ಷತೆಯೊಂದಿಗೆ ಅರ್ಹ ಫಲಾನುಭವಿಗಳನ್ನು ತಲುಪಬೇಕು ಎಂಬುದನ್ನು ಕೇಂದ್ರ ಸರ್ಕಾರ ಪದೇ ಪದೇ ಪ್ರತಿಪಾದಿಸುತ್ತಾ ಬಂದಿದೆ. ಈ ಹಿನ್ನೆಲೆಯಲ್ಲಿ ಪಿಎಂ ಜನ್ ಧನ್ ಯೋಜನೆ, ಪಿಎಂ ಉಜ್ವಲಾ ಯೋಜನೆ, ಪಿಎಂ ಆವಾಸ್ ಯೋಜನೆ, ಆಯುಷ್ಮಾನ್ ಭಾರತ್, ಪಿಎಂ-ಕಿಸಾನ್, ಜಲ ಜೀವನ್ ಮಿಷನ್ ಹಾಗೂ ಸ್ವಚ್ಛ ಭಾರತ್‌ಗಳಂತಹ ಪ್ರಮುಖ ಕಲ್ಯಾಣ ಯೋಜನೆಗಳು ಸರ್ಕಾರದ ಆಡಳಿತ ನೀತಿಯ ಕೇಂದ್ರಬಿಂದುವಾಗಿ ಮುಂದುವರಿದಿವೆ.

11:16 PM (IST) Sep 07

ಊಟ ತಡವಾಯ್ತು ಅಂದ ಡೆಲಿವರಿ ಬಾಯ್.. ಟ್ರ್ಯಾಕ್ ಮಾಡಿದ್ರೆ ಬೇರೆಯೇ ಕಥೆ, ಜೊಮ್ಯಾಟೋ ಗ್ರಾಹಕನಿಗೆ ಶಾಕ್

ಗುರುಗ್ರಾಮದಲ್ಲಿ ಜೊಮ್ಯಾಟೋ ಡೆಲಿವರಿ ಎಜೆಂಟ್ ಒಬ್ಬ ಗ್ರಾಹಕನ ಊಟವನ್ನ ದಾರಿಯಲ್ಲೇ ಬೇರೆಯವರಿಗೆ 100 ರೂಪಾಯಿಗೆ ಮಾರಿ ವಂಚಿಸಿದ್ದಾನೆ. ಹಸಿದು ಕಾಯುತ್ತಿದ್ದ ಗ್ರಾಹಕನೇ ಖುದ್ದಾಗಿ ಲೊಕೇಶನ್‌ಗೆ ಹೋಗಿ ಡೆಲಿವರಿ ಬಾಯ್ ಅಸಲಿ ಆಟವನ್ನ ಬಯಲಿಗೆಳೆದಿದ್ದಾರೆ.

Read Full Story

10:57 PM (IST) Sep 07

ಸದ್ಗುರುಗಳ ಸನ್ನಿಧಿಯಲ್ಲಿ ನಟಿ ಸಮಂತಾ; ಮದ್ವೆಯಾದ ಜಾಗದಲ್ಲೇ ಬೇಬಿ ಬಂಪ್ ಸಂಭ್ರಮ

ನಟಿ ಸಮಂತಾ ರುತ್ ಪ್ರಭು ಕೊಯಮತ್ತೂರಿನ ಇಶಾ ಯೋಗ ಕೇಂದ್ರಕ್ಕೆ ಭೇಟಿ ನೀಡುವ ಮೂಲಕ ತಮ್ಮ ಆಧ್ಯಾತ್ಮಿಕ ಪಯಣವನ್ನು ಮುಂದುವರಿಸಿದ್ದಾರೆ. ಮದುವೆಯಾದ ಪವಿತ್ರ ಜಾಗದಲ್ಲೇ ಕಾಲ ಕಳೆಯುತ್ತಿರುವ ಸಮಂತಾ, ಇದು ತಮ್ಮ ಜೀವನದ ಹೊಸ ಸಾಧ್ಯತೆಗಳಿಗೆ ದಾರಿಯಾಗಿದೆ ಎಂದು ಹೇಳಿದ್ದಾರೆ.

Read Full Story

10:25 PM (IST) Sep 07

ನಿಂಗೆ ಯಾರೂ ಹೆಣ್ಮಕ್ಕಳು ಇಲ್ವಾ - ಪಾಂಡ್ಯ ವಿಚಾರದಲ್ಲಿ ರೊಚ್ಚಿಗೆದ್ದ ನಟಿ

ಹಾರ್ದಿಕ್ ಪಾಂಡ್ಯ ಜೊತೆಗಿನ ಡೇಟಿಂಗ್ ವದಂತಿಯನ್ನ ಅಮೀಷಾ ಪಟೇಲ್ ವ್ಯಂಗ್ಯವಾಗಿ ತಳ್ಳಿಹಾಕಿದ್ದಾರೆ. ಕೇವಲ ಸ್ನೇಹದ ಸಂಕೇತವಾಗಿ ಹೆಗಲ ಮೇಲೆ ಕೈ ಇರಿಸಿದ್ದನ್ನ ರೋಮ್ಯಾಂಟಿಕ್ ಎಂದು ಬಿಂಬಿಸಿದ ನೆಟ್ಟಿಗನಿಗೆ ಅವರು ಸರಿಯಾಗಿ ಟಾಂಗ್ ಕೊಟ್ಟಿದ್ದಾರೆ.

Read Full Story

10:17 PM (IST) Sep 07

ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ಯುಪಿ ಸಿಎಂ ಯೋಗಿ ಆದಿತ್ಯನಾಥ್, ಭಕ್ತರಿಂದ ಜಯಕಾರ

ಯುಪಿ ಸಿಎಂ ಯೋಗಿ ಆದಿತ್ಯನಾಥ್ ಇಂದು ತಿರುಪತಿ ತಿಮ್ಮಪ್ಪನ ದರ್ಶನ ಪಡೆದಿದ್ದಾರೆ. ಈ ವೇಳೆ ನೆರೆದಿದ್ದ ಭಕ್ತರು ಜೈ ಶ್ರೀರಾಮ್, ಭಾರತ್ ಮಾತಾ ಕಿ ಜೈ ಘೋಷಣೆ ಕೂಗಿದ್ದಾರೆ. ತಿರುಪತಿಯಲ್ಲಿ ಯೋಗಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.

Read Full Story

09:58 PM (IST) Sep 07

ಮೋದಿ ಕಾರ್ಯಕ್ರಮಕ್ಕೆ BookMyShow ನಲ್ಲಿ ಟಿಕೆಟ್ ಬುಕ್ಕಿಂಗ್! ಒಂದೇ ಗಂಟೆಯಲ್ಲಿ ಸೋಲ್ಡ್ ಔಟ್

ವಡೋದರಾದಲ್ಲಿ ನಡೆಯಲಿರುವ ಪ್ರಧಾನಿ ಮೋದಿ ಅವರ ಕಾರ್ಯಕ್ರಮದ ನೋಂದಣಿ 'ಬುಕ್ ಮೈ ಶೋ'ನಲ್ಲಿ ಕೇವಲ ಒಂದು ಗಂಟೆಯಲ್ಲಿ 'ಹೌಸ್‌ಫುಲ್' ಆಗಿದ್ದು, ಬರೋಬ್ಬರಿ 42 ಸಾವಿರಕ್ಕೂ ಹೆಚ್ಚು ಜನರು ವೇಟಿಂಗ್ ಲಿಸ್ಟ್‌ನಲ್ಲಿದ್ದಾರೆ. ಈ ಭೇಟಿಯ ವೇಳೆ ಪ್ರಧಾನಿಯವರು ಗುಜರಾತ್‌ನಲ್ಲಿ 35,000 ಕೋಟಿ ರೂಪಾಯಿಗಳಿಗೂ ಅಧಿಕ ಮೌಲ್ಯದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ.

Read Full Story

09:33 PM (IST) Sep 07

ಕೃಷ್ಣಂ ವಂದೇ ಜಗದ್ಗುರುಂ - ಪಾಕಿಸ್ತಾನದಲ್ಲಿ ಜನಸಾಗರ, ಈ ಸಂಭ್ರಮ ನೋಡಿದ್ರೆ ಶಾಕ್ ಆಗ್ತೀರಿ - VIDEO

ಸಾಮಾನ್ಯವಾಗಿ ಪಾಕಿಸ್ತಾನ ಅಂದ ತಕ್ಷಣ ನಮಗೆ ನೆನಪಾಗೋದು ಅಲ್ಲಿನ ಹಿಂದೂಗಳ ಮೇಲಿನ ದೌರ್ಜನ್ಯ ಅಥವಾ ಮಂದಿರಗಳ ಮೇಲಿನ ದಾಳಿಯ ಸುದ್ದಿಗಳು. ಆದರೆ ಈ ಬಾರಿಯ ಕೃಷ್ಣ ಜನ್ಮಾಷ್ಟಮಿಯಂದು ಪಾಕಿಸ್ತಾನದಿಂದ ಬಂದಿರುವ ವಿಡಿಯೋ ಮತ್ತು ಫೋಟೋಗಳು ಎಲ್ಲರನ್ನೂ ಅಚ್ಚರಿಗೊಳಿಸಿವೆ

Read Full Story

09:07 PM (IST) Sep 07

ವಿಚ್ಛೇದನ ವಿವಾದದ ನಡುವೆಯೇ ವೈರಲ್ ಆಯ್ತು ಸಿಗರೇಟ್ ವಿಡಿಯೋ - ಕೆನಿಶಾ ಜೊತೆ ಜಯಂ ರವಿ

ತಮಿಳು ನಟ ಜಯಂ ರವಿ ಹಾಗೂ ಗಾಯಕಿ ಕೆನಿಶಾ ಮತ್ತೆ ಸುದ್ದಿಯಾಗಿದ್ದಾರೆ. ಇಬ್ಬರೂ ಒಟ್ಟಿಗೆ ಕಾಣಿಸಿಕೊಂಡಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅದರಲ್ಲಿ ಜಯಂ ರವಿ ಸಿಗರೇಟ್ ಸೇದಿ ಬಳಿಕ ಕೆನಿಶಾಗೆ ನೀಡಿದಂತೆ ಕಾಣಿಸುವ ದೃಶ್ಯವಿದೆ.

Read Full Story

08:25 PM (IST) Sep 07

ಪ್ರಾಮಾಣಿಕತೆ ಇನ್ನೂ ಜೀವಂತ; 3 ಲಕ್ಷ ಹಣವಿದ್ದ ಬ್ಯಾಗ್ ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದ ಕಂಡಕ್ಟರ್

ಶಾದ್‌ನಗರದ ಆರ್​ಟಿಸಿ ಕಂಡಕ್ಟರ್ ಸರಿತಾ ಅವರು ಬಸ್ಸಿನಲ್ಲಿ ಪ್ರಯಾಣಿಕರು ಬಿಟ್ಟು ಹೋಗಿದ್ದ 3 ಲಕ್ಷ ರೂಪಾಯಿ ಹಣವನ್ನು ಮರಳಿಸಿ ದೊಡ್ಡ ಮಟ್ಟದ ಪ್ರಾಮಾಣಿಕತೆ ಮೆರೆದಿದ್ದಾರೆ. ಇಂದಿನ ಸ್ವಾರ್ಥದ ಕಾಲದಲ್ಲೂ ಇವರ ಈ ನಿಸ್ವಾರ್ಥ ಕಾರ್ಯ ಮತ್ತು ಮಾನವೀಯತೆ ಎಲ್ಲರಿಗೂ ಮಾದರಿಯಾಗಿದ್ದು, ಸಾರ್ವಜನಿಕರಿಂದ ಭಾರೀ ಶ್ಲಾಘನೆ ವ್ಯಕ್ತವಾಗಿದೆ.

Read Full Story

08:00 PM (IST) Sep 07

ಹಸಿ ಮೊಟ್ಟೆ ಕುಡಿಯುತ್ತಿದ್ದೀರಾ? ಆರೋಗ್ಯ ತಜ್ಞರಿಂದ ಶಾಕಿಂಗ್ ಮಾಹಿತಿ

ಬಹಳಷ್ಟು ಜನು ಅದರಲ್ಲೂ ಮುಖ್ಯವಾಗಿ ಜಿಮ್‌ಗೆ ಹೋಗುವವರು ಅಥವಾ ಬಾಡಿ ಬಿಲ್ಡಿಂಗ್ ಮಾಡುವವರು ಹಸಿ ಮೊಟ್ಟೆ ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದು, ಹೆಚ್ಚು ಪ್ರೋಟೀನ್ ಸಿಗುತ್ತದೆ ಎಂದು ನಂಬಿದ್ದಾರೆ. ಆರೋಗ್ಯ ತಜ್ಞರ ಪ್ರಕಾರ ಹಸಿ ಮೊಟ್ಟೆ ಸೇವನೆ ಲಾಭಕ್ಕಿಂತ ಹೆಚ್ಚಾಗಿ ಅಪಾಯವನ್ನೇ ತಂದೊಡ್ಡುತ್ತದೆ.

Read Full Story

07:18 PM (IST) Sep 07

ಭಾರತ vs ಪಾಕ್ ಮಧ್ಯೆ ಮತ್ತೆ ಕ್ರಿಕೆಟ್ ಸರಣಿ - ಶೀಘ್ರದಲ್ಲೇ ICC ಸಂಚಲನಕಾರಿ ನಿರ್ಧಾರ

ಪಾಕಿಸ್ತಾನ ಕ್ರಿಕೆಟ್ ಮಂಡಳಿ ಮತ್ತೆ ಭಾರತದ ಜೊತೆ ಕ್ರಿಕೆಟ್ ಸರಣಿ ಆಡಲು ಬಯಸಿದೆ. ಐಸಿಸಿ ಮುಂದೆ ಇಂತಹದೊಂದು ದೊಡ್ಡ ಬೇಡಿಕೆ ಇಡುತ್ತಿದ್ದು, ಅದಕ್ಕೆ ಗ್ರೀನ್ ಸಿಗ್ನಲ್ ಸಿಕ್ಕರೂ ಅಚ್ಚರಿ ಇಲ್ಲ ಎನ್ನಲಾಗುತ್ತಿದೆ. ಈ ಕುರಿತ ಮಾಹಿತಿ ಇಲ್ಲಿದೆ.

Read Full Story

06:47 PM (IST) Sep 07

ಓದಿಗಾಗಿ ಅಮ್ಮ ಮಾರಿದ್ದರು ಮಾಂಗಲ್ಯ - ಇಂದು ಸಹಸ್ರಾರು ಜೀವ ಉಳಿಸಿದ ಪುತ್ರಿ- ಜೇವರ್ಗಿಯ ಕ್ಯಾನ್ಸರ್​ ತಜ್ಞೆಯ ಯಶೋಗಾಥೆ

ಕಲಬುರಗಿಯ ಕಡುಬಡತನದಲ್ಲಿ ಹುಟ್ಟಿ, ತಾಯಿಯು ತನ್ನ ಮಾಂಗಲ್ಯವನ್ನು ಮಾರಿ ಓದಿಸಿದ್ದರಿಂದ ದೇಶದ ಖ್ಯಾತ ಕ್ಯಾನ್ಸರ್ ತಜ್ಞೆಯಾದವರು ಡಾ. ವಿಜಯಲಕ್ಷ್ಮಿ ದೇಶಮಾನೆ. ತಮ್ಮ ಅವಿರತ ವೈದ್ಯಕೀಯ ಸೇವೆಗಾಗಿ ರಾಷ್ಟ್ರಪತಿಗಳಿಂದ ಪದ್ಮಶ್ರೀ ಪ್ರಶಸ್ತಿ ಪಡೆದ ಇವರ ಜೀವನಗಾಥೆ ಅನೇಕರಿಗೆ ಸ್ಫೂರ್ತಿದಾಯಕವಾಗಿದೆ.
Read Full Story

06:28 PM (IST) Sep 07

ಗ್ರಾಹಕರಿಗೆ ಕೇಂದ್ರದಿಂದ  ಬಿಗ್ ರಿಲೀಫ್ - ನಗರ-ಗ್ರಾಮೀಣ ಭಾಗದ ಎಲ್‌ಪಿಜಿ ಬುಕಿಂಗ್ ನಿಯಮ ಇನ್ಮುಂದೆ ಸೇಮ್ ಟು ಸೇಮ್!

ಕೇಂದ್ರ ಸರ್ಕಾರವು ಗ್ರಾಮೀಣ ಪ್ರದೇಶದ ಎಲ್‌ಪಿಜಿ ಗ್ರಾಹಕರಿಗೆ ಸಿಲಿಂಡರ್ ಮರುಪೂರಣದ ಕಡ್ಡಾಯ ಕಾಯುವ ಅವಧಿಯನ್ನು 45 ದಿನಗಳಿಂದ 25 ದಿನಗಳಿಗೆ ಇಳಿಸಿ ಆದೇಶ ಹೊರಡಿಸಿದೆ. ಈ ಮೂಲಕ, ನಗರ ಮತ್ತು ಗ್ರಾಮೀಣ ಪ್ರದೇಶಗಳೆರಡರಲ್ಲೂ ಬುಕಿಂಗ್ ಅಂತರ ಒಂದೇ ಸಮನಾಗಿದ್ದು, ಸುಧಾರಿತ ಅನಿಲ ಪೂರೈಕೆ ಸ್ಥಿತಿಗತಿಯಿಂದಾಗಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.
Read Full Story

06:24 PM (IST) Sep 07

ಈ ಕಾಡಿನಲ್ಲಿ ತ್ರಿಫಲ ವೃಕ್ಷ ಉಂಟು - ಈ ಮರದ ಒಂದೇ ಹಣ್ಣು ತಿಂದರೆ ಮುಪ್ಪು ಬರಲ್ವಂತೆ!

ಒಂದೇ ಮರಕ್ಕೆ ನೆಲ್ಲಿ, ಅಳಲೆ, ಮತ್ತು ತಾರೆಕಾಯಿ ಬಿಡುವ 'ತ್ರಿಫಲ ವೃಕ್ಷ'ವಿದೆ ಎಂಬ ನಂಬಿಕೆ ಇದೆ. ಆಚಾರ್ಯ ನಾಗಾರ್ಜುನರ ರಸವಿದ್ಯೆಯಿಂದ ಸೃಷ್ಟಿಯಾದ ಈ ಮರದ ಹಣ್ಣು ತಿಂದರೆ ಮುಪ್ಪು ಬರುವುದಿಲ್ಲ ಎಂದು ಹೇಳಲಾಗುತ್ತದೆ.

Read Full Story

06:05 PM (IST) Sep 07

ವೆಚ್ಚ ಕಡಿತಕ್ಕೆ ಮುಂದಾದ ಜಾಗ್ವಾರ್ ಲ್ಯಾಂಡ್ ರೋವರ್ - ₹19,000 ಕೋಟಿ ಉಳಿಸಲು 4 ಸಾವಿರ ನೌಕರರ ವಜಾ!

ಜಾಗತಿಕ ಐಷಾರಾಮಿ ವಾಹನ ತಯಾರಕ 'ಜಾಗ್ವಾರ್ ಲ್ಯಾಂಡ್ ರೋವರ್' (JLR) ವೆಚ್ಚ ಕಡಿತದ ಭಾಗವಾಗಿ ಮುಂದಿನ ಎರಡು ವರ್ಷಗಳಲ್ಲಿ 4,000 ಉದ್ಯೋಗಗಳನ್ನು ಕಡಿತಗೊಳಿಸುವುದಾಗಿ ಘೋಷಿಸಿದೆ. ಈ ನಿರ್ಧಾರಕ್ಕೆ ಸೈಬರ್ ದಾಳಿ, ಚೀನೀ ಇವಿಗಳ ಪೈಪೋಟಿ, ಮತ್ತು ಹೆಚ್ಚುತ್ತಿರುವ ಉತ್ಪಾದನಾ ವೆಚ್ಚಗಳು ಪ್ರಮುಖ ಕಾರಣಗಳಾಗಿದ್ದು, ಈ ಕಡಿತವು ಪ್ರಮುಖವಾಗಿ ಬ್ರಿಟನ್‌ನಲ್ಲಿರುವ ಆಡಳಿತಾತ್ಮಕ ಹುದ್ದೆಗಳ ಮೇಲೆ ಪರಿಣಾಮ ಬೀರಲಿದೆ.
Read Full Story

06:00 PM (IST) Sep 07

ಸಿನಿಮಾಗಳ ಮಧ್ಯೆ ಇಂಟರ್ವಲ್ ಯಾಕೆ ಬರುತ್ತೆ ? ಇದರ ಹಿಂದಿದೆ ಇಂಟ್ರೆಸ್ಟಿಂಗ್ ಕಹಾನಿ!

ಹಿಂದೆ ಫಿಲ್ಮ್ ರೀಲ್‌ಗಳನ್ನು ಬದಲಿಸಲು ಶುರುವಾದ ಇಂಟರ್ವಲ್ ಪದ್ಧತಿ, ಡಿಜಿಟಲ್ ಯುಗದಲ್ಲೂ ಭಾರತೀಯ ಚಿತ್ರರಂಗದಲ್ಲಿ ಮುಂದುವರೆದಿದೆ. ಭಾರತದಲ್ಲಿ ಇಂಟರ್ವಲ್ ಪ್ರೇಕ್ಷಕರ ನಿರೀಕ್ಷೆಯಾಗಿ ಮತ್ತು ಥಿಯೇಟರ್‌ಗಳ ವ್ಯಾಪಾರ ಪದ್ಧತಿಯಾಗಿ ಮುಂದುವರಿದಿದೆ.

Read Full Story

05:41 PM (IST) Sep 07

ಧೋನಿ ರಿಟೈರ್ ಆದ ದಿನವೇ ರೈನಾ ಯಾಕೆ ನಿವೃತ್ತಿ ಘೋಷಿಸಿದ್ರು? ಕಾರಣ ಕೇಳಿ ಶಾಕ್ ಆಗಿದ್ದರಂತೆ 'ತಲಾ'!

ಮಹೇಂದ್ರ ಸಿಂಗ್ ಧೋನಿ ಮತ್ತು ಸುರೇಶ್ ರೈನಾ ಅವರ ಸ್ನೇಹದ ದ್ಯೋತಕವಾಗಿ, ಇಬ್ಬರೂ ಒಂದೇ ದಿನ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದರು. ತನ್ನ ನಿವೃತ್ತಿ ಘೋಷಣೆಯ ನಂತರ ರೈನಾ ಕೂಡ ನಿವೃತ್ತರಾದ ವಿಷಯ ತಿಳಿದು ಧೋನಿಗೆ ಆಶ್ಚರ್ಯವಾಗಿತ್ತು, ಆ ನಂತರ ಇಬ್ಬರೂ ಭಾವುಕರಾಗಿ ಅಪ್ಪಿಕೊಂಡು ಅತ್ತಿದ್ದರು ಎಂಬುದನ್ನು ರೈನಾ ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದಾರೆ.
Read Full Story

05:12 PM (IST) Sep 07

242 ರನ್ ಚಚ್ಚಿ ದೇಶಿ ಕ್ರಿಕೆಟ್ ಆಳಿದ ಹೀರೋ, ಜೈಲು ಸೇರಿದ್ದು ಹೇಗೆ? ಸಾಯುವಂತಿದ್ದ ಟೀಂ ಇಂಡಿಯಾ ಆಟಗಾರನಿಗೆ ಜೀವ ಕೊಟ್ಟಿದ್ದು RCB ಆಟಗಾರ ಕೊಟ್ಟ ಆ ಚೆಕ್!

ಬರೋಡಾದ ಮಾಜಿ ಕ್ರಿಕೆಟಿಗ ಜಾಕೋಬ್ ಮಾರ್ಟಿನ್, ರಣಜಿ ಟ್ರೋಫಿಯಲ್ಲಿ ಸಾವಿರಕ್ಕೂ ಹೆಚ್ಚು ರನ್ ಗಳಿಸಿ ಮಿಂಚಿದರೂ, ಅವರ ಅಂತಾರಾಷ್ಟ್ರೀಯ ವೃತ್ತಿಜೀವನ ಅಲ್ಪಕಾಲದ್ದಾಗಿತ್ತು. ನಾಯಕನಾಗಿ ಬರೋಡಾಕ್ಕೆ ರಣಜಿ ಟ್ರೋಫಿ ಗೆಲ್ಲಿಸಿಕೊಟ್ಟ ಮಾರ್ಟಿನ್, ನಂತರದ ದಿನಗಳಲ್ಲಿ ಕಾನೂನು ಸಂಘರ್ಷ ಮತ್ತು ಮಾರಣಾಂತಿಕ ಅಪಘಾತವನ್ನು ಎದುರಿಸಿ, ಏಳುಬೀಳುಗಳ ಬದುಕನ್ನು ಸಾಗಿಸಿದರು.
Read Full Story

04:50 PM (IST) Sep 07

Tirumala - ತಿರುಮಲ ದೇವಾಲಯದ ಗೋಡೆಯ ಮೇಲೆ ಏನು ಕೆತ್ತಲಾಗಿದೆ? ಟಿಟಿಡಿಗೂ ಮೊದಲು ಯಾರು ಆಡಳಿತ ನಡೆಸಿದರು?

10ನೇ ಶತಮಾನದಲ್ಲಿ ಪಲ್ಲವ ರಾಣಿ ಸಮವೈ ಪೆರುಂದೇವಿಯಿಂದ ಆರಂಭವಾದ ತಿರುಮಲ ಬ್ರಹ್ಮೋತ್ಸವವು, ಶತಮಾನಗಳಿಂದ ರಾಜಮನೆತನಗಳ ಆಶ್ರಯದಲ್ಲಿ ವಿಕಸನಗೊಂಡಿದೆ. ವಿಜಯನಗರ ಕಾಲದಲ್ಲಿ ವೈಭವವನ್ನು ಹೆಚ್ಚಿಸಿಕೊಂಡ ಈ ಉತ್ಸವದ ಐತಿಹಾಸಿಕ ಪಯಣವನ್ನು ದೇವಾಲಯದ ಶಾಸನಗಳು ದಾಖಲಿಸುತ್ತವೆ.
Read Full Story

04:20 PM (IST) Sep 07

ಜಿಮ್‌ನಲ್ಲಿ ಹಿರಿಯ ಅಧಿಕಾರಿಯ ಟವಲ್ ತಪ್ಪಿ ಬಳಸಿದ್ದಕ್ಕೆ ₹1 ಕೋಟಿ ಸಂಬಳದ ಐಟಿ ಉದ್ಯೋಗದಿಂದ ವಜಾಗೊಂಡ ಟೆಕ್ಕಿ!

ಸ್ವಿಟ್ಜರ್‌ಲ್ಯಾಂಡ್‌ನ ಟೆಕ್ ಕಂಪನಿಯೊಂದರಲ್ಲಿ, ಜಿಮ್ ಸೌನಾದಲ್ಲಿ ಆಕಸ್ಮಿಕವಾಗಿ ಹಿರಿಯ ಅಧಿಕಾರಿಯ ಟವಲ್ ಬಳಸಿದ್ದಕ್ಕೆ ಸಾಫ್ಟ್‌ವೇರ್ ಎಂಜಿನಿಯರ್‌ನನ್ನು ವಜಾಗೊಳಿಸಲಾಗಿದೆ. ಆರ್ಥಿಕ ಸಂಕಷ್ಟದ ಕಾರಣ ನೀಡಲಾಗಿದ್ದರೂ, ಈ ಸಣ್ಣ ಘಟನೆಯೇ ತನ್ನ ವಜಾಕ್ಕೆ ಕಾರಣವೆಂದು ನೌಕರ ಶಂಕಿಸಿದ್ದು, ಉದ್ಯೋಗದಾತರ ಅಹಂನಿಂದಾಗಿ ತಾನು ನಿರುದ್ಯೋಗಿಯಾಗಿರುವುದಾಗಿ ರೆಡ್ಡಿಟ್‌ನಲ್ಲಿ ಹಂಚಿಕೊಂಡಿದ್ದಾರೆ.
Read Full Story

02:31 PM (IST) Sep 07

ಟಾಯ್ಲೆಟ್‌ ಸೀಟ್‌ಗಿಂತಲೂ ಕೊಳಕು! ನಿಮ್ಮ ಕಿಚನ್‌ನ ಈ 5 ವಸ್ತುಗಳಲ್ಲಿ ಅಡಗಿವೆ ಅಪಾಯಕಾರಿ ಕ್ರಿಮಿಗಳು

ನಿಮ್ಮ ಅಡುಗೆಮನೆಯಲ್ಲಿ ಪ್ರತಿದಿನ ಬಳಸುವ ಕೆಲವು ವಸ್ತುಗಳು ಟಾಯ್ಲೆಟ್ ಸೀಟ್‌ಗಿಂತಲೂ ಹೆಚ್ಚು ಕೊಳಕಾಗಿರುತ್ತವೆ ಮತ್ತು ಕ್ರಿಮಿಗಳನ್ನು ಹೊಂದಿರುತ್ತವೆ ಎಂದು ನಿಮಗೆ ತಿಳಿದಿದೆಯೇ? ಇವುಗಳ ಬಳಕೆಯಿಂದಲೇ ಆರೋಗ್ಯ ಸಮಸ್ಯೆಗಳು ಬರುವ ಅಪಾಯ ಹೆಚ್ಚು.

Read Full Story

02:18 PM (IST) Sep 07

Long Time Investment - ಈ ವರ್ಷ 1 ಲಕ್ಷ ರೂಪಾಯಿ ಚಿನ್ನ ತೆಗೆದುಕೊಂಡದರೆ 2050ರಲ್ಲಿ ಎಷ್ಟು ಹಣ ಆಗುತ್ತೆ?

ಭಾರತದಲ್ಲಿ ಚಿನ್ನವು ದೀರ್ಘಕಾಲದ ಹೂಡಿಕೆಯಾಗಿದ್ದು, 2050ರ ವೇಳೆಗೆ 10 ಗ್ರಾಂ ಚಿನ್ನದ ಬೆಲೆ 14-22 ಲಕ್ಷ ರೂಪಾಯಿ ತಲುಪುವ ನಿರೀಕ್ಷೆಯಿದೆ. ಇಂದಿನ 1 ಲಕ್ಷ ರೂಪಾಯಿ ಹೂಡಿಕೆಯು 2050ರ ಹೊತ್ತಿಗೆ 9.85 ಲಕ್ಷದಿಂದ 15 ಲಕ್ಷದವರೆಗೆ ಮೌಲ್ಯವನ್ನು ಪಡೆಯಬಹುದು, ಆದರೆ ಹೂಡಿಕೆಯಲ್ಲಿ ಅಪಾಯಗಳಿರುತ್ತವೆ ಎಂಬುದನ್ನು ಈ ಲೇಖನ ವಿವರಿಸುತ್ತದೆ.
Read Full Story

02:05 PM (IST) Sep 07

ಕಳ್ಳತನ ಮಾಡಿ ಐವರು ಗರ್ಲ್​ಫ್ರೆಂಡ್ಸ್​ ಮ್ಯಾನೇಜ್​ ಮಾಡ್ತಿದ್ದ ಕಿಲಾಡಿ ತಾತ! 63ರ ವೃದ್ಧನ ಸ್ಟೋರಿ ಕೇಳಿ

63 ವರ್ಷದ ಬಂಧು ಸಿಂಗ್ ಎಂಬಾತ ತನ್ನ ಐವರು ಗೆಳತಿಯರ ಐಷಾರಾಮಿ ಜೀವನ ಮತ್ತು ದುಬಾರಿ ಖರ್ಚುಗಳನ್ನು ಪೂರೈಸಲು ಕಳ್ಳತನದ ಹಾದಿ ಹಿಡಿದಿದ್ದ. ಈತನ ಕಥೆ ಕೇಳಿ ಪೊಲೀಸರೇ ಬೆರಗಾಗಿದ್ದು, ಈ ವೃದ್ಧನ ಅಪರಾಧದ ಕಥೆ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
Read Full Story

01:45 PM (IST) Sep 07

ಬೈ ಅಪ್ಪಾ, ಅಮ್ಮಾ - ಹಾಸ್ಟೆಲ್​ ಅವಶೇಷದಡಿ ಸಿಲುಕಿದ ವಿದ್ಯಾರ್ಥಿಯ ಕಣ್ಣೀರು ತರಿಸುವ ವಿಡಿಯೋ- ಮುಂದಾಯ್ತು ಪವಾಡ

ದೆಹಲಿಯ ಸತ್ಯ ನಿಕೇತನದಲ್ಲಿ ಐದು ಅಂತಸ್ತಿನ ಕಟ್ಟಡ ಕುಸಿದುಬಿದ್ದಾಗ, ಅವಶೇಷಗಳ ಅಡಿಯಲ್ಲಿ ಸಿಲುಕಿದ್ದ ಆದಿತ್ಯ ಎಂಬ ವಿದ್ಯಾರ್ಥಿ ಪ್ರಾಣಾಪಾಯದಲ್ಲಿದ್ದರೂ ಧೈರ್ಯದಿಂದ ವಿಡಿಯೋ ಕಾಲ್ ಮಾಡಿದ್ದಾನೆ. 'ಬೈ ಅಪ್ಪ, ಅಮ್ಮ' ಎಂದು ಹೆತ್ತವರಿಗೆ ವಿದಾಯ ಹೇಳಿದ ಆತನ 11 ಸೆಕೆಂಡುಗಳ ಎಸ್‌ಒಎಸ್ ವಿಡಿಯೋ, ರಕ್ಷಣಾ ತಂಡಗಳಿಗೆ ಆತನ ಇರುವಿಕೆಯನ್ನು ಪತ್ತೆಹಚ್ಚಲು ಸಹಾಯ ಮಾಡಿ, ಆತನನ್ನು ಯಶಸ್ವಿಯಾಗಿ ರಕ್ಷಿಸಲು ಕಾರಣವಾಯಿತು.
Read Full Story

01:37 PM (IST) Sep 07

ಸ್ಪಿತಿ ಕಣಿವೆಯಲ್ಲಿ ಬೌದ್ಧ ಭಿಕ್ಕುಗಳ ಜೊತೆ ಫುಟ್‌ಬಾಲ್ ಆಡಿ ನೆಟ್ಟಿಗರ ಮನಗೆದ್ದ ವಿಶೇಷ ಅತಿಥಿ!

ಹಿಮಾಚಲ ಪ್ರದೇಶದ ಸ್ಪಿತಿ ಕಣಿವೆಯ ಮಠವೊಂದರಲ್ಲಿ, 'ಮಾಫು' ಎಂಬ ಗೋಲ್ಡನ್ ರಿಟ್ರೈವರ್ ನಾಯಿಯು ಯುವ ಬೌದ್ಧ ಭಿಕ್ಕುಗಳೊಂದಿಗೆ ಫುಟ್‌ಬಾಲ್ ಆಡಿದೆ. ಈ ಮುದ್ದಾದ ಘಟನೆಯ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಲಕ್ಷಾಂತರ ಜನರ ಮನಗೆದ್ದಿದೆ.
Read Full Story

01:24 PM (IST) Sep 07

ಜಗತ್ತಿನ ಸಾರ್ವಕಾಲಿಕ ಶ್ರೇಷ್ಠ ಟಾಪ್-10 ಟೆಸ್ಟ್ ವೇಗದ ಬೌಲರ್ ಆಯ್ಕೆ ಮಾಡಿದ ಸ್ಟುವರ್ಟ್ ಬ್ರಾಡ್; ಲಿಸ್ಟ್‌ನಲ್ಲಿವೆ ಅಚ್ಚರಿ ಹೆಸರು..!

ಇಂಗ್ಲೆಂಡ್‌ನ ಮಾಜಿ ವೇಗಿ ಸ್ಟುವರ್ಟ್ ಬ್ರಾಡ್ ಇದೀಗ ಕ್ರಿಕೆಟ್ ಜಗತ್ತಿನ ಸಾರ್ವಕಾಲಿಕ ಶ್ರೇಷ್ಠ ಟಾಪ್ 10 ಟೆಸ್ಟ್ ಬೌಲರ್‌ಗಳನ್ನು ಆಯ್ಕೆ ಮಾಡಿದ್ದಾರೆ. ಆದರೆ ಬ್ರಾಡ್ ಆಯ್ಕೆ ಮಾಡಿದ ಟಾಪ್-10 ಲಿಸ್ಟ್‌ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಈ ಪಟ್ಟಿಯಲ್ಲಿ ಯಾರೆಲ್ಲಾ ಸ್ಥಾನ ಪಡೆದಿದ್ದಾರೆ ನೋಡೋಣ ಬನ್ನಿ.

Read Full Story

11:27 AM (IST) Sep 07

ದೇಶದಾದ್ಯಂತ 15 ಕೋಟಿ ಜನಧನ ಖಾತೆಗಳು ನಿಷ್ಕ್ರಿಯ - ಆರ್‌ಟಿಐನಲ್ಲಿ ಬಯಲಾಯ್ತು ಸತ್ಯ!

ಪ್ರಧಾನ ಮಂತ್ರಿ ಜನಧನ ಯೋಜನೆಯ ಒಟ್ಟು ಖಾತೆಗಳಲ್ಲಿ ಪ್ರತಿ ನಾಲ್ಕರಲ್ಲಿ ಒಂದು ಖಾತೆ (15 ಕೋಟಿ) ನಿಷ್ಕ್ರಿಯವಾಗಿದ್ದು, 5.72 ಕೋಟಿ ಖಾತೆಗಳಲ್ಲಿ ಶೂನ್ಯ ಬ್ಯಾಲೆನ್ಸ್ ಇದೆ ಎಂದು ಆರ್‌ಟಿಐ ಬಹಿರಂಗಪಡಿಸಿದೆ. ಪುರುಷರು ಹಾಗೂ ಮಹಿಳೆಯರ ಎಷ್ಟು ಖಾತೆ ನಿಷ್ಕ್ರಿಯ ಮಾಹಿತಿ ಇಲ್ಲಿದೆ.

Read Full Story

11:18 AM (IST) Sep 07

Viral Story - ಹುಟ್ಟುಹಬ್ಬಕ್ಕೆ ಸ್ನೇಹಿತ ಕೊಟ್ಟ ಸಣ್ಣ ಗಿಫ್ಟ್, ಆದರೆ ರಾತ್ರೋರಾತ್ರಿ ಕೋಟ್ಯಾಧಿಪತಿಯಾದ ವ್ಯಕ್ತಿ!

ವ್ಯಕ್ತಿಯೊಬ್ಬರಿಗೆ ಸ್ನೇಹಿತನಿಂದ ಹುಟ್ಟುಹಬ್ಬದ ಉಡುಗೊರೆಯಾಗಿ ಲಾಟರಿ ಟಿಕೆಟ್ ಸಿಕ್ಕಿತ್ತು. ಆ ಟಿಕೆಟ್‌ಗೆ ಬರೋಬ್ಬರಿ 1 ಮಿಲಿಯನ್ ಡಾಲರ್ (ಸುಮಾರು 9 ಕೋಟಿ ರೂಪಾಯಿ) ಬಹುಮಾನ ಬಂದಿದ್ದು, ಅವರು ರಾತ್ರೋರಾತ್ರಿ ಕೋಟ್ಯಾಧಿಪತಿಯಾಗಿದ್ದಾರೆ.

Read Full Story

10:35 AM (IST) Sep 07

ಚೀನಾ ತವರಲ್ಲೇ ಅವರ ಫ್ಯಾನ್ಸ್ ಸೈಲೆನ್ಸ್ ಮಾಡಿದ ಸಾತ್ವಿಕ್-ಚಿರಾಗ್ ಜೋಡಿ..! ಚೀನಾ ಮಾಸ್ಟರ್ಸ್ ಗೆದ್ದು ಬೀಗಿದ ಭಾರತದ ಶಟ್ಲರ್

ಭಾರತದ ತಾರಾ ಬ್ಯಾಡ್ಮಿಂಟನ್ ಜೋಡಿ ಸಾತ್ವಿಕ್ ಸಾಯಿರಾಜ್ ಮತ್ತು ಚಿರಾಗ್ ಶೆಟ್ಟಿ, ಚೀನಾ ಮಾಸ್ಟರ್ಸ್‌ ಸೂಪರ್‌ 750 ಟೂರ್ನಿಯಲ್ಲಿ ಚೊಚ್ಚಲ ಪ್ರಶಸ್ತಿ ಗೆದ್ದು ಐತಿಹಾಸಿಕ ಸಾಧನೆ ಮಾಡಿದ್ದಾರೆ. ಫೈನಲ್‌ನಲ್ಲಿ ಚೀನಾದ ಜೋಡಿಯನ್ನು ಮೂರು ಗೇಮ್‌ಗಳ ರೋಚಕ ಹೋರಾಟದಲ್ಲಿ ಮಣಿಸಿದ ಇವರು, ಈ ಋತುವಿನಲ್ಲಿ ತಮ್ಮ ಎರಡನೇ ಹಾಗೂ ಒಟ್ಟಾರೆ 11ನೇ ಬಿಡಬ್ಲ್ಯುಎಫ್‌ ಕಿರೀಟವನ್ನು ಮುಡಿಗೇರಿಸಿಕೊಂಡರು.
Read Full Story

10:32 AM (IST) Sep 07

Monsoon Final Push - ದಕ್ಷಿಣ ಭಾರತ ರೈತರಿಗೆ ಗುಡ್‌ನ್ಯೂಸ್ ಕೊಟ್ಟ ಉಪಗ್ರಹ ಚಿತ್ರ, ಈ ಪ್ರದೇಶಗಳಲ್ಲಿ ಭಾರೀ ಮಳೆ ಮುನ್ಸೂಚನೆ

ಇನ್ಸಾಟ್ 3ಡಿಎಸ್ ಉಪಗ್ರಹ ಚಿತ್ರದ ಪ್ರಕಾರ, ನೈರುತ್ಯ ಮಾನ್ಸೂನ್ ಮಾರುತಗಳು ದಕ್ಷಿಣ ಭಾರತದತ್ತ ಚಲಿಸುವ ಮುನ್ಸೂಚನೆ ನೀಡಿದೆ. ಸದ್ಯ ಮಧ್ಯ ಮತ್ತು ಪೂರ್ವ ಭಾರತದಲ್ಲಿ ಸಕ್ರಿಯವಾಗಿರುವ ಮಳೆ, ಸೆಪ್ಟೆಂಬರ್ ಮಧ್ಯದ ನಂತರ ದಕ್ಷಿಣದ ರಾಜ್ಯಗಳಲ್ಲಿ, ವಿಶೇಷವಾಗಿ ಕರ್ನಾಟಕದ ಹಲವು ಭಾಗಗಳಲ್ಲಿ, ಭಾರೀ ಮಳೆಯನ್ನು ತರುವ ನಿರೀಕ್ಷೆಯಿದೆ, ಇದು ರೈತರಿಗೆ ಸಿಹಿ ಸುದ್ದಿಯಾಗಿದೆ.

Read Full Story

09:28 AM (IST) Sep 07

ದುಲೀಪ್ ಟ್ರೋಫಿ ಫೈನಲ್ - ಇಶಾನ್ ಕಿಶನ್ ಸ್ಪೋಟಕ ಶತಕ, ಮೊದಲ ದಿನವೇ ದಕ್ಷಿಣ ವಲಯ ಎದುರು ಪೂರ್ವ ವಲಯ ಮೇಲುಗೈ

ದುಲೀಪ್ ಟ್ರೋಫಿ ಟೂರ್ನಿಯ ಫೈನಲ್ ಪಂದ್ಯದಲ್ಲಿ ಪೂರ್ವ ವಲಯ ತಂಡವು ಮೊದಲ ದಿನದಾಟದಲ್ಲೇ ಬೃಹತ್ ಮೊತ್ತ ಕಲೆಹಾಕಿದೆ. ಈ ಮೂಲಕ ದಕ್ಷಿಣ ವಲಯದ ಮೇಲೆ ಒತ್ತಡ ಹೇರುವಲ್ಲಿ ಯಶಸ್ವಿಯಾಗಿದೆ. ಅಜೇಯ ಶತಕ ಸಿಡಿಸಿ ಮಿಂಚಿದ ಪೂರ್ವ ವಲಯ ತಂಡದ ನಾಯಕ ಇಶಾನ್ ಕಿಶನ್. ವೈಭವ್ ಸೂರ್ಯವಂಶಿ ಕೂಡಾ ಸ್ಪೋಟಕ ಬ್ಯಾಟಿಂಗ್ ನಡೆಸಿದರು.

Read Full Story

07:34 AM (IST) Sep 07

ಮೋದಿ ಮಹತ್ವದ ಸಭೆ! ಯಾವ ಸಚಿವರ ಸಾಧನೆ ಹೇಗಿದೆ? ರಿಪೋರ್ಟ್ ಕಾರ್ಡ್ ಕೇಳಲಿದ್ದಾರೆ ಪಿಎಂ!

ಕೇಂದ್ರ ಸರ್ಕಾರದ ಪ್ರಮುಖ ಯೋಜನೆಗಳ ಅನುಷ್ಠಾನ, ಸಚಿವರು ಹಾಗೂ ಸಚಿವಾಲಯಗಳ ಕಾರ್ಯಕ್ಷಮತೆಯನ್ನು ಮೌಲ್ಯಮಾಪನ ಮಾಡಲು ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಮಹತ್ವದ ಪರಿಶೀಲನಾ ಸಭೆ ನಡೆಸಲಿದ್ದಾರೆ.

ಈ ಸಭೆಗೆ ಸಂಪುಟ ಸಚಿವರಲ್ಲದೆ, ರಾಜ್ಯ ಸಚಿವರು ಹಾಗೂ ಸ್ವತಂತ್ರ ಉಸ್ತುವಾರಿ ಹೊಂದಿರುವ ರಾಜ್ಯ ಸಚಿವರಿಗೂ ಆಹ್ವಾನ ನೀಡಲಾಗಿದ್ದು, ಸರ್ಕಾರದ ವಿವಿಧ ಇಲಾಖೆಗಳ ಸಾಧನೆಯನ್ನು ವಿಸ್ತೃತವಾಗಿ ಚರ್ಚಿಸಲಾಗುವುದು ಎಂದು ಆಂಗ್ಲ ಸುದ್ದಿವಾಹಿನಿಯೊಂದು ವರದಿ ಮಾಡಿದೆ.

ಕಾರ್ಯಕ್ಷಮತೆ ಪರಿಶೀಲನೆ:

ಶಿಕ್ಷಣ, ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ, ಆರೋಗ್ಯ, ನಗರಾಭಿವೃದ್ಧಿ ಹಾಗೂ ಕೃಷಿ ಸಚಿವಾಲಯ ಸೇರಿದಂತೆ ಹಲವು ಪ್ರಮುಖ ಇಲಾಖೆಗಳ ಕಾರ್ಯಕ್ಷಮತೆ ಈ ಪರಿಶೀಲನಾ ಸಭೆಯಲ್ಲಿ ಮುಖ್ಯವಾಗಿ ಪ್ರಸ್ತಾಪವಾಗುವ ಸಾಧ್ಯತೆಯಿದೆ. ಸರ್ಕಾರದ ಯೋಜನೆಗಳ ಲಾಭವು ಯಾವುದೇ ಸೋರಿಕೆಯಿಲ್ಲದೆ, ಗರಿಷ್ಠ ದಕ್ಷತೆಯೊಂದಿಗೆ ಅರ್ಹ ಫಲಾನುಭವಿಗಳನ್ನು ತಲುಪಬೇಕು ಎಂಬುದನ್ನು ಕೇಂದ್ರ ಸರ್ಕಾರ ಪದೇ ಪದೇ ಪ್ರತಿಪಾದಿಸುತ್ತಾ ಬಂದಿದೆ. ಈ ಹಿನ್ನೆಲೆಯಲ್ಲಿ ಪಿಎಂ ಜನ್ ಧನ್ ಯೋಜನೆ, ಪಿಎಂ ಉಜ್ವಲಾ ಯೋಜನೆ, ಪಿಎಂ ಆವಾಸ್ ಯೋಜನೆ, ಆಯುಷ್ಮಾನ್ ಭಾರತ್, ಪಿಎಂ-ಕಿಸಾನ್, ಜಲ ಜೀವನ್ ಮಿಷನ್ ಹಾಗೂ ಸ್ವಚ್ಛ ಭಾರತ್‌ಗಳಂತಹ ಪ್ರಮುಖ ಕಲ್ಯಾಣ ಯೋಜನೆಗಳು ಸರ್ಕಾರದ ಆಡಳಿತ ನೀತಿಯ ಕೇಂದ್ರಬಿಂದುವಾಗಿ ಮುಂದುವರಿದಿವೆ.

Read Full Story

More Trending News