ರಾಯ್ಪುರ: ತಮಗೆ ಬಂದ ಸಂಕಷ್ಟಕ್ಕೆ ಭಗವಂತನನ್ನು ದೂಷಿಸುವವರೇ ಜಾಸ್ತಿ. ಅದೇ ರೀತಿ ಛತ್ತೀಸ್ ಗಢದಲ್ಲಿ ಎಚ್‌ಐವಿ ರೋಗಿಯೊಬ್ಬ, 'ದೇವರಿಂದಲೇ ನನಗೆ ಸೋಂಕು ಅಂಟಿದೆ' ಎಂದು ಸಿಟ್ಟಿಗೆದ್ದು, ದೇವಸ್ಥಾನಗಳಲ್ಲೇ ಕಳ್ಳತನ ಮಾಡಿದ ವಿಚಿತ್ರ ಘಟನೆ ನಡೆದಿದೆ. ಕಳೆದ 1 ದಶಕದಲ್ಲಿ ಛತ್ತೀಸ್‌ಗಡದ ದುರ್ಗ ಮತ್ತು ಕೆಲ ದೇಗಲ ಗಳಲ್ಲಿ ಸದ್ದಿಲ್ಲದೆ ಹುಂಡಿ ಕಳ್ಳತನ ನಡೆಯುತ್ತಿತ್ತು. ಪೊಲೀಸರು ಕಡೆಗೂ ವ್ಯಕ್ತಿಯೋರ್ವನನ್ನು ಇತ್ತೀಚೆಗೆ ಬಂಧಿಸಿದ್ದರು. ಆತ 10ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಭಾಗಿಯಾಗಿದ್ದು ಈ ವೇಳೆ ಬೆಳಕಿಗೆ ಬಂದಿದೆ ಹಾಗೂ ವಿಚಾರಣೆ ವೇಳೆ ಬಾಯ್ದಿಟ್ಟ ವಿಚಾರ ಪೊಲೀಸರನ್ನೇ ದಂಗಾಗಿಸಿದೆ. ಬಂಧಿತ ಕಳ್ಳ 2012ರಲ್ಲಿ ಕಳ್ಳತನ ಪ್ರಕರಣವೊಂದರಲ್ಲಿ ಜೈಲು ಸೇರಿದ್ದ. ಈ ಸಂದರ್ಭದಲ್ಲಿ ಆತನಿಗೆ ಎಚ್‌ಐವಿ ಸೋಂಕು ತಗುಲಿತ್ತು. ಇದಕ್ಕೆ ದೇವರೇ ಕಾರಣ ಎಂದು ಭಾವಿಸಿದ್ದ ಆತ, 'ಭಗವಂತನಿಗೆ ಆತನ ಸ್ಥಾನ ತೋರಿಸಲು ಕೃತ್ಯ ಎಸಗಿದ್ದೇನೆ' ಎಂದು ಪೊಲೀಸರ ಮುಂದೆ ಹೇಳಿದ್ದಾನೆ ಎಂದು ತಿಳಿದು ಬಂದಿದೆ.

09:43 PM (IST) Aug 31
SCO ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಭೇಟಿ ಏನು ಸೂಚಿಸುತ್ತದೆ? ಭಾರತ-ಚೀನಾ ಸಂಬಂಧ, ಗಡಿ ವಿವಾದ ಮತ್ತು ಜಾಗತಿಕ ರಾಜತಾಂತ್ರಿಕತೆಯ ಮೇಲೆ ಚರ್ಚೆ. ಈ ಭೇಟಿ ಪ್ರಾದೇಶಿಕ ಮೈತ್ರಿಗಳನ್ನು ಬದಲಾಯಿಸುತ್ತದೆಯೇ ಅಥವಾ ಕೇವಲ ಸಾಂಕೇತಿಕ ರಾಜತಾಂತ್ರಿಕತೆಯೇ?
09:36 PM (IST) Aug 31
ಮಕ್ಕಳನ್ನು ಬಿಟ್ಟು ಪ್ರಿಯಕರನೊಂದಿಗೆ ಹೋಗಲು ನಿರ್ಧರಿಸಿದ ತಾಯಿಯೊಬ್ಬಳ ವೈರಲ್ ವಿಡಿಯೋ ಎಲ್ಲರನ್ನೂ ಬೆಚ್ಚಿ ಬೀಳಿಸಿದೆ. ಅಮ್ಮ, ಅಮ್ಮಾ…, ಎಂದು ಮಕ್ಕಳು ಕಣ್ಣೀರಿಟ್ಟು ಗೋಗರೆಯುತ್ತಿದ್ದರೂ ಲೆಕ್ಕಿಸದೇ, ಮಕ್ಕಳನ್ನು ದೂಡಿ ಪ್ರಿಯಕರನೊಂದಿಗೆ ಹೋದ ತಾಯಿ ನಡೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಗ್ರಾಸವಾಗಿದೆ.
08:39 PM (IST) Aug 31
ಭಾರತ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಗಡಿ ಗ್ರಾಮ ತೀತ್ವಾಲ್ ನಲ್ಲಿ ಭಾನುವಾರ ಗಣಪತಿ ವಿಗ್ರಹ ಸಾರ್ವಜನಿಕ ಮೆರವಣಿಗೆ ವಿಜೃಂಭಣೆಯಿಂದ ಶಾಂತಿಯುತವಾಗಿ ಯಶಸ್ವಿಯಾಗಿ ನಡೆಯಿತು.
08:13 PM (IST) Aug 31
ಮನೆ ಕೆಲಸದವಳ ಜೊತೆ ಯಜಮಾನನ ಅಕ್ರಮ ಸಂಬಂಧವನ್ನು ಗಿಳಿಯೊಂದು ಬಯಲು ಮಾಡಿರುವ ಕುತೂಹಲದ ಘಟನೆ ನಡೆದಿದೆ. ಮನೆಯೊಡತಿಗೆ ಈ ವಿಷಯವನ್ನು ಗಿಳಿ ತಿಳಿಸಿದ್ದು ಹೇಗೆ?
07:06 PM (IST) Aug 31
ಪತ್ನಿಯ ಕಣ್ಣುತಪ್ಪಿಸಿ ಮತ್ತೊಬ್ಬಳ ಬಳಿ ಹೋಗುವ ಗಂಡಸಿಗೆ ಹೈಕೋರ್ಟ್ ಶಾಕ್ ನೀಡಿದೆ! ಈ ತೀರ್ಪಿನಿಂದ ಪುರುಷರು ಕಂಗಾಲಾಗಿದ್ದಾರೆ. ಅಷ್ಟಕ್ಕೂ ಕೋರ್ಟ್ ನೀಡಿರುವ ಈ ಮಹತ್ವದ ತೀರ್ಪಲ್ಲಿ ಏನಿದೆ?
06:10 PM (IST) Aug 31
ವನ್ಯಜೀವಿ ಅಭಯಾರಣ್ಯದಲ್ಲಿ ಸ್ಪ್ಯಾನಿಷ್ ಪ್ರವಾಸಿಗನೊಬ್ಬ ಆನೆಗೆ ಬಿಯರ್ ಕುಡಿಸಿರುವ ವಿಡಿಯೋ ವೈರಲ್ ಆಗಿದೆ. ಈ ಘಟನೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
04:57 PM (IST) Aug 31
ಖಾಸಗಿ ಸ್ಥಳದಲ್ಲಿ ವಾಹನವನ್ನು ಬಳಕೆ ಮಾಡುತ್ತಿದ್ದರೆ ಅಂಥವರಿಗೆ ತೆರಿಗೆ ವಿಧಿಸುವಂತಿಲ್ಲ ಎಂದು ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿದೆ. ಹಾಗಿದ್ದರೆ ಏನಿದು ತೀರ್ಪು? ಡಿಟೇಲ್ಸ್ ಇಲ್ಲಿದೆ...
04:56 PM (IST) Aug 31
ಜಮ್ಮು ಕಾಶ್ಮೀರದಲ್ಲಿ ಪ್ರವಾಹದಿಂದ ಕೊಚ್ಚಿ ಹೋದ ಸೇತುವೆಯನ್ನು ಭಾರತೀಯ ಸೇನೆ ಕೇವಲ 12 ಗಂಟೆಗಳಲ್ಲಿ ಪುನರ್ನಿರ್ಮಿಸಿದೆ. ಈ ಸಾಧನೆಯಿಂದ ಸಂಚಾರ ವ್ಯವಸ್ಥೆ ಸುಗಮಗೊಂಡಿದೆ ಹಾಗೂ ರಕ್ಷಣಾ ಕಾರ್ಯಾಚರಣೆಗಳಿಗೆ ಅನುಕೂಲವಾಗಿದೆ. ಸೇನೆಯ ಈ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.
03:44 PM (IST) Aug 31
42 ವರ್ಷಗಳ ಸೇವೆಯ ನಂತರ ಹೆಚ್‌ಎಎಲ್ ಉದ್ಯೋಗಿಯೊಬ್ಬರು ಕಂಪನಿಗೆ ಭಾವುಕ ನಮನ ಸಲ್ಲಿಸಿದ್ದಾರೆ. ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
02:30 PM (IST) Aug 31
ಬಾಲಿವುಡ್ ನಟಿ ಸೋಹಾ ಅಲಿಖಾನ್ ಅವರು ತಮ್ಮ ಪಾಡ್‌ಕಾಸ್ಟ್‌ನಲ್ಲಿ ಎಗ್ ಫ್ರೀಜಿಂಗ್ ಬಗ್ಗೆ ಮಾತನಾಡಿದ್ದು, ಈ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಸೃಷ್ಟಿಸಿದೆ.
02:28 PM (IST) Aug 31
ಪಾಕಿಸ್ತಾನ ಮೂಲದ ಮೂವರು ಮಿಯಾ ಸಹೋದರರಿಗೆ ಬಾಲಕಿಯ ಮೇಲಿನ ಅತ್ಯಾ*ಚಾರ ಪ್ರಕರಣದಲ್ಲಿ ಜೈಲು ಶಿಕ್ಷೆ ವಿಧಿಸಲಾಗಿದೆ. 7 ವರ್ಷದ ಬಾಲಕಿ ಮೇಲೆ ಅತ್ಯಾ*ಚಾರ ಎಸಗಿದ ಆರೋಪದ ಮೇಲೆ ಮೂವರನ್ನು ದೋಷಿಗಳೆಂದು ಘೋಷಿಸಲಾಗಿದೆ.
01:35 PM (IST) Aug 31
12:53 PM (IST) Aug 31
ಮದುವೆ ಮಾತುಕತೆಗೆಂದು ಯುವಕನನ್ನು ಮನೆಗೆ ಕರೆಸಿ ಬಳಿಕ ಆತನನ್ನು ಸರಿಯಾಗಿ ಥಳಿಸಿ ಕೊಲೆ ಮಾಡಿದಂತಹ ಆಘಾತಕಾರಿ ಘಟನೆ ಮಹಾರಾಷ್ಟ್ರದ ಪುಣೆಯ ಪಿಂಪ್ರಿ ಚಿಂಚವಾಡ್ ಪ್ರದೇಶದಲ್ಲಿ ನಡೆದಿದೆ.
12:17 PM (IST) Aug 31
Which Country Condoms Are Free: ಇಲ್ಲಿ ಯುವಕರಿಗೆ ಉಚಿತ ಕಾಂಡೋಮ್‌ಗಳನ್ನು ವಿತರಿಸುತ್ತಿದೆ. ಲೈಂಗಿಕವಾಗಿ ಹರಡುವ ರೋಗಗಳು ಮತ್ತು ಅನಗತ್ಯ ಗರ್ಭಧಾರಣೆಯನ್ನು ತಡೆಗಟ್ಟುವುದು ಇದರ ಉದ್ದೇಶವಾಗಿದೆ.
11:41 AM (IST) Aug 31
ಡೊನಾಲ್ಡ್ ಟ್ರಂಪ್ ಭಾರತದ ಮೇಲೆ ಹೇರಿರುವ ಶೇ.50ರಷ್ಟು ತೆರಿಗೆಯಿಂದಾಗಿ ಈಗ ಭಾರತದಲ್ಲಿರುವ ಅಮೆರಿಕನ್ ಕಂಪನಿಗಲಿಗೆ ಸಂಕಷ್ಟ ಎದುರಾಗಿದೆ. ಅಮೆರಿಕಾದ ಬಹುರಾಷ್ಟ್ರೀಯ ಕಂಪನಿಗಳಾದ ಪೆಪ್ಸಿ, ಕೋಕಾ ಕೋಲಾ, ಸಬ್ವೇ, ಕೆಎಫ್‌ಸಿ, ಮ್ಯಾಕ್‌ಡೋನಾಲ್ಡ್ ಈಗ ದೇಶದಲ್ಲಿ ಬಹಿಷ್ಕಾರದ ಬಿಸಿ ಎದುರಿಸುತ್ತಿವೆ.
11:22 AM (IST) Aug 31
10:46 AM (IST) Aug 31
10:31 AM (IST) Aug 31
ಮಧ್ಯಪ್ರದೇಶದಲ್ಲಿ ಶಿಕ್ಷಕನೊಬ್ಬ ಕುಡಿದು ರಸ್ತೆಯಲ್ಲಿ ಬಿದ್ದ ಘಟನೆ ನಡೆದಿದೆ. ವೈರಲ್ ವಿಡಿಯೋದಲ್ಲಿ ಶಿಕ್ಷಕನ ವರ್ತನೆ ಸೆರೆಯಾಗಿದ್ದು, ಪೋಷಕರ ಆಕ್ರೋಶಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಶಿಕ್ಷಕನನ್ನು ಅಮಾನತುಗೊಳಿಸಲಾಗಿದೆ.
08:40 AM (IST) Aug 31
ಅದಾನಿ ಗ್ರೂಪ್‌ನ 2025ರ ವಾರ್ಷಿಕ ವರದಿಯಲ್ಲಿ CEOಗಳ ಸಂಬಳದ ವಿವರ ಬಹಿರಂಗವಾಗಿದೆ. ಅದಾನಿ ಎಂಟರ್‌ಪ್ರೈಸಸ್‌ನ CEO ವಿನಯ್ ಪ್ರಕಾಶ್ ಪಡಯುತ್ತಿರುವ ಸಂಬಳ ಕೇಳಿ ಜನರು ಮೂಗಿನ ಮೇಲೆ ಬೆರಳಿಟ್ಟುಕೊಳ್ಳುತ್ತಿದ್ದಾರೆ.
08:07 AM (IST) Aug 31
ಮೀನಾಕ್ಷಿಪುರಂನಲ್ಲಿ ನಾಲ್ಕು ತಿಂಗಳ ಮಗು ಹಾಲು ಉಸಿರುಗಟ್ಟಿ ಸಾವನ್ನಪ್ಪಿದೆ. ಮೀನಾಕ್ಷಿಪುರಂ ಸರ್ಕಾರಿ ಆದಿವಾಸಿ ವಸತಿಗೃಹದಲ್ಲಿ ವಾಸಿಸುತ್ತಿದ್ದ ಪಾರ್ಥಿಪನ್-ಸಂಗೀತ ದಂಪತಿಯ ಮಗಳೇ ಮೃತಪಟ್ಟ ಮಗು.