ಮೀನಾಕ್ಷಿಪುರಂನಲ್ಲಿ ನಾಲ್ಕು ತಿಂಗಳ ಮಗು ಹಾಲು ಉಸಿರುಗಟ್ಟಿ ಸಾವನ್ನಪ್ಪಿದೆ. ಮೀನಾಕ್ಷಿಪುರಂ ಸರ್ಕಾರಿ ಆದಿವಾಸಿ ವಸತಿಗೃಹದಲ್ಲಿ ವಾಸಿಸುತ್ತಿದ್ದ ಪಾರ್ಥಿಪನ್-ಸಂಗೀತ ದಂಪತಿಯ ಮಗಳೇ ಮೃತಪಟ್ಟ ಮಗು.
ಪಾಲಕ್ಕಾಡ್: ಪಾಲಕ್ಕಾಡ್‌ನ ಮೀನಾಕ್ಷಿಪುರಂನಲ್ಲಿ (Meenakshipural, Palakkad) ಹಾಲು ಉಸಿರುಗಟ್ಟಿ ಶಿಶು (4 Month Old Baby) ಸಾವನ್ನಪ್ಪಿದೆ. ಪೌಷ್ಟಿಕಾಂಶದ ಕೊರತೆಯಿಂದ ಬಳಲುತ್ತಿದ್ದ ನಾಲ್ಕು ತಿಂಗಳ ಮಗು ಗಂಟಲಿನಲ್ಲಿ ಹಾಲು ಸಿಲುಕಿದ್ದರಿಂದ ಉಸಿರುಗಟ್ಟಿ ಸಾವನ್ನಪ್ಪಿದೆ ಎಂದು ವರದಿಯಯಾಗಿದೆ. ಮೀನಾಕ್ಷಿಪುರಂ ಸರ್ಕಾರಿ ಆದಿವಾಸಿ ವಸತಿಗೃಹದಲ್ಲಿ ವಾಸಿಸುತ್ತಿದ್ದ ಪಾರ್ಥಿಪನ್-ಸಂಗೀತ ದಂಪತಿಯ 4 ತಿಂಗಳ ಮಗಳು ಕನಿಷ್ಕಾ ಮೃತಪಟ್ಟಿದ್ದಾಳೆ.
ಎರಡು ವರ್ಷದ ಹಿಂದೆ ಇದೇ ರೀತಿಯಲ್ಲಿಯೇ ಮೊದಲ ಮಗು ಸಾವು
ತಾಯಿ ಹಾಲುಣಿಸುವಾಗ ಮಗು ಚಲನೆಯಿಲ್ಲದಿರುವುದನ್ನು ಕಂಡು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಮಗುವಿಗೆ ಪೌಷ್ಟಿಕಾಂಶದ ಕೊರತೆಯಿತ್ತು ಎಂದು ಪೋಷಕರು ತಿಳಿಸಿದ್ದಾರೆ. ಗರ್ಭಿಣಿಯರಿಗೆ ಪ್ರತಿ ತಿಂಗಳು ನೀಡುವ 2000 ರೂ. ಸಹಾಯಧನ ಸಿಕ್ಕಿಲ್ಲ ಎಂದು ತಾಯಿ ಸಂಗೀತ ಆರೋಪಿಸಿದ್ದಾರೆ. ಎರಡು ವರ್ಷಗಳ ಹಿಂದೆ ದಂಪತಿಯ ಮೊದಲ ಮಗಳು ಇದೇ ರೀತಿಯಲ್ಲಿ ಸಾವನ್ನಪ್ಪಿದ್ದಳು.
ಹಾವೇರಿ: ಸಾಂಬಾರ್ ಪಾತ್ರೆಗೆ ಬಿದ್ದ ಮಗು ಸಾವು!
ಮದುವೆ ಸಮಾರಂಭದಲ್ಲಿ ಕುದಿಯುವ ಸಾಂಬಾರು ಪಾತ್ರೆಯಲ್ಲಿ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ 2 ವರ್ಷದ ಬಾಲಕಿಯೊಬ್ಬಳು ಚಿಕಿತ್ಸೆ ಫಲಿಸದೆ ಮೃತಪಟ್ಟಿರುವ ಘಟನೆ ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಕುನ್ನೂರು ಗ್ರಾಮದಲ್ಲಿ ನಡೆದಿತ್ತು. ಹುಬ್ಬಳ್ಳಿ ತಾಲೂಕಿನ ಚನ್ನಾಪುರ ಗ್ರಾಮದ ಮಕ್ತುಮ್ ಸಾಬ್ ಸನದಿ ಅವರ ಪುತ್ರಿ ರುಕ್ಸಾನಾಬಾನು ಸನದಿ(2.3 ವರ್ಷ) ಮೃತ ಬಾಲಕಿ. ಜೂ.14ರಂದು ಶಿಗ್ಗಾಂವಿ ತಾಲೂಕಿನ ಕುನ್ನೂರು ಗ್ರಾಮದ ಶರೀಫ್‌ಸಾಬ್ ಯರಗುಪ್ಪಿ ಅವರ ಮನೆಯಲ್ಲಿ ಮದುವೆ ಸಮಾರಂಭಕ್ಕೆಂದು ಪೋಷಕರೊಂದಿಗೆ ಬಾಲಕಿ ಆಗಮಿಸಿದ್ದಳು.
ಇದನ್ನೂ ಓದಿ:ಕಿಟಕಿ ಪಕ್ಕದಲ್ಲಿ ಕೂರಿಸಿದ್ದ ಮಗು 12ನೇ ಮಹಡಿಯಿಂದ ಬಿದ್ದು ಸಾವು: ಮತ್ತೊಂದೆಡೆ ಅಪ್ಪನ ಕೈ ಜಾರಿ 21 ತಿಂಗಳ ಕಂದ ಸಾವು
ಆಟವಾಡುತ್ತಾ ಕಟ್ಟೆ ಮೇಲಿಂದ ಸಾಂಬಾರ್ ಪಾತ್ರೆಗೆ ಬಿದ್ದಿದ್ದಳು ರುಕ್ಸಾನಾ
ಮನೆಯ ಕಟ್ಟೆ ಮೇಲೆ ಆಟವಾಡುತ್ತಿದ್ದ ಬಾಲಕಿ ಅಲ್ಲೆ ಪಕ್ಕದಲ್ಲಿದ್ದ ದೊಡ್ಡ ಸಾಂಬಾರು ಪಾತ್ರೆಯೊಳಗೆ ಆಕಸ್ಮಿಕವಾಗಿ ಬಿದ್ದಿದ್ದಳು. ತಕ್ಷಣ ಬಾಲಕಿಯನ್ನು ಸ್ಥಳದಲ್ಲಿದ್ದವರು ಸಾಂಬಾರು ಪಾತ್ರೆಯಿಂದ ಮೇಲಕ್ಕೆ ಎತ್ತಿದ್ದರು. ಗಂಭೀರ ಸುಟ್ಟ ಗಾಯಗಳಾಗಿದ್ದ ಬಾಲಕಿಯನ್ನು ಹುಬ್ಬಳ್ಳಿಯ ಕಿಮ್ಸ್‌ಗೆ ದಾಖಲಿಸಲಾಗಿತ್ತು. ಆದರೆ ದುರಾದೃಷ್ಟವಶಾತ್ ಜೂನ್ 20ರಂದು ಚಿಕಿತ್ಸೆ ಫಲಿಸದೆ ಬಾಲಕಿ ಕೊನೆಯುಸಿರೆಳೆದಿದ್ದಳು.
- ಜೂ.14ರಂದು ಹಾವೇರಿ ಜಿಲ್ಲೆ ಶಿಗ್ಗಾಂವಿ ತಾಲೂಕಿನ ಕುನ್ನೂರು ಗ್ರಾಮದಲ್ಲಿ ಆಯೋಜನೆಯಾಗಿದ್ದ ಮದುವೆ
- ಹುಬ್ಬಳ್ಳಿ ತಾಲೂಕಿನ ಚನ್ನಾಪುರ ಗ್ರಾಮದ ಮಕ್ತುಮ್ ಸಾಬ್ ಸನದಿ ಪುತ್ರಿ, 2.3 ವರ್ಷದ ರುಕ್ಸಾನಾ ಭಾಗಿ
- ಮದುವೆ ಮನೆಯಲ್ಲಿ ಕಟ್ಟೆ ಮೇಲೆ ಆಟವಾಡುತ್ತಿದ್ದ ಬಾಲಕಿ. ಆಯತಪ್ಪಿ ದೊಡ್ಡ ಸಾಂಬಾರ್ ಪಾತ್ರೆಗೆ ಬಿದ್ದ ಮಗು
- ಕೂಡಲೇ ಬಿಸಿ ಪಾತ್ರೆಯಿಂದ ಮಗುವನ್ನು ಹೊರಕ್ಕೆ ತೆಗೆದ ಜನರು. ರುಕ್ಸಾನಾಗೆ ಗಂಭೀರ ಸ್ವರೂಪದ ಗಾಯ
- ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ದಾಖಲು. 6 ದಿನ ಕಾಲ ಆಸ್ಪತ್ರೆಯಲ್ಲಿ ನರಳಾಡಿದ ಬಾಲಕಿ ಕೊನೆಯುಸಿರು.
