ಪತ್ನಿಯ ಕಣ್ಣುತಪ್ಪಿಸಿ ಮತ್ತೊಬ್ಬಳ ಬಳಿ ಹೋಗುವ ಗಂಡಸಿಗೆ ಹೈಕೋರ್ಟ್ ಶಾಕ್ ನೀಡಿದೆ! ಈ ತೀರ್ಪಿನಿಂದ ಪುರುಷರು ಕಂಗಾಲಾಗಿದ್ದಾರೆ. ಅಷ್ಟಕ್ಕೂ ಕೋರ್ಟ್ ನೀಡಿರುವ ಈ ಮಹತ್ವದ ತೀರ್ಪಲ್ಲಿ ಏನಿದೆ?
ಅಕ್ರಮ ಸಂಬಂಧ (Extra Marital Affair) ಎನ್ನುವುದು ಇತ್ತೀಚಿನ ದಿನಗಳಲ್ಲಿ ಮಾಮೂಲಿ ಆಗಿರುವ ಸಂದರ್ಭದಲ್ಲಿ ದೆಹಲಿಯ ಹೈಕೋರ್ಟ್ ಮಹತ್ವದ ತೀರ್ಪೊಂದನ್ನು ನೀಡಿದೆ. ಆದರೆ ಈ ತೀರ್ಪಿನ ವಿರುದ್ಧ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಪರ-ವಿರೋಧದ ನಿಲುವು ವ್ಯಕ್ತವಾಗಿದೆ. ಅಷ್ಟಕ್ಕೂ ಹೈಕೋರ್ಟ್ ಹೇಳಿದ್ದೇನೆಂದರೆ, ತನ್ನ ಪತಿಗೆ ಅಕ್ರಮ ಸಂಬಂಧವಿದೆ ಎಂದು ಪತ್ನಿ ಅನುಮಾನಿಸಿದರೆ, ಆತನ ಕರೆ ದಾಖಲೆಗಳು ಮತ್ತು ಸ್ಥಳದ ವಿವರಗಳ ಆಧಾರದ ಮೇಲೆ ಈ ತೀರ್ಪು ನೀಡಲಾಗುವುದು. ಇವುಗಳನ್ನು ಪಡೆಯಲು ಆಕೆ ಅರ್ಹಳು. ಇದರ ಆಧಾರದ ಮೇಲೆ ಆಕೆ ತನ್ನ ಪತಿಗೆ ಅಕ್ರಮ ಸಂಬಂಧವಿದೆ ಎನ್ನುವುದನ್ನು ಸಾಬೀತು ಮಾಡಬಹುದು ಎನ್ನಲಾಗಿದೆ.
ವ್ಯಭಿಚಾರದ (Illegal relationship) ಆರೋಪಗಳನ್ನು ದೃಢೀಕರಿಸಲು ಪತಿ ಮತ್ತು ಆತನ ಪ್ರೇಯಸಿ ಎನ್ನಲಾದವಳ ಸ್ಥಳ ವಿವರಗಳನ್ನು ಸಂರಕ್ಷಿಸುವುದು, ಕರೆ ದತ್ತಾಂಶ ದಾಖಲೆಗಳನ್ನು (CDR) ಬಹಿರಂಗಪಡಿಸುವುದು, ಇವು ತೀರ್ಪು ನೀಡುವ ಪ್ರಕ್ರಿಯೆಯಲ್ಲಿ ಸಹಾಯ ಮಾಡುವ ವಸ್ತುನಿಷ್ಠ ದಾಖಲೆಗಳಾಗಿವೆ ಎಂದು ಕೋರ್ಟ್ ಹೇಳಿದೆ.
ಏನಿದು ಕೇಸ್?
ದೆಹಲಿಯ ದಂಪತಿಯೊಬ್ಬರು ಅಕ್ಟೋಬರ್ 2002 ರಲ್ಲಿ ವಿವಾಹವಾದರು ಮತ್ತು ಇಬ್ಬರು ಮಕ್ಕಳನ್ನು ಹೊಂದಿದ್ದಾರೆ. ಆದರೆ ಪತ್ನಿ ವ್ಯಭಿಚಾರ ಮತ್ತು ಕ್ರೌರ್ಯದ ಆಧಾರದ ಮೇಲೆ 2023 ರಲ್ಲಿ ವಿಚ್ಛೇದನವನ್ನು ಕೋರಿದರು. ತನ್ನ ಪತಿ ಮತ್ತು ಅವರ ಪ್ರೇಯಸಿ ಅಕ್ರಮ ಸಂಬಂಧವನ್ನು ಉಳಿಸಿಕೊಂಡಿದ್ದಾರೆ ಮತ್ತು ಅನೇಕ ಸಂದರ್ಭಗಳಲ್ಲಿ ಒಟ್ಟಿಗೆ ಪ್ರಯಾಣಿಸಿದ್ದಾರೆ ಎಂದು ಅವರು ಹೇಳಿಕೊಂಡಿದ್ದರು. ಇದಕ್ಕೆ ಬೇಕಾದರೆ ದಾಖಲಾತಿ ನೀಡಬಹುದು. ಆದರೆ ಪತಿಯ ಕರೆಗಳ ರೆಕಾರ್ಡ್ಗಳನ್ನು ಮತ್ತು ಪತಿ- ಆತನ ಪ್ರೇಯಸಿ (Lover) ಇರುವ ಸ್ಥಳ ಪತ್ತೆ ದಾಖಲೆ ಪಡೆಯಲು ಅನುಮತಿ ನೀಡಬೇಕು ಎಂದು ಕೋರಿಕೊಂಡಿದ್ದರು.
ಪ್ರೇಯಸಿಯ ಸ್ಥಳ ವಿವರಗಳನ್ನು ಮತ್ತು ಪತಿಯ CDR ಅನ್ನು ಸಂರಕ್ಷಿಸಲು ಮತ್ತು ಬಹಿರಂಗಪಡಿಸಲು ಕೋರಿ ಪತ್ನಿ ಸಲ್ಲಿಸಿದ್ದ ಅರ್ಜಿಯನ್ನು ಕುಟುಂಬ ನ್ಯಾಯಾಲಯವು ಅನುಮತಿಸಿತ್ತು. ಆರೋಪವನ್ನು ಸಾಬೀತುಪಡಿಸಲು ಇದು ಕಡ್ಡಾಯವಾಗಿದೆ ಎಂದು ಪತ್ನಿ ಪ್ರತಿಪಾದಿಸಿದ್ದರಿಂದ ಈ ಆದೇಶ ನೀಡಲಾಗಿತ್ತು. ಏಪ್ರಿಲ್ 29 ರಂದು, ಕುಟುಂಬ ನ್ಯಾಯಾಲಯವು ಪತ್ನಿಯ ಅರ್ಜಿಯನ್ನು ಪುರಸ್ಕರಿಸಿ, ಜನವರಿ 2020 ರಿಂದ ಇಲ್ಲಿಯವರೆಗಿನ ವಿವರಗಳನ್ನು ಸಂರಕ್ಷಿಸುವಂತೆ SHO ಮತ್ತು ದೂರಸಂಪರ್ಕ ಪೂರೈಕೆದಾರರಿಗೆ ನಿರ್ದೇಶನ ನೀಡಿತ್ತು.
ಇದನ್ನೂ ಓದಿ: ಸ್ವಾತಂತ್ರ್ಯ ಮತ್ತು ಮದುವೆ ಒಟ್ಟಿಗೇ ಇರೋದು ಅಸಾಧ್ಯ: ಆಯ್ಕೆ ನಿಮ್ಮದು- ಸುಪ್ರೀಂಕೋರ್ಟ್ ಕಿವಿಮಾತು!
ಮಾನ್ಯವಾಗದ ಮೇಲ್ಮನವಿ
ಕೌಟುಂಬಿಕ ನ್ಯಾಯಾಲಯದ ಏಪ್ರಿಲ್ 2025 ರ ಆದೇಶವನ್ನು ಪ್ರಶ್ನಿಸಿ ಪತಿ ಮತ್ತು ಅವರ ಆರೋಪಿ ಪ್ರೇಯಸಿ ಮೇಲ್ಮನವಿ ಸಲ್ಲಿಸಿದ್ದರು. ಪತ್ನಿಗೆ ನೀಡಲಾದ ಅನುಮತಿ ಕಾನೂನುಬಾಹಿರ, ಗೌಪ್ಯತೆಯ ಮೂಲಭೂತ ಹಕ್ಕನ್ನು ಉಲ್ಲಂಘಿಸುತ್ತದೆ ಎಂದು ಪ್ರತಿಪಾದಿಸಿದ್ದರು. ಮಹಿಳೆ ಕಿರುಕುಳ ನೀಡುವ ಮತ್ತು ಆಕೆಯ ಖ್ಯಾತಿಗೆ ಹಾನಿ ಮಾಡುವ ದುರುದ್ದೇಶದಿಂದ ಮಾತ್ರ ವಿವರಗಳನ್ನು ಕೋರಿದ್ದಾರೆ ಎಂದು ಅವರು ವಾದಿಸಿದ್ದರು. ಈ ಮೇಲ್ಮನವಿ ವಿಚಾರಣೆಯನ್ನು ಆಲಿಸಿದ ನ್ಯಾಯಮೂರ್ತಿಗಳಾದ ಅನಿಲ್ ಕ್ಷೇತ್ರರ್ಪಾಲ್ ಮತ್ತು ಹರೀಶ್ ವೈದ್ಯನಾಥನ್ ಶಂಕರ್ ಈ ತೀರ್ಪು ನೀಡಿದ್ದಾರೆ.
ಇದನ್ನೂ ಓದಿ: ಖಾಸಗಿ ಸ್ಥಳದಲ್ಲಿ ವಾಹನ ಬಳಸ್ತಿದ್ರೆ ತೆರಿಗೆ ವಿಧಿಸುವಂತಿಲ್ಲ! ಸುಪ್ರೀಂಕೋರ್ಟ್ನಿಂದ ಮಹತ್ವದ ತೀರ್ಪು
