MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • News
  • World News
  • ಉಚಿತವಾಗಿ ಕಾಂಡೋಮ್ ಪೂರೈಕೆ ಮಾಡುವ ದೇಶ : ಸರ್ಕಾರದಿಂದಲೇ ಹಣ ಮೀಸಲು

ಉಚಿತವಾಗಿ ಕಾಂಡೋಮ್ ಪೂರೈಕೆ ಮಾಡುವ ದೇಶ : ಸರ್ಕಾರದಿಂದಲೇ ಹಣ ಮೀಸಲು

Which Country Condoms Are Free: ಇಲ್ಲಿ ಯುವಕರಿಗೆ ಉಚಿತ ಕಾಂಡೋಮ್‌ಗಳನ್ನು ವಿತರಿಸುತ್ತಿದೆ. ಲೈಂಗಿಕವಾಗಿ ಹರಡುವ ರೋಗಗಳು ಮತ್ತು ಅನಗತ್ಯ ಗರ್ಭಧಾರಣೆಯನ್ನು ತಡೆಗಟ್ಟುವುದು ಇದರ ಉದ್ದೇಶವಾಗಿದೆ.

2 Min read
Mahmad Rafik
Published : Aug 31 2025, 12:17 PM IST
Share this Photo Gallery
  • FB
  • TW
  • Linkdin
  • Whatsapp
17
ಲೈಂಗಿಕ ಶಿಕ್ಷಣ
Image Credit : social media

ಲೈಂಗಿಕ ಶಿಕ್ಷಣ

ಇಂದು ಪ್ರೌಢಶಾಲಾ ಹಂತದಲ್ಲಿ ಮಕ್ಕಳಿಗೆ ಲೈಂಗಿಕ ಶಿಕ್ಷಣ ನೀಡಲಾಗುತ್ತಿದೆ. ಈ ಸಂಬಂಧ ಪ್ರತಿಯೊಂದು ದೇಶ ತನ್ನದೇ ಆದ ನೀತಿಗಳನ್ನು ಅಳವಡಿಸಿಕೊಂಡಿವೆ. ಲೈಂಗಿಕ ಶಿಕ್ಷಣ ಮತ್ತು ಸುರಕ್ಷಿತ ಸಂಪರ್ಕದ ಜಾಗೃತಿಗಾಗಿ ವಿಶ್ವದ ಒಂದು ದೇಶ ವಿಶಿಷ್ಟ ಹೆಜ್ಜೆ ಇಟ್ಟಿದೆ. ಈ ದೇಶದ ಸರ್ಕಾರ ಯುವಕರು ಮತ್ತು ಹದಿಹರೆಯದವರಿಗಾಗಿ ಒಂದು ದೊಡ್ಡ ಉಪಕ್ರಮವನ್ನು ತೆಗೆದುಕೊಂಡಿದೆ. ಈ ಕ್ರಮ ಏನು ಅಂದ್ರೆ ಸಂಪೂರ್ಣ ಉಚಿತವಾಗಿ ಕಾಂಡೋಮ್ ವಿತರಣೆ ಮಾಡೋದಾಗಿದೆ.

27
ಉಚಿತವಾಗಿ ಕಾಂಡೋಮ್ ವಿತರಣೆ
Image Credit : Getty

ಉಚಿತವಾಗಿ ಕಾಂಡೋಮ್ ವಿತರಣೆ

ಈ ಯೋಜನೆಯ ವಿಶೇಷವೆಂದರೆ 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಯುವಕ ಮತ್ತು ಯುವತಿಯರು ಈ ಸೌಲಭ್ಯದ ಲಾಭವನ್ನು ಪಡೆಯಬಹುದು. ಹಾಗಾದ್ರೆ ಉಚಿತವಾಗಿ ಕಾಂಡೋಮ್ ವಿತರಣೆ ಮಾಡುವ ದೇಶ ಯಾವುದು? ಈ ಕುರಿತು ಅಲ್ಲಿನ ಸರ್ಕಾರ ಏನು ಹೇಳುತ್ತೆ ಎಂಬುದರ ಮಾಹಿತಿ ಈ ಲೇಖನವನ್ನು ಒಳಗೊಂಡಿದೆ.

Related Articles

Related image1
OMG, ಇದುವೇ ಭಾರತದ ಕಾಂಡೋಮ್ ರಾಜಧಾನಿ; ತಿಂಗಳಿಗೆ 36 ದೇಶಗಳಿಗೆ 1 ಕೋಟಿ ರಫ್ತು!
Related image2
ನೋ ಕ್ಯಾಪ್ ನೋ ಎಂಟ್ರಿ, ಹಿಮೇಶ್ ರೆಶಮಿಯಾ ಕಾನ್ಸರ್ಟ್ ಬೆನ್ನಲ್ಲೇ ಕಾಂಡೋಮ್ ಆ್ಯಡ್ ವೈರಲ್
37
ಫ್ರಾನ್ಸ್
Image Credit : Getty

ಫ್ರಾನ್ಸ್

ಫ್ರಾನ್ಸ್‌ನಲ್ಲಿ ಉಚಿತವಾಗಿ ಕಾಂಡೋಮ್ ವಿತರಣೆ ಮಾಡುವ ಯೋಜನೆಯನ್ನು ಹೊಂದಿದೆ. ಇದಕ್ಕಾಗಿಯೇ ಫ್ರೆಂಚ್ ಸರ್ಕಾರ ಹಣವನ್ನು ಮೀಸಲಿಡುತ್ತದೆ. ಫ್ರೆಂಚ್ ಸರ್ಕಾರವು ಜನರಿಗೆ ಕಾಂಡೋಮ್‌ಗಳನ್ನು ಉಚಿತವಾಗಿ ವಿತರಿಸುತ್ತದೆ. ಲೈಂಗಿಕವಾಗಿ ಹರಡುವ ರೋಗಗಳು ಮತ್ತು ಅನಗತ್ಯ ಗರ್ಭಧಾರಣೆಯಿಂದ ಜನರನ್ನು ರಕ್ಷಿಸುವುದು ಈ ನಿರ್ಧಾರದ ಉದ್ದೇಶ ಎಂದು ಫ್ರೆಂಚ್ ಸರ್ಕಾರ ಹೇಳುತ್ತದೆ.

47
ಕಾಂಡೋಮ್ ಖರೀದಿಗೆ ಹಿಂದೇಟು ಯಾಕೆ?
Image Credit : our own

ಕಾಂಡೋಮ್ ಖರೀದಿಗೆ ಹಿಂದೇಟು ಯಾಕೆ?

ಹಲವು ಸಂದರ್ಭಗಳಲ್ಲಿ ಯುವ ಸಮುದಾಯ ಮಾಹಿತಿ ಕೊರತೆ ಮತ್ತು ತಪ್ಪು ತಿಳುವಳಿಕೆ ಅಥವಾ ನಾಚಿಕೆಯಿಂದಾಗಿ ಕಾಂಡೋಮ್ ಖರೀದಿಸಲು ಹಿಂದೇಟು ಹಾಕುತ್ತಾರೆ. ಈ ಮೂಲಕ ಅಸುರಕ್ಷಿತ ಲೈಂಗಿಕ ಸಂಪರ್ಕದಿಂದಾಗಿ ಅಪಾಯಕ್ಕೆ ಸಿಲುಕುತ್ತಾರೆ. ಈ ಕಾರಣದಿಂದ ಫ್ರಾನ್ಸ್ ಸರ್ಕಾರ ಕಾಂಡೋಮ್‌ ಖರೀದಿಸಲು ಯಾವುದೇ ಆರ್ಥಿಕ ಅಥವಾ ಸಾಮಾಜಿಕ ಅಡೆತಡೆಗಳನ್ನು ಎದುರಿಸಬಾರದು ಎಂದು ಬಯಸುತ್ತದೆ. ಈ ಹಿನ್ನೆಲೆ ಉಚಿತವಾಗಿ ಕಾಂಡೋಮ್ ವಿತರಣೆ ಮಾಡುತ್ತದೆ.

ಇದನ್ನೂ ಓದಿ: ಕಾಂಡೋಮ್ ಇಲ್ಲದೇ ಸಂಪರ್ಕ ನಡೆಸಿದ್ರೂ ಆಗಲ್ಲ ಪ್ರೆಗ್ನೆಂಟ್; ಪುರುಷರಿಗಾಗಿ ಬರ್ತಿದೆ ಹೊಸ ಔಷಧಿ

57
ಫ್ರೀಯಾಗಿ ಸಿಗುತ್ತೆ
Image Credit : Getty

ಫ್ರೀಯಾಗಿ ಸಿಗುತ್ತೆ

ವರದಿಗಳ ಪ್ರಕಾರ, ಫ್ರಾನ್ಸ್‌ನ ಮೆಡಿಕಲ್ ಸ್ಟೋರ್, ವಿಶ್ವವಿದ್ಯಾಲಯ ಆರೋಗ್ಯ ಕೇಂದ್ರ ಮತ್ತು ಚಿಕಿತ್ಸಾಲಯಗಳಲ್ಲಿ ಕಾಂಡೋಮ್‌ಗಳು ಸುಲಭವಾಗಿ ಲಭ್ಯವಿರುತ್ತದೆ. ಯಾವುದೇ ಹಿಂಜರಿಕೆಯಿಲ್ಲದೇ ಇರಿಸಲಾಗಿರುವ ಕಾಂಡೋಮ್ ಪಡೆದುಕೊಳ್ಳಬಹುದಾಗಿದೆ. 16 ಅಥವಾ 18 ವರ್ಷಕ್ಕಿಂತ ಮೇಲ್ಪಟ್ಟವರು ಉಚಿತ ಕಾಂಡೋಮ್ ಪಡೆದುಕೊಳ್ಳಬಹುದು ಎಂದು ಈ ದೇಶದ ನಿಯಮ ಹೇಳುತ್ತದೆ. ಹದಿಹರೆಯದವರು ಸುರಕ್ಷಿತವಾಗಿರಲು ಬಯಸಿದರೆಗಿ ಹಣವನ್ನು ಖರ್ಚು ಮಾಡುವ ಅಗತ್ಯವಿರಲ್ಲ.

ಇದನ್ನೂ ಓದಿ: ಭಾರತದಲ್ಲಿ ತಿಂಗಳಿಗೆ ಕಾಂಡೋಮ್ 10 ಕೋಟಿ ತಯಾರಿ! ಎಷ್ಟು ಆದಾಯ ಬರುತ್ತೆ?

67
ಲೈಂಗಿಕ ಆರೋಗ್ಯದ ಕಾಳಜಿ
Image Credit : Getty

ಲೈಂಗಿಕ ಆರೋಗ್ಯದ ಕಾಳಜಿ

ಸುಮಾರು 3-4 ವರ್ಷಗಳ ಹಿಂದೆ, ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಉಚಿತವಾಗಿ ಕಾಂಡೋಮ್ ವಿತರಣೆ ಮಾಡಲಾಗುವುದು ಎಂದು ಅಧಿಕೃತವಾಗಿ ಘೋಷಣೆ ಮಾಡಿದ್ದರು. ಯುವಕರು ಲೈಂಗಿಕ ಆರೋಗ್ಯದ ಬಗ್ಗೆ ಹೆಚ್ಚು ಜಾಗೃತರಾಗಿರಬೇಕು ಮತ್ತು ಅವರಿಗೆ ಸುರಕ್ಷಿತ ವಿಧಾನಗಳನ್ನು ಉಚಿತವಾಗಿ ಒದಗಿಸುವುದು ಸರ್ಕಾರದ ಜವಾಬ್ದಾರಿಯಾಗಿದೆ ಎಂದು ಎಮ್ಯಾನುಯೆಲ್ ಮ್ಯಾಕ್ರನ್ ಹೇಳಿದ್ದರು.

ಇದನ್ನೂ ಓದಿ: ಒಂದು ವರ್ಷದಲ್ಲಿ ಮಾರಾಟವಾಗುವ ಮಹಿಳಾ ಕಾಂಡೋಮ್ ಸಂಖ್ಯೆ ಎಷ್ಟು? 

77
ಅನಗತ್ಯ ಗರ್ಭಧಾರಣೆ ನಿಯಂತ್ರಣ
Image Credit : our own

ಅನಗತ್ಯ ಗರ್ಭಧಾರಣೆ ನಿಯಂತ್ರಣ

ಏಡ್ಸ್ ಮತ್ತು ಇತರ ಲೈಂಗಿಕವಾಗಿ ಹರಡುವ ರೋಗಗಳ ಅಪಾಯವನ್ನು ಕಡಿಮೆ ಮಾಡಲು ಕಾಂಡೋಮ್‌ಗಳ ಲಭ್ಯತೆಯನ್ನು ಸುಲಭಗೊಳಿಸುವುದು ಅಗತ್ಯವಾಗಿದೆ ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಹೇಳಿದ್ದರು. ಅನಗತ್ಯ ಗರ್ಭಧಾರಣೆ ಮತ್ತು ಲೈಂಗಿಕವಾಗಿ ಹರಡುವ ಸೋಂಕುಗಳಾದ ಎಸ್‌ಟಿಐಗಳನ್ನು ತಡೆಗಟ್ಟಲು ಮತ್ತು ನಿಯಂತ್ರಣಕ್ಕಾಗಿ ಕಾಂಡೋಮ್‌ಗಳನ್ನು ಬಳಕೆ ಮಾಡಲಾಗುತ್ತದೆ.

ಇದನ್ನೂ ಓದಿ:  RCB Vs PBKS ಪಂದ್ಯದ ಬಗ್ಗೆ ಕಾಂಡೋಮ್ ಕಂಪನಿಯಿಂದ ಪೋಸ್ಟ್; ನಕ್ಕು ನಕ್ಕು ಸುಸ್ತಾದ ಫ್ಯಾನ್ಸ್

About the Author

MR
Mahmad Rafik
ಮಹ್ಮದ್ ರಫಿಕ್ವಿಜಯಪುರದ ಬೇನಾಳ RC ಗ್ರಾಮದವನು. ಪಬ್ಲಿಕ್ ಟಿವಿ ಡಿಜಿಟಲ್, ನ್ಯೂಸ್ 18 ಕನ್ನಡ, ಇದೀಗ ಏಷ್ಯಾನೆಟ್ ಕನ್ನಡ ಸೇರಿ ಡಿಜಿಟಲ್ ಮಾಧ್ಯಮದಲ್ಲಿ 8 ವರ್ಷಗಳ ಅನುಭವ. ಎಂ.ಕಾಂ. ಓದಿ ಕೆಲಸ ಆರಂಭಿಸಿದ್ದು ಖಾಸಗಿ ಬ್ಯಾಂಕ್‌ವೊಂದರಲ್ಲಿ. ಆಕರ್ಷಿಸಿದ್ದು ಪತ್ರಿಕೋದ್ಯಮ. ಯಾವ ಟಾಪಿಕ್ ಕೊಟ್ಟರೂ ಬರೆಯಬಲ್ಲೆ. ಓಟಿಟಿ ಮೂವಿ ನೋಡೋದು ಇಷ್ಟ.
ನಿರೋಧ
ಅಂತರರಾಷ್ಟ್ರೀಯ ಸುದ್ದಿ
ಸುದ್ದಿ

Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved