ನವದೆಹಲಿ: ದೆಹಲಿ, ಮುಂಬೈ, ಬೆಂಗಳೂರು ಮತ್ತಿತರ ಹೆಚ್ಚು ವಾಹನದಟ್ಟಣೆ ಇರುವ ನಗರಗಳಲ್ಲಿ ಬೇಡಿಕೆ ಆಧಾರಿತ ಪಾರ್ಕಿಂಗ್ ಮ್ಯಾನೇಜ್‌ಮೆಂಟ್‌ನಂಥ ಕ್ರಮಗಳನ್ನು ಜಾರಿಗೊಳಿಸುವ ಮೂಲಕ ಟ್ರಾಫಿಕ್ ಸಮಸ್ಯೆ ನಿವಾರಿಸಿ, ವಾಹನ ಸಂಚಾರದ ವೇಗವನ್ನು ಹೆಚ್ಚಿಸುವ ಕುರಿತು ಆರ್ಥಿಕ ಸಮೀಕ್ಷೆಯಲ್ಲಿ ಪ್ರಸ್ತಾಪಿಸಲಾಗಿದೆ. ವಿದೇಶಗಳಲ್ಲಿ ಹೆಚ್ಚು ವಾಹನದಟ್ಟಣೆ ಅವಧಿಯಲ್ಲಿ ಹೆಚ್ಚಿನ ಟೋಲ್, ಹೆಚ್ಚು ಟ್ರಾಫಿಕ್ ಇರುವ ಪ್ರದೇಶಗಳಲ್ಲಿ ವಾಹನಗಳಿಗೆ ಪ್ರತ್ಯೇಕ ಶುಲ್ಕ ವಿಧಿಸುತ್ತಿರುವ ಕ್ರಮಗಳ ಕುರಿತೂ ಸರ್ವೆ ಪ್ರಸ್ತಾಪ ಮಾಡಿದೆ. ಇ-ಬಸ್‌ಗಳ ಬಳಕೆಗೆ ಉತ್ತೇಜನ ನೀಡಲೂ ಸಲಹೆ ನೀಡಿದೆ

09:25 PM (IST) Jan 31
Ishan Kishan Hundred: ನ್ಯೂಜಿಲೆಂಡ್ ವಿರುದ್ಧದ 5ನೇ ಟಿ20 ಅಂತಾರಾಷ್ಟ್ರೀಯ ಪಂದ್ಯದಲ್ಲಿ ಇಶಾನ್ ಕಿಶನ್ ಬ್ಯಾಟ್‌ನಿಂದ ಅಬ್ಬರಿಸಿದ್ದು, ಮೈದಾನದಲ್ಲಿ ಬೌಂಡರಿ, ಸಿಕ್ಸರ್‌ಗಳ ಮಳೆ ಸುರಿಸಿದರು. ಅವರು ತಮ್ಮ ವೃತ್ತಿಜೀವನದ ಮೊದಲ T20i ಶತಕವನ್ನು ಬಾರಿಸಿದ್ದಾರೆ.
08:33 PM (IST) Jan 31
ಮುಂಬೈನ ಕಂಡಿವಿಲಿಯಲ್ಲಿ, ಸೆಕ್ಯುರಿಟಿ ಗಾರ್ಡ್ ಒಬ್ಬರು ಕುಂಟುತ್ತಿದ್ದ ಅಸಹಾಯಕ ಬೆಕ್ಕೊಂದನ್ನು 7ನೇ ಮಹಡಿಯಿಂದ ಕೆಳಗೆ ಎಸೆದು ಕೊಂದಿದ್ದಾರೆ. ಈ ಅಮಾನವೀಯ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಪ್ರಾಣಿಪ್ರಿಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
07:07 PM (IST) Jan 31
ದಕ್ಷಿಣ ಭಾರತದ ಅತ್ಯಂತ ಪ್ರಖ್ಯಾತ ನಟಿಯಾಗಿ ಗುರುತಿಸಿಕೊಳ್ಳುತ್ತಿರುವ ಐಶ್ವರ್ಯ ರಾಜೇಶ್, ತಮ್ಮ ವೃತ್ತಿಜೀವನದಲ್ಲಿ ತಮಗಾದ ಅತ್ಯಂತ ಕಹಿ ಘಟನೆಯೊಂದನ್ನು ಎಲ್ಲರೆದರು ಬಹಿರಂಗ ಪಡಿಸಿದ್ದಾರೆ. ಯಾರು ಈ ನಟಿ? ಏನದು ಘಟನೆ? ಎನ್ನುವುದನ್ನು ಎಳೆಎಳೆಯಾಗಿ ಬಿಚ್ಚಿಡುತ್ತೇವೆ ನೋಡಿ.
06:43 PM (IST) Jan 31
ಭಾರತೀಯ ರೈಲ್ವೇಯಲ್ಲಿ ಉದ್ಯೋಗ ಅವಕಾಶ, ಜನವರಿ 31 ರಿಂದ ಅರ್ಜಿ ಅಹ್ವಾನ ಆರಂಭಗೊಂಡಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಮಾರ್ಚ್ 2, 2026. ಅರ್ಜಿ ಶುಲ್ಕ ಎಷ್ಟು, ಸಲ್ಲಿಕೆ ಹೇಗೆ? ಇಲ್ಲಿದೆ.
06:26 PM (IST) Jan 31
ನಿಸ್ಸಾನ್ ಕಂಪನಿ ಸೋಲಾರ್ ಪ್ಯಾನೆಲ್ ಹೊಂದಿರುವ ಎಲೆಕ್ಟ್ರಿಕ್ ಕಾರಿನ 'ಆರಿಯಾ' ಪರಿಕಲ್ಪನೆಯನ್ನು ಅನಾವರಣಗೊಳಿಸಿದೆ. ಈ ಕಾರು ಸೂರ್ಯನ ಬೆಳಕನ್ನು ಬಳಸಿಕೊಂಡು ತನ್ನ ಬ್ಯಾಟರಿಯನ್ನು ಚಾರ್ಜ್ ಮಾಡಲಿದೆ, ಇದು ಭವಿಷ್ಯದಲ್ಲಿ ಎಲೆಕ್ಟ್ರಿಕ್ ಕಾರು ಮಾರುಕಟ್ಟೆಯಲ್ಲಿ ಒಂದು ದೊಡ್ಡ ಬದಲಾವಣೆಯನ್ನು ತರಬಹುದು.
06:24 PM (IST) Jan 31
ಬಿಹಾರದ ಗ್ರಾಮವೊಂದರಲ್ಲಿ, ಸಂಬಂಧಿಕರು ಮತ್ತು ಗ್ರಾಮಸ್ಥರು ಸಹಾಯ ಮಾಡಲು ನಿರಾಕರಿಸಿದಾಗ, ಹೆಣ್ಣುಮಕ್ಕಳೇ ತಮ್ಮ ತಾಯಿಯ ಶವವನ್ನು ಹೊತ್ತು ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ. ಬಡತನದ ಕಾರಣಕ್ಕೆ ಕುಟುಂಬವನ್ನು ಸಾಮಾಜಿಕವಾಗಿ ಬಹಿಷ್ಕರಿಸಿದ ಈ ಅಮಾನವೀಯ ಘಟನೆ ವ್ಯಾಪಕ ಚರ್ಚೆಗೆ ಕಾರಣವಾಗಿದೆ.
05:48 PM (IST) Jan 31
ಸಂಖ್ಯಾಶಾಸ್ತ್ರದ ಪ್ರಕಾರ, ವ್ಯಕ್ತಿಯ ಜನ್ಮ ದಿನಾಂಕವು ಅವರ ಜೀವನದ ಮೇಲೆ ಮಾತ್ರವಲ್ಲ, ಅವರೊಂದಿಗೆ ಸಂಬಂಧ ಹೊಂದಿರುವ ಜನರ ಜೀವನದ ಮೇಲೂ ಪರಿಣಾಮ ಬೀರುತ್ತದೆ. ವಿಶೇಷವಾಗಿ ಮದುವೆಯ ನಂತರ, ಕೆಲವು ಹುಡುಗಿಯರು ತಮ್ಮ ಗಂಡನ ಜೀವನವನ್ನೇ ಬದಲಾಯಿಸುತ್ತಾರೆ.
04:55 PM (IST) Jan 31
04:34 PM (IST) Jan 31
ನಟಿಯರು ಧರಿಸೋ ಬಟ್ಟೆಗಳ ಬಗ್ಗೆ ಎಷ್ಟು ದೊಡ್ಡ ವಿವಾದ ಆಯ್ತು ಅಂತ ನೋಡಿದ್ದೀವಿ. ಈ ಬಗ್ಗೆ ನಟಿ ಐಶ್ವರ್ಯಾ ರಾಜೇಶ್ ಇತ್ತೀಚೆಗೆ ಇಂಟ್ರೆಸ್ಟಿಂಗ್ ಕಾಮೆಂಟ್ ಮಾಡಿದ್ದಾರೆ. ಅವರು ಏನು ಹೇಳಿದ್ದಾರೆ ಅಂತ ಈ ಲೇಖನದಲ್ಲಿ ನೋಡೋಣ.
03:58 PM (IST) Jan 31
03:58 PM (IST) Jan 31
25 ವರ್ಷದೊಳಗಿನವರಿಗೆ ಉದ್ಯಮಿ ನಿಖಿಲ್ ಕಾಮತ್ ಮಹತ್ವದ ಸಲಹೆ, ಇದು ಹೂಡಿಕೆ, ದೊಡ್ಡ ಹಣದ ಬಗ್ಗೆ ಅಲ್ಲ. ಆದರೆ ಈ ಮಹತ್ವದ ಸಲಹೆ ಪಾಲಿಸಿದರೆ ಉದ್ಯಮದಲ್ಲಿ ಯಶಸ್ಸು ಮಾತ್ರವಲ್ಲ ಹಣ ಹೊಳೆ ಹರಿಯಲಿದೆ ಎಂದಿದ್ದಾರೆ.
02:57 PM (IST) Jan 31
ವಾಸ್ತು ಟಿಪ್ಸ್: ನಿಮ್ಮ ಪರ್ಸ್‌ನಲ್ಲಿ ಯಾವಾಗಲೂ ಹಣ ಇರಬೇಕೆಂದರೆ, ಆದಾಯ ಹೆಚ್ಚಾಗಬೇಕೆಂದರೆ ಮತ್ತು ಅನಗತ್ಯ ಖರ್ಚುಗಳು ಕಡಿಮೆಯಾಗಬೇಕೆಂದರೆ ಕೆಲವು ವಾಸ್ತು ಸಲಹೆಗಳನ್ನು ಪಾಲಿಸಬೇಕು. ಮುಖ್ಯವಾಗಿ ಐದು ವಸ್ತುಗಳನ್ನು ಇಟ್ಟುಕೊಳ್ಳಬೇಕು. ನೀವೂ ಒಮ್ಮೆ ಟ್ರೈ ಮಾಡಿ ನೋಡಿ
02:19 PM (IST) Jan 31
Hamid Ansari Claims Ghazni & Lodi Were Indian, Not Foreigners ಮಾಜಿ ಉಪರಾಷ್ಟ್ರಪತಿ ಹಮೀದ್ ಅನ್ಸಾರಿ ಅವರು ಮೊಹಮದ್ ಘಜ್ನಿ ಮತ್ತು ಲೋಧಿ ವಂಶಸ್ಥರನ್ನು 'ಭಾರತೀಯರು' ಎಂದು ಕರೆದಿರುವ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ.
02:10 PM (IST) Jan 31
ಮಾಡುವಾಗ 22 ವರ್ಷದ ಯುವಕನೋರ್ವ ಪ್ರಾಣ ಕಳೆದುಕೊಂಡಿದ್ದಾನೆ. ನಿರ್ಮಾಣ ಹಂತದ ಫ್ಲೈ ಓವರ್ ಬಳಿ ಕಾಂಕ್ರೀಟ್ ಸ್ಲ್ಯಾಬ್ ಮೇಲೆ ನಿಂತು ರೀಲ್ಸ್ ಮಾಡುವಾಗ, ಸ್ಲ್ಯಾಬ್ ಆತನ ಮೇಲೆಯೇ ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದು, ಈ ದುರಂತ ಕ್ಯಾಮರಾದಲ್ಲಿ ಸೆರೆಯಾಗಿದೆ.
01:40 PM (IST) Jan 31
ಸಮಂತಾ ತನ್ನ ಕ್ರೇಜ್ ಅನ್ನು ರಿಸ್ಕ್‌ನಲ್ಲಿಟ್ಟು ಒಂದು ಸಿನಿಮಾ ಮಾಡಿದ್ದರು. ಫಾರ್ಮ್‌ಹೌಸ್‌ಗಾಗಿಯೇ ಆ ಸಿನಿಮಾ ಒಪ್ಪಿಕೊಂಡ್ರಾ ಎಂಬ ಸುದ್ದಿ ಇದೆ. ಆ ವಿವರಗಳನ್ನು ಈ ಲೇಖನದಲ್ಲಿ ತಿಳಿಯಿರಿ.
12:57 PM (IST) Jan 31
Gold & Silver Prices Crash: Silver Drops by ₹1.06 Lakh, Gold by ₹20,000 ಜನವರಿ 30 ರಂದು ಚಿನ್ನ ಮತ್ತು ಬೆಳ್ಳಿ ಮಾರುಕಟ್ಟೆಗಳು ಭಾರೀ ಕುಸಿತವನ್ನು ಕಂಡವು. ಪ್ರಾಫಿಟ್-ಬುಕಿಂಗ್ ಮತ್ತು ಭೌತಿಕ ಬೇಡಿಕೆಯ ಕುಸಿತವು ಈ ಇಳಿಕೆಗೆ ಪ್ರಮುಖ ಕಾರಣಗಳಾಗಿವೆ.
12:51 PM (IST) Jan 31
ವಾಷಿಂಗ್ಟನ್: ಜೆಫ್ರಿ ಎಪ್‌ಸ್ಟೀನ್ ಜಾಗತಿಕ ಮಟ್ಟದಲ್ಲಿ ಸಂಚಲನ ಮಾಡಿಸಿತ್ತು. ದಶಕಗಳ ಕಾಲ ನಡೆದ ವ್ಯವಸ್ಥಿತ ಲೈಂ*ಗಿಕ ಶೋಷಣೆಯ ಕರಾಳ ಮುಖವನ್ನು ಜಗತ್ತಿನ ಮುಂದೆ ತೆರೆದಿಟ್ಟಿದೆ. ಇದೀಗ ಈ ಫೈಲ್ ನ್ಯಾಯಾಂಗ ಇಲಾಖೆ ರಿಲೀಸ್ ಮಾಡಿದೆ.
11:54 AM (IST) Jan 31
ಒಂದು ಕಾಲದಲ್ಲಿ ಬಡವರ ಬಂಗಾರವಾಗಿದ್ದ ಬೆಳ್ಳಿಯ ಬೆಲೆ ಈಗ ಗಗನಕ್ಕೇರುತ್ತಿದೆ. ಜಾಗತಿಕ ಯುದ್ಧದ ಭೀತಿ, ಹೂಡಿಕೆದಾರರ ಬದಲಾದ ಮನಸ್ಥಿತಿ ಮತ್ತು ಪೂರೈಕೆ ಸರಪಳಿಯ ಅಡಚಣೆಗಳು ಬೆಳ್ಳಿಯನ್ನು ಬಂಗಾರಕ್ಕಿಂತಲೂ ಅಮೂಲ್ಯವಾಗಿಸುತ್ತಿವೆ. ಈ ಬಗ್ಗೆ ಡಿಟೇಲ್ ಸ್ಟೋರಿ ಇಲ್ಲಿದೆ ನೋಡಿ..
11:23 AM (IST) Jan 31
ಈ ವರ್ಷದ ಕೊನೆಯಲ್ಲಿ ಪಶ್ಚಿಮ ಬಂಗಾಳ, ತಮಿಳುನಾಡು, ಕೇರಳ, ಪುದುಚೇರಿ ಮತ್ತು ಅಸ್ಸಾಂ ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆಗಳು ನಡೆಯಲಿದ್ದು, ಈ ರಾಜ್ಯಗಳ ವಲಯವಾರು ಹಂಚಿಕೆ ಮತ್ತು ಅಭಿವೃದ್ಧಿ ಕೇಂದ್ರಿತ ಘೋಷಣೆಗಳ ಬಗ್ಗೆ ಹೆಚ್ಚಿನ ಗಮನ ಹರಿಸಲಾಗುವುದು ಎಂದು ನಿರೀಕ್ಷಿಸಲಾಗಿದೆ.
10:39 AM (IST) Jan 31
ಸೂಪರ್ ಸ್ಟಾರ್ ರಜನಿಕಾಂತ್ ನಟನೆಯ 'ನರಸಿಂಹ' ಸಿನಿಮಾಗೆ ಸಂಬಂಧಿಸಿದ ರಹಸ್ಯವೊಂದನ್ನು ಅವರ ಮಗಳು ಸೌಂದರ್ಯ ಬಹಿರಂಗಪಡಿಸಿದ್ದಾರೆ. ಅಷ್ಟೇ ಅಲ್ಲ, 'ನರಸಿಂಹ 2' ಚಿತ್ರದ ಅಪ್‌ಡೇಟ್ ಕೂಡ ನೀಡಿದ್ದಾರೆ. ಇದು ರಜನಿಕಾಂತ್ ಅಭಿಮಾನಿಗಳ ಮುಖದಲ್ಲಿ ಮಂದಹಾಸ ಮೂಡುವಂತೆ ಮಾಡಿದೆ.
10:02 AM (IST) Jan 31
ಚಿರಂಜೀವಿ, ತಾವು ರೊಮ್ಯಾನ್ಸ್ ಮಾಡಿದ ಕಾಜಲ್ ಅಗರ್ವಾಲ್ ಮತ್ತು ತಮನ್ನಾ ಭಾಟಿಯಾ ಬಗ್ಗೆ ಅಚ್ಚರಿಯ ಹೇಳಿಕೆ ನೀಡಿದ್ದಾರೆ. ತನಗೆ ಕಾಜಲ್, ತಮನ್ನಾ ಯಾರೆಂದೇ ಗೊತ್ತಿರಲಿಲ್ಲ ಎಂದಿದ್ದಾರೆ. ಇದರ ಹಿಂದಿನ ಅಸಲಿ ಕಥೆ ಏನು?
09:37 AM (IST) Jan 31
ಅಂಚೆ ಇಲಾಖೆಯ ಪೋಸ್ಟ್ ಆಫೀಸ್ ಫ್ರಾಂಚೈಸಿ 2.0 ಯೋಜನೆಯೊಂದಿಗೆ ತಿಂಗಳಿಗೆ 20,000 ರೂ.ಗಿಂತ ಹೆಚ್ಚು ಗಳಿಸುವ ಅವಕಾಶವಿದೆ. ಕೇವಲ 5 ರಿಂದ 10 ಸಾವಿರ ರೂ. ಭದ್ರತಾ ಠೇವಣಿಯೊಂದಿಗೆ ನಿಮ್ಮ ಸ್ವಂತ ಅಂಚೆ ಕಚೇರಿಯನ್ನು ಆರಂಭಿಸಬಹುದು. ಇದು ಹೇಗೆ ಸಾಧ್ಯ? ವಿದ್ಯಾರ್ಹತೆ ಏನು? ಇಲ್ಲಿದೆ ಕಂಪ್ಲೀಟ್ ಡೀಟೈಲ್ಸ್
09:14 AM (IST) Jan 31
ಆಸ್ಟ್ರೇಲಿಯನ್ ಓಪನ್ ಗ್ರ್ಯಾನ್‌ಸ್ಲಾಂ ಫೈನಲ್‌ನಲ್ಲಿ ನೋವಾಕ್ ಜೋಕೋವಿಚ್ ಮತ್ತು ಕಾರ್ಲೊಸ್ ಆಲ್ಕರಜ್ ಮುಖಾಮುಖಿಯಾಗಲಿದ್ದಾರೆ. ಸೆಮಿಫೈನಲ್‌ನಲ್ಲಿ ಯಾನಿಕ್ ಸಿನ್ನರ್ ವಿರುದ್ಧ ಜೋಕೋ ಮತ್ತು ಅಲೆಕ್ಸಾಂಡರ್ ಜ್ವೆರೆವ್ ವಿರುದ್ಧ ಆಲ್ಕರಜ್ ರೋಚಕ ಜಯ ಸಾಧಿಸಿ ಪ್ರಶಸ್ತಿ ಸುತ್ತಿಗೆ ಲಗ್ಗೆ ಇಟ್ಟಿದ್ದಾರೆ.
08:41 AM (IST) Jan 31
260 ಜನರನ್ನು ಬಲಿ ಪಡೆದ ಏರ್ ಇಂಡಿಯಾ ವಿಮಾನ ದುರಂತದ ತನಿಖೆಯಲ್ಲಿ ಯಾವುದೇ ತಾಂತ್ರಿಕ ದೋಷ ಅಥವಾ ದುಷ್ಕೃತ್ಯದ ಸಂಚು ಕಂಡುಬಂದಿಲ್ಲ ಎಂದು ವಿಮಾನ ಅಪಘಾತ ತನಿಖಾ ಬ್ಯೂರೋ (AAIB) ವರದಿ ಮಾಡಿದೆ.