ಕೋಲ್ಕತಾ:‘ ಪಶ್ಚಿಮ ಬಂಗಾಳದಲ್ಲಿ ಬುಧವಾರ ನಡೆಯಲಿರುವ 2ನೇ ಹಂತದ ಚುನಾವಣೆಯಲ್ಲಿ ನಕಲಿ ಮತದಾನಕ್ಕಾಗಿ ಟಿಎಂಸಿ 700 ಕ್ಕೂ ಹೆಚ್ಚು ಕೃತಕ ಬೆರಳುಗಳನ್ನು ಖರೀದಿಸಿದೆ’ ಎಂದು ಭವಾನಿಪುರದ ಬಿಜೆಪಿ ಅಭ್ಯರ್ಥಿ ಸುವೇಂದು ಅಧಿಕಾರಿ ಗಂಭೀರ ಆರೋಪ ಮಾಡಿದ್ದಾರೆ.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ತೃಣಮೂಲ ಕಾಂಗ್ರೆಸ್‌ನ ಕೌನ್ಸಿಲರ್ ಒಬ್ಬರು ನಕಲಿ ಮತದಾನಕ್ಕಾಗಿ 700ಕ್ಕೂ ಹೆಚ್ಚು ಕೃತಕ ಬೆರಳುಗಳನ್ನು ಖರೀದಿಸಿದ್ದಾರೆ. ಇದು ಚುನಾವಣೆ ತಿರುಗಿಸುವ ಪ್ರಯತ್ನ. ನಾವು ಅಂತಹ ಪದ್ಧತಿಗಳನ್ನು ಅನುಮತಿಸುವುದಿಲ್ಲ’ ಎಂದಿದ್ದಾರೆ. ಇದಕ್ಕೆ ಟಿಎಂಸಿ ಪ್ರತಿಕ್ರಿಯಿಸಿದ್ದು, ‘ ಇದೊಂದು ಆಧಾರರಹಿತ ಆರೋಪ. ಯಾವುದೇ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಂತಹದ್ದು ಸಾಧ್ಯವಿಲ್ಲ’ ಎಂದಿದೆ.
10:36 PM (IST) Apr 29
10:32 PM (IST) Apr 29
09:59 PM (IST) Apr 29
ಪುದುಚೇರಿ ವಿಧಾನಸಭಾ ಚುನಾವಣೆಯಲ್ಲಿ ದಾಖಲೆಯ ಮತದಾನವಾಗಿದ್ದು, ಎನ್‌ಡಿಎ ಮತ್ತು ಕಾಂಗ್ರೆಸ್-ಡಿಎಂಕೆ ಮೈತ್ರಿಕೂಟದ ನಡುವೆ ತೀವ್ರ ಪೈಪೋಟಿ ಇದೆ. ನಟ ವಿಜಯ್ ಅವರ ಟಿವಿಕೆ ಪಕ್ಷದ ಪ್ರವೇಶದಿಂದ ತ್ರಿಕೋನ ಸ್ಪರ್ಧೆ ಏರ್ಪಟ್ಟಿದ್ದು, ವಿವಿಧ ಮತಗಟ್ಟೆ ಸಮೀಕ್ಷೆಗಳು ಎನ್‌ಡಿಎಗೆ ಮುನ್ನಡೆ ನೀಡಿವೆ.
09:18 PM (IST) Apr 29
Exit Polls ತಮಿಳುನಾಡಿನಲ್ಲಿ ಬಿರುಗಾಳಿ, ನಟ ವಿಜಯ್ ಪಕ್ಷಕ್ಕೆ 120 ಸ್ಥಾನ ಜೊತೆಗೆ ಸಿಎಂ ಎಂದ ಸಮೀಕ್ಷೆ, ಎಂಕೆ ಸ್ಟಾಲಿನ್ ಅಧಿಕಾರ ಅಂತ್ಯಗೊಳಿಸಿ ನಟ ವಿಜಯ್ ಮುಖ್ಯಮಂತ್ರಿ ಸಾಧ್ಯತೆಗಳನ್ನು ಸಮೀಕ್ಷೆ ಹೇಳುತ್ತಿದೆ.
08:59 PM (IST) Apr 29
08:44 PM (IST) Apr 29
07:51 PM (IST) Apr 29
ಕೇರಳದ ಚುನಾವಣೋತ್ತರ ಸಮೀಕ್ಷೆಗಳು ಪ್ರಕಟಗೊಂಡಿದ್ದು, ಬಹುತೇಕ ಎಲ್ಲಾ ಸಮೀಕ್ಷೆಗಳ ಪ್ರಕಾರ, ಕಾಂಗ್ರೆಸ್ ನೇತೃತ್ವದ ಯುಡಿಎಫ್ ಭರ್ಜರಿ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ. ಆಡಳಿತಾರೂಢ ಪಿಣರಾಯಿ ವಿಜಯನ್ ನೇತೃತ್ವದ ಎಲ್‌ಡಿಎಫ್ ಅಧಿಕಾರ ಕಳೆದುಕೊಳ್ಳಲಿದೆ ಎನ್ನಲಾಗಿದೆ.
07:25 PM (IST) Apr 29
Exit poll ತಮಿಳುನಾಡಿನಲ್ಲಿ ಸ್ಟಾಲಿನ್ ಪಕ್ಷಕ್ಕೆ ಅಧಿಕಾರ, ವಿಜಯ್ ಅಲೆಯಲ್ಲಿ ಸೊರಗಿದ ಬಿಜೆಪಿ, ಎನ್‌ಡಿಎ ಲೆಕ್ಕಾಚಾರ ಉಲ್ಟಾ ಹೊಡೆದಿದೆ. ಡಿಎಂಗೆ ಅತೀ ದೊಡ್ಡ ಪಕ್ಷವಾಗಿ ಅಧಿಕಾರ ಹಿಡಿಯಲಿದೆ ಎಂದು ಸಮೀಕ್ಷೆ ಹೇಳಿದೆ.
06:56 PM (IST) Apr 29
ಕಾಸರಗೋಡಿನ ಮನೆಯೊಂದರ ಟೇಬಲ್ ಡ್ರಾಯರ್‌ನಲ್ಲಿ ಇಟ್ಟಿದ್ದ ಚಿನ್ನದ ಉಂಗುರ, ಅಲ್ಲಿಗೆ ಬಂದಿದ್ದ ಕೇರೆ ಹಾವಿನ ಮೈಗೆ ಸಿಕ್ಕಿಹಾಕಿಕೊಂಡಿತ್ತು. ಮಕ್ಕಳು ಡ್ರಾಯರ್ ತೆರೆದಾಗ ಹಾವು ಕಂಡರೂ, ಅದೃಷ್ಟವಶಾತ್ ಏನೂ ಅನಾಹುತ ಆಗಿಲ್ಲ.
06:54 PM (IST) Apr 29
ಅಸ್ಸಾಮ್ ವಿಧಾನಸಭಾ ಚುನಾವಣೆಯ ಎಕ್ಸಿಟ್ ಪೋಲ್ ಫಲಿತಾಂಶಗಳು ಬಿಜೆಪಿ ಮೈತ್ರಿಕೂಟಕ್ಕೆ ಭರ್ಜರಿ ಬಹುಮತವನ್ನು ಮುನ್ಸೂಚಿಸಿವೆ. ಆಕ್ಸಿಸ್ ಮೈ ಇಂಡಿಯಾ ಮತ್ತು ಮ್ಯಾಟ್ರಿಜ್‌ನಂತಹ ಪ್ರಮುಖ ಸಮೀಕ್ಷೆಗಳು, ಹಿಮಂತ ಬಿಸ್ವ ಶರ್ಮಾ ನೇತೃತ್ವದ ಸರ್ಕಾರವು ಸತತ ಮೂರನೇ ಬಾರಿಗೆ ಅಧಿಕಾರಕ್ಕೆ ಬರುವ ಸಾಧ್ಯತೆ ಇದೆ.
06:27 PM (IST) Apr 29
ಭೂಮಿಯ ಮೇಲಿನ ಅತಿ ವೇಗದ ಪ್ರಾಣಿಯಾದ ಚೀತಾ, ತನ್ನ ಬೇಟೆಯ ನಂತರ ದೀರ್ಘಕಾಲ ವಿಶ್ರಾಂತಿ ಪಡೆಯುತ್ತದೆ. ಈ ಚೇತರಿಕೆಯ ಸಮಯವು ಅದರ ಮುಂದಿನ ಯಶಸ್ವಿ ಬೇಟೆಗೆ ಅತ್ಯಗತ್ಯವಾಗಿದೆ. ಇದೇ ರೀತಿ, ಮನುಷ್ಯರು ಕೂಡ ತಮ್ಮ ಉತ್ಪಾದಕತೆಯನ್ನು ಹೆಚ್ಚಿಸಲು ಸೋಲಿನ ನಂತರ ಚೇತರಿಸಿಕೊಳ್ಳುವುದು ಎಷ್ಟು ಮುಖ್ಯ ಗೊತ್ತಾ?
06:23 PM (IST) Apr 29
06:06 PM (IST) Apr 29
ಗ್ವಾಲಿಯರ್‌ನಲ್ಲಿ ಮಹಿಳೆಯೊಬ್ಬರು ವಿಚ್ಛೇದನ ಪಡೆಯಲು, ಪತಿಯ ತಂಗಿಯನ್ನೇ ಆತನ ಎರಡನೇ ಹೆಂಡತಿ ಎಂದು ಬಿಂಬಿಸಿ ನ್ಯಾಯಾಲಯಕ್ಕೆ ದಾರಿ ತಪ್ಪಿಸಿದ್ದಾರೆ. ಕೌಟುಂಬಿಕ ಫೋಟೋವನ್ನು ಸುಳ್ಳು ಸಾಕ್ಷ್ಯವಾಗಿ ಬಳಸಿ ಏಕಪಕ್ಷೀಯ ವಿಚ್ಛೇದನ ಪಡೆದಿದ್ದಾರೆ.
06:03 PM (IST) Apr 29
ಯುವಕನೊಂದಿಗೆ ಲಿವ್-ಇನ್ ಸಂಬಂಧದಲ್ಲಿದ್ದು, ಮಗುವಾದ ಬಳಿಕ ಆತ ಮದುವೆಗೆ ನಿರಾಕರಿಸಿದಾಗ ಯುವತಿ ಅ*ತ್ಯಾಚಾರ ಪ್ರಕರಣ ದಾಖಲಿಸಿದ್ದಳು. ಈ ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಒಪ್ಪಿಗೆಯ ಸಹಬಾಳ್ವೆಯಿಂದ ಹೊರನಡೆಯುವುದು ಕ್ರಿಮಿನಲ್ ಅಪರಾಧವಲ್ಲ ಎಂದು ಸ್ಪಷ್ಟಪಡಿಸಿದೆ. ಆದರೆ, ಅಂತಹ ಸಂಬಂಧದಿಂದ ಜನಿಸಿದ ಮಗುವಿಗೆ ಜೀವನಾಂಶ ಪಡೆಯುವ ಹಕ್ಕಿದೆ ಎಂದು ನ್ಯಾಯಾಲಯ ತಿಳಿಸಿದೆ.
05:59 PM (IST) Apr 29
ಸಾಮಾನ್ಯವಾಗಿ ಹೊಸ ನಟಿಯರು ಚಿತ್ರರಂಗಕ್ಕೆ ಕಾಲಿಡುವಾಗ ಬಣ್ಣ ಬಣ್ಣದ ಪೋರ್ಟ್‌ಫೋಲಿಯೋ, ಗ್ಲಾಮರಸ್ ಫೋಟೋಶೂಟ್ ಮಾಡಿಸಿಕೊಂಡು ನಿರ್ದೇಶಕರ ಮುಂದೆ ನಿಲ್ಲುತ್ತಾರೆ. ಆದರೆ ಅನುಷ್ಕಾ ಕಥೆಯೇ ಬೇರೆ! ಚಿತ್ರರಂಗಕ್ಕೆ ಬರುವ ಮೊದಲು ಅವರು ಮುಂಬೈನಲ್ಲಿ ಇದ್ದರು. ಮುಂದೇನಾಯ್ತು ನೋಡಿ..
05:19 PM (IST) Apr 29
ಪೆಟ್ರೋಲ್ ಡೀಸೆಲ್ ಕಾರಿಗೆ ಭವಿಷ್ಯವಿಲ್ಲ, ಶೀಘ್ರದಲ್ಲೇ ಯುಗಾಂತ್ಯ, ಸಂಚಲನ ಸೃಷ್ಟಿಸಿದ ನಿತಿನ್ ಗಡ್ಕರಿ, ಗಡ್ಕರಿ ಹೇಳಿದಂತೆ ಇಂಧನ ಕಾರುಗಳು ಮ್ಯೂಸಿಯಂ ಸೇರಿಕೊಳ್ಳುತ್ತಾ? ಈ ಕಾರುಗಳನ್ನು ಗುಜುರಿ ಹಾಕಬೇಕಾ?
05:09 PM (IST) Apr 29
ತೆಲಂಗಾಣದ ಕಾಮರೆಡ್ಡಿಯಲ್ಲಿ, ಕೋಳಿ ಸಾರು ಮಾಡಿಲ್ಲವೆಂಬ ಕ್ಷುಲ್ಲಕ ಕಾರಣಕ್ಕೆ ನಡೆದ ಜಗಳ ವಿಕೋಪಕ್ಕೆ ತಿರುಗಿ, ಪತ್ನಿಯು ತನ್ನ ಪತಿಯನ್ನು ಕೊಡಲಿಯಿಂದ ಕೊಚ್ಚಿ ಕೊಂದಿದ್ದಾಳೆ. ಆರು ವರ್ಷಗಳ ದಾಂಪತ್ಯದ ನಡುವೆ ಆಗಾಗ್ಗೆ ನಡೆಯುತ್ತಿದ್ದ ಕೌಟುಂಬಿಕ ಕಲಹವು ಈ ಭೀಕರ ದುರಂತಕ್ಕೆ ಕಾರಣವಾಗಿದೆ.ರೆ.
04:22 PM (IST) Apr 29
ವೈಯಕ್ತಿಕ ಪ್ರತಿಷ್ಠೆಗಾಗಿ 90 ವರ್ಷದ ವೃದ್ಧೆಯೊಬ್ಬರು ಹೂಡಿದ್ದ 20 ಕೋಟಿ ರೂ. ಮಾನನಷ್ಟ ಮೊಕದ್ದಮೆಯಿಂದ ಬಾಂಬೆ ಹೈಕೋರ್ಟ್ ಅಸಮಾಧಾನಗೊಂಡಿದೆ. ನ್ಯಾಯಾಂಗ ವ್ಯವಸ್ಥೆಯ ಸಮಯವನ್ನು ವ್ಯರ್ಥ ಮಾಡುವ ಇಂತಹ ಪ್ರಕರಣಗಳಿಂದಾಗಿ, ನ್ಯಾಯಾಲಯವು ವಿಚಾರಣೆಯನ್ನು 20 ವರ್ಷಗಳ ಕಾಲ ಮುಂದೂಡಿದೆ.
03:43 PM (IST) Apr 29
ಸಂಪತ್ತು ನಿರ್ವಹಣಾ ಸಂಸ್ಥೆ 'ಡೆಸರ್ವ್' ಸಹ-ಸಂಸ್ಥಾಪಕ ಸಂದೀಪ್ ಜೆತ್ವಾನಿ, ಮೆಟ್ರೋ ನಗರಗಳಲ್ಲಿ ಆರಾಮದಾಯಕ ನಿವೃತ್ತಿ ಜೀವನಕ್ಕೆ 60ನೇ ವಯಸ್ಸಿನಲ್ಲಿ 40 ಕೋಟಿ ರೂ. ನಿಧಿ ಬೇಕು ಎಂದು ಹೇಳಿದ್ದಾರೆ.
03:36 PM (IST) Apr 29
ಬೀಚ್‌ನಲ್ಲಿ ಶವವಾಗಿ ಪತ್ತೆಯಾದ 22ರ ಫಾತಿಮಾ ಕೇಸ್‌ಗೆ ಟ್ವಿಸ್ಟ್, ರೈಲಿಗೆ ತಲೆಕೊಡಲು ಹೋದ ಪತಿ ಅರೆಸ್ಟ್, ಆರಂಭದಲ್ಲಿ ಬದುಕು ಅಂತ್ಯಗೊಳಿಸಿದ ಅಥವಾ ಬೀಚ್‌ನಲ್ಲಿ ದುರಂತ ಅಂತ್ಯ ಎಂದೇ ಹೇಳಲಾಗಿತ್ತು. ಆದರೆ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ.
03:35 PM (IST) Apr 29
ಜೀವನಶೈಲಿ ಎಂಬುದು ಕೇವಲ ಬಟ್ಟೆ ಅಥವಾ ಮನೆಗೆ ಸೀಮಿತವಲ್ಲ, ನಾವು ತೆಗೆದುಕೊಳ್ಳುವ ಕಠಿಣ ನಿರ್ಧಾರಗಳ ಮೇಲೆ ಅದು ನಿಂತಿರುತ್ತದೆ. ಈ ಪತಿಯ ಮುಂದಿರುವ ಪ್ರಶ್ನೆ ದೊಡ್ಡದಿದೆ: ಮಕ್ಕಳಿಗಾಗಿ ತನ್ನ ಸುಖವನ್ನು ಬಲಿ ಕೊಡಬೇಕೇ? ಅಥವಾ ಹೊಸ ಪ್ರೀತಿಯ ಬೆನ್ನೇರಿ ತನ್ನ ದಾರಿ ತಾನು ನೋಡಬೇಕೇ? ಈ ಕಥೆ ನಮಗೆ ಕಲಿಸುವ ಪಾಠವೇನು?
02:02 PM (IST) Apr 29
01:32 PM (IST) Apr 29
ಹನಿಮೂನ್ ವೇಳೆ ಗಂಡನ ಕೊಲೆ ಮಾಡಿ ಬಳಿಕ ನಾಟಕವಾಡಿ ದೇಶದೆಲ್ಲೆಡೆ ಸುದ್ದಿಯಾಗಿದ್ದ ಮೇಘಾಲಯ ಹನಿಮೂನ್ ಪ್ರಕರಣದ ಆರೋಪಿ ಸೋನಮ್ ರಘುವಂಶಿ ಘಟನೆ ನಡೆದು 10 ತಿಂಗಳ ಬಳಿಕ ಜೈಲಿನಿಂದ ಹೊರ ಬಂದಿದ್ದಾಳೆ.
01:30 PM (IST) Apr 29
ಪಂದ್ಯದ ಮಧ್ಯೆ ಡ್ರೆಸ್ಸಿಂಗ್ ರೂಮ್‌ನಲ್ಲೇ ಇ-ಸಿಗರೇಟ್ ಸೇದಿದ ರಾಜಸ್ಥಾನ ರಾಯಲ್ಸ್ ಕ್ಯಾಪ್ಟನ್ ರಿಯಾನ್ ಪರಾಗ್ ವಿರುದ್ಧ ಯಾವ ಕ್ರಮ ಕೈಗೊಳ್ಳಬಹುದು? ಐಪಿಎಲ್, ಬಿಸಿಸಿಐ ನಿಯಮಗಳು ಹಾಗೂ ಭಾರತೀಯ ಕಾನೂನು ಈ ಬಗ್ಗೆ ಏನು ಹೇಳುತ್ತೆ? ನೋಡೋಣ ಬನ್ನಿ
01:26 PM (IST) Apr 29
ಸಿನಿಮಾ ಎಂಬುದು ಕೇವಲ ಮನರಂಜನೆಯಲ್ಲ, ಅದೊಂದು ಬೃಹತ್ ಉದ್ಯಮ. ಜಗತ್ತಿನ ಪ್ರತಿಯೊಂದು ದೇಶವೂ ತನ್ನದೇ ಆದ ವಿಶಿಷ್ಟ ಶೈಲಿಯ ಸಿನಿಮಾಗಳನ್ನು ತಯಾರಿಸುತ್ತದೆ. ಆದರೆ, ಬಾಕ್ಸ್ ಆಫೀಸ್ ಗಳಿಕೆ, ನಿರ್ಮಾಣದ ವೇಗ ಮತ್ತು ಜಾಗತಿಕ ಪ್ರಭಾವದ ಆಧಾರದ ಮೇಲೆ ವಿಶ್ವದ ಟಾಪ್ 10 ಸಿನಿಮಾ ಇಂಡಸ್ಟ್ರಿಗಳು ಯಾವುವು? ಈ ಸ್ಟೋರಿ ನೋಡಿ..
12:49 PM (IST) Apr 29
ಇಷ್ಟು ಎತ್ತರದ ಟ್ಯಾಂಕ್ ಏರುವಾಗ ಅಕಸ್ಮಾತ್ ಕಾಲು ಜಾರಿದ್ದರೆ ಭೀಕರ ದುರಂತ ಸಂಭವಿಸುತ್ತಿತ್ತು. ಇಂತಹ ಕೃತ್ಯಗಳು ಕೇವಲ ಕಿಡಿಗೇಡಿಗಳ ಪ್ರಾಣಕ್ಕೆ ಅಪಾಯ ತರುವುದಲ್ಲದೆ, ಇಡೀ ಸಮುದಾಯದ ನೆಮ್ಮದಿಯನ್ನು ಕೆಡಿಸುತ್ತವೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ, ಸಾರ್ವಜನಿಕರು ಕೋಪಗೊಂಡಿದ್ದಾರೆ.. ಮುಂದೇನು?
11:09 AM (IST) Apr 29
ಬ್ಯಾಂಕ್ ಆಫ್ ಬರೋಡಾದ ಪ್ರೊಬೆಷನರಿ ಅಧಿಕಾರಿಯೊಬ್ಬರು ತಮ್ಮ 40 ದಿನಗಳ ಮೊದಲ ಸಂಬಳದ ಸ್ಲಿಪ್ ಅನ್ನು ಹಂಚಿಕೊಂಡಿದ್ದು, ಅವರ ವೇತನ ನೋಡಿ ನೆಟ್ಟಿಗರು ಅಚ್ಚರಿ ಪಟ್ಟಿದ್ದಾರೆ. ಪ್ರೊಬೆಷನರಿ ಅಧಿಕಾರಿಗೆ ಇರುವ ವೇತನ ಹಾಗೂ ಸವಲತ್ತುಗಳೇನು ಇಲ್ಲಿದೆ ಡಿಟೇಲ್ ಸ್ಟೋರಿ…
10:40 AM (IST) Apr 29
ಸ್ವಿಗ್ಗಿ ಸಂಸ್ಥೆಯು 'ಸ್ವಿಗ್ಗಿ ಬಿಲ್ಡರ್ಸ್ ಕ್ಲಬ್' ಎಂಬ ಹೊಸ ವೇದಿಕೆಯನ್ನು ಆರಂಭಿಸಿದ್ದು, ಡೆವಲಪರ್‌ಗಳು ಎಐ ಏಜೆಂಟ್‌ಗಳನ್ನು ನಿರ್ಮಿಸಲು ಆಹ್ವಾನಿಸಿದೆ. ಈ ತಂತ್ರಜ್ಞಾನವು ಗ್ರಾಹಕರ ಇಷ್ಟಗಳನ್ನು ಅರಿತು, 'ನನಗೆ ಹಸಿವಾಗ್ತಿದೆ' ಎಂದು ಟೈಪ್ ಮಾಡಿದರೆ ಸಾಕು, ತಾನಾಗಿಯೇ ಊಟವನ್ನು ಆರ್ಡರ್ ಮಾಡಲಿದೆ.
09:43 AM (IST) Apr 29
09:07 AM (IST) Apr 29
07:52 AM (IST) Apr 29
07:49 AM (IST) Apr 29
07:30 AM (IST) Apr 29
ಅಮೆರಿಕದ ನೌಕಾ ನಿರ್ಬಂಧದಿಂದಾಗಿ ಇರಾನ್‌ಗೆ ತೈಲ ರಫ್ತು ಮಾಡಲು ಸಾಧ್ಯವಾಗುತ್ತಿಲ್ಲ. ಇದರಿಂದಾಗಿ ಸಂಗ್ರಹಾಗಾರಗಳು ತುಂಬಿದ್ದು, ಉತ್ಪಾದನೆ ಕಡಿತಗೊಳಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಇದು ದೇಶದ ಆರ್ಥಿಕತೆಯನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡಲಿದ್ದು, ಜನ ದಂಗೆ ಏಳುವ ಸಾಧ್ಯತೆಯನ್ನೂ ಸೃಷ್ಟಿಸಿದೆ
07:18 AM (IST) Apr 29
06:55 AM (IST) Apr 29
ಪಾಕಿಸ್ತಾನದ ಪೆಟ್ರೋಲಿಯಂ ಸಚಿವ ಅಲಿ ಮಲಿಕ್, ಭಾರತದ ಬೃಹತ್ ವ್ಯೂಹಾತ್ಮಕ ತೈಲ ಸಂಗ್ರಹಣಾ ಸಾಮರ್ಥ್ಯವನ್ನು ಶ್ಲಾಘಿಸಿದ್ದಾರೆ. ತಮ್ಮ ದೇಶದಲ್ಲಿ ಕನಿಷ್ಠ ಒಂದು ದಿನದ ಅಗತ್ಯ ಪೂರೈಸುವ ಸಂಗ್ರಹಾಗಾರವೂ ಇಲ್ಲವೆಂದು ವಿಷಾದ ವ್ಯಕ್ತಪಡಿಸಿದ್ದಾರೆ.
06:39 AM (IST) Apr 29
05:34 AM (IST) Apr 29