Published : Apr 27, 2026, 05:18 AM ISTUpdated : Apr 27, 2026, 11:21 PM IST

India Latest News Live: ಜೋಶ್ ಹೇಜಲ್‌ವುಡ್-ಭುವಿ ಬಿರುಗಾಳಿ ದಾಳಿಗೆ ಡೆಲ್ಲಿ ಚೆಲ್ಲಾಪಿಲ್ಲಿ! ಡೆಲ್ಲಿಗೆ ನುಗ್ಗಿ ಹೊಡೆದ ಆರ್‌ಸಿಬಿ

ಸಾರಾಂಶ

ಢಾಕಾ: ಅರ್ಚಕನೊಬ್ಬನನ್ನು ಇಬ್ಬರು ಅಪರಿಚಿತ ವ್ಯಕ್ತಿಗಳು ಕರೆದೊಯ್ದ 3 ದಿನಗಳ ಬಳಿಕ ಆತನ ಶವ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಬಾಂಗ್ಲಾದೇಶದ ಚಟ್ಟೋಗ್ರಾಮ ಜಿಲ್ಲೆಯಲ್ಲಿ ನಡೆದಿದೆ. ದೇಶದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯ ಹೆಚ್ಚುತ್ತಿರುವ ಮಧ್ಯೆ ಈ ಘಟನೆ ಆತಂಕ ಮೂಡಿಸಿದೆ.

ದೋಹಝರಿ ನಿವಾಸಿ ನಯನ್‌ ಸಾಧು (40) ಮೃತ ವ್ಯಕ್ತಿ. ಏ.19ರ ಸಂಜೆ ಇಬ್ಬರು ಅಪರಿಚಿತರು ನಯನ್‌ರನ್ನು ತಮ್ಮೊಂದಿಗೆ ಕರೆದುಕೊಂಡು ಹೋಗಿದ್ದರು. 3 ದಿನಗಳ ನಂತರ, ಗ್ರಾಮದ ಹೊರವಲಯದಲ್ಲಿರುವ ಗುಡ್ಡಗಾಡು ಪ್ರದೇಶದಲ್ಲಿ ಮರಕ್ಕೆ ನೇತಾಡುತ್ತಿರುವ ಸ್ಥಿತಿಯಲ್ಲಿ ಅವರ ಶವ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದು ಕೊ*ಲೆಯೋ ಅಥವಾ ಆತ್ಮಹ*ತ್ಯೆಯೋ ಎಂಬುದು ಖಚಿತವಾಗಿಲ್ಲ.

11:21 PM (IST) Apr 27

ಜೋಶ್ ಹೇಜಲ್‌ವುಡ್-ಭುವಿ ಬಿರುಗಾಳಿ ದಾಳಿಗೆ ಡೆಲ್ಲಿ ಚೆಲ್ಲಾಪಿಲ್ಲಿ! ಡೆಲ್ಲಿಗೆ ನುಗ್ಗಿ ಹೊಡೆದ ಆರ್‌ಸಿಬಿ

ಜೋಶ್ ಹೇಜಲ್‌ವುಡ್ ಮತ್ತು ಭುವನೇಶ್ವರ್ ಕುಮಾರ್ ಅವರ ಮಾರಕ ಬೌಲಿಂಗ್ ದಾಳಿಗೆ ತತ್ತರಿಸಿದ ಡೆಲ್ಲಿ ಕ್ಯಾಪಿಟಲ್ಸ್ ಕೇವಲ 75 ರನ್‌ಗಳಿಗೆ ಆಲೌಟ್ ಆಯಿತು. ಈ ಸುಲಭ ಗುರಿಯನ್ನು ಬೆನ್ನಟ್ಟಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 9 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿತು.
Read Full Story

07:12 PM (IST) Apr 27

ರಾಜಮೌಳಿ 'ವಾರಣಾಸಿ' ಮುಗಿಯುತ್ತಿದ್ದಂತೆ ಮಹೇಶ್ ಬಾಬು ಕೈಗೆ ಭರ್ಜರಿ ಆಫರ್ಸ್, ಇದು ಅಂತಿಂಥ ಚಾನ್ಸ್ ಅಲ್ಲ!

ಸದ್ಯಕ್ಕೆ ಮಹೇಶ್ ಬಾಬು ಅವರು ತಮ್ಮ ಗೆಟಪ್ ಮತ್ತು ಲುಕ್ ಮೇಲೆ ಸಿಕ್ಕಾಪಟ್ಟೆ ವರ್ಕೌಟ್ ಮಾಡುತ್ತಿದ್ದಾರೆ. 2027ಕ್ಕೆ ರಾಜಮೌಳಿ ಸಿನಿಮಾ ಮೂಲಕ ವಿಶ್ವಾದ್ಯಂತ ಸದ್ದು ಮಾಡಿದ ನಂತರ, ಮಹೇಶ್ ಬಾಬು ಅವರ ಮಿಂಚಿನ ವೇಗದ ಸಿನಿಮಾಗಳು ಅಭಿಮಾನಿಗಳನ್ನು ರಂಜಿಸಲಿವೆ. ಮುಂದೆ ಫ್ಯಾನ್ಸ್‌ಗೆ ಹಬ್ಬ ಕಾದಿದೆ.

Read Full Story

07:02 PM (IST) Apr 27

ಪಶ್ಚಿಮ ಬಂಗಾಳದ 2ನೇ ಹಂತದ ಮತದಾನಕ್ಕೂ ಮುನ್ನ ಮೋದಿ ಆಡಿಯೋ ಸಂಚಲನ

ಪಶ್ಚಿಮ ಬಂಗಾಳದ 2ನೇ ಹಂತದ ಮತದಾನಕ್ಕೂ ಮುನ್ನ ಮೋದಿ ಆಡಿಯೋ ಸಂಚಲನ ಸೃಷ್ಟಿಸಿದೆ. ಮೇ.4ರಂದು ಬಂಗಾಳದಲ್ಲಿ ಬಿಜೆಪಿ ಸರ್ಕಾರದ ಮುನ್ಸೂಚನೆ ನೀಡಿದ್ರಾ? ಮೋದಿ ಹಂಚಿಕೊಂಡ ಆಡಿಯೋದಲ್ಲಿ ಏನಿದೆ

 

Read Full Story

05:28 PM (IST) Apr 27

ಮಹಿಳಾ ಅಧಿಕಾರಿಗೆ ಹೂತು ಹಾಕುವುದಾಗಿ ಬೆದರಿಕೆ ಹಾಕಿದ ಸಚಿವನ ಸೋದರ - ಬಂಧನವಾದ ಕೆಲ ಗಂಟೆಗಳಲ್ಲೇ ಸಿಕ್ತು ಜಾಮೀನು

ಮಹಿಳಾ ಅಧಿಕಾರಿಯೊಬ್ಬರಿಗೆ ಹೂತು ಹಾಕುವುದಾಗಿ ಸಚಿವರೊಬ್ಬರ ಸೋದರ ಬೆದರಿಕೆ ಹಾಕಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ವಿಚಿತ್ರ ಎಂದರೆ ಈ ರೀತಿ ಬೆದರಿಕೆ ಹಾಕಿದ ಆರೋಪಿಗೆ ಬಂಧನವಾದ ಕೆಲ ಗಂಟೆಗಳಲ್ಲೇ ಬೇಲ್ ಸಿಕ್ಕಿದೆ.

Read Full Story

05:23 PM (IST) Apr 27

ಬಿರಿಯಾನಿ ತಿಂದ ಬಳಿಕ ಕಲ್ಲಂಗಡಿ ಹಣ್ಣು ತಿಂದ ಇಬ್ಬರು ಮಕ್ಕಳು ಸೇರಿ ನಾಲ್ವರು ಸಾವು

ಬಿರಿಯಾನಿ ತಿಂದ ಬಳಿಕ ಕಲ್ಲಂಗಡಿ ಹಣ್ಣು ತಿಂದ ಇಬ್ಬರು ಮಕ್ಕಳು ಸೇರಿ ನಾಲ್ವರು ಸಾವು, ಊಟದ ಬಳಿಕ ಸಂಬಂಧಿಕರ ಜೊತೆ ಮಾತನಾಡುತ್ತಾ ಕಾಲ ಕಳೆದ ಕುಟುಂಬ ಮಲಗುವ ಮುನ್ನ ಕಲ್ಲಂಗಡಿ ತಿಂದಿದ್ದಾರೆ.

 

Read Full Story

05:11 PM (IST) Apr 27

ಮೇ ತಿಂಗಳಲ್ಲಿ ಬ್ಯಾಂಕ್ ಕೆಲ್ಸ ಇದ್ದರೆ ಇದನ್ನು ಗಮನಿಸಿ - 13 ದಿನಗಳು ಕೆಲಸಕ್ಕೆ ರಜೆ- ಡಿಟೇಲ್ಸ್​ ಇಲ್ಲಿದೆ

ಮೇ 2026 ರಲ್ಲಿ ಭಾರತದಾದ್ಯಂತ ರಾಜ್ಯದಿಂದ ರಾಜ್ಯಕ್ಕೆ ಬದಲಾಗುವ ಒಟ್ಟು 12 ಬ್ಯಾಂಕ್ ರಜೆಗಳನ್ನು ಘೋಷಿಸಲಾಗಿದೆ. ಈ ಲೇಖನವು ಆರ್‌ಬಿಐ ಬಿಡುಗಡೆ ಮಾಡಿದ ರಜಾದಿನಗಳ ಪಟ್ಟಿಯನ್ನು, ವಿಶೇಷವಾಗಿ ಕರ್ನಾಟಕದಲ್ಲಿ ಕಾರ್ಮಿಕರ ದಿನ ಮತ್ತು ಬಕ್ರೀದ್ ಸೇರಿದಂತೆ ಅನ್ವಯವಾಗುವ ರಜೆಗಳ ವಿವರಗಳನ್ನು ನೀಡುತ್ತದೆ.
Read Full Story

04:50 PM (IST) Apr 27

459 ರೂ. ಕೊಟ್ರೆ ಸಾಕು - ಜಿಯೋ ಗ್ರಾಹಕರಿಗೆ ಈ ಎಲ್ಲ ಕೊಡುಗೆಗಳ ಮಹಾಪೂರ- ಏನಿದು special offer

ರಿಲಯನ್ಸ್ ಜಿಯೋ ಯುವಕರು ಮತ್ತು ಗೇಮರುಗಳಿಗಾಗಿ ₹459 ರ "ಯೂತ್ ಅಂಡ್ ಗೇಮಿಂಗ್" ಪ್ಲಾನ್  ಪರಿಚಯಿಸಿದೆ. ಈ ಯೋಜನೆಯು 28 ದಿನಗಳ ವ್ಯಾಲಿಡಿಟಿಯೊಂದಿಗೆ ದಿನಕ್ಕೆ 2GB ಡೇಟಾ, ಅನಿಯಮಿತ ಕರೆ, ಸ್ನ್ಯಾಪ್‌ಚಾಟ್ ಪ್ಲಸ್, ಫ್ಯಾನ್‌ಕೋಡ್ ಮತ್ತು  18 ತಿಂಗಳ ಗೂಗಲ್ ಜೆಮಿನಿ ಪ್ರೊ ಚಂದಾದಾರಿಕೆ  ಒಳಗೊಂಡಿದೆ.

Read Full Story

04:47 PM (IST) Apr 27

'ವೈಭವ್ ಸೂರ್ಯವಂಶಿ ಬ್ಯಾಟ್‌ನಲ್ಲಿ AI ಚಿಪ್ ಇದೆ..' - ಪಾಕಿಸ್ತಾನದ ಕ್ರಿಕೆಟ್ ವಿಶ್ಲೇಷಕನಿಂದ ವಿಚಿತ್ರ ಆರೋಪ!

ರಾಜಸ್ಥಾನ ರಾಯಲ್ಸ್‌ನ 15 ವರ್ಷದ ಆಟಗಾರ ವೈಭವ್ ಸೂರ್ಯವಂಶಿ ಬ್ಯಾಟ್‌ನಲ್ಲಿ ಎಐ ಚಿಪ್ ಬಳಸುತ್ತಿದ್ದಾರೆ ಎಂದು ಪಾಕಿಸ್ತಾನದ ವಿಶ್ಲೇಷಕ ನೌಮಾನ್ ನಿಯಾಝ್ ಆರೋಪಿಸಿದ್ದಾರೆ. ವೈಭವ್ ಅವರ ಸ್ಫೋಟಕ ಬ್ಯಾಟಿಂಗ್, ವಿಶೇಷವಾಗಿ 36 ಎಸೆತಗಳ ಶತಕದ ನಂತರ ಈ ಹೇಳಿಕೆ ಬಂದಿದ್ದು, ಅವರ ಬ್ಯಾಟನ್ನು ಲ್ಯಾಬ್‌ನಲ್ಲಿ ಪರೀಕ್ಷಿಸಬೇಕೆಂದು ನಿಯಾಝ್ ಒತ್ತಾಯಿಸಿದ್ದಾರೆ.
Read Full Story

04:33 PM (IST) Apr 27

10 ಸಾವಿರ ದಲಿತರಿಂದ ಬ್ರಾಹ್ಮಣ್ಯ ಸ್ವೀಕಾರ - ವಿಧಿ-ವಿಧಾನದ ಪ್ರಕಾರ ಜನಿವಾರ ಧಾರಣೆ; ಅವರು ಹೇಳಿದ್ದೇನು

ಆರಂಭದಲ್ಲಿ ವೃತ್ತಿ ಆಧರಿತವಾಗಿದ್ದ ವರ್ಣ ವ್ಯವಸ್ಥೆಯು ಕಾಲಕ್ರಮೇಣ ಜಾತಿ ಸಂಘರ್ಷಕ್ಕೆ ಕಾರಣವಾಗಿದೆ. ಇದರ ನಡುವೆ, ಉತ್ತರ ಪ್ರದೇಶದಲ್ಲಿ 10,000 ದಲಿತರು ಜನಿವಾರ ಧರಿಸಿ ಬ್ರಾಹ್ಮಣ್ಯವನ್ನು ಸ್ವೀಕರಿಸಿದ್ದಾರೆ. ಸಮಾನತೆ ಮತ್ತು ರಾಜಕೀಯ ಒಡಕಿನ ವಿರುದ್ಧದ ಪ್ರತಿರೋಧವೇ ಈ ನಿರ್ಧಾರಕ್ಕೆ ಕಾರಣವೆಂದು ಅವರು ಹೇಳಿದ್ದಾರೆ.

Read Full Story

04:23 PM (IST) Apr 27

1882ರ ಕೇದಾರನಾಥ ಫೋಟೋ ಹಂಚಿಕೊಂಡ ಆನಂದ್ ಮಹೀಂದ್ರ, ಸನಾತನ ಹಿರಿಮೆಗೆ ಸಾಟಿ ಎಲ್ಲಿ?

1882ರ ಕೇದಾರನಾಥ ಫೋಟೋ ಹಂಚಿಕೊಂಡ ಆನಂದ್ ಮಹೀಂದ್ರ, ಸನಾತನ ಹಿರಿಮೆಗೆ ಸಾಟಿ ಎಲ್ಲಿ? ಬರೋಬ್ಬರಿ 144 ವರ್ಷ ಹಿಂದೆ ತೆಗೆದ ಫೋಟೋ ಇದು. ರಸ್ತೆ, ರೈಲು, ಹೆಲಿಕಾಪ್ಟರ್ ಇಲ್ಲದ ಕಾಲ. ಇದರ ನಡುವೆ ಯಾತ್ರೆ ನಿರಂತರವಾಗಿತ್ತು

 

Read Full Story

03:36 PM (IST) Apr 27

'ಭಯ್ಯಾ ಅಲ್ಲ, ಬ್ರದರ್'; ರಿಂಕು ಸಿಂಗ್ ತಮ್ಮ ಫ್ಯಾಮಿಲಿಗೆ ಸುನಿಲ್‌ ನರೈನ್ ಪರಿಚಯಿಸಿದ ವಿಡಿಯೋ ವೈರಲ್!

ಲಖನೌ ವಿರುದ್ಧ ಸೂಪರ್ ಓವರ್‌ನಲ್ಲಿ ಕೆಕೆಆರ್ ರೋಚಕ ಗೆಲುವು ಸಾಧಿಸಿದ್ದು, ಸುನಿಲ್ ನರೈನ್ ಮತ್ತು ರಿಂಕು ಸಿಂಗ್ ಹೀರೋಗಳಾದರು. ಪಂದ್ಯದ ನಂತರ, ರಿಂಕು ಸಿಂಗ್ ತಮ್ಮ ಕುಟುಂಬಕ್ಕೆ ವಿಡಿಯೋ ಕಾಲ್ ಮಾಡಿ ನರೈನ್ ಅವರನ್ನು ಪರಿಚಯಿಸಿದಾಗ ನಡೆದ ತಮಾಷೆಯ ಘಟನೆಯ ವಿಡಿಯೋ ವೈರಲ್ ಆಗಿದೆ.
Read Full Story

03:28 PM (IST) Apr 27

60ರಲ್ಲೂ 20ರ ಯಂಗ್ ಲುಕ್‌; ತಮಿಳು ನಟ ವಿಕ್ರಮ್ ಚೆಂದದ ಹಿಂದೆ ಇದೆಯಾ ವಿದೇಶಿ ಚಿಕಿತ್ಸೆ ಕೈವಾಡ?

ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ವಿಕ್ರಮ್ ಮತ್ತು ಅವರ ಮಗ ಧ್ರುವ್ ವಿಕ್ರಮ್ ಅವರ ಫೋಟೋಗಳು ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ. 30ರ ಹರೆಯದಲ್ಲಿರುವ ಧ್ರುವ್ ವಿಕ್ರಮ್ ಸದ್ಯ ಕಾಲಿವುಡ್‌ನ ಬೇಡಿಕೆಯ ಯುವ ನಟ. ಆದರೆ ಅಚ್ಚರಿಯ ಸಂಗತಿಯೆಂದರೆ, ಮಗನ ಪಕ್ಕದಲ್ಲಿ ತಂದೆ ವಿಕ್ರಮ್ ನಿಂತರೆ ಮಗನಿಗಿಂತ ತಂದೆಯೇ ಹೆಚ್ಚು ಎನರ್ಜಿಟಿಕ್ ಮತ್ತು ಯಂಗ್ ಆಗಿ ಕಾಣುತ್ತಾರೆ.

Read Full Story

03:20 PM (IST) Apr 27

ಬೀದಿ ಬದಿ ಪಾನಿಪುರಿ ಸೇವಿಸಿದ್ದ 8 ವರ್ಷದ ಬಾಲಕ ಸಾವು - 18 ಜನ ಆಸ್ಪತ್ರೆಗೆ ದಾಖಲು - ಪಾನಿಪುರಿವಾಲಾ ಪರಾರಿ

ಜಾರ್ಖಂಡ್‌ನ ಗಿರಿದಿಹ್‌ನಲ್ಲಿ ಬೀದಿಬದಿ ಪಾನಿಪುರಿ ಸೇವಿಸಿದ ನಂತರ ಆರು ವರ್ಷದ ಬಾಲಕನೊಬ್ಬ ಮೃತಪಟ್ಟಿದ್ದು, 18 ಮಂದಿ ಅಸ್ವಸ್ಥರಾಗಿದ್ದಾರೆ. ಹೊಟ್ಟೆನೋವು ಮತ್ತು ವಾಂತಿಯಿಂದ ಬಳಲುತ್ತಿದ್ದ ಎಲ್ಲರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪಾನಿಪುರಿ ಮಾರಾಟಗಾರ ನಾಪತ್ತೆಯಾಗಿದ್ದಾನೆ.
Read Full Story

02:55 PM (IST) Apr 27

ಬೇಸಿಗೆಯಲ್ಲಿ ಮುದ ನೀಡುವ ಮೊಸರನ್ನ ಹೀಗೆ ಮಾಡಿದರೆ ರುಚಿಯೂ ಇರುತ್ತೆ, ಕೂಲ್‌ ಕೂಲ್‌ ಆಗಿಯೂ ಇರುತ್ತೆ!

ದಕ್ಷಿಣ ಭಾರತದ ಊಟದ ಪದ್ಧತಿಯಲ್ಲಿ 'ಮೊಸರನ್ನ'ಕ್ಕೆ (Curd Rice) ಒಂದು ವಿಶೇಷ ಸ್ಥಾನವಿದೆ. ಏನೇ ತಿಂದರೂ, ಕೊನೆಯಲ್ಲಿ ಸ್ವಲ್ಪ ಮೊಸರನ್ನ ತಿನ್ನದಿದ್ದರೆ ಊಟ ಪೂರ್ಣವಾಗುವುದಿಲ್ಲ ಎಂಬ ನಂಬಿಕೆ ನಮ್ಮದು. ಆದರೆ, ರುಚಿ ಹಾಗೂ ಕೂಲ್ ಮೊಸರನ್ನ ಮಾಡಲು ಹಲವರಿಗೆ ಬರಲ್ಲ, ಟಿಪ್ಸ್ ಇಲ್ಲಿದೆ ನೋಡಿ..

Read Full Story

01:06 PM (IST) Apr 27

ಪ್ರಪಂಚದ ಪರಿವೆಯಿಲ್ಲದೇ ಹಲವರು ಮಲಗಿರುವಾಗ ನೀವು ಎದ್ದೇಳಿ.. ಈ ಸಮಯ, ಮ್ಯಾಜಿಕ್ ಮಾಡಿಲ್ಲ ಅಂದ್ರೆ ಹೇಳಿ!

ದೇವತೆಗಳು ಮತ್ತು ಸಿದ್ಧ ಪುರುಷರ ಸಂಚಾರ ಭೂಮಿಯಲ್ಲಿ ಹೆಚ್ಚಾಗಿರುತ್ತದೆ. ಅವರು ಸೂಕ್ಷ್ಮ ರೂಪದಲ್ಲಿ ಸಂಚರಿಸುವಾಗ, ನಾವು ಎಚ್ಚರವಾಗಿದ್ದು ಪ್ರಾರ್ಥಿಸಿದರೆ ಅವರ ಆಶೀರ್ವಾದ ಸುಲಭವಾಗಿ ಸಿಗುತ್ತದೆ. ಇಂದು ಪಾಶ್ಚಿಮಾತ್ಯ ದೇಶಗಳ ಹಲವು ದೊಡ್ಡ ಉದ್ಯಮಿಗಳು ಬೆಳಗ್ಗೆ ಬೇಗ ಏಳುವುದನ್ನು ಪಾಲಿಸುತ್ತಿದ್ದಾರೆ. ನಮ್ಮ ಪೂರ್ವಜರು ಏನ್ ಹೇಳಿದ್ದಾರೆ? ನೋಡಿ..

Read Full Story

12:48 PM (IST) Apr 27

ಮೋದಿಗೆ ಮತ ಹಾಕದಂತೆ ಈ ಬಾಲಿವುಡ್​ ಸೆಲೆಬ್ರಿಟಿಗಳ ಸಹಿ ಸಂಗ್ರಹ - ಆ ದಿನಗಳ ನೆನೆದ ಅನುಪಮ್​ ಖೇರ್​

2014ರಲ್ಲಿ ಪ್ರಧಾನಿ ಅಭ್ಯರ್ಥಿಯಾಗಿದ್ದ ನರೇಂದ್ರ ಮೋದಿಗೆ ಮತ ಹಾಕದಂತೆ ಸುಮಾರು 60 ಬಾಲಿವುಡ್ ಸೆಲೆಬ್ರಿಟಿಗಳು ಸಹಿ ಚಳವಳಿ ನಡೆಸಿದ್ದರು. ಈ ಪತ್ರಕ್ಕೆ ಸಹಿ ಹಾಕಲು ತಮ್ಮ ಮೇಲೂ ಒತ್ತಡ ಹೇರಲಾಗಿತ್ತು ಎಂದು ನಟ ಅನುಪಮ್ ಖೇರ್ ಈಗ ಆ ಘಟನೆಯನ್ನು ನೆನಪಿಸಿಕೊಂಡಿದ್ದಾರೆ.
Read Full Story

12:39 PM (IST) Apr 27

ಮುಖಕ್ಕೆ ಕೇಕ್ ಹಚ್ಚಿದ್ದಕ್ಕೆ ಬಿತ್ತು ಮೂರು ಹೆಣ - ಸ್ನೇಹಿತರ ಮೇಲೆ ಗುಂಡಿನ ಮಳೆಗರೆದ ಬರ್ತ್‌ಡೇ ಬಾಯ್!

ಬರ್ತ್‌ಡೇ ಪಾರ್ಟಿಗಳಲ್ಲಿ ಸ್ನೇಹಿತರು ಮುಖಕ್ಕೆ ಕೇಕ್ ಹಚ್ಚಿ ಸಂಭ್ರಮಿಸುವುದು ಸಾಮಾನ್ಯ. ಆದರೆ ಇಲ್ಲೊಂದು ಕಡೆ ಈ ರೀತಿ ಮುಖಕ್ಕೆ ಕೇಕ್ ಹಚ್ಚಿದ ಕಾರಣಕ್ಕೆ ಮೂರು ಹೆಣ ಬಿದ್ದಿದೆ. ಬರ್ತ್‌ಡೇ ಬಾಯ್ ಮುಖಕ್ಕೆ ಕೇಕ್ ಹಚ್ಚಿದ ಕಾರಣಕ್ಕೆ ಆರಂಭವಾದ ಜಗಳ ಮೂವರು ಸ್ನೇಹಿತರ ಕೊಲೆಯಲ್ಲಿ ಅಂತ್ಯವಾಗಿದೆ.

Read Full Story

12:37 PM (IST) Apr 27

ಮೇ 1ರಿಂದ LPG ಮತ್ತಷ್ಟು ದುಬಾರಿ? ಹೊಸ ನಿಯಮಗಳ ಬಗ್ಗೆ ಇಂದೇ ತಿಳಿದುಕೊಳ್ಳಿ

ದೇಶದಲ್ಲಿ ಎಲ್‌ಪಿಜಿ ಸಿಲಿಂಡರ್ ಬೆಲೆ ಏರಿಕೆಯಾಗುವ ಸಾಧ್ಯತೆಯಿದ್ದು, ಸರ್ಕಾರ ಹೊಸ ಸಂಪರ್ಕ ನೀಡುವುದನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ. ಪೂರೈಕೆಯಲ್ಲಿನ ವ್ಯತ್ಯಯದಿಂದಾಗಿ, ಸಿಲಿಂಡರ್ ಬುಕಿಂಗ್ ನಿಯಮಗಳಲ್ಲಿಯೂ ಬದಲಾವಣೆ ತರಲಾಗಿದ್ದು, OTP ಆಧಾರಿತ ವಿತರಣೆಯನ್ನು ಕಡ್ಡಾಯಗೊಳಿಸಲಾಗಿದೆ.
Read Full Story

12:30 PM (IST) Apr 27

ಕೆನಡಾದಲ್ಲಿ ಭಾರತೀಯ ವಿದ್ಯಾರ್ಥಿನಿ ಗೋಳು - 'ನನ್ನ ಲೈಫ್ ಒಂದು ಲೂಪ್, ಸ್ಕೂಲ್ ಫೀಸ್‌ಗೆ ಹೀಗ್ ಮಾಡ್ತೀನಿ' ಎಂದ ಸ್ಟೂಡೆಂಟ್

ವಿದೇಶದಲ್ಲಿ ಓದಲು ಹೋಗುವ ಎಷ್ಟೋ ಭಾರತೀಯ ವಿದ್ಯಾರ್ಥಿಗಳು ದೊಡ್ಡ ಸವಾಲುಗಳನ್ನೇ ಎದುರಿಸುತ್ತಾರೆ. ಓದಿನ ಜೊತೆಗೆ ಪಾರ್ಟ್-ಟೈಮ್ ಕೆಲಸ ಮಾಡಿಕೊಂಡೇ ತಮ್ಮ ಜೀವನವನ್ನು ಸಾಗಿಸುತ್ತಾರೆ. ಇದೀಗ, ಕೆನಡಾದಲ್ಲಿರುವ ವಿದ್ಯಾರ್ಥಿನಿಯೊಬ್ಬಳ ಕಥೆ ವಿಡಿಯೋ ಮೂಲಕ ವೈರಲ್ ಆಗ್ತಿದೆ..

Read Full Story

12:18 PM (IST) Apr 27

ಪತಿ ಅಕ್ಕನನ್ನೇ ಸವತಿ ಮಾಡಿ, ಕೋರ್ಟನ್ನೇ ಯಾಮಾರಿಸಿ ಡಿವೋರ್ಸ್​ ಪಡೆದಳು! ಕಿತಾಪತಿ ಪತ್ನಿ ರೋಚಕ ಸ್ಟೋರಿ

ವಿಚ್ಛೇದನ ಪಡೆಯಲು, ಪತ್ನಿಯೊಬ್ಬಳು ತನ್ನ ಗಂಡನ ಸ್ವಂತ ಅಕ್ಕನೊಂದಿಗಿನ ಫೋಟೋವನ್ನು ನ್ಯಾಯಾಲಯಕ್ಕೆ ನೀಡಿ, ಆಕೆಯೇ ತನ್ನ ಗಂಡನ ಎರಡನೇ ಪತ್ನಿ ಎಂದು ಸುಳ್ಳು ಹೇಳಿದ್ದಾಳೆ. ಈ ಆಧಾರದ ಮೇಲೆ ನ್ಯಾಯಾಲಯವು ಏಕಪಕ್ಷೀಯವಾಗಿ ವಿಚ್ಛೇದನ ಮಂಜೂರು ಮಾಡಿದೆ. ಈಗ ಪತಿ ಈ ತೀರ್ಪನ್ನು ಪ್ರಶ್ನಿಸಿ ಹೈಕೋರ್ಟ್‌ ಮೆಟ್ಟಿಲೇರಿದ್ದಾನೆ.
Read Full Story

11:37 AM (IST) Apr 27

ಪಾಕಿಸ್ತಾನದಲ್ಲಿ ಅಪರಿಚಿತ ಬಂದೂಕುಧಾರಿಗಳಿಂದ ಮುಂದುವರಿದ ಉಗ್ರ ಬೇಟೆ - ಹಫೀಜ್ ಸಯೀದ್ ಆಪ್ತಅಫ್ರಿದಿ ಗುಂಡೇಟಿಗೆ ಬಲಿ

ಪಾಕಿಸ್ತಾನದಲ್ಲಿ ಅಪರಿಚಿತ ಬಂದೂಕುಧಾರಿಗಳು ಮತ್ತೊಬ್ಬ ಕುಖ್ಯಾತ ಭಯೋತ್ಪಾದಕನ ಕತೆ ಮುಗಿಸಿದ್ದಾರೆ. ಲಷ್ಕರ್ ಇ ತೈಬಾ ಉಗ್ರ ಸಂಘಟನೆಯ ಕಮಾಂಡರ್ ಆಗಿದ್ದ ಶೇಕ್ ಯೂಸುಫ್ ಅಫ್ರಿದಿಯನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಪಾಕಿಸ್ತಾನದ ಖೈಬರ್ ಪಖ್ತುಂಖ್ವಾ ಪ್ರದೇಶದಲ್ಲಿ ಈ ಘಟನೆ ನಡೆದಿದೆ.

Read Full Story

11:34 AM (IST) Apr 27

'ವಧು' ಸೀರಿಯಲ್​ ಡಿವೋರ್ಸ್​ ಲಾಯರ್​ ಆಸ್ಪತ್ರೆಗೆ ದಾಖಲು - ಐಸಿಯುಗೆ ಶಿಫ್ಟ್​- ನಟಿ ದುರ್ಗಶ್ರೀಗೆ ಆಗಿದ್ದೇನು

'ವಧು' ಸೀರಿಯಲ್ ಖ್ಯಾತಿಯ ನಟಿ ದುರ್ಗಶ್ರೀ, ತೆಲುಗಿನ 'ಸಂಧ್ಯಾರಾಗಂ' ಧಾರಾವಾಹಿಯಿಂದ ಏಕಾಏಕಿ ಹೊರಬಂದಿದ್ದರು. ಗರ್ಭಾಶಯದ ಸಿಸ್ಟ್ ಸಮಸ್ಯೆಯಿಂದಾಗಿ ತುರ್ತು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರಿಂದ ಧಾರಾವಾಹಿ ತೊರೆಯಬೇಕಾಯಿತು ಎಂದು ಅವರು ಇದೀಗ ಸ್ಪಷ್ಟಪಡಿಸಿದ್ದಾರೆ.
Read Full Story

11:13 AM (IST) Apr 27

ಕೈಗೆ ಬಂದ ತುತ್ತು ಬಾಯಿಗೆ ಬರ್ಲಿಲ್ಲ.. ಧನುಷ್ ಚಿತ್ರದಿಂದ ಚೈತ್ರಾ ಆಚಾರ್ ಔಟ್ ಆಗಿದ್ದೇಕೆ? ಇಲ್ಲಿದೆ ಆ ಸೀಕ್ರೆಟ್ ಕಹಾನಿ

ನ್ಯಾಷನಲ್ ಅವಾರ್ಡ್ ವಿನ್ನರ್, ಕಾಲಿವುಡ್‌ನ ‘ಅಸುರ’ ಧನುಷ್ ಜೊತೆ ನಾಯಕಿಯಾಗಿ ನಟಿಸುವ ಬಂಪರ್ ಆಫರ್ ಚೈತ್ರಾ ಪಾಲಿಗೆ ಬಂದಿತ್ತು. ಆದರೆ, ವಿಧಿಯ ಆಟವೇ ಬೇರೆ ಇತ್ತು. ಶೂಟಿಂಗ್ ಹಂತದವರೆಗೂ ಹೋಗಿದ್ದ ಈ ಚಾನ್ಸ್ ಕೊನೆ ಕ್ಷಣದಲ್ಲಿ ಕೈ ತಪ್ಪಿದ್ದೇಕೆ? ಇಲ್ಲಿದೆ ಅಸಲಿ ಕಾರಣ…

Read Full Story

10:43 AM (IST) Apr 27

ಹೆಂಗಸರಿಗೆ ಮಾತ್ರವಲ್ಲ, ಬಹಳಷ್ಟು ಗಂಡಸರಿಗೂ ಈ ಸಮಸ್ಯೆ ಆಗ್ತಿದೆ; ತುಂಬಾ ಮಂದಿಗೆ ಆ ಬಗ್ಗೆ ಗೊತ್ತಿಲ್ಲ ಅಷ್ಟೇ..!

ಧನುಷ್ ಕೇವಲ ನಟನಲ್ಲ, ಒಬ್ಬ ಫಿಲಾಸಫರ್ ಕೂಡ ಹೌದು. ಅವರು ಹೇಳುವ ಒಂದು ಮಾತು ಎಲ್ಲರಿಗೂ ಮಾದರಿ: "ನೀವು ಏನನ್ನು ಯೋಚಿಸುತ್ತೀರೋ, ಅದೇ ನೀವು ಆಗುತ್ತೀರಿ." 2002-2003ರಲ್ಲಿ ಧನುಷ್ ತಮಗೆ ರಾಷ್ಟ್ರ ಪ್ರಶಸ್ತಿ ಬರುತ್ತದೆ ಎಂದು ಹೇಳಿಕೊಂಡಾಗ ಜನ ಹುಚ್ಚರೆಂದು ನಕ್ಕಿದ್ದರಂತೆ.

Read Full Story

10:42 AM (IST) Apr 27

ಮದುವೆಯಾಗೋದಾಗಿ ನಂಬಿಸಿ ಸಾಫ್ಟ್‌ವೇರ್ ಇಂಜಿನಿಯರ್‌ಗೆ 9.35 ಕೋಟಿ ರೂ. ನಾಮ - ಬಿಗ್‌ ಬಾಸ್ ನಟಿ ವಿರುದ್ಧ ವಂಚನೆ ಕೇಸ್ ದಾಖಲು!

ಮದುವೆಯಾಗುವುದಾಗಿ ನಂಬಿಸಿ ಲಂಡನ್ ಮೂಲದ ಸಾಫ್ಟ್‌ವೇರ್ ಇಂಜಿನಿಯರ್ ಒಬ್ಬರಿಗೆ 9.35 ಕೋಟಿ ರೂಪಾಯಿ ವಂಚಿಸಿದ ಆರೋಪದ ಮೇಲೆ ಟಾಲಿವುಡ್ ನಟಿ ತೆಲುಗಿನ ಬಿಗ್ಬಾಸ್ ಸ್ಪರ್ಧಿ ವಿರುದ್ಧ ಪ್ರಕರಣ ದಾಖಲಾಗಿದೆ. ಲಂಡನ್ ಮೂಲದ ವಿಚ್ಚೇದಿತರು ಆಗಿರುವ ಟೆಕ್ಕಿಯೊಬ್ಬರು ಈ ದೂರು ನೀಡಿದ್ದಾರೆ.

Read Full Story

10:41 AM (IST) Apr 27

ಒಂದೇ ಓವರ್‌ನಲ್ಲಿ 2 'ಬೀಮರ್', ಆದ್ರೂ ಬೌಲಿಂಗ್‌ಗೆ ಬ್ರೇಕ್ ಹಾಕದ ಅಂಪೈರ್! ಆ ಅಚ್ಚರಿಯ ನಿರ್ಧಾರದ ಹಿಂದಿನ ಕಾರಣವೇನು?

ಕೋಲ್ಕತಾ ಮತ್ತು ಲಖನೌ ನಡುವಿನ ಪಂದ್ಯದ ಕೊನೆಯ ಓವರ್‌ನಲ್ಲಿ, ಕಾರ್ತಿಕ್ ತ್ಯಾಗಿ ಎರಡು ಬೀಮರ್‌ಗಳನ್ನು ಎಸೆದರೂ ಬೌಲಿಂಗ್ ಮುಂದುವರಿಸಲು ಅಂಪೈರ್‌ಗಳು ಅವಕಾಶ ನೀಡಿದ್ದು ವಿವಾದಕ್ಕೆ ಕಾರಣವಾಯಿತು. ಪಂದ್ಯ ಟೈ ಆಗಿ, ಸೂಪರ್ ಓವರ್‌ನಲ್ಲಿ ಕೋಲ್ಕತಾ ರೋಚಕ ಜಯ ಸಾಧಿಸಿ ತನ್ನ ಪ್ಲೇ ಆಫ್ ಆಸೆಯನ್ನು ಜೀವಂತವಾಗಿರಿಸಿಕೊಂಡಿತು.
Read Full Story

10:02 AM (IST) Apr 27

'ನಾನು ನಿಷ್ಕಳಂಕ ವ್ಯಕ್ತಿ' ಫೈರಿಂಗ್ ನಂತರ ಮೊದಲ ಡೊನಾಲ್ಡ್ ಟ್ರಂಪ್ ಪ್ರತಿಕ್ರಿಯೆ

ವಾಷಿಂಗ್ಟನ್‌ನಲ್ಲಿ ನಡೆದ 'ವೈಟ್ ಹೌಸ್ ಕರೆಸ್ಪಾಂಡೆಂಟ್ಸ್ ಡಿನ್ನರ್' ವೇಳೆ ಶೂಟೌಟ್ ನಡೆಸಿದ ಥಾಮಸ್ ಅಲೆನ್‌ನ ವಿವಾದಾತ್ಮಕ ಮ್ಯಾನಿಫೆಸ್ಟೋ ಈಗ ಬಹಿರಂಗವಾಗಿದೆ. ಈ ಹಿನ್ನೆಲೆಯಲ್ಲಿ ಭಾರೀ ಕೋಲಾಹಲ ಎದ್ದಿದೆ. ಇದರಲ್ಲಿನ ಆರೋಪಗಳಿಗೆ ಡೊನಾಲ್ಡ್ ಟ್ರಂಪ್ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ.

Read Full Story

08:46 AM (IST) Apr 27

ಡೆಲ್ಲಿ ಕ್ಯಾಪಿಟಲ್ಸ್ ಚಾಲೆಂಜ್‌ ಗೆಲ್ಲುತ್ತಾ ಆರ್‌ಸಿಬಿ? ರಾಷ್ಟ್ರ ರಾಜಧಾನಿಯಲ್ಲಿಂದು ಸೇಡಿನ ಕದನ

ತವರಿನಲ್ಲಿ ಸೋತಿದ್ದಕ್ಕೆ ಸೇಡು ತೀರಿಸಿಕೊಳ್ಳಲು ಆರ್‌ಸಿಬಿ, ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಸಜ್ಜಾಗಿದೆ. ಪ್ಲೇ-ಆಫ್‌ ರೇಸ್‌ನಲ್ಲಿ ಉಳಿಯಲು ಡೆಲ್ಲಿಗೆ ಈ ಪಂದ್ಯ ನಿರ್ಣಾಯಕವಾಗಿದ್ದು, ಆರ್‌ಸಿಬಿ ವಿರುದ್ಧ ಉತ್ತಮ ದಾಖಲೆ ಹೊಂದಿರುವ ಕನ್ನಡಿಗ ಕೆ.ಎಲ್. ರಾಹುಲ್ ಮೇಲೆ ಎಲ್ಲರ ಕಣ್ಣಿದೆ.
Read Full Story

08:08 AM (IST) Apr 27

IPL 2026 ನಿನ್ನೆ ನಡೆದ ಲಖನೌ-ಕೆಕೆಆರ್ ನಡುವಿನ ಸೂಪರ್ ಓವರ್ ಮ್ಯಾಚ್ ಗೆದ್ದಿದ್ದು ಯಾರು?

ಲಖನೌ ವಿರುದ್ಧದ ಐಪಿಎಲ್ ಪಂದ್ಯದಲ್ಲಿ ಕೋಲ್ಕತಾ ನೈಟ್ ರೈಡರ್ಸ್ ಸೂಪರ್ ಓವರ್‌ನಲ್ಲಿ ರೋಚಕ ಗೆಲುವು ಸಾಧಿಸಿತು. ರಿಂಕು ಸಿಂಗ್ ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಪಂದ್ಯ ಟೈ ಆದ ನಂತರ, ಕೆಕೆಆರ್ ಸೂಪರ್ ಓವರ್‌ನಲ್ಲಿ ಸುಲಭವಾಗಿ ಜಯಭೇರಿ ಬಾರಿಸಿತು.
Read Full Story

07:33 AM (IST) Apr 27

100 ಮೀ. ದೂರದಲ್ಲಿ ಬಿಜೆಪಿ ರ್‍ಯಾಲಿ ಸದ್ದು - ಭಾಷಣ ನಿಲ್ಲಿಸಿ ನಿರ್ಗಮಿಸಿದ ಸಿಎಂ ಮಮತಾ!

ಭವಾನಿಪುರದಲ್ಲಿ ತಮ್ಮ ರ್‍ಯಾಲಿ ಸಮೀಪವೇ ಬಿಜೆಪಿ ಸಭೆ ನಡೆಸಿದ್ದಕ್ಕೆ ಕೋಪಗೊಂಡ ಮಮತಾ ಬ್ಯಾನರ್ಜಿ ಭಾಷಣವನ್ನು ಅರ್ಧಕ್ಕೆ ನಿಲ್ಲಿಸಿ ನಿರ್ಗಮಿಸಿದರು. ಈ ಘಟನೆಯು ಟಿಎಂಸಿ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಗದ್ದಲಕ್ಕೆ ಕಾರಣವಾಯಿತು. 

Read Full Story

07:04 AM (IST) Apr 27

ಏಳು ಪಕ್ಷಾಂತರಿಗಳ ಸದಸ್ಯತ್ವ ರದ್ದುಗೊಳಿಸುವಂತೆ ರಾಜ್ಯಸಭೆ ಸ್ಪೀಕರ್‌ಗೆ ಆಪ್‌ ಮನವಿ

ಬಿಜೆಪಿ ಸೇರಿದ 7 ರಾಜ್ಯಸಭಾ ಸಂಸದರನ್ನು ಅನರ್ಹಗೊಳಿಸುವಂತೆ ಆಮ್ ಆದ್ಮಿ ಪಕ್ಷವು ರಾಜ್ಯಸಭೆ ಸಭಾಪತಿಗೆ ಮನವಿ ಸಲ್ಲಿಸಿದೆ. ಇದು ಪಕ್ಷಾಂತರ ವಿರೋಧಿ ಕಾನೂನಿನ ಉಲ್ಲಂಘನೆಯಾಗಿದ್ದು, ಅಗತ್ಯಬಿದ್ದರೆ ನ್ಯಾಯಾಲಯದ ಮೊರೆ ಹೋಗುವುದಾಗಿ ಆಪ್ ನಾಯಕ ಸಂಜಯ್ ಸಿಂಗ್ ಎಚ್ಚರಿಸಿದ್ದಾರೆ. 

Read Full Story

06:56 AM (IST) Apr 27

ಭೋಪಾಲ ದುರಂತದ ಐಕಾನಿಕ್‌ ಫೋಟೋ ಕ್ಲಿಕ್ಕಿಸಿದ್ದ ರಘು ನಿಧನ; ಪದ್ಮಶ್ರೀ ಸೇರಿ ಅನೇಕ ಪ್ರಶಸ್ತಿಗಳ ಪುರಸ್ಕೃತ

ಛಾಯಾ ಪತ್ರಿಕೋದ್ಯಮದಲ್ಲಿ ಹೊಸ ಅಧ್ಯಾಯ ಬರೆದ, ಪದ್ಮಶ್ರೀ ಪುರಸ್ಕೃತ ಹಿರಿಯ ಛಾಯಾಗ್ರಾಹಕ ರಘು ರಾಯ್ (83) ಅವರು ಕ್ಯಾನ್ಸರ್‌ನಿಂದ ನಿಧನರಾದರು. ಭೋಪಾಲ್ ಅನಿಲ ದುರಂತ, ಬಾಂಗ್ಲಾ ನಿರಾಶ್ರಿತರ ಬಿಕ್ಕಟ್ಟು ಸೇರಿದಂತೆ ಹಲವು ಐತಿಹಾಸಿಕ ಕ್ಷಣಗಳನ್ನು ತಮ್ಮ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದರು.

Read Full Story

06:12 AM (IST) Apr 27

ಬೈಲಕುಪ್ಪೆಯ ಬೌದ್ಧ ವಿಹಾರದ ಬಗ್ಗೆ ಪ್ರಧಾನಿ ಮೋದಿ ಮೆಚ್ಚುಗೆ - 100 ಎಕರೆ ಕಾಡಲ್ಲಿ 700 ಸ್ಥಳೀಯ ಮರಗಳ ಸಂರಕ್ಷಣೆ

ಪ್ರಧಾನಿ ನರೇಂದ್ರ ಮೋದಿಯವರು ತಮ್ಮ 'ಮನ್‌ ಕೀ ಬಾತ್' ಕಾರ್ಯಕ್ರಮದಲ್ಲಿ, ಕರ್ನಾಟಕದ ಬೈಲಕುಪ್ಪೆ ಬೌದ್ಧವಿಹಾರದ ಪ್ರಕೃತಿ ಸಂರಕ್ಷಣಾ ಕಾರ್ಯವನ್ನು ಶ್ಲಾಘಿಸಿದ್ದಾರೆ. 100 ಎಕರೆ ಕಾಡಿನಲ್ಲಿ 700ಕ್ಕೂ ಹೆಚ್ಚು ಸ್ಥಳೀಯ ಮರಗಳನ್ನು ಸಂರಕ್ಷಿಸಿ, ಪ್ರಕೃತಿಯೊಂದಿಗಿನ ಬೌದ್ಧ ಸಂಪ್ರದಾಯದ ಸಂಬಂಧಕ್ಕೆ ಉತ್ತಮ ಉದಾಹರಣೆಯಾಗಿದೆ.

Read Full Story

05:27 AM (IST) Apr 27

ಅಮೆರಿಕ ಅಧ್ಯಕ್ಷ ಟ್ರಂಪ್ 'ಗುಂಡು' ಪಾರ್ಟಿಯಲ್ಲಿ ಗುಂಡಿನ ಸದ್ದು; ಅಸಲಿಗೆ ಟಾರ್ಗೆಟ್ ಯಾರು?

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾಗವಹಿಸಿದ್ದ ಶ್ವೇತಭವನ ಪತ್ರಕರ್ತರ ಭೋಜನಕೂಟದಲ್ಲಿ ಶಸ್ತ್ರಸಜ್ಜಿತ ವ್ಯಕ್ತಿಯೊಬ್ಬ ಗುಂಡಿನ ದಾಳಿ ನಡೆಸಿದ್ದಾನೆ. ಭದ್ರತಾ ಸಿಬ್ಬಂದಿ ತಕ್ಷಣವೇ ದಾಳಿಕೋರನನ್ನು ಬಂಧಿಸಿದ್ದು, ಟ್ರಂಪ್ ಸೇರಿದಂತೆ ಎಲ್ಲಾ ಗಣ್ಯರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. 

Read Full Story

More Trending News