ಕರ್ನೂಲು : ಶುಕ್ರವಾರ ಕರ್ನೂಲ್‌ನಲ್ಲಿ ಅಗ್ನಿ ಅವಘಡಕ್ಕೀಡಾಗಿ 20 ಮಂದಿಯನ್ನು ಬಲಿ ಪಡೆದ ಹೈದರಾಬಾದ್-ಬೆಂಗಳೂರು ಖಾಸಗಿ ಬಸ್‌ನಲ್ಲಿ 234 ಸ್ಮಾರ್ಟ್‌ಫೋನ್‌ಗಳಿದ್ದವು. ಅವು ಸ್ಫೋಟಗೊಂಡಿದ್ದರಿಂದ ಜ್ವಾಲೆ ಮತ್ತಷ್ಟು ತೀವ್ರವಾಗಿ ವ್ಯಾಪಿಸಿತು ಎಂಬ ಸಂಗತಿ ತನಿಖೆ ವೇಳೆ ಬಹಿರಂಗವಾಗಿದೆ. ಹೈದರಾಬಾದ್ ಮೂಲದ ಉದ್ಯಮಿ ಮಂಗನಾಥ್ ಎಂಬುವವರು ಸುಮಾರು 46 ಲಕ್ಷ ರು. ಬೆಲೆ ಬಾಳುವ 234 ಸ್ಮಾರ್ಟ್‌ಫೋನ್‌ಗಳನ್ನು ಈ ಬಸ್ ಮೂಲಕ ಬೆಂಗಳೂರಿನ ಇ-ಕಾಮರ್ಸ್ ಕಂಪನಿಯೊಂದಕ್ಕೆ ಪಾರ್ಸಲ್ ಮಾಡಿದ್ದರು. ಇವುಗಳ ಬ್ಯಾಟರಿ ಸ್ಫೋಟಗೊಂಡಿದ್ದರಿಂದ ಬೆಂಕಿ ಕೆನ್ನಾಲಿಗೆ ಚಾಚಿತು ಎಂದು ತಿಳಿದುಬಂದಿದೆ. ಬ್ಯಾಟರಿ ಸ್ಫೋಟವಾದ ಸದ್ದನ್ನು ಕೇಳಿದ್ದಾಗಿ ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.

11:02 PM (IST) Oct 26
ಮಹಿಳಾ ವಿಶ್ವಕಪ್; ಭಾರತದ ಗೆಲುವಿನ ಸಂಭ್ರಮಕ್ಕೆ ತಣ್ಣೀರೆರಚಿದ ಮಳೆ, ಪಂದ್ಯ ರದ್ದು ಮಾಡಲಾಗಿದೆ. 27 ಓವರ್‌ಗೆ ಪಂದ್ಯ ಸೀಮಿತಗೊಳಿಸಿ ಭಾರತ ಚೇಸಿಂಗ್ ಮಾಡಿ ಗೆಲುವಿನತ್ತ ಹೆಜ್ಜೆಇಟ್ಟಿತ್ತು. ಆದರೆ ಮಳೆ ವಕ್ಕರಿಸಿ ಪಂದ್ಯವೇ ರದ್ದಾಗಿದೆ.
09:38 PM (IST) Oct 26
Vintage Rolex 6062 auction: ರೋಲೆಕ್ಸ್ ವಾಚ್ ಬಹಳ ದುಬಾರಿ ಬ್ರಾಂಡ್ ಆಗಿದ್ದು, ಇದಕ್ಕೆ ಅಸಲಿ ಮಾರುಕಟ್ಟೆಯಲ್ಲಿ ಲಕ್ಷಾಂತರ ಬೆಲೆ ಇದೆ. ಈಗ ವಿಂಟೇಜ್ ರೋಲೆಕ್ಸ್ ವಾಚೊಂದು ಬರೋಬ್ಬರಿ 6.2 ಮಿಲಿಯನ್ ಯುಎಸ್ ಡಾಲರ್ ಎಂದರೆ 54.5 ಕೋಟಿ ರೂಪಾಯಿಗಳಿಗೆ ಹರಾಜಾಗಿ ಎಲ್ಲರ ಹುಬ್ಬೇರುವಂತೆ ಮಾಡಿದೆ.
08:08 PM (IST) Oct 26
ರೈಲ್ವೆ ಹಳಿಗಳ ಮೇಲಿರುವ ಜಲ್ಲಿ ಕಲ್ಲುಗಳು ರೈಲಿಗೆ ಸುಸಜ್ಜಿತ ಅಡಿಪಾಯವನ್ನು ಒದಗಿಸುತ್ತವೆ. ಇವು ರೈಲಿನ ಭಾರವನ್ನು ನಿರ್ವಹಿಸಿ, ಕಂಪನಗಳನ್ನು ಕಡಿಮೆ ಮಾಡುತ್ತವೆ ಮತ್ತು ಹಳಿಗಳ ಮೇಲೆ ನೀರು ನಿಲ್ಲದಂತೆ ಹಾಗೂ ಕಳೆಗಳು ಬೆಳೆಯದಂತೆ ತಡೆಯುತ್ತವೆ.
07:50 PM (IST) Oct 26
ದೇಶಾದ್ಯಂತ ಮತದಾರರ ಪಟ್ಟಿ ಪರಿಷ್ಕರಣೆ, ನಾಳೆ ಚುನಾವಣಾ ಆಯೋಗದ ಸುದ್ದಿಗೋಷ್ಠಿ ಆಯೋಜಿಸಿದೆ. ಇದೀಗ ಎಲ್ಲರ ಚಿತ್ತ ಈ ಸುದ್ದಿಗೋಷ್ಠಿ ಮೇಲೆ ನೆಟ್ಟಿದೆ. ಬಿಹಾರದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಮಾಡಿರುವ ಆಯೋಗ, ಇದೀಗ ಯಾವ ರಾಜ್ಯದಿಂದ ಆರಂಭಿಸಲಿದೆ?
07:49 PM (IST) Oct 26
chicken gun test: ಸಾಮಾನ್ಯವಾಗಿ ಮನೆ ಕಟ್ಟಿದಾಗ ಕೆಲವೊಂದು ಪ್ರಾಜೆಕ್ಟ್‌ಗಳನ್ನು ಹೊಸದಾಗಿ ಶುರು ಮಾಡುವಾಗ ಕೆಲವರು ಪ್ರಾಣಿಗಳ ಬಲಿ ನೀಡುವುದನ್ನು ನೀವು ನೋಡಿರಬಹುದು ಆದರೆ ವಿಮಾನವೊಂದು ಮೊದಲು ಹಾರಾಟ ಆರಂಭಿಸಲು ಶುರು ಮಾಡಿದಾಗ ಅದರ ಮೇಲೆ ಕೋಳಿಗಳನ್ನು ಎಸೆಯಲಾಗುತ್ತದೆ ಎಂಬ ವಿಚಾರ ನಿಮಗೆ ಗೊತ್ತಾ?
06:59 PM (IST) Oct 26
ಅ.28ಕ್ಕೆ 100 ಕಿ.ಮಿ ವೇಗದಲ್ಲಿ ಅಪ್ಪಳಿಸುತ್ತಿದೆ ಮೊಂಥ ಚಂಡಮಾರುತ, ಮತ್ತೆ ಭಾರಿ ಮಳೆ ಎಚ್ಚರಿಕೆ, ಈಗಾಗಲೇ ದೇಶದ ಹಲೆವೆಡೆ ಭಾರಿ ಮಳೆ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಇದರ ಬೆನ್ನಲ್ಲೇ ಅಕ್ಟೋಬರ್ 28ಕ್ಕೆ ಮೊಂಥಾ ಚಂಡಮಾರುತ ಅಪ್ಪಳಿಸಲಿದೆ. ಇದು ಮತ್ತೆ ಮಳೆ ಅಬ್ಬರ ಹೆಚ್ಚಿಸಲಿದೆ.
06:34 PM (IST) Oct 26
ಪ್ರಧಾನಿ ಮೋದಿ ಅವರ ಚೀನಾ ಭೇಟಿಯ ವೇಳೆ ನಡೆದಿದೆ ಎನ್ನಲಾದ ಹ*ತ್ಯೆಯ ಸಂಚಿನ ಆಘಾತಕಾರಿ ವಿವರಗಳು ಇದೀಗ ಬಹಿರಂಗಗೊಂಡಿವೆ. ಈ ಸಂಚಿಗೂ, ಢಾಕಾದಲ್ಲಿ ಅಮೆರಿಕದ ಅಧಿಕಾರಿಯೊಬ್ಬರ ನಿಗೂಢ ಸಾವಿಗೂ ಸಂಬಂಧ ಕಲ್ಪಿಸಲಾಗಿದ್ದು, ರಷ್ಯಾ ಅಧ್ಯಕ್ಷ ಪುಟಿನ್ ಅವರು ಮೋದಿಯವರ ರಕ್ಷಣೆಗೆ ನಿಂತಿದ್ದರು ಎನ್ನಲಾಗಿದೆ.
06:10 PM (IST) Oct 26
ಕರ್ನೂಲ್ ಬಸ್ ದುರಂತ, ಇಬ್ಬರು ಬೈಕರ್ಸ್ ಸಿಸಿಟಿವಿ ದೃಶ್ಯದಲ್ಲಿ ಅಸಲಿ ಕತೆ ಬಹಿರಂಗ, ಬಸ್ ಹೊತ್ತಿ ಉರಿದು 20 ಮಂದಿ ಮೃತಪಟ್ಟ ಘಟನೆಗೆ ಮುಖ್ಯ ಕಾರಣ ಬೈಕ್. ಅಪಘಾತಕ್ಕೂ ಮುನ್ನ ನಡೆದಿದ್ದೇನು?
05:49 PM (IST) Oct 26
ಚೀನಾ ಮತ್ತು ರಷ್ಯಾ ದೇಶಗಳು ಪಾಶ್ಚಿಮಾತ್ಯ ರಾಷ್ಟ್ರಗಳಿಂದ, ಅದರಲ್ಲೂ ವಿಶೇಷವಾಗಿ ಅಮೆರಿಕದಿಂದ ತಾಂತ್ರಿಕ ಮತ್ತು ಸರ್ಕಾರಿ ರಹಸ್ಯಗಳನ್ನು ಕದಿಯಲು 'ಹನಿಟ್ರ್ಯಾಪ್' ಎಂಬ ಯುದ್ಧವನ್ನು ಆರಂಭಿಸಿವೆ. ಸುಂದರ ಮಹಿಳೆಯರನ್ನು ಬಳಸಿ ಮೋಹದ ಬಲೆಗೆ ಬೀಳಿಸಿ ಮಹತ್ವದ ಮಾಹಿತಿಗಳನ್ನು ಸಂಗ್ರಹಿಸಲಾಗುತ್ತಿದೆ.
05:02 PM (IST) Oct 26
ಐಪಿಎಲ್ 2026ರ ಮಿನಿ ಹರಾಜಿಗೆ ಸಮಯ ಹತ್ತಿರವಾಗ್ತಿದೆ. ಈ ಹಿನ್ನೆಲೆಯಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಯಾವ ಆಟಗಾರರನ್ನು ಬಿಡುಗಡೆ ಮಾಡಲಿದೆ, ಯಾರನ್ನು ಉಳಿಸಿಕೊಳ್ಳಲಿದೆ ಅನ್ನೋ ಬಗ್ಗೆ ಪ್ರಮುಖ ಮಾಹಿತಿ ಹೊರಬಿದ್ದಿದೆ. ಆ ಲಿಸ್ಟ್‌ನಲ್ಲಿ ಯಾರೆಲ್ಲಾ ಇದ್ದಾರೆ ಗೊತ್ತಾ?
04:38 PM (IST) Oct 26
ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿ ಸೋಲಿನ ನಂತರ ಟೀಂ ಇಂಡಿಯಾ ಟಿ20 ಸರಣಿಗೆ ಸಜ್ಜಾಗುತ್ತಿದೆ. ಆದರೆ ಇಂತಹ ಸಮಯದಲ್ಲಿ ಟೀಂ ಇಂಡಿಯಾಗೆ ದೊಡ್ಡ ಹಿನ್ನಡೆಯಾಗಿದೆ. ತಂಡದ ಸ್ಟಾರ್ ಬ್ಯಾಟ್ಸ್‌ಮನ್ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
04:35 PM (IST) Oct 26
reasons for job rejection: ಸಂದರ್ಶನದ ವೇಳೆ ಕೆಲವೊಮ್ಮೆ ನಮಗೆಲ್ಲಾ ಅರ್ಹತೆ ಇದ್ದರೂ ಉದ್ಯೋಗ ಸಿಗುವುದಿಲ್ಲ. ಅದಕ್ಕೇನು ಕಾರಣ? ಇಲ್ಲೊಬ್ಬರು ಮ್ಯಾನೇಜರ್ ಅಭ್ಯರ್ಥಿ ಒಳ್ಳೆಯವನಾಗಿದ್ದರೂ ಏಕೆ ರಿಜೆಕ್ಟ್ ಮಾಡಿದೆ ಎಂಬುದನ್ನು ಹೇಳಿಕೊಂಡಿದ್ದು, ಪೋಸ್ಟ್ ವೈರಲ್ ಆಗಿದೆ.
04:33 PM (IST) Oct 26
ಬಿಗ್ ಬಾಸ್ ಸ್ಪರ್ಧಿಗೆ ಮತ್ತೊಂದು ಸಂಕಷ್ಟ, ನಿಷೇಧಿತ ಪೊಟಾಶ್ ಗನ್ ಬಳಸಿದ ತಾನ್ಯ ವಿರುದ್ಧ ದೂರು, ವಿವಾದಗಳಿಗೆ ಸಿಲುಕಿರುವ ಬಿಗ್ ಬಾಸ್ ಇದೀಗ ಮತ್ತೊಂದು ಸಂಕಷ್ಟದಲ್ಲಿದೆ. ಬಿಗ್ ಬಾಸ್ ಸ್ಪರ್ಧಿಯ ವಿಡಿಯೋ ವೈರಲ್ ಆಗುತ್ತಿದ್ದಂತೆ ದೂರು ನಿವಾಸಿಯೊಬ್ಬರು ದೂರು ನೀಡಿದ್ದಾರೆ.
04:27 PM (IST) Oct 26
ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಸಹ ಸಂಚಾಲಕಿಯಾಗಿದ್ದ ಭವ್ಯಾ ನರಸಿಂಹಮೂರ್ತಿ, ಡೆಹ್ರಾಡೂನ್‌ನಲ್ಲಿ ಮಿಲಿಟರಿ ತರಬೇತಿ ಮುಗಿಸಿ ಲೆಫ್ಟಿನೆಂಟ್ ಆಗಿ ಭಾರತೀಯ ಪ್ರಾದೇಶಿಕ ಸೇನೆಗೆ ಸೇರ್ಪಡೆಗೊಂಡಿದ್ದಾರೆ. 2022ರ ಸಾಲಿನಲ್ಲಿ ದಕ್ಷಿಣ ಭಾರತದಿಂದ ಆಯ್ಕೆಯಾದ ಏಕೈಕ ಮಹಿಳಾ ಅಧಿಕಾರಿ ಇವರಾಗಿದ್ದಾರೆ.
04:16 PM (IST) Oct 26
ಬೆಂಗಳೂರು: ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿ ಮುಕ್ತಾಯವಾಗಿದ್ದು, ಇದೀಗ ಎಲ್ಲರ ಚಿತ್ತ ಟಿ20 ಸರಣಿಯ ಮೇಲೆ ನೆಟ್ಟಿದೆ. ಈ ಸರಣಿಯ ಕಂಪ್ಲೀಟ್ ಡೀಟೈಲ್ಸ್ ಇಲ್ಲಿದೆ ನೋಡಿ.
03:34 PM (IST) Oct 26
ಔರಂಗಬಾದ್ ರೈಲು ನಿಲ್ದಾಣ ಇನ್ನುಮುಂದೆ ಛತ್ರಪತಿ ಸಂಭಾಜಿನಗರ, ಹೊಸ ಕೋಡ್ ಪ್ರಕಟ ಮಾಡಲಾಗಿದೆ. ಮರುನಾಮಕರಣಗೊಂಡ ಮೂರು ವರ್ಷದ ಬಳಿಕ ರೈಲು ನಿಲ್ದಾಣದ ಹೆಸರು ಬದಲಾಗಿದೆ.
03:26 PM (IST) Oct 26
ಕೌನ್ ಬನೇಗಾ ಕರೋಡ್ಪತಿ ಕಾರ್ಯಕ್ರಮದಲ್ಲಿ ಬಾಲಿವುಡ್ ನಟ ಅಮಿತಾಭ್ ಬಚ್ಚನ್, ಡಾ.ರಾಜ್‌ಕುಮಾರ್ ಅವರನ್ನು 'ಕನ್ನಡದ ದೇವರು' ಎಂದು ಬಣ್ಣಿಸಿದ್ದಾರೆ. ರಾಜ್‌ಕುಮಾರ್ ಅವರ ಸರಳ ವ್ಯಕ್ತಿತ್ವವನ್ನು ಕೊಂಡಾಡಿದ ಅವರು, 'ಕೂಲಿ' ಚಿತ್ರದ ಅಪಘಾತದ ಸಮಯದಲ್ಲಿ ರಾಜ್‌ಕುಮಾರ್ ಪ್ರಾರ್ಥಿಸಿದ್ದನ್ನು ಸ್ಮರಿಸಿಕೊಂಡರು.
03:19 PM (IST) Oct 26
02:31 PM (IST) Oct 26
ಮಹಿಳಾ ವಿಶ್ವಕಪ್ ವೇಳೆ ಇಂದೋರ್‌ನಲ್ಲಿ ಆಸ್ಟ್ರೇಲಿಯಾ ಮಹಿಳಾ ಕ್ರಿಕೆಟಿಗರಿಗೆ ಕಿರುಕುಳ ನೀಡಿದ್ದ ಘಟನೆ ನಡೆದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಸಿಸಿಟಿವಿ ದೃಶ್ಯಾವಳಿ ಆಧರಿಸಿ ಓರ್ವ ಆರೋಪಿಯನ್ನು ಬಂಧಿಸಿದ್ದು, ಆತನಿಗೆ ತಕ್ಕ ಶಾಸ್ತಿ ಮಾಡಿದ್ದಾರೆ.
01:41 PM (IST) Oct 26
businessman robbed in Kerala: ಬೆಂಗಳೂರಿನಿಂದ ಕೇರಳಕ್ಕೆ ಪ್ರಯಾಣಿಸುತ್ತಿದ್ದ ಉದ್ಯಮಿಯೊಬ್ಬರು, ಮಾರ್ಗಮಧ್ಯೆ ಟೀ ಕುಡಿಯಲು ವಾಹನ ನಿಲ್ಲಿಸಿದಾಗ 75 ಲಕ್ಷ ರೂಪಾಯಿ ಇದ್ದ ಸೂಟ್‌ಕೇಸ್ ಕಳೆದುಕೊಂಡಿದ್ದಾರೆ. ಕಳ್ಳರು ಬ್ಯಾಗ್ ಸಮೇತ ಪರಾರಿಯಾಗಿದ್ದು, ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
12:28 PM (IST) Oct 26
IRCTCಯು 'ಉತ್ತರ ಕೇರಳ ದೇವಾಲಯ' ಹೆಸರಿನಲ್ಲಿ ವಿಶೇಷ ರೈಲು ಪ್ರವಾಸ ಪ್ಯಾಕೇಜ್ ನೀಡುತ್ತಿದೆ. ಈ ಮೂರು ದಿನಗಳ ಪ್ರವಾಸವು ಕಣ್ಣೂರು ಮತ್ತು ಕಾಸರಗೋಡಿನ ಪ್ರಮುಖ ದೇವಾಲಯಗಳು ಹಾಗೂ ಮುಳಪ್ಪಿಲಂಗಡು ಡ್ರೈವ್-ಇನ್ ಬೀಚ್‌ಗೆ ಭೇಟಿ ನೀಡುವುದನ್ನು ಒಳಗೊಂಡಿದೆ.
12:26 PM (IST) Oct 26
Kurnool bus fire accident: ಬೈಕ್‌ಗೆ ಡಿಕ್ಕಿ ಹೊಡೆದು ಬೆಂಕಿಗಾಹುತಿಯಾಗಿ 20 ಜನರ ಬಲಿ ಪಡೆದ ಕರ್ನೂಲ್ ಎಸಿ ಬಸ್ ದುರಂತದಲ್ಲಿ ಮಡಿದವರದ್ದು ಒಬ್ಬೊಬ್ಬರದ್ದು ಒಂದೊಂದು ಕತೆಯಾಗಿದೆ. ಈ ದುರಂತದಲ್ಲಿ ತಮ್ಮವರನ್ನು ಕಳೆದುಕೊಂಡ ಅನೇಕರ ರೋಧನೆ ನೋಡುಗರ ಕಣ್ಣಂಚನ್ನು ತೇವಗೊಳಿಸಿದೆ.
11:36 AM (IST) Oct 26
Illicit Relationship: ಉಜ್ಮಾ ಎಂಬ ಮಹಿಳೆ ಬರ್ಬರವಾಗಿ ಕೊಲೆಯಾಗಿದ್ದಾರೆ. ಇಬ್ಬರು ವ್ಯಕ್ತಿಗಳೊಂದಿಗೆ ವಿವಾಹೇತರ ಸಂಬಂಧ ಹೊಂದಿದ್ದೇ ಈ ಕೊಲೆಗೆ ಕಾರಣವೆಂದು ಶಂಕಿಸಲಾಗಿದ್ದು, ಮಾಜಿ ಪ್ರಿಯಕರನ ಮೇಲೆ ಅನುಮಾನ ವ್ಯಕ್ತವಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
10:27 AM (IST) Oct 26
Gold Prediction in India: ಭಾರತದಲ್ಲಿ ಸತತ ಏಳು ದಿನಗಳ ಕಾಲ ಇಳಿಕೆ ಕಂಡಿದ್ದ ಚಿನ್ನದ ಬೆಲೆಗೆ ತಾತ್ಕಾಲಿಕ ವಿರಾಮ ಬಿದ್ದಿದೆ. ಕಳೆದ ವಾರದಲ್ಲಿ ಚಿನ್ನದ ಮೇಲೆ ಸುಮಾರು 71,000 ರೂ. ಕುಸಿತವಾಗಿದ್ದು, ಹೂಡಿಕೆದಾರರು ಈಗ ಯುಎಸ್ ಫೆಡರಲ್ ರಿಸರ್ವ್ ಸಭೆಯತ್ತ ಗಮನ ಹರಿಸಿದ್ದಾರೆ.
10:10 AM (IST) Oct 26
ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೂರನೇ ಏಕದಿನ ಪಂದ್ಯದಲ್ಲಿ ಭಾರತ ಭರ್ಜರಿ ಜಯ ಸಾಧಿಸಿದೆ. ಏಕದಿನ ಸರಣಿ ಕೈತಪ್ಪಿದರೂ, ಕೊನೆಯ ಪಂದ್ಯದಲ್ಲಿ ಟೀಂ ಇಂಡಿಯಾ ಆಟಗಾರರ ಅದ್ಭುತ ಪ್ರದರ್ಶನಕ್ಕೆ ಕ್ರಿಕೆಟ್ ಪ್ರೇಮಿಗಳು ಫಿದಾ ಆಗಿದ್ದಾರೆ. ಇನ್ನು ರೋಹಿತ್ ಶರ್ಮಾ ಅಚ್ಚರಿಯ ಹೇಳಿಕೆ ನೀಡಿದ್ದಾರೆ.
09:57 AM (IST) Oct 26
ಮಹಿಳಾ ಏಕದಿನ ವಿಶ್ವಕಪ್‌ನ ಸೆಮಿಫೈನಲ್‌ನಲ್ಲಿ ಭಾರತ ತಂಡವು ಅಂಕಪಟ್ಟಿಯಲ್ಲಿ ಅಗ್ರಸ್ಥಾನಿಯಾಗಿರುವ ಆಸ್ಟ್ರೇಲಿಯಾವನ್ನು ಎದುರಿಸಲಿದೆ. ಈ ಪಂದ್ಯ ಅ.30ರಂದು ನವಿ ಮುಂಬೈನಲ್ಲಿ ನಡೆಯಲಿದ್ದು, ಮತ್ತೊಂದು ಸೆಮಿಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾ ಮತ್ತು ಇಂಗ್ಲೆಂಡ್ ಸೆಣಸಾಡಲಿವೆ.