ರೈಲ್ವೆ ಹಳಿಗಳ ಮೇಲೆ ಜಲ್ಲಿ ಕಲ್ಲುಗಳನ್ನು ಏಕೆ ಹಾಕುತ್ತಾರೆ? ಸ್ವಾರಸ್ಯಕರ ಮಾಹಿತಿ ಇಲ್ಲಿದೆ
ರೈಲ್ವೆ ಹಳಿಗಳ ಮೇಲಿರುವ ಜಲ್ಲಿ ಕಲ್ಲುಗಳು ರೈಲಿಗೆ ಸುಸಜ್ಜಿತ ಅಡಿಪಾಯವನ್ನು ಒದಗಿಸುತ್ತವೆ. ಇವು ರೈಲಿನ ಭಾರವನ್ನು ನಿರ್ವಹಿಸಿ, ಕಂಪನಗಳನ್ನು ಕಡಿಮೆ ಮಾಡುತ್ತವೆ ಮತ್ತು ಹಳಿಗಳ ಮೇಲೆ ನೀರು ನಿಲ್ಲದಂತೆ ಹಾಗೂ ಕಳೆಗಳು ಬೆಳೆಯದಂತೆ ತಡೆಯುತ್ತವೆ.

ಜಲ್ಲಿ ಕಲ್ಲುಗಳು
ರೈಲ್ವೆ ಹಳಿಗಳ ಮೇಲಿರುವ ಸಣ್ಣ ಜಲ್ಲಿ ಕಲ್ಲುಗಳನ್ನು (ಬ್ಯಾಲೆಸ್ಟ್) ಹಾಕಲಾಗಿರುತ್ತದೆ. ಈ ರೀತಿ ಜಲ್ಲಿ ಕಲ್ಲುಗಳನನ್ನು ಏಕೆ ಹಾಕುತ್ತಾರೆಂದು ಎಂದಾದರೂ ಯೋಚಿಸಿದ್ದೀರಾ? ಈ ರೀತಿ ಜಲ್ಲಿ ಕಲ್ಲುಗಳನ್ನು ಹಾಕಲು ಒಂದಲ್ಲ, ಹಲವು ಕಾರಣಗಳಿವೆ. ಆ ಕಾರಣಗಳೇನು ಎಂಬುದರ ಮಾಹಿತಿ ಇಲ್ಲಿದೆ.
ಅಡಿಪಾಯ
ಜಲ್ಲಿ ಕಲ್ಲುಗಳು ಹಳಿಗಳಿಗೆ ಸುಸಜ್ಜಿತವಾದ ಅಡಿಪಾಯವನ್ನು ಒದಗಿಸುತ್ತವೆ. ಈ ಜಲ್ಲಿಕಲ್ಲುಗಳು ರೈಲುಗಳ ಭಾರವನ್ನು ಸಮಾನವಾಗಿ ನಿರ್ವಹಣೆ ಮಾಡಲು ಸಹಾಯ ಮಾಡುತ್ತವೆ. ಹಾಗಾಗಿ ಟ್ರ್ಯಾಕ್ ಅಳವಡಿಕೆಗೂ ಮುನ್ನ ದೊಡ್ಡ ಪ್ರಮಾಣದಲ್ಲಿ ಜಲ್ಲಿಕಲ್ಲುಗಳ ಬೇಸ್ಮೆಂಟ್ ಹಾಕುತ್ತಾರೆ. ಈ ಜಲ್ಲಿ ಕಲ್ಲುಗಳು ಟ್ರ್ಯಾಕ್ ಮೇಲೆ ಮಳೆ ನೀರು ನಿಲ್ಲದಂತೆ ತಡೆಯುತ್ತವೆ. ಈ ಕಲ್ಲುಗಳು ರೈಲು ಹಳಿಗಳು ತುಕ್ಕು ಹಿಡಿಯೋದನ್ನು ತಪ್ಪಿಸುತ್ತವೆ.
ನೈಸರ್ಗಿಕ ಶಾಕ್ ಅಬ್ಸಾರ್ಬರ್
ಜಲ್ಲಿ ಕಲ್ಲುಗಳು ನೈಸರ್ಗಿಕ ಶಾಕ್ ಅಬ್ಸಾರ್ಬರ್ ಆಗಿ ಕಾರ್ಯನಿರ್ವಹಿಸುತ್ತವೆ. ಜಲ್ಲಿಕಲ್ಲುಗಳು ಕಂಪನಗಳನ್ನು ಕಡಿಮೆ ಮಾಡುವ ಸಾಮಾರ್ಥ್ಯವನ್ನು ಹೊಂದಿರುತ್ತವೆ. ಜಲ್ಲಿಕಲ್ಲುಗಳು ಯಾವ ತೇವಾಂಶವನ್ನು ಸಹ ಹಿಡಿದಿಟ್ಟುಕೊಳ್ಳಲ್ಲ. ಹಳಿಗಳ ಮಧ್ಯೆ ಕಳೆಗಳು ಬೆಳೆಯುವುದನ್ನು ಜಲ್ಲಿಕಲ್ಲುಗಳು ತಡೆಯುತ್ತವೆ.
ಸ್ವಚ್ಛತೆ ಸುಲಭ
ಜಲ್ಲಿ ಕಲ್ಲುಗಳ ನಿರ್ವಹಣೆ ಮಾಡೋದು ಸುಲಭದ ಕೆಲಸವಾಗಿದೆ. ಹಳಿಗಳನ್ನು ಸರಿಪಡಿಸುವಾಗ ಜಲ್ಲಿಕಲ್ಲುಗಳ ಸುಲಭವಾಗಿ ತೆಗೆದು ರಿಪೇರಿ ಮಾಡಬಹುದಾಗಿದೆ. ಹಾಗಾಗಿ ಇವುಗಳ ನಿರ್ವಹಣೆಗೆ ಹೆಚ್ಚಿನ ಶ್ರಮದ ಅಗತ್ಯವಾಗಿರಲ್ಲ. ಸರಳ ಸಾಧನಗಳ ಬಳಿಕ ಜಲ್ಲಿ ಕಲ್ಲುಗಳನ್ನು ನಿರ್ವಹಣೆ ಮಾಡಬಹುದಾಗಿದೆ.
ಇದನ್ನೂ ಓದಿ: ಭಾರತೀಯ ರೈಲಿನ ಮೂಲಕ ವಿದೇಶ ಪ್ರಯಾಣ; ಯಾವೆಲ್ಲಾ ದೇಶಗಳಿಗೆ ಹೋಗಬಹುದು?
ಎಷ್ಟು ವರ್ಷಕ್ಕೊಮ್ಮೆ ಬದಲಾವಣೆ?
ಸಾಮಾನ್ಯವಾಗಿ 8 ರಿಂದ 10 ವರ್ಷಗಳಿಗೊಮ್ಮೆ ಜಲ್ಲಿಕಲ್ಲುಗಳನ್ನು ಬದಲಾವಣೆ ಮಾಡಲಾಗುತ್ತದೆ. ಜಲ್ಲಿಕಲ್ಲುಗಳನ್ನು ಸ್ವಚ್ಛಗೊಳಿಸಲಾಗುತ್ತೆ, ಕೆಲವು ಬಾರಿ ಇಡೀ ಜಲ್ಲಿಕಲ್ಲುಗಳು ತೆಗೆದು ಹೊಸದಾಗಿ ಅಳವಡಿಸಲಾಗುತ್ತದೆ. ರೈಲುಗಳ ಚಲನೆಗೆ ಜಲ್ಲಿಕಲ್ಲುಗಳು ಭದ್ರ ಬುನಾದಿಯಾಗಿವೆ.
ಇದನ್ನೂ ಓದಿ: ಇಲ್ಲಿ ಏಕಕಾಲದಲ್ಲಿ 2 ಜಿಲ್ಲೆಗಳಲ್ಲಿ ನಿಲುಗಡೆಯಾಗುತ್ತೆ ರೈಲು: ಭಾರತೀಯ ರೈಲ್ವೆಯ ವಿಶೇಷ ನಿಲ್ದಾಣ