ಕರ್ನೂಲ್ ಬಸ್ ದುರಂತ, ಇಬ್ಬರು ಬೈಕರ್ಸ್ ಸಿಸಿಟಿವಿ ದೃಶ್ಯದಲ್ಲಿ ಅಸಲಿ ಕತೆ ಬಹಿರಂಗ, ಬಸ್ ಹೊತ್ತಿ ಉರಿದು 20 ಮಂದಿ ಮೃತಪಟ್ಟ ಘಟನೆಗೆ ಮುಖ್ಯ ಕಾರಣ ಬೈಕ್. ಅಪಘಾತಕ್ಕೂ ಮುನ್ನ ನಡೆದಿದ್ದೇನು?

ಕರ್ನೂಲ್ (ಅ.26) ಕರ್ನೂಲ್ ಬಸ್ ದುರಂತದ ಸಾವು ನೋವು ಮನಕಲಕುವಂತಿದೆ. ಬಸ್ ದುರಂತದಲ್ಲಿ ಮಡಿದವರ ಕುಟುಂಬಸ್ಥರ ನೋವು, ಕಣ್ಣೀರು ನೋಡಲು ಸಾಧ್ಯವಾಗದ ಪರಿಸ್ಥಿತಿ. ಬಸ್ ದುರಂತದಲ್ಲಿ 20 ಪ್ರಯಾಣಿಕರು ದುರಂತ ಅಂತ್ಯಕಂಡಿದ್ದಾರೆ. ಈ ಬಸ್ ದುರಂತಕ್ಕೆ ಮುಖ್ಯ ಕಾರಣ ಬೈಕ್. ಬಸ್ ಏಕಾಏಕಿ ಬೆಂಕಿ ಹೊತ್ತಿಕೊಂಡು ನಿದ್ರೆಯಲ್ಲಿದ್ದ ಪ್ರಯಾಣಿಕರು ಅತ್ತ ಹೊರಬಲು ಸಾಧ್ಯವಾಗದೆ ಸಜೀವ ದಹನವಾಗಿದ್ದಾರೆ. ಈ ದುರಂತಕ್ಕೂ ಮುನ್ನ ನಡೆದಿರುವುದು ಸಿಸಿಟಿವಿಯಲ್ಲಿ ಬಹಿರಂಗವಾಗಿದೆ.

ಬೈಕರ್ಸ್ ಸಿಸಿಟಿವಿ ದೃಶ್ಯ ಬಹಿರಂಗ

ಒಂದು ಬೈಕ್‌ನಲ್ಲಿ ಇಬ್ಬರು ಪ್ರಯಾಣಿಸಿದ್ದಾರೆ. ಬೈಕ್ ಡಿವೈಡರ್‌ಗೆ ಬಡಿದು ಅಪಘಾತವಾಗಿದೆ. ಅಪಘಾತವಾಗಿ ರಸ್ತೆಮೇಲಿದ್ದ ಬೈಕ್ ಮೇಲೆ ಬಸ್ ಹರಿದ ಕಾರಣ ಬೆಂಕಿಯ ಕಿಡಿ ಹೊತ್ತಿಕೊಂಡು ಇಡೀ ಬಸ್ ಭಸ್ಮವಾಗಿದೆ. ಈ ಬೈಕ್ ರಸ್ತೆ ಮೇಲೆ ಅಪಘಾತವಾಗಿ ಬೀಳಲು ಕಾರಣ ಮದ್ಯ ಕುಡಿದು ರೈಡಿಂಗ್. ಶಿವಶಂಕರ್ ಹಾಗೂ ಏರಿಸ್ವಾಮಿ ಇಬ್ಬರು ಬೈಕ್ ಮೇಲೆ ತೆರಳಿದ್ದಾರೆ. ಇಬ್ಬರು ಕಂಠಪೂರ್ತಿ ಕುಡಿದು ಬೈಕ್ ಮೇಲೆ ತೂರಾಡುತ್ತಾ ಸಾಗಿದ್ದಾರೆ. ಇಬ್ಬರು ಮದ್ಯದ ಅಂಗಡಿಯಿಂದ ಮದ್ಯ ಖರೀದಿಸಿದ ಸಿಸಿಟಿವಿ ಫೂಟೇಜ್ ಪೊಲೀಸರಿಗೆ ಲಭ್ಯವಾಗಿದೆ.

ಸಿಸಿಟಿವಿ ವಿಡಿಯೋದಲ್ಲಿ ಬಹಿರಂಗ

ಶಿವಶಂಕರ್ ತುಸು ಹೆಚ್ಚೇ ಕುಡಿದಿದ್ದ. ಮದ್ಯದ ಅಂಗಡಿಯಿಂದ ಮದ್ಯ ಖರೀದಿಸಿ ಕುಡಿದ ಬಳಿಕ ಪೆಟ್ರೋಲ್ ಬಂಕ್‌ಗೆ ತೆರಳಿದ್ದಾರೆ. ಅಷ್ಟರವೇಳೆಗೆ ಮದ್ಯದ ಅಮಲು ತಲೆಗೆ ಹತ್ತಿದೆ. ಪೆಟ್ರೋಲ್ ಬಂಕ್‌ನಿಂದ ಬೈಕ್ ಹತ್ತಲು ಪ್ರಯಾಸ ಪಟ್ಟಿದ್ದ ಇಬ್ಬರು ತೂರಾಡುತ್ತಾ ತೆರಳಿದ್ದಾರೆ. ಲಕ್ಷ್ಮಿಪುರದಿಂದ ರಾತ್ರಿ 2 ಗಂಟೆಗೆ ಬೈಕ್ ಮೇಲೆ ತೆರಳಿದ ಇಬ್ಬರು ಅಪಾಯಾಕಾರಿ ರೀತಿಯಲ್ಲಿ ರೈಡಿಂಗ್ ಮಾಡಿದ್ದಾರೆ. ಶಿವಶಂಕರ್ ಬೈಕ್ ರೈಡ್ ಮಾಡುತ್ತಿದ್ದರೆ, ಎರಿಸ್ವಾಮಿ ಹಿಂಬದಿಯಲ್ಲಿ ಕುಳಿತಿದ್ದರು. ಹೆದ್ದಾರಿಯಲ್ಲಿ ಸಾಗುತ್ತಿದ್ದಂತೆ ಶಿವಶಂಕರ್ ನಿಯಂತ್ರಣ ಕಳೆದುಕೊಂಡಿದ್ದಾರೆ. ಬೈಕ್ ಡಿವೈಡರ್‌ಗೆ ಡಿಕ್ಕಿ ಹೊಡೆದು ಇಬ್ಬರು ರಸ್ತೆಗೆ ಬಿದ್ದಿದ್ದಾರೆ. ಎರಿಸ್ವಾಮಿ ಮಾರುದ್ದ ದೂರಕ್ಕೆ ಚಿಮ್ಮಿದ್ದರು, ಶಿವಶಂಕರ್ ಡಿವೈಡರ್‌ಗೆ ಬಡಿದಿದ್ದಾನೆ. ಸ್ಥಳದಲ್ಲೆ ಶಿವಶಂಕರ್ ಮೃತಪಟ್ಟರೆ, ಏರಿಸ್ವಾಮಿ ತೀವ್ರಗಾಯದಿಂದ ರಸ್ತೆ ಪಕ್ಕದಲ್ಲೇ ಬಿದ್ದಿದ್ದಾನೆ.

Scroll to load tweet…

ಡ್ರಿಂಕ್ ಅ್ಯಂಡ್ ಡ್ರೈವ್

ಡಿವೈಡರ್‌ಗೆ ಡಿಕ್ಕಿಯಾಗಿ ರಸ್ತೆಯಲ್ಲಿ ಬಿದ್ದಿದ್ದ ಬೈಕ್ ಮೇಲೆ ಬಸ್ ಹರಿದಿದೆ. ರಸ್ತೆಯಲ್ಲಿ ಬೈಕ್ ಎಳೆದುಕೊಂಡು ಸಾಗಿದಾಗ ಹೊತ್ತಿಕೊಂಡ ಕಿಡಿಯಿಂದ ಬಸ್ ಹೊತ್ತಿ ಉರಿದಿದೆ. ಏರಿಸ್ವಾಮಿ ಇದೀಗ ಪೊಲೀಸ್ ಕಸ್ಟಡಿಲ್ಲಿದ್ದಾರೆ. ಈ ಘಟನೆಯಿಂದ ಡ್ರಿಂಕ್ ಅಂಡ್ ಡ್ರೈವ್ ಅತ್ಯಂತ ಗಂಭೀರವಾಗಿ ಪರಿಗಣಿಸಲು ಪೊಲೀಸರು ನಿರ್ಧರಿಸಿದ್ದಾರೆ. ಹೈದರಾಬಾದ್ ಪೊಲೀಸರು ಡ್ರಿಂಕ್ ಅಂಡ್ ಡ್ರೈವ್ ಗಂಭೀರ ಪ್ರಕರಣ, ದಂಡ ಮಾತ್ರವಲ್ಲ ಜೈಲು ಶಿಕ್ಷೆಯನ್ನು ಕಠಿಣಗೊಳಿಸಲು ನಿರ್ಧರಿಸಿದ್ದಾರೆ.