ಮಹಿಳಾ ವಿಶ್ವಕಪ್; ಭಾರತದ ಗೆಲುವಿನ ಸಂಭ್ರಮಕ್ಕೆ ತಣ್ಣೀರೆರಚಿದ ಮಳೆ, ಪಂದ್ಯ ರದ್ದು ಮಾಡಲಾಗಿದೆ. 27 ಓವರ್‌ಗೆ ಪಂದ್ಯ ಸೀಮಿತಗೊಳಿಸಿ ಭಾರತ ಚೇಸಿಂಗ್ ಮಾಡಿ ಗೆಲುವಿನತ್ತ ಹೆಜ್ಜೆಇಟ್ಟಿತ್ತು. ಆದರೆ ಮಳೆ ವಕ್ಕರಿಸಿ ಪಂದ್ಯವೇ ರದ್ದಾಗಿದೆ.
ನವಿ ಮುಂಬೈ (ಅ.26) ಮಹಿಳಾ ವಿಶ್ವಕಪ್ ಟೂರ್ನಿ ಅಂತಿಮ ಲೀಗ್ ಪಂದ್ಯ ಫಲಿತಾಂಶ ಕಾಣದೇ ರದ್ದಾಗಿದೆ. ಭಾರತ ಹಾಗೂ ಬಾಂಗ್ಲಾದೇಶ ನಡುವಿನ ಪಂದ್ಯ ರೋಚಕ ಘಟ್ಟ ತಲುಪಿತ್ತು. ಭಾರತ ಗೆಲುವಿನತ್ತ ಹೆಜ್ಜೆ ಇಟ್ಟಿತ್ತು. ಆದರೆ ಮಳೆ ವಕ್ಕರಿಸಿದ ಕಾರಣ ಪಂದ್ಯವೇ ರದ್ದಾಗಿದೆ. ಭಾರಿ ಮಳೆಯಿಂದ ಪಂದ್ಯವನ್ನು 27 ಓವರ್‌ಗೆ ಸೀಮಿತಗೊಳಿಸಲಾಗಿತ್ತು. ಬಾಂಗ್ಲಾದೇಶ 119 ರನ್ ಸಿಡಿಸಿತ್ತು. ಈ ಗುರಿ ಚೇಸ್ ಮಾಡಲು ಕಣಕ್ಕಿಳಿದ ಭಾರತ 8.4 ಓವರ್‌ನಲ್ಲಿ ವಿಕೆಟ್ ನಷ್ಟವಿಲ್ಲದೆ 57 ರನ್ ಸಿಡಿಸಿತ್ತು. ಈ ವೇಳೆ ಸುರಿದ ಮಳೆಯಿಂದ ಪಂದ್ಯ ರದ್ದುಗೊಂಡಿತು. ಇದರಿಂದ ಎರಡೂ ತಂಡಗಳು ಒಂದೊಂದು ಅಂಕ ಹಂಚಿಕೊಂಡಿತು.
ಭಾರತದ ದಾಳಿಗೆ ಕುಸಿದ ಬಾಂಗ್ಲಾದೇಶ
ಭಾರತದ ದಾಳಿಗೆ ಬಾಂಗ್ಲಾದೇಶ ದಿಟ್ಟ ಬ್ಯಾಟಿಂಗ್ ಪ್ರದರ್ಶನ ನೀಡಲು ವಿಫಲಗೊಂಡಿತ್ತು. ಇದರ ನಡುವೆ ಮಳೆಯಿಂದ ಕೆಲ ಕಾಲ ಪಂದ್ಯ ಸ್ಥಗಿತಗೊಂಡಿತ್ತು. ಹೀಗಾಗಿ 50 ಓವರ್ ಪಂದ್ಯ 27 ಓವರ್‌ಗೆ ಸೀಮಿತಗೊಳಿಸಲಾಗಿತ್ತು. ಕೊನೆಯಲ್ಲಿ ಭಾರತ 9 ವಿಕೆಟ್ ಕಳೆದುಕೊಂಡು 119 ರನ್ ಸಿಡಿಸಿತ್ತು. ರಾಧಾ ಯಾದವ್ 3, ಶ್ರೀ ಚಾರ್ನಿ 2 ವಿಕೆಟ್ ಕಬಳಿಸಿದ್ದರು.
ಸ್ಮೃತಿ-ಅಮನಜೋತ್ ಜೊತೆಯಾಟ
120 ರನ್ ಟಾರ್ಗೆಟ್ ಚೇಸ್ ಮಾಡಲು ಕಣಕ್ಕಿಳಿದ ಭಾರತ ಮಹಿಳಾ ತಂಡಕ್ಕೆ ಸ್ಮೃತಿ ಮಂಧನಾ ಹಾೂ ಅಮನಜೋತ್ ಕೌರ್ ಉತ್ತಮ ಜೊತೆಯಾಟ ನೀಡಿದರು. ಅಂಧನಾ 27 ಎಸೆತದಲ್ಲಿ ಅಜೇಯ 34 ರನ್ ಸಿಡಿಸಿದರೆ, ಅಮನಜೋತ್ 25 ಎಸೆತದಲ್ಲಿ 15 ರನ್ ಸಿಡಿಸಿದ್ದರು. 8.4 ಓವರ್‌ನಲ್ಲಿ ಭಾರತ 57 ರನ್ ಸಿಡಿಸಿ ಗೆಲುವಿನ ಹಾದಿಯಲ್ಲಿತ್ತು. ಮತ್ತೆ ಮಳೆ ಪಂದ್ಯಕ್ಕೆ ಅಡ್ಡಿಯಾಯಿತು. ಹೀಗಾಗಿ ಪಂದ್ಯ ರದ್ದು ಮಾಡಲಾಗಿದೆ.
ಭಾರತ-ಆಸ್ಟ್ರೇಲಿಯಾ ಸೆಮಿಫೈನಲ್ ಪಂದ್ಯ
ಬಾಂಗ್ಲಾದೇಶ ಪಂದ್ಯಕ್ಕೂ ಮೊದಲೆ ಸೆಮಿಫೈನಲ್ ಪ್ರವೇಶಿಸಿದ್ದ ಭಾರತ ಮಹಿಳಾ ತಂಡ, ರದ್ದಾದ ಪಂದ್ಯದಿಂದ ಪಡೆದ ಒಂದು ಅಂಕದಿಂದ ಭಾರತದ ಸ್ಥಾನ ಬದಲಾಗಿಲ್ಲ. ಭಾರತ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಅಕ್ಟೋಬರ್ 30 ರಂದು ನಡೆಯಲಿರುವ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಭಾರತ , ಬಲಿಷ್ಠ ಆಸ್ಟ್ರೇಲಿಯಾ ವಿರುದ್ದ ಹೋರಾಟ ನಡೆಸಲಿದೆ. ಅಕ್ಟೋಬರ್ 29 ರಂದು ನಡೆಯಲಿರುವ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ಹಾಗೂ ಸೌತ್ ಆಫ್ರಿಕಾ ಹೋರಾಟ ನಡೆಸಲಿದೆ.
