reasons for job rejection: ಸಂದರ್ಶನದ ವೇಳೆ ಕೆಲವೊಮ್ಮೆ ನಮಗೆಲ್ಲಾ ಅರ್ಹತೆ ಇದ್ದರೂ ಉದ್ಯೋಗ ಸಿಗುವುದಿಲ್ಲ. ಅದಕ್ಕೇನು ಕಾರಣ? ಇಲ್ಲೊಬ್ಬರು ಮ್ಯಾನೇಜರ್ ಅಭ್ಯರ್ಥಿ ಒಳ್ಳೆಯವನಾಗಿದ್ದರೂ ಏಕೆ ರಿಜೆಕ್ಟ್ ಮಾಡಿದೆ ಎಂಬುದನ್ನು ಹೇಳಿಕೊಂಡಿದ್ದು, ಪೋಸ್ಟ್ ವೈರಲ್ ಆಗಿದೆ.

ಅಭ್ಯರ್ಥಿ ಒಳ್ಳೆಯವನಾಗಿದ್ದರೂ ರಿಜೆಕ್ಟ್ ಮಾಡಿದ್ದು ಏಕೆ?

ಸಾಮಾನ್ಯವಾಗಿ ಉದ್ಯೋಗ ಸಂದರ್ಶನದ ವೇಳೆ ಕೆಲವೊಮ್ಮೆ ನಮಗೆಲ್ಲಾ ಅರ್ಹತೆ ಇದ್ದರೂ ಉದ್ಯೋಗ ಮಾತ್ರ ಸಿಗುವುದಿಲ್ಲ. ಅನೇಕರು ಈ ಬಗ್ಗೆ ಹೇಳಿಕೊಂಡು ಬೇಸರಿಸುವುದುಂಟು. ಆದರೆ ಈಗ ಇಲ್ಲೊಬ್ಬರು ಮ್ಯಾನೇಜರ್ ಅಭ್ಯರ್ಥಿ ಒಳ್ಳೆಯವನಾಗಿದ್ದರೂ ಏಕೆ ರಿಜೆಕ್ಟ್ ಮಾಡಿದೆ ಎಂಬುದನ್ನು ಹೇಳಿಕೊಂಡಿದ್ದು, ಅವರ ಪೋಸ್ಟ್ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ. ಅನೇಕರು ಈ ಬಗ್ಗೆ ಸಾಕಷ್ಟ ಚರ್ಚೆ ಮಾಡಿ ಪರ ವಿರೋಧದ ಕಾಮೆಂಟ್ ಮಾಡಿದ್ದಾರೆ. ಹಾಗಿದ್ರೆ ಅವರು ಒಳ್ಳೆಯ ಕ್ಯಾಂಡಿಟೇಟ್ ಆಗಿದ್ರು ರಿಜೆಕ್ಟ್ ಮಾಡಿದ್ದು ಯಾಕೆ ಅಭ್ಯರ್ಥಿಯನ್ನು ತಿರಸ್ಕರಿಸುವುದಕ್ಕೆ ಅವರು ನೀಡಿದ ಕಾರಣ ಏನು ಎಲ್ಲಾ ಡಿಟೇಲ್ ಈ ಸ್ಟೋರಿಯಲ್ಲಿದೆ ನೋಡಿ...

ಜಿಯೋಗ್ರಾಫಿಕಲ್ ಇನ್‌ಫಾರ್ಮೇಷನ್ ಸಿಸ್ಟಂ ಉದ್ಯೋಗಿಯಾಗಿರುವ ಪ್ರಿಯಾಂಕಾ ಜೋಷಿ ಎಂಬುವವರು ಈ ವಿಚಾರವನ್ನು ಟ್ವಿಟ್ಟರ್‌ನಲ್ಲಿ ಹೇಳಿಕೊಂಡಿದ್ದು ಅವರ ಪೋಸ್ಟ್ ವೈರಲ್ ಆಗಿದೆ. ಅವರು ಯಾಕೆ ಒಳ್ಳೆಯ ಅಭ್ಯರ್ಥಿಯನ್ನು ಕೆಲಸಕ್ಕೆ ಆಯ್ಕೆ ಮಾಡದೇ ತಿರಸ್ಕರಿಸಿದ್ದೇಕೆ ಎಂದು ಹೇಳಿದ್ದಾರೆ. ಇಂದು, ನಾನು ಕೆಲಸದ ಸಂದರ್ಶನದಲ್ಲಿ ಅಭ್ಯರ್ಥಿಯೋರ್ವನನ್ನು ತಿರಸ್ಕರಿಸಬೇಕಾಯಿತು. ಆದರೆ ಅವರು ನಿಜವಾಗಿಯೂ ಒಳ್ಳೆಯ ವ್ಯಕ್ತಿಯಂತೆ ಕಾಣುತ್ತಿದ್ದರು. ಆದರೆ ಆ ಪಾತ್ರಕ್ಕೆ ಅಗತ್ಯವಾದ ಕೌಶಲ್ಯಗಳನ್ನು ಅವರು ಹೊಂದಿರಲಿಲ್ಲ ಎಂದು ಜೋಶಿ ಅವರು ಬರೆದಿದ್ದಾರೆ.

ಅವನ ಹತಾಶೆಯನ್ನು ನಾನು ಅರ್ಥಮಾಡಿಕೊಂಡೆ, ಬಹುಶಃ ಅವನಿಗೆ ಕುಟುಂಬದ ಜವಾಬ್ದಾರಿಗಳಿರಬಹುದು. ಬಹುಶಃ ಇಎಂಐಗಳ ಭಾರ ಅವನ ಮೇಲೆ ಇರಬಹುದು. ಆದರೆ ನನ್ನ ವೃತ್ತಿಯ ವಿಚಾರದಲ್ಲಿ ಕರುಣೆ ನನ್ನ ಮೇಲೆ ಪ್ರಭಾವ ಬೀರಲು ನಾನು ಬಿಡಲಿಲ್ಲ. ಅದು ನನ್ನ ಪಾಲಿಗೆ ಕಠಿಣ ನಿರ್ಧಾರವಾಗಿತ್ತು, ಆದರೆ ಅಗತ್ಯವಾದ ನಿರ್ಧಾರವಾಗಿತ್ತು ಎಂದು ಅವರು ಹೇಳಿದರು.

ಇದೇ ವೇಳೆ ಭಗವದ್ಗೀತೆಯಲ್ಲಿ ಶ್ರೀಕೃಷ್ಣನು ಅರ್ಜುನನಿಗೆ ಬೋಧಿಸಿದ ನಿಷ್ಕಾಮ ಕರ್ಮ ಯೋಗವನ್ನು ಉಲ್ಲೇಖಿಸಿದ ಅವರು, ಅದರಂತೆ ಮನುಷ್ಯ ಯಾವುದೇ ಫಲಾಪೇಕ್ಷೆ ಇಲ್ಲದೇ ಕರ್ತವ್ಯವನ್ನು ನಿರ್ವಹಿಸಬೇಕು. ಈ ಸಂದರ್ಭದಲ್ಲಿ ಕರ್ಮ ಮಾಡುವುದು ಶಿಕ್ಷೆ ಅಥವಾ ಪ್ರತಿಫಲ ಬಯಸಿ ಅಲ್ಲ, ಇದು ಅಪರಾಧ ಅಥವಾ ಯಾವುದೇ ಭಾವನೆಯಿಂದ ಪ್ರಭಾವಿತರಾಗದೆ ನಿಮ್ಮ ಪಾತ್ರ, ಸತ್ಯ ಮತ್ತು ಜವಾಬ್ದಾರಿಗೆ ಅನುಗುಣವಾಗಿ ಕಾರ್ಯನಿರ್ವಹಿಸುವ ಜೋಡಣೆಯ ಬಗ್ಗೆ ಎಂದು ಜೋಶಿ ಭಗವದ್ಗೀತೆಯ ಬೋಧನೆಯನ್ನು ಇಲ್ಲಿ ವಿವರಿಸಿದರು. ನಾನು ನನ್ನ ಕರ್ಮವನ್ನು ಮಾಡಿದ್ದೇನೆ. ಉಳಿದದ್ದು ಹೇಗೋ ಹಾಗೆಯೇ ನಡೆಯಲಿ ಎಂದು ತೀರ್ಮಾನಿಸಿದ್ದಾಗಿ ಅವರು ಬರೆದುಕೊಂಡಿದ್ದಾರೆ.

ಆನ್‌ಲೈನ್‌ನಲ್ಲಿ ಪೋಸ್ಟ್ ವೈರಲ್ ಪರ ವಿರೋಧ ಚರ್ಚೆ

ಈ ಪೋಸ್ಟ್ ಆನ್‌ಲೈನ್‌ನಲ್ಲಿ ಪರ ವಿರೋಧ ಚರ್ಚೆಗೆ ಕಾರಣವಾಯ್ತು. ಕೆಲವು ಬಳಕೆದಾರರು ಜೋಶಿಯವರ ತಾರ್ಕಿಕ ಚಿಂತನೆ ಒಪ್ಪಿಕೊಂಡರೆ, ಇನ್ನು ಕೆಲವರು ಅಭ್ಯರ್ಥಿಯ ಸಾಮರ್ಥ್ಯ ಮತ್ತು ಕಲಿಯುವ ಇಚ್ಛೆ ಪ್ರಸ್ತುತ ಕೌಶಲ್ಯದ ಅಂತರವನ್ನು ಮೀರಿಸುತ್ತದೆ ಎಂದು ವಾದಿಸಿದರು. ಕೆಲಸದ ಸ್ಥಳದಲ್ಲಿ ದಾನ ಧರ್ಮ ಮಾಡಬೇಡಿ. ಅತ್ಯುತ್ತಮ ತಂಡವನ್ನು ಒಟ್ಟುಗೂಡಿಸಿ. ನಿಮ್ಮ ಕೆಲಸ ಅಥವಾ ವ್ಯವಹಾರವನ್ನು ಲಾಭದಾಯಕವಾಗಿಸಿ ನಂತರ ಹೊರಗೆ ಎನ್‌ಜಿಒ ಕೆಲಸ ಮಾಡಿ. ಕೆಲಸ ಒಳ್ಳೆಯದು ಮತ್ತು ಲಾಭದಾಯಕ, ನಾವು ಇತರರಿಗೆ ಇದರಿಂದ ಸಹಾಯ ಮಾಡಬಹುದು ಎಂದು ಒಬ್ಬ ಬಳಕೆದಾರರು ಕಾಮೆಂಟ್ ಮಾಡಿದ್ದಾರೆ.

ಕೆಲವೇ ವಾರಗಳಲ್ಲಿ ಕೆಲಸದ ಕೌಶಲ್ಯಗಳನ್ನು ಕಲಿಯಬಹುದು. ಆದರೆ ಯಾರಾದರೂ ಕೌಶಲ್ಯಪೂರ್ಣರಾಗಿದ್ದರೂ ಕೆಲಸದ ಬಗ್ಗೆ ಕಳಪೆ ಮನೋಭಾವ ಹೊಂದಿದ್ದರೆ, ನಿಮಗೆ ಫಲಿತಾಂಶಗಳು ಸಿಗುವುದಿಲ್ಲ. ಉದ್ದೇಶವನ್ನು ಅಳೆಯಲಾಗುವುದಿಲ್ಲ, ಆದರೆ ಅದು ಸಂದರ್ಶಕರ ಕೆಲಸ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.

ಅಭ್ಯರ್ಥಿಯು ತರಬೇತಿ ಪಡೆಯಲು ಅರ್ಹನಾಗಿದ್ದರೆ ಮತ್ತು ಕೆಲಸದ ಸ್ಥಳದಲ್ಲಿ ಕಲಿಯಲು ಸಿದ್ಧನಿದ್ದರೆ, ಕೌಶಲ್ಯ ಹೊಂದಿರುವ ಆದರೆ ಪ್ರೇರಣೆ ಇಲ್ಲದ ವ್ಯಕ್ತಿಗೆ ಅವಕಾಶ ನೀಡುವ ಬದಲು ಹೊಸಬರಿಗೆ ಅವಕಾಶ ನೀಡುವುದು ಯೋಗ್ಯವಾಗಿದೆ ಎಂದು ನಾನು ಭಾವಿಸುತ್ತೇನೆ. ಅಭ್ಯರ್ಥಿಯು ಅದನ್ನು ಮೆಚ್ಚುತ್ತಾರೆ ಮತ್ತು ನಿಷ್ಠರಾಗಿರುತ್ತಾರೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಅವರು ಹುದ್ದೆಗೆ ಅಗತ್ಯವಾದ ಕೌಶಲ್ಯಗಳನ್ನು ಹೊಂದಿಲ್ಲದಿದ್ದರೆ, ಅವರು ಮೊದಲ ಸ್ಥಾನದಲ್ಲಿ ಸಂದರ್ಶನ ಹಂತವನ್ನು ತಲುಪುತ್ತಿರಲಿಲ್ಲ ಎಂದು ಮತ್ತೊಬ್ಬರು ಹೇಳಿದ್ದಾರೆ.

ಜನರ ಈ ಈ ಕಾಮೆಂಟ್‌ಗಳಿಗೆ ಪ್ರತಿಕ್ರಿಯಿಸಿದ ಪ್ರಿಯಾಂಕಾ ಜೋಶಿ ತಮ್ಮ ಮುಂದಿನ ಪೋಸ್ಟ್‌ನಲ್ಲಿ ಈ ಬಗ್ಗೆ ಸ್ಪಷ್ಟಪಡಿಸಿದ್ದಾರೆ, ತನ್ನ ಆ ಪೋಸ್ಟ್‌ಗೆ ಬಹಳಷ್ಟು ಪ್ರತಿಕ್ರಿಯೆಗಳು - ಕೆಲವು ನೆಗೆಟಿವ್, ಕೆಲವು ಸಕಾರಾತ್ಮಕ ಪ್ರತಿಕ್ರಿಯೆಗಳು ಬಂದಿವೆ. ಆದರೆ ದೀರ್ಘಾವಧಿಯ ಪ್ರಾಜೆಕ್ಟ್ ಆಗಿದ್ದರೆ ನಾನು ಅವನನ್ನು ಕರೆದುಕೊಂಡು ಹೋಗಿ ತರಬೇತಿ ನೀಡಬಹುದಿತ್ತು. ದುರದೃಷ್ಟವಶಾತ್, ಯೋಜನೆ ಚಿಕ್ಕದಾಗಿದೆ, ಮತ್ತು ನನಗೆ ತಕ್ಷಣ ಕೆಲಸಗಳಿಗೆ ಧುಮುಕುವ ಯಾರಾದರೂ ಬೇಕಾಗಿದ್ದರು. ಆದರೆ ಈ ವಿಚಾರದಲ್ಲಿ ಧರ್ಮ ಮತ್ತು ಜಾತಿಯನ್ನು ಹುಡುಕಿದ ನಾನು ಅದರ ಬಗ್ಗೆ ಯೋಚನೆಯೂ ಮಾಡಿರಲಿಲ್ಲ ಎಂದು ಅವರು ಹೇಳಿದ್ದಾರೆ.

Scroll to load tweet…

ಇದನ್ನೂ ಓದಿ: ಬೆಂಗಳೂರು ಟೆಕ್ಕಿಗಳ ಡಬಲ್ ಸಂಪಾದನೆ: ಹಗಲು ಇಂಜಿನಿಯರ್‌ಗಳು ರಾತ್ರಿ..?

ಇದನ್ನೂ ಓದಿ: ಒಂದು ಟೀ ಕುಡಿಯಲು ಹೋಗಿ 75 ಲಕ್ಷ ಕಳೆದುಕೊಂಡ ಉದ್ಯಮಿ