Published : Feb 23, 2026, 06:40 AM ISTUpdated : Feb 23, 2026, 11:06 PM IST

India Latest News Live: ರೋಗಿಯನ್ನು ದೆಹಲಿ ಆಸ್ಪತ್ರೆ ಸಾಗಿಸುತ್ತಿದ್ದ ಮೆಡಿಕಲ್ ಚಾರ್ಟೆಡ್ ವಿಮಾನ ಪತನ, ಹಲವರ ಸಾವು

ಸಾರಾಂಶ

ಪ್ರಯಾಗ್‌ರಾಜ್: ಬಾಲಕರ ಮೇಲಿನ ಲೈಂಗಿಕ ದೌರ್ಜನ್ಯದ ಆರೋಪಗಳ ತನಿಖೆಗಾಗಿ ಬದರಿ ಶಂಕರಾಚಾರ್ಯ ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಇಲ್ಲಿನ ವಿಶೇಷ ಪೋಕ್ಸೋ ನ್ಯಾಯಾಲಯವು ಝುನ್ಸಿ ಪೊಲೀಸರಿಗೆ ಆದೇಶಿಸಿದೆ. ವಿದ್ಯಾಮಠ ಎಂಬ ಆಶ್ರಮದಲ್ಲಿರುವ ವೇದ ವಿದ್ಯಾರ್ಥಿಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಲಾಗಿದೆ ಎಂದು ಆರೋಪಿಸಿ ಅಶುತೋಷ್ ಬ್ರಹ್ಮಚಾರಿ ಮಹಾರಾಜ್ ಮತ್ತು ಇತರರು ದೂರು ಸಲ್ಲಿಸಿದ್ದರು. ನ್ಯಾಯಾಲಯವು ಅರ್ಜಿಯನ್ನು ಸ್ವೀಕರಿಸಿ ಪೊಲೀಸರಿಗೆ ತನಿಖೆ ನಡೆಸುವಂತೆ ಆದೇಶಿಸಿದೆ. ‘ಇದರ ಬೆನ್ನಲ್ಲೇ ಸತ್ಯ ಗೆದ್ದಿದೆ’ ಎಂದು ಮಹಾರಾಜ್ ಪ್ರತಿಕ್ರಿಯಿಸಿದ್ದಾರೆ.

breaking news

11:06 PM (IST) Feb 23

ರೋಗಿಯನ್ನು ದೆಹಲಿ ಆಸ್ಪತ್ರೆ ಸಾಗಿಸುತ್ತಿದ್ದ ಮೆಡಿಕಲ್ ಚಾರ್ಟೆಡ್ ವಿಮಾನ ಪತನ, ಹಲವರ ಸಾವು

ರೋಗಿಯನ್ನು ದೆಹಲಿ ಆಸ್ಪತ್ರೆ ಸಾಗಿಸುತ್ತಿದ್ದ ಮೆಡಿಕಲ್ ಚಾರ್ಟೆಡ್ ವಿಮಾನ ಪತನ, ರಾಂಚಿಯಲ್ಲಿ ವಿಮಾನ ರೇಡಾರ್ ಸಂಪರ್ಕ ಕಡಿದುಕೊಂಡು ಪತನಗೊಂಡಿದೆ. ಈ ವಿಮಾನದಲ್ಲಿ ರೋಗಿ, ವೈದ್ಯರು , ಪೈಲೆಟ್ ಸೇರಿ 7 ಮಂದಿ ಇದ್ದರು.

 

Read Full Story

10:03 PM (IST) Feb 23

ಗಂಟೆಗೆ 1670 KM ವೇಗದಲ್ಲಿ ಭೂಮಿ ತಿರುಗುವ ಅದ್ಭುತ ದೃಶ್ಯ ಸೆರೆ, ಆದ್ರೂ ಅನಭವಕ್ಕೆ ಬರ್ತಿಲ್ಲ ಏಕೆ?

ಗಂಟೆಗೆ 1670 KM ವೇಗದಲ್ಲಿ ಭೂಮಿ ತಿರುಗುವ ಅದ್ಭುತ ದೃಶ್ಯ ಸೆರೆ, ಭೂಮಂಡಲ ಹೇಗೆ ತಿರುಗುತ್ತದೆ ಅನ್ನೋ ಸ್ಪಷ್ಟ ಚಿತ್ರಣ ಸೆರೆ ಹಿಡಿಯಲಾಗಿದೆ. ಆದರೆ ಇಷ್ಟು ವೇಗಗದಲ್ಲಿ ತಿರುಗಿದರೂ ನಮಗೆ ಅನುಭವಕ್ಕೆ ಬರುತ್ತಿಲ್ಲ ಯಾಕೆ?

 

Read Full Story

09:51 PM (IST) Feb 23

ಮಗನ ಜೀವಕ್ಕಿಂತ ಸೀರೆ ಮುಖ್ಯನಾ? ಅಪಾರ್ಟ್‌ಮೆಂಟ್‌ನಿಂದ ಕೆಳಗೆ ಜಾರಿದ ಸೀರೆಗಾಗಿ ಮಹಿಳೆ ಮಾಡಿದ್ದೇನು ನೋಡಿ?

ಹರ್ಯಾಣದ ಫರಿದಾಬಾದ್‌ನ ಅಪಾರ್ಟ್‌ಮೆಂಟ್ ಒಂದರಲ್ಲಿ, ಕೆಳಮಹಡಿಗೆ ಬಿದ್ದ ಸೀರೆಯನ್ನು ತರಲು ತಾಯಿಯೊಬ್ಬಳು ತನ್ನ ಮಗನನ್ನೇ ಮತ್ತೊಂದು ಸೀರೆಯ ಸಹಾಯದಿಂದ ಕೆಳಗೆ ಇಳಿಸಿದ್ದಾಳೆ. ಮಗನ ಜೀವವನ್ನು ಅಪಾಯಕ್ಕೆ ತಳ್ಳಿದ ಈ ಘಟನೆಯ ವೀಡಿಯೋ ವೈರಲ್ ಆಗಿದ್ದು, ತಾಯಿಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ.
Read Full Story

08:42 PM (IST) Feb 23

ಮನೆ ಕೆಲಸದಾಕೆ ಮಾಡಿದ ತಪ್ಪಾದರು ಏನು - ವೀಡಿಯೋ ಮಾಡಿ ಈಕೆನಾ ಕೆಲಸದಿಂದ ತೆಗಿಲಾ ಬೇಡ್ವಾ ಕೇಳಿದ ಮನೆ ಒಡತಿ

ನಗರವೊಂದರಲ್ಲಿ ಮನೆಗೆಲಸದಾಕೆಯೊಬ್ಬಳು ಚಿಕನ್ ಸಾರು ಮಾಡುವಾಗ ಪ್ಲಾಸ್ಟಿಕ್ ಪ್ಯಾಕೆಟ್ ತೆಗೆಯದೆ ಹಾಗೆಯೇ ಅಡುಗೆ ಮಾಡಿ ಎಡವಟ್ಟು ಮಾಡಿದ್ದಾಳೆ. ಈ ಘಟನೆಯ ವಿಡಿಯೋವನ್ನು ಮನೆಯೊಡತಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು, ಆಕೆಯನ್ನು ಕೆಲಸದಲ್ಲಿ ಮುಂದುವರೆಸಬೇಕೇ ಅಥವಾ ಬೇಡವೇ ಎಂದು ಅಭಿಪ್ರಾಯ ಕೇಳಿದ್ದಾರೆ.

Read Full Story

07:55 PM (IST) Feb 23

'ಸ್ಪೀಕರ್​ ಆನ್​ ಇದೆ, ಎಲ್ಲರೂ ಇದ್ದಾರೆ' - ಭಾವಿ ಪತಿಗೆ ಹಿಂಟ್​ ಕೊಟ್ಟು ಪೇಚಿನಲ್ಲಿ​ Rashmika Mandanna- ವಿಡಿಯೋ ವೈರಲ್

ರಶ್ಮಿಕಾ ಮಂದಣ್ಣ ಮತ್ತು ವಿಜಯ ದೇವರಕೊಂಡ ಅವರ ಮದುವೆ ಸುದ್ದಿ ಹರಿದಾಡುತ್ತಿರುವ ಬೆನ್ನಲ್ಲೇ, 'ಅನಿಮಲ್' ಸಿನಿಮಾ ಪ್ರಚಾರದ ವಿಡಿಯೋವೊಂದು ವೈರಲ್ ಆಗಿದೆ. ಸಂದರ್ಶನದಲ್ಲಿ, ರಶ್ಮಿಕಾ ಅವರು ವಿಜಯ್‌ಗೆ ಸ್ಪೀಕರ್ ಫೋನ್‌ನಲ್ಲಿ ಕರೆ ಮಾಡಿದಾಗ ನಡೆದ ತಮಾಷೆಯ ಘಟನೆಯ ಸಂಬಂಧದ ಗುಟ್ಟನ್ನು ಬಹಿರಂಗಪಡಿಸಿದೆ.

Read Full Story

07:53 PM (IST) Feb 23

ತಳ್ಳಬೇಡಿ ಪ್ಲೀಸ್, ಮುತ್ತಿಗೆ ಹಾಕಿದ ಅಭಿಮಾನಿಗಲ್ಲಿ ಮನವಿ ಮಾಡಿಕೊಂಡ ನಟಿ ಸಾಯಿ ಪಲ್ಲವಿ

ತಳ್ಳಬೇಡಿ ಪ್ಲೀಸ್, ಮುತ್ತಿಗೆ ಹಾಕಿದ ಅಭಿಮಾನಿಗಲ್ಲಿ ಮನವಿ ಮಾಡಿಕೊಂಡ ನಟಿ ಸಾಯಿ ಪಲ್ಲವಿ, ವಿಮಾನ ನಿಲ್ದಾಣದಿಂದ ಹೊರಬರುತ್ತಿದ್ದಂತೆ ಅಭಮಾನಿಗಳು ಮುತ್ತಿಕೊಂಡಿದ್ದಾರೆ. ಭದ್ರತಾ ಸಿಬ್ಬಂದಿಗಳು ಹರಸಾಹಸ ಪಡಬೇಕಾಯಿತು.

 

Read Full Story

07:52 PM (IST) Feb 23

ಪಂಜಾಬ್‌ನಲ್ಲಿ ಮತ್ತೊಂದು ಗುಂಡಿನ ದಾಳಿ - ಹಾಡಹಗಲೇ 23 ವರ್ಷದ ನವ ವಿವಾಹಿತೆಗೆ ಗುಂಡೇಟು - CCTVಯಲ್ಲಿ ದೃಶ್ಯ ಸೆರೆ

Newlywed woman shot in Patti: ಪಂಜಾಬ್‌ನ ಪಟ್ಟಿಯಲ್ಲಿ, ಮದುವೆಯಾದ ಕೇವಲ ಎರಡು ತಿಂಗಳಲ್ಲೇ ನವವಿವಾಹಿತೆಯೊಬ್ಬರಿಗೆ ಗುಂಡಿಕ್ಕಲಾಗಿದೆ. ಈ ಭಯಾನಕ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಗಂಭೀರವಾಗಿ ಗಾಯಗೊಂಡಿರುವ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. 

Read Full Story

07:45 PM (IST) Feb 23

'ಇದು ಸೋಲಲ್ಲ, ಭಾರತಕ್ಕೆ ಆದ ಅವಮಾನ' - ಟೀಮ್ ಇಂಡಿಯಾ ಹೀನಾಯ ಸೋಲಿಗೆ ಪಾಕ್ ಮಾಜಿ ಆಟಗಾರರ ಕುಚೋದ್ಯ!

Pakistan Players Mock India's Defeat to South Africa ಟಿ20 ವಿಶ್ವಕಪ್ ಸೂಪರ್-8 ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಭಾರತ 76 ರನ್‌ಗಳ ಹೀನಾಯ ಸೋಲು ಕಂಡಿದೆ. ಈ ಸೋಲನ್ನು ಪಾಕಿಸ್ತಾನದ ಮಾಜಿ ಆಟಗಾರರಾದ ಸಕ್ಲೈನ್ ಮುಷ್ತಾಕ್, ಶೋಯೆಬ್ ಅಖ್ತರ್ ಮತ್ತು ಉಮರ್ ಗುಲ್ ಸಂಭ್ರಮಿಸಿದ್ದಾರೆ.

Read Full Story

07:20 PM (IST) Feb 23

ಛೀ.. ಎಂಥಾ ವಿಕೃತಿ! ಶಿವಾಜಿ ಮಹಾರಾಜ್‌, ರಾಣಿ ಪದ್ಮಿನಿ ಚಿತ್ರವನ್ನು ಶೌಚಾಲಯದ ಚಿಹ್ನೆಗೆ ಬಳಸಿದ ಪ್ರಖ್ಯಾತ ಹೋಟೆಲ್‌!

Portraits of Shivaji Maharaj & Rani Padmini Used as Washroom Signage ಹರಿಯಾಣದ 'ಮಿಲನ್ ಬ್ಯಾಂಕ್ವೆಟ್ ಹಾಲ್' ಶೌಚಾಲಯದ ಬಾಗಿಲುಗಳಿಗೆ ಛತ್ರಪತಿ ಶಿವಾಜಿ ಮಹಾರಾಜ್ ಮತ್ತು ರಾಣಿ ಪದ್ಮಿನಿ ಅವರ ಭಾವಚಿತ್ರಗಳನ್ನು ಸೈನೇಜ್‌ ಆಗಿ ಬಳಸಿ ಭಾರೀ ವಿವಾದ ಸೃಷ್ಟಿಸಿದೆ.

Read Full Story

07:07 PM (IST) Feb 23

Holastak 2026 - ಮಾರ್ಚ್​ 3ರ ಹೋಳಿಯವರೆಗೆ ಈ ಆರು ರಾಶಿಗಳು ಮೈಯೆಲ್ಲಾ ಕಣ್ಣಾಗಿರಿ; ಎಡವಿದರೆ ಅಪಾಯ

ಹೋಳಿ ಹಬ್ಬದ ಹಿಂದಿನ ಎಂಟು ದಿನಗಳಾದ ಹೋಲಾಷ್ಟಕವನ್ನು ಅಶುಭವೆಂದು ಪರಿಗಣಿಸಲಾಗುತ್ತದೆ. 2026 ರಲ್ಲಿ ಫೆಬ್ರವರಿ 24 ರಿಂದ ಮಾರ್ಚ್ 3 ರವರೆಗೆ ಬರುವ ಈ ಅವಧಿಯಲ್ಲಿ, ಗ್ರಹಗಳ ಕೋಪದಿಂದಾಗಿ ಮೇಷ, ಕರ್ಕಾಟಕ ಸೇರಿದಂತೆ ಆರು ನಿರ್ದಿಷ್ಟ ರಾಶಿಯವರು ಅತ್ಯಂತ ಜಾಗರೂಕರಾಗಿರಬೇಕು.
Read Full Story

07:05 PM (IST) Feb 23

ಅವಳು ಹೀಗಿರಬೇಕು, ರಶ್ಮಿಕಾ ಮಂದಣ್ಣಗೆ ವಿಜಯ್ ದೇವರಕೊಂಡ ಪೋಷಕರ ಒಂದು ಕಂಡೀಷನ್

ಅವಳು ಹೀಗಿರಬೇಕು, ರಶ್ಮಿಕಾ ಮಂದಣ್ಣಗೆ ವಿಜಯ್ ದೇವರಕೊಂಡ ಪೋಷಕರ ಒಂದು ಕಂಡೀಷನ್ ಹಾಕಿದ್ದಾರೆ. ಫೆ.26ಕ್ಕೆ ರಶ್ಮಿಕಾ ಮಂದಣ್ಣ ವಿಜಯ್ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ. ಇದಕ್ಕೂ ಮೊದಲೇ ಪೋಷಕರು ಹಾಕಿದ್ದ ಕಂಡೀಷನ್ ಏನು

 

Read Full Story

06:45 PM (IST) Feb 23

ಮತ್ತೆ ಮತ್ತೆ ಕಾಣಿಸುವ ಹೊಟ್ಟೆನೋವು ಗ್ಯಾಸ್ಟಿಕ್ ಅಂತ ನಿರ್ಲಕ್ಷಿಸಿಬೇಡಿ - ಈ ಕಿರುತೆರೆ ನಟಿಗೆ ಏನಾಯ್ತು ನೋಡಿ

ಇತ್ತೀಚೆಗೆ ಪುಟ್ಟ ಮಕ್ಕಳಿಗೂ ಗ್ಯಾಸ್ಟಿಕ್ ಸಮಸ್ಯೆ ಕಾಡುತ್ತದೆ. ಗ್ಯಾಸ್ಟಿಕ್ ಸಮಸ್ಯೆ ಇಲ್ಲದೇ ಇರೋರೆ ಕಡಿಮೆ. ಅನೇಕರು ಹೊಟ್ಟೆನೋವು ಕಾಣಿಸಿಕೊಂಡಾಗ ಗ್ಯಾಸ್ಟಿಕ್ ಎಂದು ತಾವೇ ಯಾವುದಾದರೂ ಗ್ಯಾಸ್ಟಿಕ್ ಮಾತ್ರೆಯನ್ನೋ ಅಥವಾ ಸೀರಪ್ ಅನ್ನೋ ತೆಗೆದುಕೊಂಡು ಸುಮ್ಮನಾಗುವವರೇ ಹೆಚ್ಚು ಆದರೆ..

Read Full Story

06:39 PM (IST) Feb 23

ನಾಳೆಯಿಂದ 8 ದಿನ ಹೋಲಾಷ್ಟಕ - ಈ ಅವಧಿ ಅತ್ಯಂತ ಅಶುಭ ಏಕೆ? ಮಕ್ಕಳಿದ್ದರೆ ಭಾರಿ ಜಾಗ್ರತೆ!

ಹೋಳಿ ಹಬ್ಬಕ್ಕೂ ಮುನ್ನ ಬರುವ ಎಂಟು ದಿನಗಳ ಅವಧಿಯನ್ನು ಹೋಲಾಷ್ಟಕ ಎಂದು ಕರೆಯಲಾಗುತ್ತದೆ. ಈ ಸಮಯದಲ್ಲಿ ಗ್ರಹಗಳ ಸ್ಥಾನವು ಪ್ರತಿಕೂಲವಾಗಿರುವುದರಿಂದ ಮದುವೆ, ಗೃಹಪ್ರವೇಶದಂತಹ ಯಾವುದೇ ಶುಭ ಕಾರ್ಯಗಳನ್ನು ಮಾಡಲಾಗುವುದಿಲ್ಲ. 

Read Full Story

06:14 PM (IST) Feb 23

ನಗರದ ಚರಂಡಿ, ನೀರು ಸರಬರಾಜು ಸರಿಪಡಿಸಲು ಸರ್ಕಾರಕ್ಕೆ 21ಕೆಜಿ ಚಿನ್ನ ದೇಣಿಗೆ ನೀಡಿದ ಅನಾಮಿಕ

ನಗರದ ಚರಂಡಿ, ನೀರು ಸರಬರಾಜು ಸರಿಪಡಿಸಲು ಸರ್ಕಾರಕ್ಕೆ 21ಕೆಜಿ ಚಿನ್ನ ದೇಣಿಗೆ ನೀಡಿದ ಅನಾಮಿಕ, ಈತ ನೀಡಿದ ಚಿನ್ನದ ಮೌಲ್ಯ ಬರೋಬ್ಬರಿ 30 ಕೋಟಿ ರೂಪಾಯಿ. ಕೇವಲ ಒಂದೇ ಒಂದು ಮನವಿ ಮಾಡಿ ಹೆಸರು ಹೇಳದೆ ಈ ದೇಣಿಗೆ ನೀಡಲಾಗಿದೆ.

 

Read Full Story

05:46 PM (IST) Feb 23

ಟೀಂ ಇಂಡಿಯಾ 2 ಪಂದ್ಯ ಗೆದ್ದರೂ ಸೆಮಿಗೇರುವುದು ಗ್ಯಾರಂಟಿ ಇಲ್ಲ! ಭಾರತಕ್ಕೆ ವಿಲನ್ ಆದ ನೆಟ್ ರನ್‌ರೇಟ್!

ದಕ್ಷಿಣ ಆಫ್ರಿಕಾ ವಿರುದ್ಧದ ಹೀನಾಯ ಸೋಲಿನಿಂದಾಗಿ ಟೀಂ ಇಂಡಿಯಾದ ಟಿ20 ವಿಶ್ವಕಪ್ ಸೆಮಿಫೈನಲ್ ಆಸೆ ಕಠಿಣವಾಗಿದೆ. ಸೆಮಿಫೈನಲ್ ಪ್ರವೇಶಿಸಲು ಭಾರತವು ತನ್ನ ಮುಂದಿನ ಎರಡೂ ಪಂದ್ಯಗಳನ್ನು ದೊಡ್ಡ ಅಂತರದಿಂದ ಗೆಲ್ಲಲೇಬೇಕು.  ಇದರ ಜತೆಗೆ ಅದೃಷ್ಟ ಕೂಡಾ ಸೂರ್ಯಕುಮಾರ್ ಯಾದವ್ ಪಡೆಯ ಕೈಹಿಡಿಯಬೇಕಿದೆ.

Read Full Story

05:45 PM (IST) Feb 23

ತಿರುಪತಿಗೆ ಫ್ರಾನ್ಸ್‌ನಿಂದ ಬರಲಿದೆ ಇ-ನಾಲಿಗೆ & ಇ-ನೋಸ್‌, 3.5 ಕೋಟಿ ರೂಪಾಯಿ ಮಷಿನ್‌ ಕೆಲಸವೇನು?

ತಿರುಮಲದಲ್ಲಿ ಭಕ್ತರಿಗೆ ನೀಡುವ ಪ್ರಸಾದ ಮತ್ತು ಆಹಾರದ ಗುಣಮಟ್ಟವನ್ನು ಪರೀಕ್ಷಿಸಲು 25 ಕೋಟಿ ರೂ. ವೆಚ್ಚದಲ್ಲಿ ಅತ್ಯಾಧುನಿಕ ಪ್ರಯೋಗಾಲಯ ನಿರ್ಮಾಣವಾಗುತ್ತಿದೆ. ಫ್ರಾನ್ಸ್‌ನ 'ಇ-ನೋಸ್' ಮತ್ತು 'ಇ-ಟಂಗ್' ಯಂತ್ರಗಳನ್ನು ಹೊಂದಿರುವ ಈ ಲ್ಯಾಬ್, ಭಕ್ತರಲ್ಲಿ ವಿಶ್ವಾಸ ಮೂಡಿಸುವ ಗುರಿ ಹೊಂದಿದೆ.

Read Full Story

05:28 PM (IST) Feb 23

ಏಲಿಯನ್ಸ್​ ಜೊತೆಗೆ ಹಾರುವ ತಟ್ಟೆಗೇ ಕೈಹಾಕಿದ ಟ್ರಂಪ್​! ಬಾಬಾ ವಾಂಗಾ ಭವಿಷ್ಯ ನಿಜವಾಗ್ತಿದ್ಯಾ?

ಏಲಿಯನ್‌ಗಳ ಅಸ್ತಿತ್ವದ ಕುರಿತ ದಶಕಗಳ ಜಿಜ್ಞಾಸೆಗೆ ಹೊಸ ತಿರುವು ಸಿಕ್ಕಿದೆ. ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಯುಎಫ್‌ಒ ಮತ್ತು ಅನ್ಯಜೀವಿಗಳಿಗೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ಬಿಡುಗಡೆ ಮಾಡಲು ಆದೇಶಿಸಿದ್ದಾರೆ. ಈ ಬೆಳವಣಿಗೆಯು ಬಾಬಾ ವಾಂಗಾ ಭವಿಷ್ಯವಾಣಿಯ ಚರ್ಚೆ ಮುನ್ನೆಲೆಗೆ ತಂದಿದೆ.

Read Full Story

05:27 PM (IST) Feb 23

ಪ್ಲಾನ್ ಮುಗಿದರೆ ಇನ್‌ಕಮಿಂಗ್ ಕಾಲ್ ಕಟ್ ಯಾಕೆ? ಸಂಸತ್ತಿನಲ್ಲಿ ಸಂಸದರ ಪ್ರಶ್ನೆಗೆ ಭಾರಿ ಬೆಂಬಲ

ಪ್ಲಾನ್ ಮುಗಿದರೆ ಇನ್‌ಕಮಿಂಗ್ ಕಾಲ್ ಕಟ್ ಯಾಕೆ? ಟೆಲಿಕಾಂ ನೀತಿ, ನಿಯಮಗಳ ಕುರುತಿ ಸಂಸದ ರಾಘವ್ ಚಡ್ಡ ಗಂಭೀರ ಪ್ರಶ್ನೆ ಎತ್ತಿದ್ದಾರೆ. ರಾಘವ ಚಡ್ಡ ಮಾತಿಗೆ ಭಾರಿ ಬೆಂಬಲ ವ್ಯಕ್ತವಾಗುತ್ತಿದೆ.

 

Read Full Story

05:07 PM (IST) Feb 23

ಟಿ20 ವಿಶ್ವಕಪ್‌ - ವೆಸ್ಟ್‌ಇಂಡೀಸ್‌ಗೂ ಶಾಕ್‌ ನೀಡಿ ಗೆಲ್ಲುತ್ತಾ ಜಿಂಬಾಬ್ವೆ?

ಮುಂಬೈ: ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಸೂಪರ್-8 ಹಂತದ ಪಂದ್ಯದಲ್ಲಿಂದು ಅಜೇಯ ತಂಡಗಳಾದ ಜಿಂಬಾಬ್ವೆ ಹಾಗೂ ವೆಸ್ಟ್ ಇಂಡೀಸ್ ತಂಡಗಳು ಮುಖಾಮುಖಿಯಾಗಲಿವೆ. ಈ ಪಂದ್ಯದಲ್ಲೂ ಅಚ್ಚರಿ ಫಲಿತಾಂಶ ಬರುತ್ತಾ ಎನ್ನುವುದನ್ನು ಕಾದು ನೋಡಬೇಕಿದೆ.

Read Full Story

04:50 PM (IST) Feb 23

ಆಕೆಯ ವೆಚ್ಚ ಭರಿಸಲಾಗದು - ಹೆಂಡ್ತಿಯನ್ನೇ ಬಾಡಿಗೆಗೆ ನೀಡುವುದಾಗಿ ಘೋಷಿಸಿದ ಗಂಡ

wife for rent: ತನ್ನ ಹೆಂಡತಿಯ ಖರ್ಚು-ವೆಚ್ಚಗಳನ್ನು ಭರಿಸಲಾಗದೆ ಆಕೆಯನ್ನು ಬಾಡಿಗೆಗೆ ನೀಡುತ್ತಿರುವುದಾಗಿ ಗಂಡನೊಬ್ಬ ಹೇಳಿರುವ ವೀಡಿಯೋ ವೈರಲ್ ಆಗಿದೆ. ಈ ಘಟನೆಯು ತೀವ್ರ ಚರ್ಚೆಗೆ ಗ್ರಾಸವಾಗಿದ್ದು, ಜನರ ಆಕ್ರೋಶಕ್ಕೆ ಕಾರಣವಾಗಿದೆ ಮತ್ತು ನೆಟ್ಟಿಗರು ನಾನಾ ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ.

Read Full Story

04:44 PM (IST) Feb 23

ಮುಸ್ಲಿಂ ಮಹಿಳೆ ಎಂದು ಗೊತ್ತಾಗುತ್ತಿದ್ದಂತೆ ಕೊಟ್ಟ ಹೊದಿಕೆ ಮರಳಿ ಪಡೆ ಮಾಜಿ ಬಿಜೆಪಿ ಶಾಸಕ

ಮುಸ್ಲಿಂ ಮಹಿಳೆ ಎಂದು ಗೊತ್ತಾಗುತ್ತಿದ್ದಂತೆ ಕೊಟ್ಟ ಹೊದಿಕೆ ಮರಳಿ ಪಡೆ ಮಾಜಿ ಬಿಜೆಪಿ ಶಾಸಕ, ಮೋದಿಗೆ ಬಯ್ಯುವವರಿಗ ಹೋದಿಕೆ ಪಡೆಯುವ ಅರ್ಹತೆ ಇಲ್ಲಾ ಎಂದು ಮರಳಿ ಪಡೆದ ಘಟನೆ ನಡೆದಿದೆ. ಇದು ಕೋಲಾಹಲಕ್ಕೆ ಕಾರಣವಾಗಿದೆ.

 

Read Full Story

04:20 PM (IST) Feb 23

ಆತನನ್ನು ಭಾರತ ತಂಡದಿಂದ ಹೊರಗಿಡಲು ಮನಸ್ಸಾದರೂ ಹೇಗೆ ಬಂತು? ಗಂಭೀರ್ ಮೇಲೆ ಕಿಡಿಕಾರಿದ ಮಾಜಿ ಕ್ರಿಕೆಟಿಗ!

ಟಿ20 ವಿಶ್ವಕಪ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಉಪನಾಯಕ ಅಕ್ಷರ್ ಪಟೇಲ್ ಅವರನ್ನು ಕೈಬಿಟ್ಟಿದ್ದಕ್ಕೆ ಕೋಚ್ ಗೌತಮ್ ಗಂಭೀರ್ ವಿರುದ್ಧ ಮಾಜಿ ಸೆಲೆಕ್ಟರ್ ಶ್ರೀಕಾಂತ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಗಂಭೀರ್ ಅವರ ತಲೆಬುಡವಿಲ್ಲದ ತಂತ್ರಗಳಿಂದ ತಂಡಕ್ಕೆ ಹೀನಾಯ ಸೋಲುಂಟಾಗಿದೆ ಎಂದಿದ್ದಾರೆ.

Read Full Story

04:02 PM (IST) Feb 23

ಸಿಂಗರ್ ಕೈಯಲ್ಲಿರೋದು ಪೈಂಟ್ ಡಬ್ಬ ಅಲ್ಲ ಪ್ರತಿಷ್ಠಿತ ಲೂಯಿಸ್ ವಿಟಾನ್ ಬ್ಯಾಗ್, ಇದ್ರ ಬೆಲೆ ಬೆಂಕಿ

ಸಿಂಗರ್ ಕೈಯಲ್ಲಿರೋದು ಪೈಂಟ್ ಡಬ್ಬ ಅಲ್ಲ ಪ್ರತಿಷ್ಠಿತ ಲೂಯಿಸ್ ವಿಟಾನ್ ಬ್ಯಾಗ್, ಸೋಶಿಯಲ್ ಮೀಡಿಯಾದಲ್ಲಿ ಇದು ಏಷ್ಯನ್ ಪೈಂಟ್ಸ್ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ. ಅಚ್ಚರಿ ಎಂದರೆ ಇದರ ಬೆಲೆ.

 

Read Full Story

03:49 PM (IST) Feb 23

ಹುಡುಗಿ ಪಟೀರ್ ಪಟೀರ್ ನಾಲ್ಕು ತಟ್ಟುತ್ತಿದ್ದರೂ, ತುಟಿಪಿಟಿಕ್ ಎನ್ನದೇ ಸೇಲೆಂಟಾಗಿ ಕುಳಿತಿದ್ದ ಲವರ್ ಬಾಯ್!

ಸಾರ್ವಜನಿಕ ರಸ್ತೆಯೊಂದರಲ್ಲಿ ಯುವತಿಯೊಬ್ಬಳು ಯುವಕನಿಗೆ ಪದೇ ಪದೇ ಕಪಾಳಮೋಕ್ಷ ಮಾಡುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ. ಯುವಕ ಮೌನವಾಗಿ ನಿಂತು ಪೆಟ್ಟು ತಿನ್ನುತ್ತಿದ್ದರೆ, ಸ್ಥಳದಲ್ಲಿದ್ದವರು ಇದನ್ನು ವಿಡಿಯೋ ಮಾಡಿದ್ದಾರೆ. ಪೊಲೀಸರು ಈ ಬಗ್ಗೆ ಇನ್ನೂ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ.

Read Full Story

03:37 PM (IST) Feb 23

ಪಾಕ್ ಕಣ್ಣೆದುರೇ 105 ಅಡಿ ಎತ್ತರದಲ್ಲಿ ಹಾರಾಡಿದ ಭಾರತದ ತ್ರಿವರ್ಣ ಧ್ವಜ; ಸಲಾಂ ಹೇಳಿದ ಜನ

ಪಾಕ್ ಕಣ್ಣೆದುರೇ 105 ಅಡಿ ಎತ್ತರದಲ್ಲಿ ಹಾರಾಡಿದ ಭಾರತದ ತ್ರಿವರ್ಣ ಧ್ವಜ; ಸಲಾಂ ಹೇಳಿದ ಜನ, ಶತ್ರುಗಳ ನಿಗಾ ವ್ಯಾಪ್ತಿಯಲ್ಲಿರುವ ಪ್ರದೇಶದಲ್ಲೇ ಈ ಧ್ವಜ ಹಾರಾಡುತ್ತಿದೆ. ಇದರ ಹಿಂದಿನ ಶಕ್ತಿ ಯಾರು?

 

Read Full Story

03:33 PM (IST) Feb 23

ಭಾರತ ತಂಡದಲ್ಲಿ ಸಂಜು ಸ್ಯಾಮ್ಸನ್‌ ಕಂಬ್ಯಾಕ್‌, ತಿಲಕ್‌ ವರ್ಮಾಗೆ ಗೇಟ್‌ಪಾಸ್‌? ಜಿಂಬಾಬ್ವೆ ವಿರುದ್ಧ ಸಂಭಾವ್ಯ XI ಹೀಗಿದೆ

ಟಿ20 ವಿಶ್ವಕಪ್ ಸೂಪರ್ 8 ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಭಾರತ ಹೀನಾಯ ಸೋಲು ಕಂಡಿದೆ. ಇದೀಗ ಭಾರತಕ್ಕೆ ಮುಂದಿನ ಎದುರಾಳಿ ಜಿಂಬಾಬ್ವೆ. ಹೀಗಾಗಿ, ಭಾರತ ತಂಡದಲ್ಲಿ ಬದಲಾವಣೆ ಆಗುತ್ತಾ ಎಂದು ಅಭಿಮಾನಿಗಳು ಎದುರು ನೋಡುತ್ತಿದ್ದಾರೆ. ಸಂಭಾವ್ಯ ಪ್ಲೇಯಿಂಗ್ XI ಇಲ್ಲಿದೆ.

Read Full Story

03:01 PM (IST) Feb 23

ದಾಳಿಗೆ ಅಮೆರಿಕ ಸಿದ್ಧತೆ ಬೆನ್ನಲ್ಲೇ ಇರಾನ್‌ನಲ್ಲಿ ನೆಲೆಸಿರುವ ಭಾರತೀಯರಿಗೆ ಮಹತ್ವದ ಸೂಚನೆ

ದಾಳಿಗೆ ಅಮೆರಿಕ ಸಿದ್ಧತೆ ಬೆನ್ನಲ್ಲೇ ಇರಾನ್‌ನಲ್ಲಿ ನೆಲೆಸಿರುವ ಭಾರತೀಯರಿಗೆ ಮಹತ್ವದ ಸೂಚನೆ ನೀಡಿದೆ. ಭಾರತೀಯ ವಿದೇಶಾಂಗ ಇಲಾಖೆ ಸೂಚನೆ ಬೆನ್ನಲ್ಲೇ ಭಾರತೀಯರು ಇದೀಗ ಭಾರತಕ್ಕೆ ಮರಳಲು ಸಜ್ಜಾಗುತ್ತಿದ್ದಾರೆ.

 

Read Full Story

01:55 PM (IST) Feb 23

Zero Investment - 1 ರೂಪಾಯಿ ಹೂಡಿಕೆಯಿಲ್ಲದೆ ಬಿಸಿನೆಸ್ ಶುರು ಮಾಡಿ! ಟಾಪ್ 5 ಐಡಿಯಾ

Business Ideas: ಹೂಡಿಕೆ ಇಲ್ಲದೆ ಬಿಸಿನೆಸ್ ಶುರು ಮಾಡಲು ಬಯಸುವ ಯುವಕರಿಗೆ ಡಿಜಿಟಲ್ ಜಗತ್ತು ಅನೇಕ ಹೊಸ ಅವಕಾಶಗಳನ್ನು ಸೃಷ್ಟಿಸಿದೆ. ಇದಕ್ಕೆ ದೊಡ್ಡ ಬಂಡವಾಳ ಅಥವಾ ಕಚೇರಿಯ ಅಗತ್ಯವಿಲ್ಲ.

Read Full Story

01:11 PM (IST) Feb 23

47 ವರ್ಷಗಳ ಬಳಿಕ ಒಂದಾದ ದಿಗ್ಗಜರು! ಕಮಲ್-ರಜನಿ ಜೋಡಿಯಿಂದ ಹೊಸ ಅಧ್ಯಾಯದ ಆರಂಭ?

ಬರೋಬ್ಬರಿ 47 ವರ್ಷಗಳ ನಂತರ, ಭಾರತೀಯ ಚಿತ್ರರಂಗದ ದಿಗ್ಗಜರಾದ ಕಮಲ್ ಹಾಸನ್ ಮತ್ತು ರಜನಿಕಾಂತ್ ಮತ್ತೆ ಒಂದಾಗುತ್ತಿದ್ದಾರೆ. ಕಮಲ್ ನಿರ್ಮಾಣದಲ್ಲಿ ರಜನಿಕಾಂತ್ ನಟಿಸಲಿರುವ 173ನೇ ಚಿತ್ರದ ಜೊತೆಗೆ, ನೆಲ್ಸನ್ ನಿರ್ದೇಶನದ 174ನೇ ಚಿತ್ರದಲ್ಲಿ ಇಬ್ಬರೂ ಒಟ್ಟಾಗಿ ತೆರೆ ಹಂಚಿಕೊಳ್ಳಲಿದ್ದಾರೆ.
Read Full Story

01:11 PM (IST) Feb 23

IDFC ಫಸ್ಟ್ ಬ್ಯಾಂಕ್ ಷೇರು ಮಹಾ ಪತನ - ಕೇಂದ್ರ ಸರ್ಕಾರಕ್ಕೆ 1100 ಕೋಟಿ, ಎಲ್‌ಐಸಿಗೆ 340 ಕೋಟಿ ರೂ. ನಷ್ಟ!

IDFC First Bank Share Crash: LIC and Govt Lose Crores After Fraud IDFC ಫಸ್ಟ್ ಬ್ಯಾಂಕ್‌ನಲ್ಲಿ ನಡೆದ ₹590 ಕೋಟಿ ವಂಚನೆಯಿಂದಾಗಿ ಭಾರತ ಸರ್ಕಾರ, ಎಲ್‌ಐಸಿ, ಮತ್ತು ಚಿಲ್ಲರೆ ಹೂಡಿಕೆದಾರರು ಸೇರಿದಂತೆ ಎಲ್ಲರೂ ಸಾವಿರಾರು ಕೋಟಿ ರೂಪಾಯಿ ನಷ್ಟ ಅನುಭವಿಸಿದ್ದಾರೆ. 

Read Full Story

12:53 PM (IST) Feb 23

ಕಾಲಿಗೆ ಗುಂಡು ತಾಗಿದರು ಹಿಂದೆ ಸರಿಯದೇ ಉಗ್ರರ ಸುಳಿವು ನೀಡಿದ ಸೇನಾ ಶ್ವಾನ ಟೈಸನ್

Army dog Tyson: ಕಾಶ್ಮೀರದ ಕಿಶ್ತ್ವಾರ್‌ನಲ್ಲಿ ನಡೆದ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಯಲ್ಲಿ, ಸೇನೆಯ ಸ್ನಿಫರ್ ಶ್ವಾನ 'ಟೈಸನ್' ಗುಂಡೇಟು ತಿಂದರೂ ಧೈರ್ಯದಿಂದ ಉಗ್ರರ ಅಡಗುತಾಣವನ್ನು ಪತ್ತೆಹಚ್ಚಿದೆ. ಈ ಕಾರ್ಯಾಚರಣೆಯಲ್ಲಿ ಮೂವರು ಉಗ್ರರನ್ನು ಹತ್ಯೆ ಮಾಡಲಾಗಿದೆ.

Read Full Story

12:51 PM (IST) Feb 23

ಉದ್ಯೋಗಿಗಳಿಂದಲೇ ಬ್ಯಾಂಕ್‌ಗೆ 590 ಕೋಟಿ ರೂಪಾಯಿ ವಂಚನೆ - ಷೇರು ಮಾರುಕಟ್ಟೆಯಲ್ಲಿ IDFC First Bank ರಕ್ತವಾಂತಿ !

IDFC ಫಸ್ಟ್ ಬ್ಯಾಂಕ್‌ನ ಸಿಬ್ಬಂದಿಯೇ ಸೇರಿ ಹರಿಯಾಣ ಸರ್ಕಾರದ ಖಾತೆಗಳಿಂದ ಸುಮಾರು 590 ಕೋಟಿ ರೂಪಾಯಿ ವಂಚಿಸಿದ್ದಾರೆ. ಈ ಪ್ರಕರಣದಿಂದಾಗಿ ಬ್ಯಾಂಕ್‌ನ ಶೇರುಗಳು ತೀವ್ರ ಕುಸಿತ ಕಂಡಿದ್ದು, ಹರಿಯಾಣ ಸರ್ಕಾರವು ಬ್ಯಾಂಕನ್ನು ಕಪ್ಪುಪಟ್ಟಿಗೆ ಸೇರಿಸಿದೆ. ವಂಚನೆಗೆ ಸಂಬಂಧಿಸಿದಂತೆ ಬ್ಯಾಂಕ್ ತನಿಖೆ ಆರಂಭಿಸಿದೆ.

Read Full Story

12:38 PM (IST) Feb 23

Rashmika Mandanna ಮದ್ವೆ ಸುದ್ದಿ ಬೆನ್ನಲ್ಲೇ ಮಾಜಿ ಸ್ನೇಹಿತ ರಕ್ಷಿತ್​ ಶೆಟ್ಟಿ ಕುತೂಹಲದ ಪೋಸ್ಟ್​ ವೈರಲ್​!

ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಅವರ ಮದುವೆಯ ವದಂತಿಗಳ ನಡುವೆ, ನಟ ರಕ್ಷಿತ್ ಶೆಟ್ಟಿ ಅವರೊಂದಿಗಿನ ರಶ್ಮಿಕಾಳ ಹಿಂದಿನ ನಿಶ್ಚಿತಾರ್ಥದ ವಿಷಯ ಮತ್ತೆ ಮುನ್ನೆಲೆಗೆ ಬಂದಿದೆ.  ರಕ್ಷಿತ್ ಮಾಡಿದ್ದ ಸೋಷಿಯಲ್ ಮೀಡಿಯಾ ಪೋಸ್ಟ್ ಇದೀಗ ಮತ್ತೆ ವೈರಲ್ ಆಗುತ್ತಿದ್ದು, ಆಗಿನ ಘಟನೆಗಳನ್ನು ನೆನಪಿಸುತ್ತಿದೆ.

Read Full Story

12:10 PM (IST) Feb 23

ಟಿ20 ವಿಶ್ವಕಪ್ - ದಕ್ಷಿಣ ಆಫ್ರಿಕಾ ಎದುರು ಟೀಂ ಇಂಡಿಯಾ ಸೋತಿದ್ದು ಹೇಗೆ? ಇಲ್ಲಿವೆ ಆರು ಇಂಟ್ರೆಸ್ಟಿಂಗ್ ಕಾರಣಗಳು!

ಟಿ20 ವಿಶ್ವಕಪ್‌ನ ಸೂಪರ್-8 ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಭಾರತ ಹೀನಾಯ ಸೋಲು ಕಂಡಿದೆ. ಈ ಸೋಲಿನ ಬೆನ್ನಲ್ಲೇ ಟೀಂ ಇಂಡಿಯಾ ವಿರುದ್ಧ ಭಾರೀ ಟೀಕೆಗಳು ವ್ಯಕ್ತವಾಗುತ್ತಿವೆ. ಭಾರತದ ಸೋಲಿಗೆ ಕಾರಣವಾದ ಪ್ರಮುಖ ಅಂಶಗಳೇನು ನೋಡೋಣ.

 

Read Full Story

10:59 AM (IST) Feb 23

ನೇಪಾಳದಲ್ಲಿ ತ್ರಿಶೂಲಿ ನದಿಗುರುಳಿದ ಬಸ್ 18 ಜನ ಸಾವು

ನೇಪಾಳದ ಧಾಡಿಂಗ್‌ನಲ್ಲಿ ಪ್ರಯಾಣಿಕರ ಬಸ್ಸೊಂದು ತ್ರಿಶೂಲಿ ನದಿಗೆ ಉರುಳಿಬಿದ್ದ ಪರಿಣಾಮ ಕನಿಷ್ಠ 18 ಜನರು ಸಾವನ್ನಪ್ಪಿದ್ದು, 24ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ನಸುಕಿನ ಜಾವ ನಡೆದ ಈ ದುರಂತದ ನಂತರ, ಭದ್ರತಾ ಸಿಬ್ಬಂದಿ ಮತ್ತು ವಿಪತ್ತು ನಿರ್ವಹಣಾ ತಂಡಗಳು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿವೆ.

Read Full Story

10:27 AM (IST) Feb 23

ಬೆಂಗಾಳಿ ರಾಜಕಾರಣದ ಚಾಣಕ್ಯ , ಮಾಜಿ ರೈಲ್ವೆ ಸಚಿವ ಮುಕುಲ್ ರಾಯ್ ಹೃದಯಾಘಾತಕ್ಕೆ ಬಲಿ

ಬಂಗಾಳ ರಾಜಕಾರಣದ ಚಾಣಕ್ಯ ಎಂದೇ ಖ್ಯಾತರಾಗಿದ್ದ ಹಿರಿಯ ರಾಜಕಾರಣಿ ಮತ್ತು ಮಾಜಿ ರೈಲ್ವೆ ಸಚಿವ ಮುಕುಲ್ ರಾಯ್ (71) ಹೃದಯಾಘಾತದಿಂದ ನಿಧನರಾಗಿದ್ದಾರೆ. ಟಿಎಂಸಿಯ ಸ್ಥಾಪಕ ಸದಸ್ಯರಾಗಿದ್ದ ಅವರು, ನಂತರ ಬಿಜೆಪಿಗೆ ಸೇರಿ, ಮತ್ತೆ ಟಿಎಂಸಿಗೆ ಮರಳುವ ಮೂಲಕ ತಮ್ಮ ರಾಜಕೀಯ ಜೀವನದಲ್ಲಿ ಮಹತ್ವದ ಪಾತ್ರ ವಹಿಸಿದ್ದರು.
Read Full Story

10:22 AM (IST) Feb 23

ಸಂಜುನೇ ಬೆಸ್ಟ್; ಸೂರ್ಯಕುಮಾರ್ ಯಾದವ್ ವಾದದಲ್ಲಿ ಹುರುಳಿಲ್ಲ ಎಂದು ಮತ್ತೆ ಸಾಬೀತಾಯ್ತು!

ಸತತ ಮೂರು ಬಾರಿ ಡಕೌಟ್ ಆಗಿ ಫಾರ್ಮ್ ಕಳೆದುಕೊಂಡಿರುವ ಅಭಿಷೇಕ್ ಶರ್ಮಾ ಬದಲು ಸಂಜು ಸ್ಯಾಮ್ಸನ್‌ರನ್ನು ಆಡಿಸಬಹುದೇ ಎಂದು ಕೇಳಿದಾಗ, ಸೂರ್ಯಕುಮಾರ್ ಯಾದವ್ ನೀಡಿದ ಉತ್ತರ ಗಮನ ಸೆಳೆದಿತ್ತು. ತಂಡದಲ್ಲಿ ಯಾವುದೇ ಬದಲಾವಣೆ ಮಾಡುವ ಅಗತ್ಯವಿಲ್ಲ, ಟೀಮ್ ಬ್ಯಾಲೆನ್ಸ್ ಆಗಿದೆ ಎಂದು ಸೂರ್ಯ ಸ್ಪಷ್ಟಪಡಿಸಿದ್ದರು.
Read Full Story

09:48 AM (IST) Feb 23

ಡ್ರಗ್ ಲಾರ್ಡ್ ಕತೆ ಮುಗಿಸಿದ ಮೆಕ್ಸಿಕನ್ ಸೇನೆ - ಆಕ್ರೋಶಗೊಂಡು ಹಿಂಸಾಚಾರಕ್ಕೆ ಇಳಿದ ಡ್ರಗ್ ಮಾಫಿಯಾ

ಮೆಕ್ಸಿಕೋದ ಸೇನೆಯು ದೇಶದ ಮಾದಕವಸ್ತು ಜಾಲದ ದೊರೆ ನೆಮೆಸಿಯೊ ಒಸೆಗುರಾ ಅಲಿಯಾಸ್ ಎಲ್ ಮೆಂಚೊನನ್ನು ಎನ್‌ಕೌಂಟರ್‌ನಲ್ಲಿ ಹತ್ಯೆ ಮಾಡಿದೆ. ಈ ಹತ್ಯೆಯ ಪ್ರತೀಕಾರವಾಗಿ, ಅವನ ಕಾರ್ಟೆಲ್ ದೇಶಾದ್ಯಂತ ಹಿಂಸಾಚಾರವನ್ನು ಪ್ರಾರಂಭಿಸಿದ್ದು, ವಾಹನಗಳಿಗೆ ಬೆಂಕಿ ಹಚ್ಚಿ, ಹೆದ್ದಾರಿಗಳನ್ನು ಬಂದ್ ಮಾಡಿವೆ.

Read Full Story

09:01 AM (IST) Feb 23

ರೈಲಿನಲ್ಲಿ ಹಿರಿಯ ನಾಗರಿಕರಿಗೆ ಮತ್ತೆ ಸಿಗುತ್ತಾ ಟಿಕೆಟ್ ರಿಯಾಯಿತಿ? ಇಲ್ಲಿದೆ ಲೇಟೆಸ್ಟ್ ಅಪ್‌ಡೇಟ್!

ಕೊರೊನಾ ಸಾಂಕ್ರಾಮಿಕಕ್ಕೂ ಮುನ್ನ, ಭಾರತೀಯ ರೈಲ್ವೆಯು ಹಿರಿಯ ನಾಗರಿಕರಿಗೆ ಟಿಕೆಟ್ ದರದಲ್ಲಿ ರಿಯಾಯಿತಿ ನೀಡುತ್ತಿತ್ತು. ಆದರೆ, ಕೊರೊನಾ ಬಂದಾಗ ದೇಶದಲ್ಲಿದ್ದ ಆರ್ಥಿಕ ಸಂಕಷ್ಟದಿಂದಾಗಿ ಈ ಸೌಲಭ್ಯವನ್ನು ನಿಲ್ಲಿಸಲಾಗಿತ್ತು.
Read Full Story

08:35 AM (IST) Feb 23

Video - ಪೈಲಟ್ ಪತಿಯ ಕ್ಯೂಟ್ ವಿಡಿಯೋ ನೋಡಿ ಗಂಡ ಅಂದ್ರೆ ಹಿಂಗಿರಬೇಕು ಅಂದ್ರು ಮಹಿಳೆಯರು

ಪ್ರತಿ ಬಾರಿ ವಿದೇಶ ಪ್ರವಾಸ ಮುಗಿಸಿ ಬಂದಾಗಲೂ, ಪತ್ನಿಗಾಗಿ ಪ್ರೀತಿಯಿಂದ ಹೂವು ತರುವ ಇಂಡಿಗೋ ಪೈಲಟ್ ಒಬ್ಬರ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಈ ಕ್ಯೂಟ್ ವಿಡಿಯೋವನ್ನು ಅವರ ಪತ್ನಿಯೇ ಶೇರ್ ಮಾಡಿಕೊಂಡಿದ್ದಾರೆ.
Read Full Story

More Trending News