Published : Apr 22, 2026, 06:49 AM ISTUpdated : Apr 22, 2026, 11:01 PM IST

India Latest News Live: ಪರ್ಷಿಯನ್ ಕೊಲ್ಲಿಯ ಡಿಜಿಟಲ್ ಮೂಲಸೌಕರ್ಯಗಳ ಮೇಲೆ ಇರಾನ್ ಕಣ್ಣು - ಕಡಲಡಿಯ ಇಂಟರ್ನೆಟ್ ಕೇಬಲ್‌ಗಳ ಮುಂದಿನ ಟಾರ್ಗೆಟ್‌

ಸಾರಾಂಶ

ನವದೆಹಲಿ: ಸತತ ಸೋಲುಗಳಿಂದ ಕಂಗೆಟ್ಟಿರುವ ಸಿಎಸ್‌ಕೆಗೆ ಮತ್ತೊಂದು ಹಿನ್ನಡೆ ಉಂಟಾಗಿದೆ. ಸನ್‌ರೈಸರ್ಸ್‌ ವಿರುದ್ಧ ಪಂದ್ಯದ ವೇಳೆ ಸ್ನಾಯುಸೆಳೆತಕ್ಕೆ ತುತ್ತಾಗಿದ್ದ ತಂಡದ ಯುವ ಬ್ಯಾಟರ್‌ ಆಯುಶ್‌ ಮ್ಹಾತ್ರೆ ಈ ಬಾರಿ ಐಪಿಎಲ್‌ನ ಇನ್ನುಳಿದ ಪಂದ್ಯಗಳಿಗೆ ಗೈರಾಗಲಿದ್ದಾರೆ. ಇದನ್ನು ಫ್ರಾಂಚೈಸಿ ಖಚಿತಪಡಿಸಿದೆ. ಅವರಿಗೆ 6ರಿಂದ 12 ವಾರಗಳ ಕಾಲ ಪುನಶ್ಚೇತನ ಶಿಬಿರ ಅಗತ್ಯವಿದೆ ಎಂದು ಸಿಎಸ್‌ಕೆ ತಿಳಿಸಿದೆ. 18 ವರ್ಷದ ಬ್ಯಾಟರ್‌ ಆಯುಶ್‌ ಈ ಬಾರಿ ಉತ್ತಮ ಪ್ರದರ್ಶನ ನೀಡಿದ್ದಾರೆ. 6 ಪಂದ್ಯಗಳನ್ನಾಡಿರುವ ಅವರು 177.87ರ ಸ್ಟ್ರೈಕ್‌ರೇಟ್‌ನಲ್ಲಿ 201 ರನ್‌ ಕಲೆಹಾಕಿದ್ದಾರೆ.

ತಂಡದ ಮಾಜಿ ನಾಯಕ ಎಂ.ಎಸ್‌.ಧೋನಿ ಗಾಯದಿಂದ ಬಳಲುತ್ತಿದ್ದು, ಇನ್ನೂ ಸಂಪೂರ್ಣ ಫಿಟ್‌ ಆಗಿಲ್ಲ. ಮತ್ತೊಂದೆಡೆ ವೇಗಿ ಖಲೀಲ್‌ ಅಹ್ಮದ್‌ ಕೂಡಾ ಕೆಲ ದಿನಗಳ ಹಿಂದಷ್ಟೇ ಗಾಯದಿಂದಾಗಿ ಟೂರ್ನಿಯಿಂದ ಹೊರಬಿದ್ದಿದ್ದರು.

11:01 PM (IST) Apr 22

ಪರ್ಷಿಯನ್ ಕೊಲ್ಲಿಯ ಡಿಜಿಟಲ್ ಮೂಲಸೌಕರ್ಯಗಳ ಮೇಲೆ ಇರಾನ್ ಕಣ್ಣು - ಕಡಲಡಿಯ ಇಂಟರ್ನೆಟ್ ಕೇಬಲ್‌ಗಳ ಮುಂದಿನ ಟಾರ್ಗೆಟ್‌

ಪರ್ಷಿಯನ್ ಕೊಲ್ಲಿಯಲ್ಲಿ ಇರಾನ್‌ನ ಐಆರ್‌ಜಿಸಿ ಡಿಜಿಟಲ್ ಮೂಲಸೌಕರ್ಯಗಳ ಮೇಲೆ ದಾಳಿ ನಡೆಸುವ ಸೂಚನೆ ನೀಡಿದೆ. ಸಮುದ್ರದಾಳದ ಇಂಟರ್ನೆಟ್ ಕೇಬಲ್‌ಗಳನ್ನು ಗುರಿಯಾಗಿಸುವ ದೊಡ್ಡ ಎಚ್ಚರಿಕೆ ನೀಡಿದೆ.

Read Full Story

10:15 PM (IST) Apr 22

"ಇಲ್ಲಿಂದ ತೊಲಗಿ, ಟ್ರಾಫಿಕ್ ಜಾಮ್ ಮಾಡ್ಬೇಡಿ" - ಬಿಜೆಪಿ ಸಚಿವನ ಮೆರವಣಿಗೆ ತಡೆದು ತರಾಟೆಗೆ ತೆಗೆದುಕೊಂಡ ಮಹಿಳೆ!

ಮುಂಬೈನ ವರ್ಲಿಯಲ್ಲಿ ರಾಜಕೀಯ ರ್‍ಯಾಲಿಯಿಂದಾದ ಭಾರಿ ಟ್ರಾಫಿಕ್ ಜಾಮ್‌ನಿಂದ ಕೋಪಗೊಂಡ ಮಹಿಳೆಯೊಬ್ಬರು, ಸಚಿವ ಗಿರೀಶ್ ಮಹಾಜನ್ ಮತ್ತು ಪೊಲೀಸರನ್ನು ನಡುರಸ್ತೆಯಲ್ಲೇ ಪ್ರಶ್ನಿಸಿದ್ದಾರೆ.

Read Full Story

08:55 PM (IST) Apr 22

Simbu Diet - ಬಿರಿಯಾನಿಗೆ ನೋ, ಸಪ್ಪೆ ಊಟಕ್ಕೆ ಯೆಸ್ - ನಟ ಸಿಂಬು ಸಸ್ಯಹಾರಿಯಾದ ಹಿಂದಿನ ಸೀಕ್ರೆಟ್ ಏನು?

ನಟ ಸಿಂಬು ಮತ್ತೆ ಫಿಟ್ ಆಗಿ ಕಾಣಿಸಿಕೊಂಡಿದ್ದಾರೆ. ಮಾಂಸಾಹಾರ ತ್ಯಜಿಸಿ, ಕಡಿಮೆ ಉಪ್ಪಿನ ಸಸ್ಯಹಾರಿ ಊಟಕ್ಕೆ ಬದಲಾಗಿದ್ದು, ಅನ್ನಕ್ಕೂ ಮುನ್ನ ಪ್ರೊಟೀನ್ ಆಹಾರ ಸೇವಿಸುತ್ತಿರುವುದೇ ಈ ಬದಲಾವಣೆಗೆ ಮುಖ್ಯ ಕಾರಣ.

Read Full Story

08:02 PM (IST) Apr 22

ಪೆಟ್ರೋಲ್-ಡೀಸಲ್ ಬೆಲೆ 28 ರೂಪಾಯಿ ಏರಿಕೆ ಸಾಧ್ಯತೆ - ಚುನಾವಣೆ ಮುಗಿಯುತ್ತಿದ್ದಂತೆ ಗ್ರಾಹಕರಿಗೆ ಬೆಲೆ ಏರಿಕೆ ಬರೆ!

ಕೋಟಕ್ ಇನ್‌ಸ್ಟಿಟ್ಯೂಷನಲ್ ಈಕ್ವಿಟೀಸ್ ವರದಿ ಪ್ರಕಾರ, ಐದು ರಾಜ್ಯಗಳ ಚುನಾವಣೆ ಮುಗಿದ ನಂತರ ಪೆಟ್ರೋಲ್ ಮತ್ತು ಡೀಸಲ್ ಬೆಲೆಗಳು ಗಣನೀಯವಾಗಿ ಏರಿಕೆಯಾಗುವ ಸಾಧ್ಯತೆಯಿದೆ.

Read Full Story

07:37 PM (IST) Apr 22

ತಿಂಗಳಿಗೆ 16 ಲಕ್ಷ ಬಾಡಿಗೆ! ಮುಂಬೈನಲ್ಲಿ ವಿರಾಟ್-ಅನುಷ್ಕಾ, ವಿಕ್ಕಿ-ಕ್ಯಾಟ್‌ಗೆ ಪಕ್ಕದ ಮನೆಯವರಾದ ಅಲ್ಲು ಅರ್ಜುನ್

ಐಕಾನ್ ಸ್ಟಾರ್ ಅಲ್ಲು ಅರ್ಜುನ್ ತಮ್ಮ 'ರಾಕಾ' ಸಿನಿಮಾ ಶೂಟಿಂಗ್‌ಗಾಗಿ ಮುಂಬೈಗೆ ಶಿಫ್ಟ್ ಆಗುತ್ತಿದ್ದಾರೆ. ಇದಕ್ಕಾಗಿ ಅವರು ಮುಂಬೈನ ಪ್ರತಿಷ್ಠಿತ ಏರಿಯಾದಲ್ಲಿ ಐಷಾರಾಮಿ ಅಪಾರ್ಟ್‌ಮೆಂಟ್‌ ಒಂದನ್ನು ಬಾಡಿಗೆಗೆ ಪಡೆದಿದ್ದಾರೆ. ಇದರ ಬಾಡಿಗೆ ಕೇಳಿದ್ರೆ ನೀವು ಶಾಕ್ ಆಗ್ತೀರಾ!

Read Full Story

07:10 PM (IST) Apr 22

'ಇಲ್ಲೀನತಕ ಯಾಕ್ ಹೇಳಿಲ್ಲ?'.. ಈಗ ಹೊರಬಿದ್ದ ರಶ್ಮಿಕಾರ ಚಿನ್ನದಂಥ ಸೀಕ್ರೆಟ್‌ಗೆ ಫ್ಯಾನ್ಸ್ ಸಖತ್ ಕ್ಲಾಸ್!

'ನಾನು ಹೆವ್ವಿ ಎನ್ನುವಷ್ಟು ವರ್ಕ್‌ಔಟ್ ಮಾಡುತ್ತೀನಿ. ಆದ್ರೆ, ಜಿಮ್ ಮುಗಿಸಿದ ಬಳಿಕ ನನಗೆ ನಿಶ್ಯಕ್ತಿ ಕಾಡುತ್ತದೆ. ಕಾರಣ, ನನ್ನಲ್ಲಿರುವ ಎಲ್ಲಾ ಎನರ್ಜಿ ನನ್ನ ವರ್ಕೌಟ್‌ ಮೂಲಕ ವ್ಯಯವಾಗಿ ಕೊನೆಗೆ ಸುಸ್ತು ಮಾತ್ರ ಉಳಿಯುತ್ತಿದೆ. ಯಾವ ಸೀಕ್ರೆಟ್ ಬಿಚ್ಚಿಟ್ಟಿದ್ದಾರೆ ರಶ್ಮಿಕಾ? ಮುಂದೆ ನೋಡಿ..

Read Full Story

07:06 PM (IST) Apr 22

ಶೂಟಿಂಗ್ ಮುಗಿಸಿದ 'ಜೈಲರ್ 2' - ರಿಲೀಸ್ ಡೇಟ್ ಯಾವಾಗ? ತಲೈವಾ ರಜನಿಕಾಂತ್ ಹೇಳಿದ್ದೇನು?

ಬಹುನಿರೀಕ್ಷಿತ ಸೀಕ್ವೆಲ್‌ಗಳಲ್ಲಿ ಒಂದಾದ 'ಜೈಲರ್ 2' ಶೂಟಿಂಗ್ ಮುಗಿದಿದೆ. ಸೂಪರ್‌ಸ್ಟಾರ್ ರಜನಿಕಾಂತ್ ಈ ಸಿನಿಮಾದ ಚಿತ್ರೀಕರಣವನ್ನು ಪೂರ್ಣಗೊಳಿಸಿದ್ದು, ಅಭಿಮಾನಿಗಳಿಗೆ ದೊಡ್ಡ ಅಪ್‌ಡೇಟ್ ನೀಡಿದ್ದಾರೆ.

Read Full Story

06:53 PM (IST) Apr 22

180 ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಆಯಾಜ್‌ನನ್ನು ಬೀದಿಯಲ್ಲಿ ಮೆರವಣಿಗೆ ಮಾಡಿದ ಪೊಲೀಸರು

ಮಹಾರಾಷ್ಟ್ರದ ಅಮರಾವತಿಯಲ್ಲಿ 180 ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಆರೋಪಿ ಆಯಾಜ್ ಖಾನ್ ತನ್ವೀರ್‌ನನ್ನು ಪೊಲೀಸರು ಬಂಧಿಸಿ ನಗರದ ಬೀದಿಯಲ್ಲಿ ಮೆರವಣಿಗೆ ಮಾಡಿದ್ದು, ಈ ವಿಚಾರ ಈಗ ತೀವ್ರ ಚರ್ಚೆಗೆ ಗ್ರಾಸವಾಗಿದೆ.

Read Full Story

06:47 PM (IST) Apr 22

ಮಮತಾ ಬ್ಯಾನರ್ಜಿ ನಡೆ ಪ್ರಜಾಪ್ರಭುತ್ವಕ್ಕೆ ಆಪತ್ತು - ಇಡಿ ತನಿಖೆಯಲ್ಲಿ ಹಸ್ತಕ್ಷೇಪ ಮಾಡಿದ್ದಕ್ಕೆ ಸುಪ್ರೀಂ ಕೋರ್ಟ್ ಛೀಮಾರಿ

ಐ-ಪ್ಯಾಕ್ ಮೇಲಿನ ಇಡಿ ದಾಳಿಯ ವೇಳೆ ಹಸ್ತಕ್ಷೇಪ ಮಾಡಿದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ನಡೆಯನ್ನು ಸುಪ್ರೀಂ ಕೋರ್ಟ್ ತೀವ್ರವಾಗಿ ಖಂಡಿಸಿದೆ. ಇದು ಪ್ರಜಾಪ್ರಭುತ್ವಕ್ಕೆ ಬೆದರಿಕೆ ಎಂದು ಬಣ್ಣಿಸಿದೆ.

Read Full Story

06:23 PM (IST) Apr 22

ಪೋಕ್ಸೊನಲ್ಲಿ ಮೊನಾಲಿಸಾ, ಲವ್​ ಜಿಹಾದ್​ನಲ್ಲಿ ನಿದಾ, ಸಿಎಎ ವೇಳೆ ಸಫೂರಾ - ಏನಿದು ಪ್ರೆಗ್ನೆನ್ಸಿ ಗುಟ್ಟು? ಬಿಸಿಬಿಸಿ ಚರ್ಚೆ

ಕುಂಭಮೇಳದ ವೈರಲ್ ಗರ್ಲ್ ಮೊನಾಲಿಸಾ, ಟಿಸಿಎಸ್ ಉದ್ಯೋಗಿ ನಿದಾ ಖಾನ್ ಮತ್ತು ಸಿಎಎ ಪ್ರತಿಭಟನಾಕಾರ ಸಫೂರಾ ಜರ್ಗರ್ ಪ್ರಕರಣಗಳಲ್ಲಿ ಒಂದು ಸಾಮಾನ್ಯ ಅಂಶವೆಂದರೆ ವಿವಾದದ ಸಮಯದಲ್ಲಿ ಗರ್ಭಿಣಿ ಎಂದು ಹೇಳಿಕೊಳ್ಳುವುದು. ಬಂಧನದಿಂದ ತಪ್ಪಿಸಿಕೊಳ್ಳಲು ಅಥವಾ ಕಾನೂನಿನಡಿ ವಿನಾಯಿತಿ ಪಡೆಯಲು ಗರ್ಭಧಾರಣೆಯನ್ನು ಒಂದು ತಂತ್ರವಾಗಿ ಬಳಸಲಾಗುತ್ತಿದೆಯೇ ಎಂಬ ಚರ್ಚೆಯನ್ನು ಈ ಲೇಖನವು ಹುಟ್ಟುಹಾಕಿದೆ.
Read Full Story

05:48 PM (IST) Apr 22

ಲೈವ್ ಶೋನಲ್ಲಿ ತಲೆಗೆ ನೀರು ಸುರಿದುಕೊಂಡ ಧುರಂಧರ್ ಗಾಯಕಿ - ಲಿಪ್‌ಸಿಂಕ್ ಮಾಡಿ ಸಿಕ್ಕಿಬಿದ್ದ ವಿಡಿಯೋ ವೈರಲ್!

ಬಾಲಿವುಡ್ ಗಾಯಕಿ ಜಾಸ್ಮಿನ್ ಸ್ಯಾಂಡ್ಲಾಸ್ ಅವರ ಇತ್ತೀಚಿನ ಸ್ಟೇಜ್ ಶೋ ವಿಡಿಯೋ ಒಂದು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗ್ತಿದೆ. ಅವರ ಈ ವರ್ತನೆ ಓವರ್ ಆ್ಯಕ್ಟಿಂಗ್ ಅಂತ ಹಲವರು ಟೀಕಿಸಿದ್ದಾರೆ.

Read Full Story

05:29 PM (IST) Apr 22

ಸ್ಮಾರ್ಟ್‌ಫೋನ್ ಪ್ರಿಯರಿಗೆ ಗುಡ್‌ನ್ಯೂಸ್ - ಇನ್ಮುಂದೆ ಮೊಬೈಲ್ ಬ್ಯಾಟರಿ ನೀವೇ ಬದಲಾಯಿಸಬಹುದು!

ಯುರೋಪಿಯನ್ ಯೂನಿಯನ್ ಸ್ಮಾರ್ಟ್‌ಫೋನ್‌ಗಳ ಬಾಳಿಕೆ ಮತ್ತು ದುರಸ್ತಿಗೆ ಸಂಬಂಧಿಸಿದಂತೆ ಕಟ್ಟುನಿಟ್ಟಿನ ಹೊಸ ನಿಯಮಗಳನ್ನು ಜಾರಿಗೊಳಿಸಿದೆ. 2027ರಿಂದ ಬಳಕೆದಾರರೇ ಬ್ಯಾಟರಿ ಬದಲಾಯಿಸುವಂತಹ ವಿನ್ಯಾಸ ಕಡ್ಡಾಯವಾಗಲಿದೆ.

Read Full Story

05:21 PM (IST) Apr 22

ಮತ್ತೆ ವಿಲನ್ ಹೆಸರು ವಿವಾದ - 'ಪೇಟ್ರಿಯಾಟ್' ಚಿತ್ರಕ್ಕೆ ಸೆನ್ಸಾರ್ ಕತ್ತರಿ, ರೀ-ಎಡಿಟಿಂಗ್ ಮುಗೀತು!

ಮಲಯಾಳಂ ಚಿತ್ರರಂಗದಲ್ಲಿ ಸದ್ಯ ಅತಿ ಹೆಚ್ಚು ನಿರೀಕ್ಷೆ ಹುಟ್ಟಿಸಿರುವ ಸಿನಿಮಾ ಯಾವುದು ಅಂತ ಕೇಳಿದ್ರೆ, ಅದಕ್ಕೆ ಒಂದೇ ಉತ್ತರ 'ಪೇಟ್ರಿಯಾಟ್'. ಯಾಕಂದ್ರೆ, ಬರೋಬ್ಬರಿ 18 ವರ್ಷಗಳ ದೊಡ್ಡ ಗ್ಯಾಪ್ ನಂತರ ಸೂಪರ್‌ಸ್ಟಾರ್‌ಗಳಾದ..

Read Full Story

05:17 PM (IST) Apr 22

ಮೋದಿಯನ್ನು 'ಟೆರರಿಸ್ಟ್'​ ಎಂದ ಖರ್ಗೆಗೆ ಬೀದರ್​ನಲ್ಲಿ ಕಪ್ಪು ಬಿಳುಪಿನ ವ್ಯತ್ಯಾಸ ತಿಳಿಸಿದ ಉಪ ರಾಷ್ಟ್ರಪತಿ

ಪ್ರಧಾನಿ ನರೇಂದ್ರ ಮೋದಿಯವರನ್ನು 'ಭಯೋತ್ಪಾದಕ' ಎಂದು ಕರೆದ ಕೆಪಿಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರ ಹೇಳಿಕೆಯು ತೀವ್ರ ರಾಜಕೀಯ ಸಂಚಲನಕ್ಕೆ ಕಾರಣವಾಗಿದೆ. ಈ ವಿವಾದಾತ್ಮಕ ಹೇಳಿಕೆಗೆ, ಖರ್ಗೆಯವರ ಸಮ್ಮುಖದಲ್ಲಿಯೇ ಉಪರಾಷ್ಟ್ರಪತಿ ಸಿ.ಪಿ.ರಾಧಾಕೃಷ್ಣನ್ ತೀಕ್ಷ್ಣ ತಿರುಗೇಟು ನೀಡಿದ್ದು, ಬಿಜೆಪಿ, ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದೆ.

Read Full Story

05:16 PM (IST) Apr 22

ಮನೆಯಲ್ಲೇ ಲೈಂ**ಕ ದೌರ್ಜನ್ಯವೆಸಗಿ IRS ಅಧಿಕಾರಿಯ ಪುತ್ರಿಯ ಭೀಕರ ಹತ್ಯೆ

ನವದೆಹಲಿಯ ಅಮರ್ ಕಾಲೋನಿಯಲ್ಲಿ ಭಾರತೀಯ ಕಂದಾಯ ಸೇವಾ ಅಧಿಕಾರಿಯ 22 ವರ್ಷದ ಪುತ್ರಿ ಅನುಮಾನಾಸ್ಪದವಾಗಿ ಶವವಾಗಿ ಪತ್ತೆಯಾಗಿದ್ದಾರೆ. ಲೈಂಗಿಕ ದೌರ್ಜನ್ಯದ ನಂತರ ಮೊಬೈಲ್ ಚಾರ್ಜರ್‌ನಿಂದ ಕತ್ತು ಹಿಸುಕಿ ಕೊಲೆ ಮಾಡಲಾಗಿದ್ದು, ಮನೆಗೆಲಸದಾತನ ಮೇಲೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

Read Full Story

04:54 PM (IST) Apr 22

ಒಂದೇ ಚಾರ್ಜ್‌ಗೆ 681ಕಿ.ಮೀ ರೇಂಜ್‌, ಟೆಸ್ಲಾ ಹೊಸ ಕಾರು ಭಾರತಕ್ಕೆ ಲಗ್ಗೆ! ಐಷಾರಾಮಿ SUV ಮಾರುಕಟ್ಟೆಯಲ್ಲಿ ಸಂಚಲನ

ಟೆಸ್ಲಾ ತನ್ನ ಹೊಚ್ಚಹೊಸ 6-ಸೀಟರ್ 'ಮಾಡೆಲ್ ವೈ ಎಲ್' ಎಲೆಕ್ಟ್ರಿಕ್ ಕಾರನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಒಂದೇ ಚಾರ್ಜ್‌ನಲ್ಲಿ 681 ಕಿ.ಮೀ. ಮೈಲೇಜ್ ನೀಡುವ ಈ ಕಾರು, ಐಷಾರಾಮಿ ಒಳಾಂಗಣ ಮತ್ತು ಅತ್ಯಾಧುನಿಕ ತಂತ್ರಜ್ಞಾನವನ್ನು ಹೊಂದಿದ್ದು, ಆನ್‌ಲೈನ್ ಬುಕ್ಕಿಂಗ್ ಆರಂಭವಾಗಿದೆ.
Read Full Story

04:38 PM (IST) Apr 22

ಟೀಂ ಹೋಟೆಲ್‌ನಲ್ಲಿ ಕಗಿಸೋ ರಬಾಡ...? ಗುಜರಾತ್ ಟೈಟಾನ್ಸ್ ಆಟಗಾರನ ವಿವಾದಾತ್ಮಕ ವಿಡಿಯೋ ವೈರಲ್

ಗುಜರಾತ್ ಟೈಟಾನ್ಸ್ ತಂಡದ ವೇಗಿ ಕಗಿಸೋ ರಬಾಡ ಅವರು ಧೂಮಪಾನ ಮಾಡುತ್ತಿದ್ದಾರೆ ಎನ್ನಲಾದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ವಿವಾದ ಸೃಷ್ಟಿಸಿದೆ. ಈ ವಿಡಿಯೋದ ಸತ್ಯಾಸತ್ಯತೆ ಇನ್ನೂ ದೃಢಪಟ್ಟಿಲ್ಲವಾದರೂ, ಈ ಘಟನೆಯು ಪ್ಲೇಆಫ್ ರೇಸ್‌ನಲ್ಲಿರುವ ತಂಡದ ಮನೋಸ್ಥೈರ್ಯದ ಮೇಲೆ ಪರಿಣಾಮ ಬೀರುವ ಆತಂಕವನ್ನು ಹುಟ್ಟುಹಾಕಿದೆ.
Read Full Story

04:25 PM (IST) Apr 22

ಅಪಘಾತದಲ್ಲಿ ಅಂಗಾಂಗ ಕಳೆದುಕೊಂಡವರಿಗೆ ಸುಪ್ರೀಂ ಕೋರ್ಟ್ ಆಸರೆ - ಕೃತಕ ಅಂಗಾಂಗಗಳ ವೆಚ್ಚಕ್ಕೂ ಸಿಗಲಿದೆ ಭಾರಿ ಪರಿಹಾರ!

ರಸ್ತೆ ಅಪಘಾತದಲ್ಲಿ ಅಂಗವೈಕಲ್ಯಕ್ಕೆ ತುತ್ತಾದ ಸಂತ್ರಸ್ತರಿಗೆ ನೀಡುವ ಪರಿಹಾರದಲ್ಲಿ ಕೃತಕ ಅಂಗಾಂಗಗಳ ಖರೀದಿ ಮತ್ತು ನಿರ್ವಹಣಾ ವೆಚ್ಚವನ್ನು ಸೇರಿಸುವುದು ಕಡ್ಡಾಯ ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ.

Read Full Story

03:59 PM (IST) Apr 22

ಮೆಗಾಸ್ಟಾರ್‌ ಚಿರಂಜೀವಿ ಸಿನಿಮಾಗೆ 'ನೋ' ಎಂದ ಟಾಪ್ 5 ನಟಿಯರಿವರು! ಕಾರಣಗಳೇನು ಗೊತ್ತಾ?

ಚಿರಂಜೀವಿ ಸಿನಿಮಾದಲ್ಲಿ ನಟಿಸುವ ಅವಕಾಶ ಸಿಕ್ಕರೆ ಯಾವುದೇ ನಟಿ ಬಿಟ್ಟುಕೊಳ್ಳುವುದಿಲ್ಲ. ಆದರೆ, ಮೆಗಾಸ್ಟಾರ್ ಚಿರಂಜೀವಿ ಅವರ ಸಿನಿಮಾಗಳನ್ನೇ ತಿರಸ್ಕರಿಸಿದ ಕೆಲ ನಟಿಯರೂ ಇದ್ದಾರೆ. ಅವರ ಬಗ್ಗೆ ಇಲ್ಲಿದೆ ಮಾಹಿತಿ.
Read Full Story

03:34 PM (IST) Apr 22

Tulsi Plant - ತುಳಸಿ ಗಿಡದ ಬಳಿ ಈ ಸಸ್ಯಗಳನ್ನು ನೆಟ್ಟರೆ ಮನೆಗೆ ಕಾದಿದೆ ಆಪತ್ತು! ಈ ತಪ್ಪು ಮಾಡಲೇಬೇಡಿ!

ನಿಮ್ಮ ಮನೆಯಲ್ಲಿ ತುಳಸಿ ಗಿಡವಿದೆಯೇ? ಪ್ರತಿದಿನ ಭಕ್ತಿಯಿಂದ ಪೂಜೆ ಮಾಡುತ್ತೀರಾ? ಹಾಗಾದರೆ, ತುಳಸಿ ಗಿಡದ ಬಳಿ ಕೆಲವು ಸಸ್ಯಗಳನ್ನು ಬೆಳೆಸಬಾರದು ಎಂಬುದು ನಿಮಗೆ ತಿಳಿದಿದೆಯೇ? ಕೆಲವು ಗಿಡಗಳಿಂದ ಮನೆಯಲ್ಲಿ ಸಮಸ್ಯೆಗಳು ಹೆಚ್ಚಾಗುವ ಅಪಾಯವಿದೆ.
Read Full Story

02:50 PM (IST) Apr 22

ಹೊಸ ಲೇಬರ್ ಕೋಡ್‌ ಎಫೆಕ್ಟ್‌ - ನಿಮ್ಮ ಕೈಗೆ ಬರುವ ಸಂಬಳ ಎಷ್ಟು ಕಡಿಮೆಯಾಗಲಿದೆ? ಇಲ್ಲಿದೆ ಸಂಪೂರ್ಣ ವಿವರ!

ದೇಶದಲ್ಲಿ ಜಾರಿಗೆ ಬರಲಿರುವ ಹೊಸ ಕಾರ್ಮಿಕ ಸಂಹಿತೆಯು ನಿಮ್ಮ ಸಂಬಳದ ರಚನೆಯನ್ನು ಬದಲಿಸಲಿದೆ. ಈ ನಿಯಮದ ಪ್ರಕಾರ, ಸಿಟಿಸಿಯ ಕನಿಷ್ಠ 50% 'ಮೂಲ ವೇತನ' ಆಗಿರಬೇಕು, ಇದರಿಂದ ಪಿಎಫ್ ಮತ್ತು ಗ್ರಾಚ್ಯುಟಿ ಕೊಡುಗೆಗಳು ಹೆಚ್ಚಾಗಿ, ನಿಮ್ಮ ಮಾಸಿಕ ಕೈಗೆ ಬರುವ ಸಂಬಳ ಕಡಿಮೆಯಾಗಲಿದೆ. 

Read Full Story

02:50 PM (IST) Apr 22

ಸನ್‌ರೈಸರ್ಸ್ ಹೈದರಾಬಾದ್ ಎದುರಿನ ಸೋಲಿಗೆ ಕನ್ನಡಿಗನ ಮೇಲೆ ಬೊಟ್ಟು ಮಾಡಿದ ಡೆಲ್ಲಿ ಕ್ಯಾಪ್ಟನ್!

ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ 47 ರನ್‌ಗಳಿಂದ ಸೋತಿದೆ. ನಾಯಕ ಅಕ್ಷರ್ ಪಟೇಲ್, ಅಭಿಷೇಕ್ ಶರ್ಮಾ ಅವರ ರನೌಟ್ ಮತ್ತು ಕ್ಯಾಚ್ ಕೈಚೆಲ್ಲಿದ್ದೇ ಸೋಲಿಗೆ ಪ್ರಮುಖ ಕಾರಣ ಎಂದು ಕಳಪೆ ಫೀಲ್ಡಿಂಗ್ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.
Read Full Story

02:45 PM (IST) Apr 22

ಒಂದು ದಿನ ರಜೆ ಬೇಕಾಗಿದ್ದಕ್ಕೆ ನಟಿ ಸಾಯಿ ಪಲ್ಲವಿ ಹೀಗ್ ಪ್ಲಾನ್ ಮಾಡಿದ್ರಾ? ನಿಜವಾಗಿ ಏನ್ ನಡೀತು?

ಇತ್ತೀಚೆಗೆ ಬಾಲಿವುಡ್‌ನ ಬಿಗ್ ಬಜೆಟ್ ಸಿನಿಮಾ 'ರಾಮಾಯಣ'ದಲ್ಲಿ ಸೀತೆಯಾಗಿ ನಟಿಸುತ್ತಿರುವ ನಟಿ ಸಾಯಿ ಪಲ್ಲವಿ, ಈಗಾಗಲೇ ಪ್ರತಿಭಾನ್ವಿತೆ ಎಂಬುದನ್ನು ಸಾಬೀತು ಪಡಿಸಿರುವ ನಟಿ. ಇಂತಪ್ಪ ಸಾಯಿ ಪಲ್ಲವಿಗೆ ಆಗೊಮ್ಮೆ ಒಂದು ದಿನದ ರಜೆಗಾಗಿ ಕಣ್ಣೀರು ಹಾಕುವ ಸಂದರ್ಭ ಎದುರಾಗಿತ್ತು. ಹಾಗಿದ್ರೆ ಅದೇನು ಸುದ್ದಿ ಅಂತ ನೋಡಿ..

Read Full Story

01:29 PM (IST) Apr 22

ಪ್ರೇಮ ಪುರಾಣಕ್ಕೆ ಬಿಗ್ ಟ್ವಿಸ್ಟ್ - ಧನುಷ್-ಮೃಣಾಲ್ ಡೇಟಿಂಗ್ ವದಂತಿ ಬೆನ್ನಲ್ಲೇ ಹೊರಬಿದ್ದಿದೆ ಹೊಸ ಸುದ್ದಿ!

ಸದ್ಯ ಧನುಷ್ ಕೈಯಲ್ಲಿ 8-9 ಸಿನಿಮಾಗಳಿವೆ. ನಟನೆ ಮತ್ತು ನಿರ್ದೇಶನ ಎರಡನ್ನೂ ಬ್ಯಾಲೆನ್ಸ್ ಮಾಡುತ್ತಿರುವ ಅವರು, ಶೂಟಿಂಗ್ ಬಿಡುವಿನ ವೇಳೆಯಲ್ಲಿ ಈ ಮಹಿಳಾ ಪ್ರಧಾನ ಚಿತ್ರದ ಪ್ರಿ-ಪ್ರೊಡಕ್ಷನ್ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಇತ್ತ ಮೃಣಾಲ್ ಕೂಡ ತೆಲುಗು ಮತ್ತು ಹಿಂದಿ ಚಿತ್ರರಂಗದಲ್ಲಿ ಬೇಡಿಕೆಯ ನಟಿಯಾಗಿ ಮಿಂಚುತ್ತಿದ್ದಾರೆ.

Read Full Story

01:26 PM (IST) Apr 22

ಮೋದಿ ಚುರುಮುರಿ ತಿಂದ ಬೆನ್ನಲ್ಲೇ ತಾಳಕ್ಕೆ ತಕ್ಕಂತೆ ಸೊಂಟ ಬಳುಕಿಸಿದ ದೀದಿ; ವಿಡಿಯೋ ವೈರಲ್​

ಪಶ್ಚಿಮ ಬಂಗಾಳದ ಚುನಾವಣಾ ಪ್ರಚಾರದ ವೇಳೆ ಪ್ರಧಾನಿ ಮೋದಿ ಜಲ್ಮುರಿ ಸವಿದಿದ್ದು ನಾಟಕ ಎಂದು ಮಮತಾ ಬ್ಯಾನರ್ಜಿ ಟೀಕಿಸಿದ್ದಾರೆ. ಇದರ ಬೆನ್ನಲ್ಲೇ, ಸಾಂಸ್ಕೃತಿಕ ಕಾರ್ಯಕ್ರಮವೊಂದರಲ್ಲಿ ಮಮತಾ ಬ್ಯಾನರ್ಜಿ ನೃತ್ಯ ಮಾಡಿದ್ದು ವೈರಲ್ ಆಗಿದ್ದು, ಇದು ರಾಜಕೀಯ ಚರ್ಚೆಗೆ ಕಾರಣವಾಗಿದೆ.
Read Full Story

01:00 PM (IST) Apr 22

'L' ಸೆಲೆಬ್ರೇಷನ್ ಬಿಟ್ಟು ಅಭಿಷೇಕ್ ಶರ್ಮಾ ಕೈಕಟ್ಟಿ ನಿಂತಿದ್ದೇಕೆ? ಕೊನೆಗೂ ಕೋಚ್ ಕೊಟ್ಟ ಚಾಲೆಂಜ್ ಸೀಕ್ರೆಟ್ ಬಿಚ್ಚಿಟ್ಟ ಡ್ಯಾಶಿಂಗ್ ಓಪನ್ನರ್!

ಐಪಿಎಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಅಜೇಯ 135 ರನ್ ಸಿಡಿಸಿದ ಸನ್‌ರೈಸರ್ಸ್ ಹೈದರಾಬಾದ್‌ನ ಅಭಿಷೇಕ್ ಶರ್ಮಾ, ತಮ್ಮ ಹೊಸ ಸಂಭ್ರಮಾಚರಣೆಯ ಹಿಂದಿನ ರಹಸ್ಯವನ್ನು ಬಹಿರಂಗಪಡಿಸಿದ್ದಾರೆ. ಕೋಚ್ ಜೇಮ್ಸ್ ಫ್ರಾಂಕ್ಲಿನ್ ನೀಡಿದ 20 ಓವರ್‌ಗಳ ಬ್ಯಾಟಿಂಗ್ ಚಾಲೆಂಜ್ ಪೂರ್ಣಗೊಳಿಸಿದ ಖುಷಿಯಲ್ಲಿ ಈ ವಿಶೇಷ ಆಚರಣೆ ಮಾಡಿದ್ದಾಗಿ ಅವರು ತಿಳಿಸಿದ್ದಾರೆ.
Read Full Story

12:34 PM (IST) Apr 22

Curry Leaves Oil - ಬಿಳಿ ಕೂದಲಿಗೆ ಕರಿಬೇವು ಮದ್ದು! ಈ ರೀತಿ ಎಣ್ಣೆ ಬಳಸಿದ್ರೆ ಕೂದಲು ಕಪ್ಪಾಗೋದು ಗ್ಯಾರಂಟಿ

ಬಿಳಿ ಕೂದಲಿನ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಇಲ್ಲಿದೆ ಒಂದು ಸಿಂಪಲ್ ಟಿಪ್. ಕರಿಬೇವಿನ ಎಲೆಗಳನ್ನು ಬಳಸಿ ನಿಮ್ಮ ಬಿಳಿ ಕೂದಲನ್ನು ಮತ್ತೆ ಕಪ್ಪಾಗಿಸಬಹುದು. ಕರಿಬೇವಿನ ಎಲೆಗಳನ್ನು ಹೇಗೆ ಬಳಸಬೇಕು ಎಂದು ಇಲ್ಲಿ ವಿವರಿಸಲಾಗಿದೆ. ಈ ವಿಧಾನದಿಂದ ಕೂದಲು ಉದ್ದವಾಗಿಯೂ ಬೆಳೆಯುತ್ತದೆ.
Read Full Story

11:28 AM (IST) Apr 22

IPL 2026 - ಈ ಸಲ ಆರ್‌ಸಿಬಿ ಹೆಸರಿನಲ್ಲಿದ್ದ 10 ವರ್ಷದ ಹಳೆಯ ರೆಕಾರ್ಡ್ ಮುರಿದ ಸನ್‌ರೈಸರ್ಸ್ ಹೈದರಾಬಾದ್!

19ನೇ ಆವೃತ್ತಿಯ ಐಪಿಎಲ್‌ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡವು ಸತತ ಏಳನೇ ಬಾರಿಗೆ ಟಾಸ್ ಸೋತು, ಆರ್‌ಸಿಬಿ ಹೆಸರಿನಲ್ಲಿದ್ದ ಹಳೆಯ ದಾಖಲೆಯನ್ನು ಮುರಿದು ಹೊಸ ಇತಿಹಾಸ ನಿರ್ಮಿಸಿದೆ. ನಾಯಕ ಇಶಾನ್ ಕಿಶನ್ ಕೂಡಾ ಐಪಿಎಲ್‌ನಲ್ಲಿ ಮೊದಲ ಏಳು ಪಂದ್ಯಗಳಲ್ಲಿ ಟಾಸ್ ಸೋತ ಮೊದಲ ನಾಯಕ ಎಂಬ ಕುಖ್ಯಾತಿಗೆ ಪಾತ್ರರಾಗಿದ್ದಾರೆ.
Read Full Story

10:59 AM (IST) Apr 22

ಕಸ ಎಸೆದು ಬರ್ತೀನಿ ಅಂತ ಹೇಳಿ ಕಟ್ಟಿಂಗ್ ಶಾಪ್‌ನವನ ಜೊತೆ ಓಡಿದ ಆಂಟಿ - ಗಂಡ ಮಕ್ಕಳಿಗೆ ನಿದ್ರೆ ಮಾತ್ರೆ ಹಾಕಿ ಎಸ್ಕೇಪ್

ಬೆಂಗಳೂರಿನಲ್ಲಿ ವಿವಾಹಿತ ಮಹಿಳೆಯೊಬ್ಬಳು ಗಂಡ-ಮಕ್ಕಳಿಗೆ ನಿದ್ರೆ ಮಾತ್ರೆ ನೀಡಿ, ಕಸ ಎಸೆಯುವ ನೆಪದಲ್ಲಿ ತನ್ನ ಪ್ರಿಯಕರನೊಂದಿಗೆ ಪರಾರಿಯಾಗಿದ್ದಾಳೆ. ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ವಿವಾಹಿತ ಮಹಿಳೆಯ ಈ ಕಿತಾಪತಿಗೆ ಗಂಡ ಮಕ್ಕಳು ಕಂಗಾಲಾಗಿದ್ದಾರೆ.

Read Full Story

10:20 AM (IST) Apr 22

1050 ಕೋಟಿ ಮೌಲ್ಯದ ಆಸ್ತಿ ಒಡೆಯನಾದ್ರು ವಿರಾಟ್‌ ಕೊಹ್ಲಿಗೆ ಒಂದು ಪೋಟೋ ಲೈಕ್ ಮಾಡುವ ಸ್ವಾತಂತ್ರ್ಯ ಇಲ್ವಾ?

ಕ್ರಿಕೆಟರ್ ವಿರಾಟ್ ಕೊಹ್ಲಿ 1050 ಕೋಟಿ ಮೌಲ್ಯದ ನಿವ್ವಳ ಮೌಲ್ಯವನ್ನು ಹೊಂದಿರುವ ಶ್ರೀಮಂತ ಕ್ರಿಕೆಟರ್. ಆದರೂ ತನಗಿಷ್ಟವಾದುದನ್ನು ಇಷ್ಟಪಡುವ ಸ್ವಾತಂತ್ರ್ಯ ಅವರಿಗಿಲ್ಲ, ಇಂತಹದೊಂದು ಮಾತು ಈಗ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಕೇಳಿ ಬರುತ್ತಿದೆ.

Read Full Story

09:55 AM (IST) Apr 22

19 ವರ್ಷಗಳ ಐಪಿಎಲ್ ಇತಿಹಾಸದಲ್ಲಿ ಯಾರೂ ಮಾಡದ ದಾಖಲೆ ಬರೆದ ಅಭಿಷೇಕ್ ಶರ್ಮಾ!

ಸನ್‌ರೈಸರ್ಸ್ ಹೈದರಾಬಾದ್‌ನ ಅಭಿಷೇಕ್ ಶರ್ಮಾ, ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 47 ಎಸೆತಗಳಲ್ಲಿ ಶತಕ ಸಿಡಿಸಿ ಐತಿಹಾಸಿಕ ದಾಖಲೆ ಬರೆದಿದ್ದಾರೆ. 50ಕ್ಕಿಂತ ಕಡಿಮೆ ಎಸೆತಗಳಲ್ಲಿ ಎರಡು ಶತಕ ಬಾರಿಸಿದ ಮೊದಲ ಭಾರತೀಯ ಹಾಗೂ ಒಂದೇ ಇನ್ನಿಂಗ್ಸ್‌ನಲ್ಲಿ ಎರಡು ಬಾರಿ 10 ಸಿಕ್ಸರ್‌ ಸಿಡಿಸಿದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
Read Full Story

09:18 AM (IST) Apr 22

ಆಫ್ಘನ್‌ ವಿರುದ್ಧ ಏಕೈಕ ಟೆಸ್ಟ್‌ ಪಂದ್ಯಕ್ಕೆ ಕನ್ನಡಿಗ ದೇವದತ್‌ ಪಡಿಕ್ಕಲ್, ನಬಿ, ಹರ್ಷ್‌ ಆಯ್ಕೆ?

ಐಪಿಎಲ್ ಮುಗಿದ ಕೆಲವೇ ದಿನಗಳಲ್ಲಿ ಭಾರತ ತಂಡ ಅಫ್ಘಾನಿಸ್ತಾನ ವಿರುದ್ಧ ಏಕೈಕ ಟೆಸ್ಟ್ ಪಂದ್ಯ ಆಡಲಿದೆ. ನಿರಂತರ ಕ್ರಿಕೆಟ್‌ನ ಒತ್ತಡದಿಂದಾಗಿ, ಐಪಿಎಲ್ ಪ್ಲೇ-ಆಫ್‌ ತಲುಪುವ ತಂಡಗಳ ಪ್ರಮುಖ ಆಟಗಾರರಿಗೆ ವಿಶ್ರಾಂತಿ ನೀಡಿ, ದೇಸಿ ಟೂರ್ನಿಗಳಲ್ಲಿ ಮಿಂಚಿದ ಯುವ ಆಟಗಾರರಿಗೆ ಅವಕಾಶ ನೀಡಲು ಬಿಸಿಸಿಐ ಚಿಂತಿಸುತ್ತಿದೆ.
Read Full Story

08:42 AM (IST) Apr 22

Sabarimala women entry case - ‘ದೇವರನ್ನು ಮುಟ್ಟಲು ಅವಕಾಶವಿಲ್ಲದ ಭಕ್ತರ ರಕ್ಷಣೆಗೆ ಸಂವಿಧಾನ ಬರುವುದಿಲ್ಲವೇ?’ ಅರ್ಚಕರಿಗೆ ಸುಪ್ರೀಂ ಪ್ರಶ್ನೆ

ಶಬರಿಮಲೆಗೆ ಮಹಿಳೆಯರ ಪ್ರವೇಶ ಕುರಿತ ವಿಚಾರಣೆಯ ವೇಳೆ, ಸುಪ್ರೀಂ ಕೋರ್ಟ್ ಪ್ರಧಾನ ಅರ್ಚಕರನ್ನು ಪ್ರಶ್ನಿಸಿದೆ. ಸಂಪೂರ್ಣ ಭಕ್ತಿಯಿದ್ದರೂ ದೇವರನ್ನು ಮುಟ್ಟಲು ಅವಕಾಶವಿಲ್ಲದ ಭಕ್ತರ ರಕ್ಷಣೆಗೆ ಸಂವಿಧಾನ ಬರಬೇಕಲ್ಲವೇ ಎಂದು ನ್ಯಾಯಾಧೀಶರು ಕೇಳಿದ್ದಾರೆ.
Read Full Story

08:09 AM (IST) Apr 22

ಡೆಲ್ಲಿ ಎದುರು ಶತಕ ಚಚ್ಚಿ ವಿರಾಟ್ ಕೊಹ್ಲಿ ಹೆಸರಲ್ಲಿದ್ದ ಅಪರೂಪದಲ್ಲೇ ಅಪರೂಪದ ದಾಖಲೆ ಸರಿಗಟ್ಟಿದ ಅಭಿಷೇಕ್ ಶರ್ಮಾ!

ಭಾರತದ ಕ್ರಿಕೆಟಿಗ ಅಭಿಷೇಕ್‌ ಶರ್ಮಾ ಟಿ20 ಕ್ರಿಕೆಟ್‌ನಲ್ಲಿ ತಮ್ಮ 9ನೇ ಶತಕವನ್ನು ಬಾರಿಸುವ ಮೂಲಕ, ಅತಿ ಹೆಚ್ಚು ಶತಕ ಸಿಡಿಸಿದ ಭಾರತೀಯ ಆಟಗಾರರ ಪಟ್ಟಿಯಲ್ಲಿ ವಿರಾಟ್‌ ಕೊಹ್ಲಿಯ ದಾಖಲೆಯನ್ನು ಸರಿಗಟ್ಟಿದ್ದಾರೆ. ಈ ಇನ್ನಿಂಗ್ಸ್‌ನಲ್ಲಿ ಅವರು 350 ಟಿ20 ಸಿಕ್ಸರ್‌ಗಳ ಮೈಲಿಗಲ್ಲನ್ನೂ ತಲುಪಿದ್ದು, ಹಲವು ಹೊಸ ದಾಖಲೆಗಳನ್ನು ನಿರ್ಮಿಸಿದ್ದಾರೆ.
Read Full Story

07:48 AM (IST) Apr 22

India s Green Shift - ಶೀಘ್ರದಲ್ಲೇ ಆಲ್ಕೋಹಾಲ್‌ನಿಂದ ಓಡಾಡಲಿವೆ ಭಾರತದ ಕಾರುಗಳು!

ತೈಲ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ, ಭಾರತವು ಪೆಟ್ರೋಲ್‌ಗೆ ಪರ್ಯಾಯವಾಗಿ ಶೇ.85ರಷ್ಟು ಎಥೆನಾಲ್‌ (E85) ಬಳಕೆಗೆ ಉತ್ತೇಜನ ನೀಡಲು ಚಿಂತಿಸುತ್ತಿದೆ. ಈ ಹೊಸ ಇಂಧನ ನೀತಿಯು ತೈಲ ಆಮದು ವೆಚ್ಚವನ್ನು ಕಡಿಮೆ ಮಾಡಲಿದ್ದು, ಪರಿಸರ ಸ್ನೇಹಿಯೂ ಆಗಿದೆ. 

Read Full Story

07:37 AM (IST) Apr 22

IPL 2026 - ನಿನ್ನೆ ನಡೆದ ಡೆಲ್ಲಿ ಕ್ಯಾಪಿಟಲ್ಸ್ - ಸನ್‌ರೈಸರ್ಸ್ ಹೈದರಾಬಾದ್‌ ನಡುವಿನ ಮ್ಯಾಚ್ ಗೆದ್ದಿದ್ದು ಯಾರು?

ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧದ ಪಂದ್ಯದಲ್ಲಿ ಸನ್‌ರೈಸರ್ಸ್‌ ಹೈದರಾಬಾದ್‌ 47 ರನ್‌ಗಳ ಭರ್ಜರಿ ಜಯ ಸಾಧಿಸಿದೆ. ಮೊದಲು ಬ್ಯಾಟ್ ಮಾಡಿದ ಸನ್‌ರೈಸರ್ಸ್‌, ಅಭಿಷೇಕ್ ಶರ್ಮಾ ಅವರ ಸ್ಫೋಟಕ ಶತಕದ (135*) ನೆರವಿನಿಂದ 242 ರನ್ ಗಳಿಸಿತು. ಈ ಗುರಿ ಬೆನ್ನತ್ತಿದ ಡೆಲ್ಲಿ ತಂಡ 195 ರನ್‌ಗಳಿಗೆ ತನ್ನ ಹೋರಾಟವನ್ನು ಸೀಮಿತಗೊಳಿಸಿತು.
Read Full Story

More Trending News