ನವದೆಹಲಿ: ಸ್ವದೇಶಿ ನಿರ್ಮಿತ ಯುದ್ಧ ಪ್ಯಾರಾಚೂಟ್ ಅನ್ನು ಭಾರತದ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಯಶಸ್ವಿಯಾಗಿ ಪರೀಕ್ಷೆ ನಡೆಸಿದೆ. ವಾಯುಪಡೆಯ ವಿಂಗ್ ಕಮಾಂಡರ್‌ವಿಶಾಲ್ ಲಕೇಶ್, ಮಾಸ್ಟರ್ ವಾರಂಟ್ ಅಧಿಕಾರಿ ಆರ್.ಜೆ. ಸಿಂಗ್, ಮತ್ತು ಮಾಸ್ಟರ್‌ವಾರಂಟ್ ಅಧಿಕಾರಿ ವಿವೇಕ್ ತಿವಾರಿ ಈ ಪ್ಯಾರಾಚೂಟ್ ನೊಂದಿಗೆ 32,000 ಅಡಿ ಎತ್ತರದಿಂದ ಹಾರುವ ಮೂಲಕ ಅದರ ಕಾರ್ಯಕ್ಷಮತೆ ಸಾಬೀತುಪಡಿಸಿದ್ದಾರೆ. ಈ ಪ್ಯಾರಾಚೂಟ್ ಅನ್ನು ಬೆಂಗಳೂರು ಮತ್ತು ಆಗ್ರಾದಲ್ಲಿರುವ ಪ್ರಯೋಗಾಲಯಗಳಲ್ಲಿ ನಿರ್ಮಿಸಲಾಗಿರುವುದು ವಿಶೇಷ. ಜತೆಗೆ, ಅಷ್ಟು ಎತ್ತರದಿಂದ ಸ್ವದೇಶಿ ಪ್ಯಾರಾಚೂಟ್‌ನ ಪರೀಕ್ಷೆ ನಡೆಸಲಾಗಿರುವುದು ಇದೇ ಮೊದಲು. ಈ ಸೇನಾ ಪ್ಯಾರಾಚೂಟ್‌ಗಳು ಶಸ್ತ್ರಾಸ್ತ್ರ, ಮದ್ದುಗುಂಡು, ಜೀವರಕ್ಷಕ ಕಿಟ್ ಸೇರಿ 150 ಕೆ.ಜಿ. ತೂಕ ಹೊರಬಲ್ಲದು. ಇದನ್ನು ಬಳಸುವವರು ಸುರಕ್ಷಿತವಾಗಿ ಇಳಿಯುವುದನ್ನು ಖಚಿತಪಡಿಸಲು ಅದು ಕೆಳಗೆ ಬರುವ ವೇಗವೂ ಕಡಿಮೆ ಆಗುವ ವ್ಯವಸ್ಥೆ ಇದೆ. ಜತೆಗೆ ನಾವಿಕ್ ಜಿಪಿಎಸ್ ವ್ಯವಸ್ಥೆಯೂ ಇದರಲ್ಲಿರುವುದರಿಂದ ನಿಗದಿಗೆ ಸ್ಥಳದಲ್ಲಿ ನಿಖರವಾಗಿ ಲ್ಯಾಂಡ್ ಆಗಲು ಸಾಧ್ಯವಾಗುತ್ತದೆ. ಇದು ವಾಯುದಾಳಿ ಅಥವಾಹಿಮಾಲಯದಂತಹ ಭೂಪ್ರದೇಶಗಳಲ್ಲಿ ತ್ವರಿತ ಪ್ರತಿಕ್ರಿಯೆಗೆ ನಿರ್ಣಾಯಕ. ಈ ಪ್ಯಾರಾಚೂಟ್ ಯಾವುದೇ ರೀತಿಯ ಹವಾಮಾನದಲ್ಲೂ ತೊಂದರೆ ಇಲ್ಲದೆಯೇ ಬಳಸಬಹುದಾಗಿದೆ.

11:14 PM (IST) Oct 17
India Bangladesh Diplomatic Tensions Rise: ಮತ್ತೆ ಭುಗಿಲೆದ್ದ ಭಾರತ-ಬಾಂಗ್ಲಾ ಗಡಿ ವಿವಾದ: ತ್ರಿಪುರಾದಲ್ಲಿ 3 ಬಾಂಗ್ಲಾದೇಶಿಗರ ಹತ್ಯೆ! ತ್ರಿಪುರಾದ ಬಾಂಗ್ಲಾದೇಶ ಗಡಿ ಗ್ರಾಮದಲ್ಲಿ ಒಬ್ಬ ಭಾರತೀಯ ಮತ್ತು ಮೂವರು ಬಾಂಗ್ಲಾದೇಶಿ ಪ್ರಜೆಗಳು ಕೊಲ್ಲಲ್ಪಟ್ಟ ನಂತರ ರಾಜತಾಂತ್ರಿಕ ವಿವಾದ ಭುಗಿಲೆದ್ದಿದೆ.
11:08 PM (IST) Oct 17
Virat Kohli Chasing 148-Year-Old Unique Record ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯಲ್ಲಿ, ವಿರಾಟ್ ಕೊಹ್ಲಿ ಐತಿಹಾಸಿಕ ವಿಶ್ವದಾಖಲೆಯ ಹೊಸ್ತಿಲಲ್ಲಿದ್ದಾರೆ. ಇನ್ನೊಂದು ಶತಕ ಬಾರಿಸಿದರೆ, ಅವರು ಏಕದಿನ ಮಾದರಿಯಲ್ಲಿ 52 ಶತಕಗಳನ್ನು ಪೂರೈಸಲಿದ್ದಾರೆ.
10:23 PM (IST) Oct 17
Tamil Nadu Govt to Remove Caste Names from 3400+ Chennai Roads ಗ್ರೇಟರ್ ಚೆನ್ನೈ ಕಾರ್ಪೊರೇಷನ್ ನಗರದ 3400ಕ್ಕೂ ಹೆಚ್ಚು ಜಾತಿ ಆಧಾರಿತ ರಸ್ತೆಗಳ ಹೆಸರುಗಳನ್ನು ಬದಲಿಸಲು ನಿರ್ಧರಿಸಿದೆ. ಈ ಉಪಕ್ರಮವು ಸಾರ್ವಜನಿಕ ಸ್ಥಳಗಳಿಂದ ಜಾತಿ ಗುರುತುಗಳನ್ನು ತೆಗೆದುಹಾಕುವ ಗುರಿಯನ್ನು ಹೊಂದಿದೆ.
09:34 PM (IST) Oct 17
BCCI Earns ₹100 Crore Profit from Asia Cup ಏಷ್ಯಾ ಕಪ್‌ನಲ್ಲಿ ಪಾಕಿಸ್ತಾನವನ್ನು ಮಣಿಸಿದರೂ, ಮೊಹ್ಸಿನ್ ನಖ್ವಿ ಜೊತೆಗಿನ ವಿವಾದದಿಂದಾಗಿ ಭಾರತ ತಂಡಕ್ಕೆ ಇನ್ನೂ ಟ್ರೋಫಿ ಸಿಕ್ಕಿಲ್ಲ. ಆದರೆ, ಈ ಪಂದ್ಯಾವಳಿಯಿಂದ ಬಿಸಿಸಿಐ 100 ಕೋಟಿ ರೂಪಾಯಿಗಳ ಭಾರಿ ಆದಾಯ ಗಳಿಸಿದೆ.
09:03 PM (IST) Oct 17
Belgian Court Orders Extradition of Fugitive Mehul Choksi to India ಮೆಹುಲ್ ಚೋಕ್ಸಿಯನ್ನು ಭಾರತಕ್ಕೆ ಹಸ್ತಾಂತರಿಸಲು ಆಂಟ್ವೆರ್ಪ್ ನ್ಯಾಯಾಲಯ ಆದೇಶಿಸಿದೆ. ಭಾರತದ ಕೋರಿಕೆಯ ಮೇರೆಗೆ ಬೆಲ್ಜಿಯಂ ಅಧಿಕಾರಿಗಳು ಆತನನ್ನು ಬಂಧಿಸಿದ್ದು ಮಾನ್ಯವಾಗಿದೆ ಎಂದು ನ್ಯಾಯಾಲಯ ಹೇಳಿದೆ.
08:42 PM (IST) Oct 17
ನೀವು ಭೇಟಿ ನೀಡಿದ್ದು ಅದಿನಾ ಮಸೀದಿ ಅಲ್ಲ, ಆದಿನಾಥ ದೇಗುಲ; ಸಂಸದ ಯೂಸುಫ್ ಪಠಾಣ್‌ಗೆ ಬಿಜೆಪಿ ಪಾಠ ಮಾಡಿದೆ. ಟಿಎಂಸಿ ಸಂಸದ ಸೋಶಿಯಲ್ ಮೀಡಿಯಾದಲ್ಲಿ ಮಾಡಿದ ಪೋಸ್ಟ್ ಇದೀಗ ಭಾರಿ ಚರ್ಚೆಗೆ ಕಾರಣವಾಗಿದೆ. ಆದಿನಾಥ ದೇಗುಲ ಮರಳಿ ಪಡೆಯಿರಿ ಅನ್ನೋ ಕೂಗು ಕೇಳಿಬರುತ್ತಿದೆ.
08:39 PM (IST) Oct 17
Most Expensive Sweet Swarna Prasadam ರಾಜಸ್ಥಾನದ ಜೈಪುರದಲ್ಲಿ 'ಸ್ವರ್ಣ ಪ್ರಸಾದಂ' ಎಂಬ ವಿಶೇಷ ಸಿಹಿತಿಂಡಿಯನ್ನು ತಯಾರಿಸಲಾಗಿದ್ದು, ಇದರ ಬೆಲೆ ಕೆಜಿಗೆ 1 ಲಕ್ಷ 11 ಸಾವಿರ ರೂಪಾಯಿ. ಚಿನ್ನದ ಬೂದಿ, ಕೇಸರಿ ಮತ್ತು ಪೈನ್ ಬೀಜಗಳಂತಹ ದುಬಾರಿ ಪದಾರ್ಥಗಳಿಂದ ಈ ಸಿಹಿ ತಿಂಡಿ ತಯಾರಿಸಲಾಗಿದೆ.
08:00 PM (IST) Oct 17
6 Companies Adani and Poonawalla Interested in Buying RCB ಐಪಿಎಲ್ 2026ಕ್ಕೆ ಮುಂಚಿತವಾಗಿ ಆರ್‌ಸಿಬಿ ಫ್ರಾಂಚೈಸಿಯನ್ನು ಮಾರಾಟ ಮಾಡುವ ಸಾಧ್ಯತೆಗಳಿವೆ. ಡಿಯಾಜಿಯೊ ತಂಡವನ್ನು ಖರೀದಿಸಲು ಆದರ್ ಪೂನವಾಲ್ಲಾ, ಜೆಎಸ್‌ಡಬ್ಲ್ಯೂ ಮತ್ತು ಅದಾನಿ ಗ್ರೂಪ್ ಆಸಕ್ತಿ ತೋರಿಸಿವೆ.
07:22 PM (IST) Oct 17
'ಕಾಂತಾರ' ಖ್ಯಾತಿಯ ನಟ ರಿಷಬ್ ಶೆಟ್ಟಿ ಅವರು ಅಮಿತಾಭ್ ಬಚ್ಚನ್ ನಡೆಸಿಕೊಡುವ 'ಕೌನ್ ಬನೇಗಾ ಕರೋಡ್ಪತಿ' ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ವೇಳೆ, ಅವರು ರಜನಿಕಾಂತ್ ಅವರಂತೆ ನಡಿಗೆಯನ್ನು ಅನುಕರಿಸಿ ಅಮಿತಾಭ್ ಅವರನ್ನು ಬೆರಗುಗೊಳಿಸಿದರು.
06:44 PM (IST) Oct 17
ಆಹಾರ ಉತ್ಪನ್ನ ಮೇಲೆ ORS ಲೇಬಲ್ ಬಳಕೆ ನಿಷೇಧ, 8 ವರ್ಷಗಳ ಕಾನೂನು ಹೋರಾಟ ಗೆದ್ದ ವೈದ್ಯೆ, ಹಣ್ಣಿನ ಪಾನೀಯ ಸೇರಿದಂತೆ ಹಲವು ಪಾನಿಯಗಳ ಮೇಲೆ ಒಆರ್‌ಎಸ್ ಎಂದು ಬಳಕೆ ಮಾಡಲಾಗುತ್ತಿದೆ. ಇದೀಗ FSSAI ಮಹತ್ವದ ಆದೇಶ ನೀಡಿದೆ.
06:41 PM (IST) Oct 17
ಕೌನ್ ಬನೇಗಾ ಕರೋರ್ಪತಿ ಮಕ್ಕಳ ಸೀಸನ್ನಲ್ಲಿ, ರುದ್ರ ಚಿಟ್ಟೆ ಎಂಬ ಬಾಲಕ ತನ್ನ ಹಾಸ್ಯ ಪ್ರಜ್ಞೆ ಮತ್ತು ತಿಳುವಳಿಕೆಯಿಂದ ಗಮನ ಸೆಳೆದಿದ್ದಾನೆ. ಆತ್ಮನಿರ್ಭರ ಭಾರತಕ್ಕಾಗಿ ದೇಶದ ಮೊದಲ ಆಪರೇಟಿಂಗ್ ಸಿಸ್ಟಮ್ ರಚಿಸುವ ತನ್ನ ಗುರಿಯನ್ನು ಬಹಿರಂಗಪಡಿಸಿ, ಅಮಿತಾಭ್ ಬಚ್ಚನ್ ಸೇರಿದಂತೆ ಬೆರಗುಗೊಳಿಸಿದ್ದಾನೆ.
05:15 PM (IST) Oct 17
ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮುಂಬರುವ ಏಕದಿನ ಸರಣಿಯಲ್ಲಿ, ವಿರಾಟ್ ಕೊಹ್ಲಿ ಸಚಿನ್ ತೆಂಡೂಲ್ಕರ್ ಅವರ ಮಹತ್ವದ ದಾಖಲೆಯನ್ನು ಮುರಿಯುವ ಸನಿಹದಲ್ಲಿದ್ದಾರೆ. ಒಂದು ಶತಕ ಬಾರಿಸಿದರೆ, ಅವರು ಒಂದೇ ಮಾದರಿಯಲ್ಲಿ 52 ಶತಕಗಳನ್ನು ಗಳಿಸಿದ ವಿಶ್ವದ ಮೊದಲ ಆಟಗಾರನಾಗಲಿದ್ದಾರೆ.
05:13 PM (IST) Oct 17
BSNL ದೀಪಾವಳಿ ಭರ್ಜರಿ ಆಫರ್, ಕೇವಲ 1 ರೂಪಾಯಿಗೆ ಅನ್‌ಲಿಮಿಟೆಡ್ ಕಾಲ್, ಡೇಟಾ ಘೋಷಿಸಲಾಗಿದೆ. ಬಿಎಸ್ಎನ್ಎಲ್ ಬಳಕೆದಾರರು, ಹೊಸ ಗ್ರಾಹಕರಿಗೆ ದೀಪಾವಳಿ ಬೋನಾನ್ಜಾ ಆಫರ್ ನೀಡಲಾಗಿದೆ. ಆಫರ್ ಮಾಹಿತಿ ಇಲ್ಲಿದೆ.
04:32 PM (IST) Oct 17
ಬೆಂಗಳೂರು: ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿ ಆರಂಭಕ್ಕೆ ಇದೀಗ ಕ್ಷಣಗಣನೆ ಆರಂಭವಾಗಿದೆ. ಅಕ್ಟೋಬರ್ 19ರಿಂದ 3 ಪಂದ್ಯಗಳ ಸರಣಿ ಆರಂಭವಾಗಲಿದ್ದು, ಪಂದ್ಯ ಎಷ್ಟು ಗಂಟೆಗೆ ಆರಂಭವಾಗಲಿದೆ? ಯಾವ ಚಾನೆಲ್‌ನಲ್ಲಿ ವೀಕ್ಷಿಸಬಹುದು ನೋಡೋಣ ಬನ್ನಿ.
04:30 PM (IST) Oct 17
ದೀಪಾವಳಿಗೆ ಗೂಗಲ್ ಮೆಗಾ ಆಫರ್, ಕೇವಲ 11 ರೂಪಾಯಿಗೆ 2ಟಿಬಿ ಸ್ಟೋರೇಜ್ ಘೋಷಿಸಿದೆ. ತಿಂಗಳಿಗೆ 130 ರಿಂದ 210 ರೂಪಾಯಿವರೆಗಿದ್ದ ಸ್ಟೋರೇಜ್ ಪ್ಲಾನ್ ಇದೀಗ 11 ರೂಗೆ ಗೂಗಲ್ ನೀಡುತ್ತಿದೆ. ಆ್ಯಕ್ಟಿವೇಟ್ ಮಾಡುವುದು ಹೇಗೆ?
04:29 PM (IST) Oct 17
ರಷ್ಯಾ ತೈಲ ಖರೀದಿಗೆ ಸಂಬಂಧಿಸಿದಂತೆ ಪ್ರಧಾನಿ ಮೋದಿ ಅವರು ಟ್ರಂಪ್‌ಗೆ ಹೆದರುತ್ತಾರೆ ಎಂಬ ರಾಹುಲ್ ಗಾಂಧಿ ಹೇಳಿಕೆಯನ್ನು ಅಮೆರಿಕದ ಗಾಯಕಿ ಮೇರಿ ಮಿಲ್ಬೆನ್ ತೀವ್ರವಾಗಿ ಖಂಡಿಸಿದ್ದಾರೆ. ಪ್ರಧಾನಿ ಮೋದಿಯವರ ರಾಜತಾಂತ್ರಿಕತೆಯನ್ನು ಶ್ಲಾಘಿಸಿದ ಅವರು, ರಾಹುಲ್ ಗಾಂಧಿಯ ನಾಯಕತ್ವದ ಗುಣ ಪ್ರಶ್ನಿಸಿದ್ದಾರೆ.
03:52 PM (IST) Oct 17
ಪಾಕಿಸ್ತಾನ-ಅಫ್ಘಾನ್ ಗಡಿಯ ಉತ್ತರ ವಜರಿಸ್ತಾನದಲ್ಲಿ ನಡೆದ ಆತ್ಮಾಹುತಿ ಬಾಂಬ್ ದಾಳಿಯಲ್ಲಿ ಏಳು ಪಾಕಿಸ್ತಾನಿ ಸೈನಿಕರು ಮೃತಪಟ್ಟಿದ್ದಾರೆ. ತೆಹ್ರೀಕ್ ಎ ತಾಲಿಬಾನ್ ಪಾಕಿಸ್ತಾನ್ ಸಂಘಟನೆಯು ಈ ದಾಳಿಯ ಹೊಣೆ ಹೊತ್ತಿದೆ.
03:47 PM (IST) Oct 17
ದೀಪಾವಳಿಗೆ ಊರಿಗೆ ತೆರಳುತ್ತಿದ್ದೀರಾ? ರೈಲ್ವೇ ಟಿಕೆಟ್ ಬುಕ್ ಮಾಡಲು ಸಾಧ್ಯವಾಗದೇ ಪರದಾಟ, ಭಾರತೀಯ ರೈಲ್ವೇ ವೆಬ್‌ಸೈಟ್ ಹಾಗೂ ಆ್ಯಪ್ ಡೌನ್ ಆಗಿದೆ. ಟಿಕೆಟ್ ಸಿಗದೆ ಜನರು ಕಂಗಾಲಾಗಿದ್ದಾರೆ. ಈಗ ಟಿಕೆಟ್ ಪಡೆಯುವುದು ಹೇಗೆ?
03:33 PM (IST) Oct 17
ಸುಮಾರು 7 ತಿಂಗಳ ಬಳಿಕ ವಿರಾಟ್ ಕೊಹ್ಲಿ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಗೆ ಮರಳಿದ್ದಾರೆ. ಇದು ಅವರ ಕೊನೆಯ ಆಸೀಸ್ ಪ್ರವಾಸವಾಗುವ ಸಾಧ್ಯತೆಯಿದ್ದು, ಅಭಿಮಾನಿಗಳು ಅವರಿಂದ ಮತ್ತೊಂದು ಸ್ಫೋಟಕ ಪ್ರದರ್ಶನವನ್ನು ನಿರೀಕ್ಷಿಸುತ್ತಿದ್ದಾರೆ.
02:36 PM (IST) Oct 17
ಜಾಮ್‌ನಗರ ಶಾಸಕಿ ಕ್ರಿಕೆಟರ್ ರವೀಂದ್ರ ಜಡೇಜಾ ಪತ್ನಿ ರಿವಾಬಾ ಜಡೇಜಾ ಸಚಿವೆಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ನಿನ್ನೆಯಷ್ಟೇ ಗುಜರಾತ್ ಸಚಿವ ಸಂಪುಟದ ಸಚಿವರು ಹೊಸ ಸಂಪುಟ ರಚನೆಯ ಕಾರಣಕ್ಕೆ ರಾಜೀನಾಮೆ ನೀಡಿದ್ದರು. ಇಂದು ಸಂಪುಟ ಪುನರಚನೆಯಾಗಿದ್ದು, ರಿವಾಬಾ ಜಡೇಜಾಗೆ ಸಚಿವ ಸ್ಥಾನ ಸಿಕ್ಕಿದೆ.
12:57 PM (IST) Oct 17
ದುಬೈ: 2026ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯು ಮುಂಬರುವ ಫೆಬ್ರವರಿ ಹಾಗೂ ಮಾರ್ಚ್‌ನಲ್ಲಿ ನಡೆಯಲಿದ್ದು, ಟೂರ್ನಿಯಲ್ಲಿ ಪಾಲ್ಗೊಳ್ಳಲಿರುವ ಎಲ್ಲಾ 20 ತಂಡಗಳು ಅಂತಿಮವಾಗಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ
11:58 AM (IST) Oct 17
ಬೆಂಗಳೂರು: ಮಾಜಿ ಕ್ರಿಕೆಟಿಗ ಅನಿಲ್ ಕುಂಬ್ಳೆ ಅಕ್ಟೋಬರ್ 17 ರಂದು ತಮ್ಮ 54ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಈ ಸಂದರ್ಭದಲ್ಲಿ, ಅವರ ಇಂಟ್ರೆಸ್ಟಿಂಗ್ ಲವ್ ಸ್ಟೋರಿ ಬಗ್ಗೆ ತಿಳಿಯೋಣ.
10:31 AM (IST) Oct 17
ನವದೆಹಲಿ: ಟೀಂ ಇಂಡಿಯಾ ರನ್ ಮಷೀನ್ ವಿರಾಟ್ ಕೊಹ್ಲಿ ನಿವೃತ್ತಿ ಹೊಸ್ತಿಲಲ್ಲಿದ್ದಾರೆ ಎನ್ನುವ ಮಾತು ಕೇಳಿಬರುತ್ತಿರುವುದರ ನಡುವೆ, ಅವರು ಮಾಡಿದ ಒಂದು ಟ್ವೀಟ್ ಅವರ ಅಭಿಮಾನಿಗಳ ನಿದ್ದೆಗೆಡುವಂತೆ ಮಾಡಿದೆ. ಏನದು ಪೋಸ್ಟ್? ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.
09:31 AM (IST) Oct 17