ನೀವು ಭೇಟಿ ನೀಡಿದ್ದು ಅದಿನಾ ಮಸೀದಿ ಅಲ್ಲ, ಆದಿನಾಥ ದೇಗುಲ; ಸಂಸದ ಯೂಸುಫ್ ಪಠಾಣ್‌ಗೆ ಬಿಜೆಪಿ ಪಾಠ ಮಾಡಿದೆ. ಟಿಎಂಸಿ ಸಂಸದ ಸೋಶಿಯಲ್ ಮೀಡಿಯಾದಲ್ಲಿ ಮಾಡಿದ ಪೋಸ್ಟ್ ಇದೀಗ ಭಾರಿ ಚರ್ಚೆಗೆ ಕಾರಣವಾಗಿದೆ. ಆದಿನಾಥ ದೇಗುಲ ಮರಳಿ ಪಡೆಯಿರಿ ಅನ್ನೋ ಕೂಗು ಕೇಳಿಬರುತ್ತಿದೆ. 

ಮಾಲ್ಡ (ಅ.17) ಪಶ್ಚಿಮ ಬಂಗಾಳದ ಟಿಎಂಸಿ ಸಂಸದ ಯೂಸುಫ್ ಪಠಾಣ್ ಇದೀಗ ಮತ್ತೆ ಚರ್ಚೆಗೆ ಗ್ರಾಸವಾಗಿದ್ದಾರೆ. ಪಶ್ಚಿಮ ಬಂಗಾಳದ ಮಾಲ್ಡದಲ್ಲಿರುವ ಅದಿನಾ ಮಸೀದಿಗೆ ಭೇಟಿ ನೀಡಿ ಫೋಟೋ ಹಂಚಿಕೊಂಡಿದ್ದಾರೆ. ಅದಿನಾ ಮಸೀದಿ ನಿರ್ಮಾಣ , ಭಾರತದ ಅತೀ ದೊಡ್ಡ ಮಸೀದಿ ಎಂದು ಪೋಸ್ಟ್ ಮಾಡಿದ್ದಾರೆ. ಆದರೆ ಯೂಸುಫ್ ಪಠಾಣ್ ಟ್ವೀಟ್ ಮಾಡಿದ ಬೆನ್ನಲ್ಲೇ ಪಶ್ಚಿಮ ಬಂಗಾಳದ ಬಿಜೆಪಿ ನೀವು ಭೇಟಿ ನೀಡಿದ್ದು ಅದಿನಾ ಮಸೀದಿ ಅಲ್ಲ, ಅದು ಆದಿನಾಥ ದೇವಸ್ಥಾನ ಎಂದು ಬಿಜೆಪಿ ಹೇಳಿದೆ. ಇದೀಗ ಅದಿನಾ ಮಸೀದಿ ಹಾಗೂ ಆದಿನಾಥ ದೇಗುಲ ಕುರಿತು ಭಾರಿ ಚರ್ಚೆಯಾಗುತ್ತಿದ್ದು, ಆದಿನಾಥ ದೇವಸ್ಥಾನ ಕಡವಿ ನಿರ್ಮಾಣಗೊಂಡಿರುವ ಮಸೀದಿಯನ್ನು ಮರಳಿ ಪಡೆದು ದೇಗುಲ ಪುನರ್ ಸ್ಥಾಪಿಸಬೇಕು ಅನ್ನೋ ಕೂಗ ಜೋರಾಗುತ್ತಿದೆ.

ಯೂಸುಫ್ ಪಠಾಣ್ ಮಸೀದಿ ಭೇಟಿ

ಪಶ್ಚಿಮ ಬಂಗಾಳದ ಮಾಲ್ಡದಲ್ಲಿರುವ ಈ ಅದಿನಾ ಮಸೀದಿ ದೇಶದ ಬಹುತೇಕ ಕಡೆ ಇರುವಂತೆ ದೇವಸ್ಥಾನದ ಮೇಲೆ ನಿರ್ಮಾಣಗೊಂಡಿದೆ. ಈ ಮಸೀದಿಗೆ ಬೇಟಿ ನೀಡಿರುವ ಸಂಸದ ಯೂಸುಫ್ ಪಠಾಣ್, ಇದು ಅತ್ಯಂತ ಐತಿಹಾಸಿಕ ಮಸೀದಿಯಾಗಿದೆ. 14ನೇ ಶತಮಾನದಲ್ಲಿ ಇಲ್ಯಾಸಿ ಆಡಳಿತ ಕಾಲದ ಸುಲ್ತಾನ್ ಸಿಕಂದರ್ ಶಾ ಈ ಮಸೀದಿ ನಿರ್ಮಾಣ ಮಾಡಿದ್ದಾನೆ. ಮಸೀದಿಯನ್ನು ಕ್ರಿ.ಶ 1373-1375 ನಿರ್ಮಾಣ ಮಾಡಲಾಗಿದೆ. ಭಾರತದ ಅತೀ ದೊಡ್ಡ ಮಸೀದಿ ಇದಾಗಿದೆ. ಈ ಮಸೀದಿ ವಾಸ್ತುಶಿಲ್ಪಕ್ಕೆ ಹಿಡಿದ ಕನ್ನಡಿಯಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.

ಬಿಜೆಪಿಯಿಂದ ತಿರುಗೇಟು

ಯೂಸುಫ್ ಪಠಾಣ್ ಟ್ವೀಟ್‌ಗೆ ಪಶ್ಚಿಮ ಬಂಗಾಳ ಬಿಜೆಪಿ ಪ್ರತಿಕ್ರಿಯೆ ನೀಡಿದೆ. ಕರೆಕ್ಷನ್ ಎಂದು ಇದು ಆದಿನಾಥ ದೇವಸ್ಥಾನ ಎಂದು ಟ್ವೀಟ್ ಮಾಡಿದೆ. ಬಿಜೆಪಿ ಮಾಡಿದ ಟ್ವೀಟ್ ಬೆನ್ನಲ್ಲೇ ಅದಿನಾ ಮಸೀದಿ ಕುರಿತು ಇತಿಹಾಸ ಕೆದಕುವ ಪ್ರಯತ್ನ ನಡೆಯುತ್ತಿದೆ.

Scroll to load tweet…

ಯೂಸುಫ್ ಪಠಾಣ್ ಟ್ವೀಟ್‌ಗೆ ಹಲವರ ಪ್ರತಿಕ್ರಿಯೆ

ಯೂಸುಫ್ ಪಠಾಣ್ ಅದಿನಾ ಮಸೀದಿ ಕುರಿತು ಪೋಸ್ಟ್ ಮಾಡಿದರೆ, ಇದು ಆದಿನಾಥ ದೇಗುಲ ಎಂದು ಹಲವರು ಮಸೀದಿಯ ಕೆಲ ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ. ಮಸೀದಿಯ ಗೊಡೆಗಳಲ್ಲಿರುವ ಹಿಂದೂ ವಾಸ್ತುಶಿಲ್ಪ, ಹಿಂದೂ ದೇವರ ಕೆತ್ತನೆಗಳನ್ನು ಪೋಸ್ಟ್ ಮಾಡಿದ್ದಾರೆ. ಆದಿನಾಥ ದೇವಸ್ಥಾನ ಕೆಡವಿ ಅದಿನಾ ಮಸೀದಿ ನಿರ್ಮಾಣ ಮಾಡಿದ್ದಾರೆ. ಈ ಮಸೀದಿ ವಶಪಡಿಸಿಕೊಂಡು ಇಲ್ಲಿ ಆದಿನಾಥ ದೇವಸ್ಥಾನ ಪುನರ್ ಸ್ಥಾಪಿಸಬೇಕು ಎಂದು ಹಲವರು ಸೋಶಿಯಲ್ ಮೀಡಿಯಾದಲ್ಲಿ ಅಭಿಪ್ರಾಯವ್ಯಕ್ತಪಡಿಸಿದ್ದಾರೆ.

ಆದಿನಾಥ ಜೈನ ದೇಗುಲ

ಆದಿನಾಥ ಜೈನ ದೇಗುಲ ಎಂದು ಹಲವರು ಸೋಶಿಯಲ್ ಮೀಡಿಯಾದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಮೊದಲ ತೀರ್ಥಂಕರ ಆದಿನಾಥನಿಗೆ ಮಾಲ್ಡದಲ್ಲಿ ಅತೀ ದೊಡ್ಡ ದೇಗುಲ ನಿರ್ಮಾಣ ಮಾಡಲಾಗಿತ್ತು. ಈ ದೇಗುಲವನ್ನು ಇಸ್ಲಾಂ ದಾಳಿಕೋರರು ಕೆಡವಿ ಅದಿನಾ ಮಸೀದಿ ನಿರ್ಮಾಣ ಮಾಡಿದ್ದಾರೆ. ಹೀಗಾಗಿ ಆದಿನಾಥನ ದೇಗುಲ ಪುನರ್ ನಿರ್ಮಾಣವಾಗಬೇಕು ಎಂದು ಆಗ್ರಹಿಸಿದ್ದಾರೆ.

Scroll to load tweet…