- Home
- Sports
- Cricket
- 2026ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿ: ಕಣಕ್ಕಿಳಿಯುವ 20 ತಂಡಗಳು ಕನ್ಫರ್ಮ್! ಯಾವೆಲ್ಲಾ ತಂಡಗಳಿವೆ ನೋಡಿ
2026ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿ: ಕಣಕ್ಕಿಳಿಯುವ 20 ತಂಡಗಳು ಕನ್ಫರ್ಮ್! ಯಾವೆಲ್ಲಾ ತಂಡಗಳಿವೆ ನೋಡಿ
ದುಬೈ: 2026ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯು ಮುಂಬರುವ ಫೆಬ್ರವರಿ ಹಾಗೂ ಮಾರ್ಚ್‌ನಲ್ಲಿ ನಡೆಯಲಿದ್ದು, ಟೂರ್ನಿಯಲ್ಲಿ ಪಾಲ್ಗೊಳ್ಳಲಿರುವ ಎಲ್ಲಾ 20 ತಂಡಗಳು ಅಂತಿಮವಾಗಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ

ಭಾರತ-ಶ್ರೀಲಂಕಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್
2026ರಲ್ಲಿ ಭಾರತ ಹಾಗೂ ಶ್ರೀಲಂಕಾದಲ್ಲಿ ನಡೆಯಲಿರುವ ಐಸಿಸಿ ಟಿ20 ವಿಶ್ವಕಪ್‌ಗೆ 20ನೇ ತಂಡವಾಗಿ ಯುಎಇ ಅರ್ಹತೆ ಪಡೆದಿದೆ.
ಜಪಾನ್ ಸೋಲಿಸಿ ಅರ್ಹತೆ ಪಡೆದ ಯುಎಇ
ಏಷ್ಯನ್ ಅರ್ಹತಾ ಸುತ್ತಿನ ಮೂಲಕ ಯುಎಇ ತಮ್ಮ ಸ್ಥಾನ ಖಚಿತಪಡಿಸಿಕೊಂಡಿತು. ಅರ್ಹತಾ ಸುತ್ತಿನ ಪಂದ್ಯಾವಳಿಯಲ್ಲಿ ಜಪಾನ್ ತಂಡವನ್ನು ಸೋಲಿಸಿ ಯುಎಇ ತಂಡವು ಚುಟುಕು ವಿಶ್ವಕಪ್‌ಗೆ ಅರ್ಹತೆ ಪಡೆದಿದೆ.
5 ತಂಡಗಳ ನಾಲ್ಕು ಗುಂಪು
ಕಳೆದ ಆವೃತ್ತಿಯಲ್ಲಿ ನಡೆದಂತೆ ಮುಂಬರುವ ಸೀಸನ್ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲೂ ತಲಾ 5 ತಂಡಗಳ 4 ಗುಂಪುಗಳನ್ನು ರಚಿಸಲಾಗುತ್ತದೆ.
ಗ್ರೂಪ್ ಹಂತವೂ ರೌಂಡ್ ರಾಬಿನ್ ಮಾದರಿ
ಪ್ರತಿ ಗುಂಪಿನಲ್ಲಿ ಆ ತಂಡವು ಉಳಿದ ನಾಲ್ಕು ತಂಡಗಳ ಎದುರು ತಲಾ ಒಂದೊಂದು ಮ್ಯಾಚ್ ಆಡಲಿದೆ. ಪ್ರತಿ ಗುಂಪಿನಲ್ಲಿ ಅಗ್ರ ಎರಡು ಸ್ಥಾನ ಪಡೆಯುವ ತಂಡಗಳು ಸೂಪರ್-8 ಹಂತಕ್ಕೆ ಅರ್ಹತೆ ಪಡೆಯಲಿವೆ.
ಸೂಪರ್-8 ಹಂತದಲ್ಲೂ ಎರಡು ಗುಂಪುಗಳಾಗಿ ವಿಂಗಡಣೆ
ಇನ್ನು ಸೂಪರ್ 8 ಹಂತದಲ್ಲಿ 4 ತಂಡಗಳ ಎರಡು ಗುಂಪುಗಳಾಗಿ ವಿಂಗಡಿಸಲಾಗುತ್ತದೆ. ಸೂಪರ್ 8 ಹಂತದ ಪ್ರತಿ ಗುಂಪಿನಲ್ಲಿ ಅಗ್ರ ಎರಡು ಸ್ಥಾನ ಪಡೆಯುವ ತಂಡಗಳು ಸೆಮಿಫೈನಲ್‌ಗೆ ಅರ್ಹತೆ ಪಡೆಯಲಿವೆ.
20 ತಂಡಗಳು ಕನ್ಫರ್ಮ್
ವಿಶ್ವಕಪ್‌ನಲ್ಲಿ ಭಾರತ, ಶ್ರೀಲಂಕಾ, ಆಫ್ಘಾನಿಸ್ತಾನ, ಆಸ್ಟ್ರೇಲಿಯಾ, ಬಾಂಗ್ಲಾದೇಶ, ಇಂಗ್ಲೆಂಡ್, ದ.ಆಫ್ರಿಕಾ, ಅಮೆರಿಕ, ವೆಸ್ಟ್ ಇಂಡೀಸ್, ಐರ್ಲೆಂಡ್, ನ್ಯೂಜಿಲೆಂಡ್. ಪಾಕಿಸ್ತಾನ, ಕೆನಡಾ, ಇಟಲಿ, ನೆದರ್‌ಲೆಂಡ್ಸ್, ನಮೀಬಿಯಾ, ಜಿಂಬಾಬೈ, ನೇಪಾಳ, ಒಮಾನ್ ಹಾಗೂ ಯುಎಇ ತಂಡಗಳು ಆಡಲಿವೆ.
ಮೊದಲ ಸಲ ಇಟಲಿ ತಂಡ ಅರ್ಹತೆ
ಈ ತಂಡಗಳ ಪೈಕಿ ಇದೇ ಮೊದಲ ಸಲ ಇಟಲಿ ತಂಡವು ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೆ ಅರ್ಹತೆ ಪಡೆದಿದೆ.
ಮತ್ತೊಮ್ಮೆ ವಿಶ್ವಕಪ್ ಮೇಲೆ ಕಣ್ಣಿಟ್ಟ ಭಾರತ
ಹಾಲಿ ಚಾಂಪಿಯನ್ ಭಾರತ ತಂಡವು ಇದೀಗ ತವರಿನಲ್ಲಿ ಮತ್ತೊಮ್ಮೆ ಐಸಿಸಿ ಟಿ20 ವಿಶ್ವಕಪ್ ಗೆಲ್ಲುವ ವಿಶ್ವಾಸದಲ್ಲಿದೆ.