'ಕಾಂತಾರ' ಖ್ಯಾತಿಯ ನಟ ರಿಷಬ್ ಶೆಟ್ಟಿ ಅವರು ಅಮಿತಾಭ್ ಬಚ್ಚನ್ ನಡೆಸಿಕೊಡುವ 'ಕೌನ್ ಬನೇಗಾ ಕರೋಡ್​ಪತಿ' ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ವೇಳೆ, ಅವರು ರಜನಿಕಾಂತ್ ಅವರಂತೆ ನಡಿಗೆಯನ್ನು ಅನುಕರಿಸಿ ಅಮಿತಾಭ್ ಅವರನ್ನು ಬೆರಗುಗೊಳಿಸಿದರು.  

ಕೌನ್​ ಬನೇಗಾ ಕರೋರ್​ಪತಿಯಲ್ಲಿ ರೋಚಕ ಕ್ಷಣ: ರಜನಿ ಸ್ಟೈಲ್​ನಲ್ಲಿ Rishab Shetty- ಬೆರಗಾದ ಅಮಿತಾಭ್​

ಕಾಂತಾರ (Kantara) ನಟ ರಿಷಬ್​ ಶೆಟ್ಟಿ ಅವರು ಇದೀಗ ಪ್ಯಾನ್​ ಇಂಡಿಯಾ ಮೀರಿದ ಸ್ಟಾರ್​ ಆಗಿ ಮಿಂಚುತ್ತಿದ್ದಾರೆ. ಕೆಲವೇ ವರ್ಷಗಳ ಹಿಂದೆ ಒಂದೇ ಒಂದು ರೋಲ್​ಗಾಗಿ ಪರದಾಡುತ್ತಿದ್ದ, ಮಾಡಿದ ಸಿನಿಮಾಕ್ಕೆ ಒಂದೇ ಒಂದು ಥಿಯೇಟರ್​ ಸಿಗದೇ ಪರದಾಡಿದ್ದ ನಟನೀಗ ಯಾವ ಪರಿಯಲ್ಲಿ ಡಿಮಾಂಡ್​ ಕುದುರಿಸಿಕೊಂಡಿದ್ದಾರೆ ಎನ್ನುವುದು ಹೇಳುವುದೇ ಬೇಡ. 2023ರಲ್ಲಿ ಕಾಂತಾರ ಚಿತ್ರ ಮಾಡಿದಾಗಲೇ ನಟ ರಿಷಬ್​ ಶೆಟ್ಟಿ (Rishab Shetty) ಅವರ ಲೆವೆಲ್ಲೇ ಬೇರೆ ಹೋಗಿತ್ತು. ಆದರೆ ಇದೀಗ ಕಾಂತಾರ ಚಾಪ್ಟರ್​-1 ಬಂದ ಮೇಲಂತೂ ಕೇಳುವುದೇ ಬೇಡ.

ಸಕತ್​ ಬೇಡಿಕೆಯ ನಟ

ಇಂತಿಪ್ಪ ರಿಷಬ್​ ಶೆಟ್ಟಿ ಅವರಿಗೆ ಈಗ ಎಲ್ಲಿಲ್ಲದ ಬೇಡಿಕೆ. ವಿವಿಧ ಭಾಷೆಗಳ ಘಟಾನುಘಟಿ ಸಿನಿಮಾ ತಾರೆಯರು, ಗಣ್ಯರು, ವಿವಿಧ ಕ್ಷೇತ್ರಗಳ ಸೆಲೆಬ್ರಿಟಿಗಳು ಕೂಡ ಹಾಡಿ ಹೊಗಳುತ್ತಿದ್ದಾರೆ. ಒಬ್ಬ ಕಲಾವಿದನನ್ನು ಇನ್ನೊಬ್ಬ ಕಲಾವಿದ ಹೊಗಳುವುದು ಸ್ವಲ್ಪ ಕಮ್ಮಿನೇ. ಆದರೆ ರಿಷಬ್​ ಶೆಟ್ಟಿ ಅವರ ವಿಷಯದಲ್ಲಿ ಹಾಗಾಗುತ್ತಿಲ್ಲ. ಬಹುತೇಕ ಎಲ್ಲಾ ಭಾಷೆಗಳ ಸ್ಟಾರ್​ ನಟರು ಕೂಡ ಕಾಂತಾರ-1ರ ಬಗ್ಗೆ ಶ್ಲಾಘನೆಗಳ ಮಹಾಪೂರವನ್ನೇ ಹರಿಸುತ್ತಿದ್ದಾರೆ.

ರಜನಿಕಾಂತ್​ ಸ್ಟೈಲ್​ನಲ್ಲಿ ರಿಷಬ್​ ಶೆಟ್ಟ

ಇದೀಗ ನಟ ರಿಷಬ್​ ಶೆಟ್ಟಿ ಅಮಿತಾಭ್​ ಬಚ್ಚನ್​ ಅವರು ನಡೆಸಿಕೊಡುವ ಕೌನ್​ ಬನೇಗಾ ಕರೋರ್​ಪತಿಯಲ್ಲಿ ಕಾಣಿಸಿಕೊಂಡಿದ್ದಾರೆ. ಇದು Kaun Banega Crorepathiಯ 17ನೇ ಸಂಚಿಕೆ. ಈ ಸಂಚಿಕೆಯಲ್ಲಿ ಆಗಮಿಸಿರುವ ರಿಷಬ್​ ಶೆಟ್ಟಿ ಅವರು ರಜನಿಕಾಂತ್​ ಅವರ ಕುರಿತು ಮಾತನಾಡಿದ್ದಾರೆ. ಆ ಸಮಯದಲ್ಲಿ ಅಲ್ಲಿದ್ದ ಒಬ್ಬರು ರಿಷಬ್​ ಶೆಟ್ಟಿ ಅವರು ರಜನಿಕಾಂತ್​ ಅವರ ನಡಿಗೆಯನ್ನು ಚೆನ್ನಾಗಿ ತೋರಿಸುತ್ತಾರೆ ಎಂದಾಗ ಅಮಿತಾಭ್​ ಬಚ್ಚನ್​ (Amitabh Bachchan) ತೋರಿಸುವಂತೆ ಹೇಳಿದ್ದಾರೆ.

ಅಗ್ನಿಪಥ್​ ಡೈಲಾಗ್​

ಆಗ ರಿಷಬ್​ ಶೆಟ್ಟಿ ರಜನಿಕಾಂತ್​ ಸ್ಟೈಲ್​ನಲ್ಲಿ ವಾಕ್​ ಮಾಡಿದ್ದಾರೆ. ಈ ಷೋಗೆ ಪಂಚೆಯಲ್ಲಿಯೇ ಬಂದಿರೋ ಶೆಟ್ಟಿ ಅವರು ರಜನೀ ಅವರ ಸ್ಟೈಲ್​ ನೋಡಿ ಖುದ್ದು ಅಮಿತಾಭ್​ ಬೆರಗಾಗಿದ್ದಾರೆ. ಕೊನೆಗೆ ರಿಷಬ್​ ಶೆಟ್ಟಿ ಅವರು ಅಮಿತಾಭ್ ಅವರಿಗೆ ಅಗ್ನಿಪಥ್​ ಚಿತ್ರದ ಡೈಲಾಗ್​ ಹೇಳುವಂತೆ ಅಮಿತಾಭ್​ ಅವರನ್ನು ಕೋರಿದ್ದಾರೆ. ಇಷ್ಟು ವರ್ಷವಾದರೂ ಆ ಸಿನಿಮಾದ ಡೈಲಾಗ್​ ನೆನಪಿಟ್ಟುಕೊಂಡಿರುವ ಅಮಿತಾಭ್​ ಅದನ್ನು ಹೇಳಿದಾಗ, ಇಡೀ ಸಭೆಯಲ್ಲಿ ಚಪ್ಪಾಳೆಗಳ ಸುರಿಮಳೆ. ಅದರ ವಿಡಿಯೋ ಇಲ್ಲಿದೆ ನೋಡಿ...

View post on Instagram