ಆಹಾರ ಉತ್ಪನ್ನ ಮೇಲೆ ORS ಲೇಬಲ್ ಬಳಕೆ ನಿಷೇಧ, 8 ವರ್ಷಗಳ ಕಾನೂನು ಹೋರಾಟ ಗೆದ್ದ ವೈದ್ಯೆ, ಹಣ್ಣಿನ ಪಾನೀಯ ಸೇರಿದಂತೆ ಹಲವು ಪಾನಿಯಗಳ ಮೇಲೆ ಒಆರ್‌ಎಸ್ ಎಂದು ಬಳಕೆ ಮಾಡಲಾಗುತ್ತಿದೆ. ಇದೀಗ FSSAI ಮಹತ್ವದ ಆದೇಶ ನೀಡಿದೆ.

ಹೈದರಾಬಾದ್ (ಅ.17) ಹೈದರಾಬಾದ್ ಮೂಲದ ವೈದ್ಯೆ ಕಳೆದ 8 ವರ್ಷಗಳಿಂದ ನಕಲಿ ಒಆರ್‌ಎಸ್ ಲೇಬಲ್ ಬಳಕೆ ಕುರಿತು ಕಾನೂನು ಹೋರಾಟ ಮಾಡುತ್ತಲೇ ಬಂದಿದೆ. ಇವರ ಹೋರಾಟಕ್ಕೆ ಕೊನೆಗೂ ಗೆಲುವಾಗಿದೆ. ಇದೀಗ ಆಹಾರ ಉತ್ಪನ್ನಗಳಲ್ಲಿ ಪ್ರಮುಖವಾಗಿ ಹಣ್ಣಿನ ಪಾನೀಯ ಮೇಲೆ ಒಆರ್‌ಎಸ್ ಎಂದು ಲೇಬಲ್ ಬಳಕೆ ಮಾಡುವುದನ್ನು FSSAI ನಿಷೇಧಿಸಿದೆ. ವಿಶ್ವ ಆರೋಗ್ಯ ಸಂಸ್ಥೆ ಸೂಚಿಸಿದ ಸೂತ್ರಗಳನ್ನು ಒಳಗೊಂಡ ಪಾನೀಯ ಮಾತ್ರ ಒಆರ್‌ಎಸ್ ಎಂದು ಲೇಬಲ್ ಬಳಕೆ ಮಾಡಬಹುದು. ಇನ್ನುಳಿದ ಪಾನೀಯಗಳು ಒಆರ್‌ಎಸ್ ಅಲ್ಲ ಎಂದು ವೈದ್ಯೆ ಶಿವರಂಜನಿ ಸಂತೋಷ್ ನಡೆಸಿದ ಹೋರಾಟದಲ್ಲಿ ಗೆಲುವು ಕಂಡಿದ್ದಾರೆ.

ಕಣ್ಣೀರಿಟ್ಟ ವೈದ್ಯೆ

ಶಿವರಂಜನಿ ಸಂತೋಷ್ ಕಳೆದ 8 ವರ್ಷಗಳಿಂದ ಹೋರಾಟ ಮಾಡುತ್ತಾ ಬಂದಿದ್ದಾರೆ. ಕೊನೆಗೂ ತಮ್ಮ ಹೋರಾಟಕ್ಕೆ ಗೆಲುವು ಸಿಕ್ಕಿದೆ. ನಕಲಿ ಒಆರ್‌ಎಸ್ ಕುರಿತು FSSAI ಆದೇಶ ಹೊರಡಿಸಿದೆ. ಈ ಕುರಿತು ಸಂಭ್ರಮ ಹಂಚಿಕೊಂಡ ಶಿವರಂಜನಿ ಸಂತೋಷ್, ಭಾವುಕರಾಗಿದ್ದರು. ಜನರನ್ನು ತಪ್ಪುದಾರಿಗೆ ಏಳೆಯುವ ಉತ್ಪನ್ನಗಳ ಕುರಿತು ಹೋರಾಟ ಮಾಡುತ್ತಾ ಬಂದಿದ್ದೇನೆ. ಇದರ ನಡುವೆ ಹಲವು ಉತ್ಪನ್ನಗಳು,ಕಂಪನಿಗಳು ನನ್ನ ಹೋರಾಟವೇ ತಪ್ಪು, ಕೇವಲ ಪ್ರಚಾರಕ್ಕಾಗಿ ಎಂದು ಬಿಂಬಿಸುವ ಪ್ರಯತ್ನಗು ನಡೆದಿತ್ತು. ಬಾರಿ ಟೀಕೆ, ವಿರೋಧಗಳನ್ನು ಎದುರಿಸಿತ್ತೇನೆ. ಆದರೆ ಕೊನೆಗೂ ಹೋರಾಟಕ್ಕೆ ಗೆಲುವಾಗಿದೆ ಎಂದು ಶಿವರಂಜನಿ ಸಂತೋಷ್ ಕಣ್ಣೀರಿಟ್ಟಿದ್ದಾರೆ.

ನಕಲಿ ಒಆರ್‌ಎಶ್ ವಿರುದ್ಧ ಕಠಿಣ ಕ್ರಮ

ಹಣ್ಣನಿ ಪಾನೀಯ ಸೇರಿದಂತೆ ಇತರ ಪಾನೀಯಗಳ ಮೇಲೆ ಒಆರ್‌ಎಸ್ ಎಂದು ಲೇಬಲ್ ಹಾಕಿ ಮಾರಾಟ ಮಾಡುತ್ತಿರುವುದು ನಿಯಮ ಉಲ್ಲಂಘನೆಯಾಗಿದೆ. ಕಾರಣ ಒರಲ್ ರಿಹೈಡ್ರೇಶನ್ ಸೊಲ್ಯೂಶನ್ (ಒಆರ್‌ಎಸ್ ) ಕಾರ್ಬೋನೇಟೆಟ್ ಸೇರಿದಂತೆ ನಿರ್ದಿಷ್ಠ ಸೂತ್ರಗಳನ್ನು ಒಳಗೊಂಡ ಪಾನೀಯ. ಇದು ವಿಶ್ವ ಆರೋಗ್ಯ ಸಂಸ್ಥೆ ಸ್ಪಷ್ಟವಾಗಿ ಉಲ್ಲೇಖಿಸಿದೆ. ಆದರೆ ಭಾರತದಲ್ಲಿ ಹಲವು ಆಹಾರ ಉತ್ಪನ್ನ ಪಾನೀಯಗಳ ಮೇಲೂ ಒಆರ್‌ಎಸ್ ದಾಖಲಿಸಿ ಮಾರಾಟ ಮಾಡಲಾಗುತ್ತಿತ್ತು. ಇನ್ನು ಮುಂದೆ ಇದು ಸಾಧ್ಯವಿಲ್ಲ. ಈ ಕುರಿತು FSSAI ಸ್ಪಷ್ಟ ನಿರ್ದೇಶನ ನೀಡಿದೆ.

ವಿಶ್ವ ಆರೋಗ್ಯ ಸಂಸ್ಥೆ ಸೂತ್ರದ ಪ್ರಕಾರ ಸರಿಯಾದ ಪ್ರಮಾಣದ ಸಕ್ಕರೆ, ಉಪ್ಪು ನೀರಿನ ಪ್ರಮಾಣ ಸೇರಿಸಬೇಕು. ಈ ಸೂತ್ರ ಪಾಲಿಸದ ಪಾನೀಯಗಳು ಯಾವುದೇ ಕಾರಣಕ್ಕೂ ಒಆರ್‌ಎಸ್ ಎಂದು ಲೇಬಲ್ ಹಾಕಲು ಸಾಧ್ಯವಿಲ್ಲ. ಈ ಉತ್ಪನ್ನಗಳು ಮಾರಾಟಕ್ಕೂ ಅವಕಾಶವಿಲ್ಲ ಎಂದು FSSAI ಆದೇಶದಲ್ಲಿ ಸೂಚಿಸಿದೆ. ಅಕ್ಟೋಬರ್ 14ರಂದು FSSAI ಆದೇಶ ಹೊರಡಿಸಿದೆ. ನಿರ್ಜಲೀಕರಣ, ಅತೀಸಾರ, ವಾಂತಿ, ಸುಸ್ತು ಸೇರಿದಂತೆ ಹಲವು ಸಮಸ್ಯೆಗಳಿಗೆ ಒಆರ್‌ಎಸ್ ತಕ್ಷಣದ ಪರಿಹಾರ ನೀಡಲಿದೆ. ಈ ಒಆರ್‌ಎಸ್ ಪಾನೀಯದಲ್ಲಿರುವ ಗ್ಲೋಕೋಸ್ ತ್ವರಿತವಾಗಿ ಕಾರ್ಯನಿರ್ವಹಿಸುವ ಕಾರಣ ಆರೋಗ್ಯ ಸಮಸ್ಯೆಗಳಿಗೆ ತಕ್ಷದ ಪರಿಹಾರ ನೀಡುತ್ತದೆ.

ಒಆರ್‌ಎಸ್ ಬದಲು ತಮ್ಮ ಪಾನೀಯದಲ್ಲಿರುವ ಸೂತ್ರಗಳು, ಅಂಶಗಳನ್ನು ಆಧರಿಸಿ ಎನರ್ಜಿ ಡ್ರಿಂಕ್, ಹೈಡ್ರೇಶನ್ ಡ್ರಿಂಕ್, ಎಲೆಕ್ಟ್ರೋಲೈಟ್ ಡ್ರಿಂಕ್ ಎಂದು ಹೆಸರಿಸಲು ಸೂಚಿಸಿದೆ. ಗ್ರಾಹಕರನ್ನು ತಪ್ಪು ದಾರಿಗೆ ಏಳೆಯವ, ನಿಯಮ ಉಲ್ಲಂಘಿಸುವವರ ವಿರುದ್ದ ಕ್ರಮದ ಎಚ್ಚರಿಕೆಯನ್ನು FSSAI ನೀಡಿದೆ.