ನವದೆಹಲಿ: ಭಾರತದ ಹಡಗುಗಳನ್ನು ಹೋರ್ಮಜ್ ಜಲಸಂಧಿ ಮೂಲಕ ಸಾಗಲು ಇರಾನ್ ಬಿಟ್ಟಿದ್ದಕ್ಕೆ ಆ ದೇಶದ ಜೊತೆಗೆ ಭಾರತ ಒಪ್ಪಂದ ಮಾಡಿಕೊಂಡಿದೆ ಎಂದು ಅಮೆರಿಕ ಆರೋಪ ಮಾಡಿದೆ. ಆದರೆ ಅಮೆರಿಕದ ಇಂಧನ ಸಚಿವ ಕ್ರಿಸ್ ರೈಟ್ ಅವರ ಈ ಆರೋಪವನ್ನು ಸ್ಪಷ್ಟವಾಗಿ ತಳ್ಳಿಹಾಕಿರುವ ಭಾರತದ ವಿದೇಶಾಂಗ ಸಚಿವ ಜೈಶಂಕರ್, ‘ಇದು ನಮ್ಮ ರಾಜತಾಂತ್ರಿಕ ಮಾತುಕತೆಯ ಫಲವೇ ಹೊರತು, ಭಾರತ ಯಾವುದೇ ಒಳ ಒಪ್ಪಂದ ಮಾಡಿಕೊಂಡಿಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ.

11:04 PM (IST) Mar 17
ಐಪಿಎಲ್ ತಂಡ ರಾಜಸ್ಥಾನ್ ರಾಯಲ್ಸ್ ಮಾರಾಟ ಪ್ರಕ್ರಿಯೆಯಲ್ಲಿ ಹೊಸ ತಿರುವು ಉಂಟಾಗಿದೆ. ಆದಿತ್ಯ ಬಿರ್ಲಾ ಗ್ರೂಪ್ ಜೊತೆಗೆ, ಇದೀಗ ಜಾಗತಿಕ ಉಕ್ಕಿನ ದೈತ್ಯ 'ಆರ್ಸೆಲರ್ ಮಿತ್ತಲ್' ಕುಟುಂಬವೂ ಫ್ರಾಂಚೈಸಿ ಖರೀದಿಸಲು ಆಸಕ್ತಿ ತೋರಿದೆ.
10:46 PM (IST) Mar 17
09:49 PM (IST) Mar 17
ಸಂಜಯ್ ದತ್ ಅವರು 55 ವರ್ಷಗಳ ಹಿಂದೆಯೇ, ಅಂದರೆ ತಮ್ಮ 11ನೇ ವಯಸ್ಸಿನಲ್ಲಿ ಚಿತ್ರರಂಗಕ್ಕೆ ಕಾಲಿಟ್ಟಿದ್ದರು. ಆ ಚಿತ್ರದ ಹೆಸರು 'ರೇಷ್ಮಾ ಔರ್ ಶೇರಾ'. ಇದನ್ನು ಸಂಜು ಬಾಬಾ ಅವರ ತಂದೆ ಸುನೀಲ್ ದತ್ ನಿರ್ದೇಶಿಸಿದ್ದರು.
09:09 PM (IST) Mar 17
ಕೇಂದ್ರ ಸರ್ಕಾರದ ಸಂಸದೀಯ ಸ್ಥಾಯಿ ಸಮಿತಿಯು, ಇಪಿಎಸ್-95 ಯೋಜನೆಯಡಿ ನೀಡಲಾಗುತ್ತಿರುವ ₹1,000 ಕನಿಷ್ಠ ಮಾಸಿಕ ಪೆನ್ಶನ್ ಅನ್ನು ತುರ್ತಾಗಿ ಹೆಚ್ಚಿಸಲು ಶಿಫಾರಸು ಮಾಡಿದೆ. ಪ್ರಸ್ತುತ ಮೊತ್ತವು ಜೀವನ ವೆಚ್ಚಕ್ಕೆ ಸಾಕಾಗುವುದಿಲ್ಲ ಎಂದು ವರದಿ ಹೇಳಿದೆ.
07:40 PM (IST) Mar 17
ಮುಂಬೈನ ಬ್ರಬೋರ್ನ್ ಸ್ಟೇಡಿಯಂನಲ್ಲಿ ಎರಡನೇ ಆವೃತ್ತಿಯ JSW ಇಂಡಿಯನ್ ಓಪನ್ ಸ್ಕ್ವಾಷ್ ಪಂದ್ಯಾವಳಿ ಆರಂಭವಾಗಲಿದೆ. ಹಾಲಿ ಚಾಂಪಿಯನ್ ಅನಾಹತ್ ಸಿಂಗ್, ರಮಿತ್ ಟಂಡನ್, ಜೋಷ್ನಾ ಚಿನಪ್ಪ ಸೇರಿದಂತೆ ಭಾರತದ ಪ್ರಮುಖ ಆಟಗಾರರು ಮತ್ತು ಅಂತರಾಷ್ಟ್ರೀಯ ಸ್ಪರ್ಧಿಗಳು ಪ್ರಶಸ್ತಿಗಾಗಿ ಸೆಣಸಾಡಲಿದ್ದಾರೆ.
07:16 PM (IST) Mar 17
ಚಾರ್ ಧಾಮ್ ಯಾತ್ರೆ 2026 ಕ್ಕೆ ಶ್ರೀ ಬದರಿನಾಥ ಕೇದಾರನಾಥ ಮಂದಿರ ಸಮಿತಿಯು ಹೊಸ ನಿಯಮಗಳನ್ನು ಜಾರಿಗೆ ತಂದಿದೆ. ಸನಾತನೇತರ ಭಕ್ತರು, ಉದಾಹರಣೆಗೆ ನಟಿ ಸಾರಾ ಅಲಿ ಖಾನ್, ದೇವಸ್ಥಾನ ಪ್ರವೇಶಿಸಲು "ನಾನು ಸನಾತನಿ" ಎಂದು ಘೋಷಿಸುವ ಪ್ರಮಾಣಪತ್ರ ನೀಡುವುದು ಕಡ್ಡಾಯವಾಗಿದೆ.
06:43 PM (IST) Mar 17
ಚುನಾವಣೆ ಜಟಾಪಟಿ ನಡುವೆ ಮೂವರು ಕಾಂಗ್ರೆಸ್ ನಾಯಕರು ಸಸ್ಪೆಂಡ್, ಕೋಲಾಹಲ ಶುರು, ಬಿಜೆಪಿಗೆ ಅಡ್ಡಮತದಾನ ಮಾಡಿದ್ದಾರೆ ಎಂದು ಮೂವರು ನಾಯಕರನ್ನು ಅಮಾನತು ಮಾಡಲಾಗಿದೆ. ಇದೀಗ ಈ ನಾಯಕರು ಬಿಜೆಪಿ ಸೇರಲು ಸಜ್ಜಾಗಿದ್ದಾರೆ.
06:28 PM (IST) Mar 17
06:10 PM (IST) Mar 17
ಸಾನಿಯಾ ಮಿರ್ಜಾ, ದುಬೈನಲ್ಲಿನ ಉದ್ವಿಗ್ನ ರಾಜಕೀಯ ಪರಿಸ್ಥಿತಿ ಮತ್ತು ಮಗನ ಸುರಕ್ಷತೆಯ ಕಾಳಜಿಯಿಂದಾಗಿ ಹೈದರಾಬಾದ್‌ಗೆ ಮರಳಿದ್ದಾರೆ. ತಮ್ಮ ಮನೆಯ ಬಳಿ ಫೈಟರ್ ಜೆಟ್‌ಗಳ ಹಾರಾಟದ ಅನುಭವದ ನಂತರ, ಅವರು ಈದ್ ಹಬ್ಬವನ್ನು ಕುಟುಂಬದೊಂದಿಗೆ ಆಚರಿಸಲು ಭಾರತಕ್ಕೆ ವಾಪಸಾಗುವ ನಿರ್ಧಾರ ಮಾಡಿದ್ದಾರೆ.
06:08 PM (IST) Mar 17
ಸರ್ಸೆ ನಿನ್ನ ಸೆರಗ ಹಾಡು ಎಲ್ಲಾ ಪ್ಲಾಟ್‌ಫಾರ್ಮ್‌ನಿಂದ ತೆಗೆಯಿರಿ, ಕೇಂದ್ರ ಸರ್ಕಾರದ ಖಡಕ್ ವಾರ್ನಿಂಗ್, ಕನ್ನಡ ಚಿತ್ರರಂಗ ಮಾನ ದೇಶದಲ್ಲಿ ಹರಾಜಾಗಿದೆ. ಅತ್ಯಂತ ಕೀಳುಮಟ್ಟದ ಸಾಹಿತ್ಯ ಬರೆದ ನಿರ್ದೇಶಕ ಪ್ರೇಮ್ ಹಾಗೂ ಕೆಡಿ ಸಿನಿಮಾಗೆ ಭಾರಿ ಹೊಡೆತ ಬಿದ್ದಿದೆ.
05:54 PM (IST) Mar 17
ಮೋಹನ್‌ಲಾಲ್ ಜೊತೆಗಿನ ತಮ್ಮ ಹೊಸ ಮಿಲಿಟರಿ ಸಿನಿಮಾ 'ಆಪರೇಷನ್ ಸಿಂದೂರ್' ನಿಂತು ಹೋಗಿದೆ ಎಂಬ ವದಂತಿಗಳಿಗೆ ನಿರ್ದೇಶಕ ಮೇಜರ್ ರವಿ ಸ್ಪಷ್ಟನೆ ನೀಡಿದ್ದಾರೆ. ಸಿನಿಮಾ ಕೈಬಿಟ್ಟಿಲ್ಲ, ಆದರೆ ಸ್ವಲ್ಪ ತಡವಾಗಿದೆ ಎಂದಿದ್ದಾರೆ.
05:37 PM (IST) Mar 17
05:31 PM (IST) Mar 17
ಸಿನಿಮಾ ಪ್ರೇಕ್ಷಕರಿಗೆ ನಟ ಸೂರ್ಯ ಅಂದ್ರೆ ಒಂದು ವಿಶೇಷ ಪ್ರೀತಿ. ಅವರಿಗಿಂತ ದೊಡ್ಡ ಸ್ಟಾರ್‌ಗಳು ತಮಿಳಿನಲ್ಲಿ ಹಲವರಿದ್ದರೂ, ಜನರಿಗೆ ಹತ್ತಿರದ ಹೀರೋ ಅಂದ್ರೆ ಅದು ಸೂರ್ಯನೇ. ತೆರೆ ಮೇಲೆ ಮಾತ್ರವಲ್ಲ..
04:40 PM (IST) Mar 17
ನನಗೆ ನಟಿ ನಯನತಾರ ಬೇಕು, ಕೊಡಿಸ್ತೀರಾ? ತಮಿಳುನಾಡು ಸಂಸದನ ಭಾರಿ ವಿವಾದ, ಸಾರ್ವಜನಿಕ ಕಾರ್ಯಕ್ರಮ ಒಂದರಲ್ಲೇ ಈ ಮಾತುಗಳನ್ನಾಡಿ ಇದೀಗ ಹಲವರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಸಂಸದನ ವಿರುದ್ಧ ಆಕ್ರೋಶ ಭುಗಿಲೆದ್ದಿದೆ.
04:39 PM (IST) Mar 17
ಕ್ಯಾಲಿಫೋರ್ನಿಯಾ ಮೂಲದ 'ರಿಫ್ಲೆಕ್ಟ್ ಆರ್ಬಿಟಲ್' ಕಂಪನಿಯು, ಬಾಹ್ಯಾಕಾಶದಲ್ಲಿ ಬೃಹತ್ ಕನ್ನಡಿಗಳಿರುವ ಉಪಗ್ರಹಗಳನ್ನು ಬಳಸಿ ರಾತ್ರಿಯ ಸಮಯದಲ್ಲಿ ಭೂಮಿಗೆ ಸೂರ್ಯನ ಬೆಳಕನ್ನು ಪ್ರತಿಫಲಿಸುವ ಯೋಜನೆ ರೂಪಿಸಿದೆ.
04:26 PM (IST) Mar 17
ತರುಣ್ ಮೂರ್ತಿ ನಿರ್ದೇಶನದ ಸಿನಿಮಾ ಶೂಟಿಂಗ್ ವೇಳೆ ನಟ ಮೋಹನ್‌ಲಾಲ್ ಅಭಿಮಾನಿಗಳ ಜೊತೆ ಫೋಟೋಶೂಟ್ ನಡೆಸಿದ್ದರು. ಈ ವೇಳೆ ತೆಗೆದ ಒಂದು ವಿಡಿಯೋ ಈಗ ವಿವಾದಕ್ಕೆ ಕಾರಣವಾಗಿದ್ದು, ವೈರಲ್ ಆಗಿವೆ.
03:56 PM (IST) Mar 17
ರೈಲ್ವೆ ಟಿಕೆಟ್‌ಗಳ ಬದಿಗಳಲ್ಲಿ ಕಂಡುಬರುವ ರಂಧ್ರಗಳು 'ಡಾಟ್ ಮ್ಯಾಟ್ರಿಕ್ಸ್ ಪ್ರಿಂಟಿಂಗ್ ಸಿಸ್ಟಮ್'ನಿಂದ ಉಂಟಾಗುತ್ತವೆ. ಈ 'ಸ್ಪ್ರೋಕೆಟ್ ಹೋಲ್ಸ್' ಗಳು, 'ಕಂಟಿನ್ಯೂಯಸ್ ಪೇಪರ್' ಅನ್ನು ಪ್ರಿಂಟರ್‌ನಲ್ಲಿ ಸಮಾನವಾಗಿ ಚಲಿಸಲು ಸಹಾಯ ಮಾಡುತ್ತವೆ.
03:48 PM (IST) Mar 17
ಸರ್ಕಾರಿ ಮಹಿಳಾ ಉದ್ಯೋಗಿಗೆ ಸಂಕಷ್ಟ ತಂದ ಬೆತ್ತಲೆ ಸ್ನಾನ, ಗಂಡನ ವಿರುದ್ಧವೇ ದೂರು ದಾಖಲಿಸಿದ ಪತ್ನಿ, ಪತ್ನಿಯ ಖಾಸಗಿ ವಿಡಿಯೋಗಳನ್ನು ಸೆರೆ ಹಿಡಿದ ಗಂಡ ಲೀಕ್ ಮಾಡಲು ಮುಂದಾಗಿದ್ದಾನೆ. ಇಷ್ಟೇ ಅಲ್ಲ 1.5 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದಾನೆ.
03:10 PM (IST) Mar 17
ಜಾರ್ಖಂಡ್‌ನ ಜೆಮ್ಶೆಡ್‌ಪುರದಲ್ಲಿ ನಡೆದ ಮದುವೆ ಸಮಾರಂಭದಲ್ಲಿ ಊಟ ಮಾಡುತ್ತಿದ್ದಾಗ 41 ವರ್ಷದ ಲಲಿತ್ ಸಿಂಗ್ ಎಂಬುವವರು ಗಂಟಲಿನಲ್ಲಿ ರಸಗುಲ್ಲಾ ಸಿಲುಕಿಕೊಂಡು ಸ್ಥಳದಲ್ಲೇ ಸಾವನ್ನಪ್ಪಿದ ದಾರುಣ ಘಟನೆ ನಡೆದಿದೆ.
02:29 PM (IST) Mar 17
ಸಾಮಾಜಿಕ ಜಾಲತಾಣದಲ್ಲಿ ಪುಟ್ಟ ಬಾಲಕಿಯೊಬ್ಬಳ ವೀಡಿಯೋ ವೈರಲ್ ಆಗಿದ್ದು, ಹೊಲಕ್ಕೆ ಹೋಗಲು ಹಠ ಮಾಡುವ ಎಮ್ಮೆ ಕರುವಿಗೆ ಬಾಲಕಿ ಸವಾಲು ಹಾಕಿದ್ದು, ಆಕೆಯ ಮಾತು ನೆಟ್ಟಿಗರ ಮನಗೆದ್ದಿದೆ. ಹಳ್ಳಿಯ ಮುಗ್ಧ ಜೀವನದ ಚಿತ್ರಣವನ್ನು ಕಟ್ಟಿಕೊಡುವ ಈ ವಿಡಿಯೋಗೆ ಹಲವರು ತಮಾಷೆಯಾಗಿ ಕಾಮೆಂಟ್ ಮಾಡಿದ್ದಾರೆ.
02:20 PM (IST) Mar 17
ಪಶ್ಚಿಮ ಏಷ್ಯಾದಲ್ಲಿನ ಯುದ್ಧದಿಂದಾಗಿ ಶ್ರೀಲಂಕಾ ತೀವ್ರ ಇಂಧನ ಬಿಕ್ಕಟ್ಟನ್ನು ಎದುರಿಸುತ್ತಿದೆ. ಈ ಪರಿಸ್ಥಿತಿಯನ್ನು ನಿಭಾಯಿಸಲು, ಸರ್ಕಾರವು ವಾರಕ್ಕೆ ನಾಲ್ಕು ದಿನಗಳ ಕೆಲಸವನ್ನು ಜಾರಿಗೆ ತಂದಿದ್ದು, ಖಾಸಗಿ ವಾಹನಗಳಿಗೆ ವಾರಕ್ಕೆ 15 ಲೀಟರ್ ಇಂಧನವನ್ನು ನಿಗದಿಪಡಿಸಿದೆ.
01:41 PM (IST) Mar 17
ಕೆಡಿ ಸಿನಿಮಾದ ಅಶ್ಲೀಲ ಸರ್ಸೆ ಸೆರಗ ಹಾಡು ಯೂಟ್ಯೂಬ್‌ನಿಂದ ಡಿಲೀಟ್, ಸಿನಿ ತಂಡಕ್ಕೆ NHRC ನೋಟಿಸ್, ಪ್ರೇಮ್ ನಿರ್ದೇಶನದ ಕೆಡಿ ಸಿನಿಮಾ ಹಾಡಿಗೆ ಬಾರಿ ವಿರೋಧ ವ್ಯಕ್ತವಾಗಿದೆ. ಇದರ ಬೆನ್ನಲ್ಲೆ ಸಿನಿಮಾ ತಂಡಕ್ಕೆ ಸಂಕಷ್ಟ ತೀವ್ರಗೊಂಡಿದೆ.
01:39 PM (IST) Mar 17
ದಕ್ಷಿಣ ಭಾರತದ ಸಿಮೆಂಟ್ ಕಂಪನಿ 66.76 ಲಕ್ಷ ಈಕ್ವಿಟಿ ಷೇರುಗಳನ್ನು ಮಾರಾಟ ಮಾಡುತ್ತಿದೆ. ಸೆಬಿ ನಿಯಮಾವಳಿಗಳನ್ನು ಪಾಲಿಸಲು, ಕಂಪನಿಯು ತನ್ನ ಪಾಲುದಾರಿಕೆಯನ್ನು ಕಡಿಮೆ ಮಾಡಲು ಈ ಆಫರ್-ಫಾರ್-ಸೇಲ್ (OFS) ಪ್ರಕ್ರಿಯೆಯನ್ನು ಕೈಗೊಂಡಿದೆ.
01:13 PM (IST) Mar 17
ಮುಖಕ್ಕೆ ಫೇಸ್ ಪ್ಯಾಕ್ ಹಾಕಿ ಮೀಟಿಂಗ್ ಹಾಜರು, ಜೆನ್‌ಜಿ ಉದ್ಯೋಗಿ ನೋಡಿ ಬಾಸ್ ರಿಯಾಕ್ಷನ್ ವೈರಲ್, ಯುವತಿಯೊಬ್ಬಳು ಆಫೀಸ್ ವಿಡಿಯೋ ಕಾಲ್ ಮೀಟಿಂಗ್‌ಗೆ ಮುಖಕ್ಕೆ ಹಸಿರು ಬಣ್ಣದ 'ನೀಮ್ ಫೇಸ್ ಪ್ಯಾಕ್' ಹಾಕಿಕೊಂಡು ಬಂದಿದ್ದಾಳೆ.
01:08 PM (IST) Mar 17
ಕಾಬೂಲ್‌ನ ವ್ಯಸನಮುಕ್ತ ಕೇಂದ್ರದ ಮೇಲೆ ಪಾಕಿಸ್ತಾನ ನಡೆಸಿದ ವೈಮಾನಿಕ ದಾಳಿಯನ್ನು ಭಾರತ ತೀವ್ರವಾಗಿ ಖಂಡಿಸಿದೆ. ಈ ಅಮಾನವೀಯ ಕೃತ್ಯದಲ್ಲಿ 400ಕ್ಕೂ ಹೆಚ್ಚು ನಾಗರಿಕರು ಸಾವನ್ನಪ್ಪಿದ್ದು, ಈ ದಾಳಿಗೆ ಪ್ರತೀಕಾರ ತೀರಿಸಿಕೊಳ್ಳುವುದಾಗಿ ತಾಲಿಬಾನ್ ಎಚ್ಚರಿಸಿದೆ.
12:29 PM (IST) Mar 17
12:26 PM (IST) Mar 17
ಎದೆಗೆ ರಿವಾಲ್ವರ್ ಇಟ್ಟು ರೀಲ್ಸ್ ಮಾಡಿದಾಗ ಮಿಸ್‌ಫೈರ್, ಗೆಳೆಯನ ಮುಂದೆ ದುರಂತ ಅಂತ್ಯ ಕಂಡ ಯುವಕ, ವಿಡಿಯೋ ಮಾಡುತ್ತಿದ್ದ ಗೆಳೆಯ ತಪ್ಪಿಯೂ ಟ್ರಿಗರ್ ಒತ್ತಬೇಡ ಎಂದು ಸೂಚಿಸಿದ ಬೆನ್ನಲ್ಲೇ ದುರಂತ ನಡೆದಿದೆ.
11:17 AM (IST) Mar 17
heart attack at housewarming party: ಗೃಹ ಪ್ರವೇಶ ಸಮಾರಂಭದಲ್ಲಿ, 40 ವರ್ಷದ ಮಹಿಳೆಯೊಬ್ಬರು ಮಾತನಾಡುತ್ತಿದ್ದಾಗಲೇ ಹೃದಯಾಘಾತದಿಂದ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ಈ ಆಘಾತಕಾರಿ ಘಟನೆಯು ಕ್ಯಾಮರಾದಲ್ಲಿ ಸೆರೆಯಾಗಿದ್ದು, ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
09:39 AM (IST) Mar 17
ಆರ್‌ಎಸ್‌ಎಸ್ ನಿಷೇಧ ಮತ್ತು 'ರಾ'ಗೆ ನಿರ್ಬಂಧ ಹೇರಬೇಕೆಂಬ ಅಮೆರಿಕದ ಧಾರ್ಮಿಕ ಸ್ವಾತಂತ್ರ್ಯ ಆಯೋಗದ (USCIRF) ವರದಿಯನ್ನು ಭಾರತ ತಿರಸ್ಕರಿಸಿದ್ದು ಈ ವರದಿಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಈ ವರದಿಯು ಪ್ರೇರಿತ ಹಾಗೂ ಪಕ್ಷಪಾತದಿಂದ ಕೂಡಿದೆ ಎಂದು ವಿದೇಶಾಂಗ ಸಚಿವಾಲಯ ಹೇಳಿದೆ.
09:11 AM (IST) Mar 17
ಕಾಮಿಡಿಯನ್ ಸುನೀಲ್ ಇಂದು ಸ್ಟಾರ್ ಹಾಸ್ಯನಟ ಮತ್ತು ಬಹುಮುಖ ಪ್ರತಿಭೆಯಾಗಿ ಮಿಂಚುತ್ತಿದ್ದಾರೆ. ಆದರೆ ಈ ಯಶಸ್ಸಿನ ಹಿಂದೆ ಅವರ ತಾಯಿಯ ಕಠಿಣ ಪರಿಶ್ರಮ ಮತ್ತು ದೊಡ್ಡ ತ್ಯಾಗವಿದೆ. ಸುನೀಲ್ ದೊಡ್ಡ ಸ್ಟಾರ್‌ಗಳ ಜೊತೆ ಸಿನಿಮಾ ಮಾಡುತ್ತಿದ್ದಾರೆ.
07:07 AM (IST) Mar 17
ಪಶ್ಚಿಮ ಬಂಗಾಳದ ಹಿರಿಯ ಅಧಿಕಾರಿಗಳನ್ನು ವರ್ಗಾವಣೆ ಮಾಡಿದ್ದಕ್ಕೆ ಸಿಎಂ ಮಮತಾ ಬ್ಯಾನರ್ಜಿ, ಮುಖ್ಯ ಚುನಾವಣಾ ಆಯುಕ್ತರಿಗೆ ಪತ್ರ ಬರೆದು ಆಕ್ಷೇಪ ವ್ಯಕ್ತಪಡಿಸಿದ್ದಾರೆ. 5 ರಾಜ್ಯಗಳ ವಿಧಾನಸಭಾ ಚುನಾವಣಾ ವೇಳಾಪಟ್ಟಿ ಪ್ರಕಟವಾದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.