Published : Nov 15, 2025, 07:31 AM ISTUpdated : Nov 15, 2025, 11:18 PM IST

India Latest News Live: ಮಾಟ-ಮಂತ್ರದ ನೆಪದಲ್ಲಿ ಬಾಲಕಿಯ ಮೈಮುಟ್ಟಿ ದೌರ್ಜನ್ಯ; ನಕಲಿ ಜ್ಯೋತಿಷಿ ಅರೆಸ್ಟ್

ಸಾರಾಂಶ

ನವದೆಹಲಿ: ಕೆಂಪುಕೋಟೆ ಸಮೀಪ ಕಾರು ಸ್ಫೋಟಿಸಿ 13 ಜನರ ಸಾವಿಗೆ ಕಾರಣವಾದ ಕಿಲ್ಲರ್‌ ಡಾಕ್ಟರ್‌ ಉಮರ್‌ ನಬಿಯ ಕಾಶ್ಮೀರದ ಪುಲ್ವಾಮದಲ್ಲಿರುವ ಮನೆಯನ್ನು ಭದ್ರತಾ ಪಡೆ ಸಿಬ್ಬಂದಿ ರಾತ್ರೋರಾತ್ರಿ ನೆಲಸಮಗೊಳಿಸಿದ್ದಾರೆ. ಗುರುವಾರ ರಾತ್ರಿ ವೇಳೆ ಅಧಿಕಾರಿಗಳ ತಂಡ ಎರಡು ಅಂತಸ್ತಿನ ಮನೆಯನ್ನು ಧ್ವಂಸಗೊಳಿಸಿದೆ. ಡಿಎನ್‌ಎ ಪರೀಕ್ಷೆಯಲ್ಲಿ, ಸ್ಫೋಟದ ಹಿಂದೆ ಡಾ.ನಬಿ ಕೈವಾಡ ದೃಢವಾದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ. ಈ ಹಿಂದೆ ಪಹಲ್ಗಾಂ ದಾಳಿಯಲ್ಲಿ ಕೈವಾಡವಿದ್ದವರ ಮನೆಯನ್ನೂ ಇದೇ ರೀತಿ ಧ್ವಂಸಗೊಳಿಸಲಾಗಿತ್ತು. ಇದೀಗ ಉಮರ್‌ ಮನೆಯನ್ನು ಕೆಡುವುದರ ಮೂಲಕ ಭಯೋತ್ಪಾದಕ ಚಟುವಟಿಕೆಗಳನ್ನು ಬೆಂಬಲಿಸುವವರಿಗೆ ಕಠಿಣ ಸಂದೇಶವನ್ನು ಸರ್ಕಾರ ರವಾನಿಸಿದೆ.

Fake Astrologer Arrested for Sexually Assaulting Minor in Kollam

11:18 PM (IST) Nov 15

ಮಾಟ-ಮಂತ್ರದ ನೆಪದಲ್ಲಿ ಬಾಲಕಿಯ ಮೈಮುಟ್ಟಿ ದೌರ್ಜನ್ಯ; ನಕಲಿ ಜ್ಯೋತಿಷಿ ಅರೆಸ್ಟ್

ಕೊಳ್ಳಂನಲ್ಲಿ ಪರೀಕ್ಷೆಯಲ್ಲಿ ಉತ್ತಮ ಅಂಕ ಬರುವಂತೆ ಮಾಡಲು ಪೂಜೆ ನಡೆಸುವ ನೆಪದಲ್ಲಿ 11 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿದ ನಕಲಿ ಜ್ಯೋತಿಷಿ ಬಂಧನ. ಶಿನು ಎಂಬ ಈತ, ಬಾಲಕಿಯ ತಾಯಿಯ ಕೋಣೆಯಿಂದ ಹೊರಗೆ ಕಳುಹಿಸಿ ಈ ಕೃತ್ಯ ಎಸಗಿದ್ದು,  ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲು

Read Full Story

10:52 PM (IST) Nov 15

ಶಾಲೆಗೆ 10 ನಿಮಿಷ ತಡವಾಗಿ ಬಂದಿದ್ದಕ್ಕೆ 100 ಸಿಟಪ್ಸ್ ಶಿಕ್ಷೆ, 6ನೇ ತರಗತಿ ವಿದ್ಯಾರ್ಥಿನಿ ಸಾವು

ಮಹಾರಾಷ್ಟ್ರದ ವಸೈನಲ್ಲಿ, ಶಾಲೆಗೆ ತಡವಾಗಿ ಬಂದಿದ್ದಕ್ಕೆ ಶಿಕ್ಷಕಿ ನೀಡಿದ 100 ಸಿಟಪ್ಸ್ ಶಿಕ್ಷೆಯಿಂದಾಗಿ ಆರನೇ ತರಗತಿ ವಿದ್ಯಾರ್ಥಿನಿ ಸಾವನ್ನಪ್ಪಿದ್ದಾಳೆ. ಈ ಘಟನೆಯು ಪೋಷಕರ ತೀವ್ರ ಪ್ರತಿಭಟನೆಗೆ ಕಾರಣವಾಗಿದ್ದು, ಶಿಕ್ಷಕಿ ಮತ್ತು ಶಾಲೆಯ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಲಾಗಿದೆ.
Read Full Story

10:00 PM (IST) Nov 15

ತೆಲಂಗಾಣ ಹೈಕೋರ್ಟ್ ವೆಬ್‌ಸೈಟ್ ಹ್ಯಾಕ್; ಕಾನೂನು ದಾಖಲೆ ಬದಲಿಗೆ ಆನ್‌ಲೈನ್ ಬೆಟ್ಟಿಂಗ್ ಓಪನ್!

ತೆಲಂಗಾಣ ಹೈಕೋರ್ಟ್‌ನ ಅಧಿಕೃತ ವೆಬ್‌ಸೈಟ್‌ಗೆ ಸೈಬರ್ ವಂಚಕರು ಕನ್ನ ಹಾಕಿದ್ದು, ನ್ಯಾಯಾಲಯದ ಆದೇಶಗಳ ಲಿಂಕ್‌ಗಳನ್ನು ಅಕ್ರಮ ಆನ್‌ಲೈನ್ ಬೆಟ್ಟಿಂಗ್ ಪ್ಲಾಟ್‌ಫಾರ್ಮ್‌ಗೆ ಮರುನಿರ್ದೇಶಿಸಿದ್ದಾರೆ. ಈ ಸೈಬರ್ ದಾಳಿಯ ಕುರಿತು ಹೈಕೋರ್ಟ್ ರಿಜಿಸ್ಟ್ರಾರ್ ದೂರು ನೀಡಿದ್ದು, ಸೈಬರ್ ಅಪರಾಧ ಪೊಲೀಸರು ತನಿಖೆ.

Read Full Story

08:31 PM (IST) Nov 15

Globetrotter Event - ಮಹೇಶ್‌ ಬಾಬು-ರಾಜಮೌಳಿ SSMB29 ಸಿನಿಮಾಗೆ ಹೆಸರು ಫಿಕ್ಸ್‌!

ಬಹುನಿರೀಕ್ಷೆ ಮೂಡಿಸಿರುವ ಎಸ್‌ಎಸ್‌ ರಾಜಮೌಳಿ ನಿರ್ದೇಶನದ ಮಹೇಶ್‌ ಬಾಬು ಮುಖ್ಯ ಮಾತ್ರದಲ್ಲಿ SSMB29 ಸಿನಿಮಾಗೆ ಹೆಸರು ಫಿಕ್ಸ್‌ ಆಗಿದೆ. ಈ ಸಿನಿಮಾದಲ್ಲಿ ಪ್ರಿಯಾಂಕಾ ಚೋಪ್ರಾ ಹಾಗೂ ಪೃಥ್ವಿರಾಜ್‌ ಸುಕುಮಾರನ್‌ ಕೂಡ ನಟಿಸಿದ್ದಾರೆ.

 

Read Full Story

07:41 PM (IST) Nov 15

'ಮಾನವನಿಗೆ ವಯಸ್ಸಾಗಲು ಇದೇ ಕಾರಣ..' ಎಟರ್ನಲ್‌ ಸಿಇಒ ದೀಪಿಂದರ್‌ ಗೋಯಲ್‌ ಸಂಸ್ಥೆಯ ಹೊಸ ವಾದ!

Zomato CEO Deepinder Goyal Continue Gravity Causes Human ageing ಮನುಷ್ಯನಿಗೆ ವಯಸ್ಸಾಗಲು ಭೂಮಿಯ ಗುರುತ್ವಾಕರ್ಷಣೆಯೇ ಕಾರಣ ಎಂದು ಈಗ ಎಟರ್ನಲ್‌ ಎಂದು ಬದಲಾಗಿರುವ ಜೋಮೋಟೋದ ಸಿಇಒ ದೀಪೀಂದರ್‌ ಗೋಯೆಲ್‌ ಮತ್ತೊಮ್ಮೆ ಹೇಳಿದ್ದಾರೆ.

Read Full Story

07:13 PM (IST) Nov 15

ಕಾಸರಗೋಡು - ಬಿಲ್ ಪಾವತಿಸದ್ದಕ್ಕೆ ಮನೆಯ ಪವರ್ ಕಟ್ - ಸಿಟ್ಟಿಗೆದ್ದುಇಡೀ ಊರನ್ನೇ ಕತ್ತಲಲ್ಲಿಟ್ಟ ಯುವಕ!

ಕರೆಂಟ್ ಬಿಲ್ ಪಾವತಿಸಿಲ್ಲ ಅಂತ ಮನೆಯ ಪವರ್ ಕಟ್ ಮಾಡಿದ್ದಕ್ಕೆ ಸಿಟ್ಟಿಗೆದ್ದ ವ್ಯಕ್ತಿಯೋರ್ವ ಟ್ರಾನ್ಸ್‌ಫಾರ್ಮರ್‌ನಿಂದಲೇ ಫ್ಯೂಸ್ ತೆಗೆದು ಇಡೀ ಏರಿಯಾಗೆ ಕರೆಂಟ್ ಇಲ್ಲದಂತೆ ಮಾಡಿದ ಘಟನೆ ಕೇರಳದಲ್ಲಿ ನಡೆದಿದೆ.

Read Full Story

07:10 PM (IST) Nov 15

ಲಾಲು ಯಾದವ್‌ರ ಜೀವ ಉಳಿಸಿದ ಮಗಳೇ ಇಂದು ರಾಜಕೀಯಕ್ಕೆ ಗುಡ್‌ಬೈ, ಕುಟುಂಬದ ಸಂಬಂಧ ಕಡಿದುಕೊಂಡಿರುವುದಾಗಿ ಘೋಷಣೆ!

ಬಿಹಾರ ಚುನಾವಣಾ ಫಲಿತಾಂಶದ ನಂತರ, ಲಾಲು ಪ್ರಸಾದ್ ಯಾದವ್ ಅವರ ಪುತ್ರಿ ರೋಹಿಣಿ ಆಚಾರ್ಯ ಅವರು ರಾಜಕೀಯ ಮತ್ತು ಕುಟುಂಬ ಸಂಬಂಧಗಳನ್ನು ತ್ಯಜಿಸುವುದಾಗಿ ಘೋಷಿಸಿದ್ದಾರೆ. ಈ ನಿರ್ಧಾರದ ಹಿಂದೆ ತೇಜಸ್ವಿ ಯಾದವ್ ಅವರ ಸಲಹೆಗಾರರ ಪಾತ್ರವಿದೆ ಎಂದು ಉಲ್ಲೇಖ. ಯಾದವ್ ಕುಟುಂಬದ ಆಂತರಿಕ ಕಲಹದ ಬಗ್ಗೆ ಚರ್ಚೆ.

Read Full Story

07:03 PM (IST) Nov 15

ಐಪಿಎಲ್ ಮಿನಿ ಹರಾಜಿಗೂ ಮುನ್ನ 17 ಆಟಗಾರರನ್ನು ಉಳಿಸಿಕೊಂಡ ಮುಂಬೈ ಇಂಡಿಯನ್ಸ್! 9 ಆಟಗಾರರಿಗೆ ಗೇಟ್‌ಪಾಸ್

ಹಾರ್ದಿಕ್ ಪಾಂಡ್ಯ ನಾಯಕತ್ವದ ಮುಂಬೈ ಇಂಡಿಯನ್ಸ್, ಮಿನಿ ಹರಾಜಿಗೂ ಮುನ್ನ ತಂಡದಲ್ಲಿ ಮಹತ್ವದ ಬದಲಾವಣೆ ಮಾಡಿದೆ. ಫ್ರಾಂಚೈಸಿಯು ಪ್ರಮುಖ ಆಟಗಾರರನ್ನು ಉಳಿಸಿಕೊಂಡು, 9 ಆಟಗಾರರನ್ನು ಬಿಡು-ಗಡೆ ಮಾಡಿದೆ ಹಾಗೂ ಮೂವರು ಹೊಸ ಆಟಗಾರರನ್ನು ಟ್ರೇಡ್ ಮೂಲಕ ತಂಡಕ್ಕೆ ಸೇರಿಸಿಕೊಂಡಿದೆ.
Read Full Story

06:56 PM (IST) Nov 15

Bihar Verdict - ವೋಟ್‌ ಶೇರ್‌ಅನ್ನು ಸೀಟಾಗಿ ಪರಿವರ್ತಿಸಿದ NDA, ನೇರ ಯುದ್ಧದಲ್ಲಿ ಮಣ್ಣುಮುಕ್ಕಿದ ಗಠಬಂಧನ

2025ರ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ, ವೋಟ್ ಶೇರ್‌ಗಿಂತ ಸ್ಟ್ರೈಕ್ ರೇಟ್ ನಿರ್ಣಾಯಕ ಪಾತ್ರ ವಹಿಸಿದೆ. ಎನ್‌ಡಿಎ ಮೈತ್ರಿಕೂಟವು ತನ್ನ ಮತಗಳನ್ನು ಸೀಟುಗಳಾಗಿ ಪರಿವರ್ತಿಸುವುದರಲ್ಲಿ ತೋರಿದ ಅದ್ಭುತ ದಕ್ಷತೆಯು, ಮಹಾಘಟಬಂಧನ್‌ ವಿರುದ್ಧ ನಿರ್ಣಾಯಕ ಮೇಲುಗೈ ಸಾಧಿಸಲು ಪ್ರಮುಖ ಕಾರಣವಾಯಿತು. 

Read Full Story

06:22 PM (IST) Nov 15

ಐಪಿಎಲ್ ಮಿನಿ ಹರಾಜಿಗೂ ಮುನ್ನ ಇಬ್ಬರು ಬಿಗ್ ಹಿಟ್ಟರ್ ಸೇರಿ 7 ಆಟಗಾರರನ್ನು ಕೈಬಿಟ್ಟ ಡೆಲ್ಲಿ ಕ್ಯಾಪಿಟಲ್ಸ್!

ಐಪಿಎಲ್ ಮಿನಿ ಹರಾಜಿಗೂ ಮುನ್ನ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಫಾಫ್ ಡು ಪ್ಲೆಸಿಸ್ ಹಾಗೂ ಜೇಕ್ ಫ್ರೇಸರ್ ಮೆಕ್‌ಗರ್ಕ್ ಸೇರಿದಂತೆ ಏಳು ಆಟಗಾರರನ್ನು ಕೈಬಿಟ್ಟಿದೆ. ಕೆ ಎಲ್ ರಾಹುಲ್, ಅಕ್ಷರ್ ಪಟೇಲ್ ಅವರಂತಹ ಪ್ರಮುಖರನ್ನು ಉಳಿಸಿಕೊಂಡಿದೆ.

Read Full Story

06:20 PM (IST) Nov 15

23 ಕೋಟಿ ಕೊಟ್ಟು ಖರೀದಿಸಿದ್ದ ಐಪಿಎಲ್‌ ಇತಿಹಾಸದ 3ನೇ ಅತ್ಯಂತ ದುಬಾರಿ ಪ್ಲೇಯರ್‌ಗೆ ಗೇಟ್‌ಪಾಸ್‌ ನೀಡಿದ ಕೆಕೆಆರ್‌!

ಐಪಿಎಲ್ ಹರಾಜಿಗೂ ಮುನ್ನ, ಕೋಲ್ಕತ್ತಾ ನೈಟ್‌ರೈಡರ್ಸ್‌ ತಂಡವು ಸ್ಟಾರ್ ಆಟಗಾರರಾದ ವೆಂಕಟೇಶ್‌ ಅಯ್ಯರ್‌ ಮತ್ತು ಆಂಡ್ರೆ ರಸೆಲ್‌ ಅವರನ್ನು ಬಿಡುಗಡೆ ಮಾಡಿದೆ. ಆದರೆ, ಅಜಿಂಕ್ಯ ರಹಾನೆ, ರಿಂಕು ಸಿಂಗ್, ಸುನಿಲ್ ನರೈನ್ ಸೇರಿದಂತೆ ಪ್ರಮುಖ ಆಟಗಾರರ ಗುಂಪನ್ನು ಉಳಿಸಿಕೊಂಡಿದೆ.

Read Full Story

06:15 PM (IST) Nov 15

8 ಲಕ್ಷದ ಕಾರಲ್ಲಿ ಬಂದು 8 ರೂಪಾಯಿಯ ನ್ಯೂಸ್ ಪೇಪರ್ ಕದ್ದೊಯ್ದ ಕಳ್ಳ - ಸಿಸಿಟಿವಿ ವೀಡಿಯೋ ವೈರಲ್

man steals newspaper in car: 8 ಲಕ್ಷ ಮೌಲ್ಯದ ಕಾರಿನಲ್ಲಿ ಬಂದ ಯುವಕನೊಬ್ಬ 8 ರೂಪಾಯಿಯ ದಿನಪತ್ರಿಕೆಯನ್ನು ಕದ್ದೊಯ್ದ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ವಿಡಿಯೋ ಕೆಲ ಶ್ರೀಮಂತರು ಮಾಡುವ ಇಂತಹ ಸಣ್ಣಪುಟ್ಟ ಕಳ್ಳತನಗಳ ಬಗ್ಗೆ ಚರ್ಚೆ ಹುಟ್ಟುಹಾಕಿದೆ.

Read Full Story

05:56 PM (IST) Nov 15

ಬಿಹಾರ ವಿಧಾನಸಭೆಗೆ ಕೇವಲ 10 ಮುಸ್ಲಿಂ ಶಾಸಕರ ಆಯ್ಕೆ, 1990ರ ಬಳಿಕ ಅತ್ಯಂತ ಕನಿಷ್ಠ

ಬಿಹಾರ ವಿಧಾನಸಭಾ ಚುನಾವಣೆಯ ನಂತರ, 1990ರ ಬಳಿಕದ ಅತ್ಯಂತ ಕಡಿಮೆ ಮುಸ್ಲಿಂ ಪ್ರಾತಿನಿಧ್ಯ ದಾಖಲಾಗಿದೆ. 243 ಸದಸ್ಯರ ಸದನಕ್ಕೆ ಕೇವಲ 10 ಮುಸ್ಲಿಂ ಶಾಸಕರು ಆಯ್ಕೆಯಾಗಿದ್ದು, ಇದು ರಾಜ್ಯದ ಜನಸಂಖ್ಯೆಯಲ್ಲಿ ಶೇ. 17.7 ರಷ್ಟಿರುವ ಸಮುದಾಯದ ರಾಜಕೀಯ ಪ್ರಾತಿನಿಧ್ಯದಲ್ಲಿನ ತೀವ್ರ ಕುಸಿತವನ್ನು ತೋರಿಸುತ್ತದೆ.
Read Full Story

04:31 PM (IST) Nov 15

ಐಪಿಎಲ್ 2026 ಹರಾಜಿಗೂ ಮುನ್ನ ಪತಿರಾನರನ್ನು CSK ಕೈಬಿಟ್ಟರೇ ಅದೇ ದೊಡ್ಡ ಮಿಸ್ಟೇಕ್!

ಐಪಿಎಲ್ 2026ರ ಹರಾಜಿನ ಮೊದಲು ಚೆನ್ನೈ ಸೂಪರ್ ಕಿಂಗ್ಸ್ ಒಂದು ಕಠಿಣ ನಿರ್ಧಾರವನ್ನು ಎದುರಿಸುತ್ತಿದೆ. ಸಿಎಸ್‌ಕೆ ಫ್ರಾಂಚೈಸಿಯು ಪ್ರಮುಖ ವೇಗಿ ಪತಿರಾನ ಅವರನ್ನು ಕೈಬಿಡಲು ಚಿಂತಿಸುತ್ತಿದೆ ಎಂದು ವರದಿಯಾಗಿದೆ.

Read Full Story

04:20 PM (IST) Nov 15

ಸೀರೆಯ ರಾಯಭಾರಿ ಕೆಲಸಕ್ಕೆ ಸಂಬಳದ ಆಧಾರದ ಮೇಲೆ ಮಂಚಕ್ಕೆ ನಿರ್ಮಾಪಕನ ಆಹ್ವಾನ! ನಟಿ ರೇಣುಕಾ ಶಹಾನೆ

90ರ ದಶಕದ 'ಸುರಭಿ' ಖ್ಯಾತಿಯ ನಟಿ ರೇಣುಕಾ ಶಹಾನೆ ಅವರು ತಮ್ಮ ವೃತ್ತಿಜೀವನದ ಆರಂಭದಲ್ಲಿ ಎದುರಿಸಿದ ಕಾಸ್ಟಿಂಗ್ ಕೌಚ್ ಅನುಭವವನ್ನು ಹಂಚಿಕೊಂಡಿದ್ದಾರೆ. ತಿಂಗಳ ಸಂಬಳದ ಆಧಾರದ ಮೇಲೆ ಜೊತೆಗಿರಲು ಕೇಳಿದ ನಿರ್ಮಾಪಕರೊಬ್ಬರ ಪ್ರಸ್ತಾಪ ತಿರಸ್ಕರಿಸಿದ್ದರಿಂದ ಅವಕಾಶ ಕಳೆದುಕೊಂಡಿದ್ದಾಗಿ ವಿವರಿಸಿದ್ದಾರೆ.

 

Read Full Story

03:31 PM (IST) Nov 15

ಲ್ಯಾಂಡ್ ರೋವರ್‌ನ ವೈರಲ್ ಸ್ಟಂಟ್ ಮರು ಸೃಷ್ಟಿಸಲು ಹೋಗಿ ಚೀನಿ ಆಟೋ ಮೇಕರ್ ಸಂಸ್ಥೆ ಎಡವಟ್ಟು - ವೀಡಿಯೋ ವೈರಲ್

Chinese car stunt fail: 2018 ರಲ್ಲಿ ಲ್ಯಾಂಡ್ ರೋವರ್ ಕಾರಿನ ಮೂಲಕ ಮಾಡಿದ ಸಾಹಸವನ್ನು ಮತ್ತೆ ಮರುಸೃಷ್ಟಿಸಲು ಹೋಗಿ ಚೀನಾದ ವಾಹನ ತಯಾರಕ ಕಂಪನಿಯೊಂದು ಎಡವಟ್ಟು ಮಾಡಿದೆ. ಘಟನೆಯ ವೀಡಿಯೋ ವೈರಲ್ ಆಗಿದೆ. 

Read Full Story

01:51 PM (IST) Nov 15

ಅಗರ್ಕರ್ ಒಳ್ಳೆಯವರೇ, ತಪ್ಪೆಲ್ಲಾ ಶಮಿಯದ್ದೇ! ಆಯ್ಕೆ ಸಮಿತಿ ಮುಖ್ಯಸ್ಥರ ಬೆನ್ನಿಗೆ ನಿಂತ ಬಿಸಿಸಿಐ

ಮೊಹಮ್ಮದ್ ಶಮಿ ಆಯ್ಕೆ ವಿವಾದಕ್ಕೆ ಹೊಸ ತಿರುವು ಸಿಕ್ಕಿದೆ. ಶಮಿ ತನ್ನ ಫಿಟ್ನೆಸ್ ಬಗ್ಗೆ ಆಯ್ಕೆಗಾರರನ್ನು ಪ್ರಶ್ನಿಸಿದರೆ, ಬಿಸಿಸಿಐ ಅಜಿತ್ ಅಗರ್ಕರ್ ಅವರನ್ನು ಸಮರ್ಥಿಸಿಕೊಂಡಿದೆ. ಈ ಕುರಿತಾದ ಮಹತ್ವದ ಅಪ್‌ಡೇಟ್ ಇಲ್ಲಿದೆ ನೋಡಿ.

Read Full Story

01:32 PM (IST) Nov 15

ಕೋಲ್ಕತಾ ಟೆಸ್ಟ್‌ನಲ್ಲಿ ಅಪರೂಪದ ದಾಖಲೆ ಬರೆದ ರವೀಂದ್ರ ಜಡೇಜಾ; ಜಗತ್ತಿನ 4 ಕ್ರಿಕೆಟಿಗರಲ್ಲಿ ಒಬ್ಬರಾದ ಆಲ್ರೌಂಡರ್!

ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ, ರವೀಂದ್ರ ಜಡೇಜಾ 4000 ರನ್ ಹಾಗೂ 300+ ವಿಕೆಟ್ ಪಡೆದ ವಿಶ್ವದ ನಾಲ್ಕನೇ ಮತ್ತು ಭಾರತದ ಎರಡನೇ ಆಟಗಾರ ಎಂಬ ಐತಿಹಾಸಿಕ ಸಾಧನೆ ಮಾಡಿದ್ದಾರೆ. ಈ ಮೂಲಕ ಅವರು ಕಪಿಲ್ ದೇವ್, ಇಯಾನ್ ಬಾಥಮ್ ಅವರಂತಹ ದಿಗ್ಗಜರ ಪಟ್ಟಿಗೆ ಸೇರಿದ್ದಾರೆ.  

Read Full Story

01:03 PM (IST) Nov 15

ಕತ್ತೆ ಅಂತ ಹೀಗಳೆಯಬೇಡಿ - ಮಧುಗಿರಿಯ ಉದ್ಯಮಿಯ ಕೈ ಹಿಡಿದ ಕತ್ತೆ

Donkey Milk: ಕತ್ತೆ ಹಾಲು ಎಂದರೆ ನೆನಪಾಗೋದು ಈಜಿಫ್ಟ್ ರಾಣಿ ಕ್ಲಿಯೋಪಾತ್ರ. ಹಿಂದಿನಿಂದಲೂ ಕತ್ತೆ ಹಾಲಿಗೆ ಬಹಳ ಮಹತ್ವವಿದೆ. ಹೀಗಾಗಿ ತುಮಕೂರಿನ ಮಧುಗಿರಿಯ ಮಹಿಳೆಯೊಬ್ಬರು ಕತ್ತೆ ಹಾಲನ್ನೇ ಪ್ರಮುಖವಾಗಿರಿಸಿಕೊಂಡು ಉದ್ಯಮ ಆರಂಭಿಸಿದ್ದು, ಅದರಲ್ಲಿ ಯಶಸ್ಸು ಕಂಡಿದ್ದಾರೆ. ಅವರ ಸ್ಟೋರಿ ಇಲ್ಲಿದೆ ನೋಡಿ..

Read Full Story

11:54 AM (IST) Nov 15

ಅಧಿಕೃತವಾಗಿ ಚೆನ್ನೈ ಸೂಪರ್ ಕಿಂಗ್ಸ್ ಸೇರಿದ ಸಂಜು ಸ್ಯಾಮ್ಸನ್! ಜಡ್ಡು ಜತೆಗೆ 10 ಆಟಗಾರರ ಟ್ರೇಡ್ ಕನ್ಫರ್ಮ್‌ ಮಾಡಿದ ಬಿಸಿಸಿಐ!

19ನೇ ಆವೃತ್ತಿಯ ಐಪಿಎಲ್‌ಗೂ ಮುನ್ನ ಆಟಗಾರರ ಟ್ರೇಡ್ ಅಧಿಕೃತವಾಗಿ ಘೋಷಣೆಯಾಗಿದೆ. ಸಂಜು ಸ್ಯಾಮ್ಸನ್ 18 ಕೋಟಿ ರುಪಾಯಿಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡ ಸೇರಿದ್ದು, ಪ್ರತಿಯಾಗಿ ರವೀಂದ್ರ ಜಡೇಜಾ ರಾಜಸ್ಥಾನ ರಾಯಲ್ಸ್ ಪಾಲಾಗಿದ್ದಾರೆ.  

Read Full Story

11:51 AM (IST) Nov 15

ಸ್ಪೋಟಕ್ಕೂ ಮೊದಲು ದುಬೈಗೆ ಪರಾರಿಯಾಗಲು ಪ್ಲಾನ್ ಮಾಡಿದ್ದ ಟೆರರ್ ಡಾಕ್ಟರ್ ಶಾಹೀನಾ

Terror Doctor Dr Shaheena Syed: ಟೆರರ್‌ ಡಾಕ್ಟರ್‌ ಡಾ. ಶಾಹೀನಾ ಸೈಯದ್ ಘಟನೆ ನಡೆಯುವ ಕೆಲ ದಿನಗಳ ಹಿಂದಷ್ಟೇ ಪಾಸ್‌ಪೋರ್ಟ್‌ಗಾಗಿ ಅರ್ಜಿ ಸಲ್ಲಿಸಿದ್ದಳು. ವಿಧ್ವಂಸಕ ಕೃತ್ಯಗಳಿಗೆ ಅಂತಿಮ ರೂಪ ನೀಡುವವರೆಗೆ ದುಬೈಗೆ ಪಲಾಯನ ಮಾಡಲು ಪ್ಲಾನ್ ಮಾಡಿದ್ದುಳು ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ. 

Read Full Story

10:02 AM (IST) Nov 15

ಶಾರ್ದೂಲ್ ಠಾಕೂರ್ ಜತೆಗೆ ಮತ್ತೊಬ್ಬ ಬಿಗ್ ಹಿಟ್ಟರ್ ಖರೀದಿಸಿದ ಮುಂಬೈ ಇಂಡಿಯನ್ಸ್!

ಐದು ಬಾರಿ ಐಪಿಎಲ್ ಚಾಂಪಿಯನ್ ಆಗಿರುವ ಮುಂಬೈ ಇಂಡಿಯನ್ಸ್, 2026ರ ಸೀಸನ್‌ಗಾಗಿ ಎರಡು ಪ್ರಮುಖ ಟ್ರೇಡ್ ಡೀಲ್‌ಗಳನ್ನು ಅಂತಿಮಗೊಳಿಸಿದೆ. ಈ ಡೀಲ್‌ಗಳ ಮೂಲಕ ಶಾರ್ದೂಲ್ ಠಾಕೂರ್ ಮತ್ತು ರುದರ್‌ಫೋರ್ಡ್ ಅವರನ್ನು ತಂಡಕ್ಕೆ ಮರಳಿ ಕರೆತಂದಿದೆ. ಆ ಡೀಲ್ ಯಾರೊಂದಿಗೆ ಅಂತ ಈಗ ತಿಳಿಯೋಣ ಬನ್ನಿ.

 

Read Full Story

09:09 AM (IST) Nov 15

Srinagar Nowgam Blast - ಶ್ರೀನಗರದ ನೌಗಮ್ ಪೊಲೀಸ್ ಠಾಣೆಯಲ್ಲಿ ಸ್ಪೋಟ; 9 ಸಾವು, 29 ಮಂದಿಗೆ ಗಾಯ

ಶ್ರೀನಗರದ ನೌಗಮ್ ಪೊಲೀಸ್ ಠಾಣೆಯಲ್ಲಿ ಶುಕ್ರವಾರ ತಡರಾತ್ರಿ ಸಂಭವಿಸಿದ ಭಾರಿ ಸ್ಫೋಟದಲ್ಲಿ 9 ಜನರು ಮೃತಪಟ್ಟು, 29 ಮಂದಿ ಗಾಯಗೊಂಡಿದ್ದಾರೆ. ವಶಪಡಿಸಿಕೊಂಡಿದ್ದ ಸ್ಫೋಟಕಗಳ ಪರಿಶೀಲನೆ ವೇಳೆ ಈ ದುರಂತ ಸಂಭವಿಸಿರಬಹುದೆಂದು ಶಂಕಿಸಲಾಗಿದ್ದು, ತನಿಖೆ ಪ್ರಗತಿಯಲ್ಲಿದೆ.

Read Full Story

09:07 AM (IST) Nov 15

ರೈಸಿಂಗ್ ಸ್ಟಾರ್ಸ್ ಏಷ್ಯಾಕಪ್ - ಯುಎಇ ಬೌಲರ್‌ಗಳನ್ನು ಚೆಂಡಾಡಿ ಸ್ಪೋಟಕ ಶತಕ ಸಿಡಿಸಿದ ವೈಭವ್ ಸೂರ್ಯವಂಶಿ!

ರೈಸಿಂಗ್ ಸ್ಟಾರ್ಸ್ ಏಷ್ಯಾಕಪ್ ಟಿ20 ಟೂರ್ನಿಯಲ್ಲಿ, 14 ವರ್ಷದ ವೈಭವ್ ಸೂರ್ಯವಂಶಿ ಅವರ ಸ್ಫೋಟಕ ಶತಕ (144) ಮತ್ತು ನಾಯಕ ಜಿತೇಶ್ ಶರ್ಮಾ ಅವರ ಅರ್ಧಶತಕದ ನೆರವಿನಿಂದ ಭಾರತ ಎ ತಂಡವು ಯುಎಇ ವಿರುದ್ಧ 148 ರನ್‌ಗಳ ಭರ್ಜರಿ ಜಯ ಸಾಧಿಸಿತು.  

Read Full Story

08:41 AM (IST) Nov 15

ಬೂಮ್ರಾ ಬಿರುಗಾಳಿಗೆ ಹರಿಣಗಳ ಪಡೆ ಕಂಗಾಲು; ಮೊದಲ ದಿನವೇ ಆಲೌಟ್

ಕೋಲ್ಕತಾದಲ್ಲಿ ನಡೆದ ಮೊದಲ ಟೆಸ್ಟ್‌ನ ಮೊದಲ ದಿನ, ಜಸ್‌ಪ್ರೀತ್‌ ಬೂಮ್ರಾ ಅವರ 5 ವಿಕೆಟ್‌ಗಳ ಮಾರಕ ದಾಳಿಗೆ ದಕ್ಷಿಣ ಆಫ್ರಿಕಾ ಕೇವಲ 159 ರನ್‌ಗಳಿಗೆ ಆಲೌಟ್ ಆಯಿತು. ಇದಕ್ಕೆ ಉತ್ತರವಾಗಿ, ಭಾರತ ದಿನದಂತ್ಯಕ್ಕೆ 1 ವಿಕೆಟ್ ನಷ್ಟಕ್ಕೆ 37 ರನ್ ಗಳಿಸಿ, ಪಂದ್ಯದ ಮೇಲೆ ಹಿಡಿತ ಸಾಧಿಸಿದೆ.
Read Full Story

More Trending News