Published : Aug 13, 2026, 06:36 AM ISTUpdated : Aug 13, 2026, 08:53 PM IST

India Latest News Live: ಜಾಲತಾಣದಲ್ಲಿ ಸ್ಟೇಟಸ್​ ಹಾಕ್ತೀರಾ? ಮನೆಯ ತಿಜೋರಿ ಖಾಲಿಯಾಗತ್ತೆ ಹುಷಾರ್​- ಪೊಲೀಸರ ಖಡಕ್​ ವಾರ್ನಿಂಗ್​

ಸಾರಾಂಶ

ನವದೆಹಲಿ: ‘ಶಾರ್ಟ್‌ಕಟ್ ಬಳಸಿ ಜೀವನದಲ್ಲಿ ಮುಂದೆ ಬರೆಬೇಕೆಂದರೆ ಅದಕ್ಕಿರುವ ಮಹಾಮಹಿಮರ ಆತ್ಮಚರಿತ್ರೆಗಳನ್ನು ಓದಬೇಕು. ಆದರೆ ಎಲ್ಲದಕ್ಕೂ ಶಾರ್ಟ್‌ಕಟ್‌ (ಅಡ್ಡದಾರಿ) ಹುಡುಕುತ್ತಾ ಹೋಗುವುದು ಸಲ್ಲದು’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಯುವಕರಿಗೆ ಕಿವಿಮಾತು ಹೇಳಿದ್ದಾರೆ.

ಮಾಜಿ ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ಅವರ ಆತ್ಮಚರಿತ್ರೆಯಾದ ‘ಭಾರತೀಯ ಗಣರಾಜ್ಯದ ವಿಜಯ: ನನ್ನ ಜೀವನ, ನನ್ನ ಹೋರಾಟಗಳು’ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಹೀಗೆ ಹೇಳಿದರು.

‘ಇದು ರೀಲ್ಸ್‌ನ ಯುಗವಾಗಿದೆ ಹಾಗೂ ಸಾಮಾಜಿಕ ಮಾಧ್ಯಮ ಪ್ರಭಾವಿಗಳು ನಿಮ್ಮನ್ನು ಅವುಗಳತ್ತ ಆಕರ್ಷಿಸುತ್ತಾರೆ. ಹೀಗಿರುವಾಗ, ರೈಲು ನಿಲ್ದಾಣಗಳಲ್ಲಿ ಬ್ರಿಡ್ಜ್‌ ಬದಲು ಹಳಿ ದಾಟಿ ಸಾಗುವವರಿಗೆ ಎಚ್ಚರಿಸುವ ‘ಶಾರ್ಟ್‌ಕಟ್‌ಗಳು ಅಪಾಯಕಾರಿ’ ಎಂಬ ಸಾಲನ್ನು ನೆನಪಿಟ್ಟುಕೊಳ್ಳಬೇಕು. ಆದರೆ ಶಾರ್ಟ್‌ಕಟ್ ಬಳಸಿ ಜೀವನದಲ್ಲಿ ಮುಂದೆ ಬರೆಬೇಕೆಂದರೆ ಅದಕ್ಕಿರುವ ಮಹಾಮಹಿಮರ ಆತ್ಮಚರಿತ್ರೆಗಳನ್ನು ಓದಬೇಕು’ ಎಂದು ಮೋದಿ ಹೇಳಿದರು.

08:53 PM (IST) Aug 13

ಜಾಲತಾಣದಲ್ಲಿ ಸ್ಟೇಟಸ್​ ಹಾಕ್ತೀರಾ? ಮನೆಯ ತಿಜೋರಿ ಖಾಲಿಯಾಗತ್ತೆ ಹುಷಾರ್​- ಪೊಲೀಸರ ಖಡಕ್​ ವಾರ್ನಿಂಗ್​

ಸೋಷಿಯಲ್ ಮೀಡಿಯಾದಲ್ಲಿ ಪ್ರವಾಸದ ಸ್ಟೇಟಸ್ ಹಾಕಿಕೊಳ್ಳುವುದು ಸಾಮಾನ್ಯವಾಗಿದೆ. ಆದರೆ, ಇದು ಕಳ್ಳರಿಗೆ ನಿಮ್ಮ ಮನೆ ಖಾಲಿ ಇದೆ ಎಂದು ನೀವೇ ಮಾಹಿತಿ ನೀಡಿದಂತೆ ಎಂದು ಡಿವೈಎಸ್ಪಿ ಎಚ್ಚರಿಸಿದ್ದಾರೆ. ಆದ್ದರಿಂದ, ಪ್ರವಾಸ ಮುಗಿಸಿ ಬಂದ ನಂತರ ಫೋಟೋಗಳನ್ನು ಹಂಚಿಕೊಳ್ಳುವುದು ಸುರಕ್ಷಿತ.

Read Full Story

08:38 PM (IST) Aug 13

ಬಾಕ್ಸಿಂಗ್‌ ರಿಂಗ್‌ಗೆ ಆಹ್ವಾನಿಸಿದ್ದ ಶ್ರೀಶಾಂತ್‌ಗೆ ಸೈಲೆಂಟ್‌ ಉತ್ತರ ನೀಡಿದ ಹರ್ಭಜನ್‌ ಸಿಂಗ್‌!

2008ರ ಐಪಿಎಲ್ 'ಸ್ಲ್ಯಾಪ್‌ಗೇಟ್' ವಿವಾದದ ಬಳಿಕ, ಇತ್ತೀಚೆಗೆ ಶ್ರೀಶಾಂತ್ ಅವರು ಹರ್ಭಜನ್ ಸಿಂಗ್‌ಗೆ ಬಾಕ್ಸಿಂಗ್ ಸವಾಲು ಹಾಕಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಹರ್ಭಜನ್, ತಮ್ಮಿಬ್ಬರ ನಡುವಿನ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಿಕೊಳ್ಳಲು ಸಿದ್ದ ಎಂದಿದ್ದಾರೆ.

Read Full Story

07:54 PM (IST) Aug 13

'ಒತ್ತಾಯಪೂರ್ವಕವಾಗಿ ಅಪ್ಪಿಕೊಳ್ಳೋದು ವಿದೇಶಾಂಗ ನೀತಿಯಲ್ಲ..' ಮೋದಿ ಬಗ್ಗೆ ಮಿಮಿಕ್ರಿ ಮಾಡಿ ಲೇವಡಿ ಮಾಡಿದ ರಾಹುಲ್‌ ಗಾಂಧಿ

ಪ್ರಧಾನಿ ಮೋದಿಯವರ ವಿದೇಶಾಂಗ ನೀತಿಯನ್ನು ಟೀಕಿಸಿದ ರಾಹುಲ್ ಗಾಂಧಿ, ನಾಯಕರನ್ನು ಅಪ್ಪಿಕೊಳ್ಳುವುದೇ ರಾಜತಾಂತ್ರಿಕತೆಯಲ್ಲ ಎಂದರು. ವೇದಿಕೆಯಲ್ಲೇ ಸಂದೀಪ್ ದೀಕ್ಷಿತ್ ಅವರನ್ನು ಅಪ್ಪಿಕೊಂಡು ಅವರು ವ್ಯಂಗ್ಯವಾಡಿದ್ದಾರೆ.

Read Full Story

07:29 PM (IST) Aug 13

‘ದಿ ಒನ್‌ ಆ್ಯಂಡ್‌ ಓನ್ಲಿ...’ ಶ್ರೀದೇವಿಯನ್ನು ನೆನೆದು ಪ್ರಿಯಾಂಕಾ ಭಾವುಕ - ‘ಎಂಪ್ರೆಸ್’ ಫಸ್ಟ್ ಲುಕ್ ರಿವೀಲ್

Sridevi Biography Book: ದಿವಂಗತ ನಟಿ ಶ್ರೀದೇವಿ ಅವರ ಜನ್ಮದಿನದಂದು, ಪ್ರಿಯಾಂಕಾ ಚೋಪ್ರಾ ಅವರು 'ಎಂಪ್ರೆಸ್: ದಿ ಡಿಫಿನಿಟಿವ್ ಬಯೋಗ್ರಫಿ ಆಫ್ ಶ್ರೀದೇವಿ' ಪುಸ್ತಕದ ಮುಖಪುಟವನ್ನು ಅನಾವರಣಗೊಳಿಸಿದ್ದಾರೆ.

Read Full Story

07:05 PM (IST) Aug 13

ಬುಕಿಂಗ್‌ ವೇಳೆಯೇ 'ಟಿಪ್ಸ್‌' ಕೇಳುವಂತಿಲ್ಲ - ಓಲಾ, ಉಬರ್‌ನಂತಹ ಕ್ಯಾಬ್‌ ಕಂಪನಿಗಳಿಗೆ ಕೇಂದ್ರದ ಖಡಕ್‌ ಸೂಚನೆ

ಕ್ಯಾಬ್ ಅಥವಾ ಆಟೋ ಬುಕ್ ಮಾಡುವಾಗ ಮುಂಗಡವಾಗಿ 'ಟಿಪ್ಸ್' ನೀಡುವ ಆಯ್ಕೆಯನ್ನು ತಕ್ಷಣವೇ ತೆಗೆದುಹಾಕುವಂತೆ ಕೇಂದ್ರ ಸಾರಿಗೆ ಸಚಿವಾಲಯವು ವಾಹನ ಅಗ್ರಿಗೇಟರ್‌ಗಳಿಗೆ ಖಡಕ್ ಸೂಚನೆ ನೀಡಿದೆ.

Read Full Story

05:47 PM (IST) Aug 13

ಬಾಲ್ಯದಲ್ಲಿ ಅನಾಥರಾದ್ರು, ನೆದರ್ಲ್ಯಾಂಡಲ್ಲಿ ಸ್ನೇಹಿತರಾಗಿ ದೂರಾದ್ರು, 3 ದಶಕದ ಬಳಿಕ ತಿಳೀತು ಭಾರತದಲ್ಲಿ ಒಡಹುಟ್ಟಿದ ಸಹೋದರಿಯೆಂದು!

ನೆದರ್ಲ್ಯಾಂಡ್ಸ್‌ನಲ್ಲಿ ದತ್ತು ಪಡೆದು ಬೆಳೆದ ಇಬ್ಬರು ಭಾರತೀಯ ಹುಡುಗಿಯರು ಹದಿಹರೆಯದಲ್ಲಿ ಸ್ನೇಹಿತರಾಗುತ್ತಾರೆ. ವರ್ಷಗಳ ನಂತರ, ಡಿಎನ್‌ಎ ಪರೀಕ್ಷೆಯೊಂದು ಅವರಿಬ್ಬರೂ ಒಂದೇ ತಾಯಿಯ ಮಕ್ಕಳಾದ ಅಕ್ಕ-ತಂಗಿಯರು ಎಂಬ ಬೆರಗಿನ ಸತ್ಯವನ್ನು ಬಹಿರಂಗಪಡಿಸುತ್ತದೆ, ಇದು ಅವರ ಭಾವುಕ ಪುನರ್ಮಿಲನಕ್ಕೆ ಕಾರಣವಾಗುತ್ತದೆ.
Read Full Story

05:45 PM (IST) Aug 13

ವಿಶ್ವಪ್ರಸಿದ್ಧ ಸಾಂಚಿ ಸ್ತೂಪಕ್ಕಿಂತಲೂ ಹಳೆಯದಾದ ಸ್ತೂಪ ಶೋಧನೆಗೆ ಮುಂದಾದ ಸರ್ಕಾರ!

ಮಧ್ಯಪ್ರದೇಶದ ರೇವಾ ಜಿಲ್ಲೆಯಲ್ಲಿರುವ 'ದೇವುರ್ ಕೊಠಾರ್' ಬೌದ್ಧ ಸ್ತೂಪವು ವಿಶ್ವಪ್ರಸಿದ್ಧ ಸಾಂಚಿ ಸ್ತೂಪಕ್ಕಿಂತಲೂ ಹಳೆಯದು ಮತ್ತು ಬೃಹತ್ತಾದುದು ಎಂಬ ಚರ್ಚೆ ಹುಟ್ಟುಹಾಕಿದೆ.

Read Full Story

04:58 PM (IST) Aug 13

ಭಾರತದಲ್ಲಿ ನೂರಾರು ನದಿಗಳಿವೆ, ಆದರೆ ಈ ಒಂದು ನದಿ ಮಾತ್ರ ‘ಗಂಡು ನದಿ’! ಯಾಕೆ ಗೊತ್ತಾ?

ಭಾರತದಲ್ಲಿ ಬಹುತೇಕ ನದಿಗಳು ಹೆಣ್ಣಿನ ಹೆಸರನ್ನು ಹೊಂದಿದ್ದರೆ, ಬ್ರಹ್ಮಪುತ್ರವನ್ನು 'ಬ್ರಹ್ಮ ದೇವನ ಮಗ' ಎಂಬ ಅರ್ಥದಿಂದ 'ಗಂಡು ನದಿ' ಎಂದು ಕರೆಯಲಾಗುತ್ತದೆ. ಟಿಬೆಟ್‌ನಲ್ಲಿ ಹುಟ್ಟಿ, ಅಸ್ಸಾಂನ ಜೀವನಾಡಿಯಾಗಿ ಹರಿಯುವ ಈ ನದಿಯು ತನ್ನ ಬೃಹತ್ ಹರಿವು ಮತ್ತು ವಿಶ್ವದ ಅತಿದೊಡ್ಡ ನದಿ ದ್ವೀಪವಾದ ಮಜುಲಿಯನ್ನು ನಿರ್ಮಿಸಿರುವುದಕ್ಕೆ ಪ್ರಸಿದ್ಧವಾಗಿದೆ.
Read Full Story

04:20 PM (IST) Aug 13

E20 ಇಂಧನ - ಆಟೋ ರಂಗದ ಆಂತರಿಕ ವರದಿಯಲ್ಲಿ ಬೆಚ್ಚಿಬೀಳಿಸೋ ಸತ್ಯ, ಅಪಾಯಕಾರಿ ಮಟ್ಟದ ಕ್ಲೋರೈಡ್ ಪತ್ತೆ, ಮೈಲೇಜ್ ಕುಸಿತ!

ದೇಶಾದ್ಯಂತ E20 ಪೆಟ್ರೋಲ್ ಬಳಕೆಯಿಂದ ವಾಹನಗಳ ಮೈಲೇಜ್ ಕುಸಿತ ಮತ್ತು ಎಂಜಿನ್ ಹಾನಿಯಂತಹ ದೂರುಗಳು ಹೆಚ್ಚಾಗಿವೆ. ಆಟೋ ಉದ್ಯಮದ ಆಂತರಿಕ ತನಿಖೆಯಲ್ಲಿ ಇಂಧನದಲ್ಲಿ ಅಪಾಯಕಾರಿ ಮಟ್ಟದ ಕ್ಲೋರೈಡ್ ಮತ್ತು ತೇವಾಂಶ ಪತ್ತೆಯಾಗಿದೆ. ಆದರೆ, ಆಟೋಮೊಬೈಲ್ ತಯಾರಕರ ಸಂಘವು (SIAM) ಸರ್ಕಾರಕ್ಕೆ ನೀಡಿದ್ದ ದೂರನ್ನು ಹಿಂಪಡೆದಿದ್ದು, ಸಾರ್ವಜನಿಕರಲ್ಲಿ ಗೊಂದಲ ಮುಂದುವರೆದಿದೆ.
Read Full Story

03:52 PM (IST) Aug 13

ಮೊದಲ ದಿನವೇ ಆಸ್ಟ್ರೇಲಿಯಾದ ಸೊಕ್ಕಡಗಿಸಿದ ಬಾಂಗ್ಲಾದೇಶ..! ವೇಗಿಗಳ ದಾಳಿಗೆ ತವರಿನಲ್ಲೇ ಮಂಕಾದ ಕಾಂಗರೂ ಪಡೆ

23 ವರ್ಷಗಳ ನಂತರ ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಬಾಂಗ್ಲಾದೇಶ, ಮೊದಲ ಟೆಸ್ಟ್‌ನ ಮೊದಲ ದಿನವೇ ಆತಿಥೇಯರನ್ನು 198 ರನ್‌ಗಳಿಗೆ ಕಟ್ಟಿಹಾಕಿದೆ. ಹಸನ್ ಮಹಮೂದ್ ಅವರ 6 ವಿಕೆಟ್‌ಗಳ ನೆರವಿನಿಂದ ಈ ಸಾಧನೆ ಮಾಡಿದ ಬಾಂಗ್ಲಾ, ದಿನದಾಟದಂತ್ಯಕ್ಕೆ 1 ವಿಕೆಟ್ ನಷ್ಟಕ್ಕೆ 96 ರನ್ ಗಳಿಸಿ ಪಂದ್ಯದ ಮೇಲೆ ಹಿಡಿತ ಸಾಧಿಸಿದೆ.
Read Full Story

03:51 PM (IST) Aug 13

Arranged Marriage - ​‘ಎಕ್ಸೆಲ್ ಶೀಟ್’ನಲ್ಲೇ ಮದುವೆ ಮ್ಯಾಚ್ ಹುಡುಕಿದ್ದ Gen Z ಯುವಕ! ವರ್ಷದ ಬಳಿಕ ಕನೆಕ್ಟ್ ಆಯ್ತು ಲೈಫ್ 'ಫಾರ್ಮುಲಾ'!

ಹಿರಿಯರು ನೋಡಿ ನಿರ್ಧರಿಸಿದ ಮದುವೆ ಸಂಬಂಧಗಳನ್ನು ಸುಲಭವಾಗಿ ನಿರ್ವಹಿಸಲು ಪುಣೆ ಮೂಲದ ವಿಕಾಸ್ ಲೋಹಿಯಾ ಎಂಬ ಯುವಕ ಒಂದು ಎಕ್ಸ್ ಎಲ್ ಶೀಟ್ ತಯಾರಿಸಿದ್ದರು. ಪೋಷಕರು ಬಂದು ಪ್ರಶ್ನೆ ಮಾಡಿದ ಸಂದರ್ಭದಲ್ಲಿ ಉತ್ತರಿಸಲು, ಈಗಾಗಲೇ ನೀಡಿದ ಉತ್ತರಗಳನ್ನು ನೆನಪಿನಲ್ಲಿಟ್ಟುಕೊಳ್ಳಲು ಈ ಶೀಟ್‌ಅನ್ನು ಬಳಕೆ ಮಾಡುತ್ತಿದ್ದ.

Read Full Story

02:53 PM (IST) Aug 13

45 ದಿನ ಮುಂಚೆನೇ ಲೀವ್ ಕೇಳಿದ್ರೂ ಮ್ಯಾನೇಜರ್ No ಅಂದ..! ಟೆಕ್ಕಿಯ ರೆಡ್ಡಿಟ್ ಪೋಸ್ಟ್ ಫುಲ್ ವೈರಲ್!

45 ದಿನಗಳ ಮುಂಚಿತವಾಗಿ ರಜೆ ಕೇಳಿದರೂ ಮ್ಯಾನೇಜರ್ ಅನುಮತಿ ನಿರಾಕರಿಸಿದ್ದಕ್ಕೆ ಟೆಕ್ಕಿಯೊಬ್ಬರು ರೆಡ್ಡಿಟ್‌ನಲ್ಲಿ ಹಂಚಿಕೊಂಡ ಪೋಸ್ಟ್ ವೈರಲ್ ಆಗಿದೆ. ಪೂರ್ವ-ಯೋಜಿತ ಪ್ರವಾಸಕ್ಕೆ ರಜೆ ನಿರಾಕರಿಸಿದ ಈ ಘಟನೆಯು, ಭಾರತೀಯ ಐಟಿ ಕಂಪನಿಗಳಲ್ಲಿನ ಕೆಲಸದ ಸಂಸ್ಕೃತಿ ಮತ್ತು ಉದ್ಯೋಗಿಗಳ ಹಕ್ಕುಗಳ ಬಗ್ಗೆ ಚರ್ಚೆಯನ್ನು ಹುಟ್ಟುಹಾಕಿದೆ.
Read Full Story

02:51 PM (IST) Aug 13

Cab Booking Rules Changed - ರೈಡ್ ಬುಕ್ ಮಾಡುವವರಿಗೆ ಗುಡ್ ನ್ಯೂಸ್; ಓಲಾ, ಉಬರ್, ರ್ಯಾಪಿಡೋಗೆ ಕೇಂದ್ರದ ಬಿಗ್ ಶಾಕ್!

ಮುಂಗಡ ಟಿಪ್ ನೀಡಿದರೆ ಬೇಗ ರೈಡ್ ಸಿಗುತ್ತದೆ ಎಂಬ ಭಾವನೆ ಮೂಡಿಸಿ ಗ್ರಾಹಕರ ಮೇಲೆ ಒತ್ತಡ ಹೇರುವುದನ್ನು ನಿಲ್ಲಿಸಬೇಕು ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಎಚ್ಚರಿಕೆ ನೀಡಿದೆ.

Read Full Story

01:33 PM (IST) Aug 13

IPL 2027 ಗೂ ಮುನ್ನ ಮುಂಬೈ ಇಂಡಿಯನ್ಸ್ ಈ ಮೂವರು ಬೌಲರ್‌ಗಳಿಗೆ ಗೇಟ್‌ಪಾಸ್ ನೀಡೋದು ಫಿಕ್ಸ್..! ಲಿಸ್ಟ್‌ನಲ್ಲಿದ್ದಾರೆ ₹12.5 ಕೋಟಿಯ ಮಾರಕ ವೇಗಿ

ಕಳೆದ ಐಪಿಎಲ್ ಸೀಸನ್‌ನಲ್ಲಿ ನೀರಸ ಪ್ರದರ್ಶನ ನೀಡಿದ ಮುಂಬೈ ಇಂಡಿಯನ್ಸ್, ಮುಂಬರುವ ಹರಾಜಿಗೂ ಮುನ್ನ ತಂಡದಲ್ಲಿ ದೊಡ್ಡ ಬದಲಾವಣೆ ಮಾಡಲು ಮುಂದಾಗಿದೆ. ಕಳಪೆ ಪ್ರದರ್ಶನ ತೋರಿದ ದೀಪಕ್ ಚಹರ್, ಶಾರ್ದೂಲ್ ಠಾಕೂರ್ ಮತ್ತು ಟ್ರೆಂಟ್ ಬೌಲ್ಟ್ ಸೇರಿದಂತೆ ಮೂವರು ಪ್ರಮುಖ ಬೌಲರ್‌ಗಳನ್ನು ತಂಡದಿಂದ ಕೈಬಿಡುವ ಸಾಧ್ಯತೆ ದಟ್ಟವಾಗಿದೆ.
Read Full Story

12:42 PM (IST) Aug 13

ಟಾಟಾ ಸನ್ಸ್ ಚುಕ್ಕಾಣಿ ಬಿಟ್ಟ ಚಂದ್ರಶೇಖರನ್, ದಿಢೀರ್ ಬೆಳವಣಿಗೆ ಬೆನ್ನಲ್ಲೇ ಟಾಟಾ ಗ್ರೂಪ್‌ನಲ್ಲಿ ಅಧಿಕಾರದ ಹೋರಾಟ!

ಎನ್. ಚಂದ್ರಶೇಖರನ್ ಟಾಟಾ ಸನ್ಸ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ, ಟಾಟಾ ಸಮೂಹದಲ್ಲಿ ತೀವ್ರ ನಾಯಕತ್ವದ ಬಿಕ್ಕಟ್ಟು ಸೃಷ್ಟಿಯಾಗಿದೆ. ಟಾಟಾ ಗ್ರೂಪ್ ಮತ್ತು ನೋಯೆಲ್ ಟಾಟಾ ನೇತೃತ್ವದ ಟಾಟಾ ಟ್ರಸ್ಟ್‌ಗಳ ನಡುವಿನ ಹೂಡಿಕೆ ಯೋಜನೆಗಳು, ಆಡಳಿತಾತ್ಮಕ ಭಿನ್ನಾಭಿಪ್ರಾಯಗಳೇ ಈ ಅಧಿಕಾರ ಹೋರಾಟಕ್ಕೆ ಮುಖ್ಯ ಕಾರಣ.

Read Full Story

12:14 PM (IST) Aug 13

ಸ್ಟಿಫನ್ ಫ್ಲೆಮಿಂಗ್ ಜಾಗಕ್ಕೆ ಸರ್‌ಪ್ರೈಸ್ ಎಂಟ್ರಿ? ಸಿಎಸ್‌ಕೆ ಹೊಸ ಕೋಚ್ ಬಗ್ಗೆ ಬಿಗ್ ಹಿಂಟ್ ಕೊಟ್ಟ ರವಿಚಂದ್ರನ್ ಅಶ್ವಿನ್..!

ಸಿಎಸ್‌ಕೆ ಹೆಡ್ ಕೋಚ್ ಹುದ್ದೆಯಿಂದ ಸ್ಟೀಫನ್ ಫ್ಲೆಮಿಂಗ್ ಕೆಳಗಿಳಿಯುವ ಸಾಧ್ಯತೆಯಿದ್ದು, ಅವರ ಸ್ಥಾನಕ್ಕೆ ಇಯಾನ್ ಮಾರ್ಗನ್ ಬರಬಹುದು ಎಂದು ಆರ್. ಅಶ್ವಿನ್ ಸುಳಿವು ನೀಡಿದ್ದಾರೆ. ಇದೇ ವೇಳೆ, ಮುಂದಿನ ಸೀಸನ್‌ನಲ್ಲಿ ಎಂ.ಎಸ್. ಧೋನಿಯೇ ತಂಡದ ಸಂಪೂರ್ಣ ಜವಾಬ್ದಾರಿ ವಹಿಸಿಕೊಳ್ಳುವ ಸಾಧ್ಯತೆಯ ಬಗ್ಗೆಯೂ ಅಶ್ವಿನ್ ಅಭಿಪ್ರಾಯಪಟ್ಟಿದ್ದಾರೆ.
Read Full Story

12:02 PM (IST) Aug 13

ತಿಳಿದುಕೊಳ್ಳಿ! ಅನುಮತಿ ಇಲ್ಲದೇ ಯಾರಾದರೂ ನಿಮ್ಮ ವಿಡಿಯೋ ಮಾಡಿದ್ರೆ ಕಾನೂನಿಲ್ಲಿ ಏನು ಶಿಕ್ಷೆ ಕೊಡಿಸಬಹುದು?

ಸ್ಮಾರ್ಟ್‌ಫೋನ್ ಕೈಯಲ್ಲಿದೆ ಎಂದ ತಕ್ಷಣ ಯಾರದ್ದೇ ವಿಡಿಯೋ ಮಾಡುವುದು ಕಾನೂನುಬದ್ಧವಲ್ಲ. ಇತರರ ವೈಯಕ್ತಿಕ ಗೌರವ ಮತ್ತು ಖಾಸಗಿತನವನ್ನು ಗೌರವಿಸುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ.

Read Full Story

11:49 AM (IST) Aug 13

ಟರ್ಕಿಯಲ್ಲಿ 12,900 ವರ್ಷಗಳಷ್ಟು ಹಳೆಯ ಮಾನವನ ಗುಹೆ ಪತ್ತೆ, ಪ್ರಾಚೀನ ಬೆಂಕಿ, ಕಲ್ಲಿನ ಉಪಕರಣ, ಆಭರಣ ಬೆಳಕಿಗೆ

ಟರ್ಕಿಯಲ್ಲಿ 12,900 ವರ್ಷಗಳಷ್ಟು ಹಳೆಯದಾದ ಕೊಸ್ಕಾರ್ಲಿ ಗುಹೆಯು ಪತ್ತೆಯಾಗಿದ್ದು, ಇದು ಎಪಿಪಾಲಿಯೊಲಿಥಿಕ್ ಅವಧಿಯ ಮಾನವ ಚಟುವಟಿಕೆಗಳಿಗೆ ಸಾಕ್ಷಿಯಾಗಿದೆ. ಈ ಉತ್ಖನನದಲ್ಲಿ ಪ್ರಾಚೀನ ಅಗ್ನಿಕುಂಡ, ಕಲ್ಲಿನ ಉಪಕರಣಗಳು ಮತ್ತು ವೈಯಕ್ತಿಕ ಆಭರಣಗಳು ದೊರೆತಿದ್ದು, ಇದು ಅನಾಟೋಲಿಯಾ ಮತ್ತು ಕಾಕಸಸ್ ನಡುವಿನ ಸಾಂಸ್ಕೃತಿಕ ಸಂಪರ್ಕವನ್ನು ಸೂಚಿಸುತ್ತದೆ.
Read Full Story

11:35 AM (IST) Aug 13

ಮುಸ್ಲಿಂ ಜೊತೆ ಮದುವೆ, ಡುಮ್ಮಿ, ಕೊಳಕು ಟ್ರೋಲ್‌ಗೆ ಪ್ರತಿಕ್ರಿಯಿಸಿದ ಸ್ವರಾ ಭಾಸ್ಕರ್

ನಟಿ ಸ್ವರಾ ಭಾಸ್ಕರ್ ಅವರು ಮದುವೆ ಮತ್ತು ಹೆರಿಗೆಯ ನಂತರದ ತೂಕ ಏರಿಕೆಗೆ ಸಂಬಂಧಿಸಿದಂತೆ ತಮ್ಮನ್ನು ಟ್ರೋಲ್ ಮಾಡಿದವರಿಗೆ ಖಡಕ್ ಉತ್ತರ ನೀಡಿದ್ದಾರೆ. ತಾಯಿಯಾದ ನಂತರ ದೇಹದಲ್ಲಿ ಆಗುವ ಬದಲಾವಣೆಗಳು ಸಹಜವಾಗಿದ್ದು, ಟೀಕೆಗಳಿಗೆ ಹೆದರಿ ತೂಕ ಇಳಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
Read Full Story

10:56 AM (IST) Aug 13

Gold Rally Back - ಚಿನ್ನದ ದರ ಕುಸಿತ ಅಂತ್ಯ, ಇನ್ಮುಂದೆ ತೀವ್ರ ಏರಿಕೆ; ಶಾಕಿಂಗ್ ಭವಿಷ್ಯ ನುಡಿದ ಪೀಟರ್ ಸ್ಕಿಫ್!

ಭಾರತದಲ್ಲಿ ಚಿನ್ನದ ದರ ಮಂಗಳವಾರ 3 ಸಾವಿರ ರೂಪಾಯಿಗಿಂತ ಹೆಚ್ಚು ಹೆಚ್ಚಾಗಿತ್ತು, ಇಂದು ಮತ್ತೆ ಒಂದು ಸಾವಿರ ರೂಪಾಯಿಗಿಂತ ಹೆಚ್ಚು ದರ ದಾಖಲಿಸಿದೆ. ಜಾಗತಿಕ ವಿದ್ಯಮಾನಗಳು ಮತ್ತು ಡಾಲರ್ ಮೌಲ್ಯ ಕುಸಿತದಿಂದಾಗಿ ಭವಿಷ್ಯದಲ್ಲಿ ಚಿನ್ನದ ಬೆಲೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ ಎಂದು ತಜ್ಞರು ವಿಶ್ಲೇಷಿಸಿದ್ದಾರೆ.

Read Full Story

10:39 AM (IST) Aug 13

40ನೇ ವಯಸ್ಸಿನಲ್ಲಿ ಉದ್ಯೋಗ ಕಳೆದುಕೊಂಡ ಕಾರ್ಪೊರೇಟ್ ಉದ್ಯೋಗಿ ಹಂಚಿಕೊಂಡ 3 ಮುಖ್ಯ ಜೀವನ ಪಾಠಗಳು

ಕಾರ್ಪೊರೇಟ್ ವಲಯದಲ್ಲಿ 18 ವರ್ಷಗಳ ಅನುಭವದ ನಂತರ ಕೆಲಸ ಕಳೆದುಕೊಂಡ ಉದ್ಯೋಗಿಯೊಬ್ಬರು ತಮ್ಮ ಅನುಭವದಿಂದ ಕಲಿತ ಮೂರು ಪ್ರಮುಖ ಪಾಠಗಳನ್ನು ಹಂಚಿಕೊಂಡಿದ್ದಾರೆ. ಈ ಘಟನೆಯು ನಿಜವಾದ ಹಿತೈಷಿಗಳನ್ನು ಗುರುತಿಸಲು, ಆರ್ಥಿಕ ವಾಸ್ತವವನ್ನು ಅರಿಯಲು ಮತ್ತು ಕೆಲಸದ ಬಗೆಗಿನ ದೃಷ್ಟಿಕೋನವನ್ನು ಬದಲಾಯಿಸಲು ಹೇಗೆ ಸಹಾಯ ಮಾಡಿತು ಎಂಬುದನ್ನು ಅವರು ವಿವರಿಸಿದ್ದಾರೆ.
Read Full Story

09:59 AM (IST) Aug 13

ಕೇರಳದ ಘಟನೆಯಾಧಾರಿತ ತಮಿಳಿನ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ; OTTಯಲ್ಲಿ ಹಲ್‌-ಚಲ್

ಕೇರಳದಲ್ಲಿ 2021ರಲ್ಲಿ ನಡೆದ ಸತ್ಯ ಘಟನೆಯಾಧಾರಿತ ತಮಿಳಿನ ಸಿನಿಮಾ ಓಟಿಟಿಯಲ್ಲಿ ಸದ್ದು ಮಾಡುತ್ತಿದೆ. ಸಿನಿಮಾ ಅವಕಾಶದ ಆಮಿಷವೊಡ್ಡಿ ಯುವತಿಯರನ್ನು ಕೊಲ್ಲುವ ಸೀರಿಯಲ್ ಕಿಲ್ಲರ್ ಮತ್ತು ಪೊಲೀಸ್ ತನಿಖೆಯ ಸುತ್ತ ಈ ಸಸ್ಪೆನ್ಸ್ ಥ್ರಿಲ್ಲರ್ ಕಥೆ ಸಾಗುತ್ತದೆ.

Read Full Story

09:51 AM (IST) Aug 13

Shocking - ದೆಹಲಿ ಏರ್‌ಪೋರ್ಟ್‌ನಲ್ಲಿ ಪ್ರಯಾಣಿಕನ ಬ್ಯಾಗ್‌ನಲ್ಲಿ ತಲೆಬುರಡೆ ಪತ್ತೆ!

ಆಗಸ್ಟ್ 10 ರಂದು ದೆಹಲಿಯ ಐಜಿಐ ವಿಮಾನ ನಿಲ್ದಾಣದಲ್ಲಿ ಸಿಐಎಸ್‌ಎಫ್ ಸಿಬ್ಬಂದಿ, ಪ್ರಯಾಣಿಕರೊಬ್ಬರ ಬ್ಯಾಗ್‌ನಲ್ಲಿ ತಲೆಬುರುಡೆಯೊಂದನ್ನು ಪತ್ತೆ ಮಾಡಿದ್ದಾರೆ. ಹೈದರಾಬಾದ್‌ಗೆ ಹೊರಟಿದ್ದ ಈ ಪ್ರಯಾಣಿಕ, ಅದು ಕೋತಿಯ ತಲೆಬುರುಡೆ ಎಂದು ಹೇಳಿಕೊಂಡಿದ್ದಾನೆ.

Read Full Story

09:47 AM (IST) Aug 13

ಶ್ರೀಲಂಕಾ ಪ್ರವಾಸಕ್ಕೂ ಮುನ್ನ ಭಾರತಕ್ಕೆ ಮತ್ತೊಂದು ಶಾಕ್! ಬುಮ್ರಾ, ಸುದರ್ಶನ್ ಬಳಿಕ ಮತ್ತೋರ್ವ ಆಟಗಾರ ಕೂಡ ಔಟ್

ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಗೂ ಮುನ್ನ, ಜಸ್ಪ್ರೀತ್ ಬುಮ್ರಾ ಮತ್ತು ಸಾಯಿ ಸುದರ್ಶನ್ ಬಳಿಕ ಆಲ್‌ರೌಂಡರ್ ವಾಷಿಂಗ್ಟನ್ ಸುಂದರ್ ಕೂಡ ಗಾಯದ ಕಾರಣ ಸರಣಿಯಿಂದ ಹೊರಗುಳಿಯುವ ಸಾಧ್ಯತೆಯಿದೆ. ಪ್ರಮುಖ ಆಟಗಾರರ ಅಲಭ್ಯತೆ ತಂಡಕ್ಕೆ ಸವಾಲಾಗಿದ್ದರೂ, ಅಭ್ಯಾಸ ಪಂದ್ಯದಲ್ಲಿನ ಜಯವು ತಂಡದ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ.
Read Full Story

09:30 AM (IST) Aug 13

ಕಣಿವೆ ನಾಡಲ್ಲಿ ಮತ್ತೆ ಕ್ರಿಕೆಟ್ ಕಹಳೆ - 40 ವರ್ಷಗಳ ಬಳಿಕ ಮತ್ತೆ ಮಹತ್ವದ ಕ್ರಿಕೆಟ್‌ ಪಂದ್ಯ!

ಬರೋಬ್ಬರಿ 40 ವರ್ಷಗಳ ಬಳಿಕ, ಶ್ರೀನಗರದ ಶೇರ್‌ ಎ ಕಾಶ್ಮೀರ ಕ್ರೀಡಾಂಗಣವು ಇರಾನಿ ಕಪ್ ಫೈನಲ್‌ಗೆ ಆತಿಥ್ಯ ವಹಿಸುವ ಮೂಲಕ ಪ್ರಮುಖ ಕ್ರಿಕೆಟ್ ಪಂದ್ಯಕ್ಕೆ ಸಾಕ್ಷಿಯಾಗಲಿದೆ. ಈ ಪಂದ್ಯವು ಹಾಲಿ ರಣಜಿ ಚಾಂಪಿಯನ್‌ ಜಮ್ಮು-ಕಾಶ್ಮೀರ ಮತ್ತು ರೆಸ್ಟ್‌ ಆಫ್‌ ಇಂಡಿಯಾ ತಂಡಗಳ ನಡುವೆ ನಡೆಯಲಿದೆ.
Read Full Story

08:59 AM (IST) Aug 13

ಶೀಘ್ರದಲ್ಲೇ ಜಂತರ್‌ ಮಂತರ್‌ ಸೀಸನ್‌ 2 - ನಿಗೂಢ ಹೋರಾಟದ ಮುನ್ಸೂಚನೆ ನೀಡಿದ ದೀಪ್ಕೆ

Abhijeet Dipke: ಕಾಕ್ರೋಚ್‌ ಜನತಾ ಪಾರ್ಟಿ ಸ್ಥಾಪಕ ಅಭಿಜೀತ್‌ ದೀಪ್ಕೆ, 'ಜಂತರ್‌ ಮಂತರ್‌ ಹೋರಾಟದ 2ನೇ ಸೀಸನ್‌' ಶೀಘ್ರದಲ್ಲೇ ಆರಂಭವಾಗಲಿದೆ ಎಂದು ಘೋಷಿಸಿದ್ದಾರೆ. ಆದರೆ, ಹೋರಾಟದ ಸ್ವರೂಪವನ್ನು ಬಹಿರಂಗಪಡಿಸಿಲ್ಲ, ಬದಲಾಗಿ ದೇಶವ್ಯಾಪಿ 'ಲಿಸನಿಂಗ್ ಟೂರ್' ನಡೆಸುವುದಾಗಿ ತಿಳಿಸಿದ್ದಾರೆ.

Read Full Story

08:55 AM (IST) Aug 13

ಗಾಲೆ ಟೆಸ್ಟ್ - ಭಾರತ ತಂಡದಲ್ಲಿ ಆ ಒಂದು ಸ್ಥಾನಕ್ಕೆ ಪೈಪೋಟಿ! ಆಯ್ಕೆ ಗೊಂದಲದಲ್ಲಿ ಟೀಂ ಇಂಡಿಯಾ

ಆಗಸ್ಟ್ 15ರಿಂದ ಆರಂಭವಾಗಲಿರುವ ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಗೆ ಭಾರತ ತಂಡ ಸಜ್ಜಾಗಿದ್ದು, ಆಡುವ ಬಳಗದ ಆಯ್ಕೆ ಗೊಂದಲ ಎದುರಾಗಿದೆ. 6ನೇ ಕ್ರಮಾಂಕಕ್ಕೆ ಧ್ರುವ್‌ ಜುರೆಲ್‌ ಮತ್ತು ಸರ್ಫರಾಜ್‌ ಖಾನ್‌ ನಡುವೆ ಪೈಪೋಟಿ ಇದ್ದರೆ, ಸ್ಪಿನ್‌ ಸ್ನೇಹಿ ಪಿಚ್‌ನಲ್ಲಿ ಹೆಚ್ಚುವರಿ ಸ್ಪಿನ್ನರ್ ಆಡಿಸಬೇಕೇ ಎಂಬ ಚಿಂತೆಯೂ ತಂಡಕ್ಕಿದೆ.

Read Full Story

06:58 AM (IST) Aug 13

ಮನೆಯಲ್ಲಿ ಕಂತೆ ಕಂತೆ ನೋಟು ಪತ್ತೆ ; ಮಾಜಿ ಜಡ್ಜ್ ಯಶವಂತ್ ವರ್ಮಾ ಮೇಲಿನ ಆರೋಪ ಸಾಬೀತು

ದೆಹಲಿ ಹೈಕೋರ್ಟ್‌ ಮಾಜಿ ನ್ಯಾಯಮೂರ್ತಿ ಯಶವಂತ ವರ್ಮಾ ಅವರ ನಿವಾಸದಲ್ಲಿ ಕಂತೆ ಕಂತೆ ನೋಟುಗಳು ಪತ್ತೆಯಾದ ಪ್ರಕರಣದ ತನಿಖಾ ವರದಿಯು ಸಂಸತ್ತಿನಲ್ಲಿ ಮಂಡನೆಯಾಗಿದೆ. ವರದಿಯು ನ್ಯಾ. ವರ್ಮಾ ವಿರುದ್ಧದ ಮೂರೂ ಗಂಭೀರ ಆರೋಪಗಳು ಸಾಬೀತಾಗಿವೆ ಎಂದು ಸ್ಪಷ್ಟಪಡಿಸಿದೆ.

Read Full Story

06:46 AM (IST) Aug 13

ಕಾವಡ ಯಾತ್ರೆ - ಶ್ರೀಕ್ಷೇತ್ರ ಹರಿದ್ವಾರದಲ್ಲಿ ಮೂತ್ರ ಬಾಟಲಿ, 7000 ಟನ್‌ ಕಸದ ರಾಶಿ!

ಶ್ರಾವಣ ಮಾಸದ ಕಾವಡ ಯಾತ್ರೆಯ ನಂತರ ಹರಿದ್ವಾರದಲ್ಲಿ ಸುಮಾರು 7000 ಟನ್ ಕಸ ಸಂಗ್ರಹವಾಗಿದೆ. 4.8 ಕೋಟಿ ಯಾತ್ರಿಕರು ಭಾಗವಹಿಸಿದ್ದ ಈ ಯಾತ್ರೆಯ ಬಳಿಕ, ಪ್ಲಾಸ್ಟಿಕ್ ತ್ಯಾಜ್ಯ ಮತ್ತು ಮೂತ್ರ ತುಂಬಿದ ಬಾಟಲಿಗಳು ಎಲ್ಲೆಡೆ ಬಿದ್ದಿದ್ದು, ಸ್ವಚ್ಛತೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
Read Full Story

More Trending News