Published : Jul 12, 2026, 06:48 AM ISTUpdated : Jul 12, 2026, 10:55 PM IST

India Latest News Live: ರಣವೀರ್ ಸಿಂಗ್ ಅಲ್ಲ, ಈ ನಟನ ಜೊತೆ ಆದಿತ್ಯ ಧರ್ ಸಿನಿಮಾ - ಯಾರು ಆ ಹೊಸ 'ಧುರಂಧರ್'?

ಸಾರಾಂಶ

ನವದೆಹಲಿ: 2047ರ ವೇಳೆಗೆ ಭಾರತವನ್ನುಇಸ್ಲಾಮಿಕ್‌ ಖಿಲಾಫತ್‌ ಆಗಿಸುವ ಪಿತೂರಿ ಹಿನ್ನೆಲೆಯಲ್ಲಿ, ನಿಷೇಧಿತ ಸಂಘಟನೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಹಾಗೂ ಅದರ 20 ಹಿರಿಯ ನಾಯಕರ ಮೇಲೆ ದೆಹಲಿಯ ಎನ್‌ಐಎ ಕೋರ್ಟ್‌ ಶುಕ್ರವಾರ ಆರೋಪಪಟ್ಟಿ ಹೊರಿಸಿದೆ. ಇದರ ವಿಚಾರಣೆ ಜು.29ರಂದು ಪ್ರಾರಂಭವಾಗಲಿದೆ.

ಆರೋಪಿತರಲ್ಲಿಪಿಎಫ್‌ಐ ಅಧ್ಯಕ್ಷ ಒ.ಎಂ.ಎ. ಸಲಾಂ, ಉಪಾಧ್ಯಕ್ಷ ಇ.ಎಂ. ಅಬ್ದುಲ್ ರಹೀಮಾನ್, ಪ್ರಧಾನ ಕಾರ್ಯದರ್ಶಿ ಅನೀಸ್ ಅಹ್ಮದ್, ಕಾರ್ಯದರ್ಶಿ ಅಫ್ಸರ್ ಪಾಷಾ ಮತ್ತು ಸಂಸ್ಥಾಪಕ ಅಧ್ಯಕ್ಷ ಇ. ಅಬುಬಕ್ಕರ್ ಮೊದಲಾದವರು ಸೇರಿದ್ದಾರೆ.

‘ಸಾಕ್ಷ್ಯಗಳನ್ನು ಪರಿಶೀಲಿಸಿದಾಗ, ಆರೋಪಿತರು ಪಿಎಫ್‌ಐ ಮತ್ತು ಅದರ ರಾಷ್ಟ್ರೀಯ ಕಾರ್ಯಕಾರಿ ಸಮಿತಿಯ ಮೂಲಕ ದೊಡ್ಡ ಪಿತೂರಿಯಲ್ಲಿ ತೊಡಗಿದ್ದಾರೆ ಎಂಬ ಗಂಭೀರ ಅನುಮಾನವಿದೆ. ಅವರು ಭಾರತದ ಪ್ರಜಾಪ್ರಭುತ್ವ ಸರ್ಕಾರವನ್ನು ಕೆಳಗುರುಳಿಸಿ, 2047ರೊಳಗೆ ಭಾರತದಲ್ಲಿ ಶರಿಯಾ ಆಧರಿತ ಇಸ್ಲಾಮಿಕ್ ಖಿಲಾಫತ್ ಸ್ಥಾಪಿಸುವ ಗುರಿ ಹೊಂದಿದ್ದರು. ದೇಶದ ವಿರುದ್ಧ ಸಶಸ್ತ್ರ ಹೋರಾಟ ನಡೆಸಲು ಸಂಚು ರೂಪಿಸಿದ್ದರು’ ಎಂದು ಕೋರ್ಟ್‌ ತಿಳಿಸಿದೆ.

ಕೇಂದ್ರ ಸರ್ಕಾರವು 2022ರ ಸೆಪ್ಟೆಂಬರ್‌ನಲ್ಲಿ ಪಿಎಫ್‌ಐ ಮತ್ತು ಅದರ ಸಹವರ್ತಿ ಸಂಘಟನೆಗಳು ಐಸಿಸ್‌ನಂತಹ ಅಂತಾರಾಷ್ಟ್ರೀಯ ಉಗ್ರ ಸಂಘಟನೆಗಳೊಂದಿಗೆ ಸಂಪರ್ಕ ಹೊಂದಿವೆ ಎಂದು ಆರೋಪಿಸಿ, 5 ವರ್ಷಗಳ ಕಾಲ ನಿಷೇಧ ಹೇರಿತ್ತು.

10:55 PM (IST) Jul 12

ರಣವೀರ್ ಸಿಂಗ್ ಅಲ್ಲ, ಈ ನಟನ ಜೊತೆ ಆದಿತ್ಯ ಧರ್ ಸಿನಿಮಾ - ಯಾರು ಆ ಹೊಸ 'ಧುರಂಧರ್'?

'ಧುರಂಧರ್' ಮತ್ತು 'ಧುರಂಧರ್ 2' ಚಿತ್ರಗಳ ಭರ್ಜರಿ ಯಶಸ್ಸಿನ ನಂತರ, ನಿರ್ದೇಶಕ ಆದಿತ್ಯ ಧರ್ ಈಗ ಪ್ರಭಾಸ್ ಜೊತೆ ಹೊಸ ಪ್ಯಾನ್ ಇಂಡಿಯಾ ಚಿತ್ರಕ್ಕೆ ಸಿದ್ಧತೆ ನಡೆಸುತ್ತಿದ್ದಾರೆ. ನಟನ ಹುಟ್ಟುಹಬ್ಬದಂದು ದೊಡ್ಡ ಘೋಷಣೆ ಆಗುವ ಸಾಧ್ಯತೆ ಇದೆ.

Read Full Story

09:57 PM (IST) Jul 12

ಭಾರತದ ಮೊದಲ ಬುಲೆಟ್ ರೈಲಿನ ಮಹತ್ವದ ಅಪ್‌ಡೇಟ್ ನೀಡಿದ ಸಚಿವ, ಯಾವಾಗ ಸೇವೆ ಆರಂಭ?

ಬಹುನಿರೀಕ್ಷಿತ ಹಾಗೂ ಭಾರತದ ಮೊದಲ ಬುಲೆಟ್ ರೈಲು ಓಡಾಟಕ್ಕೆ ಸಿದ್ಧತೆಗಳು ಭರದಿಂದ ಸಾಗಿದೆ. ಇದರ ನಡುವೆ ಸಚಿವ ಅಶ್ವಿನಿ ವೈಷ್ಣವ್ ಮಹತ್ವದ ಅಪ್‌ಡೇಟ್ ನೀಡಿದ್ದಾರೆ. ಬುಲೆಟ್ ರೈಲು ಓಡಾಟ ಯಾವಾಗ ಸೇರಿದಂತೆ ಹಲವು ಮಾಹಿತಿ ನೀಡಿದ್ದಾರೆ.

Read Full Story

09:52 PM (IST) Jul 12

Godzilla - ಹಾಲಿವುಡ್‌ನಲ್ಲಿ ಮತ್ತೆ ಘರ್ಜಿಸಿದ ದೈತ್ಯ - ಈ ಬಾರಿ ಗಾಡ್ಜಿಲ್ಲಾ ಟಾರ್ಗೆಟ್ ಯಾವ ನಗರ?

ದೈತ್ಯ ಗಾಡ್ಜಿಲ್ಲಾ ಮತ್ತೆ ಘರ್ಜಿಸುತ್ತಾ ವಾಪಸ್ ಬಂದಿದೆ! ನಿರ್ಮಾಪಕರು ಜನಪ್ರಿಯ ಮಾನ್‌ಸ್ಟರ್ ಸಿನಿಮಾ ಸರಣಿಯ ಬಹುನಿರೀಕ್ಷಿತ ಸೀಕ್ವೆಲ್ 'ಗಾಡ್ಜಿಲ್ಲಾ ಮೈನಸ್ ಜೀರೋ' ಸಿನಿಮಾದ ಹೊಸ ಟೀಸರ್ ಅನ್ನು ರಿಲೀಸ್ ಮಾಡಿದ್ದಾರೆ.

Read Full Story

07:55 PM (IST) Jul 12

'Will You Marry Me?' - ಸಿನಿಮಾ ಕಥೆಯಂತಿದೆ ಖ್ಯಾತ ಗಾಯಕಿ ನೇಹಾ ಕಕ್ಕರ್ ಲವ್ ಸ್ಟೋರಿ!

ತಮ್ಮ ಕುಟುಂಬದವರು ರೋಹನ್‌ಪ್ರೀತ್ ಸಿಂಗ್ ಅವರನ್ನು ಕೇವಲ 15-20 ನಿಮಿಷ ಭೇಟಿಯಾದ ನಂತರ ಮದುವೆಗೆ ಒಪ್ಪಿಗೆ ನೀಡಿದ್ದರು ಎಂದು ಗಾಯಕಿ ನೇಹಾ ಕಕ್ಕರ್ ಬಹಿರಂಗಪಡಿಸಿದ್ದಾರೆ. ನೇಹಾ ತಮ್ಮ ಲವ್ ಸ್ಟೋರಿಯನ್ನು ವಿಧಿಯ ಆಟ ಎಂದು ಬಣ್ಣಿಸಿದ್ದಾರೆ.

Read Full Story

07:21 PM (IST) Jul 12

ಭಾರತ ವಿರುದ್ಧ ಕ್ಲೀನ್ ಸ್ವೀಪ್ ಗೆದ್ದರೂ ಇಂಗ್ಲೆಂಡ್ ಹೆಡ್ ಕೋಚ್ ಮೆಕಲಂ ಟೆಸ್ಟ್‌ನಿಂದ ಅಮಾನತು

ಭಾರತದ ಹೀನಾಯ ಸೋಲಿನ ಬಳಿಕ ಕೋಚ್ ಬದಲಾವಣೆ ಆಗ್ರಹ ಕೇಳಿಬರುತ್ತಿದೆ. ಆದರೆ ಸರ್ಜರಿ ಆಗಿರೋದು ಗೆದ್ದ ಇಂಗ್ಲೆಂಡ್ ತಂಡದಲ್ಲಿ. 4-0 ಗೆಲುವಿನ ಹಿಂದಿನ ಕೋಚ್ ಬ್ರೆಂಡನ್ ಮೆಕಲಂ ಟೆಸ್ಟ್ ಕೋಚಿಂಗ್‌ನಿಂದ ವಜಾಗೊಂಡಿದ್ದಾರೆ.

Read Full Story

06:56 PM (IST) Jul 12

1 ಮದುವೆ ಮಾಡೋದೇ ಕಷ್ಟ; ಒಂದೇ ದಿನ ತನ್ನ 14 ಗಂಡು ಮಕ್ಕಳ ಮದುವೆ ಮಾಡಿದ ರೈತ; Video Viral

Madhya Pradesh farmer 14 sons marriage: ಇತ್ತೀಚಿನ ದಿನಗಳಲ್ಲಿ ಮದುವೆ ಎನ್ನುವುದು ಲಕ್ಷಾಂತರ ರೂಪಾಯಿ ಖರ್ಚು ಬೇಡುವ ಒಂದು ದುಬಾರಿ ಸಂಭ್ರಮವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಮಧ್ಯಪ್ರದೇಶದ ಸತ್ನಾ ಜಿಲ್ಲೆಯ ರೈತರೊಬ್ಬರು ಕೈಗೊಂಡ ನಿರ್ಧಾರ ಇಡೀ ದೇಶದ ಗಮನ ಸೆಳೆದಿದೆ. ತಮ್ಮ ಎಲ್ಲಾ 14 ಗಂಡು ಮಕ್ಕಳ ಮದುವೆಯನ್ನು ಒಂದೇ ಮುಹೂರ್ತದಲ್ಲಿ, ಒಂದೇ ವೇದಿಕೆಯಲ್ಲಿ ನೆರವೇರಿದ್ದಾರೆ.

Read Full Story

06:49 PM (IST) Jul 12

ಶಾರುಖ್ ಪುತ್ರಿಯ ಕೈಲಿರೋ ವಾಚ್ ಬೆಲೆ ಎಷ್ಟು? - ಈ ದುಡ್ಡಲ್ಲಿ ಬೆಂಗಳೂರಲ್ಲಿ ಫ್ಲಾಟ್ ಖರೀದಿಸಬಹುದು!

ಶಾರುಖ್ ಖಾನ್ ಪುತ್ರಿ ಸುಹಾನಾ ಖಾನ್ ಧರಿಸಿದ್ದ ಒಂದು ವಾಚ್ ಬೆಲೆ ಕೇಳಿದ್ರೆ ಶಾಕ್ ಆಗ್ತೀರಾ. ಆ ದುಡ್ಡಲ್ಲಿ ಒಂದು ನಗರದಲ್ಲಿ ಆರಾಮವಾಗಿ ಫ್ಲಾಟ್ ಖರೀದಿಸಬಹುದು. ಆ ವಾಚ್ ಯಾವುದು? ಅದರ ವಿಶೇಷತೆ ಏನು? ಇಲ್ಲಿದೆ ಡೀಟೇಲ್ಸ್.

Read Full Story

06:40 PM (IST) Jul 12

ಮಟನ್‌ನಲ್ಲಿ ಜೂನಿಯರ್ ಎನ್‌ಟಿಆರ್‌ಗೆ ಇಷ್ಟವಾದ ಭಾಗ ಯಾವುದು? 200 ಪೀಸ್ ತಿಂತಾರಂತೆ!

ಜೂನಿಯರ್ ಎನ್‌ಟಿಆರ್ ದೊಡ್ಡ ಫುಡ್ಡಿ ಅನ್ನೋದು ಎಲ್ಲರಿಗೂ ಗೊತ್ತು. ಹಿಂದೆ ಅವರು ಎಷ್ಟು ದಪ್ಪಗಿದ್ದರು ಅನ್ನೋದೂ ಎಲ್ಲರಿಗೂ ತಿಳಿದಿದೆ. ತಾರಕ್‌ಗೆ ಮಟನ್ ಅಂದ್ರೆ ಪಂಚಪ್ರಾಣ. ಅದ್ರಲ್ಲೂ ಮಟನ್‌ನ ಯಾವ ಭಾಗವನ್ನು ಅವರು ಹೆಚ್ಚು ಇಷ್ಟಪಟ್ಟು ತಿನ್ನುತ್ತಾರೆ ಗೊತ್ತಾ?

Read Full Story

05:20 PM (IST) Jul 12

ಇಂಗ್ಲೆಂಡ್ ಎದುರು ಟೀಂ ಇಂಡಿಯಾ ವೈಟ್‌ವಾಷ್ ಬೆನ್ನಲ್ಲೇ ಬಿಕ್ಕಿ ಬಿಕ್ಕಿ ಅತ್ತ ವೈಭವ್ ಸೂರ್ಯವಂಶಿ! ವಿಡಿಯೋ ವೈರಲ್

ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಭಾರತ ಸೋತ ನಂತರ, 15 ವರ್ಷದ ಯುವ ಆಟಗಾರ ವೈಭವ್ ಸೂರ್ಯವಂಶಿ ಡಗೌಟ್‌ನಲ್ಲಿ ಅತ್ತಿರುವ ವಿಡಿಯೋ ವೈರಲ್ ಆಗಿದೆ. ಸತತ ಮೂರು ಪಂದ್ಯಗಳಲ್ಲಿ ವಿಫಲರಾದ ಕಾರಣ ಅವರನ್ನು ಐದನೇ ಪಂದ್ಯದಿಂದ ಕೈಬಿಡಲಾಗಿತ್ತು, ಆದರೆ ಅವರ ಬದಲಿಗೆ ಬಂದ ಸಂಜು ಸ್ಯಾಮ್ಸನ್ ಕೂಡ ತಂಡವನ್ನು ಗೆಲ್ಲಿಸಲು ವಿಫಲರಾದರು.
Read Full Story

04:45 PM (IST) Jul 12

ಹುಲಿ vs ಕಿಂಗ್ ಕೋಬ್ರಾ.. ಇಬ್ಬರು ಅಪ್ರತಿಮ ಶಿಕಾರಿಗಳು, ಫೈಟ್ ನಡೆದ್ರೆ ಗೆಲ್ಲೋದು ಯಾರು?

ಕಾಡಿನ ಬಲಿಷ್ಠ ಪ್ರಾಣಿ ಹುಲಿ ಮತ್ತು ಪ್ರಾಣಾಂತಿಕ ವಿಷದ ರಾಜನಾಗರ ಮುಖಾಮುಖಿಯಾದರೆ ಏನಾಗಬಹುದು? ಹುಲಿಯ ಪಂಜಿನ ಹೊಡೆತಕ್ಕೆ ಹಾವು ಸತ್ತರೆ, ಹಾವಿನ ಒಂದು ಕಡಿತಕ್ಕೆ ಹುಲಿಯ ಸಾವು ನಿಶ್ಚಿತ. ಈ ಇಬ್ಬರು ಅಪಾಯಕಾರಿ ಶಿಕಾರಿಗಳ ನಡುವಿನ ಹೋರಾಟದ ಫಲಿತಾಂಶವು ಯಾರು ಮೊದಲು ದಾಳಿ ಮಾಡುತ್ತಾರೆ ಅನ್ನೋದು ಮುಖ್ಯ.

Read Full Story

04:26 PM (IST) Jul 12

ಟೀಂ ಇಂಡಿಯಾವನ್ನು ಹೀನಾಯವಾಗಿ ಸೋಲಿಸಿ ಹಾಲಿ ಚಾಂಪಿಯನ್ನರಿಗೆ ಕ್ರಿಕೆಟ್ ಪಾಠ ಮಾಡಿದ ಇಂಗ್ಲೆಂಡ್ ನಾಯಕ ಹ್ಯಾರಿ ಬ್ರೂಕ್!

ಬೆಂಗಳೂರು: ಭಾರತ ಹಾಗೂ ಇಂಗ್ಲೆಂಡ್ ನಡುವಿನ ಐದು ಪಂದ್ಯಗಳ ಟಿ20 ಸರಣಿಯನ್ನು ಆತಿಥೇಯ ಇಂಗ್ಲೆಂಡ್ ತಂಡವು ಕ್ಲೀನ್ ಸ್ವೀಪ್ ಮಾಡಿದೆ. ಇದರ ಬೆನ್ನಲ್ಲೇ ಇಂಗ್ಲೆಂಡ್ ನಾಯಕ ಹ್ಯಾರಿ ಬ್ರೂಕ್, ಹಾಲಿ ಚಾಂಪಿಯನ್ನರಿಗೆ ಕ್ರಿಕೆಟ್ ಪಾಠ ಹೇಳುವ ಮೂಲಕ ಕಾಲೆಳೆದಿದ್ದಾರೆ.

Read Full Story

03:17 PM (IST) Jul 12

ಟಿ20 ಮುಖಭಂಗದ ಬಳಿಕ ಇಂಗ್ಲೆಂಡ್ ಏಕದಿನಕ್ಕೂ ಮೊದಲು ಸೈಲೆಂಟ್ ಆಗಿ ಇಬ್ಬರ ಬದಲಿಸಿದ ಬಿಸಿಸಿಐ

ಇಂಗ್ಲೆಂಡ್ ವಿರುದ್ಧದ ಟಿ20 ಪಂದ್ಯದ ಮುಖಭಂಗದಿಂದ ಭಾರತ ತಂಡದ ಕೋಚ್, ಕೆಲ ಆಟಾಗರರ ಬದಲಾವಣೆಗೆ ಒತ್ತಾಯ ಕೇಳಿಬರುತ್ತಿದೆ. ಇದರ ನಡುವೆ ಏಕದಿನ ಪಂದ್ಯ ಆರಂಭಕ್ಕೂ ಮೊದಲೇ ಬಿಸಿಸಿಐ ಸೈಲೆಂಟ್ ಆಗಿ ಇಬ್ಬರ ಬದಲಿಸಿದೆ.

Read Full Story

02:38 PM (IST) Jul 12

Zepto Delivery Boy Earning - ಅಬ್ಬಬ್ಬಾ.. ಏನ್ರೀ ಇದು.. 1 ವಾರದ ಆದಾಯ ರಿವೀಲ್‌ ಮಾಡಿದ ಜೆಪ್ಟೊ ಡೆಲಿವರಿ ಬಾಯ್‌

Zepto delivery partner salary: ಇಂದು ನಿರುದ್ಯೋಗ ತಾಂಡವವಾಡುತ್ತಿದೆ. ಎಷ್ಟೋ ಜನರಿಗೆ ಕೆಲಸವೇ ಇಲ್ಲ. ಐಟಿ ಉದ್ಯಮ ಕೂಡ ಕುಸಿಯುತ್ತಿದೆ. ಹೀಗಾಗಿ ಡೆಲಿವರಿ ಮಾಡ್ಕೊಂಡು ಅನೇಕರು ಒಳ್ಳೆಯ ಸಂಪಾದನೆ ಮಾಡುತ್ತಿದ್ದಾರೆ. ಈಗ ಜೆಪ್ಟೋ (Zepto) ಡೆಲಿವರಿ ಪಾರ್ಟ್ನರ ವಾರದ ಆದಾಯ ಅನೇಕರ ನಿದ್ದೆ ಹಾಳು ಮಾಡಿದೆ.

Read Full Story

02:34 PM (IST) Jul 12

ಮೋದಿ ಭಾಷಣ ಲಿಪ್‌ಸಿಂಕ್ ಮಾಡಿದ ಆಸ್ಟ್ರೇಲಿಯಾ ಕಂಟೆಂಟ್ ಕ್ರಿಯೇಟರ್, ವಿಡಿಯೋಗೆ ಭರ್ಜರಿ ಪ್ರತಿಕ್ರಿಯೆ

ಪ್ರಧಾನಿ ನರೇಂದ್ರ ಮೋದಿ ಇತ್ತೀಚೆಗೆ ಆಸ್ಟ್ರೇಲಿಯಾ ಭೇಟಿ ವೇಳೆ ಭಾರತೀಯ ಸಮುದಾಯವನ್ನುದ್ದೇಶಿ ಭಾಷಣ ಮಾಡಿದ್ದರು. ಈ ಭಾಷಣದ ತುಣುಕನ್ನು ಆಸಿಸ್ ಕಂಟೆಂಟ್ ಕ್ರಿಯೇಟರ್ ಲಿಪ್ ಸಿಂಕ್ ಮಾಡಿ ಪ್ರಸ್ತುತ ಪಡಿಸಿ ಚಪ್ಪಾಳೆ ಗಿಟ್ಟಿಸಿಕೊಂಡಿದ್ದಾರೆ.

Read Full Story

02:34 PM (IST) Jul 12

3-ಪಿನ್ ಪ್ಲಗ್‌ನಲ್ಲಿ ಒಂದು ಪಿನ್ ದಪ್ಪ ಮತ್ತು ಉದ್ದ ಏಕೆ ಇರುತ್ತದೆ..? ಇಲ್ಲಿದೆ ರೋಚಕ ವಿಜ್ಞಾನ..!

ನಾವು ದಿನ ನಿತ್ಯ ಬಳಸುವ ಅನೇಕ ಸಣ್ಣ ಪುಟ್ಟ ವಸ್ತುಗಳಲ್ಲಿ ರೋಚಕ ವಿಜ್ಞಾನ ಅಡಗಿರುತ್ತದೆ. ಅದರಲ್ಲಿ ಮೂರು ಪಿನ್ ಹೊಂದಿರುವ ಪ್ಲಗ್ ಕೂಡ ಹೌದು. ನಿಮಗೆ ಗೊತ್ತಾ ಕೆಲವು ಪ್ಲಗ್‌ಗಳಲ್ಲಿ ಯಾಕೆ ಮೂರು ಪಿನ್ ಇರುತ್ತದೆ ಎಂದು? ಈ ಕುರಿತ ಇಂಟ್ರೆಸ್ಟಿಂಗ್ ವಿಚಾರ ಇಲ್ಲಿದೆ...

Read Full Story

02:27 PM (IST) Jul 12

ಇಂಗ್ಲೆಂಡ್ ಎದುರು ಸೋಲಿನ ಬೆನ್ನಲ್ಲೇ ಭಾರತಕ್ಕೆ ಮತ್ತೊಂದು ಆಘಾತ; ವಿಶ್ವಕಪ್ ಸ್ಟಾರ್ ಜಿಂಬಾಬ್ವೆ ಎದುರಿನ ಸರಣಿಯಿಂದ ಔಟ್?

ಬೆಂಗಳೂರು: ಐರ್ಲೆಂಡ್ ಹಾಗೂ ಇಂಗ್ಲೆಂಡ್ ಎದುರು ಟಿ20 ಸರಣಿ ವೈಟ್‌ವಾಷ್ ಬೆನ್ನಲ್ಲೇ ಇದೀಗ, ಭಾರತ ತಂಡಕ್ಕೆ ಮತ್ತೊಂದು ಶಾಕ್ ಎದುರಾಗಿದೆ. ಜಿಂಬಾಬ್ವೆ ಎದುರಿನ ಮೂರು ಪಂದ್ಯಗಳ ಟಿ20 ಸರಣಿಯಿಂದ ಭಾರತದ ಮತ್ತೋರ್ವ ವಿಶ್ವಕಪ್ ವಿಜೇತ ತಂಡದ ಆಟಗಾರ ಹೊರಬೀಳುವ ಸಾಧ್ಯತೆ ದಟ್ಟವಾಗಿದೆ.

Read Full Story

01:47 PM (IST) Jul 12

IND vs ZIM - ಹೊಸ ಕೋಚ್ ನೇಮಕ.. ಪಂದ್ಯ ಸೋತರೆ ಗಂಭೀರ್‌ಗೆ ಬೈಯುವಂತಿಲ್ಲ!

ಟೀಂ ಇಂಡಿಯಾಗೆ ಜಿಂಬಾಬ್ವೆ ಪ್ರವಾಸ ಕೈಗೊಳ್ಳಲಿದೆ. ಆದರೆ ತಂಡದ ಮುಖ್ಯಕೋಚ್ ಗೌತಮ್ ಗಂಭೀರ್ ಅವರು ಪ್ರವಾಸದ ಭಾಗವಾಗಿರುವುದಿಲ್ಲ. ಅವರ ಬದಲಿಗೆ ಬಿಸಿಸಿಐ ಬೇರೆ ಕೋಚ್ ರೆಡಿ ಮಾಡಿದೆ. ಈ ಕುರಿತ ಮಾಹಿತಿ ಇಲ್ಲಿದೆ.

Read Full Story

01:27 PM (IST) Jul 12

ಏನೂ ಹೇಳದೇ 'ಕ್ಯಾಪ್ಟನ್' ಟಿ-ಶರ್ಟ್ ಧರಿಸಿ ಅಗರ್ಕರ್-ಗಂಭೀರ್‌ರನ್ನು ಟ್ರೋಲ್ ಮಾಡಿದ ಸೂರ್ಯಕುಮಾರ್ ಯಾದವ್!

ಟಿ20 ನಾಯಕತ್ವದಿಂದ ಕೆಳಗಿಳಿದ ಬಳಿಕ ಸೂರ್ಯಕುಮಾರ್ ಯಾದವ್, 'ಕ್ಯಾಪ್ಟನ್ ಅಲ್ಲ ಲೀಡರ್' ಎಂಬ ಟಿ-ಶರ್ಟ್ ಧರಿಸಿ ಕಾಣಿಸಿಕೊಂಡಿದ್ದಾರೆ. ಶ್ರೇಯಸ್ ಅಯ್ಯರ್ ನಾಯಕತ್ವದಲ್ಲಿ ಭಾರತ ತಂಡ ಸರಣಿ ಸೋತ ಬೆನ್ನಲ್ಲೇ, ಸೂರ್ಯಕುಮಾರ್ ಅವರ ಈ ಪೋಸ್ಟ್ ಬಿಸಿಸಿಐಗೆ ನೀಡಿದ ಪರೋಕ್ಷ ಉತ್ತರವೆಂದು ಚರ್ಚೆಯಾಗುತ್ತಿದೆ.
Read Full Story

12:54 PM (IST) Jul 12

ಒಂದು ಪಾನಿಪುರಿಗಾಗಿ 12 ವರ್ಷಗಳಿಂದ ಕೋರ್ಟ್‌ ಅಲೆದಾಟ.. ರೋಚಕ ಕಾನೂನು ಸಮರ..!

ಇದು ಒಂದು ಪಾನಿಪುರಿಗಾಗಿ ನಡೆಯುತ್ತಿರುವ ಹೋರಾಟ. ಅದು ಕೂಡ ಬರೋಬ್ಬರಿ 12 ವರ್ಷಗಳಿಂದ. ಈ ಕಾನೂನು ಸಮರ ಸದ್ಯಕ್ಕೆ ನಿಲ್ಲುವ ಯಾವುದೇ ಲಕ್ಷಣ ಕಾಣ್ತಿಲ್ಲ. ರೋಚಕ ಕಾನೂನು ಹೋರಾಟದ ಸಂಪೂರ್ಣ ಮಾಹಿತಿ ಇಲ್ಲಿದೆ.

Read Full Story

11:54 AM (IST) Jul 12

ಸೋಲುವುದರಲ್ಲೂ ಕೆಟ್ಟ ದಾಖಲೆ ಬರೆದ ಗೌತಮ್ ಗಂಭೀರ್ ಮಾರ್ಗದರ್ಶನದ Team India!

ಸೌಥಾಂಪ್ಟನ್: ಹಾಲಿ ಚಾಂಪಿಯನ್ ಟೀಂ ಇಂಡಿಯಾ ಇದೀಗ ಸತತ ಸೋಲುಗಳ ಮೂಲಕ ಇತಿಹಾಸದಲ್ಲೇ ಅತ್ಯಂತ ಕೆಟ್ಟ ದಾಖಲೆಯನ್ನು ನಿರ್ಮಿಸಿದೆ. ಇದರ ಜತೆಗೆ ನಂಬರ್ ಒನ್ ಪಟ್ಟವನ್ನೂ ಕಳೆದುಕೊಂಡಿದೆ. ಇನ್ನು ಗಂಭೀರ್ ಮಾರ್ಗದರ್ಶನದಲ್ಲಿ ಟೀಂ ಇಂಡಿಯಾ ಸೋಲುವುದರಲ್ಲಿ ಕೆಟ್ಟ ದಾಖಲೆ ನಿರ್ಮಿಸಿದೆ.

 

Read Full Story

11:40 AM (IST) Jul 12

ನನ್ನ ಮಗನ ಸರಿಯಾಗಿ ಬಳಸಿಕೊಳ್ತಿಲ್ಲ -ಗಂಭೀರ್ ವಿರುದ್ಧ ಸ್ಟಾರ್‍‌ ಕ್ರಿಕೆಟಿಗನ ತಂದೆ ಆಕ್ರೋಶ

ಟೀಂ ಇಂಡಿಯಾದಲ್ಲಿನ ಆಂತರಿಕ ಕಲಹ ಒಂದೊಂದೇ ಬಯಲಿಗೆ ಬರುತ್ತಿದೆ. ಇಂಗ್ಲೆಂಡ್ ವಿರುದ್ಧದ ಟಿ-20 ಸಿರೀಸ್ ನಲ್ಲಿ ಸೋತ ಬೆನ್ನಲ್ಲೇ ಸರ್ಫರಾಜ್ ಖಾನ್ ತಂದೆ ಗೌತಮ್ ಗಂಭೀರ್ ವಿರುದ್ಧ ಪರೋಕ್ಷವಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗಂಭೀರ್ ವಿರುದ್ಧ ಕೇಳಿಬಂದ ಆರೋಪ ಏನು ಅನ್ನೋ ವಿವರ ಈ ಸ್ಟೋರಿಯಲ್ಲಿದೆ.

Read Full Story

10:54 AM (IST) Jul 12

ಇಂಗ್ಲೆಂಡ್ ವಿರುದ್ಧ ಸೇಡು ತೀರಿಸಿಕೊಳ್ಳಲು ಭಾರತಕ್ಕಿದೆ ಒಂದು ಅವಕಾಶ; ಬಲಿಷ್ಠರ ಮೇಲೆ ಭರವಸೆ

ಇಂಗ್ಲೆಂಡ್ ವಿರುದ್ಧದ T20I ಸರಣಿಯಲ್ಲಿ ಸೋತ ಬಳಿಕ ಟೀಂ ಇಂಡಿಯಾ ಏಕದಿನ ಸರಣಿಗೆ ಸಜ್ಜಾಗಿದೆ. ತಂಡದ ಆತ್ಮವಿಶ್ವಾಸ ಹೆಚ್ಚಿಸಲು ಅನುಭವಿ ಆಟಗಾರರಾದ ಬರಲಿದ್ದಾರೆ. ಈ ಬಲಿಷ್ಠ ಆಟಗಾರರ ಆಗಮನದಿಂದ ತಂಡವು ಸೋಲಿಗೆ ಸೇಡು ತೀರಿಸಿಕೊಳ್ಳುವ ನಿರೀಕ್ಷೆಯಲ್ಲಿದೆ.

Read Full Story

10:49 AM (IST) Jul 12

ಕೆಲಸ ಹುಡುಕುತ್ತಿರೋರಿಗೆ ಭರ್ಜರಿ ಗುಡ್‌ನ್ಯೂಸ್.. ಕನಸು ನನಸು ಮಾಡಿಕೊಳ್ಳಲು ಇಲ್ಲಿದೆ ಸುವರ್ಣ ಅವಕಾಶ

ಉದ್ಯೋಗ ಹುಡುಕುತ್ತಿರೋರಿಗೆ ಭಾರತೀಯ ನೌಕಾಸೇನೆ ಗುಡ್‌ನ್ಯೂಸ್ ನೀಡಿದೆ. ಸೇನೆಯಲ್ಲಿ ಕೆಲಸ ಮಾಡಬೇಕು ಎಂದು ಕನಸು ಕಂಡೋರಿಗೆ ಒಳ್ಳೆಯ ಅವಕಾಶ ಇದಾಗಿದ್ದು, ಮಿಸ್ ಮಾಡ್ಕೋಬೇಡಿ. ಈ ಕುರಿತ ಮಾಹಿತಿ ಇಲ್ಲಿದೆ.

Read Full Story

10:35 AM (IST) Jul 12

FIFA World Cup 2026 ಆಡಿದ 25 ವರ್ಷದ ಸ್ಟಾರ್ ಫುಟ್ಬಾಲಿಗ ನಿಗೂಢ ಸಾವು!

ದಕ್ಷಿಣ ಆಫ್ರಿಕಾದ ಯುವ ಫುಟ್ಬಾಲ್ ಆಟಗಾರ ಜೇಡನ್ ಆಡಮ್ಸ್ ತಮ್ಮ 25ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಕೇಪ್ ಟೌನ್‌ನಲ್ಲಿರುವ ತಮ್ಮ ಮನೆಯಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಸಾವಿಗೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ ಮತ್ತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Read Full Story

09:39 AM (IST) Jul 12

ಕೋಚ್-ಕ್ಯಾಪ್ಟನ್ ಮಧ್ಯೆ ಸ್ಪಷ್ಟತೆಯೇ ಇರಲಿಲ್ಲ - ಹೀನಾಯ ಸೋಲಿಗೆ ಈ ಐದು ಬ್ಲಂಡರ್‍‌ಗಳೇ ಕಾರಣ..!

ಟಿ-20 ಸರಣಿಯ ಹೀನಾಯ ಸೋಲಿಗೆ ಪ್ರಮುಖ ಕಾರಣ ಕೋಚ್ ಗಂಭೀರ್ ಮತ್ತು ಕ್ಯಾಪ್ಟನ್ ಅಯ್ಯರ್ ತೆಗೆದುಕೊಂಡ ಪ್ರಮುಖ ನಿರ್ಧಾರಗಳೇ ಕಾರಣ. ಈ ಮಧ್ಯೆ ಗಂಭೀರ್ ಮತ್ತು ಅಯ್ಯರ್ ನಡುವೆ ಸಮನ್ವಯತೆ ಇರಲಿಲ್ವಾ ಎಂಬ ಪ್ರಶ್ನೆಗಳೂ ಹುಟ್ಟಿಕೊಂಡಿವೆ. ಭಾರತ ತಂಡದ ಮಾಡಿದ ಬ್ಲಂಡರ್‍‌ಗಳು ಏನು ಅನ್ನೋ ವಿವರ ಇಲ್ಲಿದೆ..

Read Full Story

09:21 AM (IST) Jul 12

FIFA World Cup 2026 ಕ್ವಾರ್ಟರ್‌ ಫೈನಲ್‌ - ಬೆಲ್ಜಿಯಂ ಮಣಿಸಿ ಸೆಮೀಸ್‌ಗೆ ಸ್ಪೇನ್‌ ಲಗ್ಗೆ

ಬೆಲ್ಜಿಯಂ ವಿರುದ್ಧದ ಕ್ವಾರ್ಟರ್‌ ಫೈನಲ್‌ನಲ್ಲಿ 2-1 ಗೋಲುಗಳ ಅಂತರದಿಂದ ಗೆಲುವು ಸಾಧಿಸಿದ ಸ್ಪೇನ್‌, 16 ವರ್ಷಗಳ ಬಳಿಕ ಫುಟ್ಬಾಲ್‌ ವಿಶ್ವಕಪ್‌ ಸೆಮಿಫೈನಲ್‌ ಪ್ರವೇಶಿಸಿತು. ಬದಲಿ ಆಟಗಾರನಾಗಿ ಕಣಕ್ಕಿಳಿದ ಮಿಕೆಲ್‌ ಮೆರಿನೊ 88ನೇ ನಿಮಿಷದಲ್ಲಿ ನಿರ್ಣಾಯಕ ಗೋಲು ಬಾರಿಸಿ ತಂಡದ ಗೆಲುವಿನ ಹೀರೋ ಎನಿಸಿದರು.
Read Full Story

07:04 AM (IST) Jul 12

ಆಕಾಶಕ್ಕೆ ಕನ್ನಡಿ ಹಾಕಿ ಭೂಮಿಗೆ ಟಾರ್ಚ್‌ ಹಿಡಿಯುವ ಪ್ರಯೋಗಕ್ಕೆ ಅಮೆರಿಕಾ ಒಪ್ಪಿಗೆ

ರಿಫ್ಲೆಕ್ಟ್‌ ಆರ್ಬಿಟಲ್‌ ಕಂಪನಿಯು ಬಾಹ್ಯಾಕಾಶದಲ್ಲಿ ಬೃಹತ್ ಕನ್ನಡಿಗಳನ್ನು ಅಳವಡಿಸಿ, ಸೂರ್ಯನ ಬೆಳಕನ್ನು ಭೂಮಿಗೆ ಪ್ರತಿಫಲಿಸುವ ಯೋಜನೆಗೆ ಅನುಮತಿ ಪಡೆದಿದೆ. ಈ ತಂತ್ರಜ್ಞಾನವು ಕೃಷಿ ಮತ್ತು ತುರ್ತು ಸಂದರ್ಭಗಳಲ್ಲಿ ನೆರವಾಗುವ ಗುರಿ ಹೊಂದಿದ್ದರೂ, ಖಗೋಳ ತಜ್ಞರು ಇದರಿಂದಾಗುವ ಅಡ್ಡಪರಿಣಾಮಗಳ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.
Read Full Story

More Trending News