ನವದೆಹಲಿ: ಶುಕ್ರವಾರ ಬಹಿರಂಗವಾದ ಅಮೆರಿಕದ ಲೈಂ*ಗಿಕ ಅಪರಾಧಿ ಎಪ್‌ಸ್ಟೀನ್‌ನ 3 ಲಕ್ಷ ಪುಟದ ಕಡತಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ 2017ರ ಇಸ್ರೇಲ್ ಭೇಟಿ ನಮೂದಾಗಿದೆ. ಕಡತಗಳಲ್ಲಿನ ಒಂದು ಎಪ್‌ಸ್ಟೀನ್‌ನ ಇ-ಮೇಲ್‌ನಲ್ಲಿ, ‘ಪ್ರಧಾನಿ ನರೇಂದ್ರ ಮೋದಿ ಅವರು ನನ್ನ ಮಾರ್ಗದರ್ಶನದ ಪ್ರಕಾರ ಇಸ್ರೇಲ್‌ಗೆ ಭೇಟಿ ನೀಡಿದ್ದರು. ಅಮೆರಿಕ ಅಧ್ಯಕ್ಷರ ಲಾಭಕ್ಕಾಗಿ ಇಸ್ರೇಲ್‌ನಲ್ಲಿ ಕುಣಿದರು ಮತ್ತು ಹಾಡಿದರು. ಕೆಲವು ದಿನದ ಹಿಂದೆ ಇಬ್ಬರೂ ಭೇಟಿಯಾಗಿದ್ದರು. ಇದು ಕೆಲಸ ಮಾಡಿದೆ’ ಎಂದು ಬರೆಯಲಾಗಿದೆ.
ಇದನ್ನು ಕಾಂಗ್ರೆಸ್ ವಕ್ತಾರ ಪವನ್ ಖೇರಾ ಪ್ರಶ್ನಿಸಿದ್ದು, ‘ಇದು ರಾಷ್ಟ್ರೀಯ ನಾಚಿಕೆಗೇಡಿನ ವಿಷಯವಾಗಿದೆ. ಲೈಂಗಿಕ ಅಪರಾಧಿಯೊಬ್ಬನ ಮಾರ್ಗದರ್ಶನದಂತೆ ಇಸ್ರೇಲ್‌ಗೆ ಹೋಗಿದ್ದರು ಎಂಬ ಮಾಹಿತಿ ಇದೆ. ಈ ಬಗ್ಗೆ ಮೋದಿ ಸ್ಪಷ್ಟನೆ ನೀಡಬೇಕು’ ಎಂದಿದ್ದಾರೆ.
11:45 PM (IST) Feb 01
ಅಮೆರಿಕ ಅಧ್ಯಕ್ಷ ಟ್ರಂಪ್ ಅವರ ಬೆದರಿಕೆಗಳಿಗೆ ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ತೀಕ್ಷ್ಣ ಪ್ರತ್ಯುತ್ತರ ನೀಡಿದ್ದಾರೆ. ಅಮೆರಿಕ ದಾಳಿ ನಡೆಸಿದರೆ ಅದು ಪ್ರಾದೇಶಿಕ ಯುದ್ಧಕ್ಕೆ ಕಾರಣವಾಗಲಿದೆ ಎಂದು ಎಚ್ಚರಿಸಿದ್ದು, ಇರಾನ್ ಸೇನೆಯು ಯಾವುದೇ ಪರಿಸ್ಥಿತಿ ಎದುರಿಸಲು ಸನ್ನದ್ಧ!.
10:41 PM (IST) Feb 01
ಕೇಂದ್ರ ಬಜೆಟ್ 2026 ಅನ್ನು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತೀವ್ರವಾಗಿ ಟೀಕಿಸಿದ್ದಾರೆ. ಇದೊಂದು ಪ್ರಾಯೋಗಿಕವಲ್ಲದ, ಮಹಿಳಾ ವಿರೋಧಿ ಮತ್ತು ಬಂಗಾಳಕ್ಕೆ ತಾರತಮ್ಯ ಮಾಡಿದ ಬಜೆಟ್ ಎಂದು ಆರೋಪಿಸಿದ್ದಾರೆ.
10:15 PM (IST) Feb 01
08:34 PM (IST) Feb 01
08:25 PM (IST) Feb 01
ಕೇಂದ್ರ ಬಜೆಟ್ 2026 ಮಂಡನೆಯ ನಂತರ, ನಿರುದ್ಯೋಗದ ಕುರಿತು ರಾಹುಲ್ ಗಾಂಧಿ ಮಾಡಿದ ಟೀಕೆಗಳಿಗೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. ಆರ್ಥಿಕತೆ ವೇಗವಾಗಿ ಬೆಳೆಯುತ್ತಿದೆ ಎಂದು ಸಮರ್ಥಿಸಿಕೊಂಡರು.
07:44 PM (IST) Feb 01
ಖ್ಯಾತ ಜ್ಯೋತಿಷಿಯೊಬ್ಬರು ಪ್ರಧಾನಿ ನರೇಂದ್ರ ಮೋದಿ ಅವರ ರಾಜೀನಾಮೆ ಮತ್ತು ಮುಂದಿನ ಪ್ರಧಾನಿ ಬಗ್ಗೆ ಭವಿಷ್ಯ ನುಡಿದಿದ್ದಾರೆ. ಇದರೊಂದಿಗೆ, ಅಮಿತಾಭ್ ಬಚ್ಚನ್, ಐಶ್ವರ್ಯ-ಅಭಿಷೇಕ್, ವಿರಾಟ್-ಅನುಷ್ಕಾ ಸೇರಿದಂತೆ ಹಲವು ಸೆಲೆಬ್ರಿಟಿಗಳ ಭವಿಷ್ಯದ ಬಗ್ಗೆಯೂ ಅಚ್ಚರಿಯ ಸಂಗತಿಗಳನ್ನು ಬಹಿರಂಗಪಡಿಸಿದ್ದಾರೆ.
07:09 PM (IST) Feb 01
ಭಾರತದ ಈ ಸಿಟಿ ರಸ್ತೆಯಲ್ಲಿ 50 ವರ್ಷದಿಂದ ಗುಂಡಿಯೇ ಇಲ್ಲ, ಈ ರಸ್ತೆ ಮಾಹಿತಿ ಬಹಿರಂಗವಾಗುತ್ತಿದ್ದಂತೆ ಬೆಂಗಳೂರಿಗರು ಹೊಟ್ಟೆ ಉರಿದುಕೊಳ್ಳುತ್ತಿದ್ದಾರೆ. ಈ ರಸ್ತೆ ಮಾಡಿಸಿದ ನಾಯಕ, ಕಾಂಟ್ರಾಕ್ಟರ್ ಕರೆಸಿ ಇಲ್ಲಿ ರಸ್ತೆ ಮಾಡಿಸಿ ಎಂದು ಸಲಹೆ ನೀಡುತ್ತಿದ್ದಾರೆ.
06:26 PM (IST) Feb 01
ಪಾಕ್‌ಗೆ ಕರೆಂಟ್ ಶಾಕ್ ಕೊಟ್ಟ ವೈಭವ್ ಸೂರ್ಯವಂಶಿ, ಯೂತ್ ಏಕದಿನ ಪಂದ್ಯದಲ್ಲಿ ಸೂರ್ಯವಂಶಿ ಹೊಡೆತಕ್ಕೆ ಪಾಕಿಸ್ತಾನ ತಲೆ ತಿರುಗಿದ್ದು ಮಾತ್ರವಲ್ಲ, ಶುಭಮನ್ ಗಿಲ್, ಉನ್ಮುಕ್ತ್ ಚಾಂದ್ ದಾಖಲೆ ಪುಡಿ ಪುಡಿಯಾಗಿದೆ.
04:56 PM (IST) Feb 01
ರಾಮ್ ಚರಣ್ ಅವಳಿ ಮಕ್ಕಳಿಗೆ ತಂದೆಯಾದ ನಂತರ ಮೊದಲ ಬಾರಿಗೆ ಪ್ರತಿಕ್ರಿಯಿಸಿದ್ದಾರೆ. ಉಪಾಸನಾ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದು ಗೊತ್ತೇ ಇದೆ. ಈಗಾಗಲೇ ಚಿರಂಜೀವಿ ತಮ್ಮ ಸಂತೋಷವನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.
04:55 PM (IST) Feb 01
ಕಣ್ಣೀರಿನ ಕುಟಂಬಕ್ಕೆ ಕೇಂದ್ರದ ಬಜೆಟ್ ಗಿಫ್ಟ್, ನಿರ್ಮಲಾ ಸೀತಾರಾಮನ್ ಮಂಡಿಸಿದ ಕೇಂದ್ರ ಬಜೆಟ್‌ನಲ್ಲಿ ಜನ ಸಾಮಾನ್ಯರಿಗೆ ಭರ್ಜರಿ ವಿನಾಯಿತಿ ನೀಡಿದೆ. ಈ ಪೈಕಿ ಸಂಕಷ್ಟದಲ್ಲಿರುವ ಕುಟುಂಬದ ನೆರವಿಗೂ ಹೊಸ ಪದ್ಧತಿ ಘೋಷಿಸಲಾಗಿದೆ.
04:22 PM (IST) Feb 01
ಟಾಲಿವುಡ್‌ನ ಸ್ಟಾರ್ ಜೋಡಿ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಮದುವೆಯಾಗಲಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಫೆಬ್ರವರಿ 2 ರಂದು ಅವರ ಮದುವೆ ನಡೆಯಲಿದ್ದು, ಉದಯಪುರ ಸಿಟಿ ಪ್ಯಾಲೇಸ್‌ನಲ್ಲಿ ಸಿದ್ಧತೆಗಳು ನಡೆಯುತ್ತಿರುವ ವಿಡಿಯೋವೊಂದು ಹೊರಬಿದ್ದಿದೆ.
04:01 PM (IST) Feb 01
ನಿಮ್ಮ ಕೆಲಸಕ್ಕೆ ಸಂಬಂಧಿಸಿದ ವಿಷಯಗಳು, ನೀವು ಪ್ರಸ್ತುತ ಎದುರಿಸುತ್ತಿರುವ ಮಾನಸಿಕ ಸ್ಥಿತಿ. ಇದಕ್ಕೆ ಸಂಬಂಧಿಸಿದ ಜಾಹೀರಾತುಗಳು ಮತ್ತು ರೀಲ್‌ಗಳು ಇನ್‌ಸ್ಟಾಗ್ರಾಮ್‌ನಲ್ಲಿ ನಿಮ್ಮ ಮುಂದೆ ಪದೇ ಪದೇ ಕಾಣಿಸಿಕೊಳ್ಳುತ್ತಿರಬಹುದು. ಇದಕ್ಕೆ ಕಾರಣವೇನು?
03:37 PM (IST) Feb 01
ಭಾರತದ ಅತ್ಯಂತ ಶ್ರೀಮಂತ ಕ್ರಿಕೆಟಿಗರ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ, ಎಂಎಸ್ ಧೋನಿ, ಸಚಿನ್ ತೆಂಡೂಲ್ಕರ್ ಅವರಂತಹ ಪ್ರಮುಖರಿದ್ದಾರೆ. ಕ್ರಿಕೆಟ್, ಜಾಹೀರಾತುಗಳು ಮತ್ತು ಬ್ಯುಸಿನೆಸ್‌ಗಳು ಇವರ ಪ್ರಮುಖ ಆದಾಯದ ಮೂಲಗಳಾಗಿವೆ. ಆದರೆ ಅವರಿಗಿಂತ ಶ್ರೀಮಂತ ಕ್ರಿಕೆಟಿಗನಿದ್ದಾನೆ.
03:20 PM (IST) Feb 01
ಭಾರತದ ಮಾರುಕಟ್ಟೆಯಲ್ಲಿ ಒಂದು ಲಕ್ಷ ರೂಪಾಯಿಗಿಂತ ಕಡಿಮೆ ಬೆಲೆಯ ಹಾಗೂ ಉತ್ತಮ ರೀ-ಸೇಲ್ ಮೌಲ್ಯವನ್ನು ನೀಡುವ ದ್ವಿಚಕ್ರ ವಾಹನಗಳ ಬಗ್ಗೆ ತಿಳಿಯೋಣ. ಹೀರೋ, ಹೋಂಡಾ, ಬಜಾಜ್‌ನಂತಹ ಬ್ರ್ಯಾಂಡ್‌ಗಳ ಆಕ್ಟಿವಾ, ಸ್ಪ್ಲೆಂಡರ್, ಶೈನ್‌ನಂತಹ ಮಾಡೆಲ್‌ಗಳು ಇಲ್ಲಿವೆ.
02:59 PM (IST) Feb 01
ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಅವರು ದೇಶದ ತೀವ್ರ ಆರ್ಥಿಕ ಸಂಕಷ್ಟವನ್ನು ಒಪ್ಪಿಕೊಂಡಿದ್ದಾರೆ. ಐಎಂಎಫ್ ಮತ್ತು ಮಿತ್ರ ದೇಶಗಳ ಮುಂದೆ ಸಾಲ ಕೇಳುವುದು ಆತ್ಮಗೌರವಕ್ಕೆ ಧಕ್ಕೆ ತಂದಂತೆ ಮತ್ತು ತಲೆಬಗ್ಗಿಸಿದಂತೆ ಎಂದು ಅವರು ತಮ್ಮ ಅಸಹಾಯಕತೆಯನ್ನು ಬಣ್ಣಿಸಿದ್ದಾರೆ.
02:09 PM (IST) Feb 01
ಸಾಮಾಜಿಕ ಜಾಲತಾಣದಲ್ಲಿ ಹಾವುಗಳ ರಕ್ಷಣೆ ಮಾಡುವ ವೀಡಿಯೋಗಳಿಂದಲೇ ಖ್ಯಾತಿ ಗಳಿಸಿದ್ದ 'ಸರ್ಪಮಿತ್ರ' ಆಕಾಶ್ ಜಾಧವ್ ಎಂಬ ಯೂಟ್ಯೂಬರ್‌ನನ್ನು ಛತ್ತೀಸ್‌ಗಢ ಪೊಲೀಸರು ಬಂಧಿಸಿದ್ದಾರೆ. ಈತ ತನ್ನ ಸಾರ್ವಜನಿಕ ಇಮೇಜ್ ಬಳಸಿ ಆಂಬ್ಯುಲೆನ್ಸ್‌ನಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಗಾಂಜಾ ಅಕ್ರಮವಾಗಿ ಸಾಗಿಸುತ್ತಿದ್ದ..
02:00 PM (IST) Feb 01
12:24 PM (IST) Feb 01
ಮಹಾರಾಷ್ಟ್ರದ ಡಿಸಿಎಂ ಆಗಿದ್ದ ಅಜಿತ್ ಪವಾರ್ ಬಲಿ ಪಡೆದ ಲಿಯರ್‌ಜೆಟ್ ವಿಮಾನದಲ್ಲಿದ್ದ ಕ್ಯಾಪ್ಟನ್ ಸುಮಿತ್ ಕಪೂರ್ ಕೂಡ ದುರಂತರದಲ್ಲಿ ಸಾವನ್ನಪ್ಪಿದ್ದು, ಅವರ ಪುತ್ರಿ ತಮ್ಮ ತಂದೆಯನ್ನು ಸ್ಮರಿಸಿಕೊಂಡು ಭಾವುಕರಾಗಿ ಪೋಸ್ಟ್ ಮಾಡಿದ್ದು, ಆ ಪೋಸ್ಟ್ ಅನೇಕರನ್ನು ಭಾವುಕರಾಗಿಸಿದೆ.
10:56 AM (IST) Feb 01
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರಕಾರ, ಭಾರತ ಇರಾನ್ ಬದಲಿಗೆ ವೆನುಜುವೇಲದಿಂದ ತೈಲ ಖರೀದಿಸಲಿದೆ. 2019ರಲ್ಲಿ ಅಮೆರಿಕದ ನಿರ್ಬಂಧಗಳಿಂದಾಗಿ ಭಾರತವು ವೆನುಜುವೇಲದಿಂದ ತೈಲ ಖರೀದಿ ನಿಲ್ಲಿಸಿತ್ತು. ಇದೀಗ ರಿಲಯನ್ಸ್ ಇಂಡಸ್ಟ್ರೀಸ್ ಮತ್ತೆ ಅಲ್ಲಿಂದ ಕಚ್ಚಾ ತೈಲ ಖರೀದಿಸಲು ಪ್ರಯತ್ನ ನಡೆಸುತ್ತಿದೆ.
10:33 AM (IST) Feb 01
NMDC, ಭಾರತ್ ಎಲೆಕ್ಟ್ರಾನಿಕ್ಸ್, ಲಾರ್ಸೆನ್ & ಟೂಬ್ರೊ, ಜುಪಿಟರ್ ವ್ಯಾಗನ್ಸ್, ಹಿಂದೂಸ್ತಾನ್ ಏರೋನಾಟಿಕ್ಸ್, ಟಿವಿಎಸ್ ಮೋಟಾರ್, ವಾರೀ ಎನರ್ಜಿಸ್ ಸೇರಿದಂತೆ 11 ಷೇರುಗಳ ಬಗ್ಗೆ ಗಮನವಿರಲಿ ಎಂದು ಮಾರುಕಟ್ಟೆ ತಜ್ಞರು ಹೇಳಿದ್ದಾರೆ.
10:07 AM (IST) Feb 01
09:57 AM (IST) Feb 01
ಒಂದು ಸಂದರ್ಶನದಲ್ಲಿ ರಾಮ್ ಚರಣ್ ತಾನು ಉಪಾಸನಾರನ್ನು ಪ್ರೀತಿಸಲು ಕಾರಣವೇನು ಎಂದು ವಿವರಿಸಿದ್ದಾರೆ. ಉಪಾಸನಾಗೆ ನಂದಮೂರಿ ಕುಟುಂಬದ ಜೊತೆಗೂ ನಂಟಿದೆ. ಆ ವಿವರಗಳನ್ನು ಈ ಲೇಖನದಲ್ಲಿ ತಿಳಿಯೋಣ ಬನ್ನಿ
09:17 AM (IST) Feb 01
ಇಂದು ಕೇಂದ್ರ ಸರ್ಕಾರದಿಂದ 2026-27ನೇ ಸಾಲಿನ ಆಯವ್ಯಯ ಮಂಡನೆ. ಪ್ರತಿವರ್ಷ ಫೆ.1ರಂದು ಬಜೆಟ್ ಮಂಡಿಸುವುದು ವಾಡಿಕೆ. ಬಜೆಟ್ ಮಂಡನೆ ವೇಳೆ ಅರ್ಥಶಾಸ್ತ್ರಕ್ಕೆ ಸಂಬಂಧಿಸಿದ ಹಲವಾರು ಪದಗಳನ್ನು ಬಳಸಲಾಗುತ್ತದೆ. ಅಂತಹ ಕೆಲ ಪದಗಳ ಸರಳಾರ್ಥ ಇಲ್ಲಿದೆ:
09:02 AM (IST) Feb 01
ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್‌ಸಿ) ವಿಜ್ಞಾನಿಗಳು, ಬೆಂಗಳೂರಿನ ಮಣ್ಣಿನಲ್ಲಿರುವ ಸೂಕ್ಷ್ಮಾಣು ಜೀವಿಗಳನ್ನು ಬಳಸಿ ಬಾಹ್ಯಾಕಾಶ ನಿರ್ಮಾಣಕ್ಕೆ ಬೇಕಾದ ಇಟ್ಟಿಗೆಗಳನ್ನು ತಯಾರಿಸಬಹುದೆಂದು ಕಂಡುಹಿಡಿದಿದ್ದಾರೆ.
08:44 AM (IST) Feb 01
ಲೈಂಗಿಕ ಅಪರಾಧಿ ಜೆಫ್ರಿ ಎಪ್‌ಸ್ಟೀನ್ ಹಗರಣದ ಕಡತಗಳು ಬಿಡುಗಡೆಯಾಗಿದ್ದು, ಡೊನಾಲ್ಡ್ ಟ್ರಂಪ್, ಬಿಲ್ ಗೇಟ್ಸ್, ಅನಿಲ್ ಅಂಬಾನಿ ಮತ್ತು ಮೀರಾ ನಾಯರ್ ಸೇರಿದಂತೆ ವಿಶ್ವದ ಗಣ್ಯರ ಹೆಸರುಗಳು ಬಹಿರಂಗಗೊಂಡಿವೆ. ಈ ವರದಿಯು ಟ್ರಂಪ್ ಮತ್ತು ಗೇಟ್ಸ್ ಮೇಲಿನ ಲೈಂಗಿಕ ದುರ್ಬಳಕೆಯ ಗಂಭೀರ ಆರೋಪಗಳು ಒಳಗೊಂಡಿವೆ.
07:44 AM (IST) Feb 01
07:25 AM (IST) Feb 01
07:07 AM (IST) Feb 01
Gold And Silver Price Down: ಸತತ ಎರಡನೇ ದಿನವೂ ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಭಾರೀ ಕುಸಿತವಾಗಿದ್ದು, ಎರಡು ದಿನಗಳಲ್ಲಿ ಚಿನ್ನದ ಬೆಲೆ 18,000 ರೂ. ಹಾಗೂ ಬೆಳ್ಳಿ 60,000 ರೂ. ಇಳಿಕೆಯಾಗಿದೆ.