ಕೊರೋನಾ ಹೆಚ್ಚಳ: ಕರ್ನಾಟಕ ಸೇರಿ ಹಾಟ್ ಸ್ಪಾಟ್ ಜಿಲ್ಲೆಗಳ ಮೇಲೆ ಕೇಂದ್ರ ನೇರ ನಿಗಾ

By Suvarna NewsFirst Published Sep 8, 2020, 11:01 AM IST
Highlights

ದೇಶಾದ್ಯಂತ ಕೊರೊನಾ ಸೋಂಕು ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಹಾಟ್ ಸ್ಪಾಟ್ ಜಿಲ್ಲೆಗಳ ಮೇಲೆ ನೇರ ನಿಗಾವಣೆ ವಹಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.

ದೇಶಾದ್ಯಂತ ಕೊರೊನಾ ಸೋಂಕು ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಹಾಟ್ ಸ್ಪಾಟ್ ಜಿಲ್ಲೆಗಳ ಮೇಲೆ ನೇರ ನಿಗಾವಣೆ ವಹಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಟೆಸ್ಟಿಂಗ್, ಟ್ರೇಸಿಂಗ್, ಟ್ರೀಟ್ ಮೆಂಟ್ ಬಗ್ಗೆ ಮಾಹಿತಿ, ಮಾರ್ಗದರ್ಶನ, ತಪ್ಪುಗಳು ಸರಿಪಡಿಸುವುದು ಸೇರಿ ಹಲವು ಕೆಲಸಗಳನ್ನು ಮಾಡಲಾಗುತ್ತಿದೆ.

ಕರ್ನಾಟಕ, ಮಹಾರಾಷ್ಟ್ರ, ಆಂಧ್ರಪ್ರದೇಶದ 17 ಜಿಲ್ಲೆಗಳ ಸಿಎಂಒಗಳ ಜೊತೆ ಕೇಂದ್ರ ಸರ್ಕಾರ ಸುದೀರ್ಘ ಸಭೆ ನಡೆಸಿದೆ. ಭಾರತದ ಒಟ್ಟು ಸೋಂಕಿತರ ಸಂಖ್ಯೆಯಲ್ಲಿ ಈ 17 ಜಿಲ್ಲೆಗಳಿಂದಲೇ ಶೇ.46ರಷ್ಟು ಸೋಂಕಿತರು ಪತ್ತೆಯಾಗಿದ್ದಾರೆ.

ಸೋಂಕಿನಲ್ಲಿ ಬ್ರೆಜಿಲ್ ಹಿಂದಿಕ್ಕಿದ ಭಾರತವೀಗ ವಿಶ್ವದಲ್ಲೇ ನಂಬರ್ 2!

ಕರ್ನಾಟಕದಿಂದ ಕೊಪ್ಪಳ, ಮೈಸೂರು, ದಾವಣಗೆರೆ ಹಾಗು ಬಳ್ಳಾರಿ ಜಿಲ್ಲೆಗಳ ಸಿಎಂಒಗಳು ಸಭೆಯಲ್ಲಿ ಭಾಗಿಯಾಗಿದ್ದಾರೆ. ಮರಣದರವನ್ನು ಶೇ.1ಕ್ಕಿಂತ ಕಡಿಮೆ ಗೊಳಿಸಲು ಸೂಚನೆ ನೀಡಲಾಗಿದೆ. ನಿಯಂತ್ರಣ ಕ್ರಮಗಳು ಕುರಿತು ವಿಸ್ತ್ರತ ವರದಿ ನೀಡುವಂತೆ ಕೇಂದ್ರ ಸೂಚನೆ ನೀಡಿದೆ. ಅಗತ್ಯ ಸಂದರ್ಭಗಳಲ್ಲಿ ಏಮ್ಸ್ ವೈದ್ಯರ ತಂಡದ ಸಹಾಯ, ಸಲಹೆ ಪಡೆಯಲು ಕೇಂದ್ರ ಹೇಳಿದೆ.

ಭಾರತದಲ್ಲಿ ಕೊರೋನಾಗೆ ಸಾವು ಸಂಭವಿಸದ ಏಕೈಕ ರಾಜ್ಯವಿದು

ಕರ್ನಾಟಕದಲ್ಲಿ ಆರಂಭವಾದ ಕೊರೋನಾ ಸಾವು ದೇಶಾದ್ಯಂತ ವ್ಯಾಪಿಸಿ ಈವರೆಗೆ 72000ಕ್ಕೂ ಹೆಚ್ಚು ಜನರನ್ನು ಬಲಿ ಪಡೆದಿದೆ. ಅಚ್ಚರಿಯೆಂದರೆ ಈಶಾನ್ಯದ ಪುಟ್ಟರಾಜ್ಯವಾದ ಮಿಜೋರಾಂನಲ್ಲಿ ಈವರೆಗೆ ಸೋಂಕಿಗೆ ಯಾರೂ ಬಲಿಯಾಗಿಲ್ಲ.

40 ಲಕ್ಷ ದಾಟಿದ ಕೊರೋನಾ, ಸೆಪ್ಟೆಂಬರ್ ಅಂತ್ಯಕ್ಕೆ ದೇಶದ ಕತೆ ಏನಾಗಬಹುದು?

2011ರ ಗಣತಿ ಪ್ರಕಾರ ಸುಮಾರು 11 ಲಕ್ಷ ಮಂದಿ ಇರುವ ಮಿಜೋರಾಂನಲ್ಲಿ 1114 ಮಂದಿಯಲ್ಲಿ ಕೊರೋನಾ ಸೋಂಕು ಪತ್ತೆಯಾಗಿದೆ. ಆದರೆ, ಈವರೆಗೂ ಯಾರೂ ಸಹ ಕೊರೋನಾಕ್ಕೆ ಬಲಿಯಾಗಿಲ್ಲ. 50 ವರ್ಷದೊಳಗಿನವರಿಗೆ ಮಾತ್ರವೇ ಈ ಸೋಂಕು ಹಬ್ಬಿರುವ ಕಾರಣ ತಮ್ಮಲ್ಲಿ ಕೊರೋನಾಕ್ಕೆ ಯಾರೂ ಬಲಿಯಾಗಿಲ್ಲ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

click me!