14ರ ಹರೆಯದ ಹುಡುಗಿ. ಕುಣಿದು ನಲಿದಾಡುವ ವಯಸ್ಸು, ಆದರೆ ರಸ್ತೆ ಮಧ್ಯೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ. ತನ್ನ ಹೊಟ್ಟೆಯಲ್ಲಿ ಮುಗುವಿದೆ ಅನ್ನೋದೇ ಆಕೆಗೆ ತಿಳಿದಿರಲಿಲ್ಲ. ಜಗತ್ತನ್ನು ಅರ್ಥೈಸಿಕೊಳ್ಳುವ ಮುನ್ನವೇ ತಾಯಿಯಾದ 14ರ ಬಾಲೆಯ ದುರಂತ ಕತೆ ಇದು.
ಭೋಪಾಲ್(ನ.20) ಹೆಣ್ಣು ಮಕ್ಕಳು, ಅಪ್ರಾಪ್ತ ವಯಸ್ಕರ ಮೇಲೆ ನಡೆಯುತ್ತಿರುವ ಕಿರುಕುಗಳ ದೌರ್ಜನ್ಯ ಪ್ರಕರಣಗಳಿಗೆ ಕಡಿವಾಣ ಬೀಳುತ್ತಿಲ್ಲ. ದಿನದಿಂದ ದಿನಕ್ಕೆ ಘನಘೋರ ಘಟನೆಗಳೇ ವರದಿಯಾಗುತ್ತಿದೆ. ಅಪ್ರಾಪ್ತರ ಮೇಲೆ ನಡೆದ ಅದೆಷ್ಟೋ ಘಟನೆಗಳು ಬೆಳಕಿಗೆ ಬರುವುದೇ ಇಲ್ಲ. ಈ ಪೈಕಿ ಅಲ್ಲೊಂದು ಇಲ್ಲೊಂದು ಘಟನೆಗಳು ಮಾತ್ರ ವರದಿಯಾಗುತ್ತದೆ. ಈ ಪೈಕಿ ಬೆರಳೆಣಿಗೆ ಆರೋಪಿಗಳಿಗೆ ಮಾತ್ರ ಶಿಕ್ಷೆಯಾಗಿದೆ. ಇದೀಗ 14ರ ಬಾಲೆ ಮಗುವಿನ ಜನ್ಮ ನೀಡಿದ ಘಟನೆಯೊಂದು ಮಧ್ಯಪ್ರದೇಶ ಮೊರೆನಾದಲ್ಲಿ ನಡೆದಿದೆ. ಪುಟ್ಟ ಹೆಣ್ಣುಮಗಳು ಈಕೆ. ಶಾಲೆ, ಕಾಲೇಜು, ವೃತ್ತಿಪರ ಕೋರ್ಸ್, ಬಳಿಕ ಉದ್ಯೋಗ, ಉದ್ಯಮ ಹೀಗೆ ಬಾನೆತ್ತರದ ಕನಸುಗಳು ಮೊಳಕೆಯೊಡೆದಾಗಲೇ ಈಕೆ ತಾಯಿಯಾಗಿದ್ದಾಳೆ. ತನ್ನ ಹೊಟ್ಟೆಯಲ್ಲಿ ಕಳೆದ 9 ತಿಂಗಳಿನಿಂದ ಮಗುವೊಂದು ಬೆಳೆಯುತ್ತಿದೆ ಅನ್ನೋದು ಈಗೆ ಗೊತ್ತಿಲ್ಲ. ಹೊಟ್ಟೆ ನೋವಾಗುತ್ತಿದೆ ಅಮ್ಮಾ. ಸಹಿಸಲು ಸಾಧ್ಯವಾಗುತ್ತಿಲ್ಲ ಎಂದು ಬೆವತು ಹೋಗಿದ್ದಾಳೆ. ಮಗಳನ್ನು ಕರೆದುಕೊಂಡು ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದಾಟದ ರಸ್ತೆ ಮಧ್ಯೆ ಈ ಅಪ್ರಾಪ್ತ ಹೆಣ್ಣುಮಗು ಜನ್ಮ ನೀಡಿದ್ದಾಳೆ.
ಮೊರೆನಾ ನಿವಾಸಿಯಾಗಿರುವ 14 ವರ್ಷದ ಹೆಣ್ಣುವಿಗೆ ತೀವ್ರ ಹೊಟ್ಟೆನೋವು ಕಾಣಿಸಿಕೊಂಡಿದೆ. ತಾಯಿ ಬಳಿ ಹೇಳಿಕೊಂಡಿದ್ದಾಳೆ. ಮನೆಯಲ್ಲಿ ನರಾಳಿಡಿದ್ದಾಳೆ. ಈ ಬಾಲಕಿಯ ತಾಯಿ ಕೂಡ ಗಾಬರಿಗೊಂಡಿದ್ದಾರೆ. ನೇರವಾಗಿ ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ತಪಾಸಣೆ ನಡೆಸುವಾಗ ಅಪ್ರಾಪ್ತ ಬಾಲಕಿ ಗರ್ಭಿಣಿ ಅನ್ನೋದು ಗೊತ್ತಾಗಿದೆ. ಹೀಗಾಗಿ ಜಿಲ್ಲಾಸ್ಪತ್ರೆ ಸಿಬ್ಬಂದಿಗಳು ನಮಗ್ಯಾಗೆ ತಲೆನೋವು ಎಂದು ಖಾಸಗಿ ಆಸ್ಪತ್ರೆಗೆ ದಾಖಲಿಸಲು ಸೂಚಿಸಿದ್ದರೆ. ಇತ್ತ ಖಾಸಗಿ ಆಸ್ಪತ್ರೆ ಸಿಬ್ಬಂಧಿಗಳು ಈಕೆ ಅಪ್ರಾಪ್ತೆ, ಪೊಲೀಸ್, ಕೇಸು ಇವೆಲ್ಲಾ ಆಸ್ಪತ್ರೆ ಬ್ರ್ಯಾಂಡ್ ಮೇಲೆ ಕೆಟ್ಟ ಪರಿಣಾಮ ಬೀರುತ್ತೆ ಎಂದು ಇಲ್ಲಿ ಅಡ್ಮಿಟ್ ಮಾಡಲು ಸೂಕ್ತ ಸೌಲಭ್ಯವಿಲ್ಲ. ನೀವು ಜಿಲ್ಲಾಸ್ಪತ್ರೆಗೆ ತೆರಳಿ ಎಂದು ಕಳುಹಿಸಿದ್ದಾರೆ.
ಮೇಕೆ ತಿಂದು ತೇಗಿದ ಅಧಿಕಾರಿಗಳಿಗೆ ಬಿತ್ತು ದಂಡ, 11 ವರ್ಷದ ಬಾಲಕಿಗೆ ಸಿಕ್ತು 2.5 ಕೋಟಿ ರೂ ಪರಿಹಾರ!
ಖಾಸಗಿ ಆಸ್ಪತ್ರೆಯಿಂದ ಮತ್ತೆ ಜಿಲ್ಲಾಸ್ಪತ್ರೆಗೆ ನಡೆದುಕೊಂಡೇ ಸಾಗುವ ದಾರಿಯಲ್ಲಿ ಬಾಲಕಿಗೆ ಹೆರಿಗೆ ನೋವಿನಿಂದ ರಸ್ತೆಯಲ್ಲೇ ಹೆಣ್ಣುಮಗುವಿಗೆ ಜನ್ಮ ನೀಡಿದ್ದಾಳೆ. ಇತ್ತ ಕುಟುಂಬಸ್ಥರು ಕಂಗಾಲಾಗಿದ್ದಾರೆ. 14ರ ಬಾಲೆಗೆ ಏನಾಗಿದೆ ಅನ್ನೋದು ತಿಳಿಯದಾಗಿದೆ. ಸ್ಥಳೀಯರು ನೆರವಿನಿಂದ ಜಿಲ್ಲಾಸ್ಪತ್ರೆ ದಾಖಲಿಸಿದ್ದಾರೆ. ಇತ್ತ ಪೊಲೀಸರು ಓಡೋಡಿ ಬಂದಿದ್ದಾರೆ. ವೈದ್ಯರು ಹಾಗೂ ಬಾಲಕಿ ತಾಯಿಯ ಹೇಳಿಕೆ ಪಡೆದಿದ್ದಾರೆ. ಇದೀಗ ಬಾಲಕಿ ಚಿಕಿತ್ಸೆ ಪಡೆಯುತ್ತಿರುವ ಕಾರಣ ಹೇಳಿಕೆ ಪಡೆದಿಲ್ಲ. ಪ್ರಕರಣ ದಾಖಲಿಸಿರುವ ಪೊಲೀಸರು ಅಪ್ರಾಪ್ತ ಬಾಲಕಿ ಯಾರಿಂದ ಗರ್ಭಿಣಿಯಾಗಿದ್ದಾಳೆ ಅನ್ನೋದು ಪತ್ತೆ ಹಚ್ಚಲು ಮುಂದಾಗಿದ್ದಾರೆ. ಇತ್ತ ಪೋಷಕರಿಗೆ ದಿಕ್ಕೇ ತೋಚಿಲ್ಲ.
ಇದೊಂದೇ ಘಟನೆಯಲ್ಲಿ ಈ ರೀತಿಯ ಹಲವು ಘಟನೆಗಳು ಈಗಾಗಲೇ ನಡೆದು ಹೋಗಿದೆ. ಸಣ್ಣ ಸಣ್ಣ ಮಕ್ಕಳು ತಾಯಿಯಾಗಿದ್ದಾರೆ. ಇಡೀ ಜನ್ಮವೇ ನರಕವಾಗಿ ಕಳೆಯುತ್ತಿದ್ದಾರೆ. ಹೀಗೆ ಜನ್ಮ ಪಡೆದು ಬಂದ ಆ ಮಕ್ಕಳ ಭವಿಷ್ಯವೂ ಹಾಳಾಗಿ ಹೋಗಿದೆ.