ಲಡಾಖ್ ಸಂಘರ್ಷ; ಮೋದಿ ಭಾಷಣ ಹೊಗಳಿದ ಚೀನಾ ಮಾಧ್ಯಮ!

By Suvarna NewsFirst Published Jun 22, 2020, 7:22 PM IST
Highlights

ಕಳೆದ ಹಲವು ದಿನಗಳಿಂದ ಬೂದಿ ಮುಚ್ಚಿದ ಕೆಂಡಂತ ಪರಿಸ್ಥಿತಿ ನಿರ್ಮಾಣವಾಗಿತ್ತು. ಆದರೆ ದಿಢೀರ್ ಚೀನಾ ಸೈನಿಕರ ದಾಳಿಯಿಂದ 20 ಭಾರತೀಯ ಯೋಧರು ಹುತಾತ್ಮರಾಗಿದ್ದರು. ಇತ್ತ ಭಾರತ ತಿರುಗೇಟು ನೀಡೋ ಮೂಲಕ 35 ಚೀನಿ ಸೈನಿಕರನ್ನು ಹತ್ಯೆ ಮಾಡಿತ್ತು. ಬಳಿಕ ಗಡಿಯಲ್ಲಿ ಯುದ್ಧದ ವಾತಾವರಣ ನಿರ್ಮಾಣವಾಗಿತ್ತು. ಇದರ ಬೆನ್ನಲ್ಲೇ ಮೋದಿ ಭಾಷಣವನ್ನು ಚೀನಾ ಮಾಧ್ಯಮಗಳು ಹೊಗಳಿದೆ.

ನವದೆಹಲಿ(ಜೂ.22): ಭಾರತ ಹಾಗೂ ಚೀನಾ ನಡುವಿನ ಗಲ್ವಾನ್ ಕಣಿವೆ ಬಿಕ್ಕಟ್ಟಿನ ಬಳಿಕ ಪ್ರಧಾನಿ ನರೇಂದ್ರ ಮೋದಿ ಸರ್ವ ಪಕ್ಷ ಸಭೆ ಕರೆದು ಮಹತ್ವದ ಮಾತುಕತೆ ನಡೆಸಿದ್ದರು. ಇದಾದ ನಂತ್ರ ಮೋದಿ, ಪರಿಸ್ಥಿತಿ ತಿಳಿಗೊಳಿಸುವ ನಿಟ್ಟಿನಲ್ಲಿ ಪ್ರತಿಕ್ರಿಯೆ ನೀಡಿದ್ದರು. ಚೀನಾ ಸೈನಿಕರು ಭಾರತದ ಗಡಿಯೊಳಕ್ಕೆ ಅತಿಕ್ರಮಣ ಮಾಡಿಲ್ಲ. ಇತ್ತ ಭಾರತೀಯ ಯೋಧರು ಚೀನಾ ಗಡಿ ಪ್ರವೇಶಿಸಿಲ್ಲ. ನಮ್ಮ ಪೋಸ್ಟ್‌ಗಳನ್ನು ಚೀನಾ ಆಕ್ರಮಿಸಿಕೊಂಡಿಲ್ಲ ಎಂದು ಮೋದಿ ಹೇಳಿದ್ದರು.

ಮೋದಿ ಮುಂದಿದೆ ಸಪ್ತ ಸವಾಲುಗಳು: ಹೀಗಿದೆ ತಯಾರಿಯೂ..!

ಪ್ರಧಾನಿ ಮೋದಿ ಹೇಳಿಕೆಯನ್ನು ಚೀನಾ ಮಾಧ್ಯಮ ಹೊಗಳಿದೆ. ಚೀನಾದ ಕಮ್ಯೂನಿಸ್ಟ್ ಪಾರ್ಟಿಯ ಗ್ಲೋಬಲ್ ಟೈಮ್ಸ್ ಪ್ರಧಾನಿ ಮೋದಿಗೆ ಭೇಷ್ ಎಂದಿದ್ದಾರೆ. ಮೋದಿ ಗಡಿಯಲ್ಲಿನ ಉದ್ಘಿಘ್ನ ಪರಿಸ್ಥಿತಿಯನ್ನು ತಿಳಿಗೊಳಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಬಣ್ಣಿಸಿದೆ. ಚೀನಾ ಜೊತೆ ಮತ್ತೊಂದು ಸಂಘರ್ಷ ಆಗದಂತೆ ಮೋದಿ ನೋಡಿಕೊಳ್ಳುತ್ತಿದ್ದಾರೆ ಎಂದಿದೆ.

ಗಡಿ ಬಿಕ್ಕಟ್ಟು; ಚೀನಾ ಜೊತೆಗಿನ 5 ಸಾವಿರ ಕೋಟಿ ರೂ. ಒಪ್ಪಂದ ಸ್ಥಗಿತಗೊಳಿಸಿದ ಸರ್ಕಾರ!

ಗಡಿ ಸಂಘರ್ಷದ ಕುರಿತು ಮೋದಿ ಪ್ರತಿಕ್ರಿಯೆ ನಿಜಕ್ಕೂ ಉತ್ತಮ. ಗಡಿ ಪರಿಸ್ಥಿತಿ ಶಾಂತಗೊಳಿಸಲುು ಮೋದಿ ಪ್ರಯತ್ನ ಮಚ್ಚುವಂತದ್ದು ಎಂದು ಚೀನಾದ ಫುಡಾನ್ ಯುನಿವರ್ಸಿಟಿ ಪ್ರೋಫೆಸರ್ ಲಿನ್ ಮಿನ್‌ವಾಂಗ್ ಹೇಳಿದ್ದಾರೆ.

ಪ್ರಧಾನಿ ಮೋದಿ ಹೇಳಿಕೆಯನ್ನು ಚೀನಾ ಮಾಧ್ಯಮಗಳು ಹೊಗಳಿದೆ ಬೆನ್ನಲ್ಲೇ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟ್ವಿಟರ್ ಮೂಲಕ ಪ್ರಶ್ನಿಸಿದ್ದಾರೆ. ನಮ್ಮ ಸೈನಿಕರನ್ನ ಚೀನಾ ಕೊಂದಿದೆ, ನಮ್ಮ ಭೂಭಾಗದ ಮೇಲೆ ಚೀನಾ ಆಕ್ರಮಣ ಮಾಡಿದೆ. ಇದರ ಬೆನ್ನಲ್ಲೇ ಚೀನಾ ಮಾಧ್ಯ ಮೋದಿ ಭಾಷಣವನ್ನು ಹೊಗಳಿದ್ದು ಯಾಕೆ ಎಂದು ಪ್ರಶ್ನಿಸಿದ್ದಾರೆ.

click me!