ಹತ್ರಾಸ್;  ರೇಪ್‌ ಅಲ್ಲ..ಮರ್ಯಾದಾ ಹತ್ಯೆ.. ಎಪಿ ಸಿಂಗ್ ಬಿಚ್ಚಿಟ್ಟ ಲವ್ ಸ್ಟೋರಿ!

By Suvarna NewsFirst Published Oct 9, 2020, 11:21 PM IST
Highlights

ಹತ್ರಾಸ್ ಪ್ರಕರಣ/ ಅತ್ಯಾಚಾರವಲ್ಲ ಇದೊಂದು ಮರ್ಯಾದಾ ಹತ್ಯೆ/ ಆರೋಪಿಗಳ ಪರ ವಾದ ಮಾಡಲಿರುವ ಎಪಿ ಸಿಂಗ್ ತೆರೆದಿಟ್ಟ ವಿಚಾರಗಳು/ ಆರೋಪಿ ಮತ್ತು ಸಂತ್ರಸ್ತೆ ನಡುವೆ ಮೊದಲಿನಿಂದಲೂ ಲಿಂಕ್ ಇತ್ತು

ನಿರ್ಭಯಾ ಅತ್ಯಚಾರದ ಪ್ರಕರಣದ ದೋಷಿಗಳ ಪರ ವಾದ ಮಾಡಿರುವ ಅಡ್ವೋಕೇಟ್ ಎಪಿ ಸಿಂಗ್ ಇದೀಗ ಹಥ್ರಾಸ್ ರೇಪ್ ಆರೋಪಿಗಳ ಪರವೂ ವಾದ ಮಾಡುತ್ತಿದ್ದಾರೆ. ಹಾಗಾದರೆ ಅವರು ಇಂಥ ತೀರ್ಮಾನ  ತೆಗೆದುಕೊಳ್ಳಲು ಕಾರಣ ಏನು? ಸಂದರ್ಶನದಲ್ಲಿ ಅನೇಕ ವಿಚಾರಗಳನ್ನು  ಹೇಳಿದ್ದಾರೆ

ಪ್ರಶ್ನೆ; ಹತ್ರಾಸ್ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ ನಿಮ್ಮ ಮೊದಲ ಹೆಜ್ಜೆಗಳು ಏನು?

ಸಿಂಗ್;  ಆರೋಪಿಗಳ ಸಂಬಂಧಿಕರು ನನ್ನನ್ನು ಮೊದಲು ಸಂಪರ್ಕ ಮಾಡಿದರು. ಅಕ್ಟೋಬರ್  10 ರಂದು ಬೆಳಗ್ಗೆt 10  ಕೇಂದ್ರದ ಮಾಜಿ ಸಚಿವ ಮನ್ವೇಂದ್ರ ಸಿಂಗ್ , ಅಖಿಲ ಭಾಋತ ಕ್ಷತ್ರಿಯ ಮಹಾಸಭಾದದ ಸದಸ್ಯರು ಹತ್ರಾಸ್ ಎಸ್‌ಪಿ ಮತ್ತು ಹತ್ರಾಸ್ ಪ್ರಕರಣದ ಆರೋಪಿಗಳ ಕುಟುಂಬವನ್ನು ಭೇಟಿ ಮಾಡಲಿದ್ದಾರೆ. ಇದಾದ ನಂತರ ಮುಂದಿನ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ.

ಕುಟುಂಬ ಸದಸ್ಯರಿಂದಲೇ ಯುವತಿಯ ಹತ್ಯೆ!

ಪ್ರಶ್ನೆ; ಹತ್ರಾಸ್ ಪ್ರಕರಣವನ್ನು ಮರ್ಯಾದಾ ಹತ್ತೆ ಎಂದು ಹೇಗೆ ಭಾವಿಸುತ್ತೀರಿ? 

ಸಿಂಗ್; ಹತ್ರಾಸ್ ಪ್ರಕರಣದಲ್ಲಿ ಆಗಿರುವುದು ರೇಪ್ ಅಲ್ಲ, ಇಲ್ಲಿ ಆಗಿರುವುದು ಮರ್ಯಾದಾ ಹತ್ಯೆ. ಪ್ರಕರಣಕ್ಕೆ ಸಂಬಂಧಿಸಿ  104 ಕಾಲ್ ಪಟ್ಟಿ ಮಾಡಲಾಗಿದೆ. ಅಕ್ಟೋಬರ್  2019 ಮಾರ್ಚ್ 2020 ರ ಅವಧಿಯಲ್ಲಿ ಆರೋಪಿ ಮನೆ ಮತ್ತು ಸಂತ್ರಸ್ತೆ ನಡುವೆ 104  ದೂರವಾಣಿ ಕರೆಗಳಾಗಿವೆ. ಇದರಲ್ಲಿ 62 ಕರೆಗಳು ಆರೋಪಿ ಸಂದೀಪ್ ಕಡೆಯಿಂದ ಬಂದಿದ್ದರೆ ಇನ್ನು 42 ಸಂದೀಪ್ ಪರವಾಗಿ ಮಾಡಲಾಗಿದೆ. ಇದೊಂದು  ಲವ್ ಸ್ಟೋರಿಯಾಗಿದ್ದು ಸಂತ್ರಸ್ತೆಯ ಅಣ್ಣ ಇದನ್ನು ವಿರೋಧಿಸುತ್ತಿದ್ದರು.

ಹಾಗಾದರೆ ಸಂತ್ರಸ್ತೆಗೆ ಹೇಗೆ ಅಷ್ಟೊಂದು ಗಂಭೀರ ಗಾಯಗಳಾದವು?

ಸಿಂಗ್: ಆರೋಪಿ ಸಂದೀಪ್ ಆರು ತಿಂಗಳಿನಿಂದ ದೆಹಲಿಯಲ್ಲಿದ್ದರು. ಘಟನೆ ನಡೆಯುವುದಕ್ಕೆ ಕೆಲವು ದಿನ ಮೊದಲು ಮಾತ್ರ ಸಂದೀಪ್ ತವರಿಗೆ ಹೋಗಿದ್ದರು. ಈ ಸಂದರ್ಭದಲ್ಲಿ ಸಂದೀಪ್ ಸಂತ್ರಸ್ತೆಯನ್ನು ಭೇಟಿ ಮಾಡುವ ಸಾಧ್ಯತೆ ಇದೆ ಎಂದು ಆಕೆಯ ಅಣ್ಣ ಭಾವಿಸಿದ ಸಾಧ್ಯತೆ ಇದೆ. ಈ ವೇಳೆ ಅಣ್ಣ ತಂಗಿಯ ಮೇಲೆ ಹಲ್ಲೆ ಮಾಡಿದ್ದಾನೆ. ಈ ವೇಳೆ ಬೆನ್ನು ಮೂಳಗೆಗೂ ಪೆಟ್ಟಾಗಿದೆ. ಆಕೆ ಹೊಲದ ಮಧ್ಯೆಯೇ ಬಿದ್ದಿದ್ದಾಳೆ, ವೈರ್ ಗಳಿಂದಲೂ ಪೆಟ್ಟಾಗಿದೆ. ಈ ವೈರ್ ನಿಂದಲೇ ನಾಲಿಗೆ ಕತ್ತರಿಸಿದೆ.  ಮಾಧ್ಯಮಗಳು ಆಕೆಯ ನಾಲಿಗೆ ಕತ್ತರಿಸಲಾಗಿತ್ತು ಎಂದು ವರದಿ ಮಾಡಿವೆ. ನಾಲಿಗೆ ಕತ್ತರಿಸಿದ್ದರೆ ಆಕೆ ಹೇಳಿಕೆ ನೀಡಲು ಹೇಗೆ ಸಾಧ್ಯ. 

ಮಗುವಿನ ಮೇಲೆ ಅತ್ಯಾಚಾರ ಮಾಡಿ ಗೂಗಲ್ ಮಾಡಿದ್ದ ಪಾಪಿ ತಂದೆ

ಪ್ರಶ್ನೆ:  ಇದು ಅತ್ಯಾಚಾರ ಅಲ್ಲ..ಮರ್ಯಾದಾ ಹತ್ಯೆ ಎಂಬುದನ್ನು ನ್ಯಾಯಾಲಯದಲ್ಲಿ ಹೇಗೆ ಸಾಬೀತು ಮಾಡುತ್ತೀರಿ? 

ಸಿಂಗ್: ವೈದ್ಯಕೀಯ ವರದಿಯಲ್ಲಿ ಅತ್ಯಾಚಾರ ಎಂದು ಇಲ್ಲ. ಎಫ್‌ಐಆರ್ ನಲ್ಲಿಯೂ ಅತ್ಯಾಚಾರ ಎಂದು ಇಲ್ಲ.  ತಾಯಿ ನೀಡಿರುವ ಮೊದಲ ಹೇಳಿಕೆಯೂ ಗೊಂದಲಕಾರಿಯಾಗಿದೆ. ತಾಯಿ ಮತ್ತು ಗ್ರಾಮಸ್ಥರು ನೀಡಿದ್ದ ಹೇಳಿಕೆಯೂ ಆರೋಪಿಯ ಪರವಾಗಿದೆ. ಮೊದಲು ಇದನ್ನು ಅಟೆಮ್ಟ್ ಟು ಮರ್ಡರ್ ಪ್ರಕರಣ ಎಂದು ಪರಿಭಾವಿಸಲಾಗಿತ್ತು.

ಪ್ರಶ್ನೆ; ಸಂತ್ರಸ್ತೆಯ ಕುಟುಂಬಕ್ಕೆ ಯಾರಾದರೂ ವೈರಿಗಳಿದ್ದಾರೆಯೇ, ಅಥವಾ ಸಂತ್ರಸ್ತೆಗೆ ಆಗದವರು ಇದ್ದಾರೆಯೆ? 

ಸಿಂಗ್; ಊರಿನ ಪ್ರತ್ಯಕ್ಷದರ್ಶಿಗಳ ಹೇಳಿಕೆ ಇಲ್ಲಿ ಮುಖ್ಯವಾಗುತ್ತದೆ. ಗ್ರಾಮಸ್ಥರು ಹೇಳುವಂತೆ ಸಂತ್ರಸ್ತೆ ಮತ್ತು ಆರೋಪಿ ನಡುವೆ ಮೊದಲಿನಿಂದಲೂ ಸ್ನೇಹ ಇತ್ತು. ಕೆಲ ವರ್ಷಗಳ ಹಿಂದೆ  ಹುಡುಗನ ತಂದೆ ಮತ್ತು ಸಂತ್ರಸ್ತೆಯ ತಂದೆ ನಡುವೆ ಗಲಾಟೆ ನಡೆದ  ಘಟನೆಯೂ ಇದೆ.  ತಂದೆಯರ ನಡುವೆ ವೈರತ್ಯ ಇದ್ದರೆ ಮಕ್ಕಳು ಪ್ರೀತಿಯಲ್ಲಿ ಬಿದ್ದಿದ್ದರು.

ಪ್ರಶ್ನೆ: ಎಸ್‌ಸಿ ಎಸ್‌ಟಿ ವಿಚಾರ ಇದಕ್ಕೆ ಕಾರಣವಾಯ್ತಾ?

ಸಿಂಗ್:  ಇದನ್ನು ಹೀಗೆ ಹೇಳಬಹುದು. ಪ್ರೀತಿ ಇದ್ದಾಗ ಇಲ್ಲಿ ಎಸ್‌ಸಿ ಎಸ್‌ಟಿ ವಿಚಾರ ಮುಖ್ಯವಾಗಿಲ್ಲ. ರಾಜಕಾರಣ ಮಧ್ಯ ಪ್ರವೇಶ ಮಾಡಿದಾಗ  ಬೆಂಕಿ ಹೊತ್ತಿಕೊಂಡಿದೆ. ರಾಜಕೀಯ ನಾಯಕ ಮಧ್ಯ ಪ್ರವೇಶ ಮಾಡಿದಾಗ ಅತ್ಯಾಚಾರ ಎಂಬ ಸುದ್ದಿ ಹರಿಯಬಿಡಲಾಗಿದೆ.

ಪ್ರಶ್ನೆ; ಹತ್ರಾಸ್ ಪ್ರಕರಣ ನಿರ್ಭಯಾ ಪ್ರಕರಣದಂತೆ ತುಂಬಾ ದಿನ ತೆಗೆದುಕೊಳ್ಳಬಹುದೆ?

ಸಿಂಗ್; ಮಾಧ್ಯಮ ಮಧ್ಯ ಪ್ರವೇಶ ಮಾಡಿದರೆ ಹಾಗೆ ಆದರೂ ಆಗಬಹುದು. ಆದಷ್ಟೂ ಶೀಘ್ರವಾಗಿ ಪ್ರಕರಣಕ್ಕೆ ಅಂತ್ಯ ಸಿಗುವ ವಿಶ್ವಾಸ ನನಗಿದೆ.

ಹಿಂದಿಯಲ್ಲಿ ಓದಿ

click me!