ಹತ್ರಾಸ್ ಸಂತ್ರಸ್ತೆಗೆ ಆರೋಪಿ ಜೊತೆ ಸಂಬಂಧ: ಕುಟುಂಬ ಸದಸ್ಯರಿಂದಲೇ ಯುವತಿ ಹತ್ಯೆ

ಸಂತ್ರಸ್ತೆಯ ಕುಟುಂಬ ಸದಸ್ಯರೇ ಆಕೆಯನ್ನು ಹತ್ಯೆ ಮಾಡಿದ್ದಾರೆ ಎಂದು ಆರೋಪ | ಆರೋಪಿ ಜೊತೆ ಯುವತಿಗಿತ್ತು ಸ್ನೇಹ | ಪ್ರಕರಣಕ್ಕೆ ಹೊಸ ಟ್ವಿಸ್ಟ್

Family Was Against Our Friendship They Killed Her: Hathras Accused dpl

ಹತ್ರಾಸ್(ಅ.09)‌: ದಲಿತ ಯುವತಿ ಮೇಲಿನ ಗ್ಯಾಂಗ್‌ರೇಪ್‌ ಮತ್ತು ಹತ್ಯೆ ಪ್ರಕರಣದಲ್ಲಿ ತಮ್ಮ ಮೇಲೆ ಸುಳ್ಳು ಆರೋಪ ಹೊರಿಸಲಾಗಿದ್ದು, ತಮಗೆ ನ್ಯಾಯ ದೊರಕಿಸಿಕೊಡುವಂತೆ ಹಾಥ್ರಸ್‌ ಪ್ರಕರಣದ ನಾಲ್ವರು ಆರೋಪಿಗಳು ಪೊಲೀಸರಿಗೆ ಪತ್ರ ಬರೆದಿದ್ದಾರೆ. ಅಲ್ಲದೆ ಸಂತ್ರಸ್ತೆಯ ಕುಟುಂಬ ಸದಸ್ಯರೇ ಆಕೆಯನ್ನು ಹತ್ಯೆ ಮಾಡಿದ್ದಾರೆ ಎಂದೂ ಆರೋಪಿಸಿದ್ದಾರೆ. ಇದರೊಂದಿಗೆ ಪ್ರಕರಣಕ್ಕೆ ಮತ್ತೊಂದು ತಿರುವು ಸಿಕ್ಕಿದೆ.

ಪ್ರಕರಣ ಸಂಬಂಧ ಪೊಲೀಸ್‌ ವಶದಲ್ಲಿರುವ ಪ್ರಮುಖ ಆರೋಪಿ ಸಂದೀಪ್‌ ಠಾಕೂರ್‌ ಸೇರಿದಂತೆ ನಾಲ್ವರು ಜೈಲಿನಿಂದಲೇ ಬುಧವಾರ ಹಾಥ್ರಸ್‌ ಪೊಲೀಸರಿಗೆ ಪತ್ರ ಬರೆದಿದ್ದು, ಅದು ಗುರುವಾರ ಬಹಿರಂಗವಾಗಿದೆ.

ಲಾಕ್‌ಡೌನ್‌ನಿಂದ ಉದ್ಯೋಗಕ್ಕೆ ಕತ್ತರಿ: ನಿರುದ್ಯೋಗದಿಂದ ಡ್ರಗ್ಸ್‌ ದಂಧೆಕೋರರ ಹೆಚ್ಚಳ!

‘ನಮ್ಮ ಸ್ನೇಹದ ಬಗ್ಗೆ ಕುಟುಂಬ ಸದಸ್ಯರಿಗೆ ವಿರೋಧವಿತ್ತು. ಘಟನೆ ನಡೆದ ದಿನ ನಾನು ಆಕೆಯನ್ನು ಭೇಟಿ ಮಾಡಲು ಹೊಲಕ್ಕೆ ಹೋಗಿದ್ದೆ. ಈ ವೇಳೆ ಆಕೆಯೊಂದಿಗೆ ಆಕೆಯ ತಾಯಿ ಮತ್ತು ಸೋದರ ಕೂಡ ಇದ್ದರು. ಬಳಿಕ ಆಕೆಯ ಸೂಚನೆಯಂತೆ ನಾನು ಮನೆಗೆ ಮರಳಿದೆ. ಬಳಿಕ ನಮ್ಮ ಸ್ನೇಹವನ್ನು ಮುಂದಿಟ್ಟುಕೊಂಡು ಕುಟುಂಬ ಸದಸ್ಯರು ಆಕೆಯ ಮೇಲೆ ಹಲ್ಲೆ ಮಾಡಿದರು.

ಆಕೆಗೆ ತೀವ್ರವಾಗಿ ಗಾಯಗೊಂಡಿದ್ದಳು ಎಂದು ಗ್ರಾಮಸ್ಥರಿಂದ ತಿಳಿದುಬಂತು. ನಾನು ಎಂದಿಗೂ ಆಕೆಯ ಮೇಲೆ ಹಲ್ಲೆ ಮಾಡಿಲ್ಲ ಮತ್ತು ತಪ್ಪಾಗಿ ನಡೆದುಕೊಂಡಿಲ್ಲ. ಆಕೆಯ ಸೋದರ ಮತ್ತು ತಾಯಿ ನಮ್ಮ ಮೇಲೆ ಸುಳ್ಳು ಆರೋಪ ಮಾಡಿ ಜೈಲಿಗೆ ಕಳುಹಿಸಿದ್ದಾರೆ. ನಾವೆಲ್ಲಾ ನಿರಪರಾಧಿಗಳು. ಹೀಗಾಗಿ ಈ ವಿಷಯದಲ್ಲಿ ನೀವು ತನಿಖೆ ಮಾಡಿ ದಯವಿಟ್ಟು ನಮಗೆ ನ್ಯಾಯ ದೊರಕಿಸಿಕೊಡಿ’ ಎಂದು ಸಂದೀಪ್‌ ಕೋರಿಕೊಂಡಿದ್ದಾನೆ.

ಮಗುವಿನ ಮೇಲೆ ಅತ್ಯಾಚಾರ ಮಾಡಿ ಗೂಗಲ್ ಮಾಡಿದ್ದ ಪಾಪಿ ತಂದೆ

ಈ ಆರೋಪವನ್ನು ಯುವತಿಯ ತಂದೆ ಸ್ಪಷ್ಟವಾಗಿ ತಳ್ಳಿಹಾಕಿದ್ದಾರೆ. ಇದೆಲ್ಲಾ ಸಂಪೂರ್ಣ ಸುಳ್ಳು. ನಮಗೆ ಯಾವುದೇ ಹಣ ಅಥವಾ ನೆರವು ಬೇಡ. ನಮಗೆ ನ್ಯಾಯ ಬೇಕು ಅಷ್ಟೇ ಎಂದು ಆಗ್ರಹಿಸಿದ್ದಾರೆ. ಮತ್ತೊಂದೆಡೆ ಆರೋಪಿಗಳ ವಾದವನ್ನು ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ವಾದ್ರಾ ಕೂಡ ಟೀಕಿಸಿದ್ದಾರೆ. ಮಹಿಳೆಯ ಘನತೆಗೆ ಧಕ್ಕೆ ತರುವ ಮತ್ತು ಆಕೆಯನ್ನೇ ಘಟನೆಗೆ ಹೊಣೆ ಮಾಡುವ ಇಂಥ ಆರೋಪಗಳು ಎಂದು ಕಿಡಿಕಾರಿದ್ದಾರೆ. ಆಕೆ ನ್ಯಾಯವನ್ನು ಪಡೆಯುವ ಅರ್ಹತೆ ಹೊಂದಿದ್ದಾಳೆಯೇ ವಿನಃ ಟೀಕೆಯನ್ನಲ್ಲ ಎಂದಿದ್ದಾರೆ.

Latest Videos
Follow Us:
Download App:
  • android
  • ios