Asianet Suvarna News Asianet Suvarna News

ಮಗುವಿನ ಮೇಲೆ ಅತ್ಯಾಚಾರ ಮಾಡಿ ಗೂಗಲ್ ಮಾಡಿದ್ದ ಪಾಪಿ ತಂದೆ

ಹತ್ತು ತಿಂಗಳ  ಮಗಳ ಮೇಲೆ ತಂದೆಯಿಂದಲೇ ಲೈಂಗಿಕ ದೌರ್ಜನ್ಯ/ ಮಗು ಸತ್ತ ಮೇಲೆ ಸಹಾಯವಾಣಿಗೆ  ಕರೆ ಮಾಡಿದ ಪಾಪಿ ತಂದೆ/ ಮಗು ಸತ್ತಿದೆ  ಎಂಬುದನ್ನು ತಿಳಿದುಕೊಳ್ಳಲು ಗೂಗಲ್ ಹುಡುಕಾಟ

Ten-month-old girl dies after being raped by her youth football coach father mah
Author
Bengaluru, First Published Oct 8, 2020, 11:04 PM IST
  • Facebook
  • Twitter
  • Whatsapp

ಪೆನ್ಸಿಲ್ವೇನಿಯಾ (ಅ. 08) ಪೆನ್ಸಿಲ್ವೇನಿಯಾತಂದೆಯೊಬ್ಬ ತನ್ನ 10 ತಿಂಗಳ ಮಗಳ ಮೇಲೆ ಅತ್ಯಾಚಾರ ಎಸಗಿದ್ದ ಆರೋಪದ ಮೇಲೆ ಬಂಧಿಸಲ್ಪಟ್ಟಿದ್ದು, ನಂತರ ಆಸ್ಪತ್ರೆಯಲ್ಲಿ ಗಾಯಗೊಂಡು ಸಾವನ್ನಪ್ಪಿದ್ದಾನೆ.

ಪ್ರಾವಿಡೆನ್ಸ್ ಟೌನ್‌ಶಿಪ್‌ನ ಆಸ್ಟಿನ್ ಸ್ಟೀವನ್ಸ್ (29) ಎಂಬಾತನನನ್ನು ಬಂಧನ ಮಾಡಲಾಗಿತ್ತು.  ಮಗುವಿನ ಮೇಲೆ ದೌರ್ಜನ್ಯ ಎಸಗಿದ್ದು ಅಲ್ಲದೇ ಗೂಗಲ್ ನಲ್ಲಿ ಮಗು ಸತ್ತಿದೆ ಎಂದು ಹೇಗೆ ತಿಳಿದುಕೊಳ್ಳುವುದು ಎಂದು ಹುಡುಕಿದ್ದು ಗೊತ್ತಾಗಿದೆ.

ಹತ್ರಾಸ್ ಅತ್ಯಾಚಾರದ ನಂತರ ಏನೇನಾಯ್ತು?

 29 ವರ್ಷದ ಪಾಪಿ ತಂದೆ  ಸಹಾಯವಾಣಿ 911 ಗೆ ಕರೆ ಮಾಡುವ ಮೊದಲು ಸುಮಾರು ಒಂದು ಗಂಟೆ ಕಾಲ ಅನೇಕ ಅಪರಾಧ ವಿಚಾರಗಳನ್ನು  ಗೂಗಲ್ ನಲ್ಲಿ ಸರ್ಚ್ ಮಾಡಿದ್ದಾನೆ. 

ಸ್ಥಳಕ್ಕೆ ಆಗಮಿಸಿದ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಅಷ್ಟರಲ್ಲಿಯೆ ಮಗು ಕೊನೆ ಉಸಿರು ಎಳೆದಿತ್ತು.  ಮಗು ಧರಿಸಿದ್ದ ಡೈಪರ್ ರಕ್ತದಿಂದ ಕೂಡಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.  ಒಟ್ಟಿನಲ್ಲಿ ಈ ಅಪರಾಧ ಪ್ರಕರಣ ಯುಎಸ್‌ಎ ನಲ್ಲಿ ದೊಡ್ಡ ಸದ್ದು ಮಾಡಿದೆ. 

Follow Us:
Download App:
  • android
  • ios