46 ಜಿಲ್ಲೆಯಲ್ಲಿ ಪಾಸಿಟಿವಿಟಿ ರೇಟ್ ಶೇ.10ಕ್ಕಿಂತ ಹೆಚ್ಚು; ಕರ್ನಾಟಕ ಗಡಿ ಜಿಲ್ಲೆ ಲಾಕ್‌ಡೌನ್‌ಗೆ ಚಿಂತನೆ!

By Suvarna NewsFirst Published Jul 31, 2021, 5:38 PM IST
Highlights
  • 2ನೇ ಅಲೆಯಿಂದ ಚೇತರಿಸಿಕೊಂಡು ಈಗಷ್ಟೇ ಅನ್‌ಲಾಕ್ ಕಂಡಿರುವ ಜನತೆಗೆ ಮತ್ತ ಶಾಕ್
  • ಕರ್ನಾಟಕ ಸೇರಿ ದೇಶದ 46 ಜಿಲ್ಲೆಗಳಲ್ಲಿ ಕೊರೋನಾ ಪಾಸಿಟಿವಿಟಿ ರೇಟ್ ಹೆಚ್ಚು
  • ಕಠಿಣ ನಿರ್ಭಂಧಕ್ಕೆ ರಾಜ್ಯಗಳಿಗೆ ಕೇಂದ್ರದ ಸೂಚನೆ, ಜಿಲ್ಲೆ ಲಾಕ್‌ಡೌನ್‌ಗೆ ಚರ್ಚೆ

ನವದೆಹಲಿ(ಜು.31):  ಕೊರೋನಾ ವೈರಸ್ 2ನೇ ಅಲೆಯಿಂದ ಚೇತರಿಸಿಕೊಂಡ ಅನ್‌ಲಾಕ್ ಕಂಡ ಜನತೆಗೆ ಇದೀಗ ಮತ್ತೆ ಶಾಕ್ ಎದುರಾಗಿದೆ. ಇದೀಗ ಕೊರೋನಾ ಪ್ರಕರಣ ಸಂಖ್ಯೆ ಏರಿಕೆಯಾಗುತ್ತಿದೆ. ಕೇರಳ, ಮಹಾರಾಷ್ಟ್ರ, ತಮಿಳುನಾಡು, ಕರ್ನಾಟಕ, ಅಸ್ಸಾಂ, ಒಡಿಶಾ, ಮಿಜೋರಾಂ, ಮೇಘಾಲಯ, ಮಣಿಪುರ ಹಾಗೂ ಆಂಧ್ರ ಪ್ರದೇಶದಲ್ಲಿ ಕೊರೋನಾ ಪ್ರಕರಣ ಗಣನೀಯ ಏರಿಕೆಯಾಗಿದೆ. ಈ ಕುರಿತು ಕೇಂದ್ರ ಕಠಿಣ ನಿರ್ಬಂಧ ಜಾರಿಗೊಳಿಸಲು ಸೂಚಿಸಿದೆ.

ಕರ್ನಾಟಕದಲ್ಲಿ ಮತ್ತೆ ಕೊರೋನಾ ಭೀತಿ: ಹೊಸ ಮಾರ್ಗಸೂಚಿ ಹೊರಡಿಸಿದ ರಾಜ್ಯ ಸರ್ಕಾರ

ದೇಶದ 10 ರಾಜ್ಯಗಳ 46 ಜಿಲ್ಲೆಗಳಲ್ಲಿ ಕೊರೋನಾ ಪಾಸಿಟಿವಿಟಿ ರೇಟ್ ಶೇಕಡಾ 10ಕ್ಕಿಂತ ಹೆಚ್ಚಿದೆ. ಹೀಗಾಗಿ ಈ ಜಿಲ್ಲೆಗಳಲ್ಲಿ ಕೊರೋನಾ ನಿಯಂತ್ರಣಕ್ಕೆ ರಾಜ್ಯ ಸರ್ಕಾರಗಳು ಕಠಿಣ ನಿಯಮ ಜಾರಿಗೊಳಿಸಬೇಕು ಎಂದು ಕೇಂದ್ರ ಸರ್ಕಾರ ಸೂಚಿಸಿದೆ.

ಕರ್ನಾಟಕ ನೆರೆ ರಾಜ್ಯಗಳಾದ ಕೇರಳ, ಮಹಾರಾಷ್ಟ್ರ, ಹಾಗೂ ಆಂಧ್ರ ಪ್ರದೇಶದಲ್ಲಿ ಕೊರೋನಾ ಹೆಚ್ಚಳ ಪರಿಣಾಮ ಇದೀಗ ಕರ್ನಾಟಕದಲ್ಲಿ ಕೊರೋನಾ ಗಣನೀಯ ಏರಿಕೆ ಕಂಡಿದೆ. ಹೀಗಾಗಿ ಕರ್ನಾಟಕದ ಗಡಿ ಜಿಲ್ಲೆಗಳಲ್ಲಿ ಲಾಕ್‌ಡೌನ್ ಜಾರಿಗೊಳಿಸಲು ನೂತನ ಸಿಎಂ ಬಸವರಾಜ ಬೊಮ್ಮಾಯಿ ಅಧಿಕಾರಿಗಳ ಜೊತೆ ಚರ್ಚೆ ನಡೆಸಿದ್ದಾರೆ.

ದೇಶದಲ್ಲಿ ಮತ್ತೆ ಏರುತ್ತಿದೆ ಸೋಂಕು : ಸತತ 3ನೇ ದಿನ 40,000ಕ್ಕೂ ಹೆಚ್ಚು ಕೇಸ್‌

ದೇಶದ 53 ಜಿಲ್ಲೆಗಳಲ್ಲಿ ಪಾಸಿಟಿವಿಟಿ ರೇಟ್ ಶೇಕಡಾ 53ಕ್ಕಿಂತ ಹೆಚ್ಚಿದೆ. 2ನೇ ಅಲೆ ರೀತಿಯಲ್ಲಿ ಕೊಂಚ ಯಾಮಾರಿದರೂ ಅಪಾಯ ಕಟ್ಟಿಟ್ಟ ಬುತ್ತಿ. ಹೀಗಾಗಿ ಕೊರೋನಾ ಹರಡುವುದಕ್ಕಿಂತ ಮೊದಲೇ ಕ್ರಮ ಕೈಗೊಳ್ಳಲು ಕೇಂದ್ರ ಸೂಚಿಸಿದೆ. ಇದರಂತೆ ಇದೀಗ ಕೊರೋನಾ ಹೆಚ್ಚಾಗುತ್ತಿರುವ ರಾಜ್ಯಗಳಲ್ಲಿ ಮೈಕ್ರೋಕಂಟೈನ್ಮೆಂಟ್ ಜೋನ್ ಹಾಗೂ ಲಾಕ್‌ಡೌನ್ ಜಾರಿಗೆ ಕರ್ನಾಟಕ ಮುಂದಾಗಿದೆ.

ಶೇಕಡಾ 10ಕ್ಕಿಂತ ಹೆಚ್ಚಿನ ಪಾಸಿಟಿವಿಟಿ ರೇಟ್ ದಾಖಲಾಗಿರುವ ಜಿಲ್ಲೆಗಳು ಜನಸಂದಣಿ ನಿಯಂತ್ರಿಸಬೇಕು.  ಈ ಹಿಂದೆ ಜಾರಿಗೊಳಿಸಿದ ಕಠಿಣ ನಿಯಮಗಳನ್ನು ಜಾರಿಗೊಳಿಸಬೇಕು. ಅಗತ್ಯ ವಸ್ತು ಖರೀದಿ, ತುರ್ತು ಸೇವೆ ಹೊರತುಪಡಿಸಿ ಉಳಿದ ಸೇವೆಗಳಿಗೆ ನಿಯಂತ್ರಣ ಹೇರಬೇಕು ಎಂದು ಕೇಂದ್ರ ಸೂಚಿಸಿದೆ

ಮತ್ತೆ ಏರುತ್ತಿದೆ ಕೊರೋನಾ : ಗಡಿ ಜಿಲ್ಲೆಗಳ ಜತೆ ಇಂದು ಸಿಎಂ ಸಭೆ

10 ರಾಜ್ಯಗಳಲ್ಲಿ ಕೊರೋನಾ ಪ್ರಕರಣ ಹೆಚ್ಚಾದ ಕಾರಣ ಭಾರತದ ಕೊರೋನಾ ಸಂಖ್ಯೆ ಇಂದು 41, 000ಕ್ಕೆ ಏರಿಕೆಯಾಗಿದೆ. ಜುಲೈ 23 ರಂದು 32,000 ಹೊಸ ಕೊರೋನಾ ಪ್ರಕರಣ ದಾಖಲಾಗಿತ್ತು. ಒಂದು ವಾರದಲ್ಲಿ ಪ್ರಕರಣಗಳ ಸಂಖ್ಯೆ 10,000 ಏರಿಕೆಯಾಗಿದೆ. 2ನೇ ಅಲೆಯಲ್ಲೂ ಇದೇ ರೀತಿ ಮುನ್ಸೂಚನೆ ಸಿಕ್ಕಿತ್ತು. ಈ ವೇಳೆ ನಿರ್ಲಕ್ಷ್ಯ ವಹಿಸಲಾಗಿತ್ತು. ಪರಿಣಾಮ ಘನಘೋರ ಪರಿಣಾಮ ಎದುರಿಸಬೇಕಾಯಿತು.
 

click me!