
ಚಳಿಗಾಲ ಶುರುವಾಗ್ತಿದೆ. ಬೆಳಿಗ್ಗೆ ಬೇಗ ಏಳೋದು ಕಷ್ಟವಾಗಿದೆ. ಬೆಳಿಗ್ಗೆ ಹಾಗೆ ಸಂಜೆ ತಂಪಾದ ಗಾಳಿ ಬೀಸ್ತಿದ್ದು, ಜನರ ಬಾಯಿಂದ ಚಳಿ ಚಳಿ ಎಂಬ ಮಾತು ಕೇಳಲು ಶುರುವಾಗಿದೆ. ನಿಧಾನವಾಗಿ ಚಳಿ ಹೆಚ್ಚಾಗಲಿದೆ. ಈ ಚಳಿಗಾಲದಲ್ಲೂ ಕೆಲವರು ಶಾರ್ಟ್, ಬಿನಿಯಾನ್ ಹಾಕಿಕೊಂಡು ಓಡಾಡ್ತಾರೆ. ಮತ್ತೆ ಕೆಲವರು ಸ್ವೆಟರ್ ಹಾಕಿ, ಸಾಕ್ಸ್ ಧರಿಸಿ, ಬಿಸಿ ಬಿಸಿ ನೀರು ಕುಡಿಯಲು ಶುರು ಮಾಡಿದ್ದಾರೆ. ಅರೇ ನಮಗೆ ಇಷ್ಟೊಂದು ಚಳಿಯಾಗ್ತಿದೆ, ಇವರಿಗಾಗ್ತಿಲ್ಲವ ಎನ್ನುವ ಪ್ರಶ್ನೆ ನಿಮಗೆ ಕಾಡಬಹುದು. ನಮ್ಮ ಆಹಾರ, ನಮ್ಮ ಜೀವನ ಶೈಲಿ, ನಮ್ಮ ದೇಹ ಎಲ್ಲವೂ ಚಳಿ ಜೊತೆ ಸಂಬಂಧ ಹೊಂದಿದೆ. ಇದೇ ಕಾರಣಕ್ಕೆ ನಮಗಾದಷ್ಟು ಚಳಿ ಬೇರೆಯವರಿಗೆ ಆಗದೆ ಇರಬಹುದು, ಇಲ್ಲ ನಮಗಿಂತ ಹೆಚ್ಚು ಚಳಿ ಅವರನ್ನು ಕಾಡಬಹುದು. ಇಂದು ನಾವು ಚಳಿಯಲ್ಲಿ ಆಗುವ ಬದಲಾವಣೆ ಏನು ಎಂಬುದನ್ನು ಹೇಳ್ತೇವೆ.
ಚಳಿ (Cold) ಹೇಗೆ ಆಗುತ್ತೆ ಗೊತ್ತಾ? : ಮೊದಲು ಚಳಿ ಚಳಿ ಅನ್ನಿಸೋದು ನಮ್ಮ ಚರ್ಮ (Skin) ಕ್ಕೆ. ನಂತ್ರ ನಮ್ಮ ರೋಮಗಳು ಎದ್ದು ನಿಲ್ಲುತ್ತವೆ. ಅತಿ ಚಳಿಯಾದಾಗ ಬೆರಳುಗಳು ಸೆಟೆದುಕೊಳ್ಳುತ್ತವೆ. ಚಳಿ ಮಾತ್ರವಲ್ಲ ಬಿಸಿ ಅನುಭವ ಕೂಡ ಮೊದಲಾಗುವುದು ಚರ್ಮಕ್ಕೆ. ನಮ್ಮ ಚರ್ಮದ ಕೆಳಗೆ ಇರುವ ಥರ್ಮೋ-ರಿಸೆಪ್ಟರ್ ನರಗಳು, ಮೆದುಳಿ (Brain) ಗೆ ಚಳಿಯ ಸಂದೇಶವನ್ನು ಅಲೆಗಳ ರೂಪದಲ್ಲಿ ಕಳುಹಿಸುತ್ತವೆ. ಅದರ ಮಟ್ಟ ಮತ್ತು ಅದರ ತೀವ್ರತೆ ಜನರಲ್ಲಿ ಬದಲಾಗುತ್ತದೆ. ಚರ್ಮದಿಂದ ಹೊರಹೊಮ್ಮುವ ಅಲೆಗಳು ಮೆದುಳಿನ ಹೈಪೋಥಾಲಮಸ್ ಗೆ ಹೋಗುತ್ತವೆ. ಹೈಪೋಥಾಲಮಸ್ ದೇಹದ ಆಂತರಿಕ ತಾಪಮಾನ ಮತ್ತು ಪರಿಸರವನ್ನು ಸಮತೋಲನಗೊಳಿಸಲು ಸಹಾಯ ಮಾಡುತ್ತದೆ. ಈ ಸಮತೋಲನವನ್ನು ರಚಿಸುವ ಚರ್ಮದ ಮೇಲಿರುವ ಕೂದಲು ನಿಲ್ಲುತ್ತದೆ. ಸ್ನಾಯುಗಳು ಸಹ ಕುಗ್ಗಲು ಪ್ರಾರಂಭಿಸುತ್ತವೆ.
Health Tips: ಸ್ನಾಯುಗಳನ್ನು ಬಲಗೊಳಿಸಲು ಈ Drinks ಕುಡೀರಿ
ಚಳಿಯಿಂದ ಹೇಗೆ ಪ್ರಾಣ ಹೋಗುತ್ತೆ ಗೊತ್ತಾ? : ಮೊದಲೇ ಹೇಳಿದಂತೆ ಚಳಿ ಮೊದಲು ಪರಿಣಾಮ ಬೀರುವುದು ಚರ್ಮದ ಮೇಲೆ. ಚರ್ಮದ ಅಡಿ ಇರುವ ನರಗಳು ಮೆದುಳಿಗೆ ಚಳಿಯ ಬಗ್ಗೆ ಸಂದೇಶವನ್ನು ಕಳುಹಿಸುತ್ತವೆ. ಮೆದುಳು ಆಗ ಅಲರ್ಟ್ ಆಗುತ್ತದೆ. ಮೆದುಳು ದೇಹದ ಎಲ್ಲಾ ಅಂಗಗಳಿಗೆ ತಾಪಮಾನ ಕಡಿಮೆಯಾಗುತ್ತಿದೆ ಎಂಬ ಸಂದೇಶ ಕಳುಹಿಸುತ್ತದೆ. ಮೆದುಳು ದೇಹದ ಎಲ್ಲಾ ಆಂತರಿಕ ಮತ್ತು ಬಾಹ್ಯ ಅಂಗಗಳಿಗೆ ತಾಪಮಾನವನ್ನು ಸಂರಕ್ಷಿಸಲು ಆದೇಶ ನೀಡುತ್ತದೆ. ಇದರ ನಂತರ ದೇಹದ ಎಲ್ಲಾ ಸ್ನಾಯುಗಳು ಕೆಲಸದ ವೇಗವನ್ನು ನಿಧಾನಗೊಳಿಸುತ್ತವೆ. ನಮ್ಮ ದೇಹಕ್ಕೆ ನಿರ್ದಿಷ್ಟ ತಾಪಮಾನದ ಅಗತ್ಯತೆಯಿರುತ್ತದೆ. ತುಂಬಾ ಕಡಿಮೆ ತಾಪಮಾನವನ್ನು ದೇಹ ಸಹಿಸುವುದಿಲ್ಲ. ದೇಹದ ತಾಪಮಾನ ಕಡಿಮೆಯಾಗ್ತಿದ್ದಂತೆ ದೇಹದ ಅನೇಕ ಭಾಗಗಳು ಕೆಲಸ ನಿಲ್ಲಿಸುತ್ತವೆ. ವಿಪರೀತ ಚಳಿಯಿಂದಾಗಿ ಕೆಲವರಿಗೆ ಬಹುಅಂಗ ವೈಫಲ್ಯ ಕಾಡುತ್ತದೆ. ಇದ್ರಿಂದ ವ್ಯಕ್ತಿ ಸಾವನ್ನಪ್ಪುತ್ತಾನೆ. ಅತಿ ಹೆಚ್ಚು ಚಳಿಯನ್ನು ಹೈಪೋಥರ್ಮಿಯಾ ಎಂದು ಕರೆಯಲಾಗುತ್ತದೆ.
ಅತಿಯಾದ ನಡುಕಕ್ಕೆ (Shiver) ಇದು ಕಾರಣ : ಶೀತ ಹೆಚ್ಚಾಗ್ತಿದ್ದಂತೆ ಅನೇಕರು ಗಡಗಡ ನಡುಗಲು ಶುರು ಮಾಡ್ತಾರೆ. ಚಳಿ ಹೆಚ್ಚಾಗ್ತಿದೆ ಎಂದು ಮೆದುಳು ಸಂದೇಶ ನೀಡಿದಾಗ, ಸ್ನಾಯುಗಳು ಕೆಲಸ ನಿಧಾನ ಮಾಡಿದಾಗ ಮೆಟಬೊಲಿಕ್ ಹೀಟ್ (Metabolic Heat) ಉತ್ಪತ್ತಿಯಾಗುತ್ತದೆ. ಇದ್ರಿಂದ ಹಠಾತ್ ನಡುಕ ಶುರುವಾಗುತ್ತದೆ. ಹೊರಗಿನ ತಾಪಮಾನಕ್ಕೆ ಒಳಗಿನ ತಾಪಮಾನವನ್ನು ಸಮತೋಲನಗೊಳಿಸಲು ದೇಹ ಮುಂದಾದಾಗ ಈ ಸ್ಥಿತಿ ನಿರ್ಮಾಣವಾಗುತ್ತದೆ.
ರಾತ್ರಿ ಚೆನ್ನಾಗಿ ಮಲಗಿದ್ದೀರಾ ? Good sleep ಆಗಿದ್ಯಾ ಅಂತ ಹೀಗೆ ಚೆಕ್ ಮಾಡಿ
ಚಳಿಯ (Chill) ವ್ಯತ್ಯಾಸ ಹೆಚ್ಚಾಗಲು ಇದು ಕಾರಣ : ಚಳಿಯಲ್ಲಿ ಏರುಪೇರಾಗಲು ಅನೇಕ ಕಾರಣವಿದೆ. ಮೊದಲನೇಯದಾಗಿ ನಿಮ್ಮ ಎತ್ತರಕ್ಕೆ ತಕ್ಕಂತೆ ನಿಮ್ಮ ತೂಕವಿಲ್ಲದೆ ಹೋದ್ರೆ ಆಗ ನಿಮಗೆ ಹೆಚ್ಚು ಚಳಿಯಾಗುವ ಸಾಧ್ಯತೆಯಿರುತ್ತದೆ. ಹೆಚ್ಚು ಚಳಿಯಾಗಲು ಥೈರಾಯ್ಡ್ ನಲ್ಲಿ ಏರುಪೇರಾಗುವುದು ಕೂಡ ಕಾರಣವಾಗಿದೆ. ದೇಹದಲ್ಲಿ ಕಬ್ಬಿಣಾಂಶದ ಕೊರತೆ ಇದ್ದರೂ ವಿಪರೀತ ಚಳಿ ನಿಮ್ಮನ್ನು ಕಾಡುವ ಸಾಧ್ಯತೆಯಿದೆ. ರಕ್ತ ಕೂಡ ನಮ್ಮ ಚಳಿ ಮೇಲೆ ಪರಿಣಾಮ ಬೀರುತ್ತದೆ. ಸರಿಯಾದ ಪ್ರಮಾಣದಲ್ಲಿ ರಕ್ತ ದೇಹದ ಎಲ್ಲ ಭಾಗಕ್ಕೆ ಸೇರದೆ ಹೋದ್ರೆ, ಕಡಿಮೆ ರಕ್ತಪಡಿಚಲನೆ ಎಲ್ಲವೂ ಶೀತಕ್ಕೆ ಕಾರಣವಾಗುತ್ತದೆ. ನಿದ್ರಾಹೀನತೆ, ನಿರ್ಜಲೀಕರಣ, ವಿಟಮಿನ್ ಬಿ ಕೊರತೆಯಿಂದಾಗಿ ಚಳಿ ಹೆಚ್ಚಾಗುತ್ತದೆ ಎಂದು ಅನೇಕ ಅಧ್ಯಯನಗಳಿಂದ ತಿಳಿದಿದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.