Kitchen Tips: ನಾನ್ ಸ್ಟಿಕ್ ಪಾತ್ರೆಗಳನ್ನು ಎಷ್ಟು ಸಮಯದ ವರೆಗೆ ಬಳಸಬಹುದು

By Suvarna NewsFirst Published Jan 16, 2022, 6:45 PM IST
Highlights

ಆಹಾರ (Food) ಪಾತ್ರೆಗೆ ಸ್ಟಿಕ್ ಆಗುತ್ತೆ ಅನ್ನೋ ಟೆನ್ಶನ್ನೇ ಇಲ್ಲ ಅನ್ನೋ ಕಾರಣಕ್ಕೆ ನಿಮ್ಗೆ ನಾನ್ ಸ್ಟಿಕ್ (Non Stick) ಪಾತ್ರೆ ಬಳಸೋದು ಇಷ್ಟನಾ. ಅಡುಗೆ ಮನೆ (Kitchen)ಯಲ್ಲಿ ನೀವು ಹೆಚ್ಚಾಗಿ ನಾನ್ ಸ್ಟಿಕ್ ಪಾತ್ರೆಗಳನ್ನೇ ಬಳಸ್ತಿದ್ದೀರಾ. ಹಾಗಿದ್ರೆ ನೀವು ಕೆಲವೊಂದು ವಿಚಾರಗಳನ್ನು ತಿಳಿದುಕೊಳ್ಳಲೇಬೇಕು.

ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿ ಎಲ್ಲರೂ ಅಡುಗೆ ಮಾಡಲು ನಾನ್ ಸ್ಟಿಕ್ ಪಾತ್ರೆಗಳನ್ನೇ ಬಳಸುತ್ತಾರೆ. ದೋಸೆ, ಆಮ್ಲೆಟ್, ಚಪಾತಿ ಹೀಗೆ ಯಾವುದನ್ನು ತಯಾರಿಸುವುದಾದರೂ ನಾನ್ ಸ್ಟಿಕ್‌ ಪ್ಯಾನ್‌ನಲ್ಲಿ ತಯಾರಿಸುವುದು ಸುಲಭ ಅನ್ನೋ ಕಾರಣಕ್ಕೆ ಹೆಚ್ಚಾಗಿ ನಾನ್ ಸ್ಟಿಕ್ ಪಾತ್ರೆಯನ್ನೇ ಖರೀದಿಸುತ್ತಾರೆ. ಈ ಪಾತ್ರೆಯ ಬಳಕೆಯಿಂದ ಕಡಿಮೆ ಪ್ರಮಾಣದ ಎಣ್ಣೆ ಆಹಾರಕ್ಕೆ ಸೇರಿಕೊಳ್ಳುತ್ತದೆ ಎಂಬುದೂ ಕೆಲವರ ಅಭಿಪ್ರಾಯ. ಅಷ್ಟೇ ಅಲ್ಲ ಇತರ ಪಾತ್ರೆಗಳಿಗೆ ಹೋಲಿಸಿದರೆ ಇದರಲ್ಲಿ ಆಹಾರವನ್ನು ಬೇಯಿಸುವಾಗ ಬೇಗನೇ ಪಾತ್ರೆಗೆ ಅಂಟಿಕೊಳ್ಳುವುದಿಲ್ಲ, ತಳ ಹಿಡಿಯುವುದಿಲ್ಲ ಎಂಬ ಕಾರಣವೂ ಇದೆ. ಅಲ್ಲದೆ, ಈ ಪಾತ್ರೆಯನ್ನು ತೊಳೆಯಲು ಸುಲಭ ಎಂಬ ಕಾರಣಕ್ಕೂ ಖರೀದಿಸುವವರಿದ್ದಾರೆ, ಆದರೆ ಈ ರೀತಿಯ ನಾನ್ ಸ್ಟಿಕ್ ಪಾತ್ರೆಗಳ ಬಳಕೆ ಆರೋಗ್ಯಕ್ಕೆ ಹಾನಿಕರವಾಗಿದೆ.

ನಾನ್ ಸ್ಟಿಕ್ ಕುಕ್ಕರ್, ಪ್ಯಾನ್ ಅಥವಾ ಇತರ ಯಾವುದೇ ಪಾತ್ರೆಯನ್ನು ಬಳಸಿ ಮಾಡುವ ಅಡುಗೆ ತಿನ್ನುವುದರಿಂದ ಹಲವು ಆರೋಗ್ಯ ಸಮಸ್ಯೆಗಳು ಉಂಟಾಗಬಹುದು. ನಾನ್ ಸ್ಟಿಕ್ ಪಾತ್ರೆ ಎಂದರೆ ಆಹಾರ ಅಂಟಿಕೊಳ್ಳದಂತೆ ಇದನ್ನು ಸುಲಭವಾಗಿ ವಿನ್ಯಾಸಗೊಳಿಸಲಾಗಿರುತ್ತದೆ. ಈ ರೀತಿ ಪಾತ್ರೆ ತಯಾರಿಸಲು ಪಫ್ಲೋರೊಕ್ಟನೊಯಿಕ್ ಎಂಬ ಪದಾರ್ಥವನ್ನು ಬಳಸಲಾಗುತ್ತದೆ. ಇದು ಹಲವು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗನಹುದ. ಮುಖ್ಯವಾಗಿ ಇದರಿಂದ ಸ್ತನ ಕ್ಯಾನ್ಸರ್, ಮೂತ್ರಪಿಂಡದ ಕಾಯಿಲೆ, ಥೈರಾಯ್ಡ್ ಮೊದಲಾದ ಸಮಸ್ಯೆಗಳು ಕಾಣಿಸಿಕೊಳ್ಳಬಹುದು.

Health Tips: ಅಡುಗೆಗೆ ಬಳಸೋ ಪಾತ್ರೆಗಳ ಬಗ್ಗೆ ಎಚ್ಚರವಿರಲಿ

ದೀರ್ಘಕಾಲದ ವರೆಗೆ ನಾನ್ ಸ್ಟಿಕ್ (Nonstick) ಪಾತ್ರೆಗಳನ್ನು ಬಳಸುವುದಂತೂ ಯಾವುದೇ ರೀತಿಯಲ್ಲೂ ಒಳ್ಳೆಯದಲ್ಲ. ನಿರ್ಧಿಷ್ಟ ಸಮಯದ ವರೆಗೆ ಮಾತ್ರ ಇಂಥಹಾ ಪಾತ್ರೆಗಳನ್ನು ಬಳಸಬಹುದು. ಹಾಗಿದ್ರೆ ನಾನ್ ಸ್ಟಿಕ್ ಪ್ಯಾನ್‌ ಯಾವ ಸ್ಥಿತಿಯಲ್ಲಿದ್ದಾಗ ಅವುಗಳ ಬಳಕೆಯನ್ನು ನಿಲ್ಲಿಸಬೇಕು ಎಂಬುದನ್ನು ತಿಳಿಯೋಣ.

ಪಾತ್ರೆ ಬೆಂಡ್ ಆದಾಗ
ಶಾಖ ಅಥವಾ ತೇವದ ಕಾರಣದಿಂದಾಗಿ ನಾನ್-ಸ್ಟಿಕ್ ಪ್ಯಾನ್‌ಗಳು ಬೆಂಡಾಗುತ್ತದೆ. ಇದು ನಿಮ್ಮ ನಾನ್-ಸ್ಟಿಕ್ ಪ್ಯಾನ್‌ಗಳನ್ನು ಬದಲಿಸಬೇಕಾದ ಸಮಯ ಎಂಬ ಸೂಚನೆಯಾಗಿದೆ. ಪಾತ್ರೆಗಳು ಈ ರೀತಿ ಬೆಂಡಾಗಿ ವಿರೂಪವಾದ ನಂತರ ಇದರಲ್ಲಿ ಆಹಾರ (Food) ಸರಿಯಾದ ರೀತಿಯಲ್ಲಿ ಮತ್ತು ಏಕರೂಪವಾಗಿ ಬೇಯುವುದಿಲ್ಲ. ಇಂಥಹಾ ಆಹಾರವನ್ನು ಸೇವಿಸುವುದು ಜೀರ್ಣ ಸಂಬಂಧಿತ ಸಮಸ್ಯೆಗಳನ್ನು ಉಂಟುಮಾಡಬಹುದು.

ಮಸುಕಾದ ಬಣ್ಣ
ನಿಯಮಿತ ಬಳಕೆ ಮತ್ತು ಶಾಖದಿಂದಾಗಿ ಪ್ರತಿ ಅಡುಗೆ ಪಾತ್ರೆಗಳು ಮಸುಕಾಗುತ್ತವೆ. ಹಾಗೆಯೇ ನಾನ್-ಸ್ಟಿಕ್ ಪ್ಯಾನ್‌ನ ಬಣ್ಣ (Coloro)ವು ಮಸುಕಾಗುತ್ತಾ ಹೋದಂತೆ ಇದು ಬಳಕೆಗೆ ಸೂಕ್ತವಾಗಿಲ್ಲ ಎಂದರ್ಥ.ಇದರಿಂದ ಲೇಪನದ ಅವಶೇಷಗಳು ಆಹಾರದೊಂದಿಗೆ ಮಿಶ್ರಣವಾಗಬಹುದು ಮತ್ತು ಅಸ್ವಸ್ಥತೆಯನ್ನು ಉಂಟುಮಾಡಬಹುದು ಎಂದು ತಿಳಿದುಬಂದಿದೆ.

ನಾನ್-ಸ್ಟಿಕ್ ಪ್ಯಾನ್ ಅಡುಗೆಗೆ ಚಂದ, ಆದ್ರೆ ಆರೋಗ್ಯಕ್ಕೆ..? ಇದನ್ನು ಓದಿ!

ಪಾತ್ರೆಯಲ್ಲಿ ಗೀರುಗಳು
ಪಾತ್ರೆಯಲ್ಲಿ ಕಂಡುಬರುವ ಗೀರುಗಳು ಅಥವಾ ಸ್ಕ್ರಾಚ್ ನೀವು ಪ್ಯಾನ್ (Pan) ಅನ್ನು ಬದಲಿಸಬೇಕಾದ ಎಚ್ಚರಿಕೆಯ ಸಂಕೇತವಾಗಿದೆ. ಅಧ್ಯಯನಗಳ ಪ್ರಕಾರ, ನಾನ್-ಸ್ಟಿಕ್ ಪ್ಯಾನ್‌ಗಳನ್ನು ಟೆಫ್ಲಾನ್ ಬಳಸಿ ತಯಾರಿಸಲಾಗುತ್ತದೆ. ಇದು ಪರ್ಫ್ಲೋರೊಕ್ಟಾನೋಯಿಕ್ ಆಮ್ಲ ಎಂಬ ಅಪಾಯಕಾರಿ ರಾಸಾಯನಿಕವನ್ನು ಹೊಂದಿರುತ್ತದೆ. ಇದು ಕ್ಯಾನ್ಸರ್ ಗೂ ಕಾರಣವಾಗಬಹುದು ಎಂದು ಸಾಬೀತಾಗಿದೆ. ಆದ್ದರಿಂದ, ಪಾತ್ರೆಯಲ್ಲಿ ಗೀರುಗಳು ಕಂಡು ಬಂದಾಗ ಇದು ಟೆಫ್ಲಾನ್ ಮೇಲ್ಮೈಗೆ ಹಾನಿಯಾಗಿದೆ ಮತ್ತು ಇದರಿಂದ ರಾಸಾಯನಿಕಗಳು ನಿಮ್ಮ ಆಹಾರಕ್ಕೆ ಸೇರಿ ಆರೋಗ್ಯ (Health)ಕ್ಕೆ ತೊಂದರೆಯಾಗಬಹುದು ಎಂಬುದರ ಸೂಚನೆಯಾಗಿದೆ. ಶೆಫ್‌ಗಳ ಪ್ರಕಾರ. ನಾನ್-ಸ್ಟಿಕ್ ಪಾತ್ರೆಗಳನ್ನು ನೀವು ಪ್ರತಿದಿನ ಅಥವಾ ವಾರಕ್ಕೆ 3-4 ಬಾರಿ ಬಳಸುತ್ತಿದ್ದರೆ, ಅದನ್ನು 4-5 ವರ್ಷಗಳ ನಂತರ ಬದಲಾಯಿಸಲೇಬೇಕು. 

ನಾನ್ ಸ್ಟಿಕ್ ಪ್ಯಾನ್‌ಗಳನ್ನು ಸ್ವಚ್ಛಗೊಳಿಸುವುದು ಹೇಗೆ ?
ಬಾಣಸಿಗ ಸಂಜೀವ್ ಕಪೂರ್ ಅವರು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿರುವ ಪೋಸ್ಟ್ ಪ್ರಕಾರ, ‘ನಾನ್ ಸ್ಟಿಕ್ ಪ್ಯಾನ್‌ಗಳನ್ನು ಬಳಸಿದ ತಕ್ಷಣ ಅವುಗಳನ್ನು ತೊಳೆಯಬೇಡಿ. ಬಿಸಿಯಾಗಿರುವ ಪಾತ್ರೆ ತಣ್ಣಗಾದ ಬಳಿಕ ಸೋಪ್ ಅಥವಾ ದ್ರಾವಣದಿಂದ ತೊಳೆಯಿರಿ." ಅಲ್ಲದೆ, ಪ್ಯಾನ್‌ಗಳನ್ನು ಸ್ವಚ್ಛಗೊಳಿಸಲು ಯಾವಾಗಲೂ ನಾನ್ ಮೆಟಾಲಿಕ್ ಸ್ಕ್ರಬ್ಬರ್ ಅನ್ನು ಬಳಸಿ.

click me!