Health Tips: ಎಲ್ಲದರ ಬಗೆಗೂ ಆತಂಕವೇ? ಸಿಡಿಯುವ ನರಗಳನ್ನ ಶಾಂತಗೊಳಿಸೋಕೆ ಹೀಗ್ಮಾಡಿ

By Suvarna News  |  First Published Jun 8, 2023, 1:58 PM IST

ಅತಿಯಾದ ಯೋಚನೆಯಿಂದ ನರಗಳು ಹೆಚ್ಚು ಕ್ರಿಯಾಶೀಲಗೊಳ್ಳುತ್ತವೆ. ಅವುಗಳ ಚಟುವಟಿಕೆ ವಿಪರೀತವಾದಾಗ ಮನಸ್ಥಿತಿಯ ಮೇಲೆ ಪರಿಣಾಮ ಉಂಟಾಗುತ್ತದೆ. ಉದ್ರೇಕ, ಕೋಪ, ಆತಂಕ ಹೆಚ್ಚಾಗುತ್ತದೆ. ನರಗಳನ್ನು ಶಾಂತಗೊಳಿಸಲು 4-7-8 ವಿಧಾನದ ಉಸಿರಾಟದ ವ್ಯಾಯಾಮ ಅತ್ಯಂತ ಪರಿಣಾಮಕಾರಿ.
 


ಯೋಚಿಸಿ ಯೋಚಿಸಿ ಕೆಲವೊಮ್ಮ ತಲೆಚಿಟ್ಟು ಹಿಡಿದಿದೆ ಎನ್ನುತ್ತೇವೆ, ತಲೆ ಸಿಡಿಯುವಂತಾಗುವ ಅನುಭವವಾಗುವುದೂ ಹೊಸದಲ್ಲ. ನಿಜಕ್ಕೂ ಅತಿಯಾಗಿ ಯೋಚಿಸಿದಾಗ ನರಗಳ ಮೇಲೆ ಪ್ರಭಾವ ಉಂಟಾಗುತ್ತದೆ. ಅವು ಅತಿಯಾಗಿ ಕ್ರಿಯಾಶೀಲಗೊಂಡಾಗ “ವಿಶ್ರಾಂತಿಯಿಲ್ಲದ’ ಭಾವನೆ ಬರುತ್ತದೆ. ನರಗಳು ಉದ್ರೇಕಗೊಂಡಾಗ ಮನಸ್ಸು ಸಹ ಉದ್ರೇಕಗೊಂಡು ಅದಕ್ಕೆ ತಕ್ಕಂತೆ ವರ್ತಿಸುತ್ತೇವೆ. ಸಿಕ್ಕಾಪಟ್ಟೆ ಕೋಪ ಬಂದು ಎಗರಾಡುವುದು, ಕೆಲವು ಸನ್ನಿವೇಶಗಳಲ್ಲಿ ಒತ್ತಡ ನಿಭಾಯಿಸಲಾಗದೆ ಕೈ, ಕಾಲು ನಡುಗುವುದು, ಜೋರಾಗಿ ಮಾತನಾಡುವಾಗ ದನಿ ನಡುಗುವುದು ಇವೆಲ್ಲವೂ ಇದೇ ಕಾರಣಕ್ಕೆ. ಮುಖ್ಯವಾಗಿ ಮಿದುಳಿನ ನರಗಳಿಗೆ ತೀರ ಚಿಂತೆ ಹಚ್ಚಿದಾಗ ಮನಸ್ಥಿತಿಯ ಮೇಲೆ ಭಾರೀ ಪರಿಣಾಮವುಂಟಾಗುತ್ತದೆ. ಹೀಗಾಗಿ, ನರಗಳನ್ನು ಶಾಂತವಾಗಿಡುವುದು ಅತಿ ಅಗತ್ಯ. ಇಂದಿನ ದಿನಗಳಲ್ಲಿ ಸಾಮಾನ್ಯವಾಗಿ ಎಲ್ಲರಿಗೂ ಪ್ರಾಣಾಯಾಮ ಮತ್ತು ವಿವಿಧ ರೀತಿಯ ಉಸಿರಾಟದ ಚಟುವಟಿಕೆ ಮೂಲಕ ನರಗಳನ್ನು ಶಾಂತಗೊಳಿಸಬಹುದು ಎನ್ನುವುದು ತಿಳಿದಿದೆ. ಅದನ್ನು ಎಷ್ಟು ಮಂದಿ ಜಾರಿಗೊಳಿಸುತ್ತಾರೋ ಇಲ್ಲವೋ ಗೊತ್ತಿಲ್ಲ. ಒಟ್ಟಿನಲ್ಲಿ ಈ ವಿಚಾರವಂತೂ ಬಹಳಷ್ಟು ಜನರಿಗೆ ಗೊತ್ತಿದೆ. ಇತ್ತೀಚಿನ ಮತ್ತೊಂದು ಅಧ್ಯಯನದ ಪ್ರಕಾರ, 4-7-8 ವಿಧಾನದ ಉಸಿರಾಟದ ವ್ಯಾಯಾಮ ನರಗಳನ್ನು ಶಾಂತಗೊಳಿಸಲು ಅತ್ಯುತ್ತಮವಾಗಿದೆ.  

ಆತಂಕ (Anxiety), ಒತ್ತಡ (Stress) ಇಂದು ಎಲ್ಲರನ್ನೂ ಕಾಡುವ ಸಮಸ್ಯೆ. ಜೀವನಶೈಲಿ ಬದಲಾವಣೆ, ಆಧುನಿಕ ಜೀವನದ ಕೊಡುಗೆಯಿಂದ ಸೃಷ್ಟಿಯಾಗಿರುವ ಆತಂಕ, ಒತ್ತಡಗಳನ್ನು ಸುಲಭವಾಗಿ ನಿವಾರಿಸಿಕೊಳ್ಳುವುದು ಎಲ್ಲರಿಂದಲೂ ಸಾಧ್ಯವಿಲ್ಲದ ಮಾತು. ಇದಕ್ಕಾಗಿ ಹಲವರು ಹಲವು ರೀತಿಯ ಪ್ರಾಣಾಯಾಮ (Pranayama), ಯೋಗ (Yoga), ಧ್ಯಾನಗಳ (Meditation) ಮೊರೆ ಹೋಗುತ್ತಾರೆ. ಇವೆಲ್ಲವೂ ಸಾಕಷ್ಟು ಪ್ರಯೋಜನಕಾರಿಯಾಗಿವೆ.

Latest Videos

undefined

Breathing Tips : ಉಸಿರಾಡೋದೊಂದು ಕಲೆ, ಸರಿಯಾಗಿ ಉಸಿರಾಡುತ್ತಿದ್ದೀರಾ?

ಮೆಡಿಕಲ್ ನ್ಯೂಸ್ ನಲ್ಲಿ ಪ್ರಕಟವಾದ ಒಂದು ಹೊಸ ಅಧ್ಯಯನದ ಪ್ರಕಾರ, ಆತಂಕದ ಸಮಸ್ಯೆ ನಿವಾರಣೆಗೆ 4-7-8 ವಿಧಾನದ ಉಸಿರಾಟದ ಪ್ರಕ್ರಿಯೆ (Breathing Technique) ಭಾರೀ ಪ್ರಯೋಜನಕಾರಿಯಾಗಿದೆ. ಈ ವಿಧಾನವನ್ನು ಅನುಸರಿಸುವುದು ಸುಲಭ. ಇದರಿಂದ ಆತಂಕವನ್ನು ಬಹಳ ಪರಿಣಾಮಕಾರಿಯಾಗಿ ನಿವಾರಣೆ ಮಾಡಿಕೊಳ್ಳಬಹುದು. ನರಗಳ ಅತಿಯಾದ ಚಟುವಟಿಕೆಗೆ ಬ್ರೇಕ್ ಬೀಳುತ್ತದೆ. ಅವು ಶಾಂತಗೊಳ್ಳುತ್ತವೆ. ಪರಿಣಾಮವಾಗಿ, ನಾವೇನು ತಲೆ ಸಿಡಿಯುವಂತಾಗುತ್ತಿದೆ ಎನ್ನುತ್ತೀವೋ ಅದು ಕಡಿಮೆಯಾಗುತ್ತದೆ. ಜತೆಗೆ, ನಿದ್ರೆ ಬಾರದ (Sleep Disorder) ಸಮಸ್ಯೆಗೂ ಸುಲಭವಾಗಿ ಪರಿಹಾರ ದೊರೆಯುತ್ತದೆ. 

ಪ್ರಾಣಾಯಾಮ ಆಧರಿಸಿ ರೂಪುಗೊಂಡ ವಿಧಾನ: ಜಾನಿ ಬ್ರೌನ್ ಎನ್ನುವವರು ಈ ಪದ್ಧತಿಯ ಕುರಿತು ಮಾಹಿತಿ ನೀಡಿದ್ದಾರೆ. “ಪಾರಂಪರಿಕ ಯೋಗ ವಿಧಾನವಾದ ಪ್ರಾಣಾಯಾಮವನ್ನು ಆಧರಿಸಿ ಈ ಪದ್ಧತಿಯನ್ನು ಗುರುತಿಸಲಾಗಿದೆ’ ಎಂದವರು ಟ್ವೀಟ್ ಮಾಡಿದ್ದಾರೆ. ಇದರಿಂದ ರಕ್ತನಾಳಗಳಲ್ಲಿ (Blood Vessel) ರಕ್ತದ ಹರಿವು ಚೆನ್ನಾಗಿ ಆಗುತ್ತದೆ. ಆಳವಾದ (Deep) ಉಸಿರನ್ನು ತೆಗೆದುಕೊಳ್ಳುವ ಪ್ರಕ್ರಿಯೆ ಪ್ಯಾರಾಸಿಂಪಥೆಟಿಕ್ ನರ ವ್ಯವಸ್ಥೆಯನ್ನು ಒಳಗೊಳ್ಳುತ್ತದೆ. ದೇಹ (Body) ಮನಸ್ಸನ್ನು ಬೆಸೆಯುವಲ್ಲಿ ಇದು ಸಹಕಾರಿಯಾಗಿದೆ ಎಂದೂ ಅವರು ತಿಳಿಸಿದ್ದಾರೆ. ಆಳವಾದ ಉಸಿರಾಟದಿಂದಾಗಿ ಬಾಹ್ಯ ಒತ್ತಡಗಳಿಂದ ಮುಕ್ತರಾಗಿ ರಿಲ್ಯಾಕ್ಸ್ (Relax) ಹೊಂದಲು ಸಾಧ್ಯವಾಗುತ್ತದೆ. 

Health Tips : ಎರಡು ಮೆಟ್ಟಿಲು ಹತ್ತಿದ್ರೂ ಉಬ್ಬರ ಬರುತ್ತಾ? ಈ ಟಿಪ್ಸ್ ಫಾಲೋ ಮಾಡಿ

ರಿಲ್ಯಾಕ್ಸ್ ರಿಲ್ಯಾಕ್ಸ್: ನೇರವಾಗಿ ಕುಳಿತುಕೊಂಡಾದರೂ ಸರಿ, ಮಲಗಿಕೊಂಡಾದರೂ ಸರಿ. ಬೆನ್ನು ನೇರವಾಗಿರುವಂತೆ ನೋಡಿಕೊಂಡು ಈ ಪ್ರಾಣಾಯಾಮವನ್ನು ಮಾಡಬಹುದು. ಉಸಿರನ್ನು 4 ಸೆಕೆಂಡ್ ಗಳ ಕಾಲ ಒಳಗೆಳೆದುಕೊಳ್ಳುವಾಗ ಅದು ಎಲ್ಲೆಲ್ಲಿ ಪ್ರವೇಶಿಸುತ್ತದೆ ಎನ್ನುವ ಬಗ್ಗೆ ಗಮನ ನೀಡಬೇಕು. ಬಳಿಕ, ಅದನ್ನು ಅಲ್ಲಿಯೇ ನಿಲ್ಲಿಸಿ 7ರವರೆಗೆ ಕೌಂಟ್ ಮಾಡಬೇಕು. ಈ ಸಮಯದಲ್ಲಿ ಆಮ್ಲಜನಕ (Oxigen) ರಕ್ತನಾಳಗಳಲ್ಲಿ ಪ್ರವೇಶಿಸುವುದರೊಂದಿಗೆ ರಿಲ್ಯಾಕ್ಸ್ ಆಗುತ್ತದೆ. ಕೊನೆಯ ಹಂತದಲ್ಲಿ 8 ಸೆಕೆಂಡ್ ಕಾಲ ಬಾಯಿಯ (Mouth) ಮೂಲಕ ಉಸಿರನ್ನು ಹೊರಗೆ ಬಿಡಬೇಕು. ಈ ಸಮಯದಲ್ಲಿ ಎಲ್ಲ ಒತ್ತಡಗಳನ್ನು ದೇಹದಿಂದ ಹೊರಗೆ ಕಳಿಸುತ್ತಿರುವಂತೆ ವಿಷುವಲೈಸ್ (Visualize) ಮಾಡಿಕೊಳ್ಳಬೇಕು. ನಿಮಗೆ ಎಲ್ಲೆಲ್ಲಿ ಬೇಕೋ ಅಲ್ಲಿ ಗಮನ ಕೇಂದ್ರೀಕರಿಸಿ ರಿಲ್ಯಾಕ್ಸ್ ಆಗುವಂತೆ ನೋಡಿಕೊಳ್ಳಬೇಕು. ಕನಿಷ್ಠ 4 ಬಾರಿ ಈ ಪ್ರಕ್ರಿಯೆ ಮಾಡುವುದರಿಂದ ಪ್ಯಾರಾಸಿಂಪಥೆಟಿಕ್ ನರ ವ್ಯವಸ್ಥೆ (Nervous System) ಸಂಪೂರ್ಣವಾಗಿ ಎಂಗೇಜ್ ಆಗುತ್ತದೆ. 

click me!