
ನಾನು, ನನ್ನ ಜೊತೆಗೊಂದು ಮೊಬೈಲ್. ಇಷ್ಟಿದ್ರೆ ಸಾಕು. ಇಡೀ ದಿನವನ್ನು ಜನರು ಖುಷಿಯಿಂದ ಕಳೆಯುತ್ತಾರೆ. ಮೊಬೈಲ್ ನಲ್ಲಿ ಇಡೀ ಜಗತ್ತಿದೆ. ಎಲ್ಲವನ್ನು ಬೆರಳಿನ ತುದಿಯಲ್ಲಿ ನೋಡುವ ಹಾಗೂ ಮಾಡುವ ಅವಕಾಶ ಈಗಿದೆ. ಮಕ್ಕಳಿಂದ ಹಿಡಿದು ಅನೇಕ ವೃದ್ಧರವರೆಗೆ ಬಹುತೇಕರಿಗೆ ಟೈಂ ಪಾಸ್ ಅಂದ್ರೆ ಅದು ಮೊಬೈಲ್. ಅಕ್ಕಪಕ್ಕದಲ್ಲಿ ಯಾರೇ ಇರಲಿ, ಏನೇ ಇರಲಿ, ಜನರು ಅದಕ್ಕೆ ಮಹತ್ವ ನೀಡೋದಿಲ್ಲ. ಮನೆಯಲ್ಲಿರುವ ವ್ಯಕ್ತಿಗಳು ಅಕ್ಕಪಕ್ಕದಲ್ಲೇ ಕುಳಿತು ಚಾಟ್ ಮಾಡುವ ಸ್ಥಿತಿ ಈಗ ನಿರ್ಮಾಣವಾಗಿದೆ.
ಮೊಬೈಲ್ (Mobile) ನಲ್ಲಿ ಬರಿ ಚಾಟಿಂಗ್ ಮಾತ್ರವಲ್ಲ ಗೇಮ್ ಸೇರಿದಂತೆ ಅನೇಕಾನೇಕ ಕೆಲಸಗಳನ್ನು ಮಾಡ್ತಾರೆ ಜನರು. ಸಾಮಾಜಿಕ ಜಾಲತಾಣಗಳನ್ನು ಸ್ಕ್ರೋಲ್ (Scroll) ಮಾಡ್ತಾ ಹೋದಂತೆ ಸಮಯ ಸರಿದಿದ್ದು ಜನರಿಗೆ ತಿಳಿಯೋದಿಲ್ಲ. ಈ ಮೊಬೈಲ್ ಗೇಮಿಂಗ್ (Gaming) , ಸಾಮಾಜಿಕ ಜಾಲತಾಣ ವೀಕ್ಷಣೆ ಈಗಿನ ದಿನಗಳಲ್ಲಿ ಹೊಸ ಹೊಸ ರೋಗಕ್ಕೆ ಕಾರಣವಾಗ್ತಿದೆ. ನೀವೂ ಮೊಬೈಲ್ ವೀಕ್ಷಣೆ ಮಾಡ್ತಿದ್ದರೆ ಯಾವೆಲ್ಲ ಸಮಸ್ಯೆ ನಿಮ್ಮನ್ನು ಕಾಡುತ್ತೆ ಎಂಬುದನ್ನು ತಿಳಿದುಕೊಳ್ಳಿ.
ತೀರ ತುರ್ತು ಇದ್ದರೆ ಮಾತ್ರ ಐಸಿಯುಗೆ ದಾಖಲು: ಮೊದಲ ಬಾರಿ ಕೇಂದ್ರ ಸರ್ಕಾರ ಮಾರ್ಗಸೂಚಿ
ನಿರಂತರ ಮೊಬೈಲ್ ವೀಕ್ಷಣೆಯಿಂದ ನಿಮ್ಮನ್ನು ಕಾಡುತ್ತೆ ಈ ಸಮಸ್ಯೆ :
ಕುತ್ತಿಗೆ ನೋವು : ಬೆನ್ನುಮೂಳೆಯ ಶಸ್ತ್ರಚಿಕಿತ್ಸಕರ ಪ್ರಕಾರ, ಸ್ಮಾರ್ಟ್‌ಫೋನ್‌ನಲ್ಲಿ ಪೋಸ್ಟ್‌ಗಳನ್ನು ನೋಡುವಾಗ ಅಥವಾ ಸ್ಕ್ರೋಲಿಂಗ್ ಮಾಡುವಾಗ ತಲೆ ಮತ್ತು ಕುತ್ತಿಗೆ ಬಾಗಿರುತ್ತದೆ. ಕುತ್ತಿಗೆಯ ಮೇಲೆ ಹೆಚ್ಚಿನ ಒತ್ತಡ ಬೀಳುತ್ತದೆ. ಇಂತಹ ಪರಿಸ್ಥಿತಿಯು ದೀರ್ಘಕಾಲದವರೆಗೆ ಮುಂದುವರಿದರೆ ಕುತ್ತಿಗೆಯ ಸ್ನಾಯುಗಳು ಊದಿಕೊಳ್ಳುತ್ತವೆ. ಇದರಿಂದ ಕಿರಿಕಿರಿಯಾಗಲು ಶುರುವಾಗುತ್ತದೆ. ಇದನ್ನು ಟೆಕ್ಸ್ಟ್ ನೆಕ್ ಎಂದು ಕರೆಯಲಾಗುತ್ತದೆ. ನಮ್ಮ ಕಣ್ಣಿನ ನೇರಕ್ಕೆ ಮೊಬೈಲ್ ಇಟ್ಟು ವೀಕ್ಷಣೆ ಮಾಡೋದ್ರಿಂದ ಈ ಸಮಸ್ಯೆ ನಮ್ಮನ್ನು ಕಾಡೋದಿಲ್ಲ. ಅದೇ ನಾವು ಕೆಳಗಿಟ್ಟು ನೋಡಿದ್ರೆ ತಲೆಬುರುಡೆಯ ಬುಡದ ಬಳಿ ಮೂಳೆಯ ಹೆಚ್ಚುವರಿ ಉಂಡೆ ರೂಪುಗೊಳ್ಳುತ್ತದೆ.
ಸ್ನಾನ ಮಾಡುವಾಗ ಈ ಭಾಗ ಸ್ವಚ್ಛಗೊಳಿಸಲು ಮರೆಯದಿರಿ, ಇಲ್ಲಾಂದ್ರೆ ಕಾಯಿಲೆ ಕಾಡೋದು ಗ್ಯಾರಂಟಿ!
ಗೇಮಿಂಗ್ ಡಿಸಾರ್ಡರ್ : ಈಗಿನ ದಿನಗಳಲ್ಲಿ ಆನ್ಲೈನ್ ಗೇಮಿಂಗ್ ಹೆಚ್ಚಾಗಿದೆ. ವಿಶ್ವ ಆರೋಗ್ಯ ಸಂಸ್ಥೆ ಪ್ರಪಂಚದಾದ್ಯಂತ ಅತಿಯಾದ ಆನ್‌ಲೈನ್ ಗೇಮಿಂಗ್ ಅನ್ನು ಮಾನಸಿಕ ಕಾಯಿಲೆ ಎಂದು ಒಪ್ಪಿಕೊಂಡಿದೆ. ಗೇಮಿಂಗ್ ಹುಚ್ಚಿಗೆ ಬೀಳುವ ಜನರು ದೈನಂದಿನ ಕೆಲಸಕ್ಕಿಂತ ವಿಡಿಯೋ ಗೇಮ್ ನಲ್ಲಿ ಹೆಚ್ಚಿನ ಸಮಯ ಕಳೆಯುತ್ತಾರೆ. ಈ ಗೇಮಿಂಗ್ ಅಭ್ಯಾಸವುಳ್ಳ ವ್ಯಕ್ತಿಯ ನಿದ್ರೆ ಸಮಯ ನಿಧಾನವಾಗಿ ಕಡಿಮೆ ಆಗುತ್ತದೆ. ಸಮಾಜದ ಜೊತೆ ಆತ ಬೆರೆಯೋದಿಲ್ಲ. ಮೊಬೈಲ್ ನಲ್ಲಿ ಆಟವಾಡುವ ಶೇಕಡಾ ಹತ್ತರಷ್ಟು ಮಂದಿ ಈ ಗೇಮಿಂಗ್ ಡಿಸಾರ್ಡರ್ ಗೆ ಒಳಗಾಗ್ತಾರೆ ಎಂದು ತಜ್ಞರು ಹೇಳಿದ್ದಾರೆ.
ಮೊಬೈಲ್ ಗೇಮಿಂಗ್ ಒಂದು ಚಟವಿದ್ದಂತೆ. ಕೆಟ್ಟ ಚಟವನ್ನು ಬಿಡಿಸಿದಂತೆ ಇದನ್ನು ಬಿಡಿಸಬೇಕು. ಇದಕ್ಕೆ ಔಷಧಿಯನ್ನೂ ನೀಡಲಾಗುತ್ತದೆ. ಮೊಬೈಲ್ ನಿಂದ ಜನರನ್ನು ದೂರವಿಡಲಾಗುತ್ತದೆ. ಚಿಕಿತ್ಸೆ ಪಡೆದ ಆರರಿಂದ ಹನ್ನೆರಡು ತಿಂಗಳಲ್ಲಿ ಚಿಕಿತ್ಸೆ ಫಲ ನೀಡುತ್ತದೆ.
ನೋಮೋಫೋಬಿಯಾ ಸಮಸ್ಯೆ : ದೀರ್ಘಕಾಲ ಮೊಬೈಲ್ ಬಳಕೆ ಮಾಡದೆ ಇದ್ದಾಗ ಈ ಸಮಸ್ಯೆ ನಿಮ್ಮನ್ನು ಕಾಡುತ್ತದೆ. ಒಂದು ಸಮೀಕ್ಷೆಯ ಪ್ರಕಾರ, ಸುಮಾರು 53 ಪ್ರತಿಶತ ಜನರು ಮೊಬೈಲ್ ಫೋನ್‌ಗಳನ್ನು ಬಳಸದಿದ್ದರೆ ಪ್ರಕ್ಷುಬ್ಧತೆಯನ್ನು ಅನುಭವಿಸಲು ಪ್ರಾರಂಭಿಸುತ್ತಾರೆ. ವಿಪರೀತ ಪರಿಸ್ಥಿತಿಗಳಲ್ಲಿ ಅವರು ಪ್ಯಾನಿಕ್ ಅಟ್ಯಾಕ್‌ಗೆ ಒಳಗಾಗಬಹುದು.
ಹೆಬ್ಬೆರಳಿನ ನೋವು : ಸ್ಮಾರ್ಟ್ಫೋನ್ ಬಳಕೆಯಿಂದ ಅನೇಕರಿಗೆ ಹೆಬ್ಬೆರಳಿನಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಸುಮಾರು 43 ಪ್ರತಿಶತದಷ್ಟು ಜನರು ಹೆಬ್ಬೆರಳಿನ ಸಮಸ್ಯೆ ಅನುಭವಿಸುತ್ತಾರೆ ಎಂದು ತಜ್ಞರು ಹೇಳಿದ್ದಾರೆ. ಬರಿ ಬೆರಳು ಮಾತ್ರವಲ್ಲ ಮಣಿಕಟ್ಟು ಮತ್ತು ಮೊಣಕೈ ನೋವು, ಊತ ಕೂಡ ಇದರಲ್ಲಿ ಕಾಣಿಸಿಕೊಳ್ಳುತ್ತದೆ. ಹೊಸ ವರ್ಷದಲ್ಲಿ ಈ ಎಲ್ಲ ಸಮಸ್ಯೆ ನಿಮ್ಮನ್ನು ಕಾಡಬಾರದು ಅಂದ್ರೆ ಮೊದಲು ನೀವು ಮೊಬೈಲ್ ಬಳಕೆ ಕಡಿಮೆ ಮಾಡಿ. ಹಾಗೆ ಮೊಬೈಲ್ ಬಳಸುವ ಸಮಯದಲ್ಲಿ ಮಧ್ಯೆ ಮಧ್ಯೆ ವಿಶ್ರಾಂತಿ ಪಡೆಯಿರಿ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.