ನೀರನ್ನು ಜೀವಜಲ ಎಂದೇ ಕರೆಯುತ್ತಾರೆ. ನಮ್ಮ ದೇಹಕ್ಕೆ ಶಕ್ತಿ ನೀಡುವ ಇದು ನಮ್ಮ ಪ್ರಾಣ ಅಂದ್ರೆ ತಪ್ಪಾಗೋದಿಲ್ಲ. ಗುಟುಕು ನೀರು ಸಿಗದೆ ಹೋದಾಗ ನೀರಿನ ಮಹತ್ವ ಗೊತ್ತಾಗುತ್ತೆ. ಅದೇನೇ ಇರಲಿಬಾಯಾರಿಕೆ ಆಗಿಲ್ಲ, ಕೆಲಸವಿದೆ ಎನ್ನುವ ಕಾರಣಕ್ಕೆ ಪ್ರತಿ ದಿನ ಕಡಿಮೆ ನೀರು ಕುಡಿಯೋರು ನೀವಾಗಿದ್ರೆ ಇಂದೇ ಈ ಅಭ್ಯಾಸ ಬಿಡಿ. ಇಲ್ಲವೆಂದ್ರೆ ಏನಾಗುತ್ತೆ ಗೊತ್ತಾ?
ನೀರು ನಮ್ಮ ದೇಹಕ್ಕೆ ಎಷ್ಟು ಅಗತ್ಯ ಎನ್ನುವ ಸಂಗತಿ ಎಲ್ಲರಿಗೂ ತಿಳಿದಿದೆ. ಆಹಾರ ಸೇವನೆ ಮಾಡದೆ ಮೂರ್ನಾಲ್ಕು ದಿನ ಬದುಕಿರಬಹುದು. ಆದ್ರೆ ನೀರಿಲ್ಲದೆ ಒಂದು ದಿನ ಇರೋದು ಕೂಡ ಕಷ್ಟ. ಪ್ರತಿ ದಿನ ನಾವು ಎಷ್ಟು ನೀರನ್ನು ಸೇವನೆ ಮಾಡಬೇಕು ಎನ್ನುವ ಬಗ್ಗೆ ತಜ್ಞರು ಆಗಾಗ ಮಾಹಿತಿ ನೀಡ್ತಿರುತ್ತಾರೆ. ಎರಡರಿಂದ ಮೂರು ಲೀಟರ್ ನೀರು ಪ್ರತಿ ದಿನ ನಮ್ಮ ದೇಹ ಸೇರಬೇಕು. ನೀರಿನ ಸೇವನೆಯಿಂದ ನಮ್ಮ ದೇಹ ಹೈಡ್ರೇಟ್ ಆಗುವುದಲ್ಲದೆ ದೇಹದಲ್ಲಿರುವ ಎಲ್ಲ ಕಲ್ಮಷ ಹೊರಗೆ ಹೋಗುತ್ತದೆ. ನೀರು ಆರೋಗ್ಯಕ್ಕೆ ಒಳ್ಳೆಯದು ಎನ್ನುವ ಕಾರಣಕ್ಕೆ ಅತಿಯಾಗಿ ನೀರು ಸೇವನೆ ಮಾಡುವುದು ಒಳ್ಳೆಯದಲ್ಲ. ದಿನಕ್ಕೆ ನಾಲ್ಕಕ್ಕಿಂತ ಹೆಚ್ಚು ಲೀಟರ್ ನೀರು ಸೇವನೆ ಆರೋಗ್ಯಕ್ಕೆ ಹಾನಿಯುಂಟು ಮಾಡುತ್ತದೆ. ಅದೇ ರೀತಿ ಪ್ರತಿ ದಿನ ನೀವು ಒಂದು ಲೀಟರ್ ಗಿಂತಲೂ ಕಡಿಮೆ ನೀರು ಸೇವನೆ ಮಾಡ್ತಿದ್ದೀರಿ ಅಂದ್ರೆ ಅದು ಕೂಡ ಅಪಾಯಕಾರಿಯೇ ಆಗಿದೆ. ಅತಿ ಕಡಿಮೆ ನೀರು ಸೇವನೆ ಮಾಡುವವರು ತಮ್ಮ ಸಾವನ್ನು ಬೇಗ ತಂದುಕೊಳ್ತಾರೆ ಎಂದು ಅಧ್ಯಯನವೊಂದರಲ್ಲಿ ಹೇಳಲಾಗಿದೆ.
ಅಮೆರಿಕಾ (America ) ದ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಹೆಲ್ತ್ ಈ ಬಗ್ಗೆ ಹೊಸ ಸಂಶೋಧನೆ (Research) ನಡೆಸಿದೆ. ಕಡಿಮೆ ನೀರು ಕುಡಿಯುವ ಜನರು, ಹೈಡ್ರೇಟ್ (Hydrate) ಆಗಿರು ಯುವಕರಿಗಿಂತ ಬೇಗ ವಯಸ್ಸಾದಂತೆ ಕಾಣುತ್ತಾರೆ. ಅಕಾಲಿಕ ಮರಣದ ಅಪಾಯವೂ ಅವರಿಗೆ ಹೆಚ್ಚು ಎಂದು ಅಧ್ಯಯನದಲ್ಲಿ ಪತ್ತೆಯಾಗಿದೆ. ದೇಹ ನಿರ್ಜಲೀಕರಣವಾದಲ್ಲಿ ಖಾಯಿಲೆಗಳು ಕಾಡುವುದು ಹೆಚ್ಚು ಎಂಬುದು ಇದ್ರಿಂದ ಬಹಿರಂಗವಾಗಿದೆ. ಈ ಅಧ್ಯಯನದಲ್ಲಿ 45 ರಿಂದ 66 ವರ್ಷ ವಯಸ್ಸಿನ ಜನರು ಪಾಲ್ಗೊಂಡಿದ್ದರು. ಇವರ ನಂತರ 70 ರಿಂದ 90 ವರ್ಷ ವಯಸ್ಸಿನ ಜನರ ಮೇಲೆ ಮುಂದಿನ ಪರೀಕ್ಷೆಗಳನ್ನು ನಡೆಸಲಾಯಿತು.
undefined
ಕುಡಿದ ಮರುದಿನವೂ ಹ್ಯಾಂಗೋವರ್ ಬಿಟ್ಟಿಲ್ಲವೇ? ಸಹಜಸ್ಥಿತಿಗೆ ಮರಳಲು ಇಲ್ಲಿದೆ ಟಿಪ್ಸ್!
ಅತಿ ಕಡಿಮೆ ನೀರು ಸೇವನೆಯಿಂದ ಏನಾಗುತ್ತೆ? : ಸಂಶೋಧನೆಯ ಪ್ರಕಾರ, ದೇಹದಲ್ಲಿ ಸೋಡಿಯಂ ಪ್ರಮಾಣ ಹೆಚ್ಚಾಗಲು ಕಡಿಮೆ ನೀರು ಸೇವನೆಯೇ ಕಾರಣ. ಒಬ್ಬ ವ್ಯಕ್ತಿಯು ಕಡಿಮೆ ದ್ರವ ಪದಾರ್ಥ ಸೇವನೆ ಮಾಡಿದಾಗ ಅವನ ರಕ್ತದಲ್ಲಿ ಹೆಚ್ಚು ಸೋಡಿಯಂ ಕಂಡುಬರುತ್ತದೆ. ರಕ್ತದಲ್ಲಿ ಹೆಚ್ಚು ಸೋಡಿಯಂ ಹೊಂದಿರುವ ಜನರು ಇತರರಿಗಿಂತ ವೇಗವಾಗಿ ವಯಸ್ಸಾಗುತ್ತಾರೆ. ಅದೇ ಸಮಯದಲ್ಲಿ ಅವರಿಗೆ ಅಧಿಕ ಬಿಪಿ, ಕೊಲೆಸ್ಟ್ರಾಲ್ ಮತ್ತು ಸಕ್ಕರೆ ಖಾಯಿಲೆ ಕಾಡಲು ಶುರುವಾಗುತ್ತದೆ. ಇದ್ರ ಜೊತೆ ಇನ್ನೂ ಅನೇಕ ರೋಗಗಳು ಅವರನ್ನು ಬಾಧಿಸುತ್ತವೆ ಎಂದು ಸಂಶೋಧನೆಯಲ್ಲಿ ಹೇಳಲಾಗಿದೆ.
ನಮ್ಮ ರಕ್ತದಲ್ಲಿ ಎಷ್ಟಿರಬೇಕು ಸೋಡಿಯಂ? : ನಮ್ಮ ರಕ್ತದಲ್ಲಿ ಎಷ್ಟು ಸೋಡಿಯಂ ಇದ್ರೆ ಆರೋಗ್ಯಕ್ಕೆ ಒಳ್ಳೆಯದು ಎಂಬುದನ್ನು ಕೂಡ ಸಂಶೋಧನಾ ವರದಿಯಲ್ಲಿ ಹೇಳಲಾಗಿದೆ. ಒಬ್ಬ ಮನುಷ್ಯನ ಪ್ರತಿ ಒಂದು ಲೀಟರ್ ರಕ್ತದಲ್ಲಿ 142 ಮಿಲಿಮೋಲ್ ಸೋಡಿಯಂ ಇರಬೇಕು. ಇದು ಮೀರಿದ್ರೆ ಅನಾರೋಗ್ಯ ಶುರುವಾಗುತ್ತದೆ. ರಕ್ತದಲ್ಲಿ ಇದಕ್ಕಿಂತ ಹೆಚ್ಚು ಸೋಡಿಯಂ ಕಾಣಿಸಿಕೊಂಡಾಗ ಹೃದಯ ವೈಫಲ್ಯ, ಪಾರ್ಶ್ವವಾಯು, ಶ್ವಾಸಕೋಶದ ಕಾಯಿಲೆ, ಮಧುಮೇಹ ಮತ್ತು ಬುದ್ಧಿಮಾಂದ್ಯತೆ ಸೇರಿದಂತೆ ಅನೇಕ ಗಂಭೀರ ಕಾಯಿಲೆಗಳ ಅಪಾಯವನ್ನು ಎದುರಾಗುತ್ತದೆ.
ಕತ್ತಲೆಯಲ್ಲಿ ಮೊಬೈಲ್ ಫೋನ್ ನೋಡೋ ಚಾಳಿ ಇದ್ಯಾ? ಬ್ರೈನ್ ಟ್ಯೂಮರ್ ಆಗುತ್ತೆ ಹುಷಾರ್ !
ದೇಹದಲ್ಲಿ ನೀರು ಕಡಿಎಯಾದಾಗ, ಕೀಲು ನೋವು, ದೇಹದ ಉಷ್ಣಾಂಶದಲ್ಲಿ ಏರುಪೇರು ಆಗುತ್ತದೆ. ಇದು ಮಲಬದ್ಧತೆ, ಮೂತ್ರಪಿಂಡದಲ್ಲಿ ಕಲ್ಲು ಸೇರಿದಂತೆ ಕೆಲ ಸಮಸ್ಯೆ ತರುತ್ತದೆ.
ಕಡಿಮೆ ನೀರು ಸೇವನೆ ಮಾಡುವುದ್ರಿಂದ ರಕ್ತದಲ್ಲಿ ಸೋಡಿಯಂ ಪ್ರಮಾಣ ಹೆಚ್ಚಾಗಿ ಈ ಮೇಲಿನ ಸಮಸ್ಯೆ ಕಾಡುತ್ತೆ ಎಂದು ಸಂಶೋಧನೆ ಹೇಳಿದೆಯೇ ಹೊರತು, ಹೆಚ್ಚು ನೀರು ಕುಡಿಯೋದ್ರಿಂದ ಇದೆಲ್ಲ ಗುಣವಾಗುತ್ತೆ ಎಂಬ ವಾದವನ್ನು ಮುಂದಿಟ್ಟಿಲ್ಲ.