
ಮುಂಬೈ: ದಡಾರ ಅಥವಾ ಮೀಸಲ್ಸ್ ಪರಸ್ಪರ ವೇಗವಾಗಿ ಹರಡುವ ಒಂದು ಸೋಂಕಾಗಿದೆ. ದಡಾರ (measles) ಲಸಿಕೆಯು ಭಾರತದಲ್ಲಿ ಲಭ್ಯವಿದ್ದರೂ ಸಹ ಪ್ರತಿ ವರ್ಷ ಸಾವಿರಾರು ಮಕ್ಕಳು ಈ ರೋಗಕ್ಕೆ (Disease) ಬಲಿಯಾಗುತ್ತಾರೆ. ಇತ್ತೀಚೆಗೆ, ಮುಂಬೈ ಮೆಟ್ರೋಪಾಲಿಟನ್ ಪ್ರದೇಶದಲ್ಲಿ ದಡಾರದಿಂದ ಬಳಲುತ್ತಿದ್ದ 4 ಮಕ್ಕಳು (Children) ಸಾವನ್ನಪ್ಪಿದ್ದಾರೆ. ಇದು ಆರೋಗ್ಯ ಇಲಾಖೆಯಲ್ಲಿ ಕೋಲಾಹಲಕ್ಕೆ ಕಾರಣವಾಯಿತು. ದಡಾರ ರೋಗವು ವೇಗವಾಗಿ ಹರಡಬಹುದು ಎಂದು ಅಧಿಕಾರಿಗಳು ಹೇಳುತ್ತಾರೆ, ಇದರ ತಡೆಗಟ್ಟುವಿಕೆ ಮತ್ತು ವ್ಯಾಕ್ಸಿನೇಷನ್ ಬಹಳ ಮುಖ್ಯ, ಆದ್ದರಿಂದ ದಡಾರದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.
ವ್ಯಾಪಕವಾಗಿ ಹರಡುತ್ತಿದೆ ದಡಾರ ಕಾಯಿಲೆ
ಮಹಾರಾಷ್ಟ್ರದ ರಾಜಧಾನಿ ಮುಂಬೈನಲ್ಲಿ ಕಳೆದ ಕೆಲವು ದಿನಗಳಿಂದ ದಡಾರ ಕಾಯಿಲೆಯು ವ್ಯಾಪಕವಾಗಿ ಹರಡುತ್ತಿದೆ.
ಇದುವರೆಗೆ ಒಟ್ಟು 260 ರೋಗಿಗಳಲ್ಲಿ ದಡಾರ ಕಾಯಿಲೆ ದೃಢಪಟ್ಟಿದೆ. 3,831 ಶಂಕಿತ ರೋಗಿಗಳು (Patients) ಪತ್ತೆಯಾಗಿದ್ದು, 13 ಮಂದಿ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗ್ತಿದೆ. ಇತ್ತೀಚಿನ ಪ್ರಕರಣಗಳೊಂದಿಗೆ, ಈ ವರ್ಷ ಇದುವರೆಗೆ ಮಹಾನಗರದಲ್ಲಿ ಸೋಂಕಿನ ಸಂಖ್ಯೆ 303ಕ್ಕೆ ಏರಿದೆ. ಏಕಾಏಕಿ ಹರಡುತ್ತಿರುವ ದಡಾರ ಕಾಯಿಲೆಯನ್ನು ಏಕಾಏಕಿ ನಿರ್ವಹಿಸಲು ಮುಂಬೈಗೆ ಕೇಂದ್ರ ತಂಡವನ್ನು ನಿಯೋಜಿಸಿದೆ.
Parkinson's Disease: ಮೆದುಳಿನ ನರವನ್ನೇ ನಾಶ ಮಾಡುವ ಅಪಾಯಕಾರಿ ರೋಗ ಪಾರ್ಕಿನ್ಸನ್
ಲಸಿಕೆ ಹಾಕಿಸಿಕೊಳ್ಳದ ಮಕ್ಕಳಲ್ಲಿ ಹೆಚ್ಚು ಸೋಂಕು
ಮುಂಬೈ ಒಂಬತ್ತು ತಿಂಗಳಿಂದ ಐದು ವರ್ಷದೊಳಗಿನ 1,34,833 ಮಕ್ಕಳಿಗೆ ಲಸಿಕೆ (Vaccine) ಹಾಕಲಿದೆ ಎಂದು ನಾಗರಿಕ ಸಂಸ್ಥೆ ಹೇಳಿಕೆಯಲ್ಲಿ ತಿಳಿಸಿದೆ. 13 ಆರೋಗ್ಯ ಕೇಂದ್ರಗಳಲ್ಲಿ ಆರರಿಂದ ಒಂಬತ್ತು ತಿಂಗಳ ವಯಸ್ಸಿನ ಒಟ್ಟು 3,496 ಮಕ್ಕಳಿಗೆ, ಒಂಬತ್ತು ತಿಂಗಳಿಗಿಂತ ಕಡಿಮೆ ವಯಸ್ಸಿನ ದಡಾರ ಪ್ರಕರಣಗಳು ವರದಿಯಾಗಿವೆ. ಅವರಿಗೆ ಹೆಚ್ಚುವರಿ ಡೋಸ್ ದಡಾರ-ರುಬೆಲ್ಲಾ ಲಸಿಕೆ ನೀಡಲಾಗುವುದು ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ಮುಂಬೈ ಕಾರ್ಪೋರೇಷನ್ ಇದುವರೆಗೆ 53,66,144 ಮನೆಗಳನ್ನು ಸಮೀಕ್ಷೆ ನಡೆಸಿದೆ ಮತ್ತು 4,062 ಜ್ವರ ಮತ್ತು ರಾಶ್ ಪ್ರಕರಣಗಳು ಕಂಡುಬಂದಿವೆ ಎನ್ನಲಾಗಿದೆ.
ದಢಾರ ಕಾಯಿಲೆಯಿಂದ ಮೃತಪಟ್ಟಿದೆ ಎಂದು ಹೇಳುತ್ತಿರುವ ರೋಗಿ ಹೃದ್ರೋಗದ (ವೆಂಟ್ರಿಕ್ಯುಲರ್ ಸೆಪ್ಟಲ್ ಡಿಫೆಕ್ಟ್ ಮತ್ತು ಪೇಟೆಂಟ್ ಡಕ್ಟಸ್ ಆರ್ಟೆರಿಯೊಸಸ್) ಸಮಸ್ಯೆಗೆ ಚಿಕಿತ್ಸೆ ಪಡೆದುಕೊಂಡಿದ್ದರು. ಎರಡು ವಾರಗಳ ಹಿಂದೆ, ರೋಗಿಯನ್ನು ಈ ಸ್ಥಿತಿಯ ಚಿಕಿತ್ಸೆಗಾಗಿ (Treatment) ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಕೆಯನ್ನು ತೀವ್ರ ನಿಗಾ ಘಟಕದಲ್ಲಿ (ಐಸಿಯು) ದಾಖಲಿಸಲಾಗಿತ್ತು. ಜ್ವರ, ದದ್ದು ಮತ್ತು ಉಸಿರಾಟದ ತೊಂದರೆಯೊಂದಿಗೆ ಶನಿವಾರ ಮುಂಬೈನ ಕಸ್ತೂರ್ಬಾ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ' ಎಂದು ನಾಗರಿಕ ಸಂಸ್ಥೆ ತಿಳಿಸಿದೆ.
ಮಾರಕ ಕಾಯಿಲೆಗೆ ಕಾರಣವಾಗೋ ಐದು ಬ್ಯಾಕ್ಟಿರೀಯಾ; ಎಲ್ಲೆಲ್ಲಿ ಇರುತ್ತವೆ ತಿಳ್ಕೊಳ್ಳಿ
ಉಸಿರಾಟದ ತೊಂದರೆಯಿಂದ ಬಾಲಕಿ ಸಾವು
ಆಕೆಯ ಸ್ಥಿತಿಯು ಹದಗೆಟ್ಟಿತು ಮತ್ತು ಅವರು ಮಧ್ಯಾಹ್ನ 1.30 ಕ್ಕೆ ನಿಧನರಾದರು, ಸಾವಿನ ಕಾರಣವನ್ನು ತೀವ್ರವಾದ ಉಸಿರಾಟದ ವೈಫಲ್ಯ ಎಂದು ಉಲ್ಲೇಖಿಸಲಾಗಿದೆ, ದಡಾರ ಬ್ರಾಂಕೋಪ್ನ್ಯುಮೋನಿಯಾ ಪೇಟೆಂಟ್ ಡಕ್ಟಸ್ ಆರ್ಟೆರಿಯೊಸಸ್ ಜೊತೆಗೆ ವೆಂಟ್ರಿಕ್ಯುಲರ್ ಸೆಪ್ಟಲ್ ದೋಷದ ಸಂದರ್ಭದಲ್ಲಿ ಇದು ಕಂಡು ಬಂದಿತ್ತು ಎಂದು ತಿಳಿಸಲಾಗಿದೆ.
ಮುಂಬೈ ಮಾತ್ರವಲ್ಲದೇ ಜಾರ್ಖಂಡ್‌ನ ರಾಂಚಿ, ಗುಜರಾತ್‌ನ ಅಹಮದಾಬಾದ್ ಮತ್ತು ಕೇರಳದ ಮಲಪ್ಪುರಂನಲ್ಲಿಯೂ ಮಕ್ಕಳಲ್ಲಿ ದಡಾರ ಪ್ರಕರಣಗಳು ಹೆಚ್ಚಾಗುತ್ತಿವೆ. ದಡಾರ ಪ್ರಕರಣಗಳ ಹೆಚ್ಚುತ್ತಿರುವ ಕುರಿತು ತಂಡಗಳು ತನಿಖೆ ನಡೆಸಲಿವೆ. ಅಲ್ಲದೇ ದಡಾರ ನಿಯಂತ್ರಿಸುವ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಕ್ರಮ ಹಾಗೂ ಮುಂಜಾಗ್ರತೆ ಕುರಿತು ಅರಿವು ಮೂಡಿಸಲಿವೆ ಎಂದು ರಾಜ್ಯ ಆರೋಗ್ಯ ಸಚಿವಾಲಯ ತಿಳಿಸಿದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.