ಪ್ರತಿ ದಿನ ಎಸಿ ಆನ್ ಮಾಡಿ ಮಲಗಿದರೆ ಇಂಥಾ ಕಾಯಿಲೆ ಕಾಡುತ್ತೆ ಹುಷಾರ್‌!

Published : May 09, 2024, 05:50 PM IST
ಪ್ರತಿ ದಿನ ಎಸಿ ಆನ್ ಮಾಡಿ ಮಲಗಿದರೆ ಇಂಥಾ ಕಾಯಿಲೆ ಕಾಡುತ್ತೆ ಹುಷಾರ್‌!

ಸಾರಾಂಶ

ಬಿಸಿಲಿನ ತಾಪಮಾನ ಹೆಚ್ಚಾಗಿದೆ. ಸುಡುಬ ಬಿಸಿಲಿನ ಧಗೆಗೆ ಜನರು ಹೈರಾಣಾಗುತ್ತಿದ್ದಾರೆ. ಸೆಖೆಗೆ ರಾತ್ರಿಯಾದರೆ ಮಲಗುವುದು ಸಹ ಕಷ್ಟ ಎಂಬಂತಾಗಿದೆ. ಈ ಬಿಸಿಲಿನ ತಾಪ ತಾಳಲಾರದೆ ಎಲ್ಲರೂ ಫ್ಯಾನ್ಸ್‌, ಎಸಿ ಹಾಕಿಕೊಂಡು ಮಲಗುತ್ತಿದ್ದಾರೆ. ಆದ್ರೆ ಗಂಟೆಗಳ ಕಾಲ ಎಸಿಯಲ್ಲಿ ಮಲಗಿರೋದು ಅನೇಕ ಆರೋಗ್ಯ ಸಮಸ್ಯೆಗೆ ಕಾರಣವಾಗುತ್ತೆ ಅನ್ನೋದು ನಿಮ್ಗೆ ಗೊತ್ತಿದ್ಯಾ?

ಬಿಸಿಲಿನ ತಾಪಮಾನ ಹೆಚ್ಚಾಗಿದೆ. ಸುಡುಬ ಬಿಸಿಲಿನ ಧಗೆಗೆ ಜನರು ಹೈರಾಣಾಗುತ್ತಿದ್ದಾರೆ. ಸೆಖೆಗೆ ರಾತ್ರಿಯಾದರೆ ಮಲಗುವುದು ಸಹ ಕಷ್ಟ ಎಂಬಂತಾಗಿದೆ. ಈ ಬಿಸಿಲಿನ ತಾಪ ತಾಳಲಾರದೆ ಎಲ್ಲರೂ ಫ್ಯಾನ್ಸ್‌, ಎಸಿ ಹಾಕಿಕೊಂಡು ಮಲಗುತ್ತಿದ್ದಾರೆ. ರಾತ್ರಿಯಷ್ಟೇ ಅಲ್ಲ, ಹಗಲನ್ನೂ ಎಸಿಯಲ್ಲೇ ಕಳೆಯುತ್ತಾರೆ. ಇದು ಎಸಿಯಲ್ಲಿರುವವರೆಗೂ ಆರಾಮದಾಯಕವಾಗಿರುತ್ತದೆ. ಆದರೆ ಎಸಿಯಲ್ಲಿ ಹೆಚ್ಚು ಗಂಟೆಗಳ ಕಾಲ ಸಮಯ ಕಳೆಯುವುದು ಆರೋಗ್ಯದ ಮೇಲೆ ಕೆಟ್ಟದಾಗಿ ಪರಿಣಾಮ ಬೀರುತ್ತದೆ. ಚರ್ಮದ ಕಾಯಿಲೆಗಳಿಂದ ಹಿಡಿದು ಉಸಿರಾಟದ ಕಾಯಿಲೆಗಳವರೆಗೆ, ಎಸಿ ಅನೇಕ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಅದೇನೆಂದು ತಿಳಿಯೋಣ.

ಎಸಿಯನ್ನು ಆನ್ ಮಾಡಿದಾಗ, ಹೊರಗಿನ ಬಿಸಿ ಗಾಳಿ ಒಳಗೆ ಬರದಿರಲು ನಾವು ಕೋಣೆಯ ಬಾಗಿಲುಗಳನ್ನು ಮುಚ್ಚುತ್ತೇವೆ. ಪರಿಣಾಮವಾಗಿ ತಂಪಾದ ಗಾಳಿ ಕೋಣೆಯೊಳಗೇ ಸುತ್ತುತ್ತಲೇ ಇರುತ್ತದೆ. ಎಸಿಯಿಂದ ಬೀಸುವ ಈ ತಂಪು ವಾತಾವರಣ ಗಾಳಿಯಲ್ಲಿನ ತೇವಾಂಶವನ್ನು ಕಡಿಮೆ ಮಾಡುತ್ತದೆ. ಪರಿಣಾಮವಾಗಿ.. ಎಲ್ಲವೂ ಒಣಗುತ್ತವೆ. ಅದರಿಂದ ತ್ವಚೆಯೂ ಒಣಗುತ್ತದೆ. ಚರ್ಮದ ಮೇಲೆ ತುರಿಕೆ ಮತ್ತು ಚರ್ಮದ ಅಲರ್ಜಿಯ ಸಮಸ್ಯೆ ಕಾಣಿಸಿಕೊಳ್ಳುತ್ತದೆ.

ಬಿಸಿಲಿನಿಂದ ಚರ್ಮ ಟ್ಯಾನ್ ಆಗುತ್ತೇಂತ ಸನ್‌ಸ್ಕ್ರೀನ್ ಯೂಸ್ ಮಾಡ್ತೀರಾ, ಅಪ್ಲೈ ಮಾಡೋ ರೀತಿ ಬಗ್ಗೆಯೂ ಗೊತ್ತಿರ್ಲಿ
 
ಎಸಿ ರೂಮಿನಲ್ಲಿ ಮಲಗುವುದರಿಂದ ಧೂಳು ಮತ್ತು ಅಲರ್ಜಿಯಂತಹ ಶಾಶ್ವತ ಸಮಸ್ಯೆಗಳೂ ಕಾಣಿಸಿಕೊಳ್ಳುತ್ತವೆ. ಇದು ಜನರಲ್ಲಿ ಅಸ್ತಮಾಗೆ ಕಾರಣವಾಗಬಹುದು. ಇವುಗಳನ್ನು ತಪ್ಪಿಸಲು, ಎಸಿಯನ್ನು ನಿಯಮಿತವಾಗಿ ಸ್ವಚ್ಛಗೊಳಿಸಬೇಕು. ಒಳಾಂಗಣ ಗಾಳಿಯ ಗುಣಮಟ್ಟವನ್ನು ಸಹ ಸುಧಾರಿಸಬೇಕು.
 
ಕ್ಲೀನ್ ಮಾಡದೆ ಎಸಿ ಬಳಸುವುದರಿಂದ ಕಣ್ಣುಗಳೂ ಒಣಗುತ್ತವೆ. ಜೊತೆಗೆ.. ಗಂಟಲು ನೋವಿನ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ. ಹಾಗಾಗಿ, ಕಣ್ಣಿನ ಹನಿಗಳನ್ನು ಬಳಸಿ ಮತ್ತು ಹೆಚ್ಚು ನೀರು ಕುಡಿಯಿರಿ. ಎಸಿ ಆನ್ ಮಾಡಿದರೂ ಕೊಠಡಿಯ ತಾಪಮಾನ ಕಡಿಮೆ ಇರಬಾರದು. 25, 26 ಡಿಗ್ರಿ ಕಾಯ್ದುಕೊಂಡರೆ ಆರೋಗ್ಯಕ್ಕೆ ಹೆಚ್ಚು ತೊಂದರೆಯಾಗಲ್ಲ.

ಬೇಸಿಗೆಯಲ್ಲಿ ಮೊಸರನ್ನ ತಪ್ಪದೇ ತಿನ್ನಿ ಮತ್ತು ಈ ಪ್ರೋಜನಗಳನ್ನ ಪಡೆಯಿರಿ

ಕೆಲವರಿಗೆ ಎಸಿಯಲ್ಲಿ ಹೆಚ್ಚು ಹೊತ್ತು ಇರುವುದು ತಲೆನೋವು ಮತ್ತು ವಾಕರಿಕೆಗೆ ಕಾರಣವಾಗುತ್ತದೆ. ತಾಪಮಾನ ಕಡಿಮೆಯಾದಾಗ ಅನೇಕ ಜನರು ಸೂಕ್ಷ್ಮ ಸಮಸ್ಯೆಗಳನ್ನು ಹೊಂದಲು ಪ್ರಾರಂಭಿಸುತ್ತಾರೆ. ಅದರಿಂದ.. ಇಂತಹ ತಲೆನೋವಿನ ಸಮಸ್ಯೆಗಳೂ ಬರುತ್ತವೆ. ಇಂತಹ ಸಮಯದಲ್ಲಿ.. ಸಾಮಾನ್ಯ ತಾಪಮಾನದಲ್ಲಿ ಎಸಿಯಲ್ಲಿಟ್ಟು.. ಫ್ಯಾನ್ ಆನ್ ಮಾಡಿದರೆ ಸಾಕು.

ನಿರಂತರವಾಗ ಎಸಿ ಬಳಸುವುದರಿಂದ ಕೆಲವರಿಗೆ ರೋಗನಿರೋಧಕ ಶಕ್ತಿ ಕಡಿಮೆಯಾಗುತ್ತದೆ. ತುಂಬಾ ಚಳಿಯಲ್ಲಿ ಮಲಗುವುದರಿಂದಲೂ ಶೀತ, ಕೆಮ್ಮು ಮುಂತಾದ ಸಮಸ್ಯೆಗಳು ಬರಬಹುದು. ಸಂಧಿವಾತದ ಅಪಾಯವೂ ಹೆಚ್ಚು. ಆದ್ದರಿಂದ ಎಸಿ ಬಳಸುವಾದ ತಾಪಮಾನವು ತುಂಬಾ ತಂಪಾಗಿಲ್ಲ ಎಂದು ಖಚಿತಪಡಿಸಿಕೊಳ್ಳಬೇಕು.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

Foods that Block Arteries: ನೀವು ಪ್ರತಿದಿನ ಸೇವಿಸೋ ಈ ಆಹಾರಗಳೇ ಹೃದಯಾಘಾತಕ್ಕೆ ಕಾರಣವಾಗಬಹುದು ಎಚ್ಚರ
ಕೆಲ್ಸ ಮಾಡೋವಾಗ ಮಾತ್ರವಲ್ಲ ರಜೆಯಲ್ಲೂ ಕಾಡುತ್ತೆ ಖಿನ್ನತೆ, ಹಾಲಿಡೇ ಡಿಪ್ರೆಷನ್ ಅಂದ್ರೇನು?