Save Water: ಬೇಸಿಗೆ ಬಂತು, ದುಡ್ಡಿನಂತೆ ನೀರನ್ನೂ ಸೇವ್ ಮಾಡೋ ಕಲೆ ಕಲೀರಿ

By Suvarna News  |  First Published Mar 15, 2023, 4:48 PM IST

ಬೇಸಿಗೆ ಬಂದಿದೆ. ನೀರಿನ ಬಳಕೆ ಕುರಿತು ಗಮನ ನೀಡಲೇಬೇಕಿದೆ. ಮನಸ್ಸು ಮಾಡಿದರೆ ಎಲ್ಲರೂ ಹಲವು ರೀತಿಯಲ್ಲಿ ನೀರಿನ ಉಳಿತಾಯ ಮಾಡಬಹುದು. ಕೊನೆಯ ಪಕ್ಷ ಬೇಸಿಗೆಯಲ್ಲಾದರೂ ನೀರನ್ನು ಮಿತವಾಗಿ ವ್ಯಯ ಮಾಡುವುದರಿಂದ ನೀರಿನ ಸೆಲೆಯನ್ನು ರಕ್ಷಿಸಬಹುದು. 
 


ಅನಗತ್ಯವಾಗಿ ನೀರನ್ನು ಬಳಕೆ ಮಾಡುವ ಕುರಿತು ಯಾರೂ ಅಷ್ಟೊಂದು ಗಂಭೀರವಾಗಿ ಯೋಚಿಸುವುದಿಲ್ಲ. ನೀರನ್ನು ಉಳಿತಾಯ ಮಾಡಬೇಕೆಂದು ವಿವಿಧ ರೀತಿಯಲ್ಲಿ ಪ್ರಯತ್ನಿಸುವವರು ಸಹ ಕೆಲವೊಮ್ಮೆ ಅನಗತ್ಯವಾಗಿ ಬಳಕೆ ಮಾಡುತ್ತಿರುತ್ತಾರೆ ಅಥವಾ ನೀರನ್ನು ಸರಿಯಾದ ರೀತಿಯಲ್ಲಿ ಬಳಸುವುದಿಲ್ಲ. ಇನ್ನು ಬೇಸಿಗೆ ಬರುತ್ತಿದೆ. ನಾವು ಬಳಸುವ ಒಂದೊಂದೂ ಹನಿಯೂ ಅಮೂಲ್ಯವೆಂದು ಬಗೆಯುವ ಸಮಯ. “ನಾವಿಲ್ಲಿ ನೀರನ್ನು ಉಳಿತಾಯ ಮಾಡಿದರೆ ಬೇರೆಲ್ಲೋ ಸಮಸ್ಯೆ ಬಗೆಹರಿಯುವುದು ಸಾಧ್ಯವಿಲ್ಲ’ ಎನ್ನುವ ಸಿನಿಕತನ ಬೇಡ. ಎಲ್ಲೇ ಇದ್ದರೂ ನೀರಿನ ಸದುಪಯೋಗ, ಸರಿಯಾದ ಬಳಕೆ ನಮ್ಮ ಆದ್ಯತೆಯಾಗಬೇಕಿದೆ. ಏಕೆಂದರೆ, ನೀರಿನ ಬಳಕೆ ಕಳೆದ ಶತಮಾನಕ್ಕಿಂತ ಶೇಕಡ 495ರಷ್ಟು ಅಧಿಕ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಕೈಗಾರಿಕೀಕರಣ ಮತ್ತು ಜನಸಂಖ್ಯೆ ಏರಿಕೆ ಇದಕ್ಕೆ ಪ್ರಮುಖ ಕಾರಣ. ಜತೆಗೆ, ಅರಣ್ಯದ ಪ್ರಮಾಣ ಕುಸಿಯುತ್ತಿದೆ. ಹೀಗಾಗಿ, ಭೂಮಿ ಯಾವ ರೀತಿಯ ಒತ್ತಡಕ್ಕೆ ತುತ್ತಾಗಿದೆ ಎಂದು ಊಹಿಸಬಹುದು. ನಮ್ಮನಿಮ್ಮಂಥವರು ಉಳಿತಾಯ ಮಾಡಿದರೆ ಏನೂ ಪ್ರಯೋಜನವಿಲ್ಲ ಎಂದು ಮೇಲ್ನೋಟಕ್ಕೆ ಅನಿಸಬಹುದು. ಆದರೆ, ನಮ್ಮಂತಹ ಸಾವಿರಾರು, ಲಕ್ಷಾಂತರ ಜನರು ನೀರಿನ ಉಳಿತಾಯಕ್ಕೆ ಮನಸ್ಸು ಮಾಡಿದರೆ ಖಂಡಿತ ಲಾಭವಿದೆ.

•    ಬೇಸಿಗೆಯಲ್ಲಿ (Summer) ಸ್ನಾನದ (Bath) ಪ್ರಮಾಣ ಕಡಿಮೆ ಮಾಡಿ
ನೀರು (Water) ಸಮೃದ್ಧವಾಗಿರುವ ಸಮಯದಲ್ಲಿ ಮಾಡುವಂತೆಯೇ ಬೇಸಿಗೆಯಲ್ಲೂ ನೀರನ್ನು ಹೇರಳವಾಗಿ ಬಳಕೆ (Consume) ಮಾಡಬೇಕೆಂದಿಲ್ಲ. ನಿಮ್ಮ ಸ್ನಾನಕ್ಕೆ ಸಾಕಷ್ಟು ನೀರು ಖರ್ಚಾಗುತ್ತದೆ. ಅದರ ಪ್ರಮಾಣ ಮಿತಿಗೊಳಿಸಿದರೆ ಬಹಳಷ್ಟು ಉಳಿತಾಯವಾಗುತ್ತದೆ. ಬೇಸಿಗೆಯಲ್ಲಿ ನೀವು ಎರಡು ಬಾರಿ ಸ್ನಾನ ಮಾಡುವ ಪರಿಪಾಠ ಹೊಂದಿದ್ದರೆ ನೀರನ್ನು ಮಿತವ್ಯಯದಿಂದ (Limited Use) ಬಳಕೆ ಮಾಡುವುದು ಅಗತ್ಯ. ಪಾತ್ರೆ (Utensils) ತೊಳೆಯುವಾಗಲೂ ಅಷ್ಟೆ. ನಲ್ಲಿಯಲ್ಲಿ (Tap) ನೀರು ಬಿಟ್ಟುಕೊಂಡು ಪಾತ್ರೆಗಳನ್ನು ಉಜ್ಜುವಾಗ ಸುಮ್ಮನೆ ವೇಸ್ಟ್ ಆಗುವುದು ಸಾಮಾನ್ಯ. ಹೀಗಾಗದಂತೆ ಎಚ್ಚರಿಕೆ ವಹಿಸಿ. ಜತೆಗೆ, ರಭಸವಾಗಿ ನೀರನ್ನು ಬಿಟ್ಟುಕೊಂಡಿರುವ ಬದಲು ಚಿಕ್ಕದಾಗಿಟ್ಟು ಸರಿಯಾಗಿ ತಿಕ್ಕಿ ತೊಳೆದುಕೊಳ್ಳಿ. 

Latest Videos

undefined

Summer Tips: ಬಿಸಿಲ ಬೇಗೆಯಿಂದ ಬಳಲದೇ ಇರಲಿ ಜೀವ, ಈ ಟಿಪ್ಸ್‌ ಫಾಲೋ ಮಾಡಿ

•    ನೀರಿನ ಸಂಗ್ರಹ (Collection of Water)
ಮಳೆಯ ನೀರನ್ನು ಸಂಗ್ರಹಿಸುವುದು ಉತ್ತಮ ಕಾರ್ಯ. ಇದು ಸಾಕಷ್ಟು ಜನಪ್ರಿಯಗೊಂಡಿದೆಯಾದರೂ ನಗರಗಳಲ್ಲಿ (City) ವ್ಯಾಪಕವಾಗಿ ಬಳಕೆಗೆ ಬಂದಿಲ್ಲ. ಜತೆಗೆ, ಬಳಕೆ ಮಾಡಿದ ನೀರನ್ನು ಸಂಗ್ರಹಿಸಿ ಬೇರೊಂದು ಕಾರ್ಯಕ್ಕೆ ಬಳಕೆ ಮಾಡುವುದು ಸಹ ನೀರನ್ನು ಗಮನಾರ್ಹ ಪ್ರಮಾಣದಲ್ಲಿ ಉಳಿಸುತ್ತದೆ. ಪಾತ್ರೆ ತೊಳೆಯುವ, ಸ್ನಾನದ ನೀರನ್ನು ಬಳಸಿ, ಗಿಡಗಳಿಗೆ ಉಣಿಸಬಹುದು. ಹಸಿರು ಲಾನ್ ಗಳಿದ್ದರೆ ಅವುಗಳಿಗೆ ಈ ನೀರನ್ನು ಹಾಕಿ, ಹೆಚ್ಚು ನೀರು ವೇಸ್ಟ್ (Waste) ಆಗದಂತೆ ನೋಡಿಕೊಳ್ಳಬಹುದು. 

•    ಪೊರಕೆ (Broom) ಬಳಕೆ
ಪ್ರತಿದಿನವೂ ಮನೆ ಎದುರು ನೀರು ಹೊಯ್ಯುವ ಬದಲು, ಕಸ ಗುಡಿಸಿ, ಬಟ್ಟೆಯಲ್ಲಿ ಒರೆಸಿಬಿಡಿ. ಇದರಿಂದ ಸಾಕಷ್ಟು ನೀರಿನ ಉಳಿತಾಯ (Save) ಸಾಧ್ಯ.

Travel Tips: ರಜೆಯ ಪ್ರವಾಸದಲ್ಲಿ ಆರೋಗ್ಯ ಕೆಡಬಾರದಂದ್ರೆ ಹೀಗ್ ಮಾಡಿ

•    ಸೋರಿಕೆ (Leak) ತಡೆಗಟ್ಟಿ
ಬಹಳಷ್ಟು ನೀರು ನಮ್ಮ ಚಿಕ್ಕದೊಂದು ನಿರ್ಲಕ್ಷ್ಯದಿಂದ ವೇಸ್ಟ್ ಆಗುತ್ತದೆ. ಬಾತ್ ರೂಮ್, ಕಿಚನ್, ಟಾಯ್ಲೆಟ್ ಎಲ್ಲೇ ಆದರೂ ನೀರು ಸೋರಿಕೆ ಆಗುತ್ತಿದ್ದರೆ ಅದನ್ನು ತಕ್ಷಣ ತಡೆಗಟ್ಟುವ ಕ್ರಮ ಕೈಗೊಳ್ಳಿ. ಪೈಪ್, ನಲ್ಲಿ ಸೋರುತ್ತಿದ್ದರೆ ರಿಪೇರಿ ಮಾಡಿ. ನಿಮಗೆ ಗೊತ್ತೇ? ಮನೆಮನೆಗಳಲ್ಲಿ ಹೀಗೆ ನೀರು ಸುಮ್ಮನೆ ಲೀಕ್ ಆಗುವ ಪ್ರಮಾಣ ವಾರ್ಷಿಕವಾಗಿ ಸಾವಿರಾರು ಗ್ಯಾಲನ್ ಗಳಷ್ಟು.  

ನಮ್ಮ ಜವಾಬ್ದಾರಿ
•    ಲೋ ಫ್ಲಶ್ ಟಾಯ್ಲೆಟ್ (Low Flush Toilets) ಗಳನ್ನು ಬಳಕೆ ಮಾಡಿ.
•    ವಾಷಿಂಗ್ ಮಷಿನ್ (Washing Machine) ತುಂಬಿದಾಗಲಷ್ಟೇ ಬಟ್ಟೆ ತೊಳೆಯಿರಿ.
•    ಲೋ ಫ್ಲೋ ಶಾವರ್ (Low Flow Shower) ಬಳಸುವುದು ಅಥವಾ ಶಾವರ್ ಬದಲು ಚೊಂಬನ್ನು ಬಳಕೆ ಮಾಡುವುದು. 

click me!