ಮಕ್ಕಳು ಆಗಾಗ ಕರುಳಿನ ಹುಳುಗಳ ಸಮಸ್ಯೆಗೆ ತುತ್ತಾಗುತ್ತಾರೆ. ಇದರಿಂದ ಅವರಲ್ಲಿ ಆಲಸ್ಯ, ದೌರ್ಬಲ್ಯ ಕಂಡುಬರುತ್ತದೆ. ಹುಳುಗಳ ಸಮಸ್ಯೆ ಮುಂದುವರಿದರೆ ಬೆಳವಣಿಗೆಯಲ್ಲೂ ತೊಂದರೆ ಉಂಟಾಗುತ್ತದೆ. ಹೀಗಾಗಿ, ಹುಳುಗಳ ಸಮಸ್ಯೆಯನ್ನು ಕೆಲವು ಲಕ್ಷಣಗಳ ಮೂಲಕ ಗುರುತಿಸಿ ಮನೆಯಲ್ಲೇ ನಿವಾರಣೆ ಮಾಡಬಹುದು.
ಮಕ್ಕಳು ಕೆಲವೊಮ್ಮೆ ರಾತ್ರಿ ಸರಿಯಾಗಿ ನಿದ್ರೆ ಮಾಡುವುದಿಲ್ಲ. ಸಿಕ್ಕಾಪಟ್ಟೆ ಹೊರಳಾಡುತ್ತಾರೆ, ಹಲ್ಲುಗಳನ್ನು ಕಟಕಟ ಎಂದು ಕಡಿಯಲು ಆರಂಭಿಸಬಹುದು. ಗುದದ್ವಾರದಲ್ಲಿ ತೀವ್ರ ತುರಿಕೆ ಉಂಟಾಗಿ, ತುರಿಸಿಕೊಂಡರೆ ಉರಿಯಾಗಿ ನಿದ್ರೆ ಮಾಡದಿರಬಹುದು. ಕ್ರಮೇಣ ಹೊಟ್ಟೆನೋವೂ ಸಹ ಕಾಣಿಸಿಕೊಳ್ಳಬಹುದು. ಹೊಟ್ಟೆ ಬಿಗಿದಂತಾಗಿ ಗಟ್ಟಿಯಾಗಬಹುದು. ಕೆಲವೊಮ್ಮೆ ಮುಖದ ಮೇಲೆ ಅಲ್ಲಲ್ಲಿ ಬಿಳಿಚಿಕೊಂಡಂತೆಯೂ ಆಗಬಹುದು. ಜತೆಗೆ, ಅವರ ಆರೋಗ್ಯದಲ್ಲಿ ದಿನವೂ ಏನಾದರೊಂದು ಸಮಸ್ಯೆ ಕಾಣಿಸುತ್ತಲೇ ಇರುತ್ತದೆ. ಪಾಲಕರಿಗೆ ಏನು ಮಾಡಬೇಕೆಂದೇ ತಿಳಿಯುವುದಿಲ್ಲ. ಇವೆಲ್ಲ ಲಕ್ಷಣಗಳು ಕರುಳಿನಲ್ಲಿ ಜಂತುಹುಳು ಆಗಿರುವುದನ್ನು ಸೂಚಿಸುತ್ತವೆ. ಮಕ್ಕಳಲ್ಲಿ ಜಂತುಹುಳುಗಳ ಬಾಧೆ ಆರಂಭವಾದರೆ ಪಾಲಕರು ಅಲಕ್ಷ್ಯ ಮಾಡದೇ ಕಾಳಜಿ ವಹಿಸಬೇಕು. ಇದರಿಂದ ಮಕ್ಕಳಲ್ಲಿ ದೌರ್ಬಲ್ಯ ಉಂಟಾಗುತ್ತದೆ. ದೈಹಿಕ ಮತ್ತು ಮಾನಸಿಕ ಬೆಳವಣಿಗೆಯ ಮೇಲೆ ಪರಿಣಾಮ ಕಂಡುಬರುತ್ತದೆ. ತಜ್ಞರ ಪ್ರಕಾರ, ಪ್ರತಿ ಆರು ತಿಂಗಳಿಗೆ ಒಮ್ಮೆ ಜಂತುಹುಳುಗಳ ಔಷಧವನ್ನು ಮಕ್ಕಳಿಂದ ಹಿಡಿದು ಎಲ್ಲರೂ ತೆಗೆದುಕೊಳ್ಳಬೇಕು. ಆದರೆ, ಎಷ್ಟೋ ಬಾರಿ ಅದಕ್ಕೂ ಮುನ್ನವೇ ಮತ್ತೆ ಹುಳುಗಳ ಕಾಟ ಆರಂಭವಾಗುತ್ತದೆ. ಅಂತಹ ಸಮಯದಲ್ಲಿ ಮನೆಮದ್ದಿನ ಮೂಲಕ ಜಂತುಹುಳುಗಳನ್ನು ನಿವಾರಣೆ ಮಾಡಿಕೊಳ್ಳಬಹುದು. ನಮ್ಮ ಅಡುಗೆಮನೆಯಲ್ಲೇ ಇರುವ ಅದೆಷ್ಟೋ ಆಹಾರ ಪದಾರ್ಥಗಳು ಜಂತುಹುಳುಗಳನ್ನು ಪರಿಣಾಮಕಾರಿಯಾಗಿ ನಿವಾರಣೆ ಮಾಡುವಲ್ಲಿ ಸಹಕಾರಿಯಾಗಿವೆ. ಅವುಗಳನ್ನು ಸರಿಯಾಗಿ ಬಳಕೆ ಮಾಡುವುದನ್ನು ಅರಿತರೆ ಮಕ್ಕಳಿಗೆ ಮನೆಯಲ್ಲೇ ಸುಲಭವಾಗಿ ಹುಳುಗಳಿಂದ ಮುಕ್ತಿ ದೊರಕಿಸಬಹುದು.
• ಕುಂಬಳಕಾಯಿ ಬೀಜ (Pumpkin Seeds)
ಕುಂಬಳಕಾಯಿಯಲ್ಲಿ ಬಹಳಷ್ಟು ಔಷಧೀಯ (Medicinal) ಗುಣ ಇರುವುದನ್ನು ತಿಳಿದಿರಬಹುದು. ಹಾಗೆಯೇ ಅದರ ಬೀಜವೂ ಸಹ ಅನೇಕ ಉತ್ತಮ ಅಂಶಗಳಿಂದ ಕೂಡಿದೆ. ಕುಂಬಳಕಾಯಿ ಬೀಜದಿಂದ ಮಕ್ಕಳಲ್ಲಿ (Children) ಉಂಟಾಗುವ ಹುಳುಗಳ (Worms) ಸಮಸ್ಯೆಯನ್ನು ಪರಿಣಾಮಕಾರಿಯಾಗಿ ನಿವಾರಿಸಬಹುದು. ಕುಂಬಳಕಾಯಿ ಬೀಜದಲ್ಲಿ ಅಮೈನೋ ಆಸಿಡ್ (Amino Acid) ಅಂಶವಿರುತ್ತದೆ. ಇದನ್ನು ಕುಕುರ್ಬಿಟಿನ್ ಎಂದು ಕರೆಯಲಾಗುತ್ತದೆ. ಈ ಕುಕುರ್ಬಿಟಿನ್ ಅಂಶ ಜೀರ್ಣಾಂಗ (Digestive) ವ್ಯವಸ್ಥೆಯಲ್ಲಿರುವ ಹುಳುಗಳನ್ನು ನಿವಾರಣೆ ಮಾಡುತ್ತದೆ.
undefined
Health Tips: ಮಕ್ಕಳು ಸದಾ ಸುಸ್ತು ಅಂತಿದ್ದರೆ ಫ್ಯಾಟಿ ಲಿವರ್ ಆಗಿರಬಹುಹು, ಪಾಲಕರೇ ಎಚ್ಚರ
• ಪಪ್ಪಾಯದ ಬೀಜ (Papaya Seeds)
ಪಪ್ಪಾಯದ ಬೀಜದಲ್ಲಿ ಆರೋಗ್ಯಕರ ಫ್ಯಾಟಿ ಆಸಿಡ್ (Fatty Acid) ಇರುತ್ತದೆ. ಪಾಲಿಫೆನಾಲ್ಸ್ ಮತ್ತು ಫ್ಲೇವನಾಯ್ಡ್ಸ್ ಗಳಿದ್ದು, ಆರೋಗ್ಯಕ್ಕೆ ಸಹಕಾರಿಯಾಗಿವೆ. ಚಿಟಿಕೆಯಷ್ಟು ಪಪ್ಪಾಯ ಬೀಜದ ಪುಡಿಯನ್ನು ಮಕ್ಕಳಿಗೆ ನೀಡುವುದರಿಂದ ಹೊಟ್ಟೆಯಲ್ಲಿರುವ ಹುಳು ನಾಶವಾಗುತ್ತದೆ. ಇನ್ನು ವಯಸ್ಕರಿಗೂ ಇದು ಉತ್ತಮ. ಆಂಟಿಆಕ್ಸಿಡಂಟ್ (Antioxidants) ಗಳಿಂದ ಕೂಡಿರುವ ಪಪ್ಪಾಯದ ಸೇವನೆಯಿಂದ ಆಕ್ಸಿಡೇಟಿವ್ ಸ್ಟ್ರೆಸ್ ಹಾಗೂ ಕಾರ್ಡಿಯೋವಾಸ್ಕ್ಯುಲರ್ ಸಮಸ್ಯೆಗಳ (Problems) ಅಪಾಯ ಕಡಿಮೆಯಾಗುತ್ತದೆ. ಆದರೆ, ಪಪ್ಪಾಯ ಬೀಜವನ್ನು ಹೆಚ್ಚು ಪ್ರಮಾಣದಲ್ಲಿ ಸೇವನೆ ಮಾಡುವುದರಿಂದ ಭೇದಿ ಸಮಸ್ಯೆ ಆಗಬಹುದು.
• ಬೆಳ್ಳುಳ್ಳಿ (Garlic)
ಬೆಳ್ಳುಳ್ಳಿಯನ್ನು ಹಸಿಯಾಗಿ ಸೇವನೆ ಮಾಡುವುದರಿಂದ ಹುಳುಗಳನ್ನು ಸುಲಭವಾಗಿ ನಿವಾರಿಸಿಕೊಳ್ಳಬಹುದು. ಬೆಳ್ಳುಳ್ಳಿ ಕೇವಲ ಹುಳುಗಳನ್ನಷ್ಟೇ ನಾಶ ಮಾಡುವುದಿಲ್ಲ, ಜತೆಗೆ ಮೊಟ್ಟೆಗಳನ್ನೂ (Eggs) ನಾಶಮಾಡುತ್ತದೆ. ಹೆಣ್ಣು ಹುಳುಗಳು ಮೊಟ್ಟೆ ಇಡದಂತೆ ತಡೆಯುತ್ತದೆ. ಹಸಿ ಬೆಳ್ಳುಳ್ಳಿಯನ್ನು ಚೆನ್ನಾಗಿ ಅಗಿದು ತಿನ್ನುವುದು ಉತ್ತಮ.
• ಅರಿಶಿಣ (Turmeric)
ಅರಿಶಿಣವು ಉತ್ತಮ ಆಂಟಿಮೈಕ್ರೋಬಿಯಲ್ ಮತ್ತು ಆಂಟಿಸೆಪ್ಟಿಕ್ (Antiseptic) ಗುಣ ಹೊಂದಿದ್ದು, ಕರುಳಿನಲ್ಲಿ ಇರಬಹುದಾದ ಎಲ್ಲ ರೀತಿಯ ಹುಳುಗಳನ್ನು ನಾಶ ಮಾಡುತ್ತದೆ. ಒಂದು ಗ್ಲಾಸ್ ಮಜ್ಜಿಗೆಗೆ (Buttermilk) ಸ್ವಲ್ಪ ಅರಿಶಿಣ ಬೆರೆಸಿ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಬೇಕು. ಆಗಾಗ ಹೀಗೆ ಮಾಡುತ್ತಿದ್ದರೆ ಹುಳುಗಳ ಸಮಸ್ಯೆ ಆಗುವುದಿಲ್ಲ. ಅರಿಶಿಣ ಸ್ವಲ್ಪ ಉಷ್ಣಕಾರಕ (Heat) ಗುಣ ಹೊಂದಿರುವುದರಿಂದ ಸ್ವಲ್ಪ ಕಾಳಜಿ ವಹಿಸಿ.
Children Health: ಮಕ್ಕಳಿಗೆ ಟೀ, ಕಾಫಿ ಕುಡಿಸೋರು ಇದನ್ನೊಮ್ಮೆ ಓದಿ
• ಕ್ಯಾರೆಟ್ (Carrot)
ಕ್ಯಾರೆಟ್ ನಲ್ಲಿ ಬೆಟಾ ಕ್ಯಾರೋಟೀನ್ ಎನ್ನುವ ಅಂಶ ಗಾಢವಾಗಿರುತ್ತದೆ. ಇದು ಕರುಳಿನಲ್ಲಿರುವ ಹುಳುಗಳು ಮತ್ತು ಅವುಗಳ ಮೊಟ್ಟೆಗಳನ್ನು ಸಹ ನಾಶ ಮಾಡುತ್ತದೆ. ಖಾಲಿ ಹೊಟ್ಟೆಯಲ್ಲಿ (Empty Stomach) ಒಂದು ವಾರದ ಕಾಲ ಕ್ಯಾರೆಟ್ ಸೇವನೆ ಮಾಡುವುದರಿಂದ ಹುಳುಗಳ ಸಮಸ್ಯೆ ನಿವಾರಣೆಯಾಗುವುದು ಗ್ಯಾರೆಂಟಿ.