
ಇದ್ದಕ್ಕಿದ್ದ ಹಾಗೆ ಕೋಪ ಉಕ್ಕುತ್ತದೆ. ಮೈ ಕಂಪಿಸುತ್ತದೆ. ಏನು ಮಾಡಬೇಕೆಂದೇ ಗೊತ್ತಾಗುವುದಿಲ್ಲ. ಬರೀ ಕೋಪವೊಂದೇ ಅಲ್ಲ, ಕೆಲವೊಮ್ಮೆ ದುಃಖವೂ ಅಷ್ಟೇ ಸುಲಭವಾಗಿ ಬರುತ್ತದೆ. ಹಿಡಿತಕ್ಕೆ ಸಿಗದಂತೆ ಕಣ್ಣೀರು ಹರಿಯುತ್ತಲೇ ಇರುತ್ತದೆ. ಹಾಗೆಯೇ, ಆತಂಕ, ಖಿನ್ನತೆ, ಒತ್ತಡವೆಲ್ಲವೂ ಒಮ್ಮೊಮ್ಮೆ ಮಿತಿ ಮೀರಿ ತೊಂದರೆ ಕೊಡುತ್ತವೆ. ಇವೆಲ್ಲವನ್ನೂ ಒಟ್ಟಾರೆಯಾಗಿ ನೆಗೆಟಿವ್ ಭಾವನೆಗಳು ಎಂದು ಹೇಳಬಹುದು. ಯಾವುದೇ ನಕಾರಾತ್ಮಕ ಭಾವನೆಯಾದರೂ ಮನಸ್ಥಿತಿಯನ್ನು ಹಾಳು ಮಾಡುತ್ತವೆ. ಮೂಡಿನ ಮೇಲೆ ಪರಿಣಾಮ ಬೀರುತ್ತವೆ. ವರ್ತನೆಯಲ್ಲಿ ಸಮಸ್ಯೆ ತರುತ್ತವೆ ಹಾಗೂ ಕೊನೆಗೆ ಹೃದ್ರೋಗಕ್ಕೂ ಕಾರಣವಾಗುತ್ತವೆ, ರೋಗ ನಿರೋಧಕ ಶಕ್ತಿಯನ್ನು ಗಮನಾರ್ಹವಾಗಿ ಕುಂದಿಸುತ್ತವೆ. ಹೀಗಾಗಿ, ನಕಾರಾತ್ಮಕ ಭಾವನೆಗಳಿಂದ ಸದಾಕಾಲ ದೂರವಿರಲೇಬೇಕು. ಆದರೂ ನಾವು ಮನುಷ್ಯರು. ಕೆಲವೊಮ್ಮೆ ನೆಗೆಟಿವ್ ಭಾವನೆಗಳು ಕಾಡುವುದು ಸಹಜ. ಅಂತಹ ಸಮಯದಲ್ಲಿ ತಕ್ಷಣವೇ ಅವುಗಳನ್ನು ನಿಯಂತ್ರಣ ಮಾಡಿಕೊಳ್ಳುವುದು ಜಾಣತನ. ಅವು ಹೇಗೆ ಬಂದವೋ ಹಾಗೆಯೇ ಹೊರಟುಹೋಗುವುದಿದ್ದರೆ ಚೆನ್ನಾಗಿತ್ತು. ಆದರೆ, ಹಾಗಾಗುವುದಿಲ್ಲ. ಅದಕ್ಕೆ ನಾವು ಪ್ರಯತ್ನಿಸಬೇಕು. ನಿಮಗೂ ನಕಾರಾತ್ಮ ಭಾವನೆಗಳನ್ನು ಐದು ನಿಮಿಷಗಳಲ್ಲೇ ನಿಯಂತ್ರಿಸಿಕೊಳ್ಳಬೇಕು ಎನ್ನುವ ಆಸೆಯಿದ್ದರೆ ಕೆಲವು ತಂತ್ರಗಳನ್ನು ಅನುಸರಿಸುವುದು ಉತ್ತಮ.
• ಕ್ರಿಯಾಶೀಲರಾಗಿ (Be Active)
ಯಾವುದೋ ವಿಚಾರದಿಂದ ನೋವು (Pain), ದುಃಖ, ಖಿನ್ನತೆ (Depression), ಆತಂಕ ಹೆಚ್ಚಾದಾಗ ತಕ್ಷಣ ಯಾವುದಾದರೂ ಕೆಲಸದಲ್ಲಿ (Work) ತೊಡಗಿಸಿಕೊಳ್ಳಿ. ಸಾಮಾನ್ಯವಾಗಿ ಆ ಕ್ಷಣದಲ್ಲಿ ಕೆಲಸ ಮಾಡಲು ಸಹ ಮೂಡ್ ಇರುವುದಿಲ್ಲ. ಆದರೂ ಇದನ್ನೊಂದು ತಂತ್ರ (Technique) ಎಂದು ನೆನಪಿನಲ್ಲಿಟ್ಟುಕೊಂಡು ಕೆಲಸದಲ್ಲಿ ಭಾಗಿಯಾಗಿ. ಕೆಲಸ ಮಾಡುವ ಸಮಯದಲ್ಲಿ ಎಂಡಾರ್ಫಿನ್ ಹಾರ್ಮೋನ್ (Hormones) ಬಿಡುಗಡೆಯಾಗುತ್ತದೆ. ಸಂತಸದ ಭಾವನೆ ಮೂಡಿಸುವ ಈ ಹಾರ್ಮೋನ್ ಮೂಡನ್ನು ಸುಧಾರಿಸಿ, ಒತ್ತಡ ಕಡಿಮೆ ಮಾಡಿ, ಆರೋಗ್ಯವನ್ನೂ ಸುಧಾರಿಸುತ್ತದೆ. ನಿಯಮಿತ ದೈಹಿಕ ಚಟುವಟಿಕೆ ಸಹ ಈ ನಿಟ್ಟಿನಲ್ಲಿ ಸಹಕಾರಿ. ಮನದಲ್ಲಿ ಕಿರಿಕಿರಿ ಹೆಚ್ಚಾದಾಗ ಕಡ್ಡಾಯವಾಗಿ ಬೆವರು ಬರುವಷ್ಟು ವ್ಯಾಯಾಮ ಮಾಡಿ.
Health Tips : ನಗ್ತಾ ನಗ್ತಾ ಇದ್ದಾನೆಂದ್ರೆ ಆತ ಸುಖಿ ಅಲ್ಲ..! ಸ್ಮೈಲಿಂಗ್ ಡಿಪ್ರೆಶನ್ ಆಗಿರ್ಬಹುದು!
• ಪ್ರೀತಿಪಾತ್ರರೊಂದಿಗೆ (Connect Loved One) ಮಾತನಾಡಿ
ಬೇಸರವಾದಾಗ ನಿಮ್ಮ ಪಾಡಿಗೆ ನೀವು ಸುಮ್ಮನಿರುವುದು ಸರಿಯಲ್ಲ. ಪ್ರೀತಿಪಾತ್ರರ ಸಂಪರ್ಕಕ್ಕೆ ಬರುವುದು ಅಗತ್ಯ. ಆ ಕ್ಷಣದಲ್ಲಿ ಭಾವನೆಗಳನ್ನು ಹಂಚಿಕೊಳ್ಳಲು ಇಷ್ಟವಿಲ್ಲದಿದ್ದರೂ ಅವರೊಂದಿಗಿನ ಒಡನಾಟದಿಂದ ತಮ್ಮೊಂದಿಗೆ ಜನರಿದ್ದಾರೆ ಎನ್ನುವ ಸುರಕ್ಷಿತ (Secured) ಭಾವನೆ ಮೂಡುತ್ತದೆ. ಇದು ಮುಖ್ಯ. ಇಂದಿನ ದಿನಗಳಲ್ಲಿ ಸ್ನೇಹಿತರು, ಸಹೋದ್ಯೋಗಿಗಳು, ನೆರೆಯವರು, ಆಸಕ್ತಿಗೆ ಹೊಂದುವ ಗುಂಪು, ಕುಟುಂಬದ ನೆಂಟರಿಷ್ಟರೊಂದಿಗೆ ಉತ್ತಮ ಬಾಂಧವ್ಯ (Relation) ಇಟ್ಟುಕೊಳ್ಳುವುದು ಅಗತ್ಯ. ಏಕಾಂಗಿ ಭಾವ ಹೊಡೆದೋಡಿಸಲು ಇದು ಸಹಕಾರಿ. ಖಿನ್ನರಾದಾಗ (Depress) ಯಾರಿಗಾದರೂ ಒಂದು ಮೆಸೇಜ್, ಫೋನ್ ಕಾಲ್ ಮಾಡುವುದರಿಂದ ಬಹಳಷ್ಟು ಬದಲಾವಣೆ ಕಾಣಬಹುದು.
• ಕೃತಜ್ಞತೆ (Gratitude) ಹೆಚ್ಚಿಸಿಕೊಳ್ಳಿ
ಕೃತಜ್ಞತೆಯ ಭಾವನೆ ಹೆಚ್ಚಿದರೆ ನೆಗೆಟಿವ್ ವಿಚಾರಗಳು ತನ್ನಿಂತಾನೇ ದೂರವಾಗುತ್ತವೆ. ನಾವೇನು ಹೊಂದಿದ್ದೇವೆಯೋ ಅವುಗಳ ಬಗ್ಗೆ ಧನ್ಯತಾ ಭಾವನೆ (Feelings) ಹೆಚ್ಚಿಸಿಕೊಳ್ಳುವುದು ಮಾನಸಿಕ ಆರೋಗ್ಯಕ್ಕೆ (Mental Health) ಮುಖ್ಯ. ಇದೊಂದು ಸಿಂಪಲ್ ಟೆಕ್ನಿಕ್. ದಿನವೂ ಅಭ್ಯಾಸ ಮಾಡಬೇಕು. ಪ್ರೀತಿಪಾತ್ರರು, ಆರೋಗ್ಯ, ಮನೆ, ಉದ್ಯೋಗ ಎಲ್ಲವನ್ನೂ ಒಳಗೊಂಡಂತೆ ಕೃತಜ್ಞತಾ ಭಾವನೆಯನ್ನು ಜಾಗೃತಗೊಳಿಸಿಕೊಳ್ಳಬೇಕು. ಸಕಾರಾತ್ಮಕ ಪರಿವರ್ತನೆ ಇದರಿಂದ ಸಾಧ್ಯ ಎನ್ನುವುದು ಅಧ್ಯಯನಗಳಿಂದ ದೃಢಪಟ್ಟಿದೆ.
• ಉಸಿರಾಟದ ವ್ಯಾಯಾಮಗಳು (Breathing Exercises)
ಪ್ರಾಣಾಯಾಮ ಉಸಿರನ್ನು ನಿಯಮಿತಗೊಳಿಸುವ ಮೂಲಕ ರಿಲ್ಯಾಕ್ಸ್ (Relax) ನೀಡುತ್ತದೆ. ಒತ್ತಡ (Stress) ಕಡಿಮೆಗೊಳಿಸುತ್ತದೆ. ನಕಾರಾತ್ಮಕತೆಯನ್ನು ದೂರವಿಡಲು ಇದು ಅತ್ಯುತ್ತಮ ಸರಳ ವಿಧಾನ. ಉಸಿರಾಟದ ಮೇಲೆಯೇ ಗಮನವಿಟ್ಟು ಮಾಡುವ ಈ ಕ್ರಿಯೆ ನೆಗಟಿವಿಟಿಯನ್ನು ದೂರ ಮಾಡುತ್ತದೆ. ಧ್ಯಾನವೂ ಈ ನಿಟ್ಟಿನಲ್ಲಿ ಭಾರೀ ಸಹಕಾರಿ.
Stressನಲ್ಲಿದ್ದಾಗ ಈ ಫುಡ್ ಅಪ್ಪಿ ತಪ್ಪಿಯೂ ತಿನ್ನಬೇಡಿ!
• ಭಾವನೆಗಳನ್ನು ಬರೆಯಿರಿ
ವಿಚಾರಗಳ ಬಗ್ಗೆ ಸ್ಪಷ್ಟತೆ ಮೂಡಲು ನಿಮಗೇನು ಅನಿಸುತ್ತಿದೆಯೋ ಅದನ್ನು ಬರೆದುಕೊಳ್ಳುವುದು (Write Down) ಉತ್ತಮ ವಿಧಾನ. ಬರೆಯುವುದು ಅಭ್ಯಾಸವಾದರೆ ಕ್ರಮೇಣ ನಿಮ್ಮ ಮೇಲೆ ನಿಮಗೆ ನಿಯಂತ್ರಣ ಹೆಚ್ಚುತ್ತದೆ. ನೆಗಟಿವ್ (Negative) ಯೋಚನೆಯ ವಿಧಾನವನ್ನು ಗುರುತಿಸಲು ಇದು ಸಹಕಾರಿಯಾಗುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.