ಒಂದು ತುತ್ತು ಬಾಯ್ನಲ್ಲಿಡುವ ಮುನ್ನವೇ ಇನ್ನೊಂದು ತುತ್ತು ಸಿದ್ಧವಿರುತ್ತದೆ. ಐದು ನಿಮಿಷದಲ್ಲೇ ಊಟ ಮುಗಿಸಿ ಕೆಲಸಕ್ಕೆ ಹೊರಡುವವರಿದ್ದಾರೆ. ಎಷ್ಟ ಫಟಾ ಫಟ್ ತಿಂದು ಮುಗಿಸ್ದೆ ನೋಡು ಅಂತಾರೆ. ಆದ್ರೆ ಇದು ಸಾಧನೆಯಲ್ಲ ಸ್ವಾಮಿ,ಆನಾರೋಗ್ಯಕ್ಕೆ ಆಹ್ವಾನ ಕೊಟ್ಟಂತೆ.
ಹಸಿವಾಗಿದೆ (Hungry), ಹೊಟ್ಟೆ (Stomach)ಗೆ ಆಹಾರ (Food) ಹಾಕ್ಬೇಕು ಎಂಬುದು ಅನೇಕರ ಗುರಿಯಾಗಿರುತ್ತದೆ. ಹಾಗಾಗಿ ಯಾವ ಆಹಾರ ಸೇವನೆ ಮಾಡ್ತಿದ್ದೇವೆ ಮತ್ತು ಹೇಗೆ ಸೇವನೆ ಮಾಡ್ತಿದ್ದೇವೆ ಎನ್ನುವ ಪರಿವೆ ಇರೋದಿಲ್ಲ. ಆಫೀಸ್ (Office) ಗೆ ಲೇಟ್ ಆಯ್ತು ಅಂತಾ ಗಬ ಗಬ ಆಹಾರ ತಿನ್ನುವವರಿದ್ದಾರೆ. ಶಾಲೆ – ಕಾಲೇಜಿಗೆ ಟೈಂ ಆಯ್ತು ಅಂತಾ ಆಹಾರ ಮುಕ್ಕುತ್ತಲೇ ರೆಡಿ ಆಗುವವರಿದ್ದಾರೆ. ಲ್ಯಾಪ್ ಟಾಪ್ ಮುಂದೆ ಕುಳಿತು ಫಟಾ ಫಟ್ ಆಹಾರ ತಿಂದು ಮುಗಿಸುವವರಿದ್ದಾರೆ. ಶಾಂತವಾದ ಸ್ಥಳದಲ್ಲಿ ಕುಳಿತು, ನಿಧಾನವಾಗಿ ಆಹಾರವನ್ನು ಸೇವಿಸುವಷ್ಟು ಸಮಯ ಯಾರಿಗೂ ಇಲ್ಲ. ತರಾತುರಿಯಲ್ಲಿ ಆಹಾರವನ್ನು ನಾವು ನುಂಗ್ತೇವೆಯೇ ವಿನಃ ಜಗಿದು ನುಂಗುವುದಿಲ್ಲ. ಇದ್ರಿಂದ ಹೊಟ್ಟೆಯೇನೋ ತುಂಬಿದ ಅನುಭವವಾಗುತ್ತದೆ. ಆದ್ರೆ ನೀವು ತಿಂದ ಆಹಾರವನ್ನು ಜೀರ್ಣಿಸಿಕೊಳ್ಳುವುದು ಹೊಟ್ಟೆಗೆ ಕಷ್ಟವಾಗುತ್ತದೆ. ತರಾತುರಿಯಲ್ಲಿ ಆಹಾರ ಸೇವನೆ ಮಾಡುವುದ್ರಿಂದ ನಮ್ಮ ಆರೋಗ್ಯ ಹದಗೆಡುತ್ತದೆ. ಗಡಿಬಿಡಿಯಲ್ಲಿ ಜಗಿಯದೆ ಆಹಾರ ತಿಂದ್ರೆ ಏನೆಲ್ಲ ಸಮಸ್ಯೆಯಾಗುತ್ತದೆ ಎಂಬುದನ್ನು ತಜ್ಞರು ಹೇಳಿದ್ದಾರೆ. ಆರೋಗ್ಯ ಸರಿಯಾಗಿರಬೇಕೆಂದ್ರೆ ಆಹಾರ ತೆಗೆದುಕೊಳ್ಳುವ ವಿಧಾನವೂ ಗೊತ್ತಿರಬೇಕು. ತರಾತುರಿಯಲ್ಲಿ ಆಹಾರ ತಿಂದ್ರೆ ಏನೇನಾಗುತ್ತೆ ಎಂಬುದರ ವಿವರ ಇಲ್ಲಿದೆ.
ಫಾಸ್ಟ್ ಆಗಿ ಆಹಾರ ಸೇವನೆ ಅನಾರೋಗ್ಯಕ್ಕೆ ದಾರಿ :
undefined
ಬೊಜ್ಜಿನ ಸಮಸ್ಯೆ : ಮೊದಲೇ ಹೇಳಿದಂತೆ ನಮಗೆ ಆಹಾರವನ್ನು ಜಗಿದು ನುಂಗಲು ಸಮಯವಿರುವುದಿಲ್ಲ. ನಾವು ಮುದ್ದೆ ತಿಂದಂತೆ ಎಲ್ಲ ಆಹಾರವನ್ನು ನುಂಗಿ ಬಿಡ್ತೇವೆ. ಇದ್ರಿಂದ ನಾವು ಎಷ್ಟು ಆಹಾರವನ್ನು ತಿನ್ನುತ್ತಿದ್ದೀರಿ ಎಂಬುದು ತಿಳಿಯುವುದಿಲ್ಲ. ತಜ್ಞರ ಪ್ರಕಾರ, ಒಂದು ತುತ್ತು ಆಹಾರವನ್ನು 32 ಬಾರಿ ಅಗಿಯಬೇಕು. ನಿಮಗೆ ಇಷ್ಟು ಬಾರಿ ಅಗಿಯಲು ಸಾಧ್ಯವಾಗದಿದ್ದರೆ 15 ಬಾರಿ ಅಗಿಯಬೇಕು. ಜಗಿದು ಆಹಾರ ಸೇವನೆ ಮಾಡ್ತಿದ್ದರೆ ನಿಮ್ಮ ಮೆದುಳಿಗೆ ನೀವು ಆಹಾರ ಸೇವನೆ ಮಾಡ್ತಿದ್ದೀರಿ ಎಂಬುದು ಗೊತ್ತಾಗುತ್ತದೆ. ಆದ್ರೆ ಅಗಿಯದೆ ಆಹಾರ ಸೇವನೆ ಮಾಡಿದಾಗ ನೀವು ಅಗತ್ಯಕ್ಕಿಂತ ಹೆಚ್ಚು ಆಹಾರ ತಿಂದಿರುತ್ತೀರಿ. ಇದ್ರಿಂದ ಬೊಜ್ಜು ನಿಮ್ಮನ್ನು ಕಾಡುತ್ತದೆ.
AC EFFECT: ಮೈ ಕೂಲಾಗಿಸುವ ಎಸಿಯಿಂದ ತಲೆನೋವು!
ಅಜೀರ್ಣ ಸಮಸ್ಯೆ : ತರಾತುರಿಯಲ್ಲಿ ಅಗಿಯದೆ ಆಹಾರ ಸೇವನೆ ಮಾಡುವುದ್ರಿಂದ ಆಹಾರ ಸೇವಿಸುವಾಗ ಉತ್ಪತ್ತಿಯಾಗುವ ಲಾಲಾರಸವು ಬಾಯಿಯಲ್ಲಿ ಸರಿಯಾಗಿ ರೂಪುಗೊಳ್ಳುವುದಿಲ್ಲ. ಇದಲ್ಲದೆ ಕಾರ್ಬೋಹೈಡ್ರೇಟ್‌ಗಳಿಂದಾಗಿ ಆಹಾರ ಸರಿಯಾಗಿ ಜೀರ್ಣವಾಗುವುದಿಲ್ಲ. ಜಗಿಯದೆ ಆಹಾರ ಸೇವನೆ ಮಾಡುವುದ್ರಿಂದ ಅಜೀರ್ಣ ಮತ್ತು ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು.
ಸಕ್ಕರೆ ಸಮಸ್ಯೆ : ಅಗಿಯದೆ ಆಹಾರವನ್ನು ಸೇವಿಸುವುದರಿಂದ ಅಧಿಕ ತೂಕದ ಸಾಧ್ಯತೆ ಹೆಚ್ಚಿಸುತ್ತದೆ. ಈ ಕಾರಣದಿಂದಾಗಿ ಮಧುಮೇಹದ ಅಪಾಯವು ಹೆಚ್ಚಾಗುತ್ತದೆ. ಸ್ಥೂಲಕಾಯತೆಯಿಂದ ಟೈಪ್ 2 ಮಧುಮೇಹ ಹೆಚ್ಚಾಗುತ್ತದೆ. ಬೊಜ್ಜು ಇನ್ಸುಲಿನ್ ಪ್ರತಿರೋಧದ ಅಪಾಯವನ್ನು ಹೆಚ್ಚಿಸುತ್ತದೆ. ಇದರಿಂದ ನೀವು ಮಧುಮೇಹದಂತಹ ಕಾಯಿಲೆಗಳಿಗೆ ಬಲಿಯಾಗಬಹುದು.
ಉಸಿರುಗಟ್ಟಿಸುವ ಸಮಸ್ಯೆ : ವಾಸ್ತವವಾಗಿ ಆಹಾರವನ್ನು ತ್ವರಿತವಾಗಿ ತಿನ್ನುವುದರಿಂದ ಆಹಾರವು ಗಂಟಲಿನಲ್ಲಿ ಸಿಲುಕಿಕೊಳ್ಳುತ್ತದೆ. ಇದು ಉಸಿರುಗಟ್ಟುವಿಕೆಗೆ ಕಾರಣವಾಗಬಹುದು. ಜಗಿಯದೆ ಆಹಾರವನ್ನು ಸೇವಿಸುವುದರಿಂದ, ದೇಹವು ಪೋಷಕಾಂಶಗಳನ್ನು ಪಡೆಯುವುದಿಲ್ಲ, ಇದರಿಂದಾಗಿ ನಿಮ್ಮ ದೇಹವು ಸರಿಯಾಗಿ ಬೆಳವಣಿಗೆಯಾಗುವುದಿಲ್ಲ.
ಮಧುಮೇಹ, ಬೊಜ್ಜಿನ ಸಮಸ್ಯೆಯಿದ್ದಾಗ ಹೀಗಾದ್ರೆ ಜೀವಕ್ಕೇ ಅಪಾಯ..!
ಇತರ ಆರೋಗ್ಯ ಸಮಸ್ಯೆಗಳು : ಸರಿಯಾಗಿ ಜಗಿದು ಆಹಾರ ತಿನ್ನದಿರುವುದು ನಿಮ್ಮ ದೇಹದಲ್ಲಿ ಅನೇಕ ಇತರ ಕಾಯಿಲೆಗಳನ್ನು ಉಂಟುಮಾಡಬಹುದು. ಕೊಲೆಸ್ಟ್ರಾಲ್, ಹೃದ್ರೋಗ, ಪಾದಗಳಲ್ಲಿ ಊತ ಮುಂತಾದ ಸಮಸ್ಯೆಗಳು ನಿಮ್ಮನ್ನು ಕಾಡುವ ಸಾಧ್ಯತೆಯಿದೆ.
ಸಮಸ್ಯೆಗೆ ನಿಮ್ಮಲ್ಲೆ ಇದೆ ಪರಿಹಾರ : ನಿಮ್ಮ ಆರೋಗ್ಯ ನಿಮ್ಮ ಕೈನಲ್ಲಿದೆ. ಆಹಾರ ಸೇವನೆ ಎಷ್ಟು ಮುಖ್ಯವೋ ಆಹಾರ ಸೇವನೆ ವಿಧಾನ ಕೂಡ ಮುಖ್ಯ. ಹಾಗಾಗಿ ಆಹಾರ ತೆಗೆದುಕೊಳ್ಳಲು ಸಮಯ ನಿಗದಿಪಡಿಸಿ. ತಿನ್ನುವ ವೇಳೆ ಬೇರೆ ಯಾವುದೇ ಕೆಲಸ ಮಾಡಬೇಡಿ. ಆತುರವಿಲ್ಲದೆ ಆರಾಮವಾಗಿ ಕುಳಿತು ಆಹಾರ ಸೇವನೆ ಮಾಡಿ. ಪ್ರತಿ ದಿನ ಊಟಕ್ಕೆ ಕನಿಷ್ಠ 20 ನಿಮಿಷ ಮೀಸಲಿಡಿ. ಆಹಾರದ ಸ್ವಾದ,ರುಚಿಯನ್ನು ಗಮನಿಸುತ್ತ ಆಹಾರವನ್ನು ಜಗಿದು ನುಂಗಿ. ಚಿಕ್ಕ ತುತ್ತನ್ನು ತೆಗೆದುಕೊಂಡು ಅದನ್ನು ಅಗಿದು ಅಗಿದು ತಿನ್ನಿ.