ಬಾಲಿವುಡ್ ನಟಿ ಶೆರ್ಲಿನ್ ಚೋಪ್ರಾ ಅಭಿಮಾನಿಗಳಿಗೆ ಬ್ಯಾಡ್ ನ್ಯೂಸ್ ನೀಡಿದ್ದಾರೆ. ತಮ್ಮ ಖಾಯಿಲೆ ಹಾಗೂ ಅಮ್ಮನಾಗುವ ಆಸೆಯನ್ನು ಶೆರ್ಲಿನ್ ಫ್ಯಾನ್ಸ್ ಮುಂದೆ ಹಂಚಿಕೊಂಡಿದ್ದಾರೆ.
ಕಾಂಟ್ರವರ್ಸಿ ಕ್ವೀನ್ (Controversy Queen), ಸೋಶಿಯಲ್ ಮೀಡಿಯಾದಲ್ಲಿ ಸದಾ ಚರ್ಚೆಯಲ್ಲಿರುವ ನಟಿ ಶೆರ್ಲಿನ್ ಚೋಪ್ರಾ (Actress Sherlyn Chopra). ಬಿಗ್ ಬಾಸ್ (Bigg Boss) ಮಾಜಿ ಸ್ಪರ್ಧಿ ಕೂಡ ಹೌದು. ವೃತ್ತಿ ಹಾಗೂ ಬ್ಯೂಟಿ ಎರಡಕ್ಕೂ ಹೆಸರಾಗಿರುವ ಶೆರ್ಲಿನ್ ಚೋಪ್ರಾ ತಮ್ಮ ಅಭಿಮಾನಿಗಳಿಗೆ ಬೇಸರದ ಸುದ್ದಿಯೊಂದನ್ನು ಹೇಳಿದ್ದಾರೆ. 37ನೇ ವಯಸ್ಸಿನಲ್ಲೂ ಅವಿವಾಹಿತೆಯಾಗಿರುವ ಶೆರ್ಲಿನ್ ಚೋಪ್ರಾ ಎಂದೂ ಅಮ್ಮನಾಗಲು ಸಾಧ್ಯವಿಲ್ಲ. ಅವರು ಗಂಭೀರ ಖಾಯಿಲೆಯಿಂದ ಬಳಲುತ್ತಿದ್ದು, ಇತ್ತೀಚಿಗಷ್ಟೆ ಅದ್ರ ಬಗ್ಗೆ ಮಾಹಿತಿ ನೀಡಿದ್ದಾರೆ ಶೆರ್ಲಿನ್.
ಶೆರ್ಲಿನ್ ಚೋಪ್ರಾ ಅವರಿಗೆ ಸಿಸ್ಟಮಿಕ್ ಲೂಪಸ್ ಎರಿಥೆಮಾಟೋಸಸ್ (SLE) ಎಂಬ ಕಾಯಿಲೆ ಇದೆ. ಈ ಕಾರಣದಿಂದಾಗಿ, 2021 ರಲ್ಲಿ ಅವರ ಮೂತ್ರಪಿಂಡ (Kidney) ವೈಫಲ್ಯಗೊಂಡಿತ್ತು. ಅವರ ಖಾಯಿಲೆ ಅಪಾಯಕಾರಿಯಾಗಿದೆ. ಹಾಗಾಗಿ ಶೆರ್ಲಿನ್ ಇದ್ರ ಬಗ್ಗೆ ಹೆಚ್ಚು ಕಾಳಜಿವಹಿಸಬೇಕಾಗಿದೆ. ಅವರಿಗೆ ಜೀವನ ಪರ್ಯಂತ ಔಷಧಿ ಸೇವನೆ ಅನಿವಾರ್ಯವಾಗಿದೆ. ದಿನಕ್ಕೆ ಮೂರು ಬಾರಿ ಶೆರ್ಲಿನ್ ಔಷಧಿಯನ್ನು ತೆಗೆದುಕೊಳ್ತಿದ್ದಾರೆ. ಬೆಳಿಗ್ಗೆ, ಮಧ್ಯಾಹ್ನ ಮತ್ತು ಸಂಜೆ ಔಷಧಿ ಸೇವನೆ ಮಾಡ್ತೇನೆ ಎಂದು ಶೆರ್ಲಿನ್ ಹೇಳಿದ್ದಾರೆ.
ನಟಿ ರಂಭಾ ದಾಂಪತ್ಯದಲ್ಲಿ ತಮನ್ನಾ ಎಂಟ್ರಿ ? ಈ ವಿಷ್ಯಕ್ಕೆ ಪತಿ ಮೇಲಿದೆ ಕೋಪ !
ಎಂದೂ ತಾಯಿಯಾಗಲ್ಲ ಶೆರ್ಲಿನ್ : ಗರ್ಭಾವಸ್ಥೆ ಬಗ್ಗೆ ಮಾತನಾಡಿದ ಶೆರ್ಲಿನ್, ತಾಯಿಯಾಗುವುದು ಅಪಾಯಕಾರಿಯಾಗಿದೆ. ಈ ಬಗ್ಗೆ ಎಂದಿಗೂ ಯೋಚಿಸಬೇಡಿ ಎಂದು ವೈದ್ಯರು ಹೇಳಿದ್ದಾರೆ. ಒಂದ್ವೇಳೆ ಗರ್ಭಧರಿಸಿದ್ರೆ ಅದು ತಾಯಿ ಮತ್ತು ಮಗು ಇಬ್ಬರ ಪ್ರಾಣಕ್ಕೂ ಅಪಾಯಕಾರಿ ಎಂದು ವೈದ್ಯರು ಎಚ್ಚರಿಕೆ ನೀಡಿದ್ದಾರಂತೆ.
ಮೂರ್ನಾಲ್ಕು ಮಕ್ಕಳಿಗೆ ತಾಯಿಯಾಗಲಿದ್ದಾರೆ ಶೆರ್ಲಿನ್ : ವೈದ್ಯರು ಇಷ್ಟೆಲ್ಲ ಹೇಳಿದ ಮೇಲೂ ಶೆರ್ಲಿನ್ ತಾಯಿಯಾಗುವ ಆಸೆ ಬತ್ತಿಲ್ಲ. ಅವರು ಮೂರ್ನಾಲ್ಕು ಮಕ್ಕಳಿಗೆ ಅಮ್ಮನಾಗುವ ಕನಸು ಕಾಣ್ತಿದ್ದಾರೆ. ಅದಕ್ಕೆ ಬೇರೆ ಮಾರ್ಗವನ್ನು ಹುಡುಕುತ್ತಿದ್ದೇನೆ ಎಂದಿರುವ ಶೆರ್ಲಿನ್, ಈ ಬಗ್ಗೆ ಶೀಘ್ರದಲ್ಲೇ ಎಲ್ಲರಿಗೂ ತಿಳಿಸೋದಾಗಿ ಹೇಳಿದ್ದಾರೆ. ಇಷ್ಟೇ ಅಲ್ಲ ಹುಟ್ಟುವ ಮಕ್ಕಳ ಹೆಸರನ್ನೂ ಶೆರ್ಲಿನ್ ಆಲೋಚನೆ ಮಾಡಿದಂತಿದೆ. ನನಗೆ ಎ ಅಕ್ಷರದಿಂದ ಬರುವ ಹೆಸರುಗಳು ಪ್ರಿಯ. ಹಾಗಾಗಿ ಮಕ್ಕಳಿಗೆ ಎ ಅಕ್ಷರದಿಂದ ಬರುವ ಹೆಸರುಗಳನ್ನೇ ಇಡಲು ಬಯಸ್ತೇನೆ ಎಂದು ಶೆರ್ಲಿನ್ ಇದೇ ವೇಳೆ ಹೇಳಿದ್ದಾರೆ.
ಮಕ್ಕಳಿಗಾಗಿ ಇಷ್ಟೆಲ್ಲ ಪ್ಲಾನ್ ಮಾಡಿದ್ದಾರೆ ಶೆರ್ಲಿನ್ : ಶೆರ್ಲಿನ್ ಚೋಪ್ರಾ ಅವರಿಗೆ ಮಕ್ಕಳೆಂದ್ರೆ ಬಹಳ ಪ್ರೀತಿಯಂತೆ. ಮಕ್ಕಳು ಬರ್ತಾರೆ ಎಂಬ ವಿಷ್ಯವೇ ಆಕೆಗೆ ಹೆಚ್ಚು ಖುಷಿ ನೀಡಿದೆಯಂತೆ. ಇನ್ನು ಮಕ್ಕಳು ಬಂದ್ಮೇಲೆ ನಾನು ಎಷ್ಟು ಸಂತೋಷವಾಗಿರ್ತೇನೆ ಎಂಬುದನ್ನು ಹೇಳಲು ಸಾಧ್ಯವಿಲ್ಲ. ತಾಯಿಯಾದ್ಮೇಲೂ ನಾನು ವೃತಿಯನ್ನು ಮುಂದುವರೆಸುತ್ತೇನೆ ಎನ್ನುವ ಶೆರ್ಲಿನ್, ಮಕ್ಕಳನ್ನು ತನ್ನ ಜೊತೆ ಕರೆದುಕೊಂಡು ಹೋಗುವ ಪ್ಲಾನ್ ಮಾಡಿದ್ದಾರೆ. ಆರಂಭದಲ್ಲಿ ಮಕ್ಕಳನ್ನು ನೋಡಿಕೊಳ್ಳಲು ದಾದಿಯರನ್ನು ನೇಮಕ ಮಾಡಿಕೊಳ್ತೇನೆ ಎಂದಿದ್ದಾರೆ.
ಇನ್ನೆರಡೇಟು…ಭಾಗ್ಯಾ ಕಪಾಳಮೋಕ್ಷಕ್ಕೆ ವೀಕ್ಷಕಕರ ಚಪ್ಪಾಳೆ
2012 ರಲ್ಲಿ ಪ್ಲೇಬಾಯ್ ನಿಯತಕಾಲಿಕೆಗೆ ಪೋಸ್ ನೀಡಿದ ಮೊದಲ ಭಾರತೀಯ ಮಹಿಳೆ ಎಂಬ ಹೆಗ್ಗಳಿಕೆಗೆ ಶೆರ್ಲಿನ್ ಚೋಪ್ರಾ ಪಾತ್ರರಾಗಿದ್ದರು. ಇದಾದ ಬಳಿಕ ಅನೇಕ ವಿವಾದಕ್ಕೆ ಒಳಗಾಗಿದ್ದರು. ಶೆರ್ಲಿನ್ ಚೋಪ್ರಾ 2000 ರಲ್ಲಿ ತಮ್ಮ ವೃತ್ತಿಜೀವನ ಶುರು ಮಾಡಿದ್ದರು. ಅವರು 2005ರಲ್ಲಿ ಟೈಮ್ ಪಾಸ್, ನಂತ್ರ ದೋಸ್ತಿ: ಫ್ರೆಂಡ್ಸ್ ಫಾರೆವರ್ ಮತ್ತು ರಕಿಬ್ ಸೇರಿದಂತೆ ಹಿಂದಿ, ತಮಿಳು, ತೆಲುಗು ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದರು. ನಂತ್ರ 2009 ರಲ್ಲಿ ಬಿಗ್ ಬಾಸ್ ಸೀಸನ್ 3 ಸೇರಿದಂತೆ ಅನೇಕ ರಿಯಾಲಿಟಿ ಶೋಗಳಲ್ಲಿ ಶೆರ್ಲಿನ್ ಚೋಪ್ರಾ ಪಾಲ್ಗೊಂಡಿದ್ದರು. ಇದಲ್ಲದೆ ಅವರು ಪೌರಾಶ್‌ಪುರದ ಸೀಸನ್ 2 ನಲ್ಲಿಯೂ ಕಾಣಿಸಿಕೊಂಡರು.