ಕರಿಷ್ಮಾ ಕಪೂರ್ ಯಾವಾಗ್ಲೂ ಹಾಗೇ. ಸಾರ್ವಜನಿಕವಾಗಿ ಕಾಣಿಸಿಕೊಳ್ಳುವಾಗ ಆಕೆ ನಿಗಿನಿಗಿ ಅಂತಾ ಇರ್ತಾಳೆ. ಸದಾ ಹೊಳೆಯುವ ತ್ವಚೆ. ಒಳ್ಳೇ ಡ್ರೆಸ್ಸಿಂಗ್ ಸೆನ್ಸು. ಒಂಚೂರೂ ಕೊಬ್ಬು ಸೇರದ, ಕಡಿಮೆಯೂ ಆಗದ ಮೈಕಟ್ಟು. ಆಕೆಯ ಹೊಳೆಯುವ ತ್ವಚೆ, ಅಂದವಾದ ಮೈಕಟ್ಟಿನ ಸೀಕ್ರೆಟ್ ಏನು?
ಅವಳಿಗೀಗ ನಲುವತ್ತೈದು. ಗೊತ್ತಾಗುತ್ತಾ? ಕರಿಷ್ಮಾ ಕಪೂರ್ ಯಾವಾಗ್ಲೂ ಹಾಗೇ. ಸಾರ್ವಜನಿಕವಾಗಿ ಕಾಣಿಸಿಕೊಳ್ಳುವಾಗ ಆಕೆ ನಿಗಿನಿಗಿ ಅಂತಾ ಇರ್ತಾಳೆ. ಸದಾ ಹೊಳೆಯುವ ತ್ವಚೆ. ಒಳ್ಳೇ ಡ್ರೆಸ್ಸಿಂಗ್ ಸೆನ್ಸು. ಒಂಚೂರೂ ಕೊಬ್ಬು ಸೇರದ, ಕಡಿಮೆಯೂ ಆಗದ ಮೈಕಟ್ಟು. ಕರಿಷ್ಮಾ ಕಪೂರ್ ಒಂದು ಕಾಲದ ಹೀರೋಯಿನ್ ಆಗಿದ್ದಾಕೆ. ಈಗ್ಲೂ ಹಿರೋಯಿನ್ ಆಗ್ಬಹುದು ಅನ್ನುವಂಥ ಮೈಸಿರಿ ಉಳಿಸಿಕೊಂಡಿದ್ದಾಳೆ. ಇಬ್ಬರು ಮಕ್ಕಳ ತಾಯಿ ಅಂತ ಯಾರೂ ಹೇಳಲಾರರು. ಹಾಗೆ ಬಾಡಿ ಮೇಂಟೇನ್ ಮಾಡಿದಾಳೆ.
ಅದಿರಲಿ. ಆಕೆಯ ಹೊಳೆಯುವ ತ್ವಚೆ, ಅಂದವಾದ ಮೈಕಟ್ಟಿನ ಸೀಕ್ರೆಟ್ ಏನು? ಕರಿಷ್ಮಾ ಈ ಬಗ್ಗೆ ಏನನ್ನೂ ಮುಚ್ಚಿಡೊಲ್ಲ. ತನ್ನ ಬ್ಯೂಟಿ ಸೀಕ್ರೆಟ್‌ಗಳನ್ನು ಮುಕ್ತವಾಗಿ ಹಂಚಿಕೊಳ್ತಾಳೆ.
ಮೊದಲನೆಯದು, ಸಾಕಷ್ಟು ನೀರು ಕುಡೀತೀನಿ. ನಾನು ಬೆಳಗ್ಗೆ ಬೇಗನೆ ಏಳ್ತೀನಿ. ಎದ್ದ ಕೂಡಲೆ ಮಾಡುವ ಮೊದಲ ಕೆಲಸ ಒಂದು ದೊಡ್ಡ ಲೋಟದಲ್ಲಿ ಬಿಸಿಬಿಸಿ ನೀರು ಕುಡಿಯುವುದು. ನಂತರ ವ್ಯಾಯಾಮ, ಯೋಗ. ಯೋಗ ಮುಗಿಸಿದ ಬಳಿಕ ಮತ್ತೆ ನೀರು ಸೇವನೆ. ಅವಕಾಶ ಇದ್ದಾಗಲೆಲ್ಲ ದೇಹಕ್ಕೆ ಸಾಕಷ್ಟು ನೀರು ತೆಗೆದುಕೊಳ್ಳುತ್ತಲೇ ಇರುತ್ತೇನೆ ಅಂತಾರೆ ಕರಿಷ್ಮಾ. ನೀರು ದೇಹದ ಚಯಾಪಚಯ ಕ್ರಿಯೆಗಳನ್ನು ಸುಗಮಗೊಳಿಸುತ್ತೆ ಮಾತ್ರವಲ್ಲ ಬಾಡಿಯಲ್ಲಿರುವ ನಂಜಿನ ಅಂಶಗಳನ್ನು ಹೊರಹಾಕುತ್ತದೆ.
ವಯಸ್ಸನ್ನು ನಿಲ್ಲಿಸೋ ಮನೆಮದ್ದು, ಸಿಂಪಲ್ ಇದೆ ಟ್ರೈ ಮಾಡಿ
ಎರಡನೇ ಪಾಯಿಂಟ್, ಮಲಗುವ ಮೊದಲು ಕಡ್ಡಾಯವಾಗಿ ಮೇಕಪ್ ತೆಗೆಯುವುದು. ಕರಿಷ್ಮಾ ತಮ್ಮ 17ನೇ ವಯಸ್ಸಿನಲ್ಲೇ ಸಿನಿಮಾಗಳಲ್ಲಿ ನಟಿಸಲಾರಂಭಿಸಿದರು. ದಿನವಿಡೀ ಮೇಕಪ್‌ನಲ್ಲಿ ಇರಬೇಕಾಗಿತ್ತು.ಆದರೆ ಸಾಧ್ಯವಿದ್ದಾಗೆಲ್ಲ ಮೇಕಪ್ ತೆಗೆದುಬಿಡುತ್ತಿದ್ದರು. ಮೇಕಪ್ ಇದ್ದರೆ ಮುಖದ ಚರ್ಮದ ಸೂಕ್ಷ್ಮ ರಂಧ್ರಗಳು ಮುಚ್ಚಿಹೋಗುತ್ತವೆ. ಚರ್ಮಕ್ಕೆ ಮುಕ್ತವಾದ ಉಸಿರಾಟ ಅಗತ್ಯ.
undefined
ಕರಿಷ್ಮಾ ಕೆಲವೇ ಆಯಿಲ್ ಬೇಸ್ಡ್ ಸೇರಂಗಳನ್ನು ಬಳಸುತ್ತಾಳೆ. ಸಿಕ್ಕಸಿಕ್ಕಿದ ಬ್ಯೂಟಿ ಪ್ರಾಡಕ್ಟ್‌ಗಳನ್ನೆಲ್ಲಾ ಆಕೆ ಬಳಸುವುದೇ ಇಲ್ಲ. ಅವಳದೇ ಆದ ಕೆಲವು ಆರೋಗ್ಯಕರ ಬ್ರಾಂಡ್‌ಗಳಿವೆ. ಅವುಗಳನ್ನು ಮಾತ್ರ ಬಳಸುತ್ತಾಳೆ. ಈ ತೈಲ ಆಧಾರಿತ ಸೇರಂಗಳು ಆಕೆಯ ತ್ವಚೆಯನ್ನು ಹೊಳೆಯುವಂತೆ ಮಾಡುತ್ತವೆ. ರಾತ್ರಿ ಮುಖ ತೊಳೆದ ಬಳಿಕ ಈ ಸೇರಂಗಳನ್ನು ಆಕೆ ಹಚ್ಚಿಕೊಳ್ಳುತ್ತಾಳೆ.
ಗರ್ಭಿಣಿಗೆ ಸುಖಾಸುಮ್ಮನೆ ಸಲಹೆ ಕೊಡೋ ಬದ್ಲು ಇಂಥ ಮಾತನಾಡಿ
ಕ್ಲೆನ್ಸಿಂಗ್ ಮತ್ತು ಎಕ್ಸ್‌ಫೋಲಿಯೇಶನ್‌ಗಳು ತ್ವಚೆಯ ಸಂರಕ್ಷಣೆಗೆ ಇಂಪಾರ್ಟೆಂಟು ಅಂತ ಹೇಳಲು ಕರಿಷ್ಮಾ ಕರೆಯೊಲ್ಲ. ಕ್ಲೆನ್ಸಿಂಗ್ ಇರುವುದು ಚರ್ಮದ ಮೇಲೆ ಇರಬಹುದಾದ ಕೊಳೆ, ಜಿಡ್ಡು ಇತ್ಯಾದಿಗಳನ್ನು ತೆಗೆಯೋಕೆ. ಅದಕ್ಕೇ ಆದ ಕ್ಲೆನ್ಸರ್‌ಗಳಿವೆ. ಇನ್ನು ಎಕ್ಸ್‌ಫೋಲಿಯೇಶನ್ ಇರೋದು ಚರ್ಮದ ಮೇಲಿರೋ ಸತ್ತ ಚರ್ಮದ ಜೀವಕೋಶಗಳನ್ನು ತೆಗೆದುಹಾಕೋಕೆ. ಸತ್ತ ಜೀವಕೋಶಗಳ ಪದರ ಹೆಚ್ಚಾದಷ್ಟೂ ಮುಖ ಸುಕ್ಕುಗಟ್ಟುತ್ತದೆ. ಪದರಗಳು ಹೆಚ್ಚಾಗುತ್ತವೆ. ನೆರಿಗೆ ಬೀಳಲು ಆರಂಭವಾಗುತ್ತದೆ. ಚರ್ಮಕ್ಕೆ ಸಾಕಷ್ಟು ಆಕ್ಸಿಜನ್ ಸಿಗುವುದಿಲ್ಲ. ಎಕ್ಸ್ಫೋಲಿಯೇಶನ್ ಹಾಗೂ ಕ್ಲಿನ್ಸಿಂಗ್‌ಗಳು ಈ ತೊಂದರೆ ನಿವಾರಿಸುತ್ತವೆ.
ಬಿಸಿಲಿಗೆ ಹೋಗುವಾಗ ಸನ್‌ಸ್ಕ್ರೀನ್ ಲೋಷನ್ ಹಚ್ಚಿಕೊಂಡು ಹೋಗುವ ಅಗತ್ಯವನ್ನೂ ಕರಿಷ್ಮಾ ಪ್ರತಿಪಾದಿಸುತ್ತಾಳೆ. ಹೆಚ್ಚಿನವರು ಉಳಿದೆಲ್ಲ ಬ್ಯೂಟಿ ಟಿಪ್ಸ್‌ಗಳೊಂದಿಗೆ, ಹೊರಹೋಗುವಾಗ ಮುಖ ಮತ್ತು ಎಕ್ಸ್‌ಪೋಸ್ ಆಗುವ ಚರ್ಮದ ಇತರ ಭಾಗಗಳಿಗೆ ಒಳ್ಳೆಯ ಸನ್‌ಸ್ಕ್ರೀನ್ ಹಚ್ಚಬೇಕು ಎಂಬುದನ್ನು ಮರೆತುಬಿಡುತ್ತಾರೆ. ಆದರೆ ಎಳೆಬಿಸಿಲು ಚರ್ಮಕ್ಕೆ ಒಳ್ಳೆಯದು. ಮುಂಜಾನೆ ಅಥವಾ ಸಂಜೆ ಬಯಲಿನಲ್ಲಿ ವರ್ಕ್ ಔಟ್ ಮಾಡುವುದರಿಂದ ಒಳ್ಳೆಯದೇ ಆಗುತ್ತದೆ. ಆದರೆ ಬೆಳಗ್ಗೆ ಒಂಬತ್ತು ಗಂಟೆಯ ಬಳಿಕ ಸಂಜೆ ಐದು ಗಂಟೆಯ ವರೆಗೆ ಬಿಸಿಲಿನಲ್ಲಿ ಓಡಾಡುವವರಾದರೆ ಚರ್ಮದ ಆರೈಕೆ ಮಾಡಲೇಬೇಕು. ಇಲ್ಲವಾದರೆ ಚರ್ಮ ಬಲು ಬೇಗನೆ ವಯಸ್ಸಾದಂತೆ ಕಂಡುಬಿಡುತ್ತದೆ. ಉತ್ತಮ ಬ್ರಾಂಡ್‌ನ ಸನ್‌ಸ್ಕ್ರೀನ್ ಲೋಷನ್ ಕಂಡುಕೊಂಡು ಹಚ್ಚಿಕೊಳ್ಳುವುದು ಅಗತ್ಯ ಅಂತ ಅನ್ನುತ್ತಾರೆ ಕರಿಷ್ಮಾ.
ಪ್ರೆಗ್ನೆಂಟ್ ಆಗೋದು, ಬಿಡೋದು ನನ್ನ ಆಯ್ಕೆ? ಮಧ್ಯದಲ್ಲಿ ನಿಮ್ಮದೇನು?
ಇದೆಲ್ಲದರ ಜೊತೆಗೆ ಮಾನಸಿಕ ಆರೋಗ್ಯವನ್ನೂ ಅವರು ಪ್ರತಿಪಾದಿಸುತ್ತಾರೆ. ಚರ್ಮದ ಆರೈಕೆ ಅಂದರೆ ಬರೀ ಚರ್ಮದ ಕೇರ್ ಎಂದು ತಿಳಿಯಬಾರದು. ಒಟ್ಟಾರೆ ದೇಹದ ಆರೋಗ್ಯ ಕಾಪಾಡಿಕೊಳ್ಳುವುದೇ ಮುಖ್ಯ. ಆಗ ಅಚರ್ಮವೂ ಹೆಲ್ದಿಯಾಗಿ ಇರುತ್ತದೆ. ಮನಸ್ಸಿನ ನೆಮ್ಮದಿ ಹಾಳಾಗಿದ್ದರೆ ದೇಹದ ಇತರ ಭಾಗಗಳಂತೆ ಚರ್ಮ ಕೂಡ ಹೊಳಪು ಕಳೆದುಕೊಳ್ಳುತ್ತದೆ. ಮನಸ್ಸು ಸಂತೃಪ್ತಿಯಿಂದ, ನೆಮ್ಮದಿಯಿಂದ ಇದ್ದರೆ ಆಗ ಚರ್ಮ, ಮುಖ ಎಲ್ಲವೂ ವರ್ಚಸ್ಸಿನಿಂದ ಕಂಗೊಳಿಸುತ್ತಿರುತ್ತವೆ ಎನ್ನುತ್ತಾರೆ ಕರಿಷ್ಮಾ.