ಮಾತ್ರೆ, ಔಷಧಿಗಳು ಕೆಲ ಬಾರಿ ನಮ್ಮ ಆರೋಗ್ಯದ ಮೇಲೆ ಅಡ್ಡಪರಿಣಾಮ ಬೀರುತ್ತವೆ. ತಯಾರಿಕಾ ವಿಧಾನದಲ್ಲಿ ಸ್ವಲ್ಪ ಬದಲಾವಣೆಯಾದ್ರೂ ಸಮಸ್ಯೆ ಕಾಡಬಹುದು. ಗೋವಾದಲ್ಲಿ ಸಿದ್ಧವಾಗ್ತಿರುವ ಸಿರಪ್ ಒಂದು ಈಗ ಸಮಸ್ಯೆ ತಂದೊಡ್ಡಿದೆ.
ಅಸಿಡಿಟಿ, ಗ್ಯಾಸ್, ಹೊಟ್ಟೆ ಉಬ್ಬರ, ಹೊಟ್ಟೆ ನೋವು ಬಂದಾಗ ತಕ್ಷಣ ಜನರು ಸಿರಪ್ ತೆಗೆದುಕೊಳ್ತಾರೆ. ಕೆಲವೇ ಕ್ಷಣಗಳಲ್ಲಿ ನೋವಿಗೆ ರಿಲೀಫ್ ನೀಡುವ ಕಾರಣ ಜನರು ಸಿರಪ್ ಮೊರೆ ಹೋಗ್ತಾರೆ. ನೀವೂ ಈ ಸಮಸ್ಯೆಗಳಾದಾಗ ಡೈಜೆನ್ ಜೆಲ್ ಸಿರಪ್ ಸೇವಿಸುತ್ತಿದ್ದರೆ ಎಚ್ಚರ. ಯಾಕೆಂದ್ರೆ ಈ ಸಿರಪ್ ನಿಮ್ಮ ಸಮಸ್ಯೆ ಕಡಿಮೆ ಮಾಡುವ ಬದಲು ಹೆಚ್ಚು ಮಾಡ್ಬಹುದು. ಹಾಗಂತ ನಾವು ಹೇಳ್ತಿಲ್ಲ, ಡ್ರಗ್ಸ್ ಕಂಟ್ರೋಲ್ ಜನರಲ್ ಆಫ್ ಇಂಡಿಯಾ ಎಚ್ಚರಿಕೆ ನೀಡಿದೆ.
ಗೋವಾ (Goa) ದಲ್ಲಿ ತಯಾರಾಗ್ತಿದ್ದ ಡೈಜೆನ್ ಜೆಲ್ ಸಿರಪ್ (Digene Syrup) ವಿರುದ್ಧ ವೈದ್ಯರಿಗೆ ಡ್ರಗ್ಸ್ ಕಂಟ್ರೋಲ್ ಜನರಲ್ ಆಫ್ ಇಂಡಿಯಾ (Drug Control of India) ಸಲಹೆ ನೀಡಿದೆ. ಸಿರಪ್ ತಯಾರಿಸುವ ಕಂಪನಿ ಅಬಾಟ್ (Abbott) ಗೆ ಗೋವಾ ಸ್ಥಾವರದಲ್ಲಿ ತಯಾರಾಗ್ತಿರುವ ಡೈಜೆನ್ ಜೆಲ್ ಬಳಕೆಯನ್ನು ನಿಲ್ಲಿಸುವಂತೆ ಸೂಚನೆ ನೀಡಿದೆ. ಅಲ್ಲದೆ ಮಾರುಕಟ್ಟೆಯಲ್ಲಿ ಇದನ್ನು ಮಾರಾಟ ಮಾಡದಂತೆ ಸೂಚನೆ ನೀಡಿದೆ. ಡೈಜೆನ್ ಜೆಲ್ ಸಿರಪ್ ವಿರುದ್ಧ ಗ್ರಾಹಕರು ದೂರು ನೀಡಿದ್ದರು. ಈ ದೂರಿನ ಮೇರೆಗೆ ಡ್ರಗ್ಸ್ ಕಂಟ್ರೋಲ್ ಜನರಲ್ ಆಫ್ ಇಂಡಿಯಾ ಈ ತೀರ್ಮಾನ ಕೈಗೊಂಡಿದೆ. ಜನರು ಯಾವುದೇ ಕಾರಣಕ್ಕೂ ಇದನ್ನು ಬಳಸಬಾರದು. ಒಂದ್ವೇಳೆ ಇದರ ಬಳಕೆ ಮಾಡಿ, ಅನಾರೋಗ್ಯಕ್ಕೆ ಒಳಗಾಗಿ ವೈದ್ಯರನ್ನು ಭೇಟಿಯಾದ್ರೆ ವೈದ್ಯರು ತಕ್ಷಣ ಈ ಬಗ್ಗೆ ಮಾಹಿತಿ ನೀಡಬೇಕೆಂದು ಅದು ಸೂಚಿಸಿದೆ.
undefined
ತೂಕ ಇಳಿಸಿಕೊಳ್ಳಬೇಕಾ? ಬೆಳ್ಳುಳ್ಳಿ ಟೀ ಕುಡಿದು ನೋಡಿ, ಮಾಡುತ್ತೆ ಕಮಾಲ್!
ಏನು ಘಟನೆ ? : ಆಗಸ್ಟ್ 9, 2023 ರಂದು, ಡೈಜೆನ್ ಸಿರಪ್ ಅನ್ನು ಖರೀದಿಸಿದ ವ್ಯಕ್ತಿಯೊಬ್ಬರು ಡೈಜೆನ್ ಸಿರಪ್ ಮಿಂಟ್ ಫ್ಲೇವರ್‌ನ ಬಾಟಲಿಯ ಸಾಮಾನ್ಯ ರುಚಿ ಸಿಹಿ ಮತ್ತು ತಿಳಿ ಗುಲಾಬಿಯನ್ನು ಹೊಂದಿದೆ, ಅದೇ ಇನ್ನೊಂದು ಬಾಟಲಿ ರುಚಿ ಕಹಿಯಾಗಿದೆ ಮತ್ತು ಬಣ್ಣ ಬೆಳ್ಳಿಗಿದೆ ಎಂದು ದೂರಿದ್ದ. ಗ್ರಾಹಕನ ದೂರಿನ ನಂತ್ರ ಸಿರಪ್ ತಯಾರಿಸುವ ಕಂಪನಿ ಅಬಾಟ್ ಆಗಸ್ಟ್ 11 ರಂದು ಡಿಸಿಜಿಐ ಕಚೇರಿಗೆ ತನ್ನ ಉತ್ಪನ್ನವನ್ನು ಮಾರುಕಟ್ಟೆಯಿಂದ ಹಿಂತೆಗೆದುಕೊಳ್ಳುತ್ತಿರುವುದಾಗಿ ತಿಳಿಸಿತ್ತು. ಗೋವಾ ಕಾರ್ಖಾನೆಯಲ್ಲಿ ಈ ಸಿರಪ್ ತಯಾರಿಸಲಾಗುತ್ತದೆ. ಗೋವಾದಿಂದ ಬರುವ ಈ ಸಿಪರ್ ಸ್ವೀಕರಿಸಬೇಡಿ ಹಾಗೇ ಬಳಸಬೇಡಿ ಎಂದು ಸೂಚನೆ ನೀಡಲಾಗಿದೆ.
ಗೋವಾದ ಸ್ಥಾವರದಲ್ಲಿ ತಯಾರಿಸಲಾದ ಔಷಧವನ್ನು ಕಂಪನಿಯು ಸ್ವಯಂಪ್ರೇರಣೆಯಿಂದ ಹಿಂಪಡೆದಿದೆ ಎಂದು ಅಬಾಟ್ ಇಂಡಿಯಾ ವಕ್ತಾರರು ಹೇಳಿದ್ದಾರೆ. ಇದರ ಹಿಂದೆ ಕೆಲವು ಗ್ರಾಹಕರು ಮಾತ್ರ ಸಿರಪ್‌ನ ರುಚಿ ಮತ್ತು ಪರಿಮಳದಲ್ಲಿ ವ್ಯತ್ಯಾಸವಿದೆ ಎಂದು ದೂರಿದರು. ಯಾವುದೇ ರೋಗಿಯ ಆರೋಗ್ಯಕ್ಕೆ ಸಂಬಂಧಿಸಿದಂತೆ ಯಾವುದೇ ರೀತಿಯ ದೂರು ಬಂದಿಲ್ಲ ಎಂದಿದ್ದಾರೆ. ಡೈಜೆನ್‌ನ ಇತರ ರೂಪಗಳಾದ ಡಿಜೆನ್ ಮಾತ್ರೆಗಳು ಮತ್ತು ಸ್ಟಿಕ್ ಪ್ಯಾಕ್‌ಗಳ ಮೇಲೆ ಯಾವುದೇ ಪರಿಣಾಮ ಬೀರಿಲ್ಲ. ಕಂಪನಿಯ ಇತರ ಸ್ಥಾವರಗಳಲ್ಲಿ ತಯಾರಿಸಿದ ಡೈಜೆನ್ ಜೆಲ್‌ನ ಮೇಲೆ ಯಾವುದೇ ಪರಿಣಾಮ ಬೀರಿಲ್ಲ ಎಂದು ವಕ್ತಾರರು ಸ್ಪಷ್ಟನೆ ನೀಡಿದ್ದಾರೆ. ಪ್ರಸ್ತುತ ಬೇಡಿಕೆಗೆ ತಕ್ಕಷ್ಟು ಪೂರೈಕೆ ಆಗ್ತಿದೆ ಎಂದವರು ಹೇಳಿದ್ದಾರೆ.
ಎಳ್ನೀರು ಆರೋಗ್ಯಕ್ಕೆ ಒಳ್ಳೇದು ಗೊತ್ತು, ಹಾಗಂಥ ಕೆಲವರಿಗಿದು ಆಗಿ ಬರೋಲ್ಲ, ಯಾರಿಗದು?
ಡೈಜಿನ್ ಏನು ಮಾಡುತ್ತೆ? : ಡೈಜಿನ್ ಒಂದು ಆಂಟಿಸಿಡ್ ಆಗಿದೆ. ಇದು ಆಮ್ಲೀಯತೆ ಮತ್ತು ಅದರ ರೋಗಲಕ್ಷಣಗಳಾದ ಎದೆಯುರಿ, ಹೊಟ್ಟೆಯ ಅಸ್ವಸ್ಥತೆ ಮತ್ತು ಹೊಟ್ಟೆ ನೋವಿನಿಂದ ಬಳಲುವವರಿಗೆ ಪರಿಣಾಮಕಾರಿ ಪರಿಹಾರವನ್ನು ನೀಡುತ್ತದೆ. ನೀವು ಆಮ್ಲೀಯತೆಯಿಂದ ಬಳಲುತ್ತಿದ್ದರೆ ಅಥವಾ ಆಮ್ಲೀಯತೆಯಿಂದ ಗ್ಯಾಸ್ ಅಥವಾ ಹೊಟ್ಟೆಯ ಅಸ್ವಸ್ಥತೆಯಂತಹ ಯಾವುದೇ ರೋಗಲಕ್ಷಣಗಳನ್ನು ಅನುಭವಿಸುತ್ತಿದ್ದರೆ ಡೈಜೆನ್ ಔಷಧಿಯನ್ನು ತೆಗೆದುಕೊಳ್ಳಬಹುದು ಎಂದು ವೈದ್ಯರು ಹೇಳ್ತಾರೆ. ಮಲಬದ್ಧತೆ, ಅತಿಸಾರ ಮತ್ತು ಕರುಳಿನ ಅಡಚಣೆಯಂತಹ ಕೆಲವು ಅಡ್ಡ ಪರಿಣಾಮಗಳನ್ನೂ ಇದು ಹೊಂದಿದೆ.