ಗ್ಯಾಸ್ಟ್ರಿಕ್ ಅಂತ ನೆಗ್ಲೆಕ್ಟ್ ಮಾಡ್ಬೇಡಿ, ಅದು ಹಾರ್ಟ್ ಅಟ್ಯಾಕ್ ಆಗಿರಬಹುದು!

By Suvarna NewsFirst Published Nov 30, 2020, 4:20 PM IST
Highlights

ಲೇಟಾಗಾದ್ರೂ ಚಳಿ ಹೆಚ್ಚಾಗ್ತಿದೆ. ಇಂಥಾ ಟೈಮ್ ನಲ್ಲಿ ಹಾರ್ಟ್ ಅಟ್ಯಾಕ್ ಆಗೋ ಅಪಾಯಗಳು ಜಾಸ್ತಿ. ಮಧ್ಯರಾತ್ರಿ,ಬೆಳಗಿನ ಜಾವದ ಈ ಲಕ್ಷಣಗಳು, ನಿಮ್ಮ ಹಾರ್ಟ್ ನಲ್ಲೇನೋ ಸರಿಯಿಲ್ಲ ಅನ್ನೋದನ್ನು ಹೇಳುತ್ತೆ. ಏನು ಆ ಲಕ್ಷಣಗಳು?

ಕೇಸ್ ಹಿಸ್ಟರಿ 1

೪೫ ವರ್ಷದ ವಿನೋದ್ ಐಟಿ ಉದ್ಯೋಗಿ. ಸಂಬಳ ಏನೋ ಸಾಕಷ್ಟಿದೆ. ಆದರೆ ಉಳಿದ ವಿಚಾರ ಕೇಳ್ಬೇಡಿ. ವಾರವಿಡೀ ಸ್ಟ್ರೆಸ್, ಡೈಡ್ ಲೈನ್ ಟೆನ್ಶನ್. ಅದನ್ನು ಮರೆಯೋದಕ್ಕೆ ವೀಕೆಂಡ್ ಗಳಲ್ಲಿ ಲೇಟ್‌ನೈಟ್ ಪಾರ್ಟಿ. ಹಾಗಂತ ಆರೋಗ್ಯದ ಬಗ್ಗೆ ಕಾಳಜಿ ಇಲ್ಲ ಅಂತಲ್ಲ. ಆದರೂ ದಿನಾ ವರ್ಕೌಟ್ ಮಾಡೋದಕ್ಕೆ ಟೈಮ್ ಸಿಗಲ್ಲ. ಊಟ, ತಿಂಡಿ ಕರೆಕ್ಟ್ ಟೈಮ್ ಗೆ ಮಾಡಬೇಕು ಅನ್ನೋ ಮನಸ್ಸೇನೋ ಇದೆ. ಆದರೆ ಅಷ್ಟೊತ್ತಿಗೇ ನನ್ ಮಗಂದ್ ಕೆಲ್ಸದ ಪ್ರೆಶ್ಶರ್ ಏಕ್ ದಂ ಹೆಚ್ಚಾಗುತ್ತೆ. ಊಟ ಮಾಡೋ ಹೊತ್ತಿಗೆ ಹೊಟ್ಟೆ ಹಸಿವೆಲ್ಲ ಸತ್ತೇ ಹೋಗಿರುತ್ತೆ. ಹೊಟ್ಟೆ ತುಂಬ ಗ್ಯಾಸ್ಟ್ರಿಕ್. ಈಗ ದಿನಾ ಈ ಗ್ಯಾಸ್ಟ್ರಿಕ್ ಗೆ ಅಂತ ಮೆಡಿಸಿನ್ ಹಾಕ್ಕೊಳ್ಳೋದು ಕಾಮನ್ ಆಗಿದೆ. 

ಮೊನ್ನೆ ರಾತ್ರಿ ಜೋರು ಮಳೆಯಲ್ಲಿ ಹೆಚ್ಚಿದ್ದ ಟ್ರಾಫಿಕ್ ನಡುವೆ ಕಾರ್ ಓಡಿದ್ತಾ ಬರುವಾಗ ಮತ್ತೆ ಗ್ಯಾಸ್ಟ್ರಿಕ್ ಸಮಸ್ಯೆ ಶುರುವಾಯ್ತು. ಜೊತೆಗೆ ಭುಜಗಳಲ್ಲಿ ನೋವು. ಯಾಕೋ ಕೂತ ಪೊಸಿಶನ್ ಸರಿಯಿರಲಿಲ್ಲ ಅಂದುಕೊಳ್ಳುತ್ತಾ ಮನೆಗೆ ಬಂದರು ವಿನೋದ್. ರಾತ್ರಿ ಊಟ ಮಗಿಸಿ ಮಲಗಿದವರಿಗೆ ಮಧ್ಯರಾತ್ರಿ ಎಚ್ಚರವಾಯ್ತು. ಬಾಯೆಲ್ಲ ಒಣಗಿದಂಥಾ ಫೀಲ್. ಮೈ ಸಣ್ಣಗೆ ಬೆವರುತ್ತಿತ್ತು. ಉಸಿರಾಟಕ್ಕೂ ಸ್ವಲ್ಪ ಕಷ್ಟ. ಸ್ವಲ್ಪ ಹೊತ್ತಿಗೆ ಎದೆಯನ್ನು ಯಾರೋ ಬಲವಾಗಿ ಅಮುಕಿ ಹಿಡಿದಂತೆ ನೋವು. ದೈತ್ಯ ಆನೆ ಎದೆ ಮೇಲೆ ಕಾಲಿಟ್ಟ ಹಾಗೆ... ಕಷ್ಟಪಟ್ಟು ಹೊರಗೆ ಬಂದರು. ತಣ್ಣಗೆ ಗಾಳಿ ಮುಖಕ್ಕೆ ಬಡಿಯುತ್ತಿತ್ತು. ನೋವು ಸ್ವಲ್ಪ ಸ್ವಲ್ಪವೇ ಕಡಿಮೆ ಆಗುತ್ತಿತ್ತು. ಮತ್ತೊಂದು ಗ್ಯಾಸ್ಟ್ರಿಕ್ ಟ್ಯಾಬ್ಲೆಟ್ ತಿಂದರು. ಗಾಢ ನಿದ್ದೆಯಲ್ಲಿದ್ದ ಪತ್ನಿಯನ್ನು ಎಚ್ಚರಿಸಲು ಮನಸ್ಸಾಗಲಿಲ್ಲ. ಎಲ್ಲ ಸರಿಯಾಯ್ತಲ್ಲಾ, ನಾಳೆ ನೋಡ್ಕೊಂಡ್ರಾಯ್ತು ಅಂತ ಮತ್ತೆ ಮಲಗಿದರು. ಕೊಂಚ ಹೊತ್ತಿಗೆ ನಿದ್ರೆ ಬಂತು. 
.. ಗಂಟೆ ಎಂಟಾದರೂ ಇನ್ನೂ ವಿನೋದ್ ಏಳದಿದ್ದದ್ದು ಕಂಡು ಅವರ ಪತ್ನಿ ಅವರನ್ನೆಬ್ಬಿಸಲು ಬಂದರು. ಆದರೆ ಅಷ್ಟೊತ್ತಿಗಾಗಲೇ ಅವರು ಇಹಲೋಕ ತ್ಯಜಿಸಿದ್ದರು!

ಇದು ಇತ್ತೀಚೆಗೆ ನಡೆದ ಸತ್ಯ ಘಟನೆ. ಇಂಥಾ ಸಾವಿರಾರು ಪ್ರಕರಣಗಳು ನಿತ್ಯವೂ ನಡೆಯುತ್ತವೆ. ವಿನೋದ್ ಗೆ ಆಗಿದ್ದು ಹಾರ್ಟ್ ಅಟ್ಯಾಕ್. ಹಾಗಂತ ಅದು ಸುಳಿವು ಕೊಟ್ಟೇ ಬಂದಿತ್ತು. ಆದರೆ ಶುರುವಿನಲ್ಲಿ ವಿನೋದ್ ಅದನ್ನು ಗ್ಯಾಸ್ಟ್ರಿಕ್ ಅಂತ ನಿರ್ಲಕ್ಷ್ಯ ಮಾಡಿದರು. ಮಧ್ಯರಾತ್ರಿ ಮತ್ತೊಂದು ಚಾನ್ಸ್ ಕೊಟ್ಟಿತ್ತು. ಆಗಲೂ ಅವರು ನಾಳೆ ನೋಡ್ಕೊಳ್ಳೋಣ ಅಂತ ನಿರ್ಲಕ್ಷಿಸಿದರು. ನಾಳೆ ಬೆಳಗನ್ನು ನೋಡೋದಕ್ಕೆ ಅವರೇ ಇರಲಿಲ್ಲ. 

ಚಳಿಗಾಲ ನಿಮ್ಮ ಹೃದಯದ ಶತ್ರು
ಉಳಿದ ಟೈಮ್ ಗೆ ಹೋಲಿಸಿದ್ರೆ ಚಳಿಗಾಲದಲ್ಲಿ ಹಾರ್ಟ್ ಅಟ್ಯಾಕ್ ಪ್ರಮಾಣ ಶೇ.೫೦ ರಷ್ಟು ಹೆಚ್ಚು. ಈ ಟೈಮ್ ನಲ್ಲಿ ನಮ್ಮ ದೇಹದ ತಾಪಮಾನ ಕಡಿಮೆ ಆಗಿರುತ್ತೆ. ಈ ತಾಪಮಾನವನ್ನು ಸಮತೋಲನದಲ್ಲಿಡುವ ಭಾರ ಹೃದಯದ ಮೇಲಿರುತ್ತೆ. ಅದು ಮೊದಲಿಗಿಂತ ಹೆಚ್ಚು ಕೆಲಸ ಮಾಡಬೇಕು. ನಿಮ್ಮ ಅರಿವಿಗೇ ಬರದ ಹಾಗೆ ನಿಮ್ಮ ಹೃದಯದಲ್ಲಿ ಬ್ಲಾಕೇಜ್ ಆಗಿರಬಹುದು. ಹೀಗಾಗಿದ್ದರೆ ಚಳಿಗಾಲದಲ್ಲಿ ಹಾರ್ಟ್ ಅಟ್ಯಾಕ್ ಆಗೋ ಸಾಧ್ಯತೆ ಹೆಚ್ಚು. 

ಮಾನಸಿಕ, ದೈಹಿಕ ಅನಾರೋಗ್ಯಕ್ಕೆ ಮೊಬೈಲ್ ಕುತ್ತು, ವ್ಯಕ್ತಿತ್ವಹೀನವಾಗಿಸೋ ವ್ಯಸನ ...

ನೀವು ನಿಮ್ಮ ದಿನಚರಿ ಗಮನಿಸಿ, ಉಳಿದ ಟೈಮ್ ನಲ್ಲಿ ಕುಡಿಯೋವಷ್ಟು ನೀರನ್ನು ಈಗ ಚಳಿಗಾಲದಲ್ಲಿ ಕುಡೀತಿದ್ದೀರಾ? ಹೆಚ್ಚಿನವರ ಉತ್ತರ ಇಲ್ಲ ಅಂತಿರುತ್ತೆ. ಚಳಿಗಾಲದಲ್ಲಿ ಹೆಚ್ಚಿನವರು ಕಡಿಮೆ ನೀರು ಕುಡಿಯುತ್ತಾರೆ. ವಿನೋದ್ ಅವರೂ ಇದಕ್ಕೆ ಹೊರತಾಗಿರಲಿಲ್ಲ. ಸರಿಯಾಗಿ ನೀರು ಕುಡಿಯದೇ ಅವರ ರಕ್ತ ಮಂದವಾಗಿತ್ತು. ಇದರಿಂದ ರಕ್ತನಾಳದಲ್ಲಿ ರಕ್ತ ಹೆಪ್ಪುಗಟ್ಟಿದೆ. ವೈದ್ಯರು ಹೇಳುವ ಪ್ರಕಾರ ಅವರು ರಾತ್ರಿ ಆ ಹೊತ್ತಿಗೇ ಚಿಕಿತ್ಸೆ ಪಡೆಯುತ್ತಿದ್ದರೆ ಬದುಕುಳಿಯುತ್ತಿದ್ದರು. ಹೆಚ್ಚಿನವರು ಮಾಡುವ ತಪ್ಪನ್ನೇ ಅವರೂ ಮಾಡಿದ್ದರು. ಪರಿಣಾಮ ಹೃದಯ ಸ್ತಂಭನ-ಸಾವು! ಚಳಿಗಾಲದಲ್ಲಿ ಬೆಳಗಿನ ಜಾವದಲ್ಲೇ ಅತ್ಯಧಿಕ ಹಾರ್ಟ್ ಅಟ್ಯಾಕ್ ಕೇಸ್ ಗಳಾಗುತ್ತಿವೆ. ಹುಷಾರಾಗಿರಿ. 

ಈ ವಿಶೇಷ ಚಹಾದೊಂದಿಗೆ ದಿನವನ್ನು ಪ್ರಾರಂಭಿಸಿ ಅದ್ಭುತ ಆರೋಗ್ಯ ಪ್ರಯೋಜನ ಪಡೆಯಿರಿ ...

ಚಳಿಗಾಲದಲ್ಲಿ ಇದೆಲ್ಲ ಮಸ್ಟ್
- ಚೆನ್ನಾಗಿ ನೀರು ಕುಡಿಯಬೇಕು. ನೀರಿನಂಶ ಇರುವ ಪದಾರ್ಥಗಳನ್ನು ಸೇವಿಸಬೇಕು. 
- ಸಿಹಿ, ಎಣ್ಣೆ ತಿಂಡಿ ಕಡಿಮೆ ತಿನ್ನಿ. 
- ಎಣ್ಣೆ ಹೊಡೆಯೋರಿಗಂತೂ ಸಖತ್ ಪ್ರಾಬ್ಲೆಂ ಆಗುತ್ತೆ. ಆಲ್ಕೊಹಾಲ್ ಸೇವನೆ ಮೇಲೆ ಕಂಟ್ರೋಲ್ ಇರಲಿ. 
- ನಿತ್ಯ ಎಕ್ಸರ್ ಸೈಸ್, ವಾಕಿಂಗ್ ಮಿಸ್ ಮಾಡೋ ಹಾಗೇ ಇಲ್ಲ. ಕೋವಿಡ್ ಟೈಮ್ ಹೊರಗೆ ಬರಲ್ಲ ಅಂತಿದ್ದವರು ಮನೆಯಲ್ಲೇ ಎಕ್ಸರ್ ಸೈಸ್ ಮಾಡಿ. 
- ಗ್ಯಾಸ್ಟ್ರಿಕ್ ಅತ ಏನನ್ನೂ ನೆಗ್ಲೆಕ್ಟ್ ಮಾಡ್ಬೇಡಿ. ವಿನೋದ್ ಗೆ ಆದ ರೀತಿಯ ಲಕ್ಷಣ ಕಂಡು ಬಂದರೆ ಎಷ್ಟೊತ್ತಿಗಾದ್ರೂ ಸರಿ, ಮನೆಯವ್ರನ್ನು ಎಬ್ಬಿಸಿ ಕೂಡ್ಲೇ ಡಾಕ್ಟರ್‌ ಹತ್ರ ಹೋಗಿ. 

ಸೇಬನ್ನು ಊಟ ಆದ್ಮೇಲೋ, ಊಟಕ್ಕೆ ಮೊದಲು ತಿಂದರೆ ಒಳ್ಳೆಯದಾ? ...

 


 

click me!