ಈ ಏಳು ಹವ್ಯಾಸಗಳು ನಿಮ್ಮನ್ನ ಮತ್ತಷ್ಟು ಬಡವರನ್ನಾಗಿಸುತ್ತೆ!

By Mahmad Rafik  |  First Published May 20, 2024, 2:34 PM IST

ಕೆಲ ಅಭ್ಯಾಸಗಳು ನಮ್ಮನ್ನು ನಮಗೆ ಗೊತ್ತಿಲ್ಲದೇ  ಬ್ಯಾಂಕ್ ಖಾತೆಯಲ್ಲಿರುವ ಹಣವನ್ನು ಖಾಲಿ ಮಾಡುತ್ತವೆ. ಒಂದು ವೇಳೆ ಈ ಹವ್ಯಾಸಗಳು ಸಹ ನಿಮ್ಮಲಿವೆಯಾ ಚೆಕ್ ಮಾಡ್ಕೊಳ್ಳಿ. ಇದ್ದರೆ ಇಂದೇ ಚೇಂಜ್ ಮಾಡಿಕೊಳ್ಳಿ.   


ಇಂದು ಜನರು ಬೇಗ  ಶ್ರೀಮಂತರಾಗಬೇಕೆಂದು ಹಗಲಿರುಳು ದುಡಿಯುತ್ತಿರುತ್ತಾರೆ. ಕೇವಲ ಶ್ರಮಪಟ್ಟು  ದುಡಿದ್ರೆ ಮಾತ್ರ ಬೇಗ ಕುಬೇರರಾಗಲ್ಲ. ಕೆಲಸದ ಜೊತೆಗೆ ಒಂದಿಷ್ಟು ಆರ್ಥಿಕ ನಿಯಮಗಳನ್ನು ಸಹ ಪಾಲನೆ ಮಾಡಬೇಕಾಗುತ್ತದೆ. ಇಲ್ಲಾವದಲ್ಲಿ ದುಡಿದ ಹಣವೆಲ್ಲಾ ನೀರಿನಂತೆ ಪೋಲಾಗುತ್ತದೆ. ದುಡಿದ ಹಣವನ್ನು ಉಳಿಸೋದು ಸಹ ಒಂದು ಕಲೆ. ಇತ್ತೀಚೆಗೆ ನಡೆಸಿದ ಅಧ್ಯಯನದಲ್ಲಿ ನಿಮ್ಮನ್ನು ಬಡವಾಗಿಸುವ ಕೆಲವು ಹವ್ಯಾಸಗಳನ್ನು ಪಟ್ಟಿ  ಮಾಡಲಾಗಿದೆ.

ಜನರನ್ನು ಬಡತನದಲ್ಲಿ ಸಿಲುಕಿಸಬಹುದಾದ ಕೆಟ್ಟ ಹವ್ಯಾಸಗಳ ಕುರಿತು ಅಧ್ಯಯನವೊಂದು ನಡೆಸಲಾಗಿದೆ. ಜನರ ದೈನಂದಿನ ಚಟುವಟಿಕೆಗಳ ಮೇಲೆ ಅಧ್ಯಯನ ನಡೆಸಿ ಈ ವರದಿಯನ್ನು ಸಿದ್ಧಪಡಿಸಲಾಗಿದೆ. ಈ ಅಧ್ಯಯನಕ್ಕೆ ಕ್ರಿಯಾಶೀಲ ಸಲಹೆಗಳನ್ನು ನೀಡಲಾಗಿದೆ. ಅಧ್ಯಯನದಲ್ಲಿ ಒಟ್ಟು ಏಳು ಹವ್ಯಾಸಗಳನ್ನು ಗುರುತಿಸಲಾಗಿದೆ.

Latest Videos

undefined

ಸಾಮಾನ್ಯವಾಗಿ ಶಾಪಿಂಗ್ ಮಾಡಬಾರದು ಎಂದು ಎಲ್ಲರೂ ಹೇಳುತ್ತಾರೆ. ಇದನ್ನೂ ಹೊರತಾಗಿಯೂ ಕೆಲ ಅಭ್ಯಾಸಗಳು ನಮ್ಮನ್ನು ನಮಗೆ ಗೊತ್ತಿಲ್ಲದೇ  ಬ್ಯಾಂಕ್ ಖಾತೆಯಲ್ಲಿರುವ ಹಣವನ್ನು ಖಾಲಿ ಮಾಡುತ್ತವೆ. ಒಂದು ವೇಳೆ ಈ ಹವ್ಯಾಸಗಳು ಸಹ ನಿಮ್ಮಲಿವೆಯಾ ಚೆಕ್ ಮಾಡ್ಕೊಳ್ಳಿ. ಇದ್ದರೆ ಇಂದೇ ಚೇಂಜ್ ಮಾಡಿಕೊಳ್ಳಿ.   

1.ನಿದ್ದೆಯ ಕೊರತೆ
ಆಧುನಿಕ ಜೀವನಶೈಲಿಯಲ್ಲಿ ಜನರು ನಿದ್ದೆಗೆ ಪ್ರಾಮುಖ್ಯತೆಯನ್ನು ನೀಡಲ್ಲ. ರಾತ್ರಿಯೆಲ್ಲಾ ಕೆಲಸ ಮಾಡಿ ಹಗಲು ಮಲಗೋದು, ಬೆಳಗಿನ ಜಾವ ನಿದ್ದೆಗೆ ಜಾರೋದು ಸಹ ಕೆಟ್ಟ ಜೀವನಶೈಲಿಯಾಗಿದೆ.  ಈ ರೀತಿ ಸಮಯವಲ್ಲದ ಸಮಯದಲ್ಲಿ ನಿದ್ದೆ ಮಾಡೋದರಿಂದ ಮಾನಸಿಕ ಒತ್ತಡ, ತೂಕ ಹೆಚ್ಚಳ, ಅಜೀರ್ಣತೆಯಂತಹ ಸಮಸ್ಯೆಗಳು ಕಂಡು ಬರುತ್ತವೆ. ಇದರಿಂದ ಅನಾರೋಗ್ಯಕ್ಕೆ ತುತ್ತಾಗಿ ದುಡಿದ ಹಣವನ್ನ ಆಸ್ಪತ್ರೆಗೆ ಕಟ್ಟಬೇಕಾಗುತ್ತದೆ.

2.ಕಳಪೆ ಆಹಾರ ಪದ್ಧತಿ ಆಗಲಿದೆ ದುಬಾರಿ
ಇನ್ನು ಕೆಲ ವರ್ಗದ ಜನರು ದುಡ್ಡು ಉಳಿಸಲು ಅದು ಕಳಪೆ ಅಂತ ಗೊತ್ತಿದ್ದರೂ ಅಂತಹ ಆಹಾರವನ್ನ ಸೇವಿಸುತ್ತಾರೆ. ಇದು ಸಹ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಒಂದಿಷ್ಟು ಜನರು ದುಡ್ಡು ಇದ್ದರೂ ಫಾಸ್ಟ್‌ಫುಡ್‌ಗ ಅಡಿಕ್ಟ್ ಆರೋಗ್ಯ ಹಾಳು ಮಾಡಿಕೊಳ್ಳುತ್ತಾರೆ.

ಈ ಐದು ರಹಸ್ಯಗಳನ್ನು ಯಾರೊಂದಿಗೆ ಹಂಚಿಕೊಳ್ಳಬೇಡಿ; ನಿಮ್ಮ ನಗುವೇ ಮಾಯ ಆಗುತ್ತೆ!

3.ತಂಬಾಕು ಉತ್ಪನ್ನಗಳ ಬಳಕೆ
ಬೀಡಿ, ಸಿಗರೇಟ್, ಗುಟ್ಕಾ ಸೇರಿದಂತೆ ತಂಬಾಕು ಉತ್ಪನ್ನಗಳ ಬಳಕೆ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಹಣ ನೀಡಿ ಆರೋಗ್ಯ ಹಾಳು ಮಾಡಿಕೊಳ್ಳುವ ದಾರಿ ಇದಾಗಿದೆ. ಮತ್ತೆ ಇದರಿಂದ ಉಂಟಾಗುವ ಅನಾರೋಗ್ಯಕ್ಕೆ ಚಿಕಿತ್ಸೆ ಪಡೆಯಲು ಹಣ ವ್ಯಯಿಸಬೇಕಾಗುತ್ತದೆ.

4.ಹಣಕಾಸಿನ ನಿರ್ವಹಣೆ ಜ್ಞಾನದ ಕೊರತೆ
ಕೆಲವರಿಗೆ ಬಂದಿರೋ ಹಣವನ್ನು ಹೇಗೆ ನಿರ್ವಹಣೆ ಮಾಡಬೇಕು ಎಂಬುದರ ಮಾಹಿತಿಯ ಕೊರತೆ ಇರುತ್ತದೆ. ನಮ್ಮ ಆದಾಯವನ್ನು ಹೇಗೆ ಬಳಕೆ ಮಾಡಬೇಕು ಎಂಬುದರ ಬಗ್ಗೆಯೂ ತಿಳಿದುಕೊಂಡಿರಬೇಕು.

5.ಬ್ಯಾಂಕ್‌ಗಳಿಂದ ದೂರ ಇರೋದು
ಬ್ಯಾಂಕ್ ವ್ಯವಹಾರಗಳಿಂದ ಕೆಲವರು ದೂರ ಇರುತ್ತಾರೆ. ಹೆಚ್ಚಾಗಿ ನಗದು ವ್ಯವಹಾರಕ್ಕೆ ಪ್ರಾಮುಖ್ಯತೆ ನೀಡುತ್ತಾರೆ. ಈ ಅಭ್ಯಾಸವೂ ಸಹ ಹಣ ಖರ್ಚು ಮಾಡಲು ಉತ್ಸಾಹಿಸುತ್ತದೆ.

ಬಿರಿಯಾನಿಯ ನಿಜವಾದ ಹೆಸರು ಏನು ಗೊತ್ತಾ?

6.ಸರ್ಕಾರಿ ಯೋಜನೆಗಳ ಮೇಲೆ ಅವಲಂಬನೆ ಆಗೋದು 
ಸರ್ಕಾರಗಳು ಬಡವರ ಏಳಿಗೆಗಾಗಿ ಕೆಲವೊಂದು ಉಚಿತ ಯೋಜನೆಗಳನ್ನು ನೀಡುತ್ತಿರುತ್ತದೆ. ಆದರೆ ಮೈಗಳ್ಳರು ಇಂತಹ ಯೋಜನೆಗಳ ಮೇಲೆಯೇ ಅವಲಂಬಿತರಾಗಿ ಬಡವರಾಗಿಯೇ ಉಳಿದುಕೊಳ್ಳುತ್ತಾರೆ.

7.ಜಡಜೀವನ ಶೈಲಿ, ತಟಸ್ಥ ಜೀವನ
ಕೆಲವರು ಹಣ ಗಳಿಸಬೇಕು ಎಂಬ ಗುರಿಯ ಬೆನ್ನ ಹಿಂದೆ ಬಂದು ಜೀವನವನ್ನು ಸೀಮಿತಗೊಳಿಸುತ್ತಾರೆ. ವ್ಯಾಯಾಮ, ಯೋಗ, ಜನರ ಜೊತೆ ಬೆರೆಯುವಿಕೆಯಿಂದಲೂ ದೂರ ಇರುತ್ತಾರೆ. ಇದು ಸಹ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.

click me!